Genesis · chapter 15 · verse 14
Genesis 15:14 in Kannada
ಅವರು ಸೇವಿಸುವ ಜನಾಂಗಕ್ಕೆ ನಾನೇ ನ್ಯಾಯ ತೀರಿಸುವೆನು; ತರುವಾಯ ಮಹಾ ಸಂಪತ್ತಿನೊಂದಿಗೆ ಅವರು ಹೊರಗೆ ಬರುವರು.
Avaru sevisuva janaangakke naane nyaaya teerisuvenu; taruvaaya mahaa sampattinondige avaru horage baruvaru.
Genesis 15:14 in English
- King James Version (KJV)
- And also that nation, whom they shall serve, will I judge: and afterward shall they come out with great substance.
- World English Bible (WEB)
- I will also judge that nation, whom they will serve. Afterward they will come out with great wealth;
- American Standard Version (ASV)
- and also that nation, whom they shall serve, will I judge: and afterward shall they come out with great substance.
- Bible in Basic English (BBE)
- But I will be the judge of that nation whose servants they are, and they will come out from among them with great wealth.
- Darby Translation (DBY)
- But also that nation which they shall serve I will judge; and afterwards they shall come out with great property.
- Webster's Bible (WBS)
- And also that nation which they shall serve, will I judge: and afterward shall they come out with great substance.
- Young's Literal Translation (YLT)
- and the nation also whom they serve I judge, and after this they go out with great substance;
Read in context
- 12ಸೂರ್ಯನು ಅಸ್ತಮಿಸಲಾಗಿ ಅಬ್ರಾಮನಿಗೆ ಗಾಢನಿದ್ರೆ ಹತ್ತಿತು. ಆಗ ಇಗೋ, ಭಯದ ಘೋರಾಂಧಕಾರವು ಅವನ ಮೇಲೆ ಕವಿಯಿತು.
- 13ಆಗ ಆತನು ಅಬ್ರಾಮನಿಗೆ--ನಿನ್ನ ಸಂತತಿ ಯವರು ತಮ್ಮದಲ್ಲದ ದೇಶದಲ್ಲಿ ಪರದೇಶಿಗಳಾಗಿದ್ದು ಅವರನ್ನು ಸೇವಿಸುವರು. ಅವರು ನಾನೂರು ವರುಷ ಗಳು ನಿನ್ನ ಸಂತತಿಯವರನ್ನು ಶ್ರಮೆಪಡಿಸುವರು ಎಂದು ನೀನು ಖಂಡಿತವಾಗಿಯೂ ತಿಳಿಯತಕ್ಕದ್ದು.
- 14ಅವರು ಸೇವಿಸುವ ಜನಾಂಗಕ್ಕೆ ನಾನೇ ನ್ಯಾಯ ತೀರಿಸುವೆನು; ತರುವಾಯ ಮಹಾ ಸಂಪತ್ತಿನೊಂದಿಗೆ ಅವರು ಹೊರಗೆ ಬರುವರು.
- 15ನೀನಾದರೋ ಸಮಾಧಾನದಿಂದ ನಿನ್ನ ತಂದೆಗಳ ಬಳಿಗೆ ಹೋಗುವಿ; ಬಹಳ ಮುದಿಪ್ರಾಯದವನಾಗಿ (ಮೃತಿ ಹೊಂದಿ) ಹೂಣಲ್ಪಡುವಿ.
- 16ಆದರೆ ನಾಲ್ಕನೆಯ ಸಂತಾನದಲ್ಲಿ ಅವರು ತಿರಿಗಿ ಬರುವರು; ಅಮೋರಿಯರ ದುಷ್ಟತನವು ಇನ್ನೂ ಪೂರ್ತಿಯಾಗಲಿಲ್ಲ ಎಂದು ಹೇಳಿದನು.
