Genesis · chapter 11 · verse 27
Genesis 11:27 in Kannada
ತೆರಹನ ವಂಶಾವಳಿಗಳು ಇವೇ; ತೆರಹನಿಂದ ಅಬ್ರಾಮನೂ ನಾಹೋರನೂ ಹಾರಾನನೂ ಹುಟ್ಟಿದರು. ಹಾರಾನನಿಂದ ಲೋಟನು ಹುಟ್ಟಿದನು.
Terahana vanshaavaligalu ive; terahaninda abraamanoo naahoranoo haaraananoo huttidaru. Haaraananinda lotanu huttidanu.
Genesis 11:27 in English
- King James Version (KJV)
- Now these [are] the generations of Terah: Terah begat Abram, Nahor, and Haran; and Haran begat Lot.
- World English Bible (WEB)
- Now this is the history of the generations of Terah. Terah became the father of Abram, Nahor, and Haran. Haran became the father of Lot.
- American Standard Version (ASV)
- Now these are the generations of Terah. Terah begat Abram, Nahor, and Haran; and Haran begat Lot.
- Bible in Basic English (BBE)
- These are the generations of Terah: Terah was the father of Abram, Nahor, and Haran; and Haran was the father of Lot.
- Darby Translation (DBY)
- And these are the generations of Terah: Terah begot Abram, Nahor, and Haran; and Haran begot Lot.
- Webster's Bible (WBS)
- Now these [are] the generations of Terah: Terah begat Abram, Nahor, and Haran: and Haran begat Lot.
- Young's Literal Translation (YLT)
- And these [are] births of Terah: Terah hath begotten Abram, Nahor, and Haran; and Haran hath begotten Lot;
Read in context
- 25ನಾಹೋರ ನಿಂದ ತೆರಹನು ಹುಟ್ಟಿದ ಮೇಲೆ ನಾಹೋರನು ನೂರಹತ್ತೊಂಭತ್ತು ವರುಷ ಬದುಕಿದನು. ಅವನಿಂದ ಕುಮಾರರೂ ಕುಮಾರ್ತೆಯರೂ ಹುಟ್ಟಿದರು.
- 26ತೆರಹನು ಎಪ್ಪತ್ತು ವರುಷದವನಾಗಿದ್ದಾಗ ಅವ ನಿಂದ ಅಬ್ರಾಮನೂ ನಾಹೋರನೂ ಹಾರಾನನೂ ಹುಟ್ಟಿದರು.
- 27ತೆರಹನ ವಂಶಾವಳಿಗಳು ಇವೇ; ತೆರಹನಿಂದ ಅಬ್ರಾಮನೂ ನಾಹೋರನೂ ಹಾರಾನನೂ ಹುಟ್ಟಿದರು. ಹಾರಾನನಿಂದ ಲೋಟನು ಹುಟ್ಟಿದನು.
- 28ಆದರೆ ಹಾರಾನನು ತಾನು ಹುಟ್ಟಿದ ಸೀಮೆಯಾದ ಕಲ್ದಿಯರ ಊರ್ನಲ್ಲಿ ತನ್ನ ತಂದೆಯಾದ ತೆರಹನ ಮುಂಚೆಯೇ ಸತ್ತನು.
- 29ಅಬ್ರಾಮನೂ ನಾಹೋ ರನೂ ತಮಗೆ ಹೆಂಡತಿಯರನ್ನು ತೆಗೆದುಕೊಂಡರು. ಅಬ್ರಾಮನ ಹೆಂಡತಿಯ ಹೆಸರು ಸಾರಯಳು, ನಾಹೋರನ ಹೆಂಡತಿಯ ಹೆಸರು ಮಿಲ್ಕಾ; ಈಕೆಯು ಹಾರಾನನ ಮಗಳು; ಹಾರಾನನು ಮಿಲ್ಕಳಿಗೂ ಇಸ್ಕಳಿಗೂ ತಂದೆ.
