Genesis · chapter 34 · verse 12
Genesis 34:12 in Kannada
ತೆರವನ್ನೂ ಕಾಣಿಕೆಯನ್ನೂ ಯಥೇಚ್ಛವಾಗಿ ನನ್ನನ್ನು ಕೇಳಿರಿ. ನೀವು ಹೇಳುವ ಪ್ರಕಾರ ಕೊಡುವೆನು. ಆದರೆ ಆ ಹುಡುಗಿಯನ್ನು ನನಗೆ ಹೆಂಡತಿಯಾಗಿ ಕೊಡಿರಿ ಅಂದನು.
Teravannoo kaanikeyannoo yathechchhavaagi nannannu keliri. Neevu heluva prakaara koduvenu. Aadare aa hudugiyannu nanage hendatiyaagi kodiri andanu.
Genesis 34:12 in English
- King James Version (KJV)
- Ask me never so much dowry and gift, and I will give according as ye shall say unto me: but give me the damsel to wife.
- World English Bible (WEB)
- Ask me a great amount for a dowry, and I will give whatever you ask of me, but give me the young lady as a wife.”
- American Standard Version (ASV)
- Ask me never so much dowry and gift, and I will give according as ye shall say unto me: but give me the damsel to wife.
- Bible in Basic English (BBE)
- However great you make the bride-price and payment, I will give it; only let me have the girl for my wife.
- Darby Translation (DBY)
- Impose on me very much as dowry and gift, and I will give according as ye shall say to me; but give me the maiden as wife.
- Webster's Bible (WBS)
- Ask me never so much dower and gift, and I will give according as ye shall say to me: but give me the damsel for a wife.
- Young's Literal Translation (YLT)
- multiply on me exceedingly dowry and gift, and I give as ye say unto me, and give to me the young person for a wife.'
Read in context
- 10ಇದಲ್ಲದೆ ನೀವು ನಮ್ಮ ಸಂಗಡ ವಾಸಮಾಡಿರಿ; ದೇಶವು ನಿಮ್ಮ ಮುಂದೆ ಇದೆ. ನೀವು ವಾಸಿಸಿ ಅದರಲ್ಲಿ ವ್ಯಾಪಾರಮಾಡಿ ಅದರಿಂದ ಆಸ್ತಿಯನ್ನು ಮಾಡಿಕೊಳ್ಳಿರಿ ಅಂದನು.
- 11ಶೆಕೆಮನು ಆಕೆಯ ತಂದೆಗೂ ಸಹೋದರರಿಗೂ ಹೇಳಿದ್ದೇನಂದರೆ--ನಿಮ್ಮ ದೃಷ್ಟಿಯಲ್ಲಿ ನನಗೆ ಕೃಪೆ ದೊರಕಲಿ; ನೀವು ನನಗೆ ಹೇಳಿದ್ದನ್ನು ನಾನು ನಿಮಗೆ ಕೊಡುವೆನು.
- 12ತೆರವನ್ನೂ ಕಾಣಿಕೆಯನ್ನೂ ಯಥೇಚ್ಛವಾಗಿ ನನ್ನನ್ನು ಕೇಳಿರಿ. ನೀವು ಹೇಳುವ ಪ್ರಕಾರ ಕೊಡುವೆನು. ಆದರೆ ಆ ಹುಡುಗಿಯನ್ನು ನನಗೆ ಹೆಂಡತಿಯಾಗಿ ಕೊಡಿರಿ ಅಂದನು.
- 13ಆಗ ಯಾಕೋಬನ ಮಕ್ಕಳು ಶೆಕೆಮನಿಗೂ ಅವನ ತಂದೆಯಾದ ಹಮೋರನಿಗೂ ವಂಚನೆಯ ಉತ್ತರವನ್ನು ಕೊಟ್ಟರು. ಅವನು ತಮ್ಮ ತಂಗಿಯಾದ ದೀನಳನ್ನು ಅಶುದ್ಧಮಾಡಿದ್ದನು.
- 14ಯಾಕೋಬನ ಮಕ್ಕಳು ಅವರಿಗೆ--ನಾವು ಈ ಕಾರ್ಯವನ್ನು ಮಾಡಲಾರೆವು, ಸುನ್ನತಿಯಿಲ್ಲದ ಮನುಷ್ಯನಿಗೆ ನಮ್ಮ ತಂಗಿಯನ್ನು ಕೊಡಲಾರೆವು, ಅದು ನಮಗೆ ಅವಮಾನ.
