Ezekiel · chapter 45 · verse 25
Ezekiel 45:25 in Kannada
ಏಳನೇ ತಿಂಗಳಿನ ಹದಿನೈದನೇ ದಿನದಲ್ಲಿ ಏಳು ದಿವಸಗಳ ಹಬ್ಬದಲ್ಲಿ ಅವನು ಪಾಪಬಲಿಯ ವಿಷಯವಾಗಿಯೂ ದಹನಬಲಿಯ ವಿಷಯವಾಗಿಯೂ ಆಹಾರದ ಅರ್ಪಣೆಯ ವಿಷಯ ವಾಗಿಯೂ ಎಣ್ಣೆಯ ವಿಷಯವಾಗಿಯೂ ಇದೇ ರೀತಿ ಮಾಡಬೇಕು.
Elane tingalina hadinaidane dinadalli elu divasagala habbadalli avanu paapabaliya vishayavaagiyoo dahanabaliya vishayavaagiyoo aahaarada arpaneya vishaya vaagiyoo enneya vishayavaagiyoo ide reeti maadabeku.
Ezekiel 45:25 in English
- King James Version (KJV)
- In the seventh [month], in the fifteenth day of the month, shall he do the like in the feast of the seven days, according to the sin offering, according to the burnt offering, and according to the meat offering, and according to the oil.
- World English Bible (WEB)
- “‘“In the seventh month, on the fifteenth day of the month, during the feast, he shall do like that for seven days. He shall make the same provision for sin offering, the burnt offering, the meal offering, and the oil.”
- American Standard Version (ASV)
- In the seventh [month], in the fifteenth day of the month, in the feast, shall he do the like the seven days; according to the sin-offering, according to the burnt-offering, and according to the meal-offering, and according to the oil.
- Bible in Basic English (BBE)
- In the seventh month, on the fifteenth day of the month, at the feast, he is to give the same for seven days; the sin-offering, the burned offering, the meal offering, and the oil as before.
- Darby Translation (DBY)
- In the seventh [month], on the fifteenth day of the month, at the feast, shall he do the like seven days, according to the sin-offering, according to the burnt-offering, and according to the oblation, and according to the oil.
- Webster's Bible (WBS)
- In the seventh [month] , in the fifteenth day of the month, shall he do the like in the feast of the seven days, according to the sin-offering, according to the burnt-offering, and according to the meat-offering, and according to the oil.
- Young's Literal Translation (YLT)
- In the seventh [month], in the fifteenth day of the month, in the feast, he doth according to these things seven days; as the sin-offering so the burnt-offering, and as the present so also the oil.
Read in context
- 23ಹಬ್ಬದ ಏಳು ದಿವಸಗಳಲ್ಲಿ ಪ್ರತಿ ದಿನವೂ ಅವನು ಕರ್ತನಿಗೆ ದಹನಬಲಿಗಾಗಿ ಪೂರ್ಣಾಂಗವಾದ ಏಳು ಹೋರಿಗಳನ್ನೂ ಏಳು ಟಗರುಗಳನ್ನೂ ಮತ್ತು ಪ್ರತಿ ದಿನವೂ ಪಾಪಬಲಿಗಾಗಿ ಮೇಕೆಯ ಮರಿಯನ್ನೂ ಸಿದ್ಧಮಾಡಬೇಕು;
- 24ಅವನು ಹೋರಿಗೆ ಒಂದು ಏಫ, ಟಗರಿಗೆ ಒಂದು ಏಫ, ಈ ಪ್ರಕಾರ ಆಹಾರ ಅರ್ಪಣೆಯನ್ನೂ, ಏಫಕ್ಕೆ ಒಂದು ಹಿನ್ನು ಎಣ್ಣೆಯನ್ನೂ ಸಿದ್ಧಮಾಡಬೇಕು.ಏಳನೇ ತಿಂಗಳಿನ ಹದಿನೈದನೇ ದಿನದಲ್ಲಿ ಏಳು ದಿವಸಗಳ ಹಬ್ಬದಲ್ಲಿ ಅವನು ಪಾಪಬಲಿಯ ವಿಷಯವಾಗಿಯೂ ದಹನಬಲಿಯ ವಿಷಯವಾಗಿಯೂ ಆಹಾರದ ಅರ್ಪಣೆಯ ವಿಷಯ ವಾಗಿಯೂ ಎಣ್ಣೆಯ ವಿಷಯವಾಗಿಯೂ ಇದೇ ರೀತಿ ಮಾಡಬೇಕು.
