Ezra · chapter 6 · verse 17
Ezra 6:17 in Kannada
ದೇವರ ಆಲಯದ ಪ್ರತಿಷ್ಠೆ ಗೋಸ್ಕರ ನೂರು ಹೋರಿಗಳನ್ನೂ ಇನ್ನೂರು ಟಗರು ಗಳನ್ನೂ ನಾನೂರು ಕುರಿಮರಿಗಳನ್ನೂ ಇಸ್ರಾಯೇಲ್ ಕುಲಗೋತ್ರಗಳ ಲೆಕ್ಕದ ಪ್ರಕಾರ ಸಮಸ್ತ ಇಸ್ರಾ ಯೇಲ್ಯರ ಪಾಪವನ್ನು ಕಳೆಯುವದಕ್ಕೋಸ್ಕರ ಹನ್ನೆರಡು ಮೇಕೆಯ ಹೋತಗಳನ್ನೂ ಬಲಿ ಅರ್ಪಿಸಿದರು.
Devara aalayada pratishthe goskara nooru horigalannoo innooru tagaru galannoo naanooru kurimarigalannoo israayel kulagotragala lekkada prakaara samasta israa yelyara paapavannu kaleyuvadakkoskara hanneradu mekeya hotagalannoo bali arpisidaru.
Ezra 6:17 in English
- King James Version (KJV)
- And offered at the dedication of this house of God an hundred bullocks, two hundred rams, four hundred lambs; and for a sin offering for all Israel, twelve he goats, according to the number of the tribes of Israel.
- World English Bible (WEB)
- They offered at the dedication of this house of God one hundred bulls, two hundred rams, four hundred lambs; and for a sin offering for all Israel, twelve male goats, according to the number of the tribes of Israel.
- American Standard Version (ASV)
- And they offered at the dedication of this house of God a hundred bullocks, two hundred rams, four hundred lambs; and for a sin-offering for all Israel, twelve he-goats, according to the number of the tribes of Israel.
- Bible in Basic English (BBE)
- And they gave as offerings at the opening of this house of God a hundred oxen, two hundred sheep, four hundred lambs; and for a sin-offering for all Israel, twelve he-goats, being the number of the tribes of Israel.
- Darby Translation (DBY)
- and they presented at the dedication of this house of God a hundred bullocks, two hundred rams, four hundred lambs, and for a sin-offering for all Israel, twelve he-goats, according to the number of the tribes of Israel.
- Webster's Bible (WBS)
- And offered at the dedication of this house of God a hundred bullocks, two hundred rams, four hundred lambs; and for a sin-offering for all Israel, twelve he-goats, according to the number of the tribes of Israel.
- Young's Literal Translation (YLT)
- and have brought near for the dedication of this house of God, bullocks a hundred, rams two hundred, lambs four hundred; and young he-goats for a sin-offering for all Israel, twelve, according to the number of the tribes of Israel;
Read in context
- 15ಅರಸ ನಾದ ದಾರ್ಯಾವೆಷನ ಆಳಿಕೆಯ ಆರನೇ ವರುಷದ ಅಡಾರ್ ತಿಂಗಳ ಮೂರನೇ ದಿವಸದಲ್ಲಿ ಈ ಆಲಯವು ಕಟ್ಟಿ ತೀರಿಸಲ್ಪಟ್ಟಿತು.
- 16ಆಗ ಇಸ್ರಾಯೇಲ್ಯರ ಮಕ್ಕಳೂ ಯಾಜಕರೂ ಲೇವಿಯರೂ ಸೆರೆಯಿಂದ ಬಂದ ಮಿಕ್ಕಾ ದವರೂ ದೇವರ ಆಲಯವನ್ನು ಸಂತೋಷದಿಂದ ಪ್ರತಿಷ್ಠೆಮಾಡಿದರು.
- 17ದೇವರ ಆಲಯದ ಪ್ರತಿಷ್ಠೆ ಗೋಸ್ಕರ ನೂರು ಹೋರಿಗಳನ್ನೂ ಇನ್ನೂರು ಟಗರು ಗಳನ್ನೂ ನಾನೂರು ಕುರಿಮರಿಗಳನ್ನೂ ಇಸ್ರಾಯೇಲ್ ಕುಲಗೋತ್ರಗಳ ಲೆಕ್ಕದ ಪ್ರಕಾರ ಸಮಸ್ತ ಇಸ್ರಾ ಯೇಲ್ಯರ ಪಾಪವನ್ನು ಕಳೆಯುವದಕ್ಕೋಸ್ಕರ ಹನ್ನೆರಡು ಮೇಕೆಯ ಹೋತಗಳನ್ನೂ ಬಲಿ ಅರ್ಪಿಸಿದರು.
- 18ಮೋಶೆಯ ಪುಸ್ತಕದಲ್ಲಿ ಬರೆಯಲ್ಪಟ್ಟ ಹಾಗೆ ಯೆರೂ ಸಲೇಮಿನಲ್ಲಿ ವಾಸವಾಗಿರುವ ದೇವರ ಆರಾಧನೆ ಗೋಸ್ಕರ ಯಾಜಕರನ್ನು ಅವರ ಸರತಿಯ ಪ್ರಕಾರವೂ ಲೇವಿಯರನ್ನು ಅವರ ಸರತಿಯ ಪ್ರಕಾರವೂ ನೇಮಿಸಿದರು.
- 19ಇದಲ್ಲದೆ ಸೆರೆಯ ಮಕ್ಕಳು ಮೊದಲನೇ ತಿಂಗಳಿನ ಹದಿನಾಲ್ಕನೇ ದಿವಸದಲ್ಲಿ ಪಸ್ಕವನ್ನು ಆಚರಿಸಿದರು.
Cross references
- Ezra 8:35 ಎಜ್ರನು 8:35ಸೆರೆಯಿಂದ ಬಂದು ಸೆರೆಯಾಗಿ ಒಯ್ಯಲ್ಪಟ್ಟಿದ್ದ ಅವರ ಮಕ್ಕಳು ಇಸ್ರಾಯೇಲ್ ದೇವರಿಗೆ ದಹನ ಬಲಿಗಳನ್ನು ಅರ್ಪಿಸಿದರು. ಸಮಸ್ತ ಇಸ್ರಾಯೇಲ್ಯರಿ ಗೋಸ್ಕರ ಹನ್ನೆರಡು ಹೋರಿಗಳನ್ನೂ ತೊಂಭತ್ತಾರು ಟಗರುಗಳನ್ನೂ ಎಪ್ಪತ್ತೇಳು ಕುರಿಮರಿಗಳನ್ನೂ ಪಾಪ ಕಳೆಯುವದಕ್ಕಾಗಿ ಹನ್ನೆರಡು ಮೇಕೆಯ ಹೋತಗ ಳನ್ನೂ ಅರ್ಪಿಸಿದರು. ಇವೆಲ್ಲಾ ಕರ್ತನಿಗೆ ದಹನಬಲಿ ಯಾಗಿತ್ತು.ಅವರು ಅರಸನ ಆಜ್ಞೆಗಳನ್ನು ನದಿಯ ಈಚೆಯಲ್ಲಿರುವ ಅರಸನ ಅಧಿಪತಿಗಳಿಗೂ ಯಜಮಾ ನರಿಗೂ ಒಪ್ಪಿಸಿದರು. ಆಗ ಅವರ ಜನರಿಗೂ ದೇವರ ಆಲಯಕ್ಕೂ ಸಹಾಯಮಾಡಿದರು.