Cross references
- Nehemiah 9:9–11 ನೆಹೆಮೀಯ 9:9–11ಇದಲ್ಲದೆ ಐಗುಪ್ತದಲ್ಲಿ ನಮ್ಮ ಪಿತೃಗಳ ದೀನ ಸ್ಥಿತಿಯನ್ನು ನೋಡಿದಿ; ಕೆಂಪುಸಮುದ್ರದ ಬಳಿಯಲ್ಲಿ ಅವರ ಕೂಗನ್ನು ಕೇಳಿದಿ. ಫರೋಹನ ಮೇಲೆಯೂ ಅವನ ಸಮಸ್ತ ಸೇವಕರ ಮೇಲೆಯೂ ಅವನ ಸಮಸ್ತ ದೇಶದ ಜನರ ಮೇಲೆಯೂ ಸೂಚ ಕಕಾರ್ಯಗಳನ್ನೂ ಅದ್ಭುತಗಳನ್ನೂ ತೋರಿಸಿದಿ. ಯಾಕಂದರೆ ಇವರು ಅವರಿಗೆ ಅಹಂಕಾರಿಗಳಾಗಿ ನಡೆದರೆಂದು ತಿಳಿದಿದ್ದಿ. ಈ ಪ್ರಕಾರವೇ ನೀನು ಇಂದಿನ ಹಾಗೆ ನಿನಗೆ ಹೆಸರನ್ನು ಮಾಡಿಕೊಂಡಿದ್ದೀ. ನೀನು ಅವರ ಮುಂದೆ ಸಮುದ್ರವನ್ನು ವಿಭಾಗಿಸಿದ್ದರಿಂದ ಅವರು ಸಮುದ್ರದ ಮಧ್ಯದಲ್ಲಿ ಒಣ ಭೂಮಿಯಲ್ಲಿ ಹಾದುಹೋದರು. ಆದರೆ ಅವರನ್ನು ಹಿಂದಟ್ಟಿದವರನ್ನು ಅಗಾಧಗಳಲ್ಲಿ ಕಲ್ಲಿನ ಹಾಗೆ ಮಹಾ ಜಲರಾಶಿಗಳಲ್ಲಿ ದೊಬ್ಬಿ ಬಿಟ್ಟಿ.
- Exodus 6:5–6 ವಿಮೋಚನಕಾಂಡ 6:5–6ಐಗುಪ್ತ್ಯರು ದಾಸರ ನ್ನಾಗಿ ಇಟ್ಟುಕೊಂಡಿರುವ ಇಸ್ರಾಯೇಲ್ ಮಕ್ಕಳ ಮೂಲುಗುವಿಕೆಯನ್ನು ಕೇಳಿ ನನ್ನ ಒಡಂಬಡಿಕೆಯನ್ನು ನೆನಪಿಗೆ ತಂದುಕೊಂಡೆನು. ಆದದರಿಂದ ಇಸ್ರಾ ಯೇಲ್ ಮಕ್ಕಳಿಗೆ--ನಾನೇ ಕರ್ತನು, ನಾನು ನಿಮ್ಮನ್ನು ಐಗುಪ್ತದ ಬಿಟ್ಟೀಕೆಲಸಗಳಿಂದ ಹೊರಗೆ ಬರಮಾಡಿ ಅವರ ದಾಸತ್ವದಿಂದ ನಿಮ್ಮನ್ನು ಬಿಡಿಸಿ ನಾನು ಚಾಚಿದ ಬಾಹುವಿನಿಂದಲೂ ದೊಡ್ಡ ನ್ಯಾಯತೀರ್ಪುಗ ಳಿಂದಲೂ
- Exodus 12:32–38 ವಿಮೋಚನಕಾಂಡ 12:32–38ನೀವು ಹೇಳಿದಂತೆ ನಿಮ್ಮ ಕುರಿದನಗಳನ್ನು ತೆಗೆದುಕೊಳ್ಳಿರಿ. ನನ್ನನ್ನು ಸಹ ಆಶೀರ್ವದಿಸಿರಿ ಅಂದನು. ಇದಲ್ಲದೆ ಐಗುಪ್ತ್ಯರು--ನಾವೆಲ್ಲರೂ ಸಾಯುತ್ತೇವೆಂದು ಹೇಳಿ ಅವರನ್ನು ತ್ವರೆಯಾಗಿ ದೇಶದೊಳಗಿಂದ ಕಳುಹಿಸಿ ಬಿಡುವ ಹಾಗೆ ಜನರನ್ನು ಒತ್ತಾಯ ಮಾಡಿದರು. ಆದದರಿಂದ ಜನರು