Genesis · chapter 34 · verse 13
Genesis 34:13 in Kannada
ಆಗ ಯಾಕೋಬನ ಮಕ್ಕಳು ಶೆಕೆಮನಿಗೂ ಅವನ ತಂದೆಯಾದ ಹಮೋರನಿಗೂ ವಂಚನೆಯ ಉತ್ತರವನ್ನು ಕೊಟ್ಟರು. ಅವನು ತಮ್ಮ ತಂಗಿಯಾದ ದೀನಳನ್ನು ಅಶುದ್ಧಮಾಡಿದ್ದನು.
Aaga yaakobana makkalu shekemanigoo avana tandeyaada hamoranigoo vanchaneya uttaravannu kottaru. Avanu tamma tangiyaada deenalannu ashuddhamaadiddanu.
Genesis 34:13 in English
- King James Version (KJV)
- And the sons of Jacob answered Shechem and Hamor his father deceitfully, and said, because he had defiled Dinah their sister:
- World English Bible (WEB)
- The sons of Jacob answered Shechem and Hamor his father with deceit when they spoke, because he had defiled Dinah their sister,
- American Standard Version (ASV)
- And the sons of Jacob answered Shechem and Hamor his father with guile, and spake, because he had defiled Dinah their sister,
- Bible in Basic English (BBE)
- But the sons of Jacob gave a false answer to Shechem and Hamor his father, because of what had been done to Dinah their sister.
- Darby Translation (DBY)
- And the sons of Jacob answered Shechem and Hamor his father deceitfully, and spoke — because he had defiled Dinah their sister —
- Webster's Bible (WBS)
- And the sons of Jacob answered Shechem and Hamor his father deceitfully, and said, (because he had defiled Dinah their sister,)
- Young's Literal Translation (YLT)
- And the sons of Jacob answer Shechem and Hamor his father deceitfully, and they speak (because he defiled Dinah their sister),
Read in context
- 11ಶೆಕೆಮನು ಆಕೆಯ ತಂದೆಗೂ ಸಹೋದರರಿಗೂ ಹೇಳಿದ್ದೇನಂದರೆ--ನಿಮ್ಮ ದೃಷ್ಟಿಯಲ್ಲಿ ನನಗೆ ಕೃಪೆ ದೊರಕಲಿ; ನೀವು ನನಗೆ ಹೇಳಿದ್ದನ್ನು ನಾನು ನಿಮಗೆ ಕೊಡುವೆನು.
- 12ತೆರವನ್ನೂ ಕಾಣಿಕೆಯನ್ನೂ ಯಥೇಚ್ಛವಾಗಿ ನನ್ನನ್ನು ಕೇಳಿರಿ. ನೀವು ಹೇಳುವ ಪ್ರಕಾರ ಕೊಡುವೆನು. ಆದರೆ ಆ ಹುಡುಗಿಯನ್ನು ನನಗೆ ಹೆಂಡತಿಯಾಗಿ ಕೊಡಿರಿ ಅಂದನು.
- 13ಆಗ ಯಾಕೋಬನ ಮಕ್ಕಳು ಶೆಕೆಮನಿಗೂ ಅವನ ತಂದೆಯಾದ ಹಮೋರನಿಗೂ ವಂಚನೆಯ ಉತ್ತರವನ್ನು ಕೊಟ್ಟರು. ಅವನು ತಮ್ಮ ತಂಗಿಯಾದ ದೀನಳನ್ನು ಅಶುದ್ಧಮಾಡಿದ್ದನು.
- 14ಯಾಕೋಬನ ಮಕ್ಕಳು ಅವರಿಗೆ--ನಾವು ಈ ಕಾರ್ಯವನ್ನು ಮಾಡಲಾರೆವು, ಸುನ್ನತಿಯಿಲ್ಲದ ಮನುಷ್ಯನಿಗೆ ನಮ್ಮ ತಂಗಿಯನ್ನು ಕೊಡಲಾರೆವು, ಅದು ನಮಗೆ ಅವಮಾನ.
- 15ಆದರೆ ನೀವು ನಮ್ಮ ಹಾಗಿದ್ದು ನಿಮ್ಮಲ್ಲಿರುವ ಗಂಡಸರೆಲ್ಲಾ ಸುನ್ನತಿಮಾಡಿಸಿಕೊಂಡರೆ ಮಾತ್ರ ನಾವು ಒಪ್ಪುವೆವು.