- 2 Chronicles 29:21–23 2 ಪೂರ್ವಕಾಲವೃತ್ತಾಂತ 29:21–23ಅವರು ರಾಜ್ಯಕ್ಕೋಸ್ಕರವೂ ಪರಿಶುದ್ಧ ಸ್ಥಾನಕ್ಕೋಸ್ಕರವೂ ಯೆಹೂದಕ್ಕೋಸ್ಕರವೂ ಪಾಪದ ಬಲಿಯಾಗಿ ಏಳು ಹೋರಿಗಳನ್ನೂ ಏಳು ಟಗರುಗಳನ್ನೂ ಏಳು ಕುರಿಮರಿಗಳನ್ನೂ ಏಳು ಮೇಕೆ ಗಳನ್ನೂ ತಂದರು. ಆಗ ಕರ್ತನ ಬಲಿಪೀಠದ ಮೇಲೆ ಅವುಗಳನ್ನು ಅರ್ಪಿಸಲು ಆರೋನನ ಮಕ್ಕಳಾದ ಯಾಜಕರಿಗೆ ಹೇಳಿದನು. ಹೀಗೆ ಅವರು ಹೋರಿ ಗಳನ್ನು ವಧಿಸಿದಾಗ ಯಾಜಕರು ಅವುಗಳ ರಕ್ತವನ್ನು ತೆಗೆದುಕೊಂಡು ಬಲಿಪೀಠದ ಮೇಲೆ ಚಿಮಿಕಿಸಿದರು; ಹಾಗೆಯೇ ಅವರು ಟಗರುಗಳನ್ನು ವಧಿಸಿ ರಕ್ತವನ್ನು ಬಲಿಪೀಠದ ಮೇಲೆ ಚಿಮಿಕಿಸಿದರು; ಅವರು ಕುರಿಮರಿ ಗಳನ್ನೂ ವಧಿಸಿ ರಕ್ತವನ್ನು ಬಲಿಪೀಠದ ಮೇಲೆ ಚಿಮಿಕಿಸಿದರು. ಅರಸನ ಮುಂದೆಯೂ ಸಭೆಯ ಮುಂದೆಯೂ ಪಾಪದ ಬಲಿಯಾದ ಮೇಕೆ ಹೋತ ಗಳನ್ನು ಹತ್ತಿರ ತಕ್ಕೊಂಡು ಬಂದು ತಮ್ಮ ಕೈಗಳನ್ನು ಅವುಗಳ ಮೇಲೆ ಇಟ್ಟರು.
- Revelation 7:4–8 ಪ್ರಕಟನೆ 7:4–8ಮುದ್ರೆ ಹೊಂದಿದವರ ಸಂಖ್ಯೆಯನ್ನು ನಾನು ಕೇಳಿದೆನು; ಇಸ್ರಾಯೇಲ್ಯನ ಮಕ್ಕಳ ಗೋತ್ರದವರಲ್ಲಿ ಮುದ್ರೆಯನ್ನು ಹೊಂದಿದವರು ಒಂದು ಲಕ್ಷ ನಾಲ್ವತ್ತು ನಾಲ್ಕು ಸಾವಿರ. ಯೂದನ ಗೋತ್ರದವರಲ್ಲಿ ಮುದ್ರಿಸಲ್ಪಟ್ಟವರು ಹನ್ನೆರಡು ಸಾವಿರ, ರೂಬೇನನ ಗೋತ್ರದವರಲ್ಲಿ ಮುದ್ರಿಸಲ್ಪಟ್ಟವರು ಹನ್ನೆರಡು ಸಾವಿರ, ಗಾದನ ಗೋತ್ರ ದವರಲ್ಲಿ ಮುದ್ರಿಸಲ್ಪಟ್ಟವರು ಹನ್ನೆರಡು ಸಾವಿರ. ಅಷೇರನ ಗೋತ್ರದವರಲ್ಲಿ ಮುದ್ರಿಸಲ್ಪಟ್ಟವರು ಹನ್ನೆ ರಡು ಸಾವಿರ, ನೆಫ್ತಲೀಮನ ಗೋತ್ರದವರಲ್ಲಿ ಮುದ್ರಿಸ ಲ್ಪಟ್ಟವರು ಹನ್ನೆರಡು ಸಾವಿರ, ಮನಸ್ಸೆಯ ಗೋತ್ರದವ ರಲ್ಲಿ ಮುದ್ರಿಸಲ್ಪಟ್ಟವರು ಹನ್ನೆರಡು ಸಾವಿರ. ಸಿಮೆ ಯೋನನ ಗೋತ್ರದವರಲ್ಲಿ ಮುದ್ರಿಸಲ್ಪಟ್ಟವರು ಹನ್ನೆ ರಡು ಸಾವಿರ, ಲೇವಿಯ ಗೋತ್ರದವರಲ್ಲಿ ಮುದ್ರಿಸ ಲ್ಪಟ್ಟವರು ಹನ್ನೆರಡು ಸಾವಿರ, ಇಸ್ಸಾಕಾರನ ಗೋತ್ರ ದವರಲ್ಲಿ ಮುದ್ರಿಸಲ್ಪಟ್ಟವರು ಹನ್ನೆರಡು ಸಾವಿರ. ಜೆಬುಲೂನನ ಗೋತ್ರದವರಲ್ಲಿ ಮುದ್ರಿಸಲ್ಪಟ್ಟವರು ಹನ್ನೆರಡು ಸಾವಿರ, ಯೋಸೇಫನ ಗೋತ್ರದವರಲ್ಲಿ ಮುದ್ರಿಸಲ್ಪಟ್ಟವರು ಹನ್ನೆರಡು ಸಾವಿರ, ಬೆನ್ಯಾವಿಾನನ ಗೋತ್ರದವರಲ್ಲಿ ಮುದ್ರಿಸಲ್ಪಟ್ಟವರು ಹನ್ನೆರಡುಸಾವಿರ.
- 2 Chronicles 7:5 2 ಪೂರ್ವಕಾಲವೃತ್ತಾಂತ 7:5ಅರಸನಾದ ಸೊಲೊ ಮೋನನು ಇಪ್ಪತ್ತೆರಡು ಸಾವಿರ ಎತ್ತುಗಳನ್ನೂ ಲಕ್ಷದ ಇಪ್ಪತ್ತುಸಾವಿರ ಕುರಿಗಳನ್ನೂ ಬಲಿಯಾಗಿ ಅರ್ಪಿಸಿ ದನು. ಹೀಗೆಯೇ ಅರಸನೂ ಸಮಸ್ತ ಜನರೂ ದೇವರ ಆಲಯವನ್ನು ಪ್ರತಿಷ್ಠೆಮಾಡಿದರು.
