Genesis · chapter 26 · verse 2
Genesis 26:2 in Kannada
ಆಗ ಕರ್ತನು ಅವನಿಗೆ ಕಾಣಿಸಿಕೊಂಡು--ಐಗುಪ್ತಕ್ಕೆ ಇಳಿದು ಹೋಗಬೇಡ. ನಾನು ನಿನಗೆ ಹೇಳುವ ದೇಶದಲ್ಲಿ ವಾಸವಾಗಿರು.
Aaga kartanu avanige kaanisikondu--aiguptakke ilidu hogabeda. Naanu ninage heluva deshadalli vaasavaagiru.
Genesis 26:2 in English
- King James Version (KJV)
- And the LORD appeared unto him, and said, Go not down into Egypt; dwell in the land which I shall tell thee of:
- World English Bible (WEB)
- The LORD appeared to him, and said, “Don’t go down into Egypt. Live in the land I will tell you about.
- American Standard Version (ASV)
- And Jehovah appeared unto him, and said, Go not down into Egypt; dwell in the land which I shall tell thee of:
- Bible in Basic English (BBE)
- And the Lord came to him in a vision and said, Do not go down to Egypt; keep in the land of which I will give you knowledge:
- Darby Translation (DBY)
- And Jehovah appeared to him and said, Go not down to Egypt: dwell in the land that I shall tell thee of.
- Webster's Bible (WBS)
- And the LORD appeared to him, and said, Go not down into Egypt: dwell in the land which I shall tell thee of.
- Young's Literal Translation (YLT)
- And Jehovah appeareth unto him, and saith, 'Go not down towards Egypt, tabernacle in the land concerning which I speak unto thee,
Read in context
- 1ಅಬ್ರಹಾಮನ ದಿನಗಳಲ್ಲಿ ಬಂದ ಮೊದಲನೆಯ ಬರವಲ್ಲದೆ ದೇಶದಲ್ಲಿ ಮತ್ತೊಂದು ಬರ ಬಂದಿತು. ಆಗ ಇಸಾಕನು ಗೆರಾರಿನಲ್ಲಿದ್ದ ಫಿಲಿಷ್ಟಿಯರ ಅರಸನಾದ ಅಬೀಮೆಲೆಕನ ಬಳಿಗೆ ಹೋದನು.
- 2ಆಗ ಕರ್ತನು ಅವನಿಗೆ ಕಾಣಿಸಿಕೊಂಡು--ಐಗುಪ್ತಕ್ಕೆ ಇಳಿದು ಹೋಗಬೇಡ. ನಾನು ನಿನಗೆ ಹೇಳುವ ದೇಶದಲ್ಲಿ ವಾಸವಾಗಿರು.
- 3ನೀನು ಈ ದೇಶದಲ್ಲಿ ಪ್ರವಾಸಿಯಾಗಿರು; ನಾನು ನಿನ್ನ ಸಂಗಡ ಇದ್ದು ನಿನ್ನನ್ನು ಆಶೀರ್ವದಿಸುವೆನು. ನಿನಗೂ ನಿನ್ನ ಸಂತಾನಕ್ಕೂ ಈ ಪ್ರದೇಶಗಳನ್ನೆಲ್ಲಾ ಕೊಡುವೆನು. ನಿನ್ನ ತಂದೆಯಾದ ಅಬ್ರಹಾಮನಿಗೆ ನಾನು ಮಾಡಿದ ಪ್ರಮಾಣವನ್ನು ಈಡೇರಿಸುವೆನು.
- 4ನಿನ್ನ ಸಂತತಿಯನ್ನು ಆಕಾಶದ ನಕ್ಷತ್ರಗಳಂತೆ ಹೆಚ್ಚಿಸುವೆನು. ನಿನ್ನ ಸಂತತಿಗೆ ಈ ಪ್ರದೇಶಗಳನ್ನೆಲ್ಲಾ ಕೊಡುವೆನು. ನಿನ್ನ ಸಂತತಿಯಲ್ಲಿ ಭೂಮಿಯ ಜನಾಂಗ ಗಳೆಲ್ಲಾ ಆಶೀರ್ವದಿಸಲ್ಪಡುವವು.
