Genesis · chapter 27 · verse 40
Genesis 27:40 in Kannada
ನಿನ್ನ ಕತ್ತಿಯಿಂದಲೇ ನೀನು ಬದುಕುವಿ, ನಿನ್ನ ಸಹೋದರನನ್ನು ಸೇವಿಸುವಿ; ಆದರೆ ನಿನಗೆ ಪ್ರಭುತ್ವವು ಬಂದಾಗ ಆಗುವದೇನಂದರೆ, ಅವನ ನೊಗವನ್ನು ನಿನ್ನ ಕೊರಳಿನಿಂದ ಮುರಿದು ಹಾಕುವಿ.
Ninna kattiyindale neenu badukuvi, ninna sahodaranannu sevisuvi; aadare ninage prabhutvavu bandaaga aaguvadenandare, avana nogavannu ninna koralininda muridu haakuvi.
Genesis 27:40 in English
- King James Version (KJV)
- And by thy sword shalt thou live, and shalt serve thy brother; and it shall come to pass when thou shalt have the dominion, that thou shalt break his yoke from off thy neck.
- World English Bible (WEB)
- You will live by your sword, and you will serve your brother. It will happen, when you will break loose, that you will shake his yoke from off your neck.”
- American Standard Version (ASV)
- And by thy sword shalt thou live, and thou shalt serve thy brother; And it shall come to pass, when thou shalt break loose, That thou shalt shake his yoke from off thy neck.
- Bible in Basic English (BBE)
- By your sword will you get your living and you will be your brother's servant; but when your power is increased his yoke will be broken from off your neck.
- Darby Translation (DBY)
- And by thy sword shalt thou live; And thou shalt serve thy brother; And it shall come to pass when thou rovest about, That thou shalt break his yoke from off thy neck.
- Webster's Bible (WBS)
- And by thy sword shalt thou live, and shalt serve thy brother: and it shall come to pass when thou shalt have the dominion, that thou shalt break his yoke from off thy neck.
- Young's Literal Translation (YLT)
- and by thy sword dost thou live, and thy brother dost thou serve; and it hath come to pass when thou rulest, that thou hast broken his yoke from off thy neck.'
Read in context
- 38ಏಸಾವನು ತನ್ನ ತಂದೆಗೆ--ನನ್ನ ತಂದೆಯೇ, ಆ ಒಂದೇ ಆಶೀರ್ವಾದವು ನಿನಗೆ ಇದೆಯೋ? ತಂದೆಯೇ, ನನ್ನನ್ನೂ ಹೌದು, ನನ್ನನ್ನೂ ಆಶೀರ್ವದಿಸು ಎಂದು ಅವನು ಗಟ್ಟಿಯಾಗಿ ಕೂಗಿ ಅತ್ತನು.
- 39ಆಗ ಅವನ ತಂದೆಯಾದ ಇಸಾಕನು ಪ್ರತ್ಯುತ್ತರವಾಗಿ ಅವನಿಗೆ--ಇಗೋ, ನಿನ್ನ ನಿವಾಸವು ಭೂಮಿಯಸಾರ ದಿಂದಲೂ ಆಕಾಶದ ಮಂಜಿನಿಂದಲೂ ಇರುವದು.
- 40ನಿನ್ನ ಕತ್ತಿಯಿಂದಲೇ ನೀನು ಬದುಕುವಿ, ನಿನ್ನ ಸಹೋದರನನ್ನು ಸೇವಿಸುವಿ; ಆದರೆ ನಿನಗೆ ಪ್ರಭುತ್ವವು ಬಂದಾಗ ಆಗುವದೇನಂದರೆ, ಅವನ ನೊಗವನ್ನು ನಿನ್ನ ಕೊರಳಿನಿಂದ ಮುರಿದು ಹಾಕುವಿ.
