Genesis · chapter 2 · verse 18
Genesis 2:18 in Kannada
ಕರ್ತನಾದ ದೇವರು--ಮನುಷ್ಯನು ಒಂಟಿಯಾ ಗಿರುವದು ಒಳ್ಳೆಯದಲ್ಲ; ಅವನಿಗೆ ತಕ್ಕ ಸಹಕಾರಿಯನ್ನು ಮಾಡುವೆನು ಅಂದನು.
Kartanaada devaru--manushyanu ontiyaa giruvadu olleyadalla; avanige takka sahakaariyannu maaduvenu andanu.
Genesis 2:18 in English
- King James Version (KJV)
- And the LORD God said, [It is] not good that the man should be alone; I will make him an help meet for him.
- World English Bible (WEB)
- The LORD God said, “It is not good for the man to be alone. I will make him a helper comparable to him.”
- American Standard Version (ASV)
- And Jehovah God said, It is not good that the man should be alone; I will make him a help meet for him.
- Bible in Basic English (BBE)
- And the Lord God said, It is not good for the man to be by himself: I will make one like himself as a help to him
- Darby Translation (DBY)
- And Jehovah Elohim said, It is not good that Man should be alone; I will make him a helpmate, his like.
- Webster's Bible (WBS)
- And the LORD God said, [It is] not good that the man should be alone: I will make him a help meet for him.
- Young's Literal Translation (YLT)
- And Jehovah God saith, 'Not good for the man to be alone, I do make to him an helper — as his counterpart.'
Read in context
- 16ದೇವರಾದ ಕರ್ತನು ಮನುಷ್ಯ ನಿಗೆ ಆಜ್ಞಾಪಿಸಿದ್ದೇನಂದರೆ--ನೀನು ತೋಟದ ಎಲ್ಲಾ ಮರಗಳ ಫಲವನ್ನು ಯಥೇಚ್ಛವಾಗಿ ತಿನ್ನಬಹುದು;
- 17ಆದರೆ ಒಳ್ಳೇದು ಕೆಟ್ಟದರ ತಿಳುವಳಿಕೆಯನ್ನುಂಟು ಮಾಡುವ ಮರದ ಫಲವನ್ನು ನೀನು ತಿನ್ನಬಾರದು; ಅದನ್ನು ತಿಂದ ದಿನದಲ್ಲಿ ಖಂಡಿತವಾಗಿ ಸಾಯುವಿ ಅಂದನು.
- 18ಕರ್ತನಾದ ದೇವರು--ಮನುಷ್ಯನು ಒಂಟಿಯಾ ಗಿರುವದು ಒಳ್ಳೆಯದಲ್ಲ; ಅವನಿಗೆ ತಕ್ಕ ಸಹಕಾರಿಯನ್ನು ಮಾಡುವೆನು ಅಂದನು.
- 19ಇದಲ್ಲದೆ ಕರ್ತನಾದ ದೇವರು ಅಡವಿಯ ಎಲ್ಲಾ ಮೃಗಗಳನ್ನೂ ಆಕಾಶದ ಎಲ್ಲಾ ಪಕ್ಷಿಗಳನ್ನೂ ಮಣ್ಣಿನಿಂದ ರೂಪಿಸಿ ಅವುಗಳಿಗೆ ಆದಾಮನು ಏನು ಹೆಸರಿಡುವನೋ ಎಂದು ನೋಡು ವದಕ್ಕೆ ಅವನ ಬಳಿಗೆ ಬರಮಾಡಿದನು. ಆದಾಮನು ಕರೆದದ್ದೇ ಆ ಜೀವಿಗಳಿಗೆಲ್ಲಾ ಹೆಸರಾಯಿತು.
- 20ಆದಾ ಮನು ಎಲ್ಲಾ ಪಶುಗಳಿಗೂ ಆಕಾಶದ ಪಕ್ಷಿಗಳಿಗೂ ಅಡವಿಯ ಎಲ್ಲಾ ಮೃಗಗಳಿಗೂ ಹೆಸರಿಟ್ಟನು, ಆದರೆ ಆದಾಮನಿಗೆ ತಕ್ಕ ಸಹಕಾರಿ ಸಿಗಲಿಲ್ಲ.