Cross references
- Micah 7:2 ಮೀಕ 7:2ಒಳ್ಳೆಯವನು ಭೂಮಿಯೊಳ ಗಿಂದ ನಾಶವಾಗಿದ್ದಾನೆ; ಮನುಷ್ಯರಲ್ಲಿ ಯಥಾರ್ಥನು ಇಲ್ಲ; ಅವರೆಲ್ಲರು ರಕ್ತಕ್ಕೆ ಹೊಂಚಿ ನೋಡುತ್ತಾರೆ; ತಮ್ಮ ತಮ್ಮ ಸಹೋದರರನ್ನು ಬಲೆಹಾಕಿ ಬೇಟೆ ಆಡುತ್ತಾರೆ.
- Judges 15:3 ನ್ಯಾಯಸ್ಥಾಪಕರು 15:3ಆಗ ಸಂಸೋನನು ಅವರನ್ನು ಕುರಿತುನಾನು ಈ ಸಾರಿ ಫಿಲಿಷ್ಟಿಯರಿಗೆ ಕೇಡನ್ನುಮಾಡಿದರೆ ಅವರಿಗಿಂತ ಹೆಚ್ಚು ನಿರಪರಾಧಿಯಾಗಿರುವೆನು ಎಂದು ಅಂದುಕೊಂಡು ಹೊರಟು ಹೋಗಿ ಮುನ್ನೂರು ನರಿ ಗಳನ್ನು ಹಿಡಿದು
- Proverbs 12:18–20 ಜ್ಞಾನೋಕ್ತಿಗಳು 12:18–20ಕತ್ತಿಯ ಇರಿತದ ಹಾಗೆ ಮಾತನಾಡುವದು ಉಂಟು. ಜ್ಞಾನವಂತರ ನಾಲಿಗೆಯು ಆರೋಗ್ಯ. ಸತ್ಯದ ತುಟಿಯು ಸದಾ ಸ್ಥಿರಗೊಳ್ಳು ವದು; ಸುಳ್ಳಾಡುವ ನಾಲಿಗೆಯು ಕ್ಷಣಿಕ. ಕೇಡನ್ನು ಕಲ್ಪಿಸುವವರ ಹೃದಯದಲ್ಲಿ ಮೋಸ; ಸಮಾಧಾನದ ಆಲೋಚನೆಯನ್ನು ಹೇಳುವವರಿಗೆ ಸಂತೋಷ.
- Romans 12:19 ರೋಮಾಪುರದವರಿಗೆ 12:19ಅತಿ ಪ್ರಿಯರೇ, ನೀವೇ ಮುಯ್ಯಿಗೆ ಮುಯ್ಯಿ ತೀರಿಸದೆ ಶಿಕ್ಷಿಸುವದನ್ನು ದೇವರಿಗೆ ಬಿಡಿರಿ. ಯಾಕಂದರೆ--ಮುಯ್ಯಿಗೆ ಮುಯ್ಯಿ ತೀರಿಸು ವದು ನನ್ನ ಕೆಲಸ, ನಾನೇ ಪ್ರತಿಫಲವನ್ನು ಕೊಡುವೆನು ಎಂದು ಕರ್ತನು ಹೇಳುತ್ತಾನೆ ಎಂಬದಾಗಿ ಬರೆದದೆ.
- 1 Thessalonians 5:15 1 ಥೆಸಲೊನೀಕದವರಿಗೆ 5:15ಯಾರೂ ಅಪಕಾರಕ್ಕೆ ಅಪಕಾರ ಮಾಡದಂತೆ ನೋಡಿ ಕೊಳ್ಳಿರಿ; ಯಾವಾಗಲೂ ನೀವು ಒಬ್ಬರಿಗೊಬ್ಬರು ಹಿತವನ್ನು ಮಾಡಿಕೊಂಡಿರುವದಲ್ಲದೆ ಎಲ್ಲರಿಗೂ ಹಿತ ವನ್ನು ಮಾಡುವವರಾಗಿರ್ರಿ.