Cross references
- Genesis 11:31 ಆದಿಕಾಂಡ 11:31ತೆರಹನು ತನ್ನ ಮಗನಾದ ಅಬ್ರಾಮನನ್ನೂ ತನ್ನ ಮೊಮ್ಮಗನೂ ಹಾರಾನನ ಮಗನೂ ಆಗಿದ್ದ ಲೋಟನನ್ನೂ ತನ್ನ ಸೊಸೆಯಾದ ಅಬ್ರಾಮನ ಹೆಂಡತಿ ಸಾರಯಳನ್ನೂ ಕರಕೊಂಡು ಕಾನಾನ್ ದೇಶಕ್ಕೆ ಹೋಗು ವದಕ್ಕಾಗಿ ಕಲ್ದೀಯರ ಊರ್ ಅನ್ನು ಬಿಟ್ಟು ಅವರು ಹಾರಾನಿಗೆ ಬಂದು ಅಲ್ಲಿ ವಾಸವಾಗಿದ್ದರು.ತೆರಹನ ದಿನಗಳು ಒಟ್ಟು ಇನ್ನೂರ ಐದು ವರುಷಗಳಾಗಿದ್ದವು. ತರುವಾಯ ತೆರಹನು ಹಾರಾನಿನಲ್ಲಿ ಸತ್ತನು.
- Genesis 12:4 ಆದಿಕಾಂಡ 12:4ಹೀಗೆ ಕರ್ತನು ತನಗೆ ಹೇಳಿದ ಪ್ರಕಾರ ಅಬ್ರಾಮನು ಹೊರಟುಹೋದನು. ಲೋಟನೂ ಅವನ ಸಂಗಡ ಹೋದನು. ಅಬ್ರಾಮನು ಹಾರಾನಿ ನಿಂದ ಹೊರಟಾಗ ಎಪ್ಪತ್ತೈದು ವರುಷದವನಾಗಿದ್ದನು.
- Genesis 14:12 ಆದಿಕಾಂಡ 14:12ಸೊದೋ ಮಿನಲ್ಲಿ ವಾಸವಾಗಿದ್ದ ಅಬ್ರಾಮನ ಸಹೋದರನ ಮಗನಾದ ಲೋಟನನ್ನೂ ಅವನ ಸಂಪತ್ತನ್ನೂ ತೆಗೆದುಕೊಂಡು ಹೋದರು.
- 2 Peter 2:7 2 ಪೇತ್ರನು 2:7ಆ ದುಷ್ಟರ ನಡತೆಗೆ ವೇದನೆಗೊಂಡಿದ್ದ ನೀತಿವಂತನಾದ ಲೋಟನನ್ನು ತಪ್ಪಿಸಿದನು.
- Genesis 13:1–11 ಆದಿಕಾಂಡ 13:1–11ಆಗ ಅಬ್ರಾಮನು ತನ್ನ ಹೆಂಡತಿಯೊಂದಿಗೆ ತನಗೆ ಇದ್ದದ್ದನ್ನೆಲ್ಲಾ ತಕ್ಕೊಂಡು ಲೋಟನ ಸಹಿತವಾಗಿ ಐಗುಪ್ತವನ್ನು ಬಿಟ್ಟು ದಕ್ಷಿಣಕ್ಕೆ ಏರಿಹೋದನು. ಅಬ್ರಾಮನು ದನಗಳಲ್ಲಿಯೂ ಬೆಳ್ಳಿಯಲ್ಲಿಯೂ ಬಂಗಾರದಲ್ಲಿಯೂ ಬಹು ಧನವಂತನಾಗಿದ್ದನು. ಅವನು ತನ್ನ ಪ್ರಯಾಣಗಳಲ್ಲಿ ದಕ್ಷಿಣದಿಂದ ಬೇತೇಲಿಗೆ ಅಂದರೆ ಮೊದಲು ಬೇತೇಲಿಗೆ ಆಯಿಗೆ ಮಧ್ಯದಲ್ಲಿ ಅವನ ಗುಡಾರವಿದ್ದ ಸ್ಥಳಕ್ಕೂ ಮೊದಲು ಅವನು ಮಾಡಿದ್ದ ಬಲಿಪೀಠದ ಸ್ಥಳಕ್ಕೂ ಬಂದನು. ಅಲ್ಲಿ ಅಬ್ರಾಮನು ಕರ್ತನ ಹೆಸರನ್ನು ಹೇಳಿಕೊಂಡನು. ಅಬ್ರಾಮನ ಸಂಗಡ ಬಂದ ಲೋಟನಿಗೆ ಸಹ ಕುರಿ ದನಗಳೂ ಗುಡಾರಗಳೂ ಇದ್ದವು. ಆಗ ಅವರು ಒಂದಾಗಿ ವಾಸಿಸುವ ಹಾಗೆ ಸ್ಥಳವು ಸಾಲದೆ ಹೋಯಿತು. ಯಾಕಂದರೆ ಅವರು ಒಟ್ಟಿಗೆ ವಾಸಿಸದಷ್ಟು ಅವರ ಸಂಪತ್ತು ಬಹಳವಾಗಿತ್ತು. ಆಗ ಅಬ್ರಾಮನ ದನಕಾಯುವವರಿಗೂ ಲೋಟನ ದನಕಾಯುವವರಿಗೂ ಜಗಳವಾಯಿತು. ಕಾನಾನ್ಯರೂ ಪೆರಿಜೀಯರೂ ಆಗ ದೇಶದಲ್ಲಿ ವಾಸವಾಗಿದ್ದರು. ಅಬ್ರಾಮನು ಲೋಟನಿಗೆ--ನನಗೂ ನಿನಗೂ ನನ್ನ ದನಕಾಯುವವರಿಗೂ ನಿನ್ನ ದನಕಾಯುವವರಿಗೂ ಜಗಳವಿರಬಾರದು; ನಾವು ಸಹೋದರರು. ಭೂಮಿ ಯೆಲ್ಲಾ ನಿನ್ನ ಮುಂದೆ ಇರುತ್ತದಲ್ಲವೋ? ಹಾಗಾದರೆ ನನ್ನ ಬಳಿಯಿಂದ ಪ್ರತ್ಯೇಕವಾಗು; ನೀನು ಎಡಕ್ಕೆ ಹೋದರೆ ನಾನು ಬಲಕ್ಕೆ ಹೋಗುವೆನು; ನೀನು ಬಲಕ್ಕೆ ಹೋದರೆ ನಾನು ಎಡಕ್ಕೆ ಹೋಗುವೆನು ಅಂದನು. ಲೋಟನು ತನ್ನ ಕಣ್ಣುಗಳನ್ನು ಎತ್ತಿ ಯೊರ್ದನಿನ ಮೈದಾನವನ್ನೆಲ್ಲಾ ನೋಡಿದನು. ಯಾಕಂದರೆ ಕರ್ತನು ಸೊದೋಮನ್ನೂ ಗೊಮೋರ ವನ್ನೂ ನಾಶಮಾಡುವದಕ್ಕಿಂತ ಮುಂಚೆ ಅದೆಲ್ಲಾ ಚೋಗರಿನ ವರೆಗೆ ನೀರಾವರಿಯಾಗಿದ್ದು ಕರ್ತನ ತೋಟದಂತೆಯೂ ಐಗುಪ್ತದೇಶದಂತೆಯೂ ಇತ್ತು. ತರುವಾಯ ಲೋಟನು ಯೊರ್ದನಿನ ಮೈದಾನ ವನ್ನೆಲ್ಲಾ ತನಗಾಗಿ ಆರಿಸಿಕೊಂಡನು; ಹೀಗೆ ಲೋಟನು ಮೂಡಣಕ್ಕೆ ಹೊರಟು ಹೋದದ್ದರಿಂದ ಅವರು ಒಬ್ಬರಿಂದೊಬ್ಬರು ಪ್ರತ್ಯೇಕಿಸಲ್ಪಟ್ಟರು.