- 25ಏಳನೇ ತಿಂಗಳಿನ ಹದಿನೈದನೇ ದಿನದಲ್ಲಿ ಏಳು ದಿವಸಗಳ ಹಬ್ಬದಲ್ಲಿ ಅವನು ಪಾಪಬಲಿಯ ವಿಷಯವಾಗಿಯೂ ದಹನಬಲಿಯ ವಿಷಯವಾಗಿಯೂ ಆಹಾರದ ಅರ್ಪಣೆಯ ವಿಷಯ ವಾಗಿಯೂ ಎಣ್ಣೆಯ ವಿಷಯವಾಗಿಯೂ ಇದೇ ರೀತಿ ಮಾಡಬೇಕು.
Cross references
- Leviticus 23:33–43 ಯಾಜಕಕಾಂಡ 23:33–43ಕರ್ತನು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನಂದರೆ-- ಇಸ್ರಾಯೇಲ್ ಮಕ್ಕಳೊಂದಿಗೆ ಮಾತನಾಡಿ ಅವರಿಗೆ ಹೀಗೆ ಹೇಳು--ಈ ಏಳನೆಯ ತಿಂಗಳಿನ ಹದಿನೈದನೆಯ ದಿವಸವು ಏಳು ದಿವಸಗಳ ವರೆಗೆ ಕರ್ತನಿಗೆ ಗುಡಾರಗಳ ಹಬ್ಬವಾಗಿರುವದು. ಮೊದಲನೆಯ ದಿವಸದಲ್ಲಿ ಪರಿಶುದ್ಧ ಸಭೆಯ ಕೂಟವಿರುವದು; ನೀವು ಅದರಲ್ಲಿ ಕಷ್ಟಕರವಾದ ಕೆಲಸ ವನ್ನು ಮಾಡಬಾರದು. ಏಳು ದಿವಸ ನೀವು ಬೆಂಕಿಯಿಂದ ಮಾಡಿದ ಸಮರ್ಪಣೆಗಳನ್ನು ಕರ್ತನಿಗೆ ಅರ್ಪಿಸಬೇಕು. ಎಂಟನೆಯ ದಿವಸವು ನಿಮಗೆ ಪರಿ ಶುದ್ಧ ಕೂಟವಾಗಿರುವದು; ನೀವು ಬೆಂಕಿಯಿಂದ ಮಾಡಿದ ಸಮರ್ಪಣೆಯನ್ನು ಕರ್ತನಿಗೆ ಅರ್ಪಿಸಬೇಕು; ಅದೊಂದು ಗಂಭೀರ ಸಭೆಯಾಗಿರುವದು; ಅದರಲ್ಲಿ ನೀವು ಕಷ್ಟಕರವಾದ ಕೆಲಸವನ್ನು ಮಾಡಬಾರದು. ನೀವು ಪರಿಶುದ್ಧ ಸಭೆಯಾಗಿ ಪ್ರಕಟಿಸಬೇಕಾದ ಕರ್ತನ ಹಬ್ಬಗಳು ಇವೇ: ಇವುಗಳ ಒಂದೊಂದು ದಿವಸದಲ್ಲಿ ಕರ್ತನಿಗೆ ದಹನಬಲಿಯನ್ನೂ ಆಹಾರ ಸಮರ್ಪಣೆಯನ್ನೂ ಯಜ್ಞವನ್ನೂ ಪಾನಕ ಸಮರ್ಪಣೆ ಗಳನ್ನೂ ಅರ್ಪಿಸಬೇಕು. ಕರ್ತನ ಸಬ್ಬತ್ತುಗಳ ಹೊರ ತಾಗಿಯೂ ನೀವು ಕರ್ತನಿಗೆ ಸಮರ್ಪಿಸುವ ನಿಮ್ಮ ದಾನ ಪ್ರಮಾಣಗಳ ನಿಮ್ಮ ಎಲ್ಲಾ ಸ್ವಇಷ್ಟವಾದ ಕಾಣಿಕೆಗಳ ಹೊರತಾಗಿಯೂ ಏಳನೆಯ ತಿಂಗಳಿನ ಹದಿನೈದನೆಯ ದಿನದಲ್ಲಿ ನೀವು ಭೂಮಿಯ ಫಲವನ್ನು ಕೂಡಿಸಿದಾಗ ನೀವು ಕರ್ತನಿಗೆ ಏಳು ದಿವಸಗಳ ಹಬ್ಬ ವನ್ನು ಕೈಕೊಳ್ಳಬೇಕು. ಮೊದಲನೆಯ ದಿವಸವು