- 2 Chronicles 29:31–35 2 ಪೂರ್ವಕಾಲವೃತ್ತಾಂತ 29:31–35ಹಿಜ್ಕೀಯನು ಅವರಿಗೆ ಉತ್ತರಕೊಟ್ಟು--ಈಗ ನೀವು ನಿಮ್ಮನ್ನು ಕರ್ತನಿಗೆ ಪ್ರತಿಷ್ಠೆಮಾಡಿದ್ದ ರಿಂದ ಸವಿಾಪಕ್ಕೆ ಬಂದು ಬಲಿಗಳನ್ನೂ ಸ್ತೋತ್ರ ಅರ್ಪಣೆಗಳನ್ನೂ ಕರ್ತನ ಆಲಯಕ್ಕೆ ತಕ್ಕೊಂಡು ಬನ್ನಿರಿ ಅಂದನು. ಆಗ ಕೂಟದವರು ಬಲಿಗಳನ್ನೂ ಸ್ತೋತ್ರದ ಅರ್ಪಣೆಗಳನ್ನೂ ಉಚಿತಾರ್ಥ ವಾಗಿ ಕೊಡಲು ಮನಸ್ಸುಳ್ಳವರು ದಹನಬಲಿಗಳನ್ನೂ ತಂದರು. ಸಭೆಯು ತಂದ ದಹನ ಬಲಿಗಳ ಲೆಕ್ಕ ವೇನಂದರೆ: ಎಪ್ಪತ್ತು ಹೋರಿಗಳು, ನೂರು ಟಗರು ಗಳು, ಇನ್ನೂರು ಕುರಿಮರಿಗಳು. ಇವೆಲ್ಲಾ ಕರ್ತನಿಗೆ ಅರ್ಪಿಸಿದ ದಹನಬಲಿಗಳಾಗಿದ್ದವು. ಪ್ರತಿಷ್ಠೆ ಮಾಡ ಲ್ಪಟ್ಟವುಗಳು ಆರುನೂರು ಹೋರಿಗಳೂ ಮೂರು ಸಾವಿರ ಕುರಿಗಳೂ ಇದ್ದವು. ಯಾಜಕರು ಸ್ವಲ್ಪ ಜನರಾಗಿದ್ದು ದಹನಬಲಿಗಳನ್ನೆಲ್ಲಾ ಸುಲಿಯಲಾರದೆ ಇದ್ದದ್ದರಿಂದ ಕೆಲಸವು ತೀರುವ ವರೆಗೂ ಯಾಜಕರು ತಮ್ಮನ್ನು ಪರಿಶುದ್ಧಮಾಡಿಕೊಳ್ಳುವ ವರೆಗೂ ಲೇವಿ ಯರಾದ ಅವರ ಸಹೋದರರು ಅವರಿಗೆ ಸಹಾಯ ಮಾಡುತ್ತಿದ್ದರು. ಯಾಕಂದರೆ ತಮ್ಮನ್ನು ಪರಿಶುದ್ಧಮಾಡಿ ಕೊಳ್ಳಲು ಯಾಜಕರಿಗಿಂತ ಲೇವಿಯರು ಯಥಾರ್ಥ ಹೃದಯವುಳ್ಳವರಾಗಿದ್ದರು. ಇದಲ್ಲದೆ ದಹನಬಲಿ ಗಳೂ ಸಮಾಧಾನದ ಬಲಿಗಳ ಕೊಬ್ಬೂ ದಹನ ಬಲಿಗೆ ಬೇಕಾದ ಪಾನದ ಅರ್ಪಣೆಗಳೂ ಬಹಳ ವಾಗಿದ್ದವು. ಹೀಗೆಯೇ ಕರ್ತನ ಆಲಯದ ಸೇವೆಯು ಸಿದ್ಧವಾಯಿತು.ಆಗ ದೇವರು ಜನರನ್ನು ಸಿದ್ಧಮಾಡಿದ್ದರಿಂದ ಹಿಜ್ಕೀಯನೂ ಜನರೆಲ್ಲರೂ ಸಂತೋಷಪಟ್ಟರು; ಯಾಕಂದರೆ ಈ ಕಾರ್ಯವು ಅಕಸ್ಮಾತ್ತಾಗಿ ಆಯಿತು.
- Leviticus 4:13–14 ಯಾಜಕಕಾಂಡ 4:13–14ಮಾಡಬಾರದ ಕೆಲಸಗಳನ್ನು ಕರ್ತನ ಆಜ್ಞೆಗಳಿಗೆ ವಿರೋಧವಾಗಿ ಯಾವದನ್ನಾದರೂ ಇಸ್ರಾಯೇಲಿನ ಸಭೆಯವರು ಅರಿಯದೆ ಮಾಡಿ ಅಪರಾಧಿಗಳಾಗಿದ್ದರೆ ಅದು ಸಭೆಗೆ ಕಣ್ಮರೆಯಾಗಿದ್ದರೆ ಅವರು ಮಾಡಿದ ಪಾಪವು ಗೊತ್ತಾದಾಗ ಆ ಪಾಪಕ್ಕಾಗಿ ಸಭೆಯು ಒಂದು ಎಳೇ ಹೋರಿಯನ್ನು ಸಭೆಯ ಗುಡಾರದ ಮುಂದೆ ತರಬೇಕು.
- Leviticus 4:22–23 ಯಾಜಕಕಾಂಡ 4:22–23ಒಬ್ಬ ಅಧಿಪತಿಯು ಪಾಪಮಾಡಿ ತನ್ನ ದೇವ ರಾದ ಕರ್ತನ ಆಜ್ಞೆಗಳಿಗೆ ವಿರೋಧವಾಗಿ ತಿಳಿಯದೆ ಮಾಡಬಾರದವುಗಳನ್ನು ಮಾಡಿ ಅಪರಾಧಿಯಾಗಿದ್ದರೆ, ಇಲ್ಲವೆ ಅವನು ಮಾಡಿದ ಆ ಪಾಪವು ಅವನಿಗೆ ತಿಳಿದು ಬಂದರೆ, ಅವನು ಬಲಿಗಾಗಿ ಮೇಕೆಗಳಲ್ಲಿ ದೋಷವಿಲ್ಲದ ಒಂದು ಗಂಡು ಮರಿಯನ್ನು ತರಬೇಕು.
- Numbers 7:2–89 ಅರಣ್ಯಕಾಂಡ 7:2–89ಇಸ್ರಾಯೇಲ್ಯರ ಪ್ರಧಾನರೂ ತಮ್ಮ ತಂದೆಗಳ ಮನೆಯ ಮುಖ್ಯಸ್ಥರೂ ಗೋತ್ರಗಳ ಮುಖ್ಯಾಧಿಕಾರಿಗಳೂ ಎಣಿಸಲ್ಪಟ್ಟವರ ಮೇಲೆ ಇದ್ದ ವರು ಅರ್ಪಿಸಿದರು. ಅವರು ಕರ್ತನ ಎದುರಿನಲ್ಲಿ ತಂದ ಅರ್ಪಣೆ ಏನಂದರೆ--ಆರು ಕಮಾನು ಬಂಡಿ ಗಳೂ ಹನ್ನೆರಡು ಎತ್ತುಗಳೂ ಪ್ರಧಾನರಲ್ಲಿ ಇಬ್ಬರಿಗೆ ಒಂದು ಬಂಡಿಯನ್ನೂ, ಒಬ್ಬೊಬ್ಬನಿಗೆ ಒಂದೊಂದು ಎತ್ತನ್ನೂ ಅವರು ಗುಡಾರದ ಮುಂದೆ ತಂದರು. ಕರ್ತನು ಮಾತನಾಡಿ ಮೋಶೆಗೆ ಹೇಳಿದ್ದೇನಂದರೆ ಅವುಗಳನ್ನು ಅವರಿಂದ ತೆಗೆದುಕೋ, ಅವು ಸಭೆಯ ಗುಡಾರದ ಸೇವೆಮಾಡುವದಕ್ಕೋಸ್ಕರ ಇರಬೇಕು.