- Genesis 19:1–29 ಆದಿಕಾಂಡ 19:1–29ದೂತರಿಬ್ಬರು ಸಾಯಂಕಾಲದಲ್ಲಿ ಸೊದೋಮ್ಗೆ ಬಂದಾಗ ಲೋಟನು ಸೊದೋ ಮ್ನ ಬಾಗಲಲ್ಲಿ ಕೂತಿದ್ದನು. ಲೋಟನು ಅವರನ್ನು ಎದುರುಗೊಳ್ಳುವದಕ್ಕೆ ಎದ್ದು ನೆಲದ ಮಟ್ಟಿಗೆ ಬೊಗ್ಗಿ ಇಗೋ, ಪ್ರಭುಗಳೇ, ನೀವು ನಿಮ್ಮ ದಾಸನ ಮನೆಯಲ್ಲಿ ಇಳುಕೊಂಡು ರಾತ್ರಿ ಕಳೆಯಿರಿ; ನಿಮ್ಮ ಕಾಲುಗಳನ್ನು ತೊಳೆದುಕೊಳ್ಳಿರಿ; ಬೆಳಿಗ್ಗೆ ಎದ್ದು ನಿಮ್ಮ ಮಾರ್ಗವನ್ನು ಹಿಡಿದು ಹೋಗಬಹುದು ಎಂದು ಬೇಡಿಕೊಂಡನು. ಅದಕ್ಕೆ ಅವರು--ಹಾಗಲ್ಲ; ನಾವು ರಾತ್ರಿಯೆಲ್ಲಾ ಬೀದಿಯಲ್ಲಿ ಇರುತ್ತೇವೆ ಅಂದರು. ಅದಕ್ಕವನು ಅವರನ್ನು ಬಹಳವಾಗಿ ಬಲವಂತ ಮಾಡಿದ್ದರಿಂದ ಅವರು ತಿರುಗಿಕೊಂಡು ಅವನ ಮನೆಯೊಳಕ್ಕೆ ಪ್ರವೇಶಿಸಿದರು. ಅವನು ಅವರಿಗಾಗಿ ಔತಣಮಾಡಿಸಿ ಹುಳಿಯಿಲ್ಲದ ರೊಟ್ಟಿಗಳನ್ನು ಸುಟ್ಟನು. ಅವರು ಊಟಮಾಡಿದರು. ಆದರೆ ಅವರು ಮಲಗುವದಕ್ಕಿಂತ ಮುಂಚೆ ಸೊದೋಮ್ ಪಟ್ಟಣದ ಜನರು, ಹುಡುಗರು ಮೊದಲುಗೊಂಡು ಮುದುಕರ ವರೆಗೆ ಜನರೆಲ್ಲಾ ಪ್ರತಿಯೊಂದು ಮೂಲೆಯಿಂದ ಕೂಡಿ ಮನೆಯನ್ನು ಸುತ್ತಿಕೊಂಡರು. ಅವರು ಲೋಟನನ್ನು ಕರೆದು ಈ ರಾತ್ರಿಯಲ್ಲಿ ನಿನ್ನ ಬಳಿಗೆ ಬಂದ ಮನುಷ್ಯರು ಎಲ್ಲಿ? ಅವರನ್ನು ನಮ್ಮ ಬಳಿಗೆ ಹೊರಗೆ ತೆಗೆದುಕೊಂಡು ಬಾ; ನಾವು ಅವರನ್ನು ಅರಿಯಬೇಕು ಎಂದು ಅವನಿಗೆ ಹೇಳಿದರು. ಆಗ ಲೋಟನು ಅವರ ಬಳಿಗೆ ಹೊರಗೆ ಬಂದು ಬಾಗಿಲನ್ನು ತನ್ನ ಹಿಂದೆ ಮುಚ್ಚಿಕೊಂಡು-- ನನ್ನ ಸಹೋದರರೇ, ಈ ಅತಿದುಷ್ಟ ತನವನ್ನು ಮಾಡಬೇಡಿರಿ. ಇಗೋ, ಗಂಡಸರನ್ನು ಅರಿಯದ ಇಬ್ಬರು ಕುಮಾರ್ತೆಯರು ನನಗೆ ಇದ್ದಾರೆ; ಅವರನ್ನು ನಿಮ್ಮ ಬಳಿಗೆ ಹೊರ ತರುವೆನು; ನಿಮ್ಮ ದೃಷ್ಟಿಗೆ ಒಳ್ಳೇದೆಂದು ಕಾಣುವಹಾಗೆ ನೀವು ಅವರಿಗೆ ಮಾಡಿರಿ; ಆ ಮನುಷ್ಯರಿಗೆ ಮಾತ್ರ ಏನೂ ಮಾಡಬೇಡಿರಿ; ಅವರು ನನ್ನ ಮನೆಗೆ ಆಶ್ರಯಕ್ಕಾಗಿ ಬಂದಿದ್ದಾರೆ ಎಂದು ಬೇಡಿಕೊಂಡನು. ಆದರೆ ಅವರು--ಹಿಂದಕ್ಕೆ ಸರಿ ಎಂದು ಹೇಳಿ --ಇವನು ಪ್ರವಾಸಿಯಾಗಿ ಬಂದು ನ್ಯಾಯಾಧಿಪತಿ ಆಗಬೇಕೆಂದಿದ್ದಾನೆ; ಈಗ ನಿನಗೆ ಅವರಿಗಿಂತ ಹೆಚ್ಚು ಕೆಟ್ಟದ್ದನ್ನು ಮಾಡುತ್ತೇವೆ ಅಂದರು. ಅವರು ಲೋಟನನ್ನು ಬಹಳವಾಗಿ ಇರುಕಿಸಿ ಬಾಗಲನ್ನು ಮುರಿಯಲು ಸವಿಾಪಕ್ಕೆ ಬಂದರು. ಆಗ ಆ ಮನುಷ್ಯರು (ಲೋಟನ ಬಳಿಗೆ ಬಂದಿದ್ದವರು) ತಮ್ಮ ಕೈಯಿಂದ ಲೋಟನನ್ನು ತಮ್ಮ ಕಡೆಗೆ ಮನೆಯೊಳಗೆ ಎಳಕೊಂಡು ಬಾಗಲನ್ನು ಮುಚ್ಚಿದರು. ಬಾಗಲಲ್ಲಿದ್ದ ಮನುಷ್ಯರನ್ನು ಕಿರಿಯರಿಂದ ಹಿರಿಯರ ವರೆಗೆ ಕುರುಡರನ್ನಾಗಿ ಮಾಡಿದರು. ಆಗ ಅವರು ಬಾಗಲನ್ನು ಕಂಡುಕೊಳ್ಳಲಾರದೆ ಬೇಸರಗೊಂಡರು. ಆ ಮನುಷ್ಯರು ಲೋಟನಿಗೆ--ಇಲ್ಲಿ ನಿನಗೆ ಇನ್ನು ಯಾರಾದರೂ ಇದ್ದಾರೋ? ಅಳಿಯಂದಿರನ್ನೂ ಕುಮಾರರನ್ನೂ ನಿನ್ನ ಕುಮಾರ್ತೆಯರನ್ನೂ ಮತ್ತು ಪಟ್ಟಣದಲ್ಲಿ ನಿನಗಿರುವ ಎಲ್ಲವನ್ನೂ ಈ ಸ್ಥಳದಿಂದ ಹೊರಗೆ ತೆಗೆದುಕೊಂಡು ಬಾ. ಈ ಸ್ಥಳದವರ ಕೂಗು ಕರ್ತನ ಸನ್ನಿಧಿಯಲ್ಲಿ ದೊಡ್ಡದಾಗಿರುವದರಿಂದ ನಾವು ಇದನ್ನು ನಾಶಮಾಡುತ್ತೇವೆ; ಕರ್ತನು ಅದನ್ನು ನಾಶಮಾಡುವದಕ್ಕೆ ನಮ್ಮನ್ನು ಕಳುಹಿಸಿದ್ದಾನೆ ಅಂದರು. ಆಗ ಲೋಟನು ಹೊರಟುಹೋಗಿ ತನ್ನ ಕುಮಾರ್ತೆಯರು