Genesis · chapter 14 · verse 12
Genesis 14:12 in Kannada
ಸೊದೋ ಮಿನಲ್ಲಿ ವಾಸವಾಗಿದ್ದ ಅಬ್ರಾಮನ ಸಹೋದರನ ಮಗನಾದ ಲೋಟನನ್ನೂ ಅವನ ಸಂಪತ್ತನ್ನೂ ತೆಗೆದುಕೊಂಡು ಹೋದರು.
Sodo minalli vaasavaagidda abraamana sahodarana maganaada lotanannoo avana sampattannoo tegedukondu hodaru.
Genesis 14:12 in English
- King James Version (KJV)
- And they took Lot, Abram’s brother’s son, who dwelt in Sodom, and his goods, and departed.
- World English Bible (WEB)
- They took Lot, Abram’s brother’s son, who lived in Sodom, and his goods, and departed.
- American Standard Version (ASV)
- And they took Lot, Abram’s brother’s son, who dwelt in Sodom, and his goods, and departed.
- Bible in Basic English (BBE)
- And in addition they took Lot, Abram's brother's son, who was living in Sodom, and all his goods.
- Darby Translation (DBY)
- And they took Lot and his property, Abram's brother's son, and departed. For he dwelt in Sodom.
- Webster's Bible (WBS)
- And they took Lot, Abram's brother's son, who dwelt in Sodom, and his goods, and departed.
- Young's Literal Translation (YLT)
- and they take Lot, Abram's brother's son (seeing he is dwelling in Sodom), and his substance, and go away.
Read in context
- 10ಸಿದ್ದೀಮ್ ತಗ್ಗು ಜೇಡಿನ ಕುಣಿಗಳಿಂದ ತುಂಬಿತ್ತು. ಸೊದೋಮ್ ಗೊಮೋರಗಳ ಅರಸರು ಓಡಿಹೋಗುವಾಗ ಅಲ್ಲಿ ಬಿದ್ದರು. ಉಳಿದವರು ಬೆಟ್ಟಕ್ಕೆ ಓಡಿಹೋದರು.
- 11ಆಗ ಅವರು ಸೊದೋಮ್ ಗೊಮೋರಗಳ ಎಲ್ಲಾ ಸಂಪತ್ತನ್ನೂ ಅವರ ಎಲ್ಲಾ ಆಹಾರ ಪದಾರ್ಥ ವನ್ನೂ ತೆಗೆದುಕೊಂಡು ಹೋದರು.
- 12ಸೊದೋ ಮಿನಲ್ಲಿ ವಾಸವಾಗಿದ್ದ ಅಬ್ರಾಮನ ಸಹೋದರನ ಮಗನಾದ ಲೋಟನನ್ನೂ ಅವನ ಸಂಪತ್ತನ್ನೂ ತೆಗೆದುಕೊಂಡು ಹೋದರು.
- 13ತಪ್ಪಿಸಿಕೊಂಡವನೊಬ್ಬನು ಹೋಗಿ ಇಬ್ರಿಯ ನಾದ ಅಬ್ರಾಮನಿಗೆ ಇದನ್ನು ತಿಳಿಸಿದನು. ಇವನು ಎಷ್ಕೋಲನಿಗೂ ಆನೇರನಿಗೂ ಸಹೋದರನಾಗಿದ್ದು ಅಮೋರಿಯನಾದ ಮಮ್ರೆಯ ಮೈದಾನದಲ್ಲಿ ವಾಸ ವಾಗಿದ್ದನು. ಇವರು ಅಬ್ರಾಮನೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದರು.