ಹಿಟ್ಟಿಗೆ ಹುಳಿ ಹಾಕುವದಕ್ಕಿಂತ ಮುಂಚೆ ಅದನ್ನು ಅಡಿಗೆ ಮಾಡುವ ಪಾತ್ರೆಗಳ ಸಂಗಡ ಬಟ್ಟೆಗಳಲ್ಲಿ ಕಟ್ಟಿ ಹೆಗಲಿನ ಮೇಲೆ ಹೊತ್ತುಕೊಂಡು ಹೋದರು. ಮೋಶೆಯು ಹೇಳಿದಂತೆ ಇಸ್ರಾ ಯೇಲ್ ಮಕ್ಕಳು ಮಾಡಿ ಬೆಳ್ಳಿ ಬಂಗಾರದ ಒಡವೆಗಳನ್ನೂ ವಸ್ತ್ರಗಳನ್ನೂ ಐಗುಪ್ತ್ಯರಿಂದ ಕೇಳಿ ಪಡೆದರು. ಕರ್ತನು ಐಗುಪ್ತ್ಯರ ಎದುರಿನಲ್ಲಿ ಜನರ ಮೇಲೆ ಕೃಪೆ ತೋರಿಸಿದ್ದರಿಂದ ಅವರು ಕೇಳಿದ್ದನ್ನು ಕೊಟ್ಟರು. ಹೀಗೆ ಅವರು ಐಗುಪ್ತ್ಯರನ್ನು ಸುಲು ಕೊಂಡರು. ಆಗ ಇಸ್ರಾಯೇಲ್ಯರಲ್ಲಿ ಮಕ್ಕಳಲ್ಲದೆ ಗಂಡಸರು ಮಾತ್ರ ಆರು ಲಕ್ಷ ಕಾಲು ನಡಿಗೆಯಾಗಿ ರಮ್ಸೇಸನ್ನು ಬಿಟ್ಟು ಸುಕ್ಕೋತಿಗೆ ಪ್ರಯಾಣ ಮಾಡಿದರು. ಬೆರೆತಿದ್ದ ಜನಸಮೂಹವೂ ಕುರಿದನಗಳ ಬಹು ದೊಡ್ಡ ಹಿಂಡೂ ಅವರ ಸಂಗಡ ಹೋದವು.
- Joshua 24:4–7 ಯೆಹೋಶುವ 24:4–7ಅವನಿಗೆ ಇಸಾಕನನ್ನು ಕೊಟ್ಟೆನು; ಇಸಾಕನಿಗೆ ಯಾಕೋಬನನ್ನೂ ಏಸಾವನನ್ನೂ ಕೊಟ್ಟು ಏಸಾವನಿಗೆ ಸೇಯಾರ್ ಪರ್ವತದ ದೇಶವನ್ನು ಸ್ವಾಸ್ತ್ಯವಾಗಿ ಕೊಟ್ಟೆನು. ಆದರೆ ಯಾಕೋಬನೂ ಅವನ ಮಕ್ಕಳೂ ಐಗುಪ್ತಕ್ಕೆ ಹೋದರು. ನಾನು ಮೋಶೆಯನ್ನೂ ಆರೋನನನ್ನೂ ಕಳುಹಿಸಿ ಅವರ ಮಧ್ಯದಲ್ಲಿ ನಾನು ಮಾಡಿದವುಗಳ ಪ್ರಕಾರ ಐಗುಪ್ತವನ್ನು ಬಾಧಿಸಿದ ತರುವಾಯ ನಿಮ್ಮನ್ನು ಹೊರಗೆ ತಂದೆನು. ನಾನು ನಿಮ್ಮ ತಂದೆಗಳನ್ನು ಐಗುಪ್ತದಿಂದ ಹೊರಡಿಸಿದಾಗ ನೀವು ಸಮುದ್ರದ ತೀರಕ್ಕೆ ಬಂದಿರಿ. ಆದರೆ ಐಗುಪ್ತ್ಯರು ರಥಗಳ ಸಂಗಡಲೂ ರಾಹುತರ ಸಂಗಡಲೂ ನಿಮ್ಮ ಪಿತೃಗಳನ್ನು ಕೆಂಪು ಸಮುದ್ರದ ವರೆಗೂ ಹಿಂದಟ್ಟಿದರು. ಅವರು ಕರ್ತನಿಗೆ ಕೂಗಿದಾಗ ನಿಮಗೂ ಐಗುಪ್ತ್ಯರಿಗೂ ಮಧ್ಯದಲ್ಲಿ ಅಂಧಕಾರವನ್ನು ಇರಿಸಿ ಸಮುದ್ರವನ್ನು ಅವರ ಮೇಲೆ ಬರಮಾಡಿ ಅವರನ್ನು ಮುಚ್ಚಿಬಿಟ್ಟೆನು.
- 1 Samuel 12:8 1 ಸಮುವೇಲನು 12:8ಯಾಕೋಬನು ಐಗುಪ್ತಕ್ಕೆ ಬಂದ ತರುವಾಯ ನಿಮ್ಮ ತಂದೆಗಳು ಕರ್ತ ನಿಗೆ ಮೊರೆಯಿಟ್ಟರು. ಆಗ ಕರ್ತನು ಮೋಶೆಯನ್ನೂ ಆರೋನನನ್ನೂ ಕಳುಹಿಸಿದನು. ಇವರು ನಿಮ್ಮ ತಂದೆ ಗಳನ್ನು ಐಗುಪ್ತದಿಂದ ಕರತಂದು ಅವರನ್ನು ಈ ದೇಶ ದಲ್ಲಿ ವಾಸಿಸುವಂತೆ ಮಾಡಿದನು.
- Exodus 7:1–14 ವಿಮೋಚನಕಾಂಡ 7:1–14ಆಗ ಕರ್ತನು ಮೋಶೆಗೆ--ಇಗೋ, ನಿನ್ನನ್ನು ಫರೋಹನಿಗೆ ದೇವರಂತೆ ಮಾಡಿದ್ದೇನೆ; ನಿನ್ನ ಸಹೋದರನಾದ ಆರೋನನ್ನು ನಿನ್ನಗೋಸ್ಕರ ಪ್ರವಾದಿಯನ್ನಾಗಿ ಮಾಡಿದ್ದೇನೆ. ನಾನು ನಿನಗೆ ಆಜ್ಞಾಪಿಸುವದನ್ನೆಲ್ಲಾ ನೀನು ಮಾತನಾಡಬೇಕು; ಇಸ್ರಾಯೇಲ್ ಮಕ್ಕಳನ್ನು ತನ್ನ ದೇಶದೊಳಗಿಂದ ಕಳುಹಿಸಿ ಬಿಡುವ ಹಾಗೆ ನಿನ್ನ ಸಹೋದರನಾದ ಆರೋನನು ಫರೋಹನ ಸಂಗಡ ಮಾತನಾಡಬೇಕು. ಆದರೆ ನಾನು ಫರೋಹನ ಹೃದಯವನ್ನು ಕಠಿಣಪಡಿಸಿ ನನ್ನ ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಐಗುಪ್ತದೇಶದಲ್ಲಿ ಹೆಚ್ಚಿಸುವೆನು. ಆದರೆ ಫರೋಹನು ನಿಮ್ಮ ಮಾತನ್ನು ಕೇಳುವದಿಲ್ಲ; ಆದಾಗ್ಯೂ ನನ್ನ ಕೈಯನ್ನು ಐಗುಪ್ತದ ಮೇಲೆ ಇಟ್ಟು ದೊಡ್ಡ ನ್ಯಾಯತೀರ್ಪು ಗಳಿಂದ ನನ್ನ ಜನರಾದ ಇಸ್ರಾಯೇಲ್ ಸೈನ್ಯವನ್ನೆಲ್ಲಾ ಐಗುಪ್ತದೇಶದೊಳಗಿಂದ ಹೊರಗೆ ಬರಮಾಡುವೆನು. ನಾನು ಐಗುಪ್ತದ ಮೇಲೆ ನನ್ನ ಕೈಯನ್ನಿಟ್ಟು ಅವರೊಳ ಗಿಂದ ಇಸ್ರಾಯೇಲ್ ಮಕ್ಕಳನ್ನು ಹೊರಗೆ ಬರಮಾಡಿ ದಾಗ ನಾನೇ ಕರ್ತನೆಂದು