- 41ತಂದೆಯು ಯಾಕೋಬನಿಗೆ ಕೊಟ್ಟ ಆಶೀರ್ವಾದ ಕ್ಕೋಸ್ಕರ ಏಸಾವನು ಅವನನ್ನು ಹಗೆಮಾಡಿ--ನನ್ನ ತಂದೆಗೋಸ್ಕರ ದುಃಖಪಡುವ ದಿನಗಳು ಸವಿಾಪ ವಾಗಿವೆ, ತರುವಾಯ ನಾನು ನನ್ನ ಸಹೋದರ ನಾದ ಯಾಕೋಬನನ್ನು ಕೊಲ್ಲುವೆನು ಎಂದು ಹೃದಯದಲ್ಲಿ ಅಂದುಕೊಂಡನು.
- 42ರೆಬೆಕ್ಕಳಿಗೆ ತನ್ನ ಹಿರೀ ಮಗನಾದ ಏಸಾವನ ಮಾತುಗಳು ತಿಳಿಸಲ್ಪಟ್ಟಾಗ ಆಕೆಯು ತನ್ನ ಕಿರೀ ಮಗನಾದ ಯಾಕೋಬನನ್ನು ಕರೇಕಳುಹಿಸಿ ಅವನಿಗೆ--ಇಗೋ, ನಿನ್ನ ಸಹೋದರ ನಾದ ಏಸಾವನು ನಿನ್ನನ್ನು ಕೊಂದು ತನ್ನನ್ನು ಸಂತೈಸಿಕೊಳ್ಳುವದಕ್ಕಿದ್ದಾನೆ.
Cross references
- Genesis 25:23 ಆದಿಕಾಂಡ 25:23ಕರ್ತನು ಆಕೆಗೆ--ನಿನ್ನ ಹೊಟ್ಟೆಯಲ್ಲಿ ಎರಡು ಜನಾಂಗಗಳು ಇವೆ. ನಿನ್ನ ಗರ್ಭದೊಳಗಿನಿಂದಲೇ ಎರಡು ತರವಾದ ಜನಗಳು ಬೇರೆಬೇರೆಯಾಗುವರು. ಒಂದು ತರವಾದ ಜನಕ್ಕಿಂತ ಇನ್ನೊಂದು ಬಲಗೊಳ್ಳು ವದು. ಇದಲ್ಲದೆ ಹಿರಿಯನು ಕಿರಿಯನನ್ನು ಸೇವಿಸುವನು ಎಂದು ಹೇಳಿದನು.
- 2 Kings 8:20–22 2 ಅರಸುಗಳು 8:20–22ಅವನ ಕಾಲದಲ್ಲಿ ಯೆಹೂದದ ಕೈಕೆಳಗಿದ್ದ ಎದೋಮ್ಯರು ತಿರುಗಿ ಬಿದ್ದು ತಮಗೆ ಒಬ್ಬ ಅರಸ ನನ್ನು ಮಾಡಿಕೊಂಡರು. ಆದದರಿಂದ ಯೆಹೋ ರಾಮನು ತನ್ನ ಬಳಿಯಲ್ಲಿದ್ದ ಎಲ್ಲಾ ರಥಗಳನ್ನು ತಕ್ಕೊಂಡು ಚಾಯಾರಿಗೆ ಹೋಗಿ ರಾತ್ರಿಯಲ್ಲಿ ಎದ್ದು ತನ್ನನ್ನು ಸುತ್ತಿಕೊಂಡಿದ್ದ ಎದೋಮ್ಯರನ್ನೂ ರಥಗಳ ಯಜಮಾನರನ್ನೂ ಸಂಹರಿಸಿದನು. ಜನರು ತಮ್ಮ ಡೇರೆಗಳಿಗೆ ಓಡಿಹೋದರು. ಆದರೆ ಎದೋಮು ಯೆಹೂದದ ಕೈಕೆಳಗೆ ಇರದ ಹಾಗೆ ಅಂದಿನಿಂದ ಈ ವರೆಗೂ ತಿರುಗಿ ಬಿತ್ತು. ಆ ಕಾಲ ದಲ್ಲಿಯೇ ಲಿಬ್ನ ತಿರುಗಿ ಬಿತ್ತು.