ಅವುಗಳನ್ನು ಲೇವಿಯರಿಗೆ ಅವನವನ ಸೇವೆಯ ಪ್ರಕಾರ ಕೊಡಬೇಕು ಅಂದನು. ಆಗ ಮೋಶೆಯು ಆ ಬಂಡಿಗಳನ್ನೂ ಎತ್ತುಗಳನ್ನೂ ತೆಗೆದುಕೊಂಡು ಅವು ಗಳನ್ನು ಲೇವಿಯರಿಗೆ ಕೊಟ್ಟನು. ಎರಡು ಬಂಡಿ ಗಳನ್ನೂ ನಾಲ್ಕು ಎತ್ತುಗಳನ್ನೂ ಗೇರ್ಷೋನನ ಕುಮಾರರಿಗೆ ಅವರ ಸೇವೆಯ ಪ್ರಕಾರವಾಗಿ ಕೊಟ್ಟನು. ಯಾಜಕನಾದ ಆರೋನನ ಮಗನಾದ ಈತಾಮಾರನ ಕೈಕೆಳಗಿರುವ ನಾಲ್ಕು ಬಂಡಿಗಳನ್ನೂ ಎಂಟು ಎತ್ತು ಗಳನ್ನೂ ಮೆರಾರೀಯ ಕುಮಾರರಿಗೆ ಅವರ ಸೇವೆಯ ಪ್ರಕಾರ ಕೊಟ್ಟನು. ಆದರೆ ಕೆಹಾತ್ಯರ ಕುಮಾರರಿಗೆ ಯಾವದನ್ನೂ ಕೊಡಲಿಲ್ಲ. ಅವರು ತಮ್ಮ ಹೆಗಲುಗಳ ಮೇಲೆ ಹೊತ್ತುಕೊಂಡು ಹೋಗುವದೇ ಪರಿಶುದ್ಧ ಸ್ಥಳದಲ್ಲಿ ಅವರಿಗೆ ಸಂಬಂಧಪಟ್ಟ ಸೇವೆಯಾಗಿತ್ತು. ಪ್ರಧಾನರು ಬಲೀಪೀಠದ ಪ್ರತಿಷ್ಠೆಗಾಗಿ ಅಭಿಷೇ ಕಿಸಿದ ದಿನದಲ್ಲಿ ಅದನ್ನು ಅರ್ಪಿಸಿದರು. ಪ್ರಧಾನರು ಬಲಿಪೀಠದ ಮುಂದೆ ತಮ್ಮ ಅರ್ಪಣೆಯನ್ನು ಅರ್ಪಿಸಿ ದರು. ಕರ್ತನು ಮೋಶೆಗೆ ಹೇಳಿದ್ದೇನಂದರೆ--ಒಬ್ಬೊಬ್ಬ ಪ್ರಧಾನನು ತನ್ನ ತನ್ನ ದಿವಸದಲ್ಲಿ ಬಲಿ ಪೀಠದ ಪ್ರತಿಷ್ಠೆಗಾಗಿ ತನ್ನ ಅರ್ಪಣೆಯನ್ನು ಅರ್ಪಿಸಬೇಕು. ಮೊದಲನೇ ದಿವಸದಲ್ಲಿ ತನ್ನ ಅರ್ಪಣೆಯನ್ನು ಅರ್ಪಿಸಿದವನು ಯೆಹೂದ ಗೋತ್ರದ ಅವ್ಮೆಾನಾ ದಾಬನ ಮಗನಾದ ನಹಶೋನನು. ಅವನ ಅರ್ಪಣೆ ಏನಂದರೆ,--ನೂರಮೂವತ್ತು ಶೇಕೆಲಿನಷ್ಟು ತೂಕವಾದ ಬೆಳ್ಳಿಯ ಒಂದು ತಟ್ಟೆ, ಪರಿಶುದ್ಧ ಸ್ಥಳದ ಶೇಕೆಲ್ ಪ್ರಕಾರ ಎಪ್ಪತ್ತು ಶೇಕೆಲಿನಷ್ಟು ಬೆಳ್ಳಿಯ ಒಂದು ಬಟ್ಟಲು, ಆಹಾರದ ಸಮರ್ಪಣೆಗಾಗಿ ಈ ಎರಡು ಎಣ್ಣೇ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು. ಧೂಪದಿಂದ ತುಂಬಿದ್ದ ಹತ್ತು ಶೇಕೆಲಿನಷ್ಟು ತೂಕದ ಬಂಗಾರದ ಒಂದು ಚಮಚ, ದಹನಬಲಿಗಾಗಿ ಒಂದು ಎಳೇ ಹೋರಿ, ಒಂದು ಟಗರು, ಮೊದಲನೇ ವರುಷದ ಒಂದು ಕುರಿಮರಿ. ಪಾಪದ ಬಲಿಗಾಗಿ ಆಡುಗಳಲ್ಲಿ ಒಂದು ಮರಿಯೂ ಸಮಾಧಾನದ ಅರ್ಪಣೆಗಳ ಬಲಿಗಾಗಿ ಎರಡು ಎತ್ತುಗಳೂ ಐದು ಟಗರುಗಳೂ ಐದು ಹೋತಗಳೂ ಮೊದಲನೇ ವರುಷದ ಐದು ಕುರಿಮರಿಗಳೂ. ಇದು ಅವ್ಮೆಾನಾ ದಾಬನ ಮಗನಾದ ನಹಶೋನನ ಅರ್ಪಣೆಯು. ಎರಡನೇ ದಿವಸದಲ್ಲಿ ಇಸ್ಸಾಕಾರನ ಪ್ರಧಾನ ನಾಗಿರುವ ಚೂವಾರನ ಮಗನಾದ ನೆತನೇಲನು ಅರ್ಪಿ ಸಿದನು. ಅವನು ಅರ್ಪಿಸಿದ ಅರ್ಪಣೆ ಏನಂದರೆ, ನೂರ ಮೂವತ್ತು ಶೇಕೆಲಿನಷ್ಟು ತೂಕವಾದ ಬೆಳ್ಳಿಯ ಒಂದು ತಟ್ಟೆ, ಪರಿಶುದ್ಧ ಸ್ಥಳದ ಶೇಕೆಲಿನ ಪ್ರಕಾರ ಎಪ್ಪತ್ತು ಶೇಕೆಲಿನಷ್ಟು ಬೆಳ್ಳಿಯ ಒಂದು ಬಟ್ಟಲು, ಆಹಾರ ಸಮರ್ಪಣೆಗಾಗಿ ಈ ಎರಡು ಎಣ್ಣೇ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು. ಧೂಪದಿಂದ ತುಂಬಿದ್ದ ಹತ್ತು ಶೇಕೆಲಿನಷ್ಟು ತೂಕದ ಬಂಗಾರದ ಒಂದು ಚಮಚ, ದಹನಬಲಿಗಾಗಿ ಒಂದು ಎಳೇ ಹೋರಿ, ಒಂದು ಟಗರು, ಮೊದಲನೇ ವರುಷದ ಒಂದು ಕುರಿಮರಿ. ಪಾಪದ ಬಲಿಗಾಗಿ ಆಡುಗಳಲ್ಲಿ ಒಂದು ಮರಿಯನ್ನೂ ಸಮಾಧಾನದ ಅರ್ಪಣೆಗಳ ಬಲಿಗಾಗಿ ಎರಡು ಎತ್ತುಗಳೂ ಐದು ಟಗರುಗಳೂ ಐದು ಹೋತಗಳೂ ಮೊದಲನೇ ವರುಷದ ಐದು ಕುರಿಮರಿಗಳೂ. ಇದು ಚೂವಾರನ ಮಗನಾದ ನೆತನೇಲನ ಅರ್ಪಣೆಯು. ಮೂರನೆ ದಿವಸದಲ್ಲಿ ಜೆಬುಲೂನನ ಮಕ್ಕಳಿಗೆ ಪ್ರಧಾನನಾಗಿರುವ ಹೇಲೋನನ ಮಗನಾದ ಎಲೀಯಾಬನು ಅರ್ಪಿಸಿದ್ದು. ಅವನ ಅರ್ಪಣೆ ಏನಂದರೆ-- ನೂರ ಮೂವತ್ತು ಶೇಕೆಲಿನಷ್ಟು ತೂಕ ವಾದ ಬೆಳ್ಳಿಯ ಒಂದು ತಟ್ಟೆ, ಪರಿಶುದ್ಧ ಸ್ಥಳದ ಶೇಕೆಲ್ ಪ್ರಕಾರ ಎಪ್ಪತ್ತು ಶೇಕೆಲಿನಷ್ಟು ಬೆಳ್ಳಿಯ ಒಂದು ಬಟ್ಟಲು, ಆಹಾರ ಸಮರ್ಪಣೆಗಾಗಿ ಈ ಎರಡು ಎಣ್ಣೇ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು. ಧೂಪದಿಂದ ತುಂಬಿದ್ದ ಹತ್ತು ಶೇಕೆಲಿನಷ್ಟು ತೂಕದ ಬಂಗಾರದ ಒಂದು ಚಮಚ, ದಹನಬಲಿಗಾಗಿ ಒಂದು ಎಳೇ ಹೋರಿ, ಒಂದು ಟಗರು, ಮೊದಲನೇ ವರುಷದ ಒಂದು ಕುರಿಮರಿ. ಪಾಪದ ಬಲಿಗಾಗಿ ಆಡುಗಳಲ್ಲಿ ಒಂದು ಮರಿಯೂ ಸಮಾಧಾನದ ಅರ್ಪಣೆಯ ಬಲಿಗಾಗಿ ಎರಡು ಎತ್ತುಗಳೂ ಐದು ಟಗರುಗಳೂ ಐದು ಹೋತಗಳೂ ಮೊದಲನೇ ವರುಷದ ಐದು ಕುರಿಮರಿಗಳೂ. ಇದು ಹೇಲೋನನ ಮಗನಾದ ಎಲೀಯಾಬನ ಅರ್ಪಣೆಯು. ನಾಲ್ಕನೇ ದಿನದಲ್ಲಿ ರೂಬೇನನ ಮಕ್ಕಳಿಗೆ ಪ್ರಧಾ ನನಾಗಿರುವ ಶೆದೇಯೂರನ ಮಗನಾದ ಎಲೀಚೂ ರನು ಅರ್ಪಿಸಿದನು. ಅವನ ಅರ್ಪಣೆಯು ಏನಂದರೆ,--ನೂರಮೂವತ್ತು ಶೇಕೆಲಿನಷ್ಟು ತೂಕ ವಾದ ಬೆಳ್ಳಿಯ ತಟ್ಟೆ, ಪರಿಶುದ್ಧ ಸ್ಥಳದ ಶೇಕೆಲಿನ ಪ್ರಕಾರ ಎಪ್ಪತ್ತು ಶೇಕೆಲಿನಷ್ಟು ಬೆಳ್ಳಿಯ ಒಂದು ಬಟ್ಟಲು, ಆಹಾರ ಸಮರ್ಪಣೆಗಾಗಿ ಈ ಎರಡು ಎಣ್ಣೇ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು. ಧೂಪದಿಂದ ತುಂಬಿದ್ದ ಹತ್ತು ಶೇಕೆಲಿನಷ್ಟು ತೂಕದ ಬಂಗಾರದ ಒಂದು ಚಮಚ. ದಹನ ಬಲಿಗಾಗಿ ಒಂದು ಎಳೇ ಹೋರಿ, ಒಂದು ಟಗರು, ಮೊದಲನೇ ವರುಷದ ಒಂದು ಕುರಿಮರಿ. ಪಾಪದ ಬಲಿಗಾಗಿ ಆಡುಗಳಲ್ಲಿ ಒಂದು ಮರಿಯೂ ಸಮಾಧಾನದ ಅರ್ಪಣೆಯ ಬಲಿಗಾಗಿ ಎರಡು ಎತ್ತುಗಳೂ ಐದು ಟಗರುಗಳೂ ಐದು ಹೋತಗಳೂ ಮೊದಲನೇ ವರು ಷದ ಐದು ಕುರಿಮರಿಗಳೂ. ಇದು ಶೆದೇಯೂರನ ಮಗನಾದ ಎಲೀಚೂರನ ಅರ್ಪಣೆಯು. ಐದನೇ ದಿನದಲ್ಲಿ ಸಿಮೆಯೋನ ಮಕ್ಕಳಿಗೆ ಪ್ರಧಾನನಾಗಿರುವ ಚೂರೀಷದ್ದೈಯನ ಮಗನಾದ ಶೆಲುವಿಾಯೇಲನು ಅರ್ಪಿಸಿದನು. ಅವನ ಅರ್ಪ ಣೆಯು ಏನಂದರೆ--ನೂರ ಮೂವತ್ತು ಶೇಕೆಲಿನಷ್ಟು ತೂಕವಾದ ಬೆಳ್ಳಿಯ ತಟ್ಟೆ, ಪರಿಶುದ್ಧ ಸ್ಥಳದ ಶೇಕೆಲಿನ ಪ್ರಕಾರ ಎಪ್ಪತ್ತು ಶೇಕೆಲಿನಷ್ಟು ಬೆಳ್ಳಿಯ ಒಂದು ಬಟ್ಟಲು, ಆಹಾರ ಸಮರ್ಪಣೆಗಾಗಿ ಈ ಎರಡು ಎಣ್ಣೇ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು. ಧೂಪದಿಂದ ತುಂಬಿದ್ದ ಹತ್ತು ಶೇಕೆಲಿನಷ್ಟು ತೂಕದ ಬಂಗಾರದ ಒಂದು ಚಮಚ, ದಹನಬಲಿಗಾಗಿ ಒಂದು ಎಳೇ ಹೋರಿ, ಒಂದು ಟಗರು, ಮೊದಲನೇ ವರುಷದ ಒಂದು ಕುರಿಮರಿ. ಪಾಪದ ಬಲಿಗಾಗಿ ಆಡುಗಳಲ್ಲಿ ಒಂದು ಮರಿಯೂ ಸಮಾಧಾನದ ಅರ್ಪಣೆಯ ಬಲಿಗಾಗಿ ಎರಡು ಎತ್ತುಗಳೂ ಐದು ಟಗರುಗಳೂ ಐದು ಹೋತಗಳೂ ಮೊದಲನೇ ವರುಷದ ಐದು ಕುರಿಮರಿಗಳೂ. ಇದು ಚೂರಿಷದ್ದೈ ಯನ ಮಗನಾದ ಶೆಲುವಿಾಯೇಲನ ಅರ್ಪಣೆಯು. ಆರನೇ ದಿನದಲ್ಲಿ ಗಾದನ ಮಕ್ಕಳಿಗೆ ಪ್ರಧಾನ ನಾಗಿರುವ ದೆಗೂವೇಲನ ಮಗನಾದ ಎಲ್ಯಾಸಾಫನು ಅರ್ಪಿಸಿದನು. ಅವನ ಅರ್ಪಣೆಯು ಏನಂದರೆನೂರ ಮೂವತ್ತು ಶೇಕೆಲಿನಷ್ಟು ತೂಕವಾದ ಬೆಳ್ಳಿಯ ತಟ್ಟೆ, ಪರಿಶುದ್ಧ ಸ್ಥಳದ ಶೇಕೆಲಿನ ಪ್ರಕಾರ ಎಪ್ಪತ್ತು ಶೇಕೆಲಿನಷ್ಟು ಬೆಳ್ಳಿಯ ಒಂದು ಬಟ್ಟಲು, ಆಹಾರ ಸಮರ್ಪಣೆಗಾಗಿ ಈ ಎರಡು ಎಣ್ಣೇ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು. ಧೂಪದಿಂದ ತುಂಬಿದ್ದ ಹತ್ತು ಶೇಕೆಲಿನಷ್ಟು ತೂಕದ ಬಂಗಾರದ ಒಂದು ಚಮಚ, ದಹನ ಬಲಿಗಾಗಿ ಒಂದು ಎಳೇ ಹೋರಿ, ಒಂದು ಟಗರು, ಮೊದಲನೇ ವರುಷದ ಒಂದು ಕುರಿಮರಿ. ಪಾಪದ ಬಲಿಗಾಗಿ ಆಡುಗಳಲ್ಲಿ ಒಂದು ಮರಿಯೂ ಸಮಾಧಾನದ ಅರ್ಪಣೆಯ ಬಲಿಗಾಗಿ ಎರಡು ಎತ್ತುಗಳೂ ಐದು ಟಗರುಗಳೂ ಐದು ಹೋತಗಳೂ ಮೊದಲನೇ ವರುಷದ ಐದು ಕುರಿಮರಿಗಳೂ. ಇದು ದೆಗೂವೇಲನ ಮಗನಾದ ಎಲ್ಯಾಸಾಫನ ಅರ್ಪಣೆಯು. ಏಳನೇ ದಿನದಲ್ಲಿ ಎಫ್ರಾಯಾಮ್ ಮಕ್ಕಳಿಗೆ ಪ್ರಧಾನನಾದ ಅವ್ಮೆಾಹೂದನ ಮಗನಾದ ಎಲೀಷಾಮನು ಅರ್ಪಿಸಿದನು. ಅವನ ಅರ್ಪಣೆ ಏನಂದರೆ--ನೂರ ಮೂವತ್ತು ಶೇಕೆಲಿನಷ್ಟು ತೂಕ ವಾದ ಬೆಳ್ಳಿಯ ತಟ್ಟೆ, ಪರಿಶುದ್ಧ ಸ್ಥಳದ ಶೇಕೆಲ್ ಪ್ರಕಾರ ಎಪ್ಪತ್ತು ಶೇಕೆಲಿನಷ್ಟು ಬೆಳ್ಳಿಯ ಒಂದು ಬಟ್ಟಲು, ಆಹಾರ ಸಮರ್ಪಣೆಗಾಗಿ ಈ ಎರಡು ಎಣ್ಣೇ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು. ಧೂಪದಿಂದ ತುಂಬಿದ್ದ ಹತ್ತು ಶೇಕೆಲಿನಷ್ಟು ತೂಕದ ಬಂಗಾರದ ಒಂದು ಚಮಚ. ದಹನ ಬಲಿಗಾಗಿ ಒಂದು ಎಳೇ ಹೋರಿ, ಒಂದು ಟಗರು, ಮೊದಲನೇ ವರುಷದ ಒಂದು ಕುರಿಮರಿ. ಪಾಪದ ಬಲಿಗಾಗಿ ಆಡುಗಳಲ್ಲಿ ಒಂದು ಮರಿಯೂ ಸಮಾಧಾನದ ಅರ್ಪಣೆಯ ಬಲಿಗಾಗಿ ಎರಡು ಎತ್ತುಗಳೂ ಐದು ಟಗರುಗಳೂ ಐದು ಹೋತಗಳೂ ಮೊದಲನೇ ವರುಷದ ಐದು ಕುರಿಮರಿಗಳೂ. ಇದು ಅವ್ಮೆಾಹೂದನ ಮಗನಾದ ಎಲೀಷಾಮನ ಅರ್ಪಣೆಯು. ಎಂಟನೇ ದಿನದಲ್ಲಿ ಮನಸ್ಸೆ ಮಕ್ಕಳಿಗೆ ಪ್ರಧಾನನಾದ ಪೆದಾಚೂರನ ಮಗನಾದ ಗವ್ಲೆಾ ಯೇಲ್ ಅರ್ಪಿಸಿದನು. ಅವನ ಅರ್ಪಣೆಯು ಏನಂದರೆ,--ನೂರ ಮೂವತ್ತು ಶೇಕೆಲಿನಷ್ಟು ತೂಕದ ಬೆಳ್ಳಿಯ ಒಂದು ತಟ್ಟೆ, ಪರಿಶುದ್ಧ ಸ್ಥಳದ ಶೇಕೆಲಿನ ಪ್ರಕಾರ ಎಪ್ಪತ್ತು ಶೇಕೆಲಿನಷ್ಟು ಬೆಳ್ಳಿಯ ಒಂದು ಬಟ್ಟಲು, ಆಹಾರ ಸಮರ್ಪಣೆಗಾಗಿ ಈ ಎರಡು ಎಣ್ಣೇ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು. ಧೂಪದಿಂದ ತುಂಬಿದ್ದ ಹತ್ತು ಶೇಕೆಲಿನಷ್ಟು ತೂಕದ ಬಂಗಾರದ ಒಂದು ಚಮಚ, ದಹನಬಲಿಗಾಗಿ ಒಂದು ಎಳೇ ಹೋರಿ, ಒಂದು ಟಗರು, ಮೊದಲನೇ ವರುಷದ ಒಂದು ಕುರಿಮರಿ. ಪಾಪದ ಬಲಿಗಾಗಿ ಆಡುಗಳಲ್ಲಿ ಒಂದು ಮರಿಯೂ ಸಮಾಧಾನದ ಅರ್ಪಣೆಯ ಬಲಿಗಾಗಿ ಎರಡು ಎತ್ತುಗಳೂ ಐದು ಟಗರುಗಳೂ ಐದು ಹೋತಗಳೂ ಮೊದಲನೇ ವರುಷದ ಐದು ಕುರಿಮರಿಗಳೂ. ಇದು ಪೆದಾಚೂರನ ಮಗನಾದ ಗವ್ಲೆಾಯೇಲನ ಅರ್ಪಣೆಯು. ಒಂಭತ್ತನೇ ದಿನದಲ್ಲಿ ಬೆನ್ಯಾವಿಾನನ ಮಕ್ಕಳಿಗೆ ಪ್ರಧಾನನಾದ ಗಿದ್ಯೋನಿಯ ಮಗನಾದ ಅಬೀದಾ ನನು ಅರ್ಪಿಸಿದನು. ಅವನ ಅರ್ಪಣೆಯು ಏನಂದರೆ--ನೂರ ಮೂವತ್ತು ಶೇಕೆಲಿನಷ್ಟು ತೂಕದ ಬೆಳ್ಳಿಯ ತಟ್ಟೆ, ಪರಿಶುದ್ಧ ಸ್ಥಳದ ಶೇಕೆಲಿನ ಪ್ರಕಾರ ಎಪ್ಪತ್ತು ಶೇಕೆಲಿನಷ್ಟು ಬೆಳ್ಳಿಯ ಒಂದು ಬಟ್ಟಲು, ಆಹಾರ ಸಮರ್ಪಣೆಗಾಗಿ ಈ ಎರಡು ಎಣ್ಣೇ ಬೆರೆಸಿದ ನಯ ವಾದ ಹಿಟ್ಟಿನಿಂದ ತುಂಬಿದ್ದವು. ಧೂಪದಿಂದ ತುಂಬಿದ್ದ ಹತ್ತು ಶೇಕೆಲಿನಷ್ಟು ತೂಕದ ಬಂಗಾರದ ಒಂದು ಚಮಚ, ದಹನಬಲಿಗಾಗಿ ಒಂದು ಎಳೇ ಹೋರಿ, ಒಂದು ಟಗರು, ಮೊದಲನೇ ವರುಷದ ಒಂದು ಕುರಿಮರಿ. ಪಾಪದ ಬಲಿಗಾಗಿ ಆಡುಗಳಲ್ಲಿ ಒಂದು ಮರಿಯೂ ಸಮಾಧಾನದ ಅರ್ಪಣೆಯ ಬಲಿಗಾಗಿ ಎರಡು ಎತ್ತುಗಳೂ ಐದು ಟಗರುಗಳೂ ಐದು ಹೋತಗಳೂ ಮೊದಲನೇ ವರುಷದ ಐದು ಕುರಿಮರಿಗಳೂ. ಇದು ಗಿದ್ಯೋನಿಯ ಮಗನಾದ ಅಬೀದಾನನ ಅರ್ಪಣೆಯು. ಹತ್ತನೆಯ ದಿನದಲ್ಲಿ ದಾನನ ಮಕ್ಕಳಿಗೆ ಪ್ರಧಾನ ನಾದ ಅವ್ಮೆಾಷದ್ದೈಯನ ಮಗನಾದ ಅಹೀಗೆಜೆರನು ಅರ್ಪಿಸಿದನು. ಅವನ ಅರ್ಪಣೆಯು ಏನಂದರೆನೂರ ಮೂವತ್ತು ಶೇಕೆಲಿನಷ್ಟು ತೂಕದ ಬೆಳ್ಳಿಯ ತಟ್ಟೆ, ಪರಿಶುದ್ಧ ಸ್ಥಳದ ಶೇಕೆಲಿನ ಪ್ರಕಾರ ಎಪ್ಪತ್ತು ಶೇಕೆಲಿನಷ್ಟು ಬೆಳ್ಳಿಯ ಒಂದು ಬಟ್ಟಲು, ಆಹಾರ ಸಮರ್ಪಣೆಗಾಗಿ ಈ ಎರಡು ಎಣ್ಣೇ ಬೆರೆಸಿದ ನಯ ವಾದ ಹಿಟ್ಟಿನಿಂದ ತುಂಬಿದ್ದವು. ಧೂಪದಿಂದ ತುಂಬಿದ್ದ ಹತ್ತು ಶೇಕೆಲಿನಷ್ಟು ತೂಕದ ಬಂಗಾರದ ಒಂದು ಚಮಚ, ದಹನಬಲಿಗಾಗಿ ಒಂದು ಎಳೇ ಹೋರಿ, ಒಂದು ಟಗರು, ಮೊದಲನೇ ವರುಷದ ಒಂದು ಕುರಿಮರಿ. ಪಾಪದ ಬಲಿಗಾಗಿ ಆಡುಗಳಲ್ಲಿ ಒಂದು ಮರಿಯೂ ಸಮಾಧಾನದ ಅರ್ಪಣೆಯ ಬಲಿಗಾಗಿ ಎರಡು ಎತ್ತುಗಳೂ ಐದು ಟಗರುಗಳೂ ಐದು ಹೋತಗಳೂ ಮೊದಲನೇ ವರುಷದ ಐದು ಕುರಿಮರಿಗಳೂ. ಇದು ಅವ್ಮೆಾಷದ್ದೈಯನ ಮಗನಾದ ಅಹೀಗೆಜೆರನ ಅರ್ಪಣೆಯು. ಹನ್ನೊಂದನೆಯ ದಿನದಲ್ಲಿ ಆಶೇರನ ಮಕ್ಕಳಿಗೆ ಪ್ರಧಾನನಾದ ಒಕ್ರಾನನ ಮಗನಾದ ಪಗೀಯೇಲನು ಅರ್ಪಿಸಿದನು. ಅವನ ಆರ್ಪಣೆಯು ಏನಂದರೆನೂರ ಮೂವತ್ತು ಶೇಕೆಲಿನಷ್ಟು ತೂಕವಾದ ಬೆಳ್ಳಿಯ ತಟ್ಟೆ, ಪರಿಶುದ್ಧ ಸ್ಥಳದ ಶೇಕೆಲಿನ ಪ್ರಕಾರ ಎಪ್ಪತ್ತು ಶೇಕೆಲಿನಷ್ಟು ಬೆಳ್ಳಿಯ ಒಂದು ಬಟ್ಟಲು, ಆಹಾರ ಸಮರ್ಪಣೆಗಾಗಿ ಈ ಎರಡು ಎಣ್ಣೇ ಬೆರೆಸಿದ ನಯ ವಾದ ಹಿಟ್ಟಿನಿಂದ ತುಂಬಿದ್ದವು. ಧೂಪದಿಂದ ತುಂಬಿದ್ದ ಹತ್ತು ಶೇಕೆಲಿನಷ್ಟು ತೂಕದ ಬಂಗಾರದ ಒಂದು ಚಮಚ, ದಹನಬಲಿಗಾಗಿ ಒಂದು ಎಳೇ ಹೋರಿ, ಒಂದು ಟಗರು, ಮೊದಲನೇ ವರುಷದ ಒಂದು ಕುರಿಮರಿ. ಪಾಪದ ಬಲಿಗಾಗಿ ಆಡುಗಳಲ್ಲಿ ಒಂದು ಮರಿಯೂ ಸಮಾಧಾನದ ಅರ್ಪಣೆಯ ಬಲಿಗಾಗಿ ಎರಡು ಎತ್ತುಗಳೂ ಐದು ಟಗರುಗಳೂ ಐದು ಹೋತಗಳೂ ಮೊದಲನೇ ವರುಷದ ಐದು ಕುರಿಮರಿಗಳೂ ಇದು ಒಕ್ರಾನನ ಮಗನಾದ ಪಗೀ ಯೇಲನ ಅರ್ಪಣೆಯು. ಹನ್ನೆರಡನೆ ದಿನದಲ್ಲಿ ನಫ್ತಾಲಿ ಮಕ್ಕಳಿಗೆ ಪ್ರಧಾನ ನಾದ ಏನಾನನ ಮಗನಾದ ಅಹೀರನು ಅರ್ಪಿಸಿದನು. ಅವನ ಅರ್ಪಣೆಯು ಏನಂದರೆ--ನೂರ ಮೂವತ್ತು ಶೇಕೆಲಿನಷ್ಟು ತೂಕವಾದ ಬೆಳ್ಳಿಯ ತಟ್ಟೆ, ಪರಿಶುದ್ಧ ಸ್ಥಳದ ಶೇಕೆಲಿನ ಪ್ರಕಾರ ಎಪ್ಪತ್ತು ಶೇಕೆಲಿನಷ್ಟು ಬೆಳ್ಳಿಯ ಒಂದು ಬಟ್ಟಲು, ಆಹಾರ ಸಮರ್ಪಣೆಗಾಗಿ ಈ ಎರಡು ಎಣ್ಣೇ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು. ಧೂಪದಿಂದ ತುಂಬಿದ್ದ ಹತ್ತು ಶೇಕೆಲಿನಷ್ಟು ತೂಕದ ಬಂಗಾರದ ಒಂದು ಚಮಚ, ದಹನಬಲಿಗಾಗಿ ಒಂದು ಎಳೇ ಹೋರಿ, ಒಂದು ಟಗರು, ಮೊದಲನೇ ವರುಷದ ಒಂದು ಕುರಿಮರಿ. ಪಾಪದ ಬಲಿಗಾಗಿ ಆಡುಗಳಲ್ಲಿ ಒಂದು ಮರಿಯೂ ಸಮಾಧಾನದ ಅರ್ಪಣೆಯ ಬಲಿಗಾಗಿ ಎರಡು ಎತ್ತುಗಳೂ ಐದು ಟಗರುಗಳೂ ಐದು ಹೋತಗಳೂ ಮೊದಲನೇ ವರುಷದ ಐದು ಕುರಿಮರಿಗಳೂ. ಇದು ಏನಾನನ ಮಗನಾದ ಅಹೀರನ ಅರ್ಪಣೆಯು. ಇದು ಬಲಿಪೀಠದ ಪ್ರತಿಷ್ಠೆಯು: ಅದನ್ನು ಅಭಿಷೇಕ ಮಾಡಿದ ದಿನದಲ್ಲಿ ಇಸ್ರಾಯೇಲಿನ ಪ್ರಧಾನರು ಅರ್ಪಿಸಿದ್ದು ಬೆಳ್ಳಿಯ ಹನ್ನೆರಡು ತಟ್ಟೆಗಳೂ ಬೆಳ್ಳಿಯ ಹನ್ನೆರಡು ಬಟ್ಟಲುಗಳೂ ಬಂಗಾರದ ಹನ್ನೆರಡು ಚಮಚಗಳೂ. ಬೆಳ್ಳಿಯ ಒಂದೊಂದು ತಟ್ಟೆಗಳ ತೂಕವು ನೂರ ಮೂವತ್ತು ಶೇಕೆಲು. ಒಂದೊಂದು ಬಟ್ಟಲಿಗೆ ಎಪ್ಪತ್ತು, ಬೆಳ್ಳಿಯ ಎಲ್ಲಾ ವಸ್ತುಗಳಿಗೆ ಪರಿಶುದ್ಧ ಸ್ಥಳದ ಶೇಕೆಲಿನ ಪ್ರಕಾರ ಎರಡು ಸಾವಿರದ ನಾಲ್ಕು ನೂರು. ಧೂಪ ತುಂಬಿದ್ದ ಹನ್ನೆರಡು ಬಂಗಾರದ ಚಮಚಗಳು, ಪರಿಶುದ್ಧ ಸ್ಥಳದ ಶೇಕೆಲಿನ ಪ್ರಕಾರ ಒಂದೊಂದಕ್ಕೆ ಹತ್ತು, ಮತ್ತು ಚಮಚಗಳ ಬಂಗಾರವೆಲ್ಲಾ ನೂರ ಇಪ್ಪತ್ತು ಶೇಕೆಲ್; ದಹನ ಬಲಿಗಾಗಿ ಇರುವ ಹೋರಿಗಳು ಹನ್ನೆರಡು, ಟಗರು ಗಳು ಹನ್ನೆರಡು, ಮೊದಲನೇ ವರುಷದ ಕುರಿಮರಿಗಳು ಹನ್ನೆರಡು, ಅವುಗಳೊಂದಿಗೆ ಆಹಾರ ಸಮರ್ಪಣೆ; ಮತ್ತು ಪಾಪದ ಬಲಿಗಾಗಿ ಆಡುಮರಿಗಳು ಹನ್ನೆ ರಡು, ಸಮಾಧಾನದ ಅರ್ಪಣೆಯ ಬಲಿಗಾಗಿರುವ ಎತ್ತುಗಳೆಲ್ಲಾ ಇಪ್ಪತ್ತನಾಲ್ಕು, ಟಗರುಗಳು ಅರವತ್ತು, ಹೋತಗಳು ಅರವತ್ತು, ಮೊದಲನೇ ವರುಷದ ಕುರಿಮರಿಗಳು ಅರವತ್ತು. ಅದನ್ನು ಅಭಿಷೇಕಿಸಿದ ತರು ವಾಯ ಬಲಿಪೀಠಕ್ಕೆ ಮಾಡಿದ ಪ್ರತಿಷ್ಠೆಯು ಇದಾಗಿತ್ತು ಎಂಬದೇ.