Genesis · chapter 25 · verse 23
Genesis 25:23 in Kannada
ಕರ್ತನು ಆಕೆಗೆ--ನಿನ್ನ ಹೊಟ್ಟೆಯಲ್ಲಿ ಎರಡು ಜನಾಂಗಗಳು ಇವೆ. ನಿನ್ನ ಗರ್ಭದೊಳಗಿನಿಂದಲೇ ಎರಡು ತರವಾದ ಜನಗಳು ಬೇರೆಬೇರೆಯಾಗುವರು. ಒಂದು ತರವಾದ ಜನಕ್ಕಿಂತ ಇನ್ನೊಂದು ಬಲಗೊಳ್ಳು ವದು. ಇದಲ್ಲದೆ ಹಿರಿಯನು ಕಿರಿಯನನ್ನು ಸೇವಿಸುವನು ಎಂದು ಹೇಳಿದನು.
Kartanu aakege--ninna hotteyalli eradu janaangagalu ive. Ninna garbhadolaginindale eradu taravaada janagalu berebereyaaguvaru. Ondu taravaada janakkinta innondu balagollu vadu. Idallade hiriyanu kiriyanannu sevisuvanu endu helidanu.
Genesis 25:23 in English
- King James Version (KJV)
- And the LORD said unto her, Two nations [are] in thy womb, and two manner of people shall be separated from thy bowels; and [the one] people shall be stronger than [the other] people; and the elder shall serve the younger.
- World English Bible (WEB)
- The LORD said to her, “Two nations are in your womb. Two peoples will be separated from your body. The one people will be stronger than the other people. The elder will serve the younger.”
- American Standard Version (ASV)
- And Jehovah said unto her, Two nations are in thy womb, And two peoples shall be separated from thy bowels: And the one people shall be stronger than the other people; And the elder shall serve the younger.
- Bible in Basic English (BBE)
- And the Lord said to her, Two nations are in your body, and two peoples will come to birth from you: the one will be stronger than the other, and the older will be the servant of the younger.
- Darby Translation (DBY)
- And Jehovah said to her, Two nations are in thy womb, And two peoples shall be separated from thy bowels; And one people shall be stronger than the other people, And the elder shall serve the younger.
- Webster's Bible (WBS)
- And the LORD said to her, Two nations [are] in thy womb, and two manner of people shall be separated from thy bowels: and [the one] people shall be stronger than [the other] people; and the elder shall serve the younger.
- Young's Literal Translation (YLT)
- And Jehovah saith to her, 'Two nations [are] in thy womb, and two peoples from thy bowels are parted; and the [one] people than the [other] people is stronger; and the elder doth serve the younger.'
Read in context
- 21ಆಕೆಯು ಬಂಜೆ ಯಾಗಿದ್ದದರಿಂದ ಇಸಾಕನು ತನ್ನ ಹೆಂಡತಿಗೋಸ್ಕರ ಕರ್ತನನ್ನು ಬೇಡಿಕೊಂಡನು. ಕರ್ತನು ಅವನ ಬೇಡಿಕೆ ಯನ್ನು ಕೇಳಿದನು. ಆದದರಿಂದ ಅವನ ಹೆಂಡತಿಯಾದ ರೆಬೆಕ್ಕಳು ಗರ್ಭಿಣಿಯಾದಳು.
- 22ಆಗ ಅವಳ ಗರ್ಭ ದಲ್ಲಿ ಶಿಶುಗಳು ಒಂದನ್ನೊಂದು ನೂಕಿಕೊಂಡಾಗ ಆಕೆಯು--ಯಾಕೆ ನನಗೆ ಹೀಗೆ ಆಗುತ್ತಿರುವದು ಎಂದು ವಿಚಾರಿಸುವದಕ್ಕೆ ಕರ್ತನ ಬಳಿಗೆ ಹೋದಳು.