Cross references
- Ecclesiastes 4:9–12 ಪ್ರಸಂಗಿ 4:9–12ಒಬ್ಬನಿಗಿಂತ ಇಬ್ಬರು ಲೇಸು; ತಮ್ಮ ಪ್ರಯಾಸಕ್ಕೆ ಅವರಿಗೆ ಒಳ್ಳೆಯ ಪ್ರತಿಫಲವಿದೆ. ಒಬ್ಬನು ಬಿದ್ದರೆ ಇನ್ನೊಬ್ಬನು ತನ್ನ ಸಂಗಡಿಗನನ್ನು ಎತ್ತುವನು; ಅವನು ಒಬ್ಬೊಂಟಿಗನಾಗಿ ಬಿದ್ದರೆ ಅಯ್ಯೋ! ಅವನಿಗೆ ಸಹಾಯ ಮಾಡುವದಕ್ಕೆ ಇನ್ನೊಬ್ಬ ನಿಲ್ಲ. ತಿರುಗಿ ಇಬ್ಬರು ಜೊತೆಯಲ್ಲಿ ಮಲಗಿಕೊಂಡರೆ ಅವರಿಗೆ ಬೆಚ್ಚಗಾಗುತ್ತದೆ; ಒಬ್ಬನು ಹೇಗೆ ಬೆಚ್ಚಗಾಗಿ ರುತ್ತಾನೆ? ಅವನನ್ನು ಒಬ್ಬನು ಜಯಿಸಿದರೆ ಇಬ್ಬರು ಅವನನ್ನು ಎದುರಿಸುವರು; ಮೂರು ಹುರಿಯ ಹಗ್ಗವು ಬೇಗನೆ ಕಿತ್ತುಹೋಗುವದಿಲ್ಲ.
- Proverbs 18:22 ಜ್ಞಾನೋಕ್ತಿಗಳು 18:22ಪತ್ನಿ ಯನ್ನು ದೊರಕಿಸಿಕೊಂಡವನು ಒಳ್ಳೇದನ್ನು ಸಂಪಾದಿಸಿ ದವನಾಗಿ ಕರ್ತನ ದಯೆಯನ್ನು ಹೊಂದುತ್ತಾನೆ.
- 1 Peter 3:7 1 ಪೇತ್ರನು 3:7ಅದೇ ರೀತಿಯಾಗಿ ಪುರಷರೇ, ಸ್ತ್ರೀಯು ಬಲಹೀನ ಳೆಂಬದನ್ನು ತಿಳಿದು ನಿಮ್ಮ ಹೆಂಡತಿಯರ ಸಂಗಡ ವಿವೇಕದಿಂದ ಇರ್ರಿ. ಅವರು ಜೀವದ ಕೃಪೆಯಲ್ಲಿ ನಿಮ್ಮೊಂದಿಗೆ ಬಾಧ್ಯರಾಗಿದ್ದಾರೆಂದು ತಿಳಿದು ಅವರಿಗೆ ಮಾನವನ್ನು ಸಲ್ಲಿಸಿರಿ. ಹೀಗೆ ನಡೆದರೆ ನಿಮ್ಮ ಪ್ರಾರ್ಥನೆಗಳಿಗೆ ಅಡ್ಡಿಯಿರುವದಿಲ್ಲ.
- 1 Corinthians 11:7–12 1 ಕೊರಿಂಥದವರಿಗೆ 11:7–12ಆದರೆ ಪುರುಷನು ದೇವರ ಪ್ರತಿರೂಪವೂ ಪ್ರಭಾವವೂ ಆಗಿರುವದರಿಂದ ತಲೆಯನ್ನು ಮುಚ್ಚಿ ಕೊಳ್ಳಕೂಡದು; ಸ್ತ್ರೀಯಾದರೋ ಪುರುಷನ ಪ್ರಭಾವ ವಾಗಿದ್ದಾಳೆ. ಪುರುಷನು ಸ್ತ್ರೀಯಿಂದ ನಿರ್ಮಿತ ನಾಗಲಿಲ್ಲ; ಸ್ತ್ರೀಯು ಪುರುಷನಿಂದ ನಿರ್ಮಿತವಾದಳು. ಇದಲ್ಲದೆ ಪುರುಷನು ಸ್ತ್ರೀಯ ನಿಮಿತ್ತವಾಗಿ ನಿರ್ಮಾಣವಾಗಲಿಲ್ಲ; ಆದರೆ ಸ್ತ್ರೀಯು ಪುರುಷನ ನಿಮಿತ್ತವಾಗಿ ನಿರ್ಮಾಣವಾದಳು. ಈ ಕಾರಣದಿಂದ ದೂತರ ನಿಮಿತ್ತವಾಗಿ ಸ್ತ್ರೀಗೆ ತನ್ನ ಶಿರಸ್ಸಿನ ಮೇಲೆ ಅಧಿಕಾರವಿರಬೇಕು. ಆದರೂ ಕರ್ತನಲ್ಲಿ ಸ್ತ್ರೀಯಿಲ್ಲದೆ ಪುರುಷನೂ ಪುರುಷನಿಲ್ಲದೆ ಸ್ತ್ರೀಯೂ ಇಲ್ಲ. ಸ್ತ್ರೀಯು ಪುರುಷನಿಂದ ಹೇಗೆ ಉತ್ಪತ್ತಿ ಯಾದಳೋ ಹಾಗೆಯೇ ಪುರುಷನೂ ಸ್ತ್ರೀ ಯಿಂದ ಉತ್ಪತ್ತಿಯಾದನು. ಸಮಸ್ತಕ್ಕೂ ದೇವರೇ ಮೂಲ ಕಾರಣನು.
