Genesis · chapter 17 · verse 22
Genesis 17:22 in Kannada
ಆಗ ದೇವರು ಅವನ ಸಂಗಡ ಮಾತನಾಡುವದನ್ನು ಮುಗಿಸಿ ಅಬ್ರಹಾಮನ ಬಳಿಯಿಂದ ಏರಿಹೋದನು.
Aaga devaru avana sangada maatanaaduvadannu mugisi abrahaamana baliyinda erihodanu.
Genesis 17:22 in English
- King James Version (KJV)
- And he left off talking with him, and God went up from Abraham.
- World English Bible (WEB)
- When he finished talking with him, God went up from Abraham.
- American Standard Version (ASV)
- And he left off talking with him, and God went up from Abraham.
- Bible in Basic English (BBE)
- And having said these words, God went up from Abraham.
- Darby Translation (DBY)
- And he left off talking with him; and God went up from Abraham.
- Webster's Bible (WBS)
- And he ceased talking with him, and God went up from Abraham.
- Young's Literal Translation (YLT)
- and He finisheth speaking with him, and God goeth up from Abraham.
Read in context
- 20ಇಷ್ಮಾಯೇಲನ ವಿಷಯದಲ್ಲಿ ನೀನು ಬೇಡಿದ್ದನ್ನು ಕೇಳಿದ್ದೇನೆ. ಇಗೋ, ನಾನು ಅವನನ್ನು ಆಶೀರ್ವದಿ ಸಿದೆನು. ಅವನನ್ನು ಅಭಿವೃದ್ಧಿಮಾಡಿ ಅತ್ಯಧಿಕವಾಗಿ ಹೆಚ್ಚಿಸುವೆನು. ಅವನಿಂದ ಹನ್ನೆರಡು ಪ್ರಭುಗಳು ಹುಟ್ಟುವರು. ನಾನು ಅವನನ್ನು ದೊಡ್ಡ ಜನಾಂಗವಾಗ ಮಾಡುವೆನು.
- 21ಆದರೆ ಬರುವ ವರುಷ ಈ ಕಾಲದಲ್ಲಿ ಸಾರಳು ನಿನಗೆ ಹೆರುವ ಇಸಾಕನ ಸಂಗಡ ನನ್ನ ಒಡಂಬಡಿಕೆಯನ್ನು ಸ್ಥಾಪಿಸುವೆನು ಎಂದು ಹೇಳಿದನು.
- 22ಆಗ ದೇವರು ಅವನ ಸಂಗಡ ಮಾತನಾಡುವದನ್ನು ಮುಗಿಸಿ ಅಬ್ರಹಾಮನ ಬಳಿಯಿಂದ ಏರಿಹೋದನು.
- 23ಅಬ್ರಹಾಮನು ತನ್ನ ಮಗನಾದ ಇಷ್ಮಾಯೇಲ ನನ್ನೂ ತನ್ನ ಮನೆಯಲ್ಲಿ ಹುಟ್ಟಿದವರೆಲ್ಲರನ್ನೂ ತಾನು ಹಣಕ್ಕೆ ಕೊಂಡುಕೊಂಡವರೆಲ್ಲರನ್ನೂ ಅಬ್ರಹಾಮನ ಮನೆಯಲ್ಲಿದ್ದ ಗಂಡಸರೆಲ್ಲರನ್ನೂ ದೇವರು ತನಗೆ ಹೇಳಿದ ಹಾಗೆ ಆ ದಿನವೇ ಸುನ್ನತಿಮಾಡಿಸುವದಕ್ಕೆ ತಕ್ಕೊಂಡುಹೋದನು.
- 24ಅಬ್ರಹಾಮನಿಗೆ ಸುನ್ನತಿಯಾದಾಗ ಅವನು ತೊಂಭತ್ತೊಂಭತ್ತು ವರುಷದವನಾಗಿದ್ದನು.
Cross references
- Genesis 18:33 ಆದಿಕಾಂಡ 18:33ಕರ್ತನು ಅಬ್ರಹಾಮನ ಸಂಗಡ ಮಾತನಾಡು ವದನ್ನು ಮುಗಿಸಿದ ಕೂಡಲೆ ಹೊರಟುಹೋದನು. ಅಬ್ರಹಾಮನು ತನ್ನ ಸ್ಥಳಕ್ಕೆ ತಿರುಗಿಕೊಂಡನು.
