Genesis · chapter 27 · verse 13
Genesis 27:13 in Kannada
ಅದಕ್ಕೆ ಅವನ ತಾಯಿಯು ಅವನಿಗೆ--ನನ್ನ ಮಗನೇ, ನಿನ್ನ ಶಾಪವು ನನ್ನ ಮೇಲೆ ಇರಲಿ; ನೀನು ಮಾತ್ರ ನನ್ನ ಮಾತಿಗೆ ವಿಧೇಯನಾಗಿ ಹೋಗಿ ಅವುಗಳನ್ನು ನನ್ನ ಬಳಿಗೆ ತಕ್ಕೊಂಡು ಬಾ ಅಂದಳು.
Adakke avana taayiyu avanige--nanna magane, ninna shaapavu nanna mele irali; neenu maatra nanna maatige vidheyanaagi hogi avugalannu nanna balige takkondu baa andalu.
Genesis 27:13 in English
- King James Version (KJV)
- And his mother said unto him, Upon me [be] thy curse, my son: only obey my voice, and go fetch me [them].
- World English Bible (WEB)
- His mother said to him, “Let your curse be on me, my son. Only obey my voice, and go get them for me.”
- American Standard Version (ASV)
- And his mother said unto him, Upon me be thy curse, my son; only obey my voice, and go fetch me them.
- Bible in Basic English (BBE)
- And his mother said, Let the curse be on me, my son: only do as I say, and go and get them for me.
- Darby Translation (DBY)
- And his mother said to him, On me [be] thy curse, my son! Only hearken to my voice, and go, fetch [them].
- Webster's Bible (WBS)
- And his mother said to him, upon me [be] thy curse, my son; only obey my voice, and go, bring them to me.
- Young's Literal Translation (YLT)
- and his mother saith to him, 'On me thy disesteem, my son; only hearken to my voice, and go, take for me.'
Read in context
- 11ಅದಕ್ಕೆ ಯಾಕೋಬನು ತನ್ನ ತಾಯಿಯಾದ ರೆಬೆಕ್ಕ ಳಿಗೆ--ಇಗೋ, ನನ್ನ ಸಹೋದರನಾದ ಏಸಾವನು ರೋಮವುಳ್ಳ ಮನುಷ್ಯನಾಗಿದ್ದಾನೆ. ನಾನು ನುಣು ಪಾದ ಮನುಷ್ಯನಾಗಿದ್ದೇನೆ.
- 12ಒಂದು ವೇಳೆ ನನ್ನ ತಂದೆಯು ನನ್ನನ್ನು ಮುಟ್ಟಿದರೆ ಅವನಿಗೆ ನಾನು ಮೋಸಗಾರನಾಗಿ ಕಾಣುವೆನು. ಆಗ ಆಶೀರ್ವಾದ ವಲ್ಲ, ಶಾಪವನ್ನೇ ನನ್ನ ಮೇಲೆ ಬರಮಾಡಿಕೊಳ್ಳು ವೆನು ಅಂದನು.
- 13ಅದಕ್ಕೆ ಅವನ ತಾಯಿಯು ಅವನಿಗೆ--ನನ್ನ ಮಗನೇ, ನಿನ್ನ ಶಾಪವು ನನ್ನ ಮೇಲೆ ಇರಲಿ; ನೀನು ಮಾತ್ರ ನನ್ನ ಮಾತಿಗೆ ವಿಧೇಯನಾಗಿ ಹೋಗಿ ಅವುಗಳನ್ನು ನನ್ನ ಬಳಿಗೆ ತಕ್ಕೊಂಡು ಬಾ ಅಂದಳು.
- 14ಆಗ ಅವನು ಹೋಗಿ ಅವುಗಳನ್ನು ತೆಗೆದುಕೊಂಡು ತನ್ನ ತಾಯಿಗೆ ತಂದುಕೊಟ್ಟನು. ಅವನ ತಾಯಿಯು ಅವನ ತಂದೆಯು ಪ್ರೀತಿಸುವ ರುಚಿಯಾದ ಅಡಿಗೆಯನ್ನು ಸಿದ್ಧಮಾಡಿದಳು.