ಐಗುಪ್ತ್ಯರಿಗೆ ತಿಳಿದು ಬರುವದು ಎಂದು ಹೇಳಿದನು. ಕರ್ತನು ತಮಗೆ ಆಜ್ಞಾಪಿಸಿದ ಪ್ರಕಾರವೆ ಮೋಶೆ ಆರೋನರು ಮಾಡಿದರು, ಅಂತಯೇ ಅವರು ಮಾಡಿ ದರು. ಅವರು ಫರೋಹನ ಮುಂದೆ ಮಾತನಾಡು ವಾಗ ಮೋಶೆಯು ಎಂಭತ್ತು ವರುಷದವನಾಗಿದ್ದನು, ಆರೋನನು ಎಂಭತ್ತುಮೂರು ವರುಷದವನಾಗಿದ್ದನು. ಆಗ ಕರ್ತನು ಮೋಶೆ ಆರೋನರ ಸಂಗಡ ಮಾತನಾಡಿ-- ಫರೋಹನು ನಿಮಗೆ--ನೀವು ಒಂದು ಅದ್ಭುತಕಾರ್ಯವನ್ನು ತೋರಿಸಿರೆಂದು ಹೇಳುವಾಗ ಮೋಶೆ ಆರೋನನಿಗೆ--ನಿನ್ನ ಕೋಲನ್ನು ತಕ್ಕೊಂಡು ಫರೋಹನ ಮುಂದೆ ಬಿಸಾಡು ಎಂದು ಹೇಳಬೇಕು; ಆಗ ಅದು ಸರ್ಪವಾಗುವದು ಎಂದು ಹೇಳಿದನು. ಮೋಶೆ ಆರೋನರೂ ಫರೋಹನ ಬಳಿಗೆ ಹೋಗಿ ಕರ್ತನು ತಮಗೆ ಆಜ್ಞಾಪಿಸಿದಂತೆಯೇ ಮಾಡಿದರು. ಆರೋನನು ತನ್ನ ಕೋಲನ್ನು ಫರೋಹನ ಮುಂದೆಯೂ ಅವನ ಸೇವಕರ ಮುಂದೆಯೂ ಬಿಸಾಡಿ ದಾಗ ಅದು ಸರ್ಪವಾಯಿತು. ಫರೋಹನು ಸಹ ಜ್ಞಾನಿಗಳನ್ನೂ ಮಂತ್ರವಾದಿಗಳನ್ನೂ ಕರಿಸಿದಾಗ ಐಗುಪ್ತದ ಮಂತ್ರಗಾರರು ಸಹ ತಮ್ಮ ಮಂತ್ರಗಳಿಂದ ಹಾಗೆಯೇ ಮಾಡಿದರು. ಅವರು ತಮ್ಮತಮ್ಮ ಕೋಲುಗಳನ್ನು ಬಿಸಾಡಿದಾಗ ಅವು ಸರ್ಪಗಳಾದವು. ಆದರೆ ಆರೋನನ ಕೋಲು ಅವರ ಕೋಲುಗಳನ್ನು ನುಂಗಿಬಿಟ್ಟಿತು. ಕರ್ತನು ಹೇಳಿದಂತೆಯೇ ಫರೋಹನ ಹೃದಯವು ಆಗ ಕಠಿಣವಾಯಿತು; ಅವನು ಅವರ ಮಾತನ್ನು ಕೇಳಲಿಲ್ಲ. ಆಗ ಕರ್ತನು ಮೋಶೆಗೆ--ಫರೋಹನ ಹೃದಯವು ಕಠಿಣವಾಯಿತು. ಅವನು ಜನರನ್ನು ಕಳುಹಿಸಿಬಿಡುವದಕ್ಕೆ ನಿರಾಕರಿಸಿದನು.
