Galatians · chapter 4 · verse 11
Galatians 4:11 in Kannada
ನಾವು ನಿಮಗೋಸ್ಕರ ಪ್ರಯಾಸ ಪಟ್ಟದ್ದು ನಿಷ್ಪಲವಾಯಿತೋ ಏನೋ ಎಂದು ನಿಮ್ಮ ವಿಷಯದಲ್ಲಿ ನಾನು ಭಯಪಡುತ್ತೇನೆ.
Naavu nimagoskara prayaasa pattaddu nishpalavaayito eno endu nimma vishayadalli naanu bhayapaduttene.
Galatians 4:11 in English
- King James Version (KJV)
- I am afraid of you, lest I have bestowed upon you labour in vain.
- World English Bible (WEB)
- I am afraid for you, that I might have wasted my labor for you.
- American Standard Version (ASV)
- I am afraid of you, lest by any means I have bestowed labor upon you in vain.
- Bible in Basic English (BBE)
- I am in fear of you, that I may have been working for you to no purpose.
- Darby Translation (DBY)
- I am afraid of you, lest indeed I have laboured in vain as to you.
- Webster's Bible (WBS)
- I am afraid of you, lest I have bestowed upon you labor in vain.
- Young's Literal Translation (YLT)
- I am afraid of you, lest in vain I did labour toward you.
Read in context
- 9ಈಗಲಾದರೋ ನೀವು ದೇವರನ್ನು ತಿಳುಕೊಂಡಿ ದ್ದೀರಿ; ಸರಿಯಾಗಿ ಹೇಳಬೇಕಾದರೆ ದೇವರು ನಿಮ್ಮನ್ನು ತಿಳುಕೊಂಡಿದ್ದಾನೆ; ಹೀಗಿರಲಾಗಿ ನೀವು ಬಲಹೀನವಾದ ದರಿದ್ರ ಮೂಲ ಪಾಠಗಳಿಗೆ ಮತ್ತೂ ಅಧೀನರಾಗ ಬೇಕೆಂದು ಅಪೇಕ್ಷಿಸಿ ಪುನಃ ಅವುಗಳಿಗೆ ನೀವು ತಿರುಗಿಕೊಳ್ಳುವದು ಹೇಗೆ?
- 10ನೀವು ಆಯಾ ದಿನ ಗಳನ್ನೂ ಮಾಸಗಳನ್ನೂ ಕಾಲಗಳನ್ನೂ ಸಂವತ್ಸರಗಳನ್ನೂ ಆಚರಿಸುತ್ತೀರಿ.
- 11ನಾವು ನಿಮಗೋಸ್ಕರ ಪ್ರಯಾಸ ಪಟ್ಟದ್ದು ನಿಷ್ಪಲವಾಯಿತೋ ಏನೋ ಎಂದು ನಿಮ್ಮ ವಿಷಯದಲ್ಲಿ ನಾನು ಭಯಪಡುತ್ತೇನೆ.
- 12ಸಹೋದರರೇ, ನಾನು ನಿಮ್ಮ ಹಾಗೆ ಆದದ್ದ ರಿಂದ ನೀವೂ ನನ್ನ ಹಾಗೆ ಆಗಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ನೀವು ನನಗೇನೂ ಕೇಡು ಮಾಡ ಲಿಲ್ಲ.
- 13ನನ್ನ ಶರೀರಕ್ಕೆ ಅಸೌಖ್ಯವಿದ್ದದರಿಂದ ನಾನು ನಿಮ್ಮಲ್ಲಿದ್ದು ಮೊದಲನೆಯ ನಿಮಗೆ ಸುವಾರ್ತೆ ಸಾರಿದ್ದನ್ನು ನೀವು ಬಲ್ಲಿರಿ.