Cross references
- Genesis 12:7 ಆದಿಕಾಂಡ 12:7ಕರ್ತನು ಅಬ್ರಾಮನಿಗೆ ಕಾಣಿಸಿಕೊಂಡು--ನಿನ್ನ ಸಂತತಿಗೆ ನಾನು ಈ ದೇಶವನ್ನು ಕೊಡುವೆನು ಅಂದನು. ಆಗ ಅವನು ಅಲ್ಲಿ ತನಗೆ ಕಾಣಿಸಿಕೊಂಡ ಕರ್ತನಿಗೆ ಬಲಿಪೀಠವನ್ನು ಕಟ್ಟಿದನು.
- Genesis 18:1 ಆದಿಕಾಂಡ 18:1ಕರ್ತನು ಮಮ್ರೇಯ ಮೈದಾನಗಳಲ್ಲಿ ಅಬ್ರಹಾಮನಿಗೆ ಕಾಣಿಸಿಕೊಂಡನು. ಅವನು ಮಧ್ಯಾಹ್ನದ ವೇಳೆ ಗುಡಾರದ ಬಾಗಲಿನಲ್ಲಿ ಕೂತುಕೊಂಡಿದ್ದನು.
- Genesis 17:1 ಆದಿಕಾಂಡ 17:1ಅಬ್ರಾಮನು ತೊಂಭತ್ತೊಂಭತ್ತು ವರುಷದವನಾದಾಗ ಕರ್ತನು ಅಬ್ರಾಮನಿಗೆ ಕಾಣಿಸಿಕೊಂಡು--ನಾನೇ ಸರ್ವಶಕ್ತನಾದ ದೇವರು; ನನ್ನ ಸನ್ನಿಧಿಯಲ್ಲಿ ನಡೆದು ನೀನು ಸಂಪೂರ್ಣನಾಗಿರು.
- Genesis 12:1 ಆದಿಕಾಂಡ 12:1ಆಗ ಕರ್ತನು ಅಬ್ರಾಮನಿಗೆ--ನೀನು ನಿನ್ನ ದೇಶದೊಳಗಿಂದಲೂ ಬಂಧು ಗಳಿಂದಲೂ ನಿನ್ನ ತಂದೆಯ ಮನೆಯಿಂದಲೂ ಹೊರ ಬಂದು ನಾನು ನಿನಗೆ ತೋರಿಸುವ ದೇಶಕ್ಕೆ ಹೋಗು.
- Psalm 37:3 ಕೀರ್ತನೆಗಳು 37:3ಕರ್ತನಲ್ಲಿ ಭರವಸವಿಟ್ಟು ಒಳ್ಳೆಯದನ್ನು ಮಾಡು; ಆಗ ದೇಶದಲ್ಲಿ ವಾಸಮಾಡಿ ನಿಜವಾಗಿ ತೃಪ್ತಿ ಹೊಂದು ವಿ.