- 2 Samuel 8:14 2 ಸಮುವೇಲನು 8:14ಎದೋಮಿ ನಲ್ಲಿ ಕಾವಲುದಂಡುಗಳನ್ನು ಇಟ್ಟನು. ಎಲ್ಲಾ ಎದೋಮಿ ನಲ್ಲಿ ಅವನು ಕಾವಲುದಂಡುಗಳನ್ನು ಇಟ್ಟದ್ದರಿಂದ ಎದೋಮ್ಯರೆಲ್ಲರೂ ದಾವೀದನಿಗೆ ದಾಸರಾದರು. ದಾವೀದನು ಹೋದಲ್ಲೆಲ್ಲಾ ಕರ್ತನು ಅವನನ್ನು ಕಾಪಾಡಿದನು.
- 2 Chronicles 21:8 2 ಪೂರ್ವಕಾಲವೃತ್ತಾಂತ 21:8ಯೆಹೋರಾಮನ ದಿನಗಳಲ್ಲಿ ಎದೋಮ್ಯರು ಯೆಹೂ ದ್ಯರ ರಾಜ್ಯದ ಅಧೀನದಿಂದ ತಿರುಗಿಬಿದ್ದು ತಮಗೆ ತಾವೇ ಅರಸನನ್ನು ಮಾಡಿಕೊಂಡರು;
- 2 Chronicles 25:11–12 2 ಪೂರ್ವಕಾಲವೃತ್ತಾಂತ 25:11–12ಅಮಚ್ಯನು ತನ್ನನ್ನು ಬಲಪಡಿಸಿ ತನ್ನ ಜನರನ್ನು ನಡಿಸಿಕೊಂಡು ಉಪ್ಪಿನ ತಗ್ಗಿಗೆ ಹೋಗಿ ಅಲ್ಲಿ ಸೇಯಾ ರಿನ ಮಕ್ಕಳೊಳಗೆ ಹತ್ತು ಸಾವಿರ ಮಂದಿಯನ್ನು ಹೊಡೆದನು. ಬದುಕಿದ್ದ ಬೇರೆ ಹತ್ತು ಸಾವಿರ ಮಂದಿಯನ್ನು ಯೆಹೂದನ ಮಕ್ಕಳು ಸೆರೆಯಾಗಿ ಒಯ್ದು ಬಂಡೆಯ ಶಿಖರಕ್ಕೆ ಅವರನ್ನು ಕರಕೊಂಡು ಹೋಗಿ ಬಂಡೆಯ ಶಿಖರದಿಂದ ಅವರನ್ನು ದೊಬ್ಬಿದರು. ಆದ ದರಿಂದ ಜನರೆಲ್ಲರು ತುಂಡುತುಂಡಾದರು.
- 2 Chronicles 21:10 2 ಪೂರ್ವಕಾಲವೃತ್ತಾಂತ 21:10ಹೀಗೆಯೇ ಇಂದಿನ ವರೆಗೂ ಎದೋಮ್ಯರು ಯೆಹೂದ್ಯರ ಅಧೀನಕ್ಕೆ ತಿರುಗಿ ಬಿದ್ದರು. ಅದೇ ಕಾಲದಲ್ಲಿ ಅವರು ತಮ್ಮ ಪಿತೃಗಳ ದೇವರಾದ ಕರ್ತನನ್ನು ಬಿಟ್ಟುಬಿಟ್ಟದ್ದರಿಂದ ಲಿಬ್ನವು ಅವರ ಅಧೀನಕ್ಕೆ ತಪ್ಪಿ ತಿರುಗಿಬಿತ್ತು.
- Psalm 60:8 ಕೀರ್ತನೆಗಳು 60:8ಮೋವಾಬ್ ನನ್ನನ್ನು ತೊಳೆಯುವ ಪಾತ್ರೆಯು; ಎದೋಮಿನ ಮೇಲೆ ನನ್ನ ಕೆರವನ್ನು ಎಸೆಯುವೆನು; ಫಿಲಿಷ್ಟಿಯವೇ, ನನ್ನ ನಿಮಿತ್ತ ಜಯಧ್ವನಿ ಮಾಡು.
- 2 Chronicles 28:17 2 ಪೂರ್ವಕಾಲವೃತ್ತಾಂತ 28:17ಯಾಕಂದರೆ ಎದೋಮ್ಯರು ತಿರಿಗಿ ಬಂದು ಯೆಹೂದದವರನ್ನು ಸಂಹರಿಸಿ ಕೆಲವರನ್ನು ಸೆರೆಯಾಗಿ ತಕ್ಕೊಂಡು ಹೋದರು.
