Genesis · chapter 24 · verse 32
Genesis 24:32 in Kannada
ಆಗ ಆ ಮನುಷ್ಯನು ಮನೆಯೊಳಗೆ ಬಂದನು. ಅವನು ಒಂಟೆಗಳನ್ನು ಬಿಚ್ಚಿ ಅವುಗಳಿಗೆ ಹುಲ್ಲನ್ನೂ ಮೇವನ್ನೂ ಕೊಟ್ಟನು. ಅವನಿಗೆ ಅವನ ಸಂಗಡವಿದ್ದವರಿಗೆ ಕಾಲುಗಳನ್ನು ತೊಳೆಯುವದಕ್ಕೆ ನೀರು ಕೊಟ್ಟನು.
Aaga aa manushyanu maneyolage bandanu. Avanu ontegalannu bichchi avugalige hullannoo mevannoo kottanu. Avanige avana sangadaviddavarige kaalugalannu toleyuvadakke neeru kottanu.
Genesis 24:32 in English
- King James Version (KJV)
- And the man came into the house: and he ungirded his camels, and gave straw and provender for the camels, and water to wash his feet, and the men’s feet that [were] with him.
- World English Bible (WEB)
- The man came into the house, and he unloaded the camels. He gave straw and feed for the camels, and water to wash his feet and the feet of the men who were with him.
- American Standard Version (ASV)
- And the man came into the house, and he ungirded the camels; and he gave straw and provender for the camels, and water to wash his feet and the feet of the men that were with him.
- Bible in Basic English (BBE)
- Then the man came into the house, and Laban took their cords off the camels and gave them dry grass and food, and he gave to him and the men who were with him water for washing their feet.
- Darby Translation (DBY)
- And the man came into the house; and he ungirded the camels, and gave the camels straw and provender, and water to wash his feet, and the feet of the men who were with him.
- Webster's Bible (WBS)
- And the man came into the house: and he ungirded his camels, and gave straw and provender for the camels, and water to wash his feet, and the men's feet that [were] with him.
- Young's Literal Translation (YLT)
- And he bringeth in the man into the house, and looseth the camels, and giveth straw and provender for the camels, and water to wash his feet, and the feet of the men who [are] with him:
Read in context
- 30ಅವನು ವಾಲೆಯನ್ನೂ ತನ್ನ ಸಹೋದರಿಯ ಕೈಗಳಲ್ಲಿದ್ದ ಕಡಗಗಳನ್ನೂ ನೋಡಿ ಆ ಮನುಷ್ಯನು ತನ್ನ ಕೂಡ ಹೀಗೆ ಮಾತನಾಡಿದನೆಂದು ಹೇಳಿದ ತನ್ನ ಸಹೋದರಿಯಾದ ರೆಬೆಕ್ಕಳ ಮಾತುಗಳನ್ನು ಕೇಳಿ ಆ ಮನುಷ್ಯನ ಬಳಿಗೆ ಬಂದನು. ಇಗೋ, ಅವನು ಬಾವಿಯ ಬಳಿಯಲ್ಲಿ ಒಂಟೆಗಳ ಹತ್ತಿರ ನಿಂತಿದ್ದನು.
- 31ಲಾಬಾನನು ಅವನಿಗೆ--ಕರ್ತನಿಂದ ಆಶೀರ್ವದಿಸಲ್ಪಟ್ಟವನೇ, ಒಳಗೆ ಬಾ, ಯಾಕೆ ಹೊರಗೆ ನಿಂತಿರುತ್ತೀ? ನಾನು ಮನೆ ಯನ್ನೂ ಒಂಟೆಗಳಿಗೆ ಸ್ಥಳವನ್ನೂ ಸಿದ್ಧಮಾಡಿದ್ದೇನೆ ಅಂದನು.
- 32ಆಗ ಆ ಮನುಷ್ಯನು ಮನೆಯೊಳಗೆ ಬಂದನು. ಅವನು ಒಂಟೆಗಳನ್ನು ಬಿಚ್ಚಿ ಅವುಗಳಿಗೆ ಹುಲ್ಲನ್ನೂ ಮೇವನ್ನೂ ಕೊಟ್ಟನು. ಅವನಿಗೆ ಅವನ ಸಂಗಡವಿದ್ದವರಿಗೆ ಕಾಲುಗಳನ್ನು ತೊಳೆಯುವದಕ್ಕೆ ನೀರು ಕೊಟ್ಟನು.