- Genesis 18:10–20 ಆದಿಕಾಂಡ 18:10–20ಆಗ ಆತನು--ಬರುವ ವರುಷ ಇದೇ ಸಮಯಕ್ಕೆ ನಿಶ್ಚಯ ವಾಗಿ ತಿರಿಗಿ ನಿನ್ನ ಬಳಿಗೆ ಬರುತ್ತೇನೆ. ಆಗ ಇಗೋ, ನಿನ್ನ ಹೆಂಡತಿಯಾದ ಸಾರಳಿಗೆ ಮಗನು ಇರುವನು ಅಂದನು. ಸಾರಳು ಆತನ ಹಿಂದೆ ಇದ್ದ ಗುಡಾರದ ಬಾಗಲಲ್ಲಿದ್ದು ಅದನ್ನು ಕೇಳಿಸಿಕೊಂಡಳು. ಇದಲ್ಲದೆ ಅಬ್ರಹಾಮನೂ ಸಾರಳೂ ದಿನ ಗತಿಸಿದವರಾಗಿ ಮುದುಕರಾಗಿದ್ದರು; ಸಾರಳಿಗೆ ಹೆಂಗಸರಿಗೆ ಆಗುವ ಕ್ರಮವು ನಿಂತುಹೋಗಿತ್ತು. ಆದದರಿಂದ ಸಾರಳು ತನ್ನೊಳಗೆ ನಕ್ಕು--ನಾನು ವೃದ್ಧಳಾಗಿದ್ದೇನೆ. ನನ್ನ ಯಜಮಾನನು ಸಹ ಮುದುಕನಾಗಿದ್ದಾನೆ. ಹೀಗಿರು ವಲ್ಲಿ ನನಗೆ ಸಂತೋಷವಾದೀತೇ? ಅಂದಳು. ಆಗ ಕರ್ತನು ಅಬ್ರಹಾಮನಿಗೆ--ನಾನು ಮುದಿಪ್ರಾಯದ ವಳಾಗಿ ಮಗುವನ್ನು ಹೆರುವದು ನಿಜವೋ ಎಂದು ಅಂದುಕೊಂಡು ಯಾಕೆ ಸಾರಳು ನಕ್ಕಳು? ಕರ್ತನಿಗೆ ಅಸಾಧ್ಯವಾದದ್ದು ಯಾವದಾದರೂ ಇದೆಯೋ? ಬರುವ ವರುಷ ಇದೇ ಸಮಯಕ್ಕೆ ನಾನು ನಿನ್ನ ಬಳಿಗೆ ತಿರಿಗಿ ಬರುವೆನು; ಆಗ ಸಾರಳಿಗೆ ಮಗನು ಇರುವನು ಅಂದನು. ಆದರೆ ಸಾರಳು ಭಯ ಪಟ್ಟು--ನಾನು ನಗಲಿಲ್ಲ ಎಂದು ಹೇಳಿ ಬೊಂಕಿದಾಗ ಆತನು--ಹಾಗಲ್ಲ, ನೀನು ನಕ್ಕದ್ದುಂಟು ಅಂದನು. ತರುವಾಯ ಆ ಮನುಷ್ಯರು ಎದ್ದು ಅಲ್ಲಿಂದ ಸೊದೋಮಿನ ಕಡೆಗೆ ನೋಡಿದರು. ಅಬ್ರಹಾಮನು ಅವರನ್ನು ಸಾಗಕಳುಹಿಸುವದಕ್ಕೆ ಅವರ ಸಂಗಡ ಹೋದನು. ಆಗ ಕರ್ತನು--ನಾನು ಮಾಡುವದನ್ನು ಅಬ್ರಹಾಮನಿಗೆ ಮರೆಮಾಡಲೋ? ಅಬ್ರಹಾ ಮನು ನಿಶ್ಚಯವಾಗಿ ಬಲವಾದ ದೊಡ್ಡ ಜನಾಂಗ ವಾಗುವನು, ಭೂಲೋಕದ ಜನಾಂಗಗಳೆಲ್ಲಾ ಅವನಲ್ಲಿ ಆಶೀರ್ವದಿಸಲ್ಪಡುವವು. ಕರ್ತನು ಅಬ್ರಹಾಮ ನಿಗೆ ಹೇಳಿದ್ದು ನೆರವೇರುವಂತೆ ಅವನು ತನ್ನ ಮಕ್ಕಳಿಗೂ ತರುವಾಯ ಅವನ ಮನೆಯವರಿಗೂ ಆತನ ಮಾರ್ಗವನ್ನು ಕೈಕೊಂಡು ನೀತಿನ್ಯಾಯಗಳನ್ನು ಅನುಸರಿಸಬೇಕೆಂದು ಅಪ್ಪಣೆಕೊಡುವನು ಎಂದು ನನಗೆ ತಿಳಿದದೆ ಎಂದು ಅಂದುಕೊಂಡನು. ಕರ್ತನು--ಸೊದೋಮ್ ಗೊಮೋರಗಳ ಕೂಗು ದೊಡ್ಡದಾಗಿರುವದರಿಂದಲೂ ಅವರ ಪಾಪವು ಘೋರವಾಗಿರುವದರಿಂದಲೂ