ಸಬ್ಬತ್ತಾ ಗಿರಬೇಕು ಮತ್ತು ಎಂಟನೆಯ ದಿವಸವು ಸಬ್ಬತ್ತಾಗಿರ ಬೇಕು. ಮೊದಲನೆಯ ದಿವಸದಲ್ಲಿ ನೀವು ಸುಂದರ ವಾದ ಮರಗಳ ಕೊಂಬೆಗಳನ್ನೂ ಖರ್ಜೂರ ಮರಗಳ ಕೊಂಬೆಗಳನ್ನೂ ದಟ್ಟವಾದ ಮರಗಳ ಕೊಂಬೆಗಳನ್ನೂ ಹಳ್ಳದ ನೀರವಂಜಿ ಮರಗಳನ್ನೂ ತೆಗೆದುಕೊಂಡು ಏಳು ದಿನಗಳ ವರೆಗೆ ನಿಮ್ಮ ದೇವರಾಗಿರುವ ಕರ್ತನ ಎದುರಿನಲ್ಲಿ ಸಂತೋಷಪಡಬೇಕು. ಆ ವರುಷದಲ್ಲಿ ನೀವು ಏಳು ದಿವಸಗಳ ಹಬ್ಬವನ್ನು ಕರ್ತನಿಗಾಗಿ ಕೈಕೊಳ್ಳಬೇಕು. ಇದು ನಿಮ್ಮ ಸಂತತಿಗಳಲ್ಲಿ ಶಾಶ್ವತವಾದ ನಿಯಮವಾಗಿರಬೇಕು; ನೀವು ಇದನ್ನು ಏಳನೆಯ ತಿಂಗಳಿನಲ್ಲಿ ಆಚರಿಸಬೇಕು. ಏಳು ದಿವಸಗಳ ವರೆಗೆ ನೀವು ಗುಡಾರಗಳಲ್ಲಿ ವಾಸಿಸಬೇಕು; ಇಸ್ರಾಯೇಲ್ಯ ರಾಗಿ ಹುಟ್ಟಿದವರೆಲ್ಲರೂ ಗುಡಾರಗಳಲ್ಲಿ ವಾಸಿಸ ಬೇಕು. ನಾನು ಇಸ್ರಾಯೇಲ್ ಮಕ್ಕಳನ್ನು ಐಗುಪ್ತ ದೇಶದೊಳಗಿಂದ ಹೊರಗೆ ಬರಮಾಡಿದಾಗ ಅವರು ಗುಡಾರಗಳಲ್ಲಿ ವಾಸಿಸುವಂತೆ ಮಾಡಿದೆನೆಂದು ನಿಮ್ಮ ಸಂತತಿಯವರು ತಿಳಿದುಕೊಳ್ಳುವರು; ನಿಮ್ಮ ದೇವರಾ ಗಿರುವ ಕರ್ತನು ನಾನೇ ಎಂಬದು.ಮೋಶೆಯು ಇಸ್ರಾಯೇಲ್ ಮಕ್ಕಳಿಗೆ ಕರ್ತನ ಹಬ್ಬಗಳನ್ನು ಪ್ರಕಟ ಮಾಡಿದನು.
- Numbers 29:12–38 ಅರಣ್ಯಕಾಂಡ 29:12–38ಏಳನೇ ತಿಂಗಳಿನ ಹದಿನೈದನೇ ದಿವಸದಲ್ಲಿ ನೀವು ಪರಿಶುದ್ಧ ಸಭೆಯಾಗಿ ಕೂಡಬೇಕು; ಕಷ್ಟಕರವಾದ ಕೆಲಸವನ್ನು ಮಾಡಬಾರದು. ಕರ್ತನಿಗೆ ಏಳು ದಿವಸ ಹಬ್ಬವನ್ನು ಮಾಡಬೇಕು. ಕರ್ತನಿಗೆ ಸುವಾಸನೆಯ ಬೆಂಕಿಯಿಂದ ಮಾಡಿದ ದಹನಬಲಿಗಾಗಿ ಬಲಿಯನ್ನು ಅರ್ಪಿಸಬೇಕು; ಏನಂದರೆ, ಹದಿಮೂರು ಎಳೇ ಹೋರಿ ಗಳನ್ನೂ ಎರಡು ಟಗರುಗಳನ್ನೂ ವರುಷದ ಹದಿನಾಲ್ಕು ಕುರಿಮರಿಗಳನ್ನೂ; ಅವು ದೋಷವಿಲ್ಲದ್ದಾಗಿರಬೇಕು; ಅವುಗಳ ಆಹಾರ ಸಮರ್ಪಣೆಯು ಎಣ್ಣೇ ಕಲಸಿದ ಹಿಟ್ಟು; ಹದಿಮೂರು ಹೋರಿಗಳಲ್ಲಿ ಒಂದೊಂದಕ್ಕೆ ಮೂರು ದಶಾಂಶಗಳು; ಎರಡು ಟಗರುಗಳಲ್ಲಿ ಒಂದೊಂದಕ್ಕೆ ಎರಡು ದಶಾಂಶಗಳು; ಹದಿನಾಲ್ಕು ಕುರಿಮರಿಗಳಲ್ಲಿ ಒಂದೊಂದಕ್ಕೆ ಒಂದು ದಶಾಂಶ; ಪಾಪಬಲಿಗೆ ಒಂದು ಮೇಕೆಮರಿ; ಇದಲ್ಲದೆ ನಿತ್ಯ ದಹನ ಬಲಿಯನ್ನೂ ಅದರ ಆಹಾರ ಸಮರ್ಪಣೆ ಯನ್ನೂ ಪಾನದ ಅರ್ಪಣೆಯನ್ನೂ ಅರ್ಪಿಸಬೇಕು. ಎರಡನೇ ದಿವಸದಲ್ಲಿ ಮಚ್ಚೆಯಿಲ್ಲದ ಹನ್ನೆರಡು ಎಳೇ ಹೋರಿಗಳನ್ನೂ ಎರಡು ಟಗರುಗಳನ್ನೂ ವರು ಷದ ಹದಿನಾಲ್ಕು ಕುರಿಮರಿಗಳನ್ನೂ ಹೋರಿಗಳಿಗೆ ಟಗರುಗಳಿಗೆ ಮತ್ತು ಕುರಿಮರಿಗಳಿಗೆ ಅವುಗಳ ಲೆಕ್ಕದ ಪದ್ಧತಿಯ ಪ್ರಕಾರ ಅವುಗಳ ಆಹಾರ ಪಾನದ ಅರ್ಪಣೆಗಳನ್ನೂ ಪಾಪಬಲಿಯಾಗಿ ಒಂದು ಮೇಕೆ ಮರಿಯನ್ನಲ್ಲದೆ ನಿತ್ಯ ದಹನಬಲಿಯನ್ನೂ ಅದರ ಆಹಾರ ಪಾನದ ಅರ್ಪಣೆಗಳನ್ನೂ ಅರ್ಪಿಸಬೇಕು. ಮೂರನೇ ದಿವಸದಲ್ಲಿ ದೋಷವಿಲ್ಲದ ಹನ್ನೊಂದು ಹೋರಿಗಳನ್ನೂ ಎರಡು ಟಗರುಗಳನ್ನೂ ವರುಷದ ಹದಿನಾಲ್ಕು ಕುರಿಮರಿಗಳನ್ನೂ ಹೋರಿ ಗಳಿಗೆ ಟಗರುಗಳಿಗೆ ಮತ್ತು ಕುರಿಮರಿಗಳಿಗೆ ಅವುಗಳ ಲೆಕ್ಕದ ಪದ್ಧತಿಯ ಪ್ರಕಾರ ಅವುಗಳ ಆಹಾರ ಪಾನಗಳ ಅರ್ಪಣೆಗಳನ್ನೂ ಪಾಪಬಲಿಯಾಗಿ ಒಂದು ಮೇಕೆ ಮರಿಯನ್ನಲ್ಲದೆ ನಿತ್ಯ ದಹನಬಲಿಯನ್ನೂ ಅದರ ಆಹಾರ ಪಾನದ ಅರ್ಪಣೆಗಳನ್ನೂ ಅರ್ಪಿಸಬೇಕು. ನಾಲ್ಕನೇ ದಿವಸದಲ್ಲಿ ದೋಷವಿಲ್ಲದ ಹತ್ತು ಹೋರಿಗಳನ್ನೂ ಎರಡು ಟಗರುಗಳನ್ನೂ ವರುಷದ ಹದಿನಾಲ್ಕು ಕುರಿಮರಿಗಳನ್ನೂ ಹೋರಿಗಳಿಗೆ ಟಗರುಗಳಿಗೆ ಮತ್ತು ಕುರಿಮರಿಗಳಿಗೆ ಅವುಗಳ ಲೆಕ್ಕದ ಪದ್ಧತಿಯ ಪ್ರಕಾರ ಅವುಗಳ ಆಹಾರ ಪಾನಗಳ ಅರ್ಪಣೆಗಳನ್ನೂ ಪಾಪಬಲಿಯಾಗಿ ಒಂದು ಮೇಕೆ ಮರಿಯನ್ನೂ ಅಲ್ಲದೆ ನಿತ್ಯ ದಹನಬಲಿಯನ್ನೂ ಅದರ ಆಹಾರ ಪಾನದ ಅರ್ಪಣೆಗಳನ್ನೂ ಅರ್ಪಿಸಬೇಕು. ಐದನೇ ದಿವಸದಲ್ಲಿ ಮಚ್ಚೆಯಿಲ್ಲದ ಒಂಭತ್ತು ಹೋರಿಗಳನ್ನೂ ಎರಡು ಟಗರುಗಳನ್ನೂ ವರುಷದ ಹದಿನಾಲ್ಕು ಕುರಿಮರಿಗಳನ್ನೂ ಹೋರಿಗಳಿಗೆ ಟಗರುಗಳಿಗೆ ಮತ್ತು ಕುರಿಮರಿಗಳಿಗೆ ಅವುಗಳ ಲೆಕ್ಕದ ಪದ್ಧತಿಯ ಪ್ರಕಾರ ಅವುಗಳ ಆಹಾರಪಾನ ಬಲಿ ಗಳನ್ನೂ ಪಾಪಬಲಿಯಾಗಿ ಒಂದು ಮೇಕೆ ಮರಿ ಯನ್ನೂ ಅಲ್ಲದೆ ನಿತ್ಯ ದಹನಬಲಿಯನ್ನೂ ಅದರ ಆಹಾರ ಪಾನದ ಅರ್ಪಣೆಗಳನ್ನೂ ಅರ್ಪಿಸಬೇಕು. ಆರನೇ ದಿವಸದಲ್ಲಿ ದೋಷವಿಲ್ಲದ ಎಂಟು ಹೋರಿಗಳನ್ನೂ ಎರಡು ಟಗರುಗಳನ್ನೂ ವರುಷದ ಹದಿನಾಲ್ಕು ಕುರಿಮರಿಗಳನ್ನೂ ಹೋರಿಗಳಿಗೆ ಟಗರುಗಳಿಗೆ ಮತ್ತು ಕುರಿಮರಿಗಳಿಗೆ ಅವುಗಳ ಲೆಕ್ಕದ ಪದ್ಧತಿಯ ಪ್ರಕಾರ ಅವುಗಳ ಆಹಾರ ಪಾನದ ಅರ್ಪಣೆಗಳನ್ನೂ ಪಾಪಬಲಿಯಾಗಿ ಒಂದು ಮೇಕೆ ಮರಿಯನ್ನೂ ಅಲ್ಲದೆ ನಿತ್ಯ ದಹನಬಲಿಯನ್ನೂ ಅದರ ಆಹಾರ ಪಾನದ ಅರ್ಪಣೆಗಳನ್ನೂ ಅರ್ಪಿಸಬೇಕು. ಏಳನೇ ದಿವಸದಲ್ಲಿ ದೋಷವಿಲ್ಲದ ಏಳು ಹೋರಿ ಗಳನ್ನೂ ಎರಡು ಟಗರುಗಳನ್ನೂ ವರುಷದ ಹದಿನಾಲ್ಕು ಕುರಿಮರಿಗಳನ್ನೂ ಹೋರಿಗಳಿಗೆ ಟಗರುಗಳಿಗೆ ಮತ್ತು ಕುರಿಮರಿಗಳಿಗೆ ಅವುಗಳ ಲೆಕ್ಕದ ಪದ್ಧತಿಯ ಪ್ರಕಾರ ಅವುಗಳ ಆಹಾರ ಪಾನದ ಅರ್ಪಣೆಗಳನ್ನೂ ಪಾಪ ಬಲಿಯಾಗಿ ಒಂದು ಮೇಕೆಮರಿಯನ್ನೂ ಅಲ್ಲದೆ ನಿತ್ಯ ದಹನಬಲಿಯನ್ನೂ ಅದರ ಆಹಾರ ಪಾನದ ಅರ್ಪಣೆಗಳನ್ನೂ ಅರ್ಪಿಸಬೇಕು. ಎಂಟನೇ ದಿವಸದಲ್ಲಿ ನಿಮಗೆ ಹಬ್ಬದ ಸಭೆಯಾಗ ಬೇಕು. ಕಷ್ಟಕರವಾದ ಕೆಲಸವನ್ನು ನೀವು ಮಾಡ ಬಾರದು. ಕರ್ತನಿಗೆ ಬೆಂಕಿಯಿಂದ ಮಾಡಿದ ಸುವಾ ಸನೆಯ ದಹನಬಲಿಗಾಗಿ ದೋಷವಿಲ್ಲದ ಒಂದು ಹೋರಿಯನ್ನೂ ಒಂದು ಟಗರನ್ನೂ ವರುಷದ ಏಳು ಕುರಿಮರಿಗಳನ್ನೂ ಹೋರಿಗೆ ಟಗರಿಗೆ ಮತ್ತು ಕುರಿ ಮರಿಗಳಿಗೆ ಅವುಗಳ ಲೆಕ್ಕದ ಪದ್ಧತಿಯ ಪ್ರಕಾರ ಅವುಗಳ ಆಹಾರ ಪಾನದ ಅರ್ಪಣೆಗಳನ್ನೂ ಪಾಪ ಬಲಿಯಾಗಿ ಒಂದು ಮೇಕೆಮರಿಯನ್ನೂ ಅಲ್ಲದೆ ನಿತ್ಯ ದಹನಬಲಿಯನ್ನೂ ಅದರ ಆಹಾರ ಪಾನದ ಅರ್ಪಣೆಗಳನ್ನೂ ಅರ್ಪಿಸಬೇಕು.
- 2 Chronicles 5:3 2 ಪೂರ್ವಕಾಲವೃತ್ತಾಂತ 5:3ಆದ ದರಿಂದ ಏಳನೇ ತಿಂಗಳಿನ ಹಬ್ಬದಲ್ಲಿ ಇಸ್ರಾಯೇಲಿನ ಮನುಷ್ಯರೆಲ್ಲರೂ ಅರಸನ ಬಳಿಗೆ ಬಂದು ಕೂಡಿದರು.
- Nehemiah 8:14–18 ನೆಹೆಮೀಯ 8:14–18ಆಗ ಅವರು ಏಳನೇ ತಿಂಗಳ ಹಬ್ಬದಲ್ಲಿ ಇಸ್ರಾಯೇಲಿನ ಮಕ್ಕಳು ಗುಡಾರಗಳಲ್ಲಿ ವಾಸವಾಗಿರಬೇಕೆಂದು ಕರ್ತ ನು ಮೋಶೆಯ ಮುಖಾಂತರ ಆಜ್ಞಾಪಿಸಿದ ನ್ಯಾಯ ಪ್ರಮಾಣದಲ್ಲಿ ಬರೆದಿದ್ದದ್ದನ್ನು ಕಂಡರು. ಏನಂದರೆ, ಬರೆದಿರುವ ಪ್ರಕಾರ ಗುಡಾರ ಹಾಕುವ ಹಾಗೆ ಬೆಟ್ಟಕ್ಕೆ ಹೋಗಿ ಇಪ್ಪೆಯ ಕೊಂಬೆಗಳನ್ನೂ ತೈಲಗಿಡದ ಕೊಂಬೆ ಗಳನ್ನೂ ಗಂಧದ ಗಿಡದ ಕೊಂಬೆಗಳನ್ನೂ ತಾಳೆಯ ಕೊಂಬೆಗಳನ್ನೂ ದಟ್ಟವಾಗಿರುವ ಗಿಡದ ಕೊಂಬೆಗಳನ್ನೂ ತಕ್ಕೊಂಡು ಬನ್ನಿರಿ ಎಂದು ತಮ್ಮ ಎಲ್ಲಾ ಪಟ್ಟಣಗಳ ಲ್ಲಿಯೂ ಯೆರೂಸಲೇಮಿನಲ್ಲಿಯೂ ಬಹಿರಂಗವಾಗಿ ಸಾರಬೇಕು ಎಂಬದೇ. ಹಾಗೆಯೇ ಜನರು ಹೊರಟು ಹೋಗಿ ತಕ್ಕೊಂಡು ಬಂದು ಅವರವರು ತಮ್ಮ ಮನೆ ಗಳ ಮೇಲೆಯೂ ತಮ್ಮ ಅಂಗಳಗಳಲ್ಲಿಯೂ ದೇವರ ಮನೆಯ ಅಂಗಳಗಳಲ್ಲಿಯೂ ನೀರಿನ ಬಾಗಲ ಬೀದಿಯಲ್ಲಿಯೂ ಎಫ್ರಾಯಾಮಿನ ಬಾಗಲ ಬೀದಿಯ ಲ್ಲಿಯೂ ತಮಗೆ ಗುಡಾರಗಳನ್ನು ಹಾಕಿದರು. ಈ ಪ್ರಕಾರ ಸೆರೆಯಿಂದ ತಿರಿಗಿ ಬಂದ ಸಭೆಯವರೆಲ್ಲರೂ ಗುಡಾರಗಳನ್ನು ಹಾಕಿ ಗುಡಾರಗಳಲ್ಲಿ ವಾಸವಾಗಿದ್ದರು. ನೂನನ ಮಗನಾದ ಯೆಹೋಶುವನ ದಿನವು ಮೊದಲ ಗೊಂಡು ಆ ದಿವಸದ ವರೆಗೂ ಇಸ್ರಾಯೇಲ್ ಮಕ್ಕಳು ಹಾಗೆ ಮಾಡಿರಲಿಲ್ಲ. ಅಲ್ಲಿ ಅವರಿಗೆ ಬಹಳ ಸಂತೋಷ ಇತ್ತು.ಎಜ್ರನು ಮೊದಲನೇ ದಿವಸದಿಂದ ಕಡೇ ದಿವಸದವರೆಗೂ ದಿನ ದಿನವೂ ದೇವರ ನ್ಯಾಯ ಪ್ರಮಾಣದ ಪುಸ್ತಕವನ್ನು ಓದುತ್ತಿದ್ದನು. ಹೀಗೆಯೇ ಅವರು ಏಳು ದಿವಸ ಹಬ್ಬವನ್ನು ಆಚರಿಸಿದರು. ಎಂಟನೇ ದಿವಸದಲ್ಲಿ ಪದ್ಧತಿಯ ಪ್ರಕಾರ ಪರಿಶುದ್ಧ ಸಭೆಯು ಸೇರಿತ್ತು. ಎಜ್ರನು ಮೊದಲನೇ ದಿವಸದಿಂದ ಕಡೇ ದಿವಸದವರೆಗೂ ದಿನ ದಿನವೂ ದೇವರ ನ್ಯಾಯ ಪ್ರಮಾಣದ ಪುಸ್ತಕವನ್ನು ಓದುತ್ತಿದ್ದನು. ಹೀಗೆಯೇ ಅವರು ಏಳು ದಿವಸ ಹಬ್ಬವನ್ನು ಆಚರಿಸಿದರು. ಎಂಟನೇ ದಿವಸದಲ್ಲಿ ಪದ್ಧತಿಯ ಪ್ರಕಾರ ಪರಿಶುದ್ಧ ಸಭೆಯು ಸೇರಿತ್ತು.
