Ezra · chapter 4 · verse 2
Ezra 4:2 in Kannada
ಅವರು ಜೆರುಬ್ಬಾಬೆಲಿನ ಬಳಿಗೂ ಪಿತೃಗಳ ಮುಖ್ಯಸ್ಥರ ಬಳಿಗೂ ಬಂದು ಅವರಿಗೆ--ನಾವು ನಿಮ್ಮ ಕೂಡ ಕಟ್ಟುತ್ತೇವೆ; ನಾವು ನಿಮ್ಮ ಹಾಗೆ ನಿಮ್ಮ ದೇವ ರನ್ನು ಹುಡುಕುತ್ತೇವೆ; ತಮ್ಮನ್ನು ಇಲ್ಲಿಗೆ ಬರಮಾಡಿದ ಅಶ್ಶೂರಿನ ಅರಸನಾದ ಎಸರ್ಹದೋನನ ದಿವಸಗಳು ಮೊದಲುಗೊಂಡು ಆತನಿಗೆ ನಾವೂ ಬಲಿಯನ್ನು ಅರ್ಪಿಸುತ್ತಾ ಇದ್ದೇವೆ ಅಂದರು.
Avaru jerubbaabelina baligoo pitrugala mukhyasthara baligoo bandu avarige--naavu nimma kooda kattutteve; naavu nimma haage nimma deva rannu hudukutteve; tammannu illige baramaadida ashshoorina arasanaada esarhadonana divasagalu modalugondu aatanige naavoo baliyannu arpisuttaa iddeve andaru.
Ezra 4:2 in English
- King James Version (KJV)
- Then they came to Zerubbabel, and to the chief of the fathers, and said unto them, Let us build with you: for we seek your God, as ye [do;] and we do sacrifice unto him since the days of Esar-haddon king of Assur, which brought us up hither.
- World English Bible (WEB)
- they came near to Zerubbabel, and to the heads of fathers’ households, and said to them, “Let us build with you, for we seek your God as you do; and we have been sacrificing to him since the days of Esar Haddon king of Assyria, who brought us up here.”
- American Standard Version (ASV)
- then they drew near to Zerubbabel, and to the heads of fathers’ [houses], and said unto them, Let us build with you; for we seek your God, as ye do; and we sacrifice unto him since the days of Esar-haddon king of Assyria, who brought us up hither.
- Bible in Basic English (BBE)
- Then they came to Zerubbabel and to the heads of families, and said to them, Let us take part in the building with you; for we are servants of your God, even as you are; and we have been making offerings to him from the days of Esar-haddon, king of Assyria, who put us here.
- Darby Translation (DBY)
- and they came to Zerubbabel and to the chief fathers, and said to them, We would build with you; for we seek your God, as ye; and we have sacrificed to him since the days of Esar-haddon king of Assyria, who brought us up hither.
- Webster's Bible (WBS)
- Then they came to Zerubbabel, and to the chief of the fathers, and said to them, Let us build with you: for we seek your God, as ye [do] ; and we do sacrifice to him since the days of Esar-haddon king of Assur, who brought us up hither.
- Young's Literal Translation (YLT)
- and they draw nigh unto Zerubbabel, and unto heads of the fathers, and say to them, 'Let us build with you; for, like you, we seek to your God, and we are not sacrificing since the days of Esar-Haddon king of Asshur, who brought us up hither.'
Read in context
- 1ಸೆರೆಯ ಮಕ್ಕಳು ಇಸ್ರಾಯೇಲ್ ದೇವರಾಗಿರುವ ಕರ್ತನಿಗೆ ಆಲಯವನ್ನು ಕಟ್ಟು ತ್ತಾರೆಂದು ಯೆಹೂದದ ಬೆನ್ಯಾವಿಾನನ ಶತ್ರುಗಳು ಕೇಳಿದಾಗ
- 2ಅವರು ಜೆರುಬ್ಬಾಬೆಲಿನ ಬಳಿಗೂ ಪಿತೃಗಳ ಮುಖ್ಯಸ್ಥರ ಬಳಿಗೂ ಬಂದು ಅವರಿಗೆ--ನಾವು ನಿಮ್ಮ ಕೂಡ ಕಟ್ಟುತ್ತೇವೆ; ನಾವು ನಿಮ್ಮ ಹಾಗೆ ನಿಮ್ಮ ದೇವ ರನ್ನು ಹುಡುಕುತ್ತೇವೆ; ತಮ್ಮನ್ನು ಇಲ್ಲಿಗೆ ಬರಮಾಡಿದ ಅಶ್ಶೂರಿನ ಅರಸನಾದ ಎಸರ್ಹದೋನನ ದಿವಸಗಳು ಮೊದಲುಗೊಂಡು ಆತನಿಗೆ ನಾವೂ ಬಲಿಯನ್ನು ಅರ್ಪಿಸುತ್ತಾ ಇದ್ದೇವೆ ಅಂದರು.