ಮದುವೆಯಾದ ಅಳಿಯಂದಿರ ಸಂಗಡ ಮಾತನಾಡಿ--ಎದ್ದು ಈ ಸ್ಥಳದಿಂದ ಹೊರಡಿರಿ; ಯಾಕಂದರೆ ಕರ್ತನು ಈ ಪಟ್ಟಣವನ್ನು ನಾಶ ಮಾಡುವದಕ್ಕಿದ್ದಾನೆ ಅಂದನು. ಆದರೆ ಅವನು ತನ್ನ ಅಳಿಯಂದಿರಿಗೆ ಅಪಹಾಸ್ಯ ಮಾಡುವಂತೆ ಕಾಣಿಸಿಕೊಂಡನು. ಸೂರ್ಯೋದಯವಾದಾಗ ದೂತರು ಲೋಟನನ್ನು ತ್ವರೆಪಡಿಸಿ--ನೀನು ಈ ಪಟ್ಟಣದ ದುಷ್ಟತನದಿಂದ ನಾಶವಾಗದ ಹಾಗೆ ಎದ್ದು ನಿನ್ನ ಹೆಂಡತಿಯನ್ನೂ ಇಲ್ಲಿರುವ ನಿನ್ನ ಇಬ್ಬರು ಕುಮಾರ್ತೆಯರನ್ನೂ ಕರಕೊಂಡು ನಡೆ ಅಂದರು. ಅವರು ತಡಮಾಡಿದಾಗ ಕರ್ತನು ಅವನನ್ನು ಕನಿಕರಿಸಿದ್ದರಿಂದ ಆ ಮನುಷ್ಯರು ಅವನನ್ನೂ ಅವನ ಹೆಂಡತಿ ಅವನ ಇಬ್ಬರು ಕುಮಾರ್ತೆಯರ ಕೈಯನ್ನೂ ಹಿಡಿದು, ಅವನನ್ನು ಪಟ್ಟಣದ ಹೊರಗೆ ತಂದುಬಿಟ್ಟರು; ಅವರನ್ನು ಹೊರಗೆ ತಂದ ಮೇಲೆ ಆತನು--ನಿನ್ನ ಪ್ರಾಣಕ್ಕೋಸ್ಕರ ತಪ್ಪಿಸಿಕೋ; ನಿನ್ನ ಹಿಂದೆ ನೋಡಬೇಡ. ಸುತ್ತಲಿರುವ ಯಾವ ಮೈದಾನದಲ್ಲಿಯೂ ನಿಂತುಕೊಳ್ಳಬೇಡ, ನೀನು ನಾಶ ವಾಗದ ಹಾಗೆ ತಪ್ಪಿಸಿಕೊಂಡು ಬೆಟ್ಟಕ್ಕೆ ಹೋಗು ಅಂದನು. ಲೋಟನು ಅವರಿಗೆ--ಹಾಗಲ್ಲ, ನನ್ನ ಕರ್ತನೇ, ಇಗೋ, ಈಗ ನಿನ್ನ ದಾಸನಿಗೆ ನಿನ್ನ ದೃಷ್ಟಿಯಲ್ಲಿ ದಯೆದೊರಕಿದೆ. ನನ್ನ ಪ್ರಾಣವನ್ನು ಉಳಿಸುವ ಹಾಗೆ ನೀನು ನನಗೆ ಮಾಡಿದ ಕೃಪೆಯನ್ನು ಘನಪಡಿಸಿದ್ದೀ. ಆದರೆ ನಾನು ತಪ್ಪಿಸಿಕೊಂಡು ಬೆಟ್ಟಕ್ಕೆ ಹೋಗಲಾರೆನು; ನನಗೆ ಕೇಡು ಉಂಟಾಗಿ ನಾನು ಸತ್ತೇನು; ಇಗೋ, ಈ ಪಟ್ಟಣವನ್ನು ನೋಡು. ನಾನು ಅಲ್ಲಿಗೆ ಓಡಿಹೋಗುವ ಹಾಗೆ ಸವಿಾಪವಾಗಿದೆ ಮತ್ತು ಅದು ಸಣ್ಣದು; ನಾನು