- 15ತರು ವಾಯ ರೆಬೆಕ್ಕಳು ಮನೆಯಲ್ಲಿ ತನ್ನ ಬಳಿಯಲ್ಲಿದ್ದ ಹಿರೀಮಗನಾದ ಏಸಾವನ ಒಳ್ಳೇ ವಸ್ತ್ರವನ್ನು ತಕ್ಕೊಂಡು ಕಿರೀಮಗನಾದ ಯಾಕೋಬನಿಗೆ ಉಡಿಸಿದಳು.
Cross references
- Matthew 27:25 ಮತ್ತಾಯನು 27:25ಅದಕ್ಕೆ ಜನರೆ ಲ್ಲರೂ ಪ್ರತ್ಯುತ್ತರವಾಗಿ--ಆತನ ರಕ್ತವು ನಮ್ಮ ಮೇಲೆಯೂ ನಮ್ಮ ಮಕ್ಕಳ ಮೇಲೆಯೂ ಇರಲಿ ಅಂದರು.
- 1 Samuel 25:24 1 ಸಮುವೇಲನು 25:24ದಯಮಾಡಿ ನಿನ್ನ ದಾಸಿಯನ್ನು ಮಾತಾಡಗೊಡಿಸಿ ನಿನ್ನ ದಾಸಿಯ ಮಾತುಗಳನ್ನು ಕೇಳು.
- 2 Samuel 14:9 2 ಸಮುವೇಲನು 14:9ಆದರೆ ತೆಕೋವಿನ ಸ್ತ್ರೀಯು ಅರಸನಿಗೆ--ಅರಸನಾದ ನನ್ನ ಒಡೆಯನೇ, ಆ ಅಕ್ರಮವು ನನ್ನ ಮೇಲೆಯೂ ನನ್ನ ತಂದೆಯ ಮನೆಯ ಮೇಲೆಯೂ ಇರಲಿ; ಅರಸನೂ ಅವನ ಸಿಂಹಾಸನವೂ ನಿರಾಪರಾಧವಾಗಿರಲಿ ಅಂದಳು.
- Genesis 43:9 ಆದಿಕಾಂಡ 43:9ನಾನು ಅವನಿಗೋಸ್ಕರ ಹೊಣೆಯಾಗಿರುವೆನು. ನೀನು ಅವನ ವಿಷಯದಲ್ಲಿ ನನ್ನನ್ನೇ ಕೇಳಬಹುದು. ನಾನು ಅವನನ್ನು ನಿನ್ನ ಬಳಿಗೆ ತಂದು ನಿನ್ನೆದುರಿಗೆ ನಿಲ್ಲಿಸದಿದ್ದರೆ ಎಂದೆಂದಿಗೂ ನಾನು ಆ ಅಪರಾಧವನ್ನು ಹೊರುವೆನು.
