Genesis · chapter 32 · verse 14
Genesis 32:14 in Kannada
ಅವು ಯಾವವಂದರೆ, ಇನ್ನೂರು ಮೇಕೆಗಳು, ಇಪ್ಪತ್ತು ಹೋತಗಳು, ಇನ್ನೂರು ಕುರಿಗಳು, ಇಪ್ಪತ್ತು ಟಗರುಗಳು;
Avu yaavavandare, innooru mekegalu, ippattu hotagalu, innooru kurigalu, ippattu tagarugalu;
Genesis 32:14 in English
- King James Version (KJV)
- Two hundred she goats, and twenty he goats, two hundred ewes, and twenty rams,
- World English Bible (WEB)
- two hundred female goats and twenty male goats, two hundred ewes and twenty rams,
- American Standard Version (ASV)
- two hundred she-goats and twenty he-goats, two hundred ewes and twenty rams,
- Bible in Basic English (BBE)
- Two hundred she-goats and twenty he-goats, two hundred females and twenty males from the sheep,
- Darby Translation (DBY)
- two hundred she-goats, and twenty he-goats; two hundred ewes, and twenty rams;
- Webster's Bible (WBS)
- Two hundred she-goats, and twenty he-goats, two hundred ewes and twenty rams,
- Young's Literal Translation (YLT)
- she-goats two hundred, and he-goats twenty, ewes two hundred, and rams twenty,
Read in context
- 12ನಾನು --ನಿನಗೆ ಖಂಡಿತ ವಾಗಿ ಒಳ್ಳೆಯದನ್ನು ಮಾಡುವೆನು, ನಿನ್ನ ಸಂತತಿಯನ್ನು ಎಣಿಸುವದಕ್ಕಾಗದ ಸಮುದ್ರದ ಮರಳಿನ ಹಾಗೆ ಮಾಡುವೆನು ಎಂದು ಹೇಳಿದಿಯಲ್ಲಾ ಎಂದು ಬೇಡಿಕೊಂಡನು.
- 13ಯಾಕೋಬನು ಅದೇ ರಾತ್ರಿಯಲ್ಲಿ ಅಲ್ಲಿ ಇಳುಕೊಂಡನು; ತಾನು ತಕ್ಕೊಂಡು ಬಂದವುಗಳಲ್ಲಿ ತನ್ನ ಸಹೋದರನಾದ ಏಸಾವನಿಗೆ ಕಾಣಿಕೆಗಾಗಿ ತೆಗೆದುಕೊಂಡನು.
- 14ಅವು ಯಾವವಂದರೆ, ಇನ್ನೂರು ಮೇಕೆಗಳು, ಇಪ್ಪತ್ತು ಹೋತಗಳು, ಇನ್ನೂರು ಕುರಿಗಳು, ಇಪ್ಪತ್ತು ಟಗರುಗಳು;
- 15ಹಾಲು ಕೊಡುವ ಮೂವತ್ತು ಒಂಟೆಗಳು ಅವುಗಳ ಮರಿಗಳು, ನಾಲ್ವತ್ತು ಆಕಳುಗಳು, ಹತ್ತು ಹೋರಿಗಳು, ಇಪ್ಪತ್ತು ಹೆಣ್ಣು ಕತ್ತೆಗಳು, ಹತ್ತು ಕತ್ತೆ ಮರಿಗಳು;
- 16ಇವುಗಳಲ್ಲಿ ಪ್ರತಿಯೊಂದು ಮಂದೆಯನ್ನು ಪ್ರತ್ಯೇಕವಾಗಿ ಅವನು ತನ್ನ ಸೇವಕರಿಗೆ ಒಪ್ಪಿಸಿ ಅವರಿಗೆ--ನನ್ನ ಮುಂದೆ ನಡೆದು ಮಂದೆ ಮಂದೆಗೂ ಮಧ್ಯದಲ್ಲಿ ಸ್ಥಳಬಿಡಿರಿ ಅಂದನು.
Cross references
- Job 1:3 ಯೋಬನು 1:3ಅವನ ಸಂಪತ್ತು--ಏಳು ಸಾವಿರ ಕುರಿಗಳು, ಮೂರು ಸಾವಿರ ಒಂಟೆಗಳು, ಐನೂರು ಜೋಡು ಎತ್ತುಗಳು, ಐನೂರು ಹೆಣ್ಣು ಕತ್ತೆಗಳೂ ಮತ್ತು ಬಹು ಸೇವಕರ ಸಮೂಹವಿತ್ತು. ಹೀಗೆ ಆ ಮನುಷ್ಯನು ಎಲ್ಲಾ ಮೂಡಣದವರಿಗಿಂತಲೂ ಬಹು ಸ್ವಾಸ್ತ್ಯವುಳ್ಳವ ನಾಗಿದ್ದನು.