- Psalm 135:14 ಕೀರ್ತನೆಗಳು 135:14ಕರ್ತನು ತನ್ನ ಜನರಿಗೆ ನ್ಯಾಯತೀರಿಸಿ ತನ್ನ ಸೇವಕರನ್ನು ಕನಿಕರಿಸುವನು.
- Deuteronomy 4:20 ಧರ್ಮೋಪದೇಶಕಾಂಡ 4:20ನಿಮ್ಮನ್ನೇ ಕರ್ತನು ತಕ್ಕೊಂಡು ನೀವು ಈ ದಿನ ಇರುವ ಪ್ರಕಾರ ತನಗೆ ಸ್ವಾಸ್ತ್ಯವಾದ ಜನವಾಗುವ ಹಾಗೆ ಕಬ್ಬಿಣದ ಕುಲುಮೆಯೊಳಗಿಂದ ಅಂದರೆ ಐಗುಪ್ತದಿಂದ ಹೊರಗೆ ಬರಮಾಡಿದ್ದಾನೆ.
- Deuteronomy 6:22 ಧರ್ಮೋಪದೇಶಕಾಂಡ 6:22ಕರ್ತನು ನಮ್ಮ ಕಣ್ಣುಗಳ ಮುಂದೆ ಐಗುಪ್ತದಲ್ಲಿ ಫರೋಹನ ಮೇಲೆಯೂ ಅವನ ಎಲ್ಲಾ ಮನೆಯವರ ಮೇಲೆಯೂ ಬಹು ಕಠಿಣವಾದ ಬಾಧೆಗಳಿಂದ ಅದ್ಭುತ ಗಳನ್ನೂ ಸೂಚನೆಗಳನ್ನೂ ತೋರಿಸಿದನು.
- Deuteronomy 7:18–19 ಧರ್ಮೋಪದೇಶಕಾಂಡ 7:18–19ನೀನು ಅವರಿಗೆ ಭಯಪಡಬೇಡ; ನಿನ್ನ ದೇವರಾದ ಕರ್ತನು ಫರೋಹನಿಗೂ ಎಲ್ಲಾ ಐಗುಪ್ತಕ್ಕೂ ಮಾಡಿದ್ದನು ನಿನ್ನ ಕಣ್ಣುಗಳು ನೋಡಿದ ದೊಡ್ಡ ಉಪದ್ರವ ಗಳನ್ನೂ ನಿನ್ನ ದೇವರಾದ ಕರ್ತನು ನಿನ್ನನ್ನು ಹೊರಗೆ ಬರಮಾಡಿದಾಗ ಉಂಟಾದ ಗುರುತುಗಳನ್ನೂ ಅದ್ಭುತ ಗಳನ್ನೂ ಬಲವಾದ ಕೈಯನ್ನೂ ಚಾಚಿದ ತೋಳನ್ನೂ ನೀನು ಚೆನ್ನಾಗಿ ಜ್ಞಾಪಕಮಾಡಿಕೊಳ್ಳಬೇಕು. ನೀನು ಯಾವ ಜನಗಳಿಗೆ ಭಯಪಡುತ್ತೀಯೋ ಆ ಜನಗಳಿ ಗೆಲ್ಲಾ ನಿನ್ನ ಕರ್ತನಾದ ದೇವರು ಹಾಗೆಯೇ ಮಾಡು ವನು.