- Psalm 12:2 ಕೀರ್ತನೆಗಳು 12:2ಒಬ್ಬೊಬ್ಬನು ತನ್ನ ನೆರೆಯವನ ಸಂಗಡ ವ್ಯರ್ಥವಾದ ಮಾತನ್ನು ಆಡುತ್ತಾನೆ; ಮುಖಸ್ತುತಿಯ ತುಟಿಯಿಂದಲೂ ವಂಚನೆಯ ಹೃದಯದಿಂದಲೂ ಅವರು ಮಾತನಾಡುತ್ತಾರೆ.
- Proverbs 12:13 ಜ್ಞಾನೋಕ್ತಿಗಳು 12:13ತನ್ನ ತುಟಿಗಳ ದೋಷದಿಂದ ದುಷ್ಟನು ಉರ್ಲಿಗೆ ಬೀಳುವನು; ನೀತಿವಂತರು ಇಕ್ಕಟ್ಟಿ ನೊಳಗಿಂದ ತಪ್ಪಿಸಿಕೊಳ್ಳುವರು.
- Matthew 28:13 ಮತ್ತಾಯನು 28:13ನಾವು ನಿದ್ರೆ ಮಾಡುತ್ತಿರುವಾಗ ಆತನ ಶಿಷ್ಯರು ರಾತ್ರಿಯಲ್ಲಿ ಬಂದು ಅವನನ್ನು ಕದ್ದು ಕೊಂಡುಹೋದ ರೆಂದು ನೀವು ಹೇಳಿರಿ;
- Proverbs 26:24–26 ಜ್ಞಾನೋಕ್ತಿಗಳು 26:24–26ಹಗೆಮಾಡುವವನು ತನ್ನ ತುಟಿಗಳಿಂದ ಮೋಸವನ್ನು ನಟಿಸುತ್ತಾನೆ, ತನ್ನ ಅಂತರಂಗದಲ್ಲಿ ಮೋಸವನ್ನು ಇಟ್ಟುಕೊಳ್ಳುತ್ತಾನೆ. ಸವಿ ಮಾತನ್ನಾಡಿದರೆ ಅವನನ್ನು ನಂಬಬೇಡ; ಅವನ ಹೃದಯದಲ್ಲಿ ಏಳು ಅಸಹ್ಯಗಳಿವೆ. ಯಾವನ ಹಗೆ ತನವು ಮೋಸದಿಂದ ಮುಚ್ಚಲ್ಪಟ್ಟಿದೆಯೋ ಅವನ ಕೆಟ್ಟತನವು ಸಭೆಯಲ್ಲಿ ಬಯಲಾಗುವದು.
- Job 13:7 ಯೋಬನು 13:7ದೇವರಿಗೋಸ್ಕರ ನೀವು ದುಷ್ಟತನದಿಂದ ಮಾತನಾಡುವಿರೋ? ಆತನಿಗೋ ಸ್ಕರ ಮೋಸದ ನುಡಿಗಳನ್ನಾಡುವಿರೋ?
- 2 Samuel 13:23–29 2 ಸಮುವೇಲನು 13:23–29ಎರಡು ವರುಷ ಪೂರ್ಣಮುಗಿದ ತರುವಾಯ ಏನಾಯಿತಂದರೆ, ಅಬ್ಷಾಲೋಮನಿಗೆ ಎಫ್ರಾಯಾಮ್ ಬಳಿಯಲ್ಲಿರುವ ಬಾಳ್ಹಾಚೋರಿನಲ್ಲಿ ಕುರಿಗಳ ಉಣ್ಣೆ ಕತ್ತರಿಸುವವರಿದ್ದರು. ಆದದರಿಂದ ಅಬ್ಷಾಲೋಮನು ಅರಸನ ಮಕ್ಕಳನ್ನೆಲ್ಲಾ ಔತಣಕ್ಕೆ ಕರೆದನು. ಇದಲ್ಲದೆ ಅಬ್ಷಾಲೋಮನು ಅರಸನ ಬಳಿಗೆ ಹೋಗಿ--ಇಗೋ, ಈಗ ನಿನ್ನ ಸೇವಕನಿಗೆ ಉಣ್ಣೆ ಕತ್ತರಿಸುವವರು