- 23ಕರ್ತನು ಆಕೆಗೆ--ನಿನ್ನ ಹೊಟ್ಟೆಯಲ್ಲಿ ಎರಡು ಜನಾಂಗಗಳು ಇವೆ. ನಿನ್ನ ಗರ್ಭದೊಳಗಿನಿಂದಲೇ ಎರಡು ತರವಾದ ಜನಗಳು ಬೇರೆಬೇರೆಯಾಗುವರು. ಒಂದು ತರವಾದ ಜನಕ್ಕಿಂತ ಇನ್ನೊಂದು ಬಲಗೊಳ್ಳು ವದು. ಇದಲ್ಲದೆ ಹಿರಿಯನು ಕಿರಿಯನನ್ನು ಸೇವಿಸುವನು ಎಂದು ಹೇಳಿದನು.
- 24ಆಕೆಯು ಹೆರುವದಕ್ಕೆ ದಿನಗಳು ಪೂರ್ತಿಯಾ ದಾಗ ಇಗೋ, ಆಕೆಯ ಗರ್ಭದಲ್ಲಿ ಅವಳಿ ಮಕ್ಕಳಿದ್ದರು.
- 25ಮೊದಲನೆಯವನು ಕೆಂಪಾಗಿಯೂ ಕೂದಲೆಲ್ಲಾ ವಸ್ತ್ರದಂತೆ ಇರುವವನಾಗಿಯೂ ಹೊರ ಬಂದಾಗ ಅವನಿಗೆ ಏಸಾವ ಎಂದು ಹೆಸರಿಟ್ಟರು.
Cross references
- Romans 9:10–13 ರೋಮಾಪುರದವರಿಗೆ 9:10–13ಇದು ಮಾತ್ರವಲ್ಲದೆ ರೆಬೆಕ್ಕಳು ಸಹ ಒಬ್ಬನಿಂದ ಅಂದರೆ ನಮ್ಮ ಪಿತೃವಾದ ಇಸಾಕನಿಂದ ಗರ್ಭಿಣಿಯಾದಾಗ (ಮಕ್ಕಳಿನ್ನೂ ಹುಟ್ಟದಿರುವಾಗ ಮತ್ತು ಒಳ್ಳೇದನ್ನಾಗಲಿ ಕೆಟ್ಟದ್ದನ್ನಾಗಲಿ ಮಾಡದಿರು ವಾಗ ಆಯ್ಕೆಯ ಪ್ರಕಾರ ದೇವರ ಸಂಕಲ್ಪವು ಸ್ಥಿರಗೊಳ್ಳು ವಂತೆ ಕ್ರಿಯೆಗಳಿಂದಲ್ಲ, ಆದರೆ ಕರೆದಾತನಿಂದಲೇ) ಹಿರಿಯವನು ಕಿರಿಯವನಿಗೆ ಸೇವೆ ಮಾಡುವನು ಎಂದು ಆಕೆಗೆ ಹೇಳಲ್ಪಟ್ಟಿದೆ. ಇದಕ್ಕನುಸಾರ-- ನಾನು ಯಾಕೋಬನನ್ನು ಪ್ರೀತಿಸಿದೆನು ಮತು ಏಸಾವನನ್ನು ಹಗೆಮಾಡಿದೆನು ಎಂದು ಬರೆಯಲ್ಪಟ್ಟಿದೆ.
- Genesis 27:40 ಆದಿಕಾಂಡ 27:40ನಿನ್ನ ಕತ್ತಿಯಿಂದಲೇ ನೀನು ಬದುಕುವಿ, ನಿನ್ನ ಸಹೋದರನನ್ನು ಸೇವಿಸುವಿ; ಆದರೆ ನಿನಗೆ ಪ್ರಭುತ್ವವು ಬಂದಾಗ ಆಗುವದೇನಂದರೆ, ಅವನ ನೊಗವನ್ನು ನಿನ್ನ ಕೊರಳಿನಿಂದ ಮುರಿದು ಹಾಕುವಿ.