Cross references
- Exodus 22:16–17 ವಿಮೋಚನಕಾಂಡ 22:16–17ಇದಲ್ಲದೆ ಒಬ್ಬನು ನಿಶ್ಚಯಮಾಡದ ಕನ್ನಿಕೆಯನ್ನು ಮೋಸಗೊಳಿಸಿ ಅವಳ ಸಂಗಡ ಮಲಗಿದರೆ ಅವಳು ತನ್ನ ಹೆಂಡತಿಯಾಗುವಂತೆ ಅವಳಿಗೆ ಖಂಡಿತವಾಗಿ ತೆರವು ಕೊಡಬೇಕು. ಅವಳ ತಂದೆಗೆ ಆಕೆಯನ್ನು ಕೊಡುವದಕ್ಕೆ ಮನಸ್ಸಿಲ್ಲದಿದ್ದರೆ ಕನ್ನಿಕೆಯ ತೆರವಿನ ಪ್ರಕಾರ ಹಣ ಸಲ್ಲಿಸಬೇಕು.
- Genesis 24:53 ಆದಿಕಾಂಡ 24:53ನಂತರ ಆ ಸೇವಕನು ಬೆಳ್ಳಿ ಬಂಗಾರದ ಒಡವೆ ಗಳನ್ನೂ ವಸ್ತ್ರಗಳನ್ನೂ ತಂದು ರೆಬೆಕ್ಕಳಿಗೆ ಕೊಟ್ಟನು. ಆಕೆಯ ಸಹೋದರನಿಗೂ ತಾಯಿಗೂ ಅಮೂಲ್ಯ ವಾದ ವಸ್ತುಗಳನ್ನು ಕೊಟ್ಟನು.
- Genesis 29:18 ಆದಿಕಾಂಡ 29:18ಹೀಗಿರುವದರಿಂದ ಯಾಕೋಬನು ರಾಹೇಲಳನ್ನು ಪ್ರೀತಿಮಾಡಿ--ನಾನು ನಿನ್ನ ಕಿರಿಮಗಳಾಗಿರುವ ರಾಹೇಲಳಿಗೋಸ್ಕರ ನಿನ್ನಲ್ಲಿ ಏಳು ವರುಷ ಸೇವೆ ಮಾಡುತ್ತೇನೆ ಅಂದನು.
- Genesis 31:41 ಆದಿಕಾಂಡ 31:41ನಿನ್ನ ಇಬ್ಬರು ಕುಮಾರ್ತೆಯರಿಗಾಗಿ ಹದಿನಾಲ್ಕು ವರುಷ, ನಿನ್ನ ಮಂದೆಗಳಿಗೋಸ್ಕರ ಆರು ವರುಷ, ಈ ಪ್ರಕಾರ ಇಪ್ಪತ್ತು ವರುಷ ನಿನ್ನ ಮನೆಯಲ್ಲಿ ಇದ್ದು ಸೇವೆಮಾಡಿದೆನು; ಆದರೆ ನೀನು ನನ್ನ ಸಂಬಳವನ್ನು ಹತ್ತು ಸಾರಿ ಬದಲಾಯಿಸಿದಿ.
- 1 Samuel 18:25–27 1 ಸಮುವೇಲನು 18:25–27ಆದರೆ ಸೌಲನು-- ದಾವೀದ ನನ್ನು ಫಿಲಿಷ್ಟಿಯರ ಕೈಯಿಂದ ಬೀಳಮಾಡಬೇಕೆಂದು ನೆನಸಿ ತನ್ನ ಸೇವಕರಿಗೆ--ನೀವು ದಾವೀದನಿಗೆ--ಅರಸನು ಯಾವ ತೆರವನ್ನೂ ಅಪೇಕ್ಷಿಸದೆ ತನ್ನ ಶತ್ರು ಗಳಿಗೆ ಮುಯ್ಯಿಗೆ ಮುಯ್ಯಿ ತೀರಿಸುವ ಹಾಗೆ ನೂರು ಮಂದಿ ಫಿಲಿಷ್ಟಿಯರ ಮುಂದೊಗಲನ್ನು ಅಪೇಕ್ಷಿಸು ತ್ತಾನೆಂದು ಹೇಳಿರಿ ಅಂದನು. ಹಾಗೆಯೇ ಅವನ ಸೇವಕರು ದಾವೀದನಿಗೆ ಈ ಮಾತುಗಳನ್ನು ತಿಳಿಸಿದಾಗ ಅರಸನಿಗೆ ಅಳಿಯನಾಗುವದು ಅವನಿಗೆ ಚೆನ್ನಾಗಿ ಕಾಣಿಸಿತು. ಆದದರಿಂದ ನೇಮಿಸಿದ ದಿವಸಗಳು ಈಡೇರುವದಕ್ಕಿಂತ ಮುಂಚೆ ಅವನು ಎದ್ದು ತನ್ನ ಜನರನ್ನು ಕರಕೊಂಡು ಹೋಗಿ ಫಿಲಿಷ್ಟಿಯರಲ್ಲಿ ಇನ್ನೂರು ಜನರನ್ನು ಕೊಂದು ಅವರ ಮುಂದೊಗ ಲುಗಳನ್ನು ತಂದು ತಾನು ಅಳಿಯನಾಗುವ ಹಾಗೆ ಅವುಗಳನ್ನು ಅರಸನಿಗೆ ಪೂರ್ಣವಾಗಿ ಒಪ್ಪಿಸಿದನು. ಆಗ ಸೌಲನು ತನ್ನ ಕುಮಾರ್ತೆಯಾದ ವಿಾಕಲಳನ್ನು ಅವನಿಗೆ ಹೆಂಡತಿಯಾಗಿ ಕೊಟ್ಟನು.