- 1 Samuel 14:24–28 1 ಸಮುವೇಲನು 14:24–28ಆದರೆ ಇಸ್ರಾಯೇಲ್ಯರು ಆ ದಿವಸದಲ್ಲಿ ಬಹಳ ಬಳಲಿಹೋದರು. ಯಾಕಂದರೆ ಸೌಲನು--ನಾನು ನನ್ನ ಶತ್ರುಗಳಿಗೆ ಮುಯ್ಯಿ ತೀರಿಸುವ ಹಾಗೆ ಸಾಯಂಕಾ ಲದ ವರೆಗೆ ಯಾವನು ಆಹಾರ ತಿನ್ನುತ್ತಾನೋ ಅವನು ಶಪಿಸಲ್ಪಡಲಿ ಎಂದು ಆಣೆ ಇಟ್ಟದ್ದರಿಂದ ಜನರೆಲ್ಲರೂ ಆಹಾರದ ರುಚಿ ನೋಡದೆ ಇದ್ದರು. ದೇಶದ ಜನರೆಲ್ಲರು ಅಡವಿಯಲ್ಲಿ ಹೋಗುತ್ತಿರುವಾಗ ನೆಲದ ಮೇಲೆ ಜೇನು ತುಪ್ಪ ಇತ್ತು. ಜನರು ಆ ಅಡವಿಯಲ್ಲಿ ಹೋಗುವಾಗ ಇಗೋ, ಜೇನು ತುಪ್ಪ ಸುರಿಯುತ್ತಿತ್ತು; ಆದರೆ ಜನರು ಆ ಆಣೆಯ ನಿಮಿತ್ತ ಭಯಪಟ್ಟದ್ದ ರಿಂದ ಒಬ್ಬನಾದರೂ ತನ್ನ ಬಾಯಿಗೆ ಹಾಕಿಕೊಳ್ಳಲಿಲ್ಲ. ಆದರೆ ತನ್ನ ತಂದೆಯು ಜನರಿಗೆ ಆಣೆ ಇಟ್ಟದ್ದನ್ನು ಯೋನಾತಾನನು ಕೇಳದೆ ಇದ್ದ ಕಾರಣ ತನ್ನ ಕೈಯಲ್ಲಿದ್ದ ಕೋಲನ್ನು ಚಾಚಿ ಅದನ್ನು ಜೇನು ತೊಟ್ಟಿ ಯಲ್ಲಿ ಅದ್ದಿ ತನ್ನ ಬಾಯಿಗೆ ಹಾಕಿಕೊಂಡನು. ಅವನ ಕಣ್ಣುಗಳು ಕಳೆಯನ್ನು ಹೊಂದಿದವು. ಆಗ ಜನರಲ್ಲಿ ಒಬ್ಬನು ಅವನಿಗೆ--ಈ ಹೊತ್ತು ಆಹಾರ ತಿನ್ನುವವನು ಶಪಿಸಲ್ಪಡಲಿ ಎಂದು ನಿನ್ನ ತಂದೆಯು ಜನರಿಗೆ ಕಟ್ಟುನಿಟ್ಟಾಗಿ ಆಣೆ ಇಟ್ಟಿದ್ದಾನೆ. ಅದಕ್ಕೋಸ್ಕರ ಜನರು ದಣಿದು ಹೋಗಿದ್ದಾರೆ ಅಂದನು.
- Genesis 25:33 ಆದಿಕಾಂಡ 25:33ಯಾಕೋಬನು-- ಈ ಹೊತ್ತು ನನಗೆ ಪ್ರಮಾಣಮಾಡು ಅಂದನು. ಆಗ ಅವನು ಯಾಕೋಬನಿಗೆ ಪ್ರಮಾಣಮಾಡಿ ತನ್ನ ಚೊಚ್ಚಲತನವನ್ನು ಅವನಿಗೆ ಮಾರಿದನು.ಆಗ ಯಾಕೋಬನು ಏಸಾವನಿಗೆ ರೊಟ್ಟಿಯನ್ನೂ ಅಲಸಂದಿಯ ತೋವೆಯನ್ನೂ ಕೊಟ್ಟನು. ಅವನು ತಿಂದು ಕುಡಿದು ಎದ್ದುಹೋದನು. ಹೀಗೆ ಏಸಾವನು ತನ್ನ ಚೊಚ್ಚಲತನದ ಹಕ್ಕನ್ನು ಉದಾಸೀನಮಾಡಿದನು.
