Ezra · chapter 4 · verse 1
Ezra 4:1 in Kannada
ಸೆರೆಯ ಮಕ್ಕಳು ಇಸ್ರಾಯೇಲ್ ದೇವರಾಗಿರುವ ಕರ್ತನಿಗೆ ಆಲಯವನ್ನು ಕಟ್ಟು ತ್ತಾರೆಂದು ಯೆಹೂದದ ಬೆನ್ಯಾವಿಾನನ ಶತ್ರುಗಳು ಕೇಳಿದಾಗ
Sereya makkalu israayel devaraagiruva kartanige aalayavannu kattu ttaarendu yehoodada benyaaviాnana shatrugalu kelidaaga
Ezra 4:1 in English
- King James Version (KJV)
- Now when the adversaries of Judah and Benjamin heard that the children of the captivity builded the temple unto the LORD God of Israel;
- World English Bible (WEB)
- Now when the adversaries of Judah and Benjamin heard that the children of the captivity were building a temple to the LORD, the God of Israel,
- American Standard Version (ASV)
- Now when the adversaries of Judah and Benjamin heard that the children of the captivity were building a temple unto Jehovah, the God of Israel;
- Bible in Basic English (BBE)
- Now news came to the haters of Judah and Benjamin that the people who had come back were building a Temple to the Lord, the God of Israel;
- Darby Translation (DBY)
- And the adversaries of Judah and Benjamin heard that the children of the captivity were building the temple to Jehovah the God of Israel;
- Webster's Bible (WBS)
- Now when the adversaries of Judah and Benjamin heard that the children of the captivity were building the temple to the LORD God of Israel;
- Young's Literal Translation (YLT)
- And adversaries of Judah and Benjamin hear that the sons of the captivity are building a temple to Jehovah, God of Israel,
Read in context
- 1ಸೆರೆಯ ಮಕ್ಕಳು ಇಸ್ರಾಯೇಲ್ ದೇವರಾಗಿರುವ ಕರ್ತನಿಗೆ ಆಲಯವನ್ನು ಕಟ್ಟು ತ್ತಾರೆಂದು ಯೆಹೂದದ ಬೆನ್ಯಾವಿಾನನ ಶತ್ರುಗಳು ಕೇಳಿದಾಗ
- 2ಅವರು ಜೆರುಬ್ಬಾಬೆಲಿನ ಬಳಿಗೂ ಪಿತೃಗಳ ಮುಖ್ಯಸ್ಥರ ಬಳಿಗೂ ಬಂದು ಅವರಿಗೆ--ನಾವು ನಿಮ್ಮ ಕೂಡ ಕಟ್ಟುತ್ತೇವೆ; ನಾವು ನಿಮ್ಮ ಹಾಗೆ ನಿಮ್ಮ ದೇವ ರನ್ನು ಹುಡುಕುತ್ತೇವೆ; ತಮ್ಮನ್ನು ಇಲ್ಲಿಗೆ ಬರಮಾಡಿದ ಅಶ್ಶೂರಿನ ಅರಸನಾದ ಎಸರ್ಹದೋನನ ದಿವಸಗಳು ಮೊದಲುಗೊಂಡು ಆತನಿಗೆ ನಾವೂ ಬಲಿಯನ್ನು ಅರ್ಪಿಸುತ್ತಾ ಇದ್ದೇವೆ ಅಂದರು.
- 3ಆದರೆ ಜೆರುಬ್ಬಾ ಬೆಲನೂ ಯೇಷೂವನೂ ಮಿಕ್ಕಾದ ಇಸ್ರಾಯೇಲಿನ ಪಿತೃಗಳಲ್ಲಿ ಮುಖ್ಯಸ್ಥರೂ ಅವರಿಗೆ--ನಮ್ಮ ದೇವರಿಗೆ ಆಲಯವನ್ನು ಕಟ್ಟುವದಕ್ಕೆ ನಮಗೂ ನಿಮಗೂ ಏನು? ಪಾರಸಿಯರ ಅರಸನಾದ ಕೋರೆಷನೆಂಬ ಅರಸನು ನಮಗೆ ಆಜ್ಞಾಪಿಸಿದ ಹಾಗೆ ನಾವು ಇಸ್ರಾ ಯೇಲ್ ದೇವರಾಗಿರುವ ಕರ್ತನಿಗೆ ಅದನ್ನು ಕಟ್ಟು ವೆವು ಅಂದರು.