Cross references
- 1 Thessalonians 3:5 1 ಥೆಸಲೊನೀಕದವರಿಗೆ 3:5ಈ ಕಾರಣದಿಂದ ನಮ್ಮ ಪ್ರಯಾಸವು ವ್ಯರ್ಥವಾಗುವಂತೆ ಶೋಧಕನು ನಿಮ್ಮನ್ನು ಯಾವದಾದರೂ ಒಂದು ರೀತಿಯಲ್ಲಿ ಶೋಧಿ ಸುವನೋ ಎಂದು ನಾನು ತಡೆಯಲಾರದೆ ನಿಮ್ಮ ನಂಬಿಕೆಯ ವಿಷಯದಲ್ಲಿ ತಿಳುಕೊಳ್ಳುವದಕ್ಕೆ ಕಳುಹಿಸಿ ದೆನು.
- Philippians 2:16 ಫಿಲಿಪ್ಪಿಯವರಿಗೆ 2:16ಹೀಗೆ ನಾನು ಕೆಲಸ ಸಾಧಿಸಿದ್ದೂ ಪ್ರಯಾಸಪಟ್ಟದ್ದೂ ವ್ಯರ್ಥವಾಗಲಿಲ್ಲ ವೆಂದು ತಿಳಿದು ಕ್ರಿಸ್ತನ ದಿನದಲ್ಲಿ ಸಂತೋಷಪಡುವೆನು.
- 2 John 1:8 2 ಯೋಹಾನನು 1:8ನಾವು ಪ್ರಯಾಸಪಟ್ಟು ಮಾಡಿದವು ಗಳನ್ನು ಕಳಕೊಳ್ಳದೆ ಪ್ರತಿಫಲವನ್ನು ಹೊಂದುವಂತೆ ನಿಮ್ಮನ್ನು ನೀವೇ ನೋಡಿಕೊಳ್ಳಿರಿ.
- Galatians 2:2 ಗಲಾತ್ಯದವರಿಗೆ 2:2ಪ್ರಕಟನೆಗನುಸಾರವಾಗಿ ಅಲ್ಲಿಗೆ ಹೋಗಿ ಅನ್ಯಜನ ರಲ್ಲಿ ನಾನು ಸಾರುವ ಸುವಾರ್ತೆಯನ್ನು ಅಲ್ಲಿದ್ದವರಿಗೆ ತಿಳಿಸಿದೆನು; ಆದರೆ ನಾನು ಪಡುತ್ತಿರುವ ಪ್ರಯಾಸ ವಾಗಲಿ ಪಟ್ಟ ಪ್ರಯಾಸವಾಗಲಿ ನಿಷ್ಫಲವಾಗಬಾರ ದೆಂದು ಮಾನಿಷ್ಠರಿಗೆ ಏಕಾಂತದಲ್ಲಿ ತಿಳಿಸಿದೆನು.
- Acts 16:6 ಅಪೊಸ್ತಲರ ಕೃತ್ಯಗಳು 16:6ಅವರು ಫ್ರುಗ್ಯ ಗಲಾತ್ಯ ಪ್ರಾಂತ್ಯದ ಕಡೆಗೆಲ್ಲಾ ಹಾದು ಹೋಗುತ್ತಿರುವಾಗ ಆಸ್ಯದಲ್ಲಿ ವಾಕ್ಯವನ್ನು ಸಾರಬಾರದೆಂದು ಪವಿತ್ರಾತ್ಮನು ತಡೆದದ್ದರಿಂದ
- 2 Corinthians 11:2–3 2 ಕೊರಿಂಥದವರಿಗೆ 11:2–3ದೈವಾಸಕ್ತಿಯಿಂದಲೇ ನಾನು ನಿಮ್ಮ ವಿಷಯದಲ್ಲಿ ಆಸಕ್ತನಾಗಿದ್ದೇನೆ; ನಿಮ್ಮನ್ನು ಕ್ರಿಸ್ತನೆಂಬ ಒಬ್ಬನೇ ಪುರುಷನಿಗೆ ಶುದ್ದ ಕನ್ಯೆಯಾಗಿ ಒಪ್ಪಿಸಬೇಕೆಂದು ನಿಮ್ಮನ್ನು ಆತನಿಗೆ ನಿಶ್ಚಯ ಮಾಡಿದೆನಲ್ಲಾ. ಆದರೆ ಹವ್ವಳು ಸರ್ಪದ ಕುಯುಕ್ತಿಗೆ ಒಳಬಿದ್ದು ಹೇಗೆ ಮೋಸ ಹೋದಳೋ ಹಾಗೆಯೇ ನಿಮ್ಮ ಮನಸ್ಸುಗಳು ಕ್ರಿಸ್ತನ ವಿಷಯದಲ್ಲಿರಬೇಕಾದ ಸರಳತೆಯನ್ನು ಬಿಟ್ಟು ಕೆಟ್ಟು ಹೋದೀತೆಂದು ನನಗೆ ಭಯವುಂಟು.