- Genesis 25:23 ಆದಿಕಾಂಡ 25:23ಕರ್ತನು ಆಕೆಗೆ--ನಿನ್ನ ಹೊಟ್ಟೆಯಲ್ಲಿ ಎರಡು ಜನಾಂಗಗಳು ಇವೆ. ನಿನ್ನ ಗರ್ಭದೊಳಗಿನಿಂದಲೇ ಎರಡು ತರವಾದ ಜನಗಳು ಬೇರೆಬೇರೆಯಾಗುವರು. ಒಂದು ತರವಾದ ಜನಕ್ಕಿಂತ ಇನ್ನೊಂದು ಬಲಗೊಳ್ಳು ವದು. ಇದಲ್ಲದೆ ಹಿರಿಯನು ಕಿರಿಯನನ್ನು ಸೇವಿಸುವನು ಎಂದು ಹೇಳಿದನು.
- 1 Samuel 14:36–45 1 ಸಮುವೇಲನು 14:36–45ಸೌಲನು ಜನರಿಗೆ--ನಾವು ಈ ರಾತ್ರಿಯಲ್ಲಿ ಫಿಲಿಷ್ಟಿಯರನ್ನು ಬೆನ್ನಟ್ಟಿಹೋಗಿ ಉದಯಕಾಲದ ವರೆಗೆ ಅವರನ್ನು ಸುಲುಕೊಂಡು ಅವರಲ್ಲಿ ಒಬ್ಬನನ್ನಾದರೂ ಉಳಿಸಬಾರದು ಅಂದನು. ಅದಕ್ಕೆ ಜನರು--ನಿನ್ನ ಕಣ್ಣುಗಳಿಗೆ ಒಳ್ಳೇದಾಗಿ ತೋರುವದನ್ನೆಲ್ಲಾ ಮಾಡು ಅಂದರು. ಆಗ ಯಾಜಕನು--ದೇವರ ಸನ್ನಿಧಿಗೆ ಹೋಗೋಣ ಅಂದನು. ಸೌಲನು--ನಾನು ಫಿಲಿಷ್ಟಿಯರನ್ನು ಹಿಂಬಾಲಿಸಿ ಹೋಗಲೋ? ನೀನು ಅವರನ್ನು ಇಸ್ರಾಯೇಲ್ಯರ ಕೈಗೆ ಒಪ್ಪಿಸಿಕೊಡುವಿಯೋ ಎಂದು ದೇವರ ಆಲೋಚನೆಯನ್ನು ಕೇಳಿದನು; ಆದರೆ ಆತನು ಅವನಿಗೆ ಆ ದಿವಸದಲ್ಲಿ ಪ್ರತ್ಯುತ್ತರ ಕೊಡದೆ ಹೋದನು. ಆಗ ಸೌಲನು--ಜನರ ಎಲ್ಲಾ ಮುಖ್ಯಸ್ಥರೇ, ಇಲ್ಲಿ ಬನ್ನಿರಿ; ಈಹೊತ್ತು ಈ ಪಾಪ ಯಾವದರಿಂದ ಉಂಟಾಯಿತೆಂದು ತಿಳುಕೊಂಡು ನೋಡಿರಿ. ನನ್ನ ಕುಮಾರನಾದ ಯೋನಾತಾನ ನಿಂದಾದರೂ ಉಂಟಾಗಿದ್ದರೆ ಅವನು ಸಾಯಲೇ ಸಾಯುವನೆಂದು ಇಸ್ರಾಯೇಲನ್ನು ರಕ್ಷಿಸುವ ಕರ್ತನ ಮೇಲೆ ಆಣೆ ಇಟ್ಟು ಹೇಳುತ್ತೇನೆ ಅಂದನು. ಆದರೆ ಸಕಲ ಜನರಲ್ಲಿ ಒಬ್ಬನಾದರೂ ಅವನಿಗೆ ಪ್ರತ್ಯುತ್ತರ ಕೊಡಲಿಲ್ಲ. ಆಗ ಸೌಲನು ಸಮಸ್ತ ಇಸ್ರಾಯೇ ಲಿಗೆ--ನೀವು ಒಂದು ಕಡೆಯಲ್ಲಿ ಇರ್ರಿ; ನಾನೂ ನನ್ನ ಮಗನಾದ ಯೋನಾತಾನನೂ ಒಂದು ಕಡೆಯಲ್ಲಿ ಇರುತ್ತೇವೆ ಅಂದನು. ಜನರು ಸೌಲನಿಗೆ--ನಿನ್ನ ದೃಷ್ಟಿಗೆ ಒಳ್ಳೇದಾಗಿ ತೋರುವದನ್ನು ಮಾಡು ಅಂದರು. ಸೌಲನು ಇಸ್ರಾಯೇಲಿನ ದೇವರಾದ ಕರ್ತನಿಗೆ--ನೀನು ಪೂರ್ಣ ನಿರ್ಣಯವನ್ನು ದಯಪಾಲಿಸು ಎಂದು ಹೇಳಿ ಚೀಟು ಹಾಕಿದೆನು ಅಂದನು. ಸೌಲನಿಗೂ ಯೋನಾತಾನನಿಗೂ ಚೀಟುಬಂತು. ಆದರೆ ಜನರು ಪಾರಾದರು. ಸೌಲನು ಅವರಿಗೆ--ನನ್ನ ಮೇಲೆಯೂ ನನ್ನ ಮಗನಾದ ಯೋನಾತಾನನ ಮೇಲೆಯೂ ಚೀಟು ಹಾಕಿರಿ ಅಂದಾಗ ಯೋನಾತಾನನಿಗೆ ಚೀಟು ಬಿತ್ತು. ಆಗ ಸೌಲನು ಯೋನಾತಾನನಿಗೆ--ನೀನು ಮಾಡಿ ದ್ದನ್ನು ನನಗೆ ತಿಳಿಸು ಅಂದನು. ಅದಕ್ಕೆ ಯೋನಾ ತಾನನು--ನನ್ನ ಕೈಯಲ್ಲಿರುವ ಕೋಲಿನ ಕೊನೆಯಿಂದ ನಾನು ಸ್ವಲ್ಪ ಜೇನು ತುಪ್ಪವನ್ನು ತಕ್ಕೊಂಡು ರುಚಿ ನೋಡಿದೆನು; ಇಗೋ, ನಾನು ಸಾಯಬೇಕು ಅಂದನು. ಅದಕ್ಕೆ ಸೌಲನು--ಯೋನಾತಾನನೇ, ನೀನು ನಿಜವಾಗಿ ಸಾಯಬೇಕು; ಇಲ್ಲದಿದ್ದರೆ ದೇವರು ನನಗೆ ಹೆಚ್ಚಾದದ್ದನ್ನು ಮಾಡಲಿ ಅಂದನು. ಆದರೆ ಜನರು ಸೌಲನಿಗೆ--ಇಸ್ರಾಯೇಲಿನಲ್ಲಿ ಈ ದೊಡ್ಡ ರಕ್ಷಣೆ ಯನ್ನುಂಟು ಮಾಡಿದ ಯೋನಾತಾನನು ಸಾಯ ಬಹುದೋ? ಅದು ಎಂದಿಗೂ ಆಗದು; ಅವನು ಇಂದು ಕರ್ತನ ಸಹಾಯದ ಮೂಲಕ ಕಾರ್ಯವನ್ನು ನಡಿಸಿದ್ದರಿಂದ ಕರ್ತನ ಆಣೆ, ಅವನ ತಲೆಯಲ್ಲಿರುವ ಒಂದು ಕೂದಲಾದರೂ ನೆಲದ ಮೇಲೆ ಬೀಳಬಾರದು ಅಂದರು. ಜನರು ಯೋನಾತಾನನನ್ನು ಸಾಯದ ಹಾಗೆ ಬಿಡಿಸಿಕೊಂಡರು.
- Genesis 27:8 ಆದಿಕಾಂಡ 27:8ಆದದರಿಂದ ಈಗ ನನ್ನ ಮಗನೇ, ನಾನು ನಿನಗೆ ಆಜ್ಞಾಪಿಸುವ ನನ್ನ ಮಾತಿಗೆ ವಿಧೇಯನಾಗು.