- Job 42:12 ಯೋಬನು 42:12ಇದಲ್ಲದೆ ಕರ್ತನು ಯೋಬನ ಆರಂಭಕ್ಕಿಂತ ಅವನ ಅಂತ್ಯವನ್ನು ಆಶೀರ್ವದಿಸಿದನು. ಅವನಿಗೆ ಹದಿನಾಲ್ಕು ಸಾವಿರ ಕುರಿಗಳೂ ಆರು ಸಾವಿರ ಒಂಟೆಗಳೂ ಸಾವಿರ ಜೋಡಿ ಎತ್ತುಗಳೂ ಸಾವಿರ ಹೆಣ್ಣು ಕತ್ತೆಗಳೂ ಇದ್ದವು.
- Deuteronomy 8:18 ಧರ್ಮೋಪದೇಶಕಾಂಡ 8:18ನಿನ್ನ ದೇವ ರಾದ ಕರ್ತನನ್ನು ಜ್ಞಾಪಕಮಾಡಿಕೊಳ್ಳಬೇಕು; ಈ ಹೊತ್ತು ಇರುವಂತೆ ನಿನ್ನ ಪಿತೃಗಳಿಗೆ ಪ್ರಮಾಣಮಾಡಿದ ತನ್ನ ಒಡಂಬಡಿಕೆಯನ್ನು ಸ್ಥಾಪಿಸುವ ಹಾಗೆ ಆಸ್ತಿಯನ್ನು ಸಂಪಾದಿಸುವ ಬಲವನ್ನು ನಿನಗೆ ಕೊಡುವಾತನು ಆತನೇ.
- Genesis 30:43 ಆದಿಕಾಂಡ 30:43ಈ ಪ್ರಕಾರ ಯಾಕೋಬನು ಅತ್ಯಧಿಕವಾಗಿ ಅಭಿವೃದ್ಧಿಯಾದದ್ದರಿಂದ ಬಹು ಕುರಿಗಳೂ ದಾಸದಾಸಿ ಯರೂ ಒಂಟೆಗಳೂ ಕತ್ತೆಗಳೂ ಅವನಿಗೆ ದೊರೆತವು.
- Genesis 31:16 ಆದಿಕಾಂಡ 31:16ಆದದರಿಂದ ದೇವರು ನಮ್ಮ ತಂದೆಯಿಂದ ತಕ್ಕೊಂಡ ಐಶ್ವರ್ಯವೆಲ್ಲಾ ನಮ್ಮದು, ನಮ್ಮ ಮಕ್ಕಳದು. ಹಾಗಾದರೆ ಈಗ ದೇವರು ನಿನಗೆ ಹೇಳಿದ್ದನ್ನೆಲ್ಲಾ ಮಾಡು ಅಂದರು.
- Genesis 31:9 ಆದಿಕಾಂಡ 31:9ಹೀಗೆ ದೇವರು ನಿಮ್ಮ ತಂದೆಯ ಪಶುಗಳನ್ನು ತೆಗೆದು ಅವುಗಳನ್ನು ನನಗೆ ಕೊಟ್ಟಿದ್ದಾನೆ.
- 1 Samuel 25:2 1 ಸಮುವೇಲನು 25:2ಕರ್ಮೆಲಿನಲ್ಲಿ ಸ್ವಾಸ್ತ್ಯಗಳಿರುವ ಮಾವೋನಿನ ವನಾದ ಒಬ್ಬ ಮನುಷ್ಯನಿದ್ದನು. ಆ ಮನುಷ್ಯನು ಬಹು ದೊಡ್ಡವನಾಗಿದ್ದನು; ಅವನಿಗೆ ಮೂರು ಸಾವಿರ ಕುರಿಗಳೂ ಸಾವಿರ ಮೇಕೆಗಳೂ ಇದ್ದವು. ಅವನು ಕರ್ಮೆಲಿನಲ್ಲಿ ತನ್ನ ಕುರಿಗಳ ಉಣ್ಣೆಯನ್ನು ಕತ್ತರಿಸುತ್ತಿ ದ್ದನು.