- 33ಅವನಿಗೆ ಊಟ ಬಡಿಸಿದಾಗ ಅವನು--ನಾನು ಬಂದ ಕೆಲಸದ ವಿಷಯ ಹೇಳದೆ ಊಟಮಾಡುವದಿಲ್ಲ ಅಂದನು. ಅದಕ್ಕೆ ಲಾಬಾ ನನು--ಹೇಳು ಅಂದನು.
- 34ಅವನು--ನಾನು ಅಬ್ರಹಾಮನ ಸೇವಕನು.
Cross references
- Judges 19:21 ನ್ಯಾಯಸ್ಥಾಪಕರು 19:21ಅವನನ್ನು ತನ್ನ ಮನೆಗೆ ಕರಕೊಂಡು ಹೋಗಿ ಕತ್ತೆಗಳಿಗೆ ಮೇವು ಹಾಕಿದನು. ಅವರು ತಮ್ಮ ಕಾಲು ಗಳನ್ನು ತೊಳೆದು ತಿಂದು ಕುಡಿದರು.
- Genesis 43:24 ಆದಿಕಾಂಡ 43:24ಆ ಮನುಷ್ಯನು ಅವರನ್ನು ಯೋಸೇಫನ ಮನೆಯೊಳಗೆ ಕರಕೊಂಡು ಬಂದು ಅವರಿಗೆ ನೀರನ್ನು ಕೊಟ್ಟಾಗ ಅವರು ತಮ್ಮ ಕಾಲುಗಳನ್ನು ತೊಳ ಕೊಂಡರು. ಇದಲ್ಲದೆ ಅವರ ಕತ್ತೆಗಳಿಗೆ ಮೇವನ್ನು ಹಾಕಿದನು.
- Genesis 18:4 ಆದಿಕಾಂಡ 18:4ಸ್ವಲ್ಪ ನೀರು ತೆಗೆದುಕೊಂಡು ಬರುತ್ತೇನೆ: ನಿಮ್ಮ ಕಾಲುಗಳನ್ನು ತೊಳೆದುಕೊಳ್ಳಿರಿ; ಮರದ ಕೆಳಗೆ ವಿಶ್ರಮಿಸಿಕೊಳ್ಳಿರಿ.
- 1 Timothy 5:10 1 ತಿಮೊಥೆಯನಿಗೆ 5:10ಸತ್ಕ್ರಿಯೆಗಳನ್ನು ಮಾಡುವವಳೆಂದು ಹೆಸರುಗೊಂಡ ವಳೂ ಆಗಿರಬೇಕು; ಆಕೆಯು ಮಕ್ಕಳನ್ನು ಸಾಕಿದವಳಾ ಗಲಿ ಅತಿಥಿಸತ್ಕಾರವನ್ನು ಮಾಡಿದವಳಾಗಲಿ ಪರಿಶುದ್ಧರ ಪಾದಗಳನ್ನು ತೊಳೆದವಳಾಗಲಿ ಸಂಕಟದಲ್ಲಿ ಬಿದ್ದವರಿಗೆ ಸಹಾಯ ಮಾಡಿದವಳಾಗಲಿ ಎಲ್ಲಾ ಸತ್ಕಾರ್ಯಗಳಲಿ ಆಸಕ್ತಿಯುಳ್ಳವಳಾಗಲಿ ಆಗಿರ
- Luke 7:44 ಲೂಕನು 7:44ತರುವಾಯ ಆತನು ಆ ಸ್ತ್ರೀಯ ಕಡೆಗೆ ತಿರುಗಿಕೊಂಡು ಸೀಮೋನ ನಿಗೆ--ಈ ಸ್ತ್ರೀಯನ್ನು ನೋಡಿದೆಯಾ? ನಾನು ನಿನ್ನ ಮನೆಯೊಳಗೆ ಪ್ರವೇಶಿಸಿದಾಗ ನನ್ನ ಪಾದಗಳಿಗೆ ನೀನು ನೀರು ಕೊಡಲಿಲ್ಲ; ಇವಳಾದರೋ ನನ್ನ ಪಾದ ಗಳನು ಕಣ್ಣೀರಿನಿಂದ ತೊಳೆದು ತನ್ನ ತಲೇಕೂದಲಿನಿಂದ ಅವುಗಳನ್ನು ಒರೆ
