Joshua · chapter 24 · verse 4
Joshua 24:4 in Kannada
ಅವನಿಗೆ ಇಸಾಕನನ್ನು ಕೊಟ್ಟೆನು; ಇಸಾಕನಿಗೆ ಯಾಕೋಬನನ್ನೂ ಏಸಾವನನ್ನೂ ಕೊಟ್ಟು ಏಸಾವನಿಗೆ ಸೇಯಾರ್ ಪರ್ವತದ ದೇಶವನ್ನು ಸ್ವಾಸ್ತ್ಯವಾಗಿ ಕೊಟ್ಟೆನು. ಆದರೆ ಯಾಕೋಬನೂ ಅವನ ಮಕ್ಕಳೂ ಐಗುಪ್ತಕ್ಕೆ ಹೋದರು.
Avanige isaakanannu kottenu; isaakanige yaakobanannoo esaavanannoo kottu esaavanige seyaar parvatada deshavannu svaastyavaagi kottenu. Aadare yaakobanoo avana makkaloo aiguptakke hodaru.
Joshua 24:4 in English
- King James Version (KJV)
- And I gave unto Isaac Jacob and Esau: and I gave unto Esau mount Seir, to possess it; but Jacob and his children went down into Egypt.
- World English Bible (WEB)
- I gave to Isaac Jacob and Esau: and I gave to Esau Mount Seir, to possess it. Jacob and his children went down into Egypt.
- American Standard Version (ASV)
- And I gave unto Isaac Jacob and Esau: and I gave unto Esau mount Seir, to possess it; and Jacob and his children went down into Egypt.
- Bible in Basic English (BBE)
- And to Isaac I gave Jacob and Esau: to Esau I gave Mount Seir, as his heritage; but Jacob and his children went down to Egypt.
- Darby Translation (DBY)
- And I gave unto Isaac Jacob and Esau; and I gave unto Esau mount Seir, to possess it; and Jacob and his sons went down into Egypt.
- Webster's Bible (WBS)
- And I gave to Isaac Jacob and Esau: and I gave to Esau mount Seir, to possess it; but Jacob and his children went down into Egypt.
- Young's Literal Translation (YLT)
- And I give to Isaac, Jacob and Esau; and I give to Esau mount Seir, to possess it; and Jacob and his sons have gone down to Egypt.
Read in context
- 2ಯೆಹೋಶುವನು ಎಲ್ಲಾ ಜನರಿಗೆ--ಇಸ್ರಾಯೇಲಿನ ದೇವರಾದ ಕರ್ತನು ಹೇಳುವದೇನಂದರೆ--ಪೂರ್ವ ದಲ್ಲಿ ನಿಮ್ಮ ತಂದೆಗಳು, ಅಬ್ರಹಾಮನೂ ನಾಹೋ ರನೂ ಅವರ ತಂದೆಯಾದ ತೆರಹನೂ ನದಿಯ ಆಚೆ ವಾಸವಾಗಿದ್ದು ಅನ್ಯದೇವರುಗಳನ್ನು ಆರಾಧಿಸುತ್ತಿದ್ದರು.
- 3ಆದರೆ ನಾನು ನದಿಯ ಆಚೆಯಲ್ಲಿದ್ದ ನಿಮ್ಮ ತಂದೆಯಾದ ಅಬ್ರಹಾಮನನ್ನು ತಕ್ಕೊಂಡು ಬಂದು ಅವನನ್ನು ಕಾನಾನ್ ದೇಶವನ್ನೆಲ್ಲಾ ಸಂಚಾರ ಮಾಡಿಸಿ ಅವನ ಸಂತಾನವನ್ನು ಅಭಿವೃದ್ಧಿ ಮಾಡಿದೆನು;
- 4ಅವನಿಗೆ ಇಸಾಕನನ್ನು ಕೊಟ್ಟೆನು; ಇಸಾಕನಿಗೆ ಯಾಕೋಬನನ್ನೂ ಏಸಾವನನ್ನೂ ಕೊಟ್ಟು ಏಸಾವನಿಗೆ ಸೇಯಾರ್ ಪರ್ವತದ ದೇಶವನ್ನು ಸ್ವಾಸ್ತ್ಯವಾಗಿ ಕೊಟ್ಟೆನು. ಆದರೆ ಯಾಕೋಬನೂ ಅವನ ಮಕ್ಕಳೂ ಐಗುಪ್ತಕ್ಕೆ ಹೋದರು.
- 5ನಾನು ಮೋಶೆಯನ್ನೂ ಆರೋನನನ್ನೂ ಕಳುಹಿಸಿ ಅವರ ಮಧ್ಯದಲ್ಲಿ ನಾನು ಮಾಡಿದವುಗಳ ಪ್ರಕಾರ ಐಗುಪ್ತವನ್ನು ಬಾಧಿಸಿದ ತರುವಾಯ ನಿಮ್ಮನ್ನು ಹೊರಗೆ ತಂದೆನು.