- Galatians 5:2–4 ಗಲಾತ್ಯದವರಿಗೆ 5:2–4ಇಗೋ, ಪೌಲನೆಂಬ ನಾನು ನಿಮಗೆ ಹೇಳುವದೇನಂದರೆ, ನೀವು ಸುನ್ನತಿ ಮಾಡಿಸಿಕೊಂಡರೆ ಕ್ರಿಸ್ತನಿಂದ ನಿಮಗೆ ಏನು ಪ್ರಯೋಜನವಿಲ್ಲ. ಯಾಕಂದರೆ ಸುನ್ನತಿ ಮಾಡಿಸಿಕೊಳ್ಳುವ ಪ್ರತಿ ಯೊಬ್ಬನು ನ್ಯಾಯಪ್ರಮಾಣವನ್ನೆಲ್ಲಾ ಕೈಕೊಳ್ಳುವ ಹಂಗಿನಲ್ಲಿದ್ದಾನೆ ಎಂದು ತಿರಿಗಿ ಪ್ರಮಾಣವಾಗಿ ಹೇಳುತ್ತೇನೆ. ನಿಮ್ಮಲ್ಲಿ ಯಾರಾದರೂ ನ್ಯಾಯ ಪ್ರಮಾಣದ ಮೂಲಕ ನೀತಿವಂತರಾಗಬೇಕೆಂದಿದ್ದರೆ ಅವರಿಗೆ ಕ್ರಿಸ್ತನಿಂದ ಯಾವ ಪ್ರಯೋಜನವೂ ಆಗುವದಿಲ್ಲ; ನೀವು ಕೃಪೆಯಿಂದ ಬಿದ್ದವರಾಗಿದ್ದೀರಿ.
- 1 Corinthians 15:58 1 ಕೊರಿಂಥದವರಿಗೆ 15:58ಆದದರಿಂದ ನನ್ನ ಪ್ರಿಯ ಸಹೋದರರೇ, ಸ್ಥಿರಚಿತ್ತರಾಗಿಯೂ ನಿಶ್ಚಲರಾಗಿಯೂ ಇರ್ರಿ. ನೀವು ಕರ್ತನಲ್ಲಿ ಪಡುವ ಪ್ರಯಾಸವು ನಿಷ್ಪಲವಾಗುವದಿ ಲ್ಲವೆಂದು ತಿಳಿದು ಕರ್ತನ ಕೆಲಸವನ್ನು ಯಾವಾಗಲೂ ಅತ್ಯಾಸಕ್ತಿಯಿಂದ ಮಾಡುವವರಾಗಿರ್ರಿ.