- 1 Kings 11:15–17 1 ಅರಸುಗಳು 11:15–17ಅವನು ಎದೋಮಿನಲ್ಲಿ ಅರಸನ ಸಂತತಿಯವನಾಗಿದ್ದನು. ಹೇಗಂದರೆ, ದಾವೀದನು ಎದೋಮಿನಲ್ಲಿ ರುವಾಗ ಸೈನ್ಯಾಧಿಪತಿಯಾದ ಯೋವಾಬನು ಎದೋ ಮಿನಲ್ಲಿ ಗಂಡಸರೆಲ್ಲರನ್ನೂ ಕೊಂದುಹಾಕಿದ ತರು ವಾಯ ಕೊಂದು ಹಾಕಲ್ಪಟ್ಟವರನ್ನು ಹೂಣಿಡಲು ಹೋದಾಗ ಹದದನು ಇನ್ನೂ ಚಿಕ್ಕ ಹುಡುಗನಾಗಿದ್ದು ಅವನೂ ಅವನ ಸಂಗಡ ಅವನ ತಂದೆಯ ಸೇವಕ ರಾದ ಎದೋಮ್ಯರಲ್ಲಿ ಕೆಲವರೂ ಗುಪ್ತದಲ್ಲಿ ಪ್ರವೇಶಿಸಲು ಓಡಿಹೋದರು. ಯೋವಾಬನು ಎದೋಮಿನಲ್ಲಿರುವ ಗಂಡಸರೆಲ್ಲರನ್ನು ಸಂಹರಿಸುವ ವರೆಗೂ ಇಸ್ರಾಯೇಲಿನ ಸಮಸ್ತ ಸೈನ್ಯದ ಸಂಗಡ ಅಲ್ಲಿ ಆರು ತಿಂಗಳು ಇದ್ದನು.
- Genesis 32:6 ಆದಿಕಾಂಡ 32:6ಆಗ ದೂತರು ಯಾಕೋಬನ ಬಳಿಗೆ ಹಿಂತಿರುಗಿ ಬಂದು--ನಾವು ನಿನ್ನ ಸಹೋದರನಾದ ಏಸಾವನ ಬಳಿಗೆ ಹೋಗಿ ಬಂದಿದ್ದೇವೆ; ಅವನು ನಾನೂರು ಮಂದಿಯನ್ನು ಕರಕೊಂಡು ನಿನ್ನನ್ನು ಎದುರುಗೊಳ್ಳುವದಕ್ಕೆ ಬರುತ್ತಾನೆ ಅಂದರು.
- Obadiah 1:17–21 ಓಬದ್ಯ 1:17–21ಆದರೆ ಚೀಯೋನ್ ಪರ್ವತದಲ್ಲಿ ಬಿಡುಗಡೆ ಇರುವದು, ಅದು ಪರಿಶುದ್ಧ ವಾಗಿರುವದು; ಯಾಕೋಬಿನ ಮನೆತನದವರು ತಮ್ಮ ಸ್ವಾಸ್ತ್ಯಗಳನ್ನು ಸ್ವತಂತ್ರಿಸಿಕೊಳ್ಳುವರು. ಇದಲ್ಲದೆ ಯಾಕೋಬಿನ ಮನೆತನದವರು ಬೆಂಕಿಯಾಗಿಯೂ ಯೋಸೇಫನ ಮನೆತನದವರು ಜ್ವಾಲೆಯಾಗಿಯೂ ಇರುವರು; ಏಸಾವನ ಮನೆತನದವರು ಕೂಳೆಯಾಗು ವರು. ಅವರು ಹೊತ್ತಿಸಿ ಇವರನ್ನು ತಿಂದುಬಿಡುವರು; ಏಸಾವನ ಮನೆತನದವರಿಗೆ ಯಾರೂ ಉಳಿಯರು; ಕರ್ತನೇ ಅದನ್ನು ನುಡಿದಿದ್ದಾನೆ. ದಕ್ಷಿಣದವರು