- Genesis 27:29 ಆದಿಕಾಂಡ 27:29ಜನಗಳು ನಿನ್ನನ್ನು ಸೇವಿಸಲಿ, ಜನಾಂಗಗಳು ನಿನಗೆ ಅಡ್ಡಬೀಳಲಿ, ನಿನ್ನ ಸಹೋದರರಿಗೆ ನೀನು ದೊರೆ ಯಾಗಿರು. ನಿನ್ನ ತಾಯಿಯ ಮಕ್ಕಳು ನಿನಗೆ ಅಡ್ಡಬೀಳಲಿ, ನಿನ್ನನ್ನು ಶಪಿಸುವವರಿಗೆ ಶಾಪವೂ ಆಶೀರ್ವದಿಸುವ ವರಿಗೆ ಆಶೀರ್ವಾದವೂ ಆಗಲಿ ಅಂದನು.
- 2 Samuel 8:14 2 ಸಮುವೇಲನು 8:14ಎದೋಮಿ ನಲ್ಲಿ ಕಾವಲುದಂಡುಗಳನ್ನು ಇಟ್ಟನು. ಎಲ್ಲಾ ಎದೋಮಿ ನಲ್ಲಿ ಅವನು ಕಾವಲುದಂಡುಗಳನ್ನು ಇಟ್ಟದ್ದರಿಂದ ಎದೋಮ್ಯರೆಲ್ಲರೂ ದಾವೀದನಿಗೆ ದಾಸರಾದರು. ದಾವೀದನು ಹೋದಲ್ಲೆಲ್ಲಾ ಕರ್ತನು ಅವನನ್ನು ಕಾಪಾಡಿದನು.
- Malachi 1:2–5 ಮಲಾಕಿಯ 1:2–5ನಿಮ್ಮನ್ನು ಪ್ರೀತಿಮಾಡಿದ್ದೇನೆಂದು ಕರ್ತನು ಹೇಳುತ್ತಾನೆ; ಆದಾಗ್ಯೂ ನೀವು--ಯಾವದರಲ್ಲಿ ನೀನು ನಮ್ಮನ್ನು ಪ್ರೀತಿಮಾಡಿದ್ದೀ ಎಂದು ಹೇಳುತ್ತೀರಿ. ಕರ್ತನು ಅನು ್ನತ್ತಾನೆ--ಏಸಾವನು ಯಾಕೋಬನಿಗೆ ಅಣ್ಣನಲ್ಲವೋ? ಆದಾಗ್ಯೂ ನಾನು ಯಾಕೋಬನನ್ನು ಪ್ರೀತಿ ಮಾಡಿ ದೆನು. ಆದರೆ ಏಸಾವನನ್ನು ಹಗೆ ಮಾಡಿದೆನು; ಅವನ ಬೆಟ್ಟಗಳನ್ನು ಹಾಳುಮಾಡಿ ಅವನ ಸ್ವಾಸ್ತ್ಯವನ್ನು ಅಡವಿಯ ಸರ್ಪಗಳಿಗೆ ಕೊಟ್ಟೆನು. ಎದೋಮು--ನಾವು ಬಡಕಲಾದೆವು, ಆದರೆ ನಾವು ತಿರಿಗಿಕೊಂಡು ಹಾಳಾದ ಸ್ಥಳಗಳನ್ನು ಕಟ್ಟುವೆವೆಂದು ಹೇಳಿದರೂ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಅವರು ಕಟ್ಟಬಹುದು, ಆದರೆ ನಾನು ಕೆಡವಿಬಿಡುವೆನು; ಅದಕ್ಕ ವರು--ದುಷ್ಟತನದ ಮೇರೆಯೂ ಕರ್ತನ ನಿತ್ಯ ಕೋಪದ ಜನಾಂಗವೆಂದೂ ಕರೆಯುವರು. ನಿಮ್ಮ ಕಣ್ಣುಗಳು ನೋಡುವವು; ಇಸ್ರಾಯೇಲಿನ ಮೇರೆ ಯಿಂದ ಕರ್ತನು ಘನಹೊಂದುವನು ಎಂದು ನೀವು ಹೇಳುವಿರಿ.
- Ezekiel 25:12–14 ಯೆಹೆಜ್ಕೇಲನು 25:12–14ದೇವರಾದ ಕರ್ತನು--ಎದೋಮು ಮತ್ತು ಯೆಹೂದನ ಮನೆತನದವರಿಗೆ ಮುಯ್ಯಿಗೆಮುಯ್ಯಿ ತೀರಿಸಿದ್ದರಿಂದಲೇ ಮತ್ತು ಅತಿ ಅಪರಾಧ ಮಾಡಿ ಅವರಲ್ಲಿ ಸೇಡು ತೀರಿಸಿ ತೆಗೆದುಕೊಂಡದ್ದರಿಂದಲೇ ಎಂದು ಹೇಳುತ್ತಾನೆ. ಆದದರಿಂದ ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನಾನೂ ನನ್ನ ಕೈಯನ್ನು ಎದೋಮಿನ ಮೇಲೆ ಚಾಚುತ್ತೇನೆ, ಅದರೊಳಗಿನಿಂದ ಮನುಷ್ಯರನ್ನೂ ಮೃಗಗಳನ್ನೂ ಕಡಿದುಬಿಡುತ್ತೇನೆ, ತೇಮಾನು ಮೊದಲುಗೊಂಡು ಅದನ್ನು ಕಾಡನ್ನಾಗಿ ಮಾಡುತ್ತೇನೆ; ದೆದಾನಿಯವರು ಕತ್ತಿಯಿಂದ ಬೀಳು ವರು. ನಾನು ನನ್ನ ಜನರಾದ ಇಸ್ರಾಯೇಲಿನ ಮೂಲಕವಾಗಿ ನನ್ನ ಪ್ರತಿದಂಡನೆಯನ್ನು ಎದೋಮಿನ ಮೇಲೆ ಇಡುವೆನು, ಅವರು ಎದೋಮಿನಲ್ಲಿ ನನ್ನ ಕೋಪದ ಪ್ರಕಾರವೂ ರೋಷದ ಪ್ರಕಾರವೂ ಮಾಡು ವರು; ಹೀಗೆಯೇ ಅವರು ನನ್ನ ಪ್ರತಿದಂಡನೆಯನ್ನು ತಿಳಿಯುವರೆಂದು ದೇವರಾದ ಕರ್ತನು ಹೇಳುತ್ತಾನೆ.
- Genesis 24:60 ಆದಿಕಾಂಡ 24:60ಇದ ಲ್ಲದೆ ಅವರು ರೆಬೆಕ್ಕಳನ್ನು ಆಶೀರ್ವದಿಸಿ ಆಕೆಗೆ--ನೀನು ನಮ್ಮ ಸಹೋದರಿ, ನೀನು ಸಹಸ್ರ ಸಹಸ್ರಗಳಿಗೆ ತಾಯಿಯಾಗು; ನಿನ್ನ ಸಂತಾನದವರು ತಮ್ಮನ್ನು ಹಗೆ ಮಾಡುವವರ ದ್ವಾರಗಳನ್ನು ಸ್ವಾಧೀನಮಾಡಿಕೊಳ್ಳಲಿ ಅಂದರು.
- 1 Chronicles 18:13 1 ಪೂರ್ವಕಾಲವೃತ್ತಾಂತ 18:13ದಾವೀದನು ಎಲ್ಲಿ ಹೋದನೋ ಅಲ್ಲಿ ಕರ್ತನು ಅವನನ್ನು ರಕ್ಷಿಸಿದನು.
- Genesis 17:16 ಆದಿಕಾಂಡ 17:16ಆಕೆಯನ್ನು ನಾನು ಆಶೀರ್ವದಿ ಸುತ್ತೇನೆ. ಆಕೆಯಿಂದ ನಿನಗೆ ಒಬ್ಬ ಮಗನನ್ನು ಸಹ ಕೊಡುತ್ತೇನೆ. ಹೌದು, ಜನಾಂಗಗಳ ತಾಯಿಯಾ ಗುವಂತೆ ಆಕೆಯನ್ನು ಆಶೀರ್ವದಿಸುತ್ತೇನೆ. ಆಕೆಯಿಂದ ಜನರ ಅರಸರು ಹುಟ್ಟುವರು ಅಂದನು.