- 1 Timothy 2:11–13 1 ತಿಮೊಥೆಯನಿಗೆ 2:11–13ಸ್ತ್ರೀಯು ಮೌನವಾಗಿದ್ದು ಪೂರ್ಣ ವಿಧೇಯಳಾಗಿ ಕಲಿಯಬೇಕು. ಆದರೆ ಉಪದೇಶ ಮಾಡುವದ ಕ್ಕಾಗಲೀ ಪುರುಷರ ಮೇಲೆ ಅಧಿಕಾರ ನಡಿಸುವದ ಕ್ಕಾಗಲೀ ಸ್ತ್ರೀಗೆ ನಾನು ಅಪ್ಪಣೆಕೊಡುವದಿಲ್ಲ; ಆಕೆಯು ಮೌನವಾಗಿರಬೇಕು. ಮೊದಲು ನಿರ್ಮಿತನಾದ ವನು ಆದಾಮನಲ್ಲವೇ, ಆಮೇಲೆ ಹವ್ವಳು;
- Ruth 3:1 ರೂತಳು 3:1ಅವಳ ಅತ್ತೆಯಾದ ನೊವೊಮಿಯು ಅವಳಿಗೆ ನನ್ನ ಮಗಳೇ, ನಿನಗೆ ಒಳ್ಳೇದಾಗುವದಕ್ಕೋಸ್ಕರ ನಾನು ನಿನಗೆ ವಿಶ್ರಾಂತಿ ಯನ್ನು ಹುಡುಕಬೇಕಲ್ಲವೋ?
- Genesis 3:12 ಆದಿಕಾಂಡ 3:12ಅವನು--ನೀನು ನನ್ನ ಸಂಗಡ ಇರುವದಕ್ಕೆ ಕೊಟ್ಟ ಸ್ತ್ರೀಯು ಆ ಮರದ ಫಲವನ್ನು ನನಗೆ ಕೊಟ್ಟಳು; ನಾನು ತಿಂದೆನು ಎಂದು ಹೇಳಿದನು.
- Genesis 1:31 ಆದಿಕಾಂಡ 1:31ದೇವರು ತಾನು ಮಾಡಿದ್ದನ್ನೆಲ್ಲಾ ನೋಡಲಾಗಿ ಇಗೋ, ಅದು ಬಹಳ ಒಳ್ಳೆಯದಾಗಿತ್ತು. ಹೀಗೆ ಸಾಯಂಕಾಲವೂ ಪ್ರಾತಃಕಾಲವೂ ಆಗಿ ಆರನೆಯ ದಿನವಾಯಿತು.
- 1 Corinthians 7:36 1 ಕೊರಿಂಥದವರಿಗೆ 7:36ಒಬ್ಬನು ತನ್ನ ಕನ್ನಿಕೆಗೆ ಮದುವೆಯಿಲ್ಲದಿರುವದು ಮರ್ಯಾದೆಯಲ್ಲವೆಂದು ಭಾವಿಸಿದರೆ ಮತ್ತು ಆಕೆಗೆ ಪ್ರಾಯ ಕಳೆದುಹೋಗು ತ್ತದಲ್ಲಾ, ಮದುವೆಯಾಗುವದು ಅವಶ್ಯವೆಂದು ಅವನಿಗೆ ಕಂಡರೆ ತನ್ನಿಷ್ಟದಂತೆ ಮಾಡಲಿ, ಅವನು ಪಾಪಮಾಡುವದಿಲ್ಲ, ಅವರು ಮದುವೆಮಾಡಿ ಕೊಳ್ಳಲಿ.