- 3ಆದರೆ ಜೆರುಬ್ಬಾ ಬೆಲನೂ ಯೇಷೂವನೂ ಮಿಕ್ಕಾದ ಇಸ್ರಾಯೇಲಿನ ಪಿತೃಗಳಲ್ಲಿ ಮುಖ್ಯಸ್ಥರೂ ಅವರಿಗೆ--ನಮ್ಮ ದೇವರಿಗೆ ಆಲಯವನ್ನು ಕಟ್ಟುವದಕ್ಕೆ ನಮಗೂ ನಿಮಗೂ ಏನು? ಪಾರಸಿಯರ ಅರಸನಾದ ಕೋರೆಷನೆಂಬ ಅರಸನು ನಮಗೆ ಆಜ್ಞಾಪಿಸಿದ ಹಾಗೆ ನಾವು ಇಸ್ರಾ ಯೇಲ್ ದೇವರಾಗಿರುವ ಕರ್ತನಿಗೆ ಅದನ್ನು ಕಟ್ಟು ವೆವು ಅಂದರು.
- 4ಆದದರಿಂದ ಆ ದೇಶದ ಜನರು ಯೆಹೂದ ಜನರ ಕೈಗಳನ್ನು ಬಲಹೀನ ಮಾಡಿ ಕಟ್ಟು ವದರಲ್ಲಿ ಅವರನ್ನು ಕಳವಳಪಡಿಸಿದರು.
Cross references
- 2 Kings 17:24 2 ಅರಸುಗಳು 17:24ಅಶ್ಶೂರಿನ ಅರಸನು ಬಾಬೆಲಿನಿಂದಲೂ ಕೂತಾ ಅವ್ವಾ ಹಮಾತ್ ಸೆಫರ್ವಯಿಮಿನಿಂದಲೂ ಜನರನ್ನು ಬರಮಾಡಿ ಅವರನ್ನು ಇಸ್ರಾಯೇಲ್ ಮಕ್ಕಳಿಗೆ ಬದ ಲಾಗಿ ಸಮಾರ್ಯದ ಪಟ್ಟಣಗಳಲ್ಲಿ ಇರಿಸಿದನು. ಇವರು ಸಮಾರ್ಯವನ್ನು ಸ್ವತಂತ್ರಿಸಿಕೊಂಡು ಅವರ ಪಟ್ಟಣಗಳಲ್ಲಿ ವಾಸಿಸಿದರು.
- 2 Kings 19:37 2 ಅರಸುಗಳು 19:37ಅವನು ತನ್ನ ದೇವರಾದ ನಿಸ್ರೋಕನ ಮನೆಯಲ್ಲಿ ಆರಾಧಿಸುತ್ತಿರುವಾಗ ಅವನ ಮಕ್ಕಳಾದ ಅದ್ರಮ್ಮೆಲೆಕನೂ ಸರೆಚೆರನೂ ಅವನನ್ನು ಕತ್ತಿಯಿಂದ ಹೊಡೆದು ಅರರಾಟ್ ದೇಶಕ್ಕೆ ತಪ್ಪಿಸಿಕೊಂಡು ಹೋದರು. ಅವನ ಮಗನಾದ ಏಸರ್ಹದ್ದೋನನು ಅವನಿಗೆ ಬದಲಾಗಿ ಅರಸನಾದನು.
- Galatians 2:4 ಗಲಾತ್ಯದವರಿಗೆ 2:4ಕಳ್ಳತನದಿಂದ ಸೇರಿಕೊಂಡ ಸುಳ್ಳು ಸಹೋ ದರರು ನಮ್ಮನ್ನು ದಾಸತ್ವದೊಳಗೆ ಸಿಕ್ಕಿಸಬೇಕೆಂದು ಕ್ರಿಸ್ತ ಯೇಸುವಿನಲ್ಲಿ ನಮಗೆ ದೊರಕಿರುವ ಸ್ವಾತಂತ್ರ್ಯ ವನ್ನು ಗೂಢವಾಗಿ ವಿಚಾರಿಸುವದಕ್ಕೆ ಮರಸಿಕೊಂಡು ಬಂದವರು.
