Genesis · chapter 17 · verse 11
Genesis 17:11 in Kannada
ನಿಮ್ಮ ಮುಂದೊಗಲಿನ ಮಾಂಸವನ್ನು ಸುನ್ನತಿಮಾಡಿಸಬೇಕು; ಅದು ನನಗೂ ನಿಮಗೂ ಮಧ್ಯೆ ಇರುವ ಒಡಂಬಡಿಕೆಗೆ ಗುರುತಾಗಿ ರುವದು.
Nimma mundogalina maansavannu sunnatimaadisabeku; adu nanagoo nimagoo madhye iruva odambadikege gurutaagi ruvadu.
Genesis 17:11 in English
- King James Version (KJV)
- And ye shall circumcise the flesh of your foreskin; and it shall be a token of the covenant betwixt me and you.
- World English Bible (WEB)
- You shall be circumcised in the flesh of your foreskin. It will be a token of the covenant between me and you.
- American Standard Version (ASV)
- And ye shall be circumcised in the flesh of your foreskin; and it shall be a token of a covenant betwixt me and you.
- Bible in Basic English (BBE)
- In the flesh of your private parts you are to undergo it, as a mark of the agreement between me and you.
- Darby Translation (DBY)
- And ye shall circumcise the flesh of your foreskin; and [that] shall be a sign of the covenant between me and you.
- Webster's Bible (WBS)
- And ye shall circumcise the flesh of your foreskin; and it shall be a token of the covenant betwixt me and you.
- Young's Literal Translation (YLT)
- and ye have circumcised the flesh of your foreskin, and it hath become a token of a covenant between Me and you.
Read in context
- 9ಇದಲ್ಲದೆ ದೇವರು ಅಬ್ರಹಾಮನಿಗೆ--ನೀನು ನಿನ್ನ ತರುವಾಯ ಬರುವ ಸಂತಾನಗಳೂ ತಲತಲಾಂತರ ಗಳಲ್ಲಿ ನನ್ನ ಒಡಂಬಡಿಕೆಯನ್ನು ಕೈಕೊಳ್ಳಬೇಕು.
- 10ನನಗೂ ನಿನಗೂ ನಿನ್ನ ತರುವಾಯ ನಿನ್ನ ಸಂತಾನಕ್ಕೂ ಮಧ್ಯದಲ್ಲಿ ನೀವು ಕೈಕೊಳ್ಳತಕ್ಕ ನನ್ನ ಒಡಂಬಡಿಕೆ ಏನಂದರೆ--ನಿಮ್ಮಲ್ಲಿರುವ ಗಂಡಸರೆಲ್ಲರಿಗೆ ಸುನ್ನತಿಯಾಗಬೇಕು.
- 11ನಿಮ್ಮ ಮುಂದೊಗಲಿನ ಮಾಂಸವನ್ನು ಸುನ್ನತಿಮಾಡಿಸಬೇಕು; ಅದು ನನಗೂ ನಿಮಗೂ ಮಧ್ಯೆ ಇರುವ ಒಡಂಬಡಿಕೆಗೆ ಗುರುತಾಗಿ ರುವದು.
- 12ನಿಮ್ಮ ವಂಶಾವಳಿಗಳಲ್ಲಿ ಪ್ರತಿಯೊಂದು ಗಂಡು ಮಗುವಿಗೆ ಎಂಟು ದಿನಗಳಾದ ಮೇಲೆ ಸುನ್ನತಿಮಾಡಿಸಬೇಕು; ಮನೆಯಲ್ಲಿ ಹುಟ್ಟಿದವನಾಗಲಿ ನಿನ್ನ ಸಂತತಿಯಲ್ಲದೆ ಪರರ ಮಕ್ಕಳನ್ನು ಹಣಕೊಟ್ಟು ಕೊಂಡುಕೊಳ್ಳಲ್ಪಟ್ಟವರಾಗಲಿ
- 13ನಿನ್ನ ಮನೆಯಲ್ಲಿ ಹುಟ್ಟಿದವನಿಗೂ ನಿನ್ನ ಹಣದಿಂದ ಕೊಂಡುಕೊಂಡ ವನಿಗೂ ಸುನ್ನತಿಮಾಡಿಸತಕ್ಕದ್ದು. ಹೀಗೆ ನನ್ನ ಒಡಂಬಡಿಕೆಯು ನಿಮ್ಮ ಶರೀರದಲ್ಲಿ ನಿತ್ಯವಾದ ಒಡಂಬಡಿಕೆಯಾಗಿರುವದು.
Cross references
- Romans 4:11 ರೋಮಾಪುರದವರಿಗೆ 4:11ಆಮೇಲೆ ನೀತಿಗೆ ಮುದ್ರೆಯಾಗಿ ಸುನ್ನತಿಯನ್ನು ಗುರುತಾಗಿ ಹೊಂದಿದನು. ಇದು ಸುನ್ನತಿಯಾಗುವದಕ್ಕೆ ಮೊದಲೇ ಅವನಿಗಿದ್ದ ನಂಬಿಕೆಯಿಂದಾಯಿತು. ಹೀಗೆ ಅವನು ನಂಬುವವರೆಲ್ಲರಿಗೆ ಅಂದರೆ ಅವರು ಸುನ್ನತಿ ಯಿಲ್ಲದವರಾದಾಗ್ಯೂ ಅವರಿಗೆ ತಂದೆಯಾದನು; ಹೀಗೆ ಅವರೂ ನೀತಿವಂತರೆಂದು ಎಣಿಸಲ್ಪಡುವರು.
- Acts 7:8 ಅಪೊಸ್ತಲರ ಕೃತ್ಯಗಳು 7:8ಇದಲ್ಲದೆ ದೇವರು ಸುನ್ನತಿ ಎಂಬ ಒಡಂಬಡಿಕೆಯನ್ನು ಅವನಿಗೆ ಕೊಟ್ಟನು. ಹೀಗೆ ಅಬ್ರಹಾಮನಿಂದ ಇಸಾ ಕನು ಹುಟ್ಟಿದಾಗ ಎಂಟನೆಯ ದಿನದಲ್ಲಿ ಅವನಿಗೆ ಸುನ್ನತಿ ಮಾಡಿದನು. ಇಸಾಕನಿಂದ ಯಾಕೋಬನು ಹುಟ್ಟಿದನು. ಯಾಕೋಬನಿಂದ ಹನ್ನೆರಡು ಮಂದಿ ಮೂಲಪಿತೃಗಳು ಹುಟ್ಟಿದರು.
- Deuteronomy 10:16 ಧರ್ಮೋಪದೇಶಕಾಂಡ 10:16ಹೀಗಿರುವದರಿಂದ ನಿಮ್ಮ ಹೃದಯದಲ್ಲೇ ಸುನ್ನತಿ ಮಾಡಿಕೊಳ್ಳಿರಿ. ಇನ್ನು ಮೇಲೆ ಬಗ್ಗದ ಕುತ್ತಿಗೆಯುಳ್ಳವ ರಾಗಿರಬೇಡಿರಿ.
- Exodus 12:48 ವಿಮೋಚನಕಾಂಡ 12:48ನಿನ್ನ ಜೊತೆ ಯಲ್ಲಿ ಪ್ರವಾಸಮಾಡಿದ ಅನ್ಯನು ಕರ್ತನಿಗೆ ಪಸ್ಕವನ್ನು ಆಚರಿಸಬೇಕೆಂದಿದ್ದರೆ ಅವನ ಗಂಡಸರೆಲ್ಲಾ ಸುನ್ನತಿ ಮಾಡಿಸಿಕೊಳ್ಳಲಿ; ತರುವಾಯ ಅವನು ಅದನ್ನು ಆಚರಿಸುವದಕ್ಕೆ ಸವಿಾಪ ಬರಲಿ; ಅಂಥವನು ಸ್ವದೇಶ ದಲ್ಲಿ ಹುಟ್ಟಿದವನಂತೆ ಇರುವನು. ಆದರೆ ಸುನ್ನತಿ ಮಾಡಿಸಿಕೊಳ್ಳದ ಒಬ್ಬನಾದರೂ ಅದನ್ನು ತಿನ್ನಬಾರದು.