Cross references
- Ezra 1:11 ಎಜ್ರನು 1:11ಇವುಗಳನ್ನೆಲ್ಲಾ ಬಾಬೆಲಿನಿಂದ ಯೆರೂಸಲೇಮಿಗೆ ಸೆರೆಯವರ ಸಂಗಡ ಶೆಷ್ಬಚ್ಚರನು ತಕ್ಕೊಂಡು ಹೋದನು.
- 1 Chronicles 22:9–10 1 ಪೂರ್ವಕಾಲವೃತ್ತಾಂತ 22:9–10ಇಗೋ, ಸಮಾ ಧಾನವುಳ್ಳ ಮನುಷ್ಯನಾಗಿರುವ ಒಬ್ಬ ಮಗನು ನಿನಗೆ ಹುಟ್ಟುವನು; ಸುತ್ತಲಿರುವ ಅವನ ಸಮಸ್ತ ಶತ್ರುಗಳಿಂದ ನಾನು ಅವನಿಗೆ ಸಮಾಧಾನವನ್ನು ಕೊಡುವೆನು. ಅವ ನಿಗೆ ಸೊಲೊಮೋನನೆಂಬ ಹೆಸರಾಗುವದು; ಅವನ ದಿವಸಗಳಲ್ಲಿ ನಾನು ಇಸ್ರಾಯೇಲಿಗೆ ಸಮಾಧಾನ ವನ್ನೂ ವಿಶ್ರಾಂತಿಯನ್ನೂ ಕೊಡುವೆನು. ಅವನು ನನ್ನ ನಾಮಕ್ಕೆ ಮನೆಯನ್ನು ಕಟ್ಟಿಸುವನು. ಅವನು ನನ್ನ ಮಗನಾಗಿರುವನು, ನಾನು ಅವನಿಗೆ ತಂದೆ ಯಾಗಿರುವೆನು; ಇಸ್ರಾಯೇಲಿನ ಮೇಲೆ ಅವನ ರಾಜ್ಯದ ಸಿಂಹಾಸನವನ್ನು ಯುಗ ಯುಗಾಂತರಕ್ಕೂ ಸ್ಥಿರಪಡಿಸುವೆನು.
- Ezra 6:16 ಎಜ್ರನು 6:16ಆಗ ಇಸ್ರಾಯೇಲ್ಯರ ಮಕ್ಕಳೂ ಯಾಜಕರೂ ಲೇವಿಯರೂ ಸೆರೆಯಿಂದ ಬಂದ ಮಿಕ್ಕಾ ದವರೂ ದೇವರ ಆಲಯವನ್ನು ಸಂತೋಷದಿಂದ ಪ್ರತಿಷ್ಠೆಮಾಡಿದರು.
- Ezra 7:9 ಎಜ್ರನು 7:9ಇವನು ಮೊದಲನೇ ತಿಂಗಳಿನ ಮೊದಲನೇ ದಿವಸದಲ್ಲಿ ಬಾಬೆಲಿನಿಂದ ಹೋಗುವು ದಕ್ಕೆ ಯತ್ನಿಸಿ ತನ್ನ ದೇವರ ಒಳ್ಳೇ ಕೈ ಅವನ ಮೇಲೆ ಇದ್ದದ್ದರಿಂದ ಅವನ ಐದನೇ ತಿಂಗಳಿನ ಮೊದಲನೇ ದಿವಸದಲ್ಲಿ ಯೆರೂಸಲೇಮಿನಲ್ಲಿ ಬಂದು ಸೇರಿದನು.
- Ezra 10:7 ಎಜ್ರನು 10:7ಆಗ ಸೆರೆಯ ಮಕ್ಕಳೆಲ್ಲರೂ ಯೆರೂಸಲೇಮಿಗೆ ಕೂಡಿ ಬರಬೇಕೆಂದು ಯೆಹೂದ ಮತ್ತು ಯೆರೂಸ ಲೇಮಿನಲ್ಲಿ ಎಲ್ಲೆಲ್ಲಿಯೂ ಪ್ರಕಟಿಸಿದರು.
- Ezra 4:7–10 ಎಜ್ರನು 4:7–10ಆದರೆ ಅರ್ತಷಸ್ತನ ದಿವಸಗಳಲ್ಲಿ ಬಿಷ್ಲಾಮನೂ ಮಿತ್ರದಾತನೂ ಟಾಬೆಯೇಲನೂ ಮಿಕ್ಕಾದ ಅವರ ಜತೆಗಾರರೂ ಪಾರಸಿಯರ ಅರಸನಾದ ಆರ್ತಷಸ್ತನಿಗೆ ಒಂದು ಪತ್ರ ಬರೆದರು. ಬರೆದ ಆ ಪತ್ರವು ಅರಾಮ್ಯರ ಭಾಷೆಯಲ್ಲಿ ಟೀಕಿಸಲ್ಪಟ್ಟು, ಅರಾಮ್ಯರ ಅಕ್ಷರದಲ್ಲಿ ಬರೆಯಲ್ಪಟ್ಟಿತ್ತು. ಮುಖ್ಯಾಧಿಕಾರಿಯಾದ ರೆಹೂಮನೂ ಶಾಸ್ತ್ರಿ ಯಾದ ಶಿಂಷೈಯೂ ಯೆರೂಸಲೇಮಿಗೆ ವಿರೋಧವಾಗಿ ಅರಸನಾದ ಆರ್ತಷಸ್ತನಿಗೆ-- ಮುಖ್ಯಾಧಿಕಾರಿಯಾದ ರೆಹೂಮನೂ ಶಾಸ್ತ್ರಿಯಾದ ಶಿಂಷೈಯೂ ಮಿಕ್ಕಾದ ಅವರ ಜೊತೆಗಾರರೂ ದಿನಾಯರೂ ಅಪರ್ಸತ್ಕಾ ಯರೂ ಟರ್ಪಲಾಯರೂ ಅಪಾರ್ಸಾಯರೂ ಯೆರ ಕ್ಯರೂ ಬಾಬೆಲಿನವರೂ ಶೂಷನ್ಯರೂ ದೆಹಾಯರೂ ಏಲಾಮ್ಯರೂ ಮಹಾಘನವುಳ್ಳ ಆಸೆನಪ್ಪರನು ಬರ ಮಾಡಿ ಸಮಾರ್ಯದ ಪಟ್ಟಣಗಳಲ್ಲಿ ಇರಿಸಿದ ಮಿಕ್ಕಾದ ಜನಗಳೂ ನದಿಯ ಈಚೆಯಲ್ಲಿರುವ ಇತರ ಜನಗಳೂ--
- Ezra 6:19–20 ಎಜ್ರನು 6:19–20ಇದಲ್ಲದೆ ಸೆರೆಯ ಮಕ್ಕಳು ಮೊದಲನೇ ತಿಂಗಳಿನ ಹದಿನಾಲ್ಕನೇ ದಿವಸದಲ್ಲಿ ಪಸ್ಕವನ್ನು ಆಚರಿಸಿದರು. ಯಾಜಕರೂ ಲೇವಿಯರ ಕೂಡ ಶುದ್ಧಮಾಡಿ ಕೊಂಡಿದ್ದರು; ಅವರೆಲ್ಲರು ಶುಚಿಯಾಗಿದ್ದು ಸೆರೆಯ ಸಮಸ್ತ ಮಕ್ಕಳಿಗೋಸ್ಕರವೂ ಯಾಜಕರಾದ ತಮ್ಮ ಸಹೋದರರಿಗೋಸ್ಕರವೂ ತಮಗೋಸ್ಕರವೂ ಪಸ್ಕ ವನ್ನು ವಧಿಸಿದರು.
- 1 Corinthians 16:9 1 ಕೊರಿಂಥದವರಿಗೆ 16:9ಕಾರ್ಯಸಾಧಕವಾಗುವ ದೊಡ್ಡದೊಂದು ಬಾಗಲು ನನಗೋಸ್ಕರ ತೆರೆಯಲ್ಪಟ್ಟಿದೆ, ಅನೇಕ ವಿರೋಧಿಗಳು ಇದ್ದಾರೆ.