- 2 Kings 17:27–33 2 ಅರಸುಗಳು 17:27–33ಆಗ ಅಶ್ಶೂರಿನ ಅರಸನು--ನೀವು ಅಲ್ಲಿಂದ ತಕ್ಕೊಂಡು ಬಂದಯಾಜಕರಲ್ಲಿ ಒಬ್ಬನನ್ನು ಅಲ್ಲಿಗೆ ಕರೆದುಕೊಂಡು ಹೋಗಿರಿ; ಅವರು ಅಲ್ಲಿ ವಾಸವಾಗಿರಲಿ; ಅವನು ಅವರಿಗೆ ಆ ದೇಶದ ದೇವರ ಕ್ರಮವನ್ನು ಬೋಧಿಸಲಿ ಎಂದು ಆಜ್ಞಾಪಿಸಿದನು. ಆಗ ಅವರು ಸಮಾರ್ಯ ದಿಂದ ತಂದ ಯಾಜಕರಲ್ಲಿ ಒಬ್ಬನು ಬಂದು ಬೇತೇಲಿ ನಲ್ಲಿ ವಾಸವಾಗಿದ್ದು ಅವರು ಕರ್ತನಿಗೆ ಭಯಪಡತಕ್ಕ ವಿಧವನ್ನು ಅವರಿಗೆ ಬೋಧಿಸಿದನು. ಆದರೆ ಪ್ರತಿ ಜನಾಂಗದವರೂ ತಾವು ನಿವಾಸಿಸಿದ ಪಟ್ಟಣಗಳಲ್ಲಿ ತಮಗೆ ದೇವರುಗಳನ್ನು ಮಾಡಿ ಸಮಾರ್ಯದವರು ಮಾಡಿದ ಉನ್ನತ ಸ್ಥಳಗಳ ಮನೆಗಳಲ್ಲಿ ಅವುಗಳನ್ನು ಇರಿಸಿದರು. ಬಾಬೆಲಿನ ಜನರು ಸುಕ್ಕೋತ್ಬೆನೋತನ್ನು ಮಾಡಿದರು; ಕೂತದವರು ನೇರ್ಗಲನ್ನು ಮಾಡಿದರು; ಹಮಾತಿನ ಮನುಷ್ಯರು ಅಷೀಮನನ್ನು ಮಾಡಿದರು. ಅವ್ವೀಯರು ನಿಭಜನನ್ನೂ ತರ್ತಕನನ್ನೂ ಮಾಡಿ ದರು. ಸೆಫರ್ವಯಿಮಿನವರು ಸೆಫರ್ವಾಯಿಮಿನ ದೇವ ರುಗಳಾದ ಅದ್ರಮ್ಮೆಲಕಿಗೂ ಅನಮ್ಮೆಲಕಿಗೂ ತಮ್ಮ ಮಕ್ಕಳನ್ನು ಬೆಂಕಿಯಿಂದ ಸುಟ್ಟುಬಿಟ್ಟರು. ಹೀಗೆ ಅವರು ಕರ್ತನಿಗೆ ಭಯಪಟ್ಟು ತಮ್ಮಲ್ಲಿರುವ ನೀಚ ರೊಳಗೆ ಉನ್ನತ ಸ್ಥಾನಕ್ಕೋಸ್ಕರ ಯಾಜಕರನ್ನು ಮಾಡಿ ಕೊಂಡರು. ಇವರು ಉನ್ನತ ಸ್ಥಳಗಳ ಮೇಲಿರುವ ಮನೆಗಳಲ್ಲಿ ಅವರಿಗೋಸ್ಕರ ಬಲಿಗಳನ್ನು ಅರ್ಪಿಸುತ್ತಾ ಇದ್ದರು. ಅವರು ಕರ್ತನಿಗೆ ಭಯಪಟ್ಟು ಅವರು ಅಲ್ಲಿಂದ ಒಯ್ದು ಜನಾಂಗಗಳ ಪದ್ಧತಿಯ ಪ್ರಕಾರ ತಮ್ಮ ದೇವರುಗಳನ್ನು ಸೇವಿಸಿದರು.
- 2 Peter 2:1–2 2 ಪೇತ್ರನು 2:1–2ಆದರೆ ಜನರಲ್ಲಿ ಸುಳ್ಳು ಪ್ರವಾದಿಗಳು ಸಹ ಇದ್ದರು; ಅದೇ ಪ್ರಕಾರ ನಿಮ್ಮಲ್ಲಿಯೂ ಸುಳ್ಳು ಬೋಧಕರು ಇರುವರು. ಅವರು ಪಾಷಾಂಡ ಬೋಧನೆಗಳನ್ನು ರಹಸ್ಯವಾಗಿ ಒಳತರುವವರೂ ತಮ್ಮನ್ನು ಕೊಂಡುಕೊಂಡ ಕರ್ತನನ್ನು ಕೂಡ ತಾವು ಅಲ್ಲಗಳೆಯುವವರೂ ಆಗಿದ್ದು ಫಕ್ಕನೆ ತಮ್ಮ ಅವರ ಕೆಡುಕಿನ ಮಾರ್ಗಗಳನ್ನು ಅನೇಕರು ಅನುಸರಿಸುವರು; ಅವರ ನಿಮಿತ್ತ ಸತ್ಯ ಮಾರ್ಗಕ್ಕೆ ದೂಷಣೆ ಉಂಟಾಗುವದು.
- 2 Timothy 3:8 2 ತಿಮೊಥೆಯನಿಗೆ 3:8ಯನ್ನಯಂಬ್ರ ಎಂಬ ವರು ಮೋಶೆಯನ್ನು ವಿರೋಧಿಸಿದಂತೆಯೇ ಇವರು ಸಹ ಸತ್ಯವನ್ನು ವಿರೋಧಿಸುತ್ತಾರೆ; ಇದಲ್ಲದೆ ಇವರು ಬುದ್ಧಿಗೆಟ್ಟವರೂ ಭ್ರಷ್ಟರೂ ಆಗಿದ್ದಾರೆ.
- Hosea 14:3 ಹೋಶೇಯ 14:3ಅಶ್ಯೂರ್ಯವು ನಮ್ಮನ್ನು ರಕ್ಷಿಸುವದಿಲ್ಲ; ನಾವು ಕುದುರೆಗಳ ಮೇಲೆ ಸವಾರಿ ಮಾಡುವದಿಲ್ಲ; ಇಲ್ಲವೆ ನಮ್ಮ ಕೈಗಳಿಂದ ಆದ ಕೆಲಸಕ್ಕೆ--ನೀವು ನಮ್ಮ ದೇವರು ಗಳೇ ಎಂದು ನಾವು ಇನ್ನು ಮುಂದೆ ಹೇಳುವದೇ ಇಲ್ಲ; ನಿನ್ನಲ್ಲಿ ತಂದೆಗಳಿಲ್ಲದವರಿಗೆ ಕರುಣೆಯುಂಟು ಎಂದು ಆತನಿಗೆ ಹೇಳಿರಿ.
- Proverbs 26:23–26 ಜ್ಞಾನೋಕ್ತಿಗಳು 26:23–26ಉರಿಯುವ ತುಟಿ ಗಳೂ ಕೆಟ್ಟಹೃದಯವೂ ಬೆಳ್ಳಿಯ ಕಿಟ್ಟದಿಂದ ಮುಚ್ಚ ಲ್ಪಟ್ಟ ಬೋಕಿಯಂತೆ ಇದೆ. ಹಗೆಮಾಡುವವನು ತನ್ನ ತುಟಿಗಳಿಂದ ಮೋಸವನ್ನು ನಟಿಸುತ್ತಾನೆ, ತನ್ನ ಅಂತರಂಗದಲ್ಲಿ ಮೋಸವನ್ನು ಇಟ್ಟುಕೊಳ್ಳುತ್ತಾನೆ. ಸವಿ ಮಾತನ್ನಾಡಿದರೆ ಅವನನ್ನು ನಂಬಬೇಡ; ಅವನ ಹೃದಯದಲ್ಲಿ ಏಳು ಅಸಹ್ಯಗಳಿವೆ. ಯಾವನ ಹಗೆ ತನವು ಮೋಸದಿಂದ ಮುಚ್ಚಲ್ಪಟ್ಟಿದೆಯೋ ಅವನ ಕೆಟ್ಟತನವು ಸಭೆಯಲ್ಲಿ ಬಯಲಾಗುವದು.
- Ezra 3:2 ಎಜ್ರನು 3:2ಆಗ ಯೋಚಾದಾಕನ ಮಗನಾದ ಯೇಷೂವನೂ ಅವನ ಸಹೋದರರಾದ ಯಾಜಕರೂ ಶೆಯಲ್ತೀಯೇಲನ ಮಗನಾದ ಜೆರುಬ್ಬಾಬೆಲನೂ ಅವನ ಸಹೋದರರೂ ಎದ್ದು ದೇವರ ಮನುಷ್ಯನಾದ ಮೋಶೆಯ ನ್ಯಾಯ ಪ್ರಮಾಣದಲ್ಲಿ ಬರೆದಿರುವ ಹಾಗೆ ದಹನಬಲಿಗಳನ್ನು ಅರ್ಪಿಸುವದಕ್ಕೆ ಇಸ್ರಾಯೇಲ್ ದೇವರ ಬಲಿಪೀಠವನ್ನು ಕಟ್ಟಿಸಿದರು.
