Genesis · chapter 32 · verse 25
Genesis 32:25 in Kannada
ಆ ಮನುಷ್ಯನು ಅವನನ್ನು ಜಯಿಸದೆ ಇರುವದನ್ನು ನೋಡಿ ಅವನ ತೊಡೆಯ ಕೀಲನ್ನು ಮುಟ್ಟಿದನು. ಅವನು ಹಾಗೆಯೇ ಆತನ ಸಂಗಡ ಹೋರಾಡುವಲ್ಲಿ ಯಾಕೋಬನ ತೊಡೆಯ ಕೀಲು ತಪ್ಪಿತು.
Aa manushyanu avanannu jayisade iruvadannu nodi avana todeya keelannu muttidanu. Avanu haageye aatana sangada horaaduvalli yaakobana todeya keelu tappitu.
Genesis 32:25 in English
- King James Version (KJV)
- And when he saw that he prevailed not against him, he touched the hollow of his thigh; and the hollow of Jacob’s thigh was out of joint, as he wrestled with him.
- World English Bible (WEB)
- When he saw that he didn’t prevail against him, the man touched the hollow of his thigh, and the hollow of Jacob’s thigh was strained as he wrestled.
- American Standard Version (ASV)
- And when he saw that he prevailed not against him, he touched the hollow of his thigh; and the hollow of Jacob’s thigh was strained, as he wrestled with him.
- Bible in Basic English (BBE)
- But when the man saw that he was not able to overcome Jacob, he gave him a blow in the hollow part of his leg, so that his leg was damaged.
- Darby Translation (DBY)
- And when he saw that he did not prevail against him, he touched the joint of his thigh; and the joint of Jacob's thigh was dislocated as he wrestled with him.
- Webster's Bible (WBS)
- And when he saw that he prevailed not against him, he touched the hollow of his thigh: and the hollow of Jacob's thigh was out of joint, as he wrestled with him.
- Young's Literal Translation (YLT)
- and he seeth that he is not able for him, and he cometh against the hollow of his thigh, and the hollow of Jacob's thigh is disjointed in his wrestling with him;
Read in context
- 23ಅವನು ಅವರನ್ನು ಕರಕೊಂಡು ಹೊಳೆ ದಾಟಿಸಿದ್ದಲ್ಲದೆ ತನಗಿದ್ದದ್ದನ್ನೆಲ್ಲಾ ದಾಟಿಸಿದನು.
- 24ಆಗ ಯಾಕೋಬನು ಒಬ್ಬನೇ ಉಳಿದಾಗ ಒಬ್ಬ ಮನುಷ್ಯನು ಉದಯ ವಾಗುವ ವರೆಗೆ ಅವನ ಸಂಗಡ ಹೋರಾಡಿದನು.
- 25ಆ ಮನುಷ್ಯನು ಅವನನ್ನು ಜಯಿಸದೆ ಇರುವದನ್ನು ನೋಡಿ ಅವನ ತೊಡೆಯ ಕೀಲನ್ನು ಮುಟ್ಟಿದನು. ಅವನು ಹಾಗೆಯೇ ಆತನ ಸಂಗಡ ಹೋರಾಡುವಲ್ಲಿ ಯಾಕೋಬನ ತೊಡೆಯ ಕೀಲು ತಪ್ಪಿತು.
- 26ಆತನು ಯಾಕೋಬನಿಗೆ--ಉದಯವಾಯಿತು, ನನ್ನನು ಬಿಡು ಅಂದಾಗ ಅವನು--ನೀನು ನನ್ನನ್ನು ಆಶೀರ್ವದಿಸದ ಹೊರತು ನಾನು ನಿನ್ನನ್ನು ಬಿಡೆನು ಅಂದನು.
- 27ಆತನು ಅವನಿಗೆ--ನಿನ್ನ ಹೆಸರು ಏನು ಅಂದಾಗ ಅವನು--ಯಾಕೋಬ ಅಂದನು.