- Genesis 19:2 ಆದಿಕಾಂಡ 19:2ಇಗೋ, ಪ್ರಭುಗಳೇ, ನೀವು ನಿಮ್ಮ ದಾಸನ ಮನೆಯಲ್ಲಿ ಇಳುಕೊಂಡು ರಾತ್ರಿ ಕಳೆಯಿರಿ; ನಿಮ್ಮ ಕಾಲುಗಳನ್ನು ತೊಳೆದುಕೊಳ್ಳಿರಿ; ಬೆಳಿಗ್ಗೆ ಎದ್ದು ನಿಮ್ಮ ಮಾರ್ಗವನ್ನು ಹಿಡಿದು ಹೋಗಬಹುದು ಎಂದು ಬೇಡಿಕೊಂಡನು. ಅದಕ್ಕೆ ಅವರು--ಹಾಗಲ್ಲ; ನಾವು ರಾತ್ರಿಯೆಲ್ಲಾ ಬೀದಿಯಲ್ಲಿ ಇರುತ್ತೇವೆ ಅಂದರು.
- 1 Samuel 25:41 1 ಸಮುವೇಲನು 25:41ಆಗ ಅವಳು ಎದ್ದು ಬೋರಲು ಬಿದ್ದು--ಇಗೋ, ನಿನ್ನ ದಾಸಿ ನನ್ನ ಒಡೆ ಯನ ಸೇವಕರ ಪಾದಗಳನ್ನು ತೊಳೆಯುವ ಒಬ್ಬ ಸೇವಕಳಾಗಬೇಕು ಅಂದಳು.
- John 13:4–14 ಯೋಹಾನನು 13:4–14ಊಟದಿಂದೆದ್ದು ತನ್ನ ಉಡುಪುಗಳನ್ನು ತೆಗೆದಿಟ್ಟು ಕೈ ಪಾವಡವನ್ನು ತಕ್ಕೊಂಡು ನಡುವನ್ನು ಕಟ್ಟಿಕೊಂಡನು. ತರುವಾಯ ಆತನು ಬೋಗುಣಿ ಯಲ್ಲಿ ನೀರು ಹಾಕಿಕೊಂಡು ಶಿಷ್ಯರ ಕಾಲುಗಳನ್ನು ತೊಳೆಯುವದಕ್ಕೂ ತಾನು ನಡುವಿಗೆ ಕಟ್ಟಿಕೊಂಡ ಕೈ ಪಾವಡದಿಂದ ಅವುಗಳನ್ನು ಒರಸುವದಕ್ಕೂ ಪ್ರಾರಂಭಿಸಿದನು. ಆತನು ಸೀಮೋನ ಪೇತ್ರನ ಬಳಿಗೆ ಬಂದಾಗ ಅವನು ಆತನಿಗೆ--ಕರ್ತನೇ, ನೀನು ನನ್ನ ಕಾಲುಗಳನ್ನು ತೊಳೆಯುತ್ತೀಯೋ ಎಂದು ಕೇಳಿ ದನು. ಯೇಸು ಪ್ರತ್ಯುತ್ತರವಾಗಿ ಅವನಿಗೆ--ನಾನು ಮಾಡುವದು ಏನೆಂದು ಈಗ ನಿನಗೆ ತಿಳಿಯುವದಿಲ್ಲ; ಆದರೆ ಇನ್ನು ಮೇಲೆ ನಿನಗೆ ತಿಳಿಯುವದು ಅಂದನು. ಪೇತ್ರನು ಆತನಿಗೆ--ನೀನು ನನ್ನ ಕಾಲುಗಳನ್ನು ಎಂದಿಗೂ ತೊಳೆಯಬಾರದು ಅಂದನು; ಯೇಸು ಪ್ರತ್ಯುತ್ತರವಾಗಿ ಅವನಿಗೆ--ನಾನು ನಿನ್ನನ್ನು ತೊಳೆಯ ದಿದ್ದರೆ ನನ್ನೊಂದಿಗೆ ನಿನಗೆ ಪಾಲಿಲ್ಲ ಎಂದು ಹೇಳಿದನು. ಅದಕ್ಕೆ ಸೀಮೋನ ಪೇತ್ರನು ಆತ ನಿಗೆ--ಕರ್ತನೇ, ನನ್ನ ಪಾದಗಳನ್ನು ಮಾತ್ರವಲ್ಲದೆ ನನ್ನ ಕೈಗಳನ್ನು ಮತ್ತು ತಲೆಯನ್ನು ಸಹ ತೊಳೆ ಅಂದನು. ಯೇಸು ಅವನಿಗೆ--ಸ್ನಾನಮಾಡಿಕೊಂಡವನು ತನ ಪಾದಗಳನ್ನು ಹೊರತು ಮತ್ತೇನೂ ತೊಳೆಯುವದು ಅವಶ್ಯವಿಲ್ಲ; ಯಾಕಂದರೆ ಅವನು ಸಂಪೂರ್ಣವಾಗಿ ಶುದ್ಧನಾಗಿದ್ದಾನೆ. ನೀವು ಶುದ್ಧರಾಗಿದ್ದೀರಿ, ಆದರೆ ಎಲ್ಲರೂ ಅಲ್ಲ ಅಂದನು. ತನ್ನನ್ನು ಹಿಡಿದುಕೊಡುವ ವನು ಯಾರೆಂದು ಆತನು ತಿಳಿದಿದ್ದರಿಂದ--ನಿಮ್ಮಲ್ಲಿ ಎಲ್ಲರೂ ಶುದ್ಧರಲ್ಲ ಎಂದು ಹೇಳಿದನು. ಆತನು ಅವರ ಪಾದಗಳನ್ನು ತೊಳೆದ ಮೇಲೆ ತನ್ನ ಉಡುಪುಗಳನ್ನು ಹಾಕಿಕೊಂಡು ತಿರಿಗಿ ಕೂತು ಕೊಂಡ ಮೇಲೆ ಅವರಿಗೆ--ನಾನು ನಿಮಗೆ ಮಾಡಿದ್ದು ಏನೆಂದು ತಿಳಿಯಿತೋ? ನೀವು ನನ್ನನ್ನು ಬೋಧ ಕನು ಮತ್ತು ಕರ್ತನು ಎಂದು ಕರೆಯುತ್ತೀರಿ; ನೀವು ಹೇಳುವದು ಸರಿ; ಯಾಕಂದರೆ ನಾನು ಅಂಥವನೇ ಹೌದು. ಹಾಗಾದರೆ ನಿಮ್ಮ ಕರ್ತನೂ ಬೋಧಕನೂ ಆಗಿರುವ ನಾನು ನಿಮ್ಮ ಕಾಲುಗಳನ್ನು ತೊಳೆದರೆ ನೀವು ಸಹ ಒಬ್ಬರ ಕಾಲುಗಳನ್ನೊಬ್ಬರು ತೊಳೆಯತಕ್ಕದ್ದು.
Original words (Hebrew)
- man · H376אִישׁ ʼîysh
- came · H935בּוֹא bôwʼ
- house · H1004בַּיִת bayith
- ungirded · H6605פָּתַח pâthach
- camels · H1581גָּמָל gâmâl
- gave · H5414נָתַן nâthan
- straw · H8401תֶּבֶן teben
- provender · H4554מִסְפּוֹא miçpôwʼ
- camels · H1581גָּמָל gâmâl
- water · H4325מַיִם mayim
- wash · H7364רָחַץ râchats
- feet · H7272רֶגֶל regel
- men’s · H582אֱנוֹשׁ ʼĕnôwsh
- feet · H7272רֶגֶל regel