Philippians · chapter 2 · verse 16
Philippians 2:16 in Kannada
ಹೀಗೆ ನಾನು ಕೆಲಸ ಸಾಧಿಸಿದ್ದೂ ಪ್ರಯಾಸಪಟ್ಟದ್ದೂ ವ್ಯರ್ಥವಾಗಲಿಲ್ಲ ವೆಂದು ತಿಳಿದು ಕ್ರಿಸ್ತನ ದಿನದಲ್ಲಿ ಸಂತೋಷಪಡುವೆನು.
Heege naanu kelasa saadhisiddoo prayaasapattaddoo vyarthavaagalilla vendu tilidu kristana dinadalli santoshapaduvenu.
Philippians 2:16 in English
- King James Version (KJV)
- Holding forth the word of life; that I may rejoice in the day of Christ, that I have not run in vain, neither laboured in vain.
- World English Bible (WEB)
- holding up the word of life, that I may have something to boast in the day of Christ that I didn’t run in vain nor labor in vain.
- American Standard Version (ASV)
- holding forth the word of life; that I may have whereof to glory in the day of Christ, that I did not run in vain neither labor in vain.
- Bible in Basic English (BBE)
- Offering the word of life; so that I may have glory in you in the day of Christ, because my running was not for nothing and my work was not without effect.
- Darby Translation (DBY)
- holding forth [the] word of life, so as to be a boast for me in Christ's day, that I have not run in vain nor laboured in vain.
- Webster's Bible (WBS)
- Holding forth the word of life; that I may rejoice in the day of Christ, that I have not run in vain, neither labored in vain.
- Young's Literal Translation (YLT)
- the word of life holding forth, for rejoicing to me in regard to a day of Christ, that not in vain did I run, nor in vain did I labour;
Read in context
- 14ಗುಣಗುಟ್ಟದೆ ಯೂ ವಿವಾದವಿಲ್ಲದೆಯೂ ಎಲ್ಲವನ್ನು ಮಾಡಿರಿ.
- 15ಹೀಗೆ ನೀವು ದೋಷವಿಲ್ಲದವರೂ ಕೇಡುಮಾಡ ದವರೂ ನಿಂದಾರಹಿತರೂ ಆದ ದೇವಪುತ್ರರಾಗಿ ವಕ್ರವುಳ್ಳ ದುಷ್ಟಜನಾಂಗದ ಮಧ್ಯದಲ್ಲಿ ಜೀವದಾಯಕ ವಾಕ್ಯವನ್ನು ಹಿಡುಕೊಂಡು ಲೋಕದಲ್ಲಿ ಬೆಳಕುಗಳಂತೆ ಹೊಳೆಯುವವರಾಗಿದ್ದೀರಿ.
- 16ಹೀಗೆ ನಾನು ಕೆಲಸ ಸಾಧಿಸಿದ್ದೂ ಪ್ರಯಾಸಪಟ್ಟದ್ದೂ ವ್ಯರ್ಥವಾಗಲಿಲ್ಲ ವೆಂದು ತಿಳಿದು ಕ್ರಿಸ್ತನ ದಿನದಲ್ಲಿ ಸಂತೋಷಪಡುವೆನು.
- 17ಹೌದು, ನಿಮ್ಮ ನಂಬಿಕೆಯೆಂಬ ಯಜ್ಞವನ್ನು ಅರ್ಪಿಸುವ ಸೇವೆಯಲ್ಲಿ ನಾನೇ ಅರ್ಪಿತವಾಗ ಬೇಕಾದರೂ ನಾನು ಹರ್ಷಗೊಂಡು ನಿಮ್ಮೆಲ್ಲರ ಕೂಡ ಸಂತೋಷಿಸುವೆನು.
- 18ಈ ಕಾರಣಕ್ಕಾಗಿಯೇ ನೀವು ಆನಂದಿಸಿರಿ, ನನ್ನೊಂದಿಗೆ ಸಂತೊಷಪಡಿರಿ.
Cross references
- 1 Corinthians 9:26 1 ಕೊರಿಂಥದವರಿಗೆ 9:26ಹೀಗಿರಲಾಗಿ ನಾನು ಸಹ ಗುರಿಗೊತ್ತಿಲ್ಲದವನಾಗಿ ಓಡದೆ ಗೆಲ್ಲಬೇಕೆಂದು ಅವರಂತೆಯೇ ಓಡುತ್ತೇನೆ; ನಾನು ಗಾಳಿಯನ್ನು ಗುದ್ದುವವನಾಗಿರದೆ ಗೆಲ್ಲಬೇಕೆಂದು ಹೋರಾಡುತ್ತೇನೆ.ಆದರೆ ನಾನು ಬೇರೆಯವರಿಗೆ ಸಾರಿದ ಮೇಲೆ ಯಾವ ವಿಧದಲ್ಲಿಯೂ ನಾನು ಭ್ರಷ್ಠನಾಗದಂತೆ ನನ್ನ ದೇಹವನ್ನು ಅಧೀನತೆಯಲ್ಲಿಟ್ಟು ಅದನ್ನು ಸ್ವಾಧೀನಪಡಿಸಿಕೊಳ್ಳುತ್ತೇನೆ.