Cross references
- 2 Corinthians 12:7–9 2 ಕೊರಿಂಥದವರಿಗೆ 12:7–9ಇದಲ್ಲದೆ ಹೇರಳವಾದ ಪ್ರಕಟಣೆಗಳ ಮೂಲಕ ನಾನು ಮಿತಿವಿಾರಿ ಹೆಚ್ಚಿಸಿ ಕೊಳ್ಳಬಾರದೆಂದು ನನ್ನನ್ನು ಗುದ್ದುವದಕ್ಕಾಗಿ ಸೈತಾನನ ದೂತನಂತೆ ನನ್ನ ಶರೀರದಲ್ಲಿ ಒಂದು ಮುಳ್ಳು ನನಗೆ ಕೊಡಲ್ಪಟ್ಟಿದೆ; ಹೀಗೆ ನಾನು ಮಿತಿವಿಾರಿ ಹೆಚ್ಚಿಸಿ ಕೊಳ್ಳಲಾರದಂತೆ ಇದಾಯಿತು. ಈ ವಿಷಯದಲ್ಲಿ ಅದು ನನ್ನನ್ನು ಬಿಟ್ಟುಹೋಗಬೇಕೆಂದು ಮೂರು ಸಾರಿ ಕರ್ತನನ್ನು ಬೇಡಿಕೊಂಡೆನು. ಅದಕ್ಕಾತನು--ನನ್ನ ಕೃಪೆಯೇ ನಿನಗೆ ಸಾಕು; ಬಲಹೀನತೆಯಲ್ಲಿಯೇ ನನ್ನ ಬಲವು ಪರಿಪೂರ್ಣವಾಗುತ್ತದೆ ಎಂದು ನನಗೆ ಹೇಳಿದನು. ಹೀಗಿರಲಾಗಿ ಕ್ರಿಸ್ತನ ಬಲವು ನನ್ನಲ್ಲಿ ನೆಲೆಸಿ ಕೊಂಡಿರಬೇಕೆಂದು ನನಗುಂಟಾಗುವ ನಿರ್ಬಲಾ ವಸ್ಥೆಗಳ ವಿಷಯದಲ್ಲಿಯೇ ಬಹು ಸಂತೋಷವಾಗಿ ಹೆಚ್ಚಳಪಡುವೆನು.
- Hosea 12:3–4 ಹೋಶೇಯ 12:3–4ಗರ್ಭದಲ್ಲಿ ಅವನು ತನ್ನ ಸಹೋದರ ನನ್ನು ಹಿಮ್ಮಡಿಯಿಂದ ಹಿಡಿದು ತನ್ನ ಶಕ್ತಿಯಿಂದ ದೇವರೊಂದಿಗೆ ಬಲಹೊಂದಿದನು. ಹೌದು, ದೂತನ ಮೇಲೆ ಅವನು ಬಲಹೊಂದಿ ಜಯಿಸಿದನು; ಅವನು ಅತ್ತು ಆತನಿಗೆ ವಿಜ್ಞಾಪನೆಯನ್ನು ಸಲ್ಲಿಸಿದನು; ಅವನು ಆತನನ್ನು ಬೇತೇಲಿನಲ್ಲಿ ಕಂಡುಕೊಂಡನು; ಅಲ್ಲಿ ಆತನು ನಮ್ಮೊಂದಿಗೆ ಮಾತನಾಡಿದನು.
- Genesis 32:32 ಆದಿಕಾಂಡ 32:32ಆತನು ಯಾಕೋಬನ ತೊಡೆಯ ಕೀಲನ್ನು ಮುದುರಿದ ನರದಲ್ಲಿ ಮುಟ್ಟಿದ್ದರಿಂದ ಇಸ್ರಾಯೇಲ್ ಮಕ್ಕಳು ತೊಡೆಯ ಕೀಲಿನ ಮೇಲಿರುವ ಮುದುರಿದ ನರವನ್ನು ಈ ದಿನದ ವರೆಗೂ ತಿನ್ನುವದಿಲ್ಲ.
- Isaiah 45:11 ಯೆಶಾಯ 45:11ಇಸ್ರಾಯೇಲಿನ ಪರಿ ಶುದ್ಧನೂ ಅದನ್ನು ರೂಪಿಸಿದವನೂ ಆಗಿರುವ ಕರ್ತನು--ಮುಂದೆ ಸಂಭವಿಸುವ ನನ್ನ ಮಕ್ಕಳ ವಿಷಯವಾಗಿಯೂ ನನ್ನ ಕೈಕೆಲಸದ ವಿಷಯವಾ ಗಿಯೂ ನೀವು ನನಗೆ ಆಜ್ಞೆ ಮಾಡುವಿರಾ?
- Isaiah 41:14 ಯೆಶಾಯ 41:14ಹುಳುವಾದ ಯಾಕೋಬೇ, ಮತ್ತು ಇಸ್ರಾಯೇಲ್ ಜನವೇ, ಭಯಪಡಬೇಡ; ನಾನೇ ನಿನಗೆ ಸಹಾಯ ಮಾಡುತ್ತೇನೆಂದು ಕರ್ತನೂ ನಿನ್ನ ವಿಮೋಚಕನೂ ಇಸ್ರಾಯೇಲಿನ ಪರಿಶುದ್ಧನೂ ಹೇಳುತ್ತಾನಲ್ಲಾ!
- Matthew 26:41 ಮತ್ತಾಯನು 26:41ನೀವು ಶೋಧನೆಗೆ ಒಳಗಾ ಗದಂತೆ ಎಚ್ಚರವಾಗಿದ್ದು ಪ್ರಾರ್ಥಿಸಿರಿ; ಆತ್ಮವು ಸಿದ್ಧವಾಗಿದೆ ನಿಜವೇ; ಆದರೆ ಶರೀರವು ಬಲಹೀನ ವಾಗಿದೆ ಅಂದನು.
- Numbers 14:13–14 ಅರಣ್ಯಕಾಂಡ 14:13–14ಆಗ ಮೋಶೆ ಕರ್ತನಿಗೆ--ಹಾಗಾದರೆ ಐಗುಪ್ತ್ಯರು ಅದನ್ನು ಕೇಳುವರು; ನೀನು ಈ ಜನರನ್ನು ನಿನ್ನ ಬಲದೊಂದಿಗೆ ಅವರ ಮಧ್ಯದಲ್ಲಿಂದ ಹೊರಗೆ ಬರಮಾಡಿದಿಯಲ್ಲಾ! ಅವರು ಈ ದೇಶದ ನಿವಾಸಿ ಗಳಿಗೆ ಅದನ್ನು ಹೇಳುವರು; ಯಾಕಂದರೆ ಕರ್ತನಾದ ನೀನೇ ಈ ಜನರ ಸಂಗಡ ಇದ್ದೀಯೆಂದೂ ಕರ್ತ ನಾದ ನೀನೇ ಮುಖಾಮುಖಿಯಾಗಿ ಕಾಣಿಸಿಕೊಳ್ಳುತ್ತೀ ಯೆಂದೂ ನಿನ್ನ ಮೇಘವು ಅವರ ಮೇಲೆ ನಿಂತಿದೆ ಯೆಂದೂ ನೀನು ಹಗಲು ಹೊತ್ತಿನಲ್ಲಿ ಮೇಘ ಸ್ತಂಭದಲ್ಲಿಯೂ ರಾತ್ರಿಯಲ್ಲಿ ಅಗ್ನಿಸ್ತಂಭದಲ್ಲಿಯೂ ಅವರ ಮುಂದೆ ನಡೆಯುತ್ತೀಯೆಂದೂ ಅವರು ಕೇಳಿದ್ದಾರೆ.
- Psalm 30:6–7 ಕೀರ್ತನೆಗಳು 30:6–7ನನ್ನ ಅಭಿವೃದ್ಧಿಯಲ್ಲಿ--ನಾನು ಎಂದಿಗೂ ಕದಲು ವದಿಲ್ಲ ಎಂದು ಹೇಳಿದೆನು. ಕರ್ತನೇ, ನಿನ್ನ ಕಟಾ ಕ್ಷದಿಂದ ನನ್ನ ಬೆಟ್ಟವು ಸ್ಥಿರವಾಗಿ ನಿಲ್ಲುವಂತೆ ಮಾಡಿದ್ದೀ, ನಿನ್ನ ಮುಖವನ್ನು ಮರೆಮಾಡಲು ಕಳವಳಗೊಂಡೆನು.