- Genesis 35:9–15 ಆದಿಕಾಂಡ 35:9–15ಯಾಕೋಬನು ಪದ್ದನ್ ಅರಾಮಿನಿಂದ ಬಂದಾಗ ದೇವರು ಅವನಿಗೆ ಇನ್ನೊಂದು ಸಾರಿ ಪ್ರತ್ಯಕ್ಷನಾಗಿ ಅವನನ್ನು ಆಶೀರ್ವದಿಸಿದನು. ದೇವರು ಅವನಿಗೆ--ಈಗ ನಿನಗೆ ಯಾಕೋಬನೆಂದು ಹೆಸರಿ ರುವದು. ಆದರೆ ಇನ್ನು ಮೇಲೆ ನೀನು ಯಾಕೋಬ ನೆಂದು ಕರೆಯಲ್ಪಡದೆ ಇಸ್ರಾಯೇಲ್ ಎಂದು ಕರೆಯಲ್ಪಡುವಿ ಎಂದು ಹೇಳಿ ಅವನಿಗೆ ಇಸ್ರಾಯೇಲ್ ಎಂದು ಹೆಸರಿಟ್ಟನು. ದೇವರು ಅವನಿಗೆ ಹೇಳಿದ್ದೇನಂದರೆ--ಸರ್ವಶಕ್ತನಾದ ದೇವರು ನಾನೇ, ನೀನು ಅಭಿವೃದ್ಧಿಯಾಗಿ ಹೆಚ್ಚಾಗು; ಜನಾಂಗವೂ ಜನಾಂಗಗಳ ಗುಂಪೂ ನಿನ್ನಿಂದ ಉಂಟಾಗುವವು; ಅರಸರು ನಿನ್ನಿಂದ ಹುಟ್ಟುವರು. ಇದಲ್ಲದೆ ಅಬ್ರಹಾಮನಿಗೂ ಇಸಾಕ ನಿಗೂ ನಾನು ಕೊಟ್ಟ ದೇಶವನ್ನು ನಿನಗೆ ಕೊಡುವೆನು. ನಿನ್ನ ತರುವಾಯ ನಿನ್ನ ಸಂತತಿಗೂ ಆ ದೇಶವನ್ನು ಕೊಡುವೆನು ಅಂದನು. ಆಗ ದೇವರು ಅವನ ಸಂಗಡ ಮಾತನಾಡಿದ ಸ್ಥಳದಿಂದ ಏರಿಹೋದನು. ಯಾಕೋಬನು ತನ್ನ ಸಂಗಡ ಮಾತನಾಡಿದ ಸ್ಥಳದಲ್ಲಿ ಸ್ತಂಭವನ್ನು ಅಂದರೆ ಕಲ್ಲಿನ ಸ್ತಂಭವನ್ನು ನಿಲ್ಲಿಸಿ ಪಾನಾರ್ಪಣೆಮಾಡಿ ಅದರ ಮೇಲೆ ಎಣ್ಣೆಯನ್ನು ಹೊಯ್ದನು. ದೇವರು ತನ್ನ ಸಂಗಡ ಮಾತನಾಡಿದ ಸ್ಥಳಕ್ಕೆ ಯಾಕೋಬನು ಬೇತೇಲ್ ಎಂದು ಹೆಸರಿಟ್ಟನು.
- Exodus 20:22 ವಿಮೋಚನಕಾಂಡ 20:22ಕರ್ತನು ಮೋಶೆಗೆ--ನೀನು ಇಸ್ರಾಯೇಲ್ ಮಕ್ಕಳಿಗೆ ಹೀಗೆ ಹೇಳಬೇಕು--ನಾನು ಆಕಾಶದಿಂದ ನಿಮ್ಮ ಸಂಗಡ ಮಾತನಾಡಿದ್ದನ್ನು ನೀವು ನೋಡಿದ್ದೀರಿ.
- Genesis 17:3 ಆದಿಕಾಂಡ 17:3ಆಗ ಅಬ್ರಾಮನು ಸಾಷ್ಟಾಂಗಬಿದ್ದನು. ಆಗ ದೇವರು ಅವನ ಸಂಗಡ ಮಾತನಾಡಿದ್ದೇನಂದರೆ--
- Numbers 12:6–8 ಅರಣ್ಯಕಾಂಡ 12:6–8ಆತನು--ನನ್ನ ಮಾತುಗಳನ್ನು ಈಗ ಕೇಳಿರಿ--ನಿಮ್ಮಲ್ಲಿ ಒಬ್ಬ ಪ್ರವಾದಿ ಇದ್ದರೆ ಕರ್ತನಾದ ನಾನು ದರ್ಶನದಲ್ಲಿ ಅವನಿಗೆ ತಿಳಿಯಪಡಿಸುವೆನು, ಸ್ವಪ್ನದಲ್ಲಿ ಅವನ ಸಂಗಡ ಮಾತನಾಡುವೆನು. ನನ್ನ ಸೇವಕನಾದ ಮೋಶೆಯು ಹಾಗಲ್ಲ; ಅವನು ನನ್ನ ಮನೆಯಲ್ಲೆಲ್ಲಾ ನಂಬಿಗಸ್ತನಾ ಗಿದ್ದಾನೆ. ಗೂಢವಾಗಿ ಅಲ್ಲ, ಮುಖಾಮುಖಿಯಾಗಿ ಅಂದರೆ ಪ್ರತ್ಯಕ್ಷವಾಗಿ ನಾನು ಅವನ ಸಂಗಡ ಮಾತನಾ ಡುತ್ತೇನೆ. ಅವನು ಕರ್ತನ ರೂಪವನ್ನು ನೋಡುತ್ತಾನೆ; ಹೀಗಿರಲು ನೀವು ನನ್ನ ಸೇವಕನಾದ ಮೋಶೆಗೆ ವಿರೋಧವಾಗಿ ಮಾತನಾಡಲು ಯಾಕೆ ಭಯಪಡಲಿಲ್ಲ ಎಂದು ಹೇಳಿದನು.
- Deuteronomy 5:4 ಧರ್ಮೋಪದೇಶಕಾಂಡ 5:4ಮುಖಾಮುಖಿಯಾಗಿ ಕರ್ತನು ನಿಮ್ಮ ಸಂಗಡ ಬೆಟ್ಟದಲ್ಲಿ ಬೆಂಕಿಯೊಳಗಿಂದ ಮಾತನಾಡಿದನು.
- Judges 6:21 ನ್ಯಾಯಸ್ಥಾಪಕರು 6:21ಆಗ ಕರ್ತನ ದೂತನು ತನ್ನ ಕೈಯಲ್ಲಿದ್ದ ಕೋಲಿನ ಕೊನೆಯನ್ನು ಚಾಚಿ ಮಾಂಸವನ್ನೂ ಹುಳಿ ಇಲ್ಲದ ರೊಟ್ಟಿಗಳನ್ನೂ ಮುಟ್ಟಿದನು. ಆಗ ಬೆಂಕಿಯು ಬಂಡೆ ಯಿಂದ ಎದ್ದು ಮಾಂಸವನ್ನೂ ಹುಳಿ ಇಲ್ಲದ ರೊಟ್ಟಿ ಗಳನ್ನೂ ದಹಿಸಿಬಿಟ್ಟಿತು. ಆಗ ಕರ್ತನ ದೂತನು ಅವನ ಕಣ್ಣುಗಳಿಗೆ ಕಾಣಿಸದೆ ಹೋದನು.
- John 10:30 ಯೋಹಾನನು 10:30ನಾನು ಮತ್ತು ನನ್ನ ತಂದೆಯು ಒಂದಾಗಿದ್ದೇವೆ ಎಂದು ಉತ್ತರಕೊಟ್ಟನು.
- John 1:18 ಯೋಹಾನನು 1:18ಯಾವನೂ ಯಾವ ಕಾಲದಲ್ಲೂ ದೇವರನ್ನು ಕಂಡಿಲ್ಲ. ತಂದೆಯ ಎದೆಯಲ್ಲಿರುವ ಆ ಒಬ್ಬನೇ ಮಗ ನಾಗಿರುವಾತನು ಆತನನ್ನು ತಿಳಿಯಪಡಿಸಿದ್ದಾನೆ.
- Judges 13:20 ನ್ಯಾಯಸ್ಥಾಪಕರು 13:20ಅಗ್ನಿ ಜ್ವಾಲೆಯು ಬಲಿಪೀಠದಿಂದ ಆಕಾಶಕ್ಕೆ ಸರಿಯಾಗಿ ಏಳು ವಾಗ ಏನಾಯಿತಂದರೆ, ಕರ್ತನ ದೂತನು ಬಲಿಪೀಠದ ಜ್ವಾಲೆಯಲ್ಲಿ ಮೇಲಕ್ಕೆ ಹೋದನು. ಅದನ್ನು ಮಾನೋ ಹನೂ ಅವನ ಹೆಂಡತಿಯೂ ನೋಡಿ ನೆಲದ ಮೇಲೆ ಬೋರಲು ಬಿದ್ದರು.