ಇದ್ದಾರೆ; ಅರಸನೂ ತನ್ನ ಸೇವಕರೂ ನಿನ್ನ ಸೇವಕನ ಸಂಗಡ ಬರಲಿ ಅಂದನು. ಅದಕ್ಕೆ ಅರಸನು ಅಬ್ಷಾಲೋಮ ನಿಗೆ--ಹಾಗಲ್ಲ; ನನ್ನ ಮಗನೇ, ನಾವು ನಿನಗೆ ಭಾರವಾಗಿರದ ಹಾಗೆ ನಾವೆಲ್ಲರು ಈಗ ಬರುವದಿಲ್ಲ ಅಂದನು. ಅವನು ರಾಜನನ್ನು ಬಲವಂತ ಮಾಡಿದನು; ಆದರೆ ಅವನು ಹೋಗಲೊಲ್ಲದೆ ಅವನನ್ನು ಆಶೀ ರ್ವದಿಸಿದನು. ಆಗ ಅಬ್ಷಾಲೋಮನು--ಹಾಗಾ ದರೆ ನನ್ನ ಸಹೋದರನಾದ ಅಮ್ನೋನನು ನಮ್ಮ ಸಂಗಡ ಬರಲಿ ಅಂದನು. ಅರಸನು ಅವನಿಗೆ--ಯಾಕೆ ಅವನು ನಿಮ್ಮ ಸಂಗಡ ಬರಬೇಕು ಅಂದನು. ಆದರೆ ಅಬ್ಷಾಲೋಮನು ಅವನನ್ನು ಬಲವಂತ ಮಾಡಿದ್ದರಿಂದ ಅವನು ಅಮ್ನೋನನನ್ನೂ ಅರಸನ ಎಲ್ಲಾ ಮಕ್ಕಳನ್ನೂ ಅವನ ಸಂಗಡ ಕಳುಹಿಸಿದನು. ಆದರೆ ಅಬ್ಷಾಲೋಮನು ತನ್ನ ಸೇವಕರಿಗೆ--ನೀವು ನೋಡಿಕೊಳ್ಳಿರಿ; ಅಮ್ನೋನನ ಹೃದಯವು ದ್ರಾಕ್ಷಾರಸ ದಿಂದ ಸಂಭ್ರಮವಾಗಿರುವಾಗ ನಾನು ನಿಮಗೆ ಅಮ್ನೋನ ನನ್ನು ಹೊಡೆಯಿರಿ ಎಂದು ಹೇಳುತ್ತಲೇ ಅವನನ್ನು ಕೊಂದುಹಾಕಿರಿ; ಭಯಪಡಬೇಡಿರಿ ನಾನು ನಿಮಗೆ ಆಜ್ಞಾಪಿಸಿದ್ದೇನಲ್ಲಾ. ಬಲವಾಗಿರಿ; ಪರಾಕ್ರಮಿಗಳಾ ಗಿರ್ರಿ; ಎಂದು ಆಜ್ಞಾಪಿಸಿ ಹೇಳಿದನು. ಅಬ್ಷಾಲೋ ಮನು ಆಜ್ಞಾಪಿಸಿದ ಹಾಗೆಯೇ ಅವನ ಸೇವಕರು ಅಮ್ನೋನನಿಗೆ ಮಾಡಿದರು. ಆಗ ಅರಸನ ಮಕ್ಕಳೆ ಲ್ಲರೂ ಎದ್ದು ತಮ್ಮ ತಮ್ಮ ಹೇಸರ ಕತ್ತೆಗಳನ್ನೇರಿ ಓಡಿಹೋದರು.
- Proverbs 24:28–29 ಜ್ಞಾನೋಕ್ತಿಗಳು 24:28–29ಕಾರಣವಿಲ್ಲದೆ ನೆರೆಯವನಿಗೆ ವಿರುದ್ಧವಾಗಿ ಸಾಕ್ಷಿ ಹೇಳಬೇಡ; ನಿನ್ನ ತುಟಿಗಳಿಂದ ಮೋಸಮಾಡಬೇಡ. ನನಗೆ ಅವನು ಮಾಡಿದಂತೆ ನಾನೂ ಅವನಿಗೆ ಮಾಡುವೆನು; ಅವನು ಮಾಡಿದ್ದಕ್ಕೆ ಸರಿಯಾಗಿ ಮುಯ್ಯಿ ತೀರಿಸುವೆನು ಎಂದು ಹೇಳಬೇಡ.