- 2 Corinthians 12:20–21 2 ಕೊರಿಂಥದವರಿಗೆ 12:20–21ನಾನು ಬಂದಾಗ ಒಂದು ವೇಳೆ ನೀವು ನನ್ನ ಇಷ್ಟದ ಪ್ರಕಾರ ಇರುವದಿಲ್ಲವೇನೋ, ನಾನು ನಿಮ್ಮ ಇಷ್ಟದ ಪ್ರಕಾರ ತೋರುವದಿಲ್ಲವೇನೋ, ಒಂದು ವೇಳೆ ನಿಮ್ಮಲ್ಲಿ ವಾಗ್ವಾದಗಳು ಹೊಟ್ಟೆಕಿಚ್ಚು ಕೋಪ ಜಗಳ ಚಾಡಿ ಹೇಳುವದು ಕಿವಿಯೂದುವದು ಉಬ್ಬಿಕೊಳ್ಳುವದು ಕಲಹ ಎಬ್ಬಿಸುವದು ಇವುಗಳು ಕಾಣಬಇದಲ್ಲದೆ ನಾನು ತಿರಿಗಿ ಬಂದಾಗ ನಿಮ್ಮ ಮಧ್ಯದಲ್ಲಿ ನಾನು ಕುಂದಿಹೋಗು ವಂತೆ ನನ್ನ ದೇವರು ಮಾಡಾನೆಂತಲೂ ಅಶುದ್ಧತೆ ಹಾದರತನ ಬಂಡುತನಗಳನ್ನು ನಡಿಸಿ ಪಶ್ಚಾತ್ತಾಪ ಪಡದೆ ಆಗಲೇ ಪಾಪ ಮಾಡಿದ ಅನೇಕರ ವಿಷಯವಾಗಿ ನಾನು ವ್ಯಥೆಪಡಬೇಕಾದೀತೆಂತಲೂ ನನಗೆ ಭಯವುಂಟು. ಇದಲ್ಲದೆ ನಾನು ತಿರಿಗಿ ಬಂದಾಗ ನಿಮ್ಮ ಮಧ್ಯದಲ್ಲಿ ನಾನು ಕುಂದಿಹೋಗು ವಂತೆ ನನ್ನ ದೇವರು ಮಾಡಾನೆಂತಲೂ ಅಶುದ್ಧತೆ ಹಾದರತನ ಬಂಡುತನಗಳನ್ನು ನಡಿಸಿ ಪಶ್ಚಾತ್ತಾಪ ಪಡದೆ ಆಗಲೇ ಪಾಪ ಮಾಡಿದ ಅನೇಕರ ವಿಷಯವಾಗಿ ನಾನು ವ್ಯಥೆಪಡಬೇಕಾದೀತೆಂತಲೂ ನನಗೆ ಭಯವುಂಟು.
- Galatians 4:20 ಗಲಾತ್ಯದವರಿಗೆ 4:20ನಾನು ನಿಮ್ಮ ವಿಷಯದಲಿ ಸಂಶಯಪಡುವವನಾದದರಿಂದ ಈಗ ನಿಮ್ಮ ಜೊತೆ ಯಲ್ಲಿದ್ದು ನನ್ನ ಸ್ವರವನ್ನು ಬದಲಾಯಿಸಬೇಕೆಂದು ಅಪೇಕ್ಷಿಸುತ್ತೇನೆ.
- Isaiah 49:4 ಯೆಶಾಯ 49:4ಅದಕ್ಕೆ ನಾನು--ನಾನು ಪಡುವ ಪ್ರಯಾಸವು ವ್ಯರ್ಥ, ನನ್ನ ಶಕ್ತಿಯನ್ನೆಲ್ಲಾ ನಿಷ್ಪ್ರಯೋಜನವಾಗಿಯೂ ವ್ಯರ್ಥವಾ ಗಿಯೂ ಕಳಕೊಂಡೆನೆಂದು ಹೇಳಿದೆನು. ಆದರೂ ನಿಶ್ಚಯವಾಗಿ ನನ್ನ ನ್ಯಾಯವು ಕರ್ತನ ಬಳಿಯಲ್ಲಿಯೂ ನನ್ನ ಪ್ರತಿಫಲವು ನನ್ನ ದೇವರಲ್ಲಿಯೂ ಉಂಟು.