- Galatians 2:2 ಗಲಾತ್ಯದವರಿಗೆ 2:2ಪ್ರಕಟನೆಗನುಸಾರವಾಗಿ ಅಲ್ಲಿಗೆ ಹೋಗಿ ಅನ್ಯಜನ ರಲ್ಲಿ ನಾನು ಸಾರುವ ಸುವಾರ್ತೆಯನ್ನು ಅಲ್ಲಿದ್ದವರಿಗೆ ತಿಳಿಸಿದೆನು; ಆದರೆ ನಾನು ಪಡುತ್ತಿರುವ ಪ್ರಯಾಸ ವಾಗಲಿ ಪಟ್ಟ ಪ್ರಯಾಸವಾಗಲಿ ನಿಷ್ಫಲವಾಗಬಾರ ದೆಂದು ಮಾನಿಷ್ಠರಿಗೆ ಏಕಾಂತದಲ್ಲಿ ತಿಳಿಸಿದೆನು.
- 1 John 1:1 1 ಯೋಹಾನನು 1:1ಆದಿಯಿಂದ ಇದ್ದದ್ದನ್ನೂ ಆ ಜೀವ ವಾಕ್ಯದ ವಿಷಯವಾಗಿ ಕೇಳಿದ್ದನ್ನೂ ಕಣ್ಣಾರೆ ಕಂಡು ನೋಡಿದ್ದನ್ನೂ ನಾವು ಕೈಯಿಂದ ಮುಟ್ಟಿದ್ದೇವೆ.
- 1 Thessalonians 3:5 1 ಥೆಸಲೊನೀಕದವರಿಗೆ 3:5ಈ ಕಾರಣದಿಂದ ನಮ್ಮ ಪ್ರಯಾಸವು ವ್ಯರ್ಥವಾಗುವಂತೆ ಶೋಧಕನು ನಿಮ್ಮನ್ನು ಯಾವದಾದರೂ ಒಂದು ರೀತಿಯಲ್ಲಿ ಶೋಧಿ ಸುವನೋ ಎಂದು ನಾನು ತಡೆಯಲಾರದೆ ನಿಮ್ಮ ನಂಬಿಕೆಯ ವಿಷಯದಲ್ಲಿ ತಿಳುಕೊಳ್ಳುವದಕ್ಕೆ ಕಳುಹಿಸಿ ದೆನು.
- 2 Corinthians 1:14 2 ಕೊರಿಂಥದವರಿಗೆ 1:14ನೀವು ಸಹ ಸ್ವಲ್ಪಮಟ್ಟಿಗೆ ನಮ್ಮನ್ನು ಒಪ್ಪಿಕೊಂಡು ನಮ್ಮ ಕರ್ತನಾದ ಯೇಸುವಿನ ದಿನದಲ್ಲಿ ನೀವು ನಮಗೆ ಉಲ್ಲಾಸಕ್ಕೆ ಕಾರಣರಾಗಿರುವಂತೆಯೇ ನಾವು ನಿಮಗೆ ಉಲ್ಲಾಸಕ್ಕೆ ಕಾರಣರಾಗಿದ್ದೇವೆ.
- John 6:68 ಯೋಹಾನನು 6:68ಸೀಮೋನ್ ಪೇತ್ರನು ಪ್ರತ್ಯುತ್ತರವಾಗಿ ಆತನಿಗೆ--ಕರ್ತನೇ, ನಾವು ಯಾರ ಬಳಿಗೆ ಹೋಗೋಣ? ನಿನ್ನಲ್ಲಿ ನಿತ್ಯಜೀವದ ವಾಕ್ಯಗಳು ಉಂಟಲ್ಲಾ.
- John 6:63 ಯೋಹಾನನು 6:63ಬದುಕಿಸುವಂಥದ್ದು ಆತ್ಮವೇ; ಮಾಂಸವು ಯಾವದಕ್ಕೂ ಪ್ರಯೋಜನವಾಗುವದಿಲ್ಲ; ನಾನು ನಿಮಗೆ ಹೇಳುವ ಮಾತುಗಳೇ ಆತ್ಮವಾಗಿಯೂ ಜೀವವಾಗಿಯೂ ಇವೆ.
- Luke 12:8 ಲೂಕನು 12:8ಇದಲ್ಲದೆ ನಾನೂ ನಿಮಗೆ ಹೇಳುವದೇನಂದರೆ--ಯಾವನಾದರೂ ಮನು ಷ್ಯರ ಮುಂದೆ ನನ್ನನ್ನು ಒಪ್ಪಿಕೊಂಡರೆ ಮನುಷ್ಯ ಕುಮಾರನು ಸಹ ದೇವದೂತರ ಮುಂದೆ ಅವನನ್ನು ಒಪ್ಪಿಕೊಳ್ಳುವನು.
- Hebrews 4:12 ಇಬ್ರಿಯರಿಗೆ 4:12ಯಾಕಂದರೆ ದೇವರ ವಾಕ್ಯವು ಸಜೀವ ವಾದದ್ದು, ಶಕ್ತಿಯುಳ್ಳದ್ದು, ಯಾವ ಇಬ್ಬಾಯಿ ಕತ್ತಿ ಗಿಂತಲೂ ಹದವಾದದ್ದು, ಪ್ರಾಣ ಆತ್ಮಗಳನ್ನೂ ಕೀಲು ಮಜ್ಜೆಗಳನ್ನೂ ವಿಭಾಗಿಸುವಷ್ಟರ ಮಟ್ಟಿಗೆ ತೂರಿ ಹೋಗುವಂಥದ್ದೂ ಹೃದಯದ ಆಲೋಚನೆಗಳನ್ನೂ ಉದ್ದೇಶಗಳನ್ನೂ ವಿವೇಚಿಸುವಂಥದ್ದೂ ಆಗಿದೆ.
- Isaiah 49:4 ಯೆಶಾಯ 49:4ಅದಕ್ಕೆ ನಾನು--ನಾನು ಪಡುವ ಪ್ರಯಾಸವು ವ್ಯರ್ಥ, ನನ್ನ ಶಕ್ತಿಯನ್ನೆಲ್ಲಾ ನಿಷ್ಪ್ರಯೋಜನವಾಗಿಯೂ ವ್ಯರ್ಥವಾ ಗಿಯೂ ಕಳಕೊಂಡೆನೆಂದು ಹೇಳಿದೆನು. ಆದರೂ ನಿಶ್ಚಯವಾಗಿ ನನ್ನ ನ್ಯಾಯವು ಕರ್ತನ ಬಳಿಯಲ್ಲಿಯೂ ನನ್ನ ಪ್ರತಿಫಲವು ನನ್ನ ದೇವರಲ್ಲಿಯೂ ಉಂಟು.
- 2 Timothy 2:15–17 2 ತಿಮೊಥೆಯನಿಗೆ 2:15–17ನೀನು ದೇವರಿಗೆ ಯೋಗ್ಯನಾಗಿ ಕಾಣಿಸಿಕೊಳ್ಳುವದಕ್ಕೆ ಅಭ್ಯಾಸಿಸು. ಅವಮಾನಕ್ಕೆ ಗುರಿ ಯಾಗದ ಕೆಲಸದವನೂ ಸತ್ಯವಾಕ್ಯವನ್ನು ಸರಿಯಾಗಿ ವಿಭಾಗಿಸುವವನೂ ಆಗಿರು. ಆದರೆ ಅಶುದ್ಧವಾದ ಹರಟೆಮಾತುಗಳನ್ನು ನಿರಾಕರಿಸು; ಅವುಗಳಿಂದ ಹೆಚ್ಚೆಚ್ಚಾಗಿ ಭಕ್ತಿಹೀನತೆಯು ಉಂಟಾಗುವದು. ಅವರ ಮಾತು ವ್ರಣವ್ಯಾಧಿಯಂತೆ ತಿನ್ನುವದು; ಅವರಲ್ಲಿ ಹುಮೆನಾಯನೂ ಪಿಲೇತನೂ ಇದ್ದಾರೆ;
- Romans 10:8–16 ರೋಮಾಪುರದವರಿಗೆ 10:8–16ಆದರೆ ಅದು ಏನು ಹೇಳುತ್ತದೆ? ವಾಕ್ಯವು ನಿನ್ನ ಸವಿಾಪದಲ್ಲಿಯೂ ನಿನ್ನ ಬಾಯಲ್ಲಿಯೂ ನಿನ್ನ ಹೃದಯದಲ್ಲಿಯೂ ಇದೆ ಎಂದು ಅನ್ನುತ್ತದೆ; ಅದೇನಂದರೆ--ನಾವು ಸಾರುವ ನಂಬಿಕೆಯ ವಿಷಯವಾದ ವಾಕ್ಯವೇ. ನೀನು ಕರ್ತನಾದ ಯೇಸು ವನ್ನು ಬಾಯಿಂದ ಅರಿಕೆಮಾಡಿ ದೇವರು ಆತನನ್ನು ಸತ್ತವರೊಳಗಿಂದ ಎಬ್ಬಿಸಿದ್ದಾನೆಂದು ನಿನ್ನ ಹೃದಯದಲ್ಲಿ ನಂಬಿದರೆ ನಿನಗೆ ರಕ್ಷಣೆಯಾಗುವದು