- 2 Corinthians 11:13–15 2 ಕೊರಿಂಥದವರಿಗೆ 11:13–15ಅಂಥವರು ಸುಳ್ಳು ಅಪೊಸ್ತಲರೂ ಮೋಸಗಾರರಾದ ಕೆಲಸದವರೂ ಕ್ರಿಸ್ತನ ಅಪೊಸ್ತಲರಂತೆ ಕಾಣಿಸಿಕೊಳ್ಳು ವದಕ್ಕೆ ತಮ್ಮನ್ನು ತಾವೇ ಮಾರ್ಪಡಿಸಿಕೊಳ್ಳುವವರೂ ಆಗಿದ್ದಾರೆ. ಇದೇನೂ ಆಶ್ಚರ್ಯವಲ್ಲ; ಯಾಕಂದರೆ ಸೈತಾನನು ಬೆಳಕಿನ ದೂತನಂತೆ ಕಾಣಿಸಿಕೊಳ್ಳುವ ಹಾಗೆ ತನ್ನನ್ನು ತಾನೇ ಮಾರ್ಪಡಿಸಿಕೊಳ್ಳುತ್ತಾನೆ. ಅವನ ಸೇವಕರು ಸಹ ನೀತಿಗೆ ಸೇವಕರಾಗಿ ಕಾಣಿಸಿಕೊಳ್ಳುವದಕ್ಕೆ ಮಾರ್ಪಡಿಸಿಕೊಳ್ಳುವದು ದೊಡ್ಡ ದಲ್ಲ. ಅವರ ಅಂತ್ಯವು ಅವರ ಕೃತ್ಯಗಳಿಗೆ ತಕ್ಕ ಹಾಗೆಯೇ ಆಗುವದು.
- 2 Kings 17:41 2 ಅರಸುಗಳು 17:41ಹೀಗೆಯೇ ಈ ಜನಾಂಗಗಳು ಕರ್ತನಿಗೆ ಭಯಪಡದೆ ತಮ್ಮ ಕೆತ್ತಿದ ವಿಗ್ರಹಗಳನ್ನು ಸೇವಿಸಿದರು; ಅವರ ಪಿತೃಗಳು ಮಾಡಿದ ಹಾಗೆ ಅವರೂ ಅವರ ಮಕ್ಕಳೂ ಮೊಮ್ಮಕ್ಕಳೂ ಇಂದಿನ ವರೆಗೂ ಮಾಡುತ್ತಿರುತ್ತಾರೆ.
- Ezra 2:2 ಎಜ್ರನು 2:2ಜೆರುಬ್ಬಾಬೆಲನ ಸಂಗಡ ಬಂದ ಸೀಮೆಗಳ ಮಕ್ಕಳು ಯಾರಂದರೆ -- ಯೆಷೂವನು, ನೆಹೆವಿಾಯನು, ಸೆರಾಯನು, ರೆಲಾಯನು ಮೊರ್ದೆಕಾಯನು, ಬಿಲ್ಷಾ ನನು, ಮಿಸ್ಪಾರನು, ಬಿಗ್ವಾಯನು, ರೆಹೂಮನು, ಬಾಣನು, ಇಸ್ರಾಯೇಲ್ ಜನರಾದ ಮನುಷ್ಯರ ಲೆಕ್ಕವೇನಂದರೆ--
Original words (Hebrew)
- came · H5066נָגַשׁ nâgash
- Zerubbabel · H2216זְרֻבָּבֶל Zᵉrubbâbel
- chief · H7218רֹאשׁ rôʼsh
- fathers · H1אָב ʼâb
- said · H559אָמַר ʼâmar
- build · H1129בָּנָה bânâh
- seek · H1875דָּרַשׁ dârash
- God · H430אֱלֹהִים ʼĕlôhîym
- sacrifice · H2076זָבַח zâbach
- days · H3117יוֹם yôwm
- Esar-haddon · H634אֵסַר־חַדּוֹן ʼÊçar-Chaddôwn
- king · H4428מֶלֶךְ melek
- Assur · H804אַשּׁוּר ʼAshshûwr
- hither · H5927עָלָה ʻâlâh