ತಪ್ಪಿಸಿಕೊಂಡು ಅಲ್ಲಿಗೆ ಹೋಗುವೆನು; (ಅದು ಸಣ್ಣದಲ್ಲವೋ?) ಹೀಗೆ ನನ್ನ ಪ್ರಾಣವು ಉಳಿಯುವದು ಅಂದನು. ಆತನು ಅವನಿಗೆ--ಈ ವಿಷಯದಲ್ಲಿಯೂ ನಾನು ನಿನ್ನ ಬೇಡಿಕೆಯನ್ನು ಅಂಗೀಕರಿಸಿದ್ದೇನೆ, ನೋಡು; ನೀನು ಹೇಳಿದ ಆ ಪಟ್ಟಣವನ್ನು ಕೆಡವಿಹಾಕುವದಿಲ್ಲ. ತ್ವರೆಯಾಗಿ ತಪ್ಪಿಸಿಕೊಂಡು ಅಲ್ಲಿಗೆ ಹೋಗು; ಯಾಕಂದರೆ ನೀನು ಅಲ್ಲಿಗೆ ಹೋಗುವ ವರೆಗೆ ನಾನೇನೂ ಮಾಡಲಾರೆನು ಅಂದನು. ಆದದರಿಂದ ಆ ಪಟ್ಟಣಕ್ಕೆ ಚೋಗರ್ ಎಂದು ಹೆಸರಾಯಿತು. ಲೋಟನು ಚೋಗರಿಗೆ ಬಂದಾಗ ಭೂಮಿಯ ಮೇಲೆ ಸೂರ್ಯನು ಉದಯಿ ಸಿದನು. ಆಗ ಕರ್ತನು ಸೊದೋಮ್ ಮತ್ತು ಗೊಮೋರದ ಮೇಲೆ ಗಂಧಕವನ್ನೂ ಬೆಂಕಿಯನ್ನೂ ಆಕಾಶದಿಂದ ಸುರಿಸಿದನು. ಹೀಗೆ ಆತನು ಆ ಪಟ್ಟಣಗಳನ್ನೂ ಎಲ್ಲಾ ಮೈದಾನವನ್ನೂ ಪಟ್ಟಣಗಳ ಎಲ್ಲಾ ನಿವಾಸಿಗಳನ್ನೂ ಭೂಮಿಯ ಮೇಲೆ ಬೆಳೆದ ಬೆಳೆಯನ್ನೂ ಹಾಳುಮಾಡಿದನು. ಆದರೆ ಲೋಟನ ಹಿಂದೆ ಇದ್ದ ಅವನ ಹೆಂಡತಿಯು ಹಿಂದಕ್ಕೆ ನೋಡಿ ಉಪ್ಪಿನ ಸ್ತಂಭವಾದಳು. ಅಬ್ರಹಾಮನು ಬೆಳಿಗ್ಗೆ ಎದ್ದು ತಾನು ಕರ್ತನ ಸನ್ನಿಧಿಯಲ್ಲಿ ನಿಂತಿದ್ದ ಸ್ಥಳಕ್ಕೆ ಬಂದು ಸೊದೋಮ್ ಗೊಮೋರಗಳ ಕಡೆಗೂ ಮೈದಾನದ ಎಲ್ಲಾ ಪ್ರದೇಶ ಗಳ ಕಡೆಗೂ ನೋಡಿದನು. ಆಗ ಇಗೋ, ಆ ದೇಶದ ಹೊಗೆಯು ಆವಿಗೆಯ ಹೊಗೆಯ ಹಾಗೆ ಏರಿತು. ದೇವರು ಮೈದಾನದ ಪಟ್ಟಣಗಳನ್ನು ನಾಶಮಾಡುವಾಗ ಆದದ್ದೇನಂದರೆ, ದೇವರು ಅಬ್ರ ಹಾಮನನ್ನು ಜ್ಞಾಪಕಮಾಡಿಕೊಂಡು ಲೋಟನು ವಾಸಮಾಡಿದ ಪಟ್ಟಣಗಳನ್ನು ಹಾಳುಮಾಡಿದಾಗ ಹಾಳಾದ ಆ ಸ್ಥಳದೊಳಗಿಂದ ಲೋಟನನ್ನು ಹೊರಗೆ ಕಳುಹಿಸಿದನು.