- 14ತನ್ನ ಸಹೋದರನು ಸೆರೆ ಯಾಗಿ ಒಯ್ಯಲ್ಪಟ್ಟನೆಂದು ಕೇಳಿ ಅಬ್ರಾಮನು ತನ್ನ ಮನೆಯಲ್ಲಿ ಹುಟ್ಟಿ ಶಿಕ್ಷಿತರಾಗಿದ್ದ ಮುನ್ನೂರ ಹದಿನೆಂಟು ಸೇವಕರನ್ನು ಯುದ್ಧಕ್ಕೆ ಸಿದ್ಧಮಾಡಿ ದಾನಿನ ವರೆಗೆ ಹಿಂದಟ್ಟಿ
Cross references
- Genesis 12:5 ಆದಿಕಾಂಡ 12:5ಇದಲ್ಲದೆ ಅಬ್ರಾಮನು ತನ್ನ ಹೆಂಡತಿಯಾದ ಸಾರಯಳನ್ನೂ ತನ್ನ ಸಹೋದರನ ಮಗನಾದ ಲೋಟ ನನ್ನೂ ಅವರು ಕೂಡಿಸಿಕೊಂಡಿದ್ದ ಎಲ್ಲಾ ಸಂಪತ್ತನ್ನೂ ಹಾರಾನಿನಲ್ಲಿ ಅವರು ಸಂಪಾದಿಸಿಕೊಂಡವರನ್ನೂ ತಮ್ಮ ಸಂಗಡ ಕರಕೊಂಡು ಕಾನಾನ್ ದೇಶಕ್ಕೆ ಹೊರಟು ಅವರು ಕಾನಾನ್ ದೇಶಕ್ಕೆ ಬಂದರು.
- Revelation 3:19 ಪ್ರಕಟನೆ 3:19ನಾನು ಯಾರಾರನ್ನು ಪ್ರೀತಿಸುತ್ತೇನೋ ಅವರನ್ನು ಗದರಿಸುತ್ತೇನೆ ಮತ್ತು ಶಿಕ್ಷಿಸುತ್ತೇನೆ; ಆದದರಿಂದ ನೀನು ಆಸಕ್ತನಾಗಿರು; ಮಾನಸಾಂತರಪಡು.
- Genesis 11:27 ಆದಿಕಾಂಡ 11:27ತೆರಹನ ವಂಶಾವಳಿಗಳು ಇವೇ; ತೆರಹನಿಂದ ಅಬ್ರಾಮನೂ ನಾಹೋರನೂ ಹಾರಾನನೂ ಹುಟ್ಟಿದರು. ಹಾರಾನನಿಂದ ಲೋಟನು ಹುಟ್ಟಿದನು.
- Numbers 16:26 ಅರಣ್ಯಕಾಂಡ 16:26ಅವನು ಸಭೆಗೆ--ನೀವು ಈ ದುಷ್ಟ ಮನುಷ್ಯರ ಡೇರೆಗಳ ಬಳಿಯಿಂದ ತೊಲಗಿ ಹೋಗಿರಿ. ನೀವು ಅವರ ಎಲ್ಲಾ ಪಾಪಗಳಲ್ಲಿ ನಾಶವಾಗ ದಂತೆ ಅವರಿಗಿರುವ ಯಾವದನ್ನು ಮುಟ್ಟಬೇಡಿರಿ ಅಂದನು.
- Genesis 13:12–13 ಆದಿಕಾಂಡ 13:12–13ಅಬ್ರಾಮನು ಕಾನಾನ್ ದೇಶದಲ್ಲಿ ವಾಸಮಾಡಿದನು. ಲೋಟನು ಸೊದೋಮಿನ ಬಳಿಯಲ್ಲಿ ಗುಡಾರಗಳನ್ನು ಹಾಕಿ ಕೊಂಡು ಮೈದಾನದ ಪಟ್ಟಣಗಳಲ್ಲಿ ವಾಸಿಸಿದನು. ಆದರೆ ಸೊದೋಮಿನ ಮನುಷ್ಯರು ದುಷ್ಟರೂ ಕರ್ತನ ದೃಷ್ಟಿಯಲ್ಲಿ ಬಹು ಪಾಪಿಷ್ಠರೂ ಆಗಿದ್ದರು.