ಎಂಬದೇ. ಹೃದಯದಿಂದ ನಂಬುವದರ ಮೂಲಕ ನೀತಿಯು ದೊರೆಯುತ್ತದೆ. ಬಾಯಿಂದ ಅರಿಕೆಮಾಡುವದರ ಮೂಲಕ ರಕ್ಷಣೆಯಾಗುತ್ತದೆ. ಆತನ ಮೇಲೆ ನಂಬಿಕೆ ಇಡುವ ಯಾವನಾದರೂ ನಾಚಿಕೆಪಡುವದಿಲ್ಲ ಎಂದು ಬರಹವು ಹೇಳುತ್ತದೆ. ಇದರಲ್ಲಿ ಯೆಹೂದ್ಯರಿಗೂ ಗ್ರೀಕರಿಗೂ ಹೆಚ್ಚು ಕಡಿಮೆ ಏನೂ ಇಲ್ಲ; ಎಲ್ಲರ ಮೇಲೆ ಕರ್ತನಾಗಿರುವ ಆತನೇ ತನ್ನನ್ನು ಬೇಡಿಕೊಳ್ಳು ವವರೆಲ್ಲರಿಗೆ ಐಶ್ವರ್ಯವಂತನಾಗಿದ್ದಾನೆ. ಕರ್ತನ ನಾಮದಲ್ಲಿ ಬೇಡಿಕೊಳ್ಳುವ ಯಾರಿಗಾದರೂ ರಕ್ಷಣೆ ಯಾಗುವದು. ಆದರೆ ತಾವು ಯಾವಾತನನ್ನು ನಂಬಲಿಲ್ಲವೋ ಆತನನ್ನು ಬೇಡಿಕೊಳ್ಳುವದು ಹೇಗೆ? ಆತನ ವಿಷಯ ವಾಗಿ ಕೇಳದಿರುವಲ್ಲಿ ಆತನನ್ನು ನಂಬುವದು ಹೇಗೆ? ಸಾರಿ ಹೇಳುವವನಿಲ್ಲದೆ ಕೇಳುವದು ಹೇಗೆ? ಇದ ಲ್ಲದೆ ಸಾರುವವರನ್ನು ಕಳುಹಿಸದಿದ್ದರೆ ಅವರು ಸಾರು ವದು ಹೇಗೆ? ಮತ್ತು--ಸಮಾಧಾನದ ಸುವಾರ್ತೆ ಯನ್ನು ಸಾರುವವರ ಮತ್ತು ಸಂತೋಷದ ಸುವರ್ತ ಮಾನವನ್ನು ತರುವವರ ಪಾದಗಳು ಎಷ್ಟೋ ಅಂದ ವಾಗಿವೆ ಎಂದು ಬರೆದದೆ. ಆದರೆ ಅವರೆಲ್ಲರೂ ಸುವಾರ್ತೆಗೆ ವಿಧೇಯರಾಗಲಿಲ್ಲ. ಆದದರಿಂದ ಯೆಶಾಯನು--ಕರ್ತನೇ, ನಮ್ಮ ವಾರ್ತೆಯನ್ನು ಯಾರು ನಂಬಿದರು ಅನ್ನುತ್ತಾನೆ.
Original words (Greek)
- forth · G1907ἐπέχω epéchō
- word · G3056λόγος lógos
- life · G2222ζωή zōḗ
- that · G1519εἰς eis
- I · G1698ἐμοί emoí
- rejoice · G2745καύχημα kaúchēma
- in · G1519εἰς eis
- day · G2250ἡμέρα hēméra
- Christ · G5547Χριστός Christós
- that · G3754ὅτι hóti
- have · G5143τρέχω tréchō
- not · G3756οὐ ou
- run · G5143τρέχω tréchō
- in · G1519εἰς eis
- vain · G2756κενός kenós
- neither · G3761οὐδέ oudé
- laboured · G2872κοπιάω kopiáō
- in · G1519εἰς eis
- vain · G2756κενός kenós