- Psalm 60:8–9 ಕೀರ್ತನೆಗಳು 60:8–9ಮೋವಾಬ್ ನನ್ನನ್ನು ತೊಳೆಯುವ ಪಾತ್ರೆಯು; ಎದೋಮಿನ ಮೇಲೆ ನನ್ನ ಕೆರವನ್ನು ಎಸೆಯುವೆನು; ಫಿಲಿಷ್ಟಿಯವೇ, ನನ್ನ ನಿಮಿತ್ತ ಜಯಧ್ವನಿ ಮಾಡು. ಬಲವುಳ್ಳ ಪಟ್ಟಣಕ್ಕೆ ನನ್ನನ್ನು ಕರತರುವವನಾರು? ಎದೋಮಿನೊಳಗೆ ನನ್ನನ್ನು ನಡಿಸುವವನಾರು?
- Numbers 20:14 ಅರಣ್ಯಕಾಂಡ 20:14ಇದಲ್ಲದೆ ಮೋಶೆಯು ಕಾದೇಶಿನಿಂದ ಎದೋಮಿನ ಅರಸನ ಬಳಿಗೆ ದೂತರನ್ನು ಕಳುಹಿಸಿ ಹೇಳಿದ್ದೇನಂದರೆ--ನಿನ್ನ ಸಹೋದರನಾದ ಇಸ್ರಾಯೇ ಲನು ಹೇಳುವದೇನಂದರೆ--ನಮಗೆ ಉಂಟಾದ ಸಕಲ ಆಯಾಸವನ್ನು ನೀನು ಅರಿತಿದ್ದೀ.
- Amos 1:11–12 ಆಮೋಸ 1:11–12ಕರ್ತನು ಹೀಗೆ ಹೇಳುತ್ತಾನೆ--ಎದೋಮಿನ ಮೂರು ಮತ್ತು ನಾಲ್ಕರ ಅಪರಾಧಗಳ ನಿಮಿತ್ತವಾಗಿ ನಾನು ಅದರ ದಂಡನೆಯಿಂದ ತಪ್ಪಿಸುವದಿಲ್ಲ. ಅವನು ತನ್ನ ಎಲ್ಲಾ ಕನಿಕರಗಳನ್ನು ಬಿಸಾಡಿಬಿಟ್ಟು ತನ್ನ ಸಹೋ ದರನನ್ನು ಕತ್ತಿಯ ಸಹಿತ ಹಿಂಬಾಲಿಸಿದನು. ಅವನ ಕೋಪವು ನಿರಂತರವಾಗಿ ಹರಿಯುತ್ತಿತ್ತು; ತನ್ನ ರೌದ್ರ ವನ್ನು ನಿತ್ಯವಾಗಿ ಇಟ್ಟುಕೊಂಡನು. ಆದರೆ ನಾನು ತೇಮಾನಿನ ಮೇಲೆ ಬೆಂಕಿಯನ್ನು ಕಳುಹಿಸುವೆನು, ಅದು ಬೊಚ್ರದ ಅರಮನೆಗಳನ್ನು ನುಂಗಿಬಿಡುವದು.
Original words (Hebrew)
- said · H559אָמַר ʼâmar
- Two · H8147שְׁנַיִם shᵉnayim
- nations · H1471גּוֹי gôwy
- womb · H990בֶּטֶן beṭen
- manner · H8147שְׁנַיִם shᵉnayim
- people · H3816לְאֹם lᵉʼôm
- separated · H6504פָּרַד pârad
- bowels · H4578מֵעֶה mêʻeh
- people · H3816לְאֹם lᵉʼôm
- stronger · H553אָמַץ ʼâmats
- people · H3816לְאֹם lᵉʼôm
- elder · H7227רַב rab
- serve · H5647עָבַד ʻâbad
- younger · H6810צָעִיר tsâʻîyr