- 6ನಾನು ನಿಮ್ಮ ತಂದೆಗಳನ್ನು ಐಗುಪ್ತದಿಂದ ಹೊರಡಿಸಿದಾಗ ನೀವು ಸಮುದ್ರದ ತೀರಕ್ಕೆ ಬಂದಿರಿ. ಆದರೆ ಐಗುಪ್ತ್ಯರು ರಥಗಳ ಸಂಗಡಲೂ ರಾಹುತರ ಸಂಗಡಲೂ ನಿಮ್ಮ ಪಿತೃಗಳನ್ನು ಕೆಂಪು ಸಮುದ್ರದ ವರೆಗೂ ಹಿಂದಟ್ಟಿದರು.
Cross references
- Deuteronomy 2:5 ಧರ್ಮೋಪದೇಶಕಾಂಡ 2:5ಅವರ ಸಂಗಡ ಜಗಳವಾಡಬೇಡಿರಿ. ನಾನು ನಿಮಗೆ ಅವರ ದೇಶದಲ್ಲಿ ಪಾದದಷ್ಟೂ ಸ್ಥಳ ಕೊಡುವದಿಲ್ಲ; ಸೇಯಾರ್ ಬೆಟ್ಟವನ್ನು ಏಸಾವನಿಗೆ ಸ್ವಾಸ್ತ್ಯವಾಗಿ ಕೊಟ್ಟೆನಲ್ಲಾ.
- Genesis 36:8 ಆದಿಕಾಂಡ 36:8ಹೀಗೆ ಏಸಾವನು ಸೇಯಾರ್ ಪರ್ವತದಲ್ಲಿ ವಾಸವಾಗಿದ್ದನು. ಏಸಾವನೇ ಎದೋಮನು.
- Acts 7:15 ಅಪೊಸ್ತಲರ ಕೃತ್ಯಗಳು 7:15ಹೀಗೆ ಯಾಕೋಬನು ಐಗುಪ್ತ ದೇಶಕ್ಕೆ ಇಳಿದು ಹೋದನು. ಅಲ್ಲಿ ಅವನೂ ನಮ್ಮ ಪಿತೃಗಳೂ ಮೃತಿಹೊಂದಿದರು.
- Genesis 25:24–26 ಆದಿಕಾಂಡ 25:24–26ಆಕೆಯು ಹೆರುವದಕ್ಕೆ ದಿನಗಳು ಪೂರ್ತಿಯಾ ದಾಗ ಇಗೋ, ಆಕೆಯ ಗರ್ಭದಲ್ಲಿ ಅವಳಿ ಮಕ್ಕಳಿದ್ದರು. ಮೊದಲನೆಯವನು ಕೆಂಪಾಗಿಯೂ ಕೂದಲೆಲ್ಲಾ ವಸ್ತ್ರದಂತೆ ಇರುವವನಾಗಿಯೂ ಹೊರ ಬಂದಾಗ ಅವನಿಗೆ ಏಸಾವ ಎಂದು ಹೆಸರಿಟ್ಟರು. ತರುವಾಯ ಅವನ ತಮ್ಮನು ಏಸಾವನ ಹಿಮ್ಮಡಿಯನ್ನು ಕೈಯಿಂದ ಹಿಡುಕೊಂಡು ಹೊರಗೆ ಬಂದನು. ಅವನಿಗೆ ಯಾಕೋಬ ಎಂದು ಹೆಸರಿಟ್ಟರು. ಆಕೆಯು ಇವರನ್ನು ಹೆತ್ತಾಗ ಇಸಾಕನು ಅರುವತ್ತು ವರುಷದವನಾಗಿದ್ದನು.
- Psalm 105:23 ಕೀರ್ತನೆಗಳು 105:23ಆಗ ಇಸ್ರಾಯೇಲನು ಐಗುಪ್ತಕ್ಕೆ ಬಂದನು; ಯಾಕೋಬನು ಹಾಮನ ದೇಶದಲ್ಲಿ ಪರದೇಶಸ್ಥನಾಗಿದ್ದನು.
- Genesis 32:3 ಆದಿಕಾಂಡ 32:3ಯಾಕೋಬನು ಎದೋಮ್ಯರ ದೇಶವಾದ ಸೇಯಾರಿನ ಸೀಮೆಯಲ್ಲಿರುವ ತನ್ನ ಸಹೋದರನಾದ ಏಸಾವನ ಬಳಿಗೆ ದೂತರನ್ನು ತನ್ನ ಮುಂದಾಗಿ ಕಳುಹಿಸಿದನು.