- Joshua 24:17 ಯೆಹೋಶುವ 24:17ನಮ್ಮ ದೇವ ರಾದ ಕರ್ತನು ತಾನೇ ನಮ್ಮನ್ನೂ ನಮ್ಮ ತಂದೆಗಳನ್ನೂ ದಾಸತ್ವದ ಮನೆಯಾದ ಐಗುಪ್ತದೇಶದಿಂದ ಬರಮಾಡಿ ದ್ದಾನೆ. ನಮ್ಮ ಕಣ್ಣುಗಳ ಮುಂದೆ ಆ ದೊಡ್ಡ ಅದ್ಭುತ ಗಳನ್ನು ಮಾಡಿ ನಾವು ನಡೆದ ಎಲ್ಲಾ ಮಾರ್ಗಗಳ ಲ್ಲಿಯೂ ನಾವು ಅವರ ಮಧ್ಯದಲ್ಲಿ ಹಾದು ಬಂದ ಎಲ್ಲಾ ಜನಗಳಲ್ಲಿಯೂ ನಮ್ಮನ್ನು ಕಾಪಾಡಿದಾತನು.
- Psalm 105:27–37 ಕೀರ್ತನೆಗಳು 105:27–37ಇವರು ಆತನ ಗುರುತುಗಳನ್ನೂ ಹಾಮನ ದೇಶದಲ್ಲಿ ಅದ್ಭುತಗಳನ್ನೂ ಅವರೊಳಗೆ ತೋರಿಸಿದರು. ಆತನು ಕತ್ತಲನ್ನು ಕಳುಹಿಸಿ ಅದನ್ನು ಕತ್ತಲಾಗ ಮಾಡಿದನು; ಆಗ ಆತನ ಮಾತಿಗೆ ಅವರು ಎದು ರಾಡಲಿಲ್ಲ. ಅವರ ನೀರನ್ನು ರಕ್ತವಾಗಿ ಮಾರ್ಪ ಡಿಸಿ; ವಿಾನುಗಳನ್ನು ಸಾಯಿಸಿದನು. ಅವರ ದೇಶದಲೆಲ್ಲಾ ಬಹಳವಾಗಿ ಕಪ್ಪೆಗಳು ತುಂಬಿ ಕೊಂಡವು. ಅರಸುಗಳ ಕೊಠಡಿಗಳಲ್ಲಿ ಸಹ ಬಂದವು. ಆತನು ಹೇಳಲು ನೊಣದ ಗುಂಪುಗಳೂ ಅವರ ಮೇರೆಗಳಲ್ಲೆಲ್ಲಾ ಹೇನುಗಳೂ ಬಂದವು. ಅವರ ಮಳೆಗಾಗಿ ಕಲ್ಮಳೆಯನ್ನೂ ಅಗ್ನಿಜ್ವಾಲೆಗಳನ್ನೂ ದೇಶದಲ್ಲಿ ಬರಮಾಡಿದನು. ಅವರ ದ್ರಾಕ್ಷೇ ಬಳ್ಳಿಯನ್ನೂ ಅಂಜೂರದ ಗಿಡಗಳನ್ನೂ ಹೊಡೆದು ಮೇರೆಗಳ ಮರ ಗಳನ್ನು ಮುರಿದನು. ಆತನು ಹೇಳಲು ಮಿಡಿತೆಗಳೂ ಲೆಕ್ಕವಿಲ್ಲದ ಕಂಬಳಿ ಹುಳಗಳೂ ಬಂದವು, ಅವು ಅವರ ದೇಶದಲ್ಲಿ ಎಲ್ಲಾ ಪಲ್ಯಗಳನ್ನು ನುಂಗಿಬಿಟ್ಟು; ಭೂಮಿಯ ಫಲಗಳನ್ನು ತಿಂದುಬಿಟ್ಟವು. ಅವರ ದೇಶದಲ್ಲಿಯ ಎಲ್ಲಾ ಚೊಚ್ಚಲುಗಳನ್ನೂ ಬಲವುಳ್ಳ ಎಲ್ಲಾ ಪ್ರಮುಖರನ್ನೂ ಹೊಡೆದನು. ಆತನು ಬೆಳ್ಳಿ ಬಂಗಾರಗಳ ಸಂಗಡ ಅವರನ್ನು ಹೊರಗೆ ಬರಮಾಡಿ ದನು; ಅವರ ಗೋತ್ರಗಳಲ್ಲಿ ಬಲಹೀನನು ಒಬ್ಬನೂ ಇರಲಿಲ್ಲ.