- John 7:37–39 ಯೋಹಾನನು 7:37–39ಹಬ್ಬದ ಆ ಮಹಾದಿವಸವಾದ ಕಡೇ ದಿನದಲ್ಲಿ ಯೇಸು ನಿಂತುಕೊಂಡು--ಯಾವನಿಗಾದರೂ ನೀರಡಿಕೆ ಯಾಗಿದ್ದರೆ ಅವನು ನನ್ನ ಬಳಿಗೆ ಬಂದು ಕುಡಿಯಲಿ. ನನ್ನ ಮೇಲೆ ನಂಬಿಕೆ ಇಡುವವನಿಗೆ ಬರಹವು ಹೇಳಿದ ಪ್ರಕಾರ ಆತನ ಹೊಟ್ಟೆಯೊಳಗಿಂದ ಜೀವ ಕರವಾದ ನೀರಿನ ಹೊಳೆಗಳು ಹರಿಯುವವು ಎಂದು ಕೂಗಿ ಹೇಳಿದನು. (ಆದರೆ ಆತನು ತನ್ನಲ್ಲಿ ವಿಶ್ವಾಸವಿಡುವವರು ಹೊಂದಲಿರುವ ಆತ್ಮನನ್ನು ಕುರಿತು ಇದನ್ನು ಹೇಳಿದನು; ಯಾಕಂದರೆ ಯೇಸು ಇನ್ನೂ ಮಹಿಮೆಯನ್ನು ಹೊಂದಿರಲಿಲ್ಲವಾದ್ದರಿಂದ ಪವಿತ್ರಾ ತ್ಮನು ಇನ್ನೂ ಕೊಡಲ್ಪಟ್ಟಿರಲಿಲ್ಲ.)
- Zechariah 14:16–19 ಜೆಕರ್ಯ 14:16–19ಆಗುವದೇನಂದರೆ--ಯೆರೂಸಲೇಮಿಗೆ ವಿರೋಧವಾಗಿ ಬಂದ ಎಲ್ಲಾ ಜನಾಂಗ ಗಳಲ್ಲಿ ಉಳಿದವರೆಲ್ಲಾ ವರುಷ ವರುಷಕ್ಕೆ ಸೈನ್ಯಗಳ ಕರ್ತನಾದ ಅರಸನನ್ನು ಆರಾಧಿಸುವದಕ್ಕೂ ಗುಡಾ ರಗಳ ಹಬ್ಬವನ್ನು ಆಚರಿಸುವದಕ್ಕೂ ಹೋಗುವರು. ಆಗುವದೇನಂದರೆ, ಭೂಮಿಯ ಗೋತ್ರಗಳಲ್ಲಿ ಸೈನ್ಯಗಳ ಕರ್ತನಾದ ಅರಸನನ್ನು ಆರಾಧಿಸುವದಕ್ಕೆ ಯೆರೂಸಲೇಮಿಗೆ ಹೋಗದೆ ಇರುವವರ್ಯಾರೋ ಅವರ ಮೇಲೆ ಮಳೆ ಇಲ್ಲದೆ ಇರುವದು. ಮಳೆ ಇಲ್ಲದ ಐಗುಪ್ತದ ಗೋತ್ರದವರು ಹೋಗದಿದ್ದರೆ ಗುಡಾರಗಳ ಹಬ್ಬವನ್ನು ಆಚರಿಸುವದಕ್ಕೆ ಬಾರದ ಅನ್ಯಜನಾಂಗಗಳನ್ನು ಕರ್ತನು ಹೊಡೆಯುವ ವ್ಯಾಧಿಯು ಅವರ ಮೇಲೆ ಇರುವದು. ಇದೇ ಐಗುಪ್ತದ ದಂಡನೆಯೂ ಗುಡಾರಗಳ ಹಬ್ಬ ವನ್ನು ಆಚರಿಸುವದಕ್ಕೆ ಬಾರದ ಎಲ್ಲಾ ಜನಾಂಗಗಳ ದಂಡನೆಯೂ ಆಗಿರುವದು.
- John 7:2 ಯೋಹಾನನು 7:2ಆಗ ಯೆಹೂದ್ಯರ ಗುಡಾರಗಳ ಹಬ್ಬವು ಹತ್ತಿರವಾಗಿತ್ತು.
- 2 Chronicles 7:8–10 2 ಪೂರ್ವಕಾಲವೃತ್ತಾಂತ 7:8–10ಅದೇ ಕಾಲ ದಲ್ಲಿ ಸೊಲೊಮೋನನು ಅವನ ಸಂಗಡ ಹಮಾತಿನ ಪ್ರದೇಶ ಮೊದಲುಗೊಂಡು ಐಗುಪ್ತ ನದಿಯ ವರೆಗೆ ಇರುವ ಮಹಾ ಸಭೆಯಾದ ಸಮಸ್ತ ಇಸ್ರಾಯೇಲ್ಯರು ಏಳು ದಿವಸ ಹಬ್ಬವನ್ನು ಮಾಡಿದರು. ಎಂಟನೇ ದಿವಸದಲ್ಲಿ ಪರಿಶುದ್ಧ ಸಂಘವನ್ನು ಮಾಡಿಕೊಂಡರು; ಬಲಿಪೀಠದ ಪ್ರತಿಷ್ಠೆಯನ್ನೂ ಹಬ್ಬವನ್ನೂ ಏಳು ದಿವಸ ಕೈಕೊಂಡರು; ಏಳನೇ ತಿಂಗಳಿನ ಇಪ್ಪತ್ತ ಮೂರನೇ ದಿವಸದಲ್ಲಿ ಅವನು ಜನರನ್ನು ತಮ್ಮ ಡೇರೆ ಗಳಿಗೆ ಕಳುಹಿಸಿಬಿಟ್ಟನು. ಕರ್ತನು ದಾವೀದನಿಗೂ ಸೊಲೊಮೋನನಿಗೂ ತನ್ನ ಜನವಾದ ಇಸ್ರಾಯೇ ಲಿಗೂ ಮಾಡಿದ ಉಪಕಾರಕ್ಕೋಸ್ಕರ ಅವರು ಹೃದಯ ದಲ್ಲಿ ಆನಂದವಾಗಿ ಸಂತೋಷಪಡುತ್ತಾ ಹೋದರು.
- Deuteronomy 16:13–15 ಧರ್ಮೋಪದೇಶಕಾಂಡ 16:13–15ನಿನ್ನ ಧಾನ್ಯವನ್ನೂ ನಿನ್ನ ದ್ರಾಕ್ಷೆಯನ್ನೂ ಕೂಡಿಸಿದ ಮೇಲೆ ಏಳು ದಿವಸ ಗುಡಾರಗಳ ಹಬ್ಬಮಾಡಬೇಕು. ಆ ಹಬ್ಬದಲ್ಲಿ ನೀನೂ ನಿನ್ನ ಮಗನೂ ಮಗಳೂ ದಾಸನೂ ದಾಸಿಯೂ ನಿನ್ನ ಬಾಗಲುಗಳಲ್ಲಿರುವ ಲೇವಿಯನೂ ಅನ್ಯನೂ ದಿಕ್ಕಿಲ್ಲದವನೂ ವಿಧವೆಯೂ ಸಂತೋಷಪಡಬೇಕು. ನಿನ್ನ ದೇವರಾದ ಕರ್ತನಿಗೆ ಏಳು ದಿವಸ ಕರ್ತನು ಆದುಕೊಳ್ಳುವ ಸ್ಥಳದಲ್ಲಿ ಹಬ್ಬ ಮಾಡಬೇಕು; ನಿನ್ನ ದೇವರಾದ ಕರ್ತನು ನಿನ್ನನ್ನು ಎಲ್ಲಾ ಆದಾಯದಲ್ಲಿಯೂ ಎಲ್ಲಾ ಕೈಕೆಲಸದಲ್ಲಿಯೂ ಆಶೀರ್ವದಿಸುವದರಿಂದ ನೀನು ನಿಜವಾಗಿಯೂ ಸಂತೋಷದಿಂದ ಇರಬೇಕು.
Original words (Hebrew)
- seventh · H7651שֶׁבַע shebaʻ
- fifteenth · H2568חָמֵשׁ châmêsh
- day · H3117יוֹם yôwm
- month · H2320חֹדֶשׁ chôdesh
- do · H6213עָשָׂה ʻâsâh
- feast · H2282חַג chag
- seven · H7637שְׁבִיעִי shᵉbîyʻîy
- days · H3117יוֹם yôwm
- offering · H2403חַטָּאָה chaṭṭâʼâh
- offering · H5930עֹלָה ʻôlâh
- offering · H4503מִנְחָה minchâh
- oil · H8081שֶׁמֶן shemen