ಏಸಾವನ ಬೆಟ್ಟವನ್ನೂ ಬೈಲಿನವರು ಫಿಲಿಷ್ಟಿಯರನ್ನೂ ಸ್ವತಂತ್ರಿಸಿಕೊಳ್ಳುವರು; ಎಫ್ರಾಯಾಮಿನ ಹೊಲ ಗಳನ್ನು ಸಮಾರ್ಯದ ಹೊಲಗಳನ್ನು ಸಹ ಸ್ವಾಧೀನ ಮಾಡಿಕೊಳ್ಳುವರು ಮತ್ತು ಬೆನ್ಯಾವಿಾನನು ಗಿಲ್ಯಾದನ್ನು ಸ್ವತಂತ್ರಿಸಿಕೊಳ್ಳುವನು. ಇದಲ್ಲದೆ ಚಾರೆಪತಿನ ವರೆಗೂ ಕಾನಾನ್ಯರಲ್ಲಿರುವ ಇಸ್ರಾಯೇಲನ ಮಕ್ಕಳ ಈ ಸೈನ್ಯದ ಸೆರೆಯವರು ಸೆಫರಾದಿನಲ್ಲಿರುವ ಯೆರೂ ಸಲೇಮಿನ ಸೆರೆಯವರು ದಕ್ಷಿಣದ ಪಟ್ಟಣಗಳನ್ನು ಸ್ವಾಧೀ ನಮಾಡಿಕೊಳ್ಳುವರು.ಇದಲ್ಲದೆ ಚೀಯೋನ್ ಪರ್ವತದಲ್ಲಿ ರಕ್ಷಕರು ಏಸಾವಿನ ಬೆಟ್ಟಕ್ಕೆ ನ್ಯಾಯ ತೀರಿಸುವದಕ್ಕೋಸ್ಕರ ಏಳುವರು; ಆಗ ರಾಜ್ಯವು ಕರ್ತನದಾಗಿರುವದು. ಇದಲ್ಲದೆ ಚೀಯೋನ್ ಪರ್ವತದಲ್ಲಿ ರಕ್ಷಕರು ಏಸಾವಿನ ಬೆಟ್ಟಕ್ಕೆ ನ್ಯಾಯ ತೀರಿಸುವದಕ್ಕೋಸ್ಕರ ಏಳುವರು; ಆಗ ರಾಜ್ಯವು ಕರ್ತನದಾಗಿರುವದು.
- 1 Chronicles 18:11–13 1 ಪೂರ್ವಕಾಲವೃತ್ತಾಂತ 18:11–13ಇವುಗಳನ್ನು ಅರಸನಾದ ದಾವೀದನು ಎದೋಮ್ಯರು ಮೋವಾಬ್ಯರು ಅಮ್ಮೋನನ ಮಕ್ಕಳು ಫಿಲಿಷ್ಟಿಯರು ಅಮಾಲೇಕ್ಯರು ಎಂಬ ಸಕಲ ಜನಾಂಗಗಳ ಬಳಿಯಿಂದ ತೆಗೆದುಕೊಂಡು ಬಂದ ಬೆಳ್ಳಿ ಬಂಗಾರವನ್ನು ಕರ್ತನಿಗೆ ಪ್ರತಿಷ್ಠೆಮಾಡಿದನು. ಇದಲ್ಲದೆ, ಚೆರೂಯಳ ಮಗನಾದ ಅಬ್ಷೈಯು ಉಪ್ಪಿನ ತಗ್ಗಿನಲ್ಲಿ ಎದೋಮ್ಯರೊಳಗೆ ಹದಿನೆಂಟು ಸಾವಿರ ಮಂದಿಯನ್ನು ಕೊಂದು ಎದೋಮಿನಲ್ಲಿ ಠಾಣ ಗಳನ್ನು ಇಟ್ಟನು. ಎದೋಮ್ಯರೆಲ್ಲರೂ ದಾವೀದನ ಸೇವಕರಾದರು. ದಾವೀದನು ಎಲ್ಲಿ ಹೋದನೋ ಅಲ್ಲಿ ಕರ್ತನು ಅವನನ್ನು ರಕ್ಷಿಸಿದನು.