- 1 Kings 5:4–5 1 ಅರಸುಗಳು 5:4–5ಆದರೆ ಈಗ ನನ್ನ ದೇವರಾದ ಕರ್ತನು ಶತ್ರುವಿನಿಂದ ತಗಲುವ ಕೇಡು ಒಂದಾದರೂ ಇಲ್ಲದ ಹಾಗೆ ಸಮಸ್ತ ದಿಕ್ಕುಗಳಲ್ಲಿ ನನಗೆ ಸಮಾಧಾನವನ್ನು ಕೊಟ್ಟಿದ್ದಾನೆ. ಆದದರಿಂದ ಇಗೋ, ನನ್ನ ದೇವರಾದ ಕರ್ತನ ಹೆಸರಿಗೆ ಮನೆಯನ್ನು ಕಟ್ಟಿಸಬೇಕೆಂದಿದ್ದೇನೆ. ಅದರ ವಿಷಯವಾಗಿ ಕರ್ತನು ನನ್ನ ತಂದೆಯಾದ ದಾವೀದನಿಗೆ--ನಿನಗೆ ಬದಲಾಗಿ ನಿನ್ನ ಸಿಂಹಾಸನದ ಮೇಲೆ ನಾನು ಇರಿಸುವ ನಿನ್ನ ಮಗನೇ ನನ್ನ ಹೆಸರಿಗೆ ಮನೆಯನ್ನು ಕಟ್ಟಿಸುವನು ಎಂದು ಹೇಳಿದ್ದಾನಲ್ಲವೇ.
- Nehemiah 4:1–11 ನೆಹೆಮೀಯ 4:1–11ಆದರೆ ನಾವು ಗೋಡೆಯನ್ನು ಕಟ್ಟುವವರ್ತಮಾನ ಸನ್ಬಲ್ಲಟನು ಕೇಳಿದಾಗ ಏನಾ ಯಿತಂದರೆ, ಅವನು ಕೋಪಗೊಂಡು ಬಹಳ ಕೋಪ ದಿಂದ ರೇಗುತ್ತಾ ಯೆಹೂದ್ಯರಿಗೆ ಗೇಲಿ ಮಾಡಿ ತನ್ನ ಸಹೋದರರ ಮುಂದೆಯೂ ಸಮಾರ್ಯದಲ್ಲಿರುವ ಸೈನ್ಯದ ಮುಂದೆಯೂ-- ಈ ಬಲಹೀನರಾದ ಯೆಹೂ ದ್ಯರು ಮಾಡುವದೇನು? ತಮ್ಮನ್ನು ಬಲಪಡಿಸು ವರೋ? ಬಲಿಯನ್ನು ಅರ್ಪಿಸುವರೋ? ಒಂದೇ ದಿವಸದಲ್ಲಿ ತೀರಿಸುವರೋ? ಮಣ್ಣು ದಿಬ್ಬೆಗಳಲ್ಲಿರುವ ಸುಡಲ್ಪಟ್ಟ ಕಲ್ಲುಗಳನ್ನು ಉಜ್ಜೀವಿಸ ಮಾಡುವರೋ ಅಂದನು. ಇದಲ್ಲದೆ ಅಮ್ಮೋನ್ಯನಾದ ಟೋಬೀ ಯನು ಅವನ ಬಳಿಯಲ್ಲಿದ್ದು--ಒಂದು ನರಿಯು ಅವರು ಕಟ್ಟಿದರ ಮೇಲೆ ಹಾರಿದರೆ ಅದು ಅವರ ಕಲ್ಲುಗೋಡೆಯನ್ನು ಕೆಡವಿಹಾಕುವದು ಅಂದನು. ನಮ್ಮ ದೇವರೇ, ಕೇಳು; ಯಾಕಂದರೆ ನಾವು ತಿರಸ್ಕರಿಸಲ್ಪಟ್ಟವರಾಗಿದ್ದೇವೆ. ನೀನು ಅವರ ನಿಂದೆಯನ್ನು ಅವರ ತಲೆಗಳ ಮೇಲೆ ತಿರುಗುವಂತೆ ಮಾಡಿ ಸೆರೆಯ ದೇಶದಲ್ಲಿ ಅವರನ್ನು ಕೊಳ್ಳೆಯಾಗಿ ಒಪ್ಪಿಸು. ಅವರು ಕಟ್ಟುವವರ ಮುಂದೆ ನಿನಗೆ ಕೋಪ ಎಬ್ಬಿಸಿದ್ದರಿಂದ ನೀನು ಅವರ ಅಕ್ರಮವನ್ನು ಮುಚ್ಚಬೇಡ. ಅವರ ಪಾಪವು ನಿನ್ನ ಮುಂದೆ ಅಳಿಸಲ್ಪಡದೆ ಇರಲಿ. ಹೀಗೆಯೇ ನಾವು ಗೋಡೆಯನ್ನು ಕಟ್ಟಿದೆವು; ಗೋಡೆಯಲ್ಲಾ ಅರ್ಧ ಎತ್ತರದ ವರೆಗೂ ಒಂದಾಗಿ ಕೂಡಿತು. ಜನರು ಕೆಲಸ ಮಾಡುವದಕ್ಕೆ ಮನಸ್ಸುಳ್ಳ ವರಾಗಿದ್ದರು. ಯೆರೂಸಲೇಮಿನ ಗೋಡೆಗಳು ಕಟ್ಟಲ್ಪ ಟ್ಟವೆಂದೂ ಅದರ ಸಂದುಗಳು ಮುಚ್ಚಲ್ಪಟ್ಟವೆಂದೂ ಸನ್ಬಲ್ಲಟನು ಟೋಬೀಯನೂ ಅರಬಿಯರೂ ಅಮ್ಮೋ ನ್ಯರೂ ಅಷ್ಡೋದ್ಯರೂ ಕೇಳಿದಾಗ ಏನಾಯಿತಂದರೆ ಅವರೆಲ್ಲಾ ಬಹುಕೋಪಗೊಂಡು ಯೆರೂಸಲೇಮಿಗೆ ವಿರೋಧವಾಗಿ ಯುದ್ಧಮಾಡುವದಕ್ಕೂ ಅಭ್ಯಂತರಿಸು ವದಕ್ಕೂ ಬರಲು ಏಕವಾಗಿ ಒಳಸಂಚು ಮಾಡಿದರು. ಆದರೆ ನಾವು ನಮ್ಮ ದೇವರಿಗೆ ಪ್ರಾರ್ಥನೆ ಮಾಡಿ ಅವರ ನಿಮಿತ್ತ ಅವರಿಗೆ ಎದುರಾಗಿ ರಾತ್ರಿ ಹಗಲು ಕಾವಲನ್ನು ಇಟ್ಟೆವು. ಆಗ ಯೆಹೂದದವರು--ಹೊರೆ ಹೊರುವವರ ಬಲವು ಕಡಿಮೆಯಾಗಿ ಮಣ್ಣು ಬಹಳವಾಗಿದೆ; ಗೋಡೆಯನ್ನು ನಾವು ಕಟ್ಟಲಾರೆವು ಅಂದರು. ನಮ್ಮ ವೈರಿಗಳು--ಅವರು ತಿಳಿಯದ ಹಾಗೆಯೂ ನೋಡದ ಹಾಗೆಯೂ ನಾವು ಅವರ ನಡುವೆ ಬಂದು ಅವರನ್ನು ಕೊಂದುಹಾಕಿ ಕೆಲಸವನ್ನು ನಿಲ್ಲಿಸಿ ಬಿಡುವೆವು ಅಂದರು.
- Daniel 5:13 ದಾನಿಯೇಲನು 5:13ಆಗ ದಾನಿಯೇಲನು ಅರಸನ ಮುಂದೆ ತರಲ್ಪಟ್ಟನು. ಅರಸನು ದಾನಿಯೇಲನಿಗೆ--ಅರಸನಾದ ನನ್ನ ತಂದೆಯು ಯೆಹೂದದಿಂದ ತಂದ ಯೆಹೂದದ ಸೆರೆಯವರಲ್ಲಿ ಒಬ್ಬನಾದ ದಾನಿಯೇಲನು ನೀನೋ?
- Daniel 9:25 ದಾನಿಯೇಲನು 9:25ಆದದರಿಂದ ನೀನು ತಿಳಿಯಬೇಕಾದದ್ದು ಏನಂದರೆ --ಯೆರೂಸಲೇಮನ್ನು ತಿರಿಗಿ ಸ್ಥಾಪಿಸಿ ಕಟ್ಟಲು ಆಜ್ಞೆ ಹೊರಡುವದು ಮೊದಲುಗೊಂಡು ಅಭಿಷಿಕ್ತನಾದ (ಮೆಸ್ಸೀಯನ) ಪ್ರಭುವಿನ ವರೆಗೂ ಏಳು ವಾರಗಳು ಕಳೆಯಬೇಕು. ಅದು ಪುನಃ ಸ್ಥಾಪಿಸಲ್ಪಟ್ಟು ಅರವತ್ತೆರಡು ವಾರಗಳು ಇರುವದು. ಅದಕ್ಕೆ ಬೀದಿಯೂ ಗೋಡೆ ಗಳೂ ಕಷ್ಟಕಾಲದಲ್ಲಿ ಕಟ್ಟಲ್ಪಡುವದು.