- Genesis 19:22 ಆದಿಕಾಂಡ 19:22ತ್ವರೆಯಾಗಿ ತಪ್ಪಿಸಿಕೊಂಡು ಅಲ್ಲಿಗೆ ಹೋಗು; ಯಾಕಂದರೆ ನೀನು ಅಲ್ಲಿಗೆ ಹೋಗುವ ವರೆಗೆ ನಾನೇನೂ ಮಾಡಲಾರೆನು ಅಂದನು. ಆದದರಿಂದ ಆ ಪಟ್ಟಣಕ್ಕೆ ಚೋಗರ್ ಎಂದು ಹೆಸರಾಯಿತು.
- Matthew 15:22–28 ಮತ್ತಾಯನು 15:22–28ಆಗ ಇಗೋ, ಕಾನಾನ್ಯಳಾದ ಒಬ್ಬ ಸ್ತ್ರೀಯು ಅದೇ ಪ್ರಾಂತ್ಯಗಳಿಂದ ಬಂದು ಆತನಿಗೆ--ಓ ಕರ್ತನೇ, ದಾವೀದನ ಕುಮಾ ರನೇ, ನನ್ನ ಮೇಲೆ ಕರುಣೆಯಿಡು; ನನ್ನ ಮಗಳು ದೆವ್ವದಿಂದ ಬಹಳವಾಗಿ ಸಂಕಟಪಡುತ್ತಿದ್ದಾಳೆ ಎಂದು ಕೂಗಿಕೊಂಡಳು. ಆದರೆ ಆತನು ಆಕೆಗೆ ಒಂದು ಮಾತೂ ಉತ್ತರ ಕೊಡಲಿಲ್ಲ; ಆಗ ಆತನ ಶಿಷ್ಯರು ಬಂದು--ಆಕೆಯನ್ನು ಕಳುಹಿಸಿಬಿಡು, ಯಾಕಂದರೆ ಆಕೆಯು ನಮ್ಮ ಹಿಂದೆ ಕೂಗಿಕೊಂಡು ಬರುತ್ತಾಳೆ ಎಂದು ಆತನನ್ನು ಬೇಡಿಕೊಂಡರು. ಆದರೆ ಆತನು ಪ್ರತ್ಯು ತ್ತರವಾಗಿ-- ತಪ್ಪಿಸಿಕೊಂಡ ಕುರಿಗಳಾಗಿರುವ ಇಸ್ರಾ ಯೇಲಿನ ಮನೆತನದವರ ಬಳಿಗೆ ಮಾತ್ರ ನಾನು ಕಳುಹಿಸಲ್ಪಟ್ಟಿದ್ದೇನೆ ಅಂದನು. ಆಗ ಆಕೆಯು ಬಂದು ಆತನನ್ನು ಆರಾಧಿಸಿ--ಕರ್ತನೇ, ನನಗೆ ಸಹಾಯ ಮಾಡು ಎಂದು ಕೇಳಿಕೊಂಡಳು. ಆದರೆ ಆತನು ಪ್ರತ್ಯುತ್ತರವಾಗಿ--ಮಕ್ಕಳ ರೊಟ್ಟಿಯನ್ನು ತಕ್ಕೊಂಡು ನಾಯಿಗಳಿಗೆ ಹಾಕುವದು ಸರಿಯಲ್ಲ ಎಂದು ಹೇಳಿ ದನು. ಆಗ ಆಕೆಯು--ಕರ್ತನೇ, ಅದು ನಿಜವೇ; ಆದರೂ ನಾಯಿಗಳು ತಮ್ಮ ಯಜಮಾನರ ಮೇಜಿನಿಂದ ಬೀಳುವ ರೊಟ್ಟಿ ತುಂಡುಗಳನ್ನು ತಿನ್ನು ತ್ತವಲ್ಲಾ ಅಂದಳು. ಆಗ ಯೇಸು ಪ್ರತ್ಯುತ್ತರವಾಗಿ ಆಕೆಗೆ--ಓ ಸ್ತ್ರೀಯೇ, ನಿನ್ನ ನಂಬಿಕೆಯು ದೊಡ್ಡದು; ನೀನು ಇಷ್ಟಪಟ್ಟಂತೆಯೇ ನಿನಗಾಗಲಿ ಎಂದು ಹೇಳಿ ದನು. ಮತ್ತು ಆಕೆಯ ಮಗಳು ಅದೇ ಗಳಿಗೆಯಲ್ಲಿ ಸ್ವಸ್ಥಳಾದಳು.