- Deuteronomy 22:28–29 ಧರ್ಮೋಪದೇಶಕಾಂಡ 22:28–29ಒಬ್ಬ ಮನುಷ್ಯನು ನಿಶ್ಚಯಮಾಡದಿರುವ ಕನ್ಯಾ ಸ್ತ್ರೀಯಾದ ಹುಡುಗಿಯನ್ನು ಕಂಡು ಅವಳನ್ನು ಹಿಡಿದು ಅವಳ ಸಂಗಡ ಮಲಗುವಲ್ಲಿ ಅವನು ಸಿಕ್ಕಿದರೆ ಅವಳ ಸಂಗಡ ಮಲಗಿದ ಮನುಷ್ಯನು ಆ ಹುಡುಗಿಯ ತಂದೆಗೆ ಐವತ್ತು ಬೆಳ್ಳಿಯ ಹಣಗಳನ್ನು ಕೊಡಬೇಕು; ಮತ್ತು ಅವಳು ಅವನಿಗೆ ಹೆಂಡತಿಯಾಗಬೇಕು; ಅವನು ಅವಳನ್ನು ಕೆಡಿಸಿದ್ದರಿಂದ ಬದುಕುವ ದಿವಸಗಳೆಲ್ಲಾ ಅವಳನ್ನು ಕಳುಹಿಸಿಬಿಡಕೂಡದು.ಒಬ್ಬನು ತನ್ನ ತಂದೆಯ ಹೆಂಡತಿಯನ್ನು ತಕ್ಕೊಳ್ಳ ಕೂಡದು; ತನ್ನ ತಂದೆಯ ವಸ್ತ್ರದ ಸೆರಗನ್ನು ತೆರೆಯ ಕೂಡದು.
- Matthew 14:17 ಮತ್ತಾಯನು 14:17ಅವರು ಆತನಿಗೆ--ನಮ್ಮ ಹತ್ತಿರ ಐದು ರೊಟ್ಟಿ ಎರಡು ಮಾನುಗಳು ಮಾತ್ರ ಇವೆ ಎಂದು ಹೇಳಿದರು.
- 2 Samuel 3:14 2 ಸಮುವೇಲನು 3:14ದಾವೀದನು ಸೌಲನ ಮಗನಾದ ಈಷ್ಬೋಶೆತನ ಬಳಿಗೆ ದೂತರನ್ನು ಕಳುಹಿಸಿ--ಫಿಲಿಷ್ಟಿ ಯರ ನೂರು ಮುಂದೊಗಲುಗಳಿಂದ ನನಗೆ ನೇಮಕ ಮಾಡಿಕೊಂಡ ನನ್ನ ಹೆಂಡತಿಯಾದ ವಿಾಕಲಳನ್ನು ನನಗೆ ಒಪ್ಪಿಸು ಅಂದನು.
- Hosea 3:2 ಹೋಶೇಯ 3:2ಹಾಗೆಯೇ ನಾನು ಅವಳನ್ನು ನನಗಾಗಿ ಹದಿನೈದು ಬೆಳ್ಳಿಯ ತುಂಡುಗಳಿಗೂ ಮತ್ತು ಹೋಮೆರ್ ಜವೆಗೋಧಿಗೂ ಒಂದುವರೆ ಹೋಮೆರ್ ಜವೆಗೋಧಿಗೂ ಕೊಂಡುಕೊಂಡೆನು.