ಇದಲ್ಲದೆ ಮೋಶೆಯು ದೇವರ ಸಂಗಡ ಮಾತನಾಡುವದಕ್ಕೆ ಸಭೆಯ ಗುಡಾರದೊಳಗೆ ಪ್ರವೇಶಿ ಸಿದಾಗ ಅವನು ಸಾಕ್ಷಿಯ ಮಂಜೂಷದ ಮೇಲೆ ಇರುವ ಕೃಪಾಸನದ ಮೇಲಿನಿಂದ ಎರಡು ಕೆರೂಬಿಗಳ ಮಧ್ಯದಿಂದ ತನ್ನ ಸಂಗಡ ಮಾತನಾಡುವವನ ಧ್ವನಿ ಯನ್ನು ಕೇಳಿದನು. ಹೀಗೆ ಆತನು ಅವನ ಸಂಗಡ ಮಾತನಾಡಿದನು. ಇದಲ್ಲದೆ ಮೋಶೆಯು ದೇವರ ಸಂಗಡ ಮಾತನಾಡುವದಕ್ಕೆ ಸಭೆಯ ಗುಡಾರದೊಳಗೆ ಪ್ರವೇಶಿ ಸಿದಾಗ ಅವನು ಸಾಕ್ಷಿಯ ಮಂಜೂಷದ ಮೇಲೆ ಇರುವ ಕೃಪಾಸನದ ಮೇಲಿನಿಂದ ಎರಡು ಕೆರೂಬಿಗಳ ಮಧ್ಯದಿಂದ ತನ್ನ ಸಂಗಡ ಮಾತನಾಡುವವನ ಧ್ವನಿ ಯನ್ನು ಕೇಳಿದನು. ಹೀಗೆ ಆತನು ಅವನ ಸಂಗಡ ಮಾತನಾಡಿದನು.
- Leviticus 4:3 ಯಾಜಕಕಾಂಡ 4:3ಜನರು ಪಾಪಮಾಡುವ ಹಾಗೆ ಅಭಿಷಿಕ್ತನಾದ ಯಾಜಕನು ಪಾಪಮಾಡಿದರೆ ಅವನು ತನ್ನ ಪಾಪಕ್ಕಾಗಿ ದೋಷವಿಲ್ಲದ ಒಂದು ಎಳೇ ಹೋರಿಯನ್ನು ಪಾಪದ ಬಲಿಗಾಗಿ ಕರ್ತನಿಗೆ ತರಬೇಕು.
- 1 Kings 8:63–64 1 ಅರಸುಗಳು 8:63–64ಸೊಲೊಮೋನನು ಕರ್ತನಿಗೆ ಅರ್ಪಿಸಿದ ಸಮಾ ಧಾನದ ಬಲಿಗಳಿಗೋಸ್ಕರ ಇಪ್ಪತ್ತೆರಡು ಸಾವಿರ ಎತ್ತು ಗಳನ್ನೂ ಲಕ್ಷದ ಇಪ್ಪತ್ತು ಸಾವಿರ ಕುರಿಗಳನ್ನೂ ಅರ್ಪಿಸಿದನು. ಹೀಗೆಯೇ ಅರಸನೂ ಇಸ್ರಾಯೇಲಿನ ಸಮಸ್ತ ಮಕ್ಕಳೂ ಕರ್ತನ ಮಂದಿರವನ್ನು ಪ್ರತಿಷ್ಠೆ ಮಾಡಿದರು. ಅದೇ ದಿನದಲ್ಲಿ ಅರಸನು ಕರ್ತನ ಮನೆಯ ಮಧ್ಯ ಅಂಗಳವನ್ನು ಪರಿಶುದ್ಧ ಮಾಡಿದನು. ಕರ್ತನ ಮುಂದಿರುವ ತಾಮ್ರದ ಬಲಿ ಪೀಠದ ಮೇಲೆ ದಹನ ಬಲಿಗಳನ್ನೂ ಕಾಣಿಕೆಗಳನ್ನೂ ಸಮಾಧಾನದ ಬಲಿಗಳ ಕೊಬ್ಬನ್ನೂ ಇಡುವದಕ್ಕೆ ಸ್ಥಳ ಸಾಲದೆ ಇದ್ದದರಿಂದ ಅಲ್ಲಿ ದಹನಬಲಿಗಳನ್ನೂ ಕಾಣಿಕೆಗಳನ್ನೂ ಸಮಾಧಾನದ ಬಲಿಗಳ ಕೊಬ್ಬನ್ನೂ ಅರ್ಪಿಸಿದನು.
- 1 Kings 18:31 1 ಅರಸುಗಳು 18:31ನಿನಗೆ ಇಸ್ರಾಯೇಲನೆಂಬ ಹೆಸರುಂಟಾಗಿರುವದೆಂದು ಕರ್ತನ ವಾಕ್ಯವು ಬಂದ ಯಾಕೋಬನ ಮಕ್ಕಳ ಗೋತ್ರಗಳ ಲೆಕ್ಕದ ಪ್ರಕಾರ
- Leviticus 4:28 ಯಾಜಕಕಾಂಡ 4:28ಇಲ್ಲವೆ ಅವನು ಮಾಡಿದ ಪಾಪವು ಅವನಿಗೆ ತಿಳಿದುಬಂದರೆ ಅವನು ಬಲಿಗಾಗಿ ಮೇಕೆಗಳಲ್ಲಿ ದೋಷವಿಲ್ಲದ ಒಂದು ಹೆಣ್ಣು ಮರಿಯನ್ನು ತಾನು ಮಾಡಿದ ಪಾಪಕ್ಕಾಗಿ ತರಬೇಕು.
Original words (Hebrew)
- offered · H7127קְרֵב qᵉrêb
- dedication · H2597חֲנֻכָּא chănukkâʼ
- this · H1836דֵּן dên
- house · H1005בַּיִת bayith
- God · H426אֱלָהּ ʼĕlâhh
- hundred · H3969מְאָה mᵉʼâh
- bullocks · H8450תּוֹר tôwr
- hundred · H3969מְאָה mᵉʼâh
- rams · H1798דְּכַר dᵉkar
- four · H703אַרְבַּע ʼarbaʻ
- hundred · H3969מְאָה mᵉʼâh
- lambs · H563אִמַּר ʼimmar
- offering · H2402חַטָּאָה chaṭṭâʼâh
- for · H5922עַל ʻal
- all · H3606כֹּל kôl
- Israel · H3479יִשְׂרָאֵל Yisrâʼêl
- twelve · H8648תְּרֵין tᵉrêyn
- he · H6841צְפִיר tsᵉphîyr
- goats · H5796עֵז ʻêz
- number · H4510מִנְיָן minyân
- tribes · H7625שְׁבַט shᵉbaṭ
- Israel · H3479יִשְׂרָאֵל Yisrâʼêl