- Genesis 46:1–7 ಆದಿಕಾಂಡ 46:1–7ಇಸ್ರಾಯೇಲನು ತನಗಿದ್ದದ್ದನ್ನೆಲ್ಲಾ ತಕ್ಕೊಂಡು ಬೇರ್ಷೆಬಕ್ಕೆ ಬಂದು ತನ್ನ ತಂದೆಯಾದ ಇಸಾಕನ ದೇವರಿಗೆ ಬಲಿಗಳನ್ನು ಅರ್ಪಿಸಿ ದನು. ದೇವರು ಇಸ್ರಾಯೇಲನಿಗೆ ರಾತ್ರಿ ದರ್ಶನ ದಲ್ಲಿ ಮಾತನಾಡಿ--ಯಾಕೋಬನೇ, ಯಾಕೋಬನೇ ಅಂದನು. ಅದಕ್ಕವನು--ಇಗೋ, ಇದ್ದೇನೆ ಅಂದನು. ಆತನು ಅವನಿಗೆ--ನಿನ್ನ ತಂದೆಯ ದೇವರಾಗಿರುವ ದೇವರು ನಾನೇ. ನೀನು ಐಗುಪ್ತಕ್ಕೆ ಇಳಿದು ಹೋಗು ವದಕ್ಕೆ ಭಯಪಡಬೇಡ; ಯಾಕಂದರೆ ಅಲ್ಲಿ ನಾನು ನಿನ್ನನ್ನು ದೊಡ್ಡಜನಾಂಗವಾಗ ಮಾಡುವೆನು. ನಾನು ನಿನ್ನ ಸಂಗಡ ಐಗುಪ್ತಕ್ಕೆ ಹೋಗುವೆನು. ನಾನೇ ನಿಶ್ಚಯವಾಗಿ ನಿನ್ನನ್ನು ಮೇಲಕ್ಕೆ (ಕಾನಾನಿಗೆ) ತಿರಿಗಿ ಬರಮಾಡುವೆನು. ಯೋಸೇಫನು ನಿನ್ನ ಕಣ್ಣುಗಳ ಮೇಲೆ ತನ್ನ ಕೈ ಇಡುವನು ಅಂದನು. ಆಗ ಯಾಕೋಬನು ಎದ್ದು ಬೇರ್ಷೆಬದಿಂದ ಹೊರಟನು. ಇಸ್ರಾಯೇಲನ ಮಕ್ಕಳು ತಮ್ಮ ತಂದೆಯಾದ ಯಾಕೋಬನನ್ನೂ ತಮ್ಮ ಚಿಕ್ಕವರನ್ನೂ ತಮ್ಮ ಹೆಂಡತಿಯರನ್ನೂ ಫರೋಹನು ಕಳುಹಿಸಿದ ಬಂಡಿಗಳ ಮೇಲೆ ಏರಿಸಿಕೊಂಡು ಹೋದರು. ಅವರು ತಮ್ಮ ದನಗಳನ್ನೂ ಕಾನಾನ್ ದೇಶದಲ್ಲಿ ತಾವು ಸಂಪಾದಿಸಿದ ತಮ್ಮ ಸಂಪತ್ತನ್ನೂ ತಕ್ಕೊಂಡು ಐಗುಪ್ತಕ್ಕೆ ಬಂದರು. ಯಾಕೋಬನು ತನ್ನ ಎಲ್ಲಾ ಸಂತತಿಯೊಂದಿಗೆ ಬಂದನು. ತನ್ನ ಕುಮಾರ ರನ್ನೂ ಕುಮಾರರ ಕುಮಾರರನ್ನೂ ಕುಮಾರ್ತೆಯರನ್ನೂ ಕುಮಾರರ ಕುಮಾರ್ತೆಯರನ್ನೂ ಅಂತೂ ತನ್ನ ಸಂತತಿ ಯನ್ನೆಲ್ಲಾ ತನ್ನೊಂದಿಗೆ ಐಗುಪ್ತಕ್ಕೆ ಕರಕೊಂಡು ಬಂದನು.
Original words (Hebrew)
- gave · H5414נָתַן nâthan
- Isaac · H3327יִצְחָק Yitschâq
- Jacob · H3290יַעֲקֹב Yaʻăqôb
- Esau · H6215עֵשָׂו ʻÊsâv
- gave · H5414נָתַן nâthan
- Esau · H6215עֵשָׂו ʻÊsâv
- mount · H2022הַר har
- Seir · H8165שֵׂעִיר Sêʻîyr
- possess · H3423יָרַשׁ yârash
- Jacob · H3290יַעֲקֹב Yaʻăqôb
- children · H1121בֵּן bên
- down · H3381יָרַד yârad
- Egypt · H4714מִצְרַיִם Mitsrayim