- Exodus 4:25 ವಿಮೋಚನಕಾಂಡ 4:25ಆಗ ಚಿಪ್ಪೋರಳು ಹದವಾದ ಕಲ್ಲನ್ನು ತೆಗೆದುಕೊಂಡು ತನ್ನ ಮಗನಿಗೆ ಸುನ್ನತಿ ಮಾಡಿ ಅದನ್ನು ಅವನ ಕಾಲುಗಳ ಮುಂದೆ ಹಾಕಿ ಮೋಶೆಗೆ--ನಿಜವಾಗಿ ನೀನು ನನಗೆ ರಕ್ತದ ಗಂಡನು ಅಂದಳು.
- Joshua 5:3 ಯೆಹೋಶುವ 5:3ಆಗ ಯೆಹೋಶುವನು ತಾನು ಹರಿತವಾದ ಚೂರಿಗಳನ್ನು ಮಾಡಿಕೊಂಡು ಇಸ್ರಾಯೇಲ್ ಮಕ್ಕಳಿಗೆ ಸುನ್ನತಿ ಗುಡ್ಡದಲ್ಲಿ ಸುನ್ನತಿ ಮಾಡಿದನು.
- 1 Samuel 18:25–27 1 ಸಮುವೇಲನು 18:25–27ಆದರೆ ಸೌಲನು-- ದಾವೀದ ನನ್ನು ಫಿಲಿಷ್ಟಿಯರ ಕೈಯಿಂದ ಬೀಳಮಾಡಬೇಕೆಂದು ನೆನಸಿ ತನ್ನ ಸೇವಕರಿಗೆ--ನೀವು ದಾವೀದನಿಗೆ--ಅರಸನು ಯಾವ ತೆರವನ್ನೂ ಅಪೇಕ್ಷಿಸದೆ ತನ್ನ ಶತ್ರು ಗಳಿಗೆ ಮುಯ್ಯಿಗೆ ಮುಯ್ಯಿ ತೀರಿಸುವ ಹಾಗೆ ನೂರು ಮಂದಿ ಫಿಲಿಷ್ಟಿಯರ ಮುಂದೊಗಲನ್ನು ಅಪೇಕ್ಷಿಸು ತ್ತಾನೆಂದು ಹೇಳಿರಿ ಅಂದನು. ಹಾಗೆಯೇ ಅವನ ಸೇವಕರು ದಾವೀದನಿಗೆ ಈ ಮಾತುಗಳನ್ನು ತಿಳಿಸಿದಾಗ ಅರಸನಿಗೆ ಅಳಿಯನಾಗುವದು ಅವನಿಗೆ ಚೆನ್ನಾಗಿ ಕಾಣಿಸಿತು. ಆದದರಿಂದ ನೇಮಿಸಿದ ದಿವಸಗಳು ಈಡೇರುವದಕ್ಕಿಂತ ಮುಂಚೆ ಅವನು ಎದ್ದು ತನ್ನ ಜನರನ್ನು ಕರಕೊಂಡು ಹೋಗಿ ಫಿಲಿಷ್ಟಿಯರಲ್ಲಿ ಇನ್ನೂರು ಜನರನ್ನು ಕೊಂದು ಅವರ ಮುಂದೊಗ ಲುಗಳನ್ನು ತಂದು ತಾನು ಅಳಿಯನಾಗುವ ಹಾಗೆ ಅವುಗಳನ್ನು ಅರಸನಿಗೆ ಪೂರ್ಣವಾಗಿ ಒಪ್ಪಿಸಿದನು. ಆಗ ಸೌಲನು ತನ್ನ ಕುಮಾರ್ತೆಯಾದ ವಿಾಕಲಳನ್ನು ಅವನಿಗೆ ಹೆಂಡತಿಯಾಗಿ ಕೊಟ್ಟನು.
- 2 Samuel 3:14 2 ಸಮುವೇಲನು 3:14ದಾವೀದನು ಸೌಲನ ಮಗನಾದ ಈಷ್ಬೋಶೆತನ ಬಳಿಗೆ ದೂತರನ್ನು ಕಳುಹಿಸಿ--ಫಿಲಿಷ್ಟಿ ಯರ ನೂರು ಮುಂದೊಗಲುಗಳಿಂದ ನನಗೆ ನೇಮಕ ಮಾಡಿಕೊಂಡ ನನ್ನ ಹೆಂಡತಿಯಾದ ವಿಾಕಲಳನ್ನು ನನಗೆ ಒಪ್ಪಿಸು ಅಂದನು.