- Jeremiah 2:17–19 ಯೆರೆಮೀಯ 2:17–19ಆತನು ನಿನ್ನನ್ನು ದಾರಿಯಲ್ಲಿ ನಡೆಸುತ್ತಿರುವಾಗ ನೀನು ನಿನ್ನ ದೇವರಾದ ಕರ್ತನನ್ನು ಬಿಟ್ಟಿದ್ದರಿಂದಲೇ ಇದನ್ನು ನಿನಗೆ ನೀನೇ ಮಾಡಿಕೊಂಡಿ ಅಲ್ಲವೋ? ಈಗ ಸಿಹೋರಿನ ನೀರು ಕುಡಿಯುವದಕ್ಕಾಗಿ ಐಗುಪ್ತದ ದಾರಿಯಲ್ಲಿ ನಿನಗೇನು ಕೆಲಸ? ಇಲ್ಲವೆ ನದಿಯ ನೀರು ಕುಡಿ ಯುವದಕ್ಕಾಗಿ ಅಶ್ಶೂರಿನ ದಾರಿಯಲ್ಲಿ ನಿನಗೇನು ಕೆಲಸ? ನಿನ್ನ ಕೆಟ್ಟತನವೇ ನಿನ್ನನ್ನು ತಿದ್ದುವದು; ನಿನ್ನ ಹಿಂಜಾರಿಕೆಗಳೇ ನಿನ್ನನ್ನು ಗದರಿಸುವವು; ಹೀಗಿ ರುವದರಿಂದ ನೀನು ನಿನ್ನ ದೇವರಾದ ಕರ್ತನನ್ನು ಬಿಟ್ಟದ್ದೂ ನನ್ನ ಭಯವೂ ನಿನ್ನಲ್ಲಿ ಇಲ್ಲದಿರುವದೂ ಕೆಟ್ಟದ್ದೂ ಕಹಿಯಾದದ್ದೂ ಎಂದು ತಿಳುಕೊಂಡು ನೋಡು ಎಂದು ಸೈನ್ಯಗಳ ಕರ್ತನಾದ ದೇವರು ಅನ್ನುತ್ತಾನೆ.
- Revelation 18:4 ಪ್ರಕಟನೆ 18:4ಪರಲೋಕದಿಂದ ಮತ್ತೊಂದು ಶಬ್ದವನ್ನು ನಾನು ಕೇಳಿದೆನು; ಅದು--ನನ್ನ ಜನರೇ, ಅವಳಿಂದ ಹೊರಗೆ ಬನ್ನಿರಿ; ನೀವು ಅವಳ ಪಾಪಗಳಲ್ಲಿ ಪಾಲುಗಾರರಾಗ ಬಾರದು; ಅವಳಿಗಾಗುವ ಉಪದ್ರವಗಳಿಗೆ ಗುರಿ ಯಾಗಬಾರದು.
- 1 Timothy 6:9–11 1 ತಿಮೊಥೆಯನಿಗೆ 6:9–11ಆದರೆ ಐಶ್ವರ್ಯವಂತರಾಗ ಬೇಕೆಂದು ಮನಸ್ಸು ಮಾಡುವವರು ಶೋಧನೆಯಲ್ಲಿಯೂ ಉರ್ಲಿನಲ್ಲಿಯೂ ಸಿಕ್ಕಿಕೊಂಡು ಅನೇಕ ಬುದ್ಧಿಹೀನತೆಯ ಮತ್ತು ಹಾನಿಕರವಾದ ದುರಾಶೆಗಳಲ್ಲಿ ಬೀಳುತ್ತಾರೆ. ಇಂಥ ಆಶೆಗಳು ಮನುಷ್ಯರನ್ನು ಸಂಹಾರ ನಾಶನಗಳಲ್ಲಿ ಮುಳುಗಿಸುತ್ತವೆ. ಹಣದ ಪ್ರೀತಿಯು ಸಕಲ ವಿಧವಾದ ಕೆಟ್ಟತನಕ್ಕೆ ಮೂಲವಾಗಿದೆ. ಕೆಲವರು ಅದಕ್ಕಾಗಿ ಆತುರಪಟ್ಟು ನಂಬಿಕೆಯಿಂದ ತಪ್ಪಿಹೋಗಿ ಅನೇಕ ದುಃಖಗಳಿಂದ ತಮ್ಮನ್ನು ತಾವೇ ತಿವಿಸಿ ಕೊಳ್ಳುತ್ತಾರೆ. ಓ ದೇವರ ಮನುಷ್ಯನೇ, ನೀನಾದರೋ ಇವುಗಳಿಂದ ದೂರ ಓಡಿಹೋಗು; ನೀತಿ ಭಕ್ತಿ ನಂಬಿಕೆ ಪ್ರೀತಿ ತಾಳ್ಮೆ ಸಾತ್ವಿಕತ್ವ ಇವುಗಳನ್ನು ಅನುಸರಿಸು.
- Job 9:23 ಯೋಬನು 9:23ಕೊರಡೆಯು ಫಕ್ಕನೆ ಕೊಂದರೆ, ನಿರಪರಾಧಿಗಳ ಪರೀಕ್ಷೆಗೆ ಅವನು ಗೇಲಿ ಮಾಡುತ್ತಾನೆ.