Genesis · chapter 35 · verse 18
Genesis 35:18 in Kannada
(ಆದರೆ ಆಕೆಯು ಸತ್ತುಹೋದಳು). ಅವಳು ಪ್ರಾಣಬಿಡುವಾಗ ಅವನಿಗೆ ಬೆನೋನಿ ಎಂದು ಹೆಸರಿಟ್ಟಳು; ಆದರೆ ಅವನ ತಂದೆಯು ಅವನಿಗೆ ಬೆನ್ಯಾವಿಾನ್ ಎಂದು ಹೆಸರಿಟ್ಟನು.
(aadare aakeyu sattuhodalu). Avalu praanabiduvaaga avanige benoni endu hesarittalu; aadare avana tandeyu avanige benyaaviాn endu hesarittanu.
Genesis 35:18 in English
- King James Version (KJV)
- And it came to pass, as her soul was in departing, (for she died) that she called his name Ben-oni: but his father called him Benjamin.
- World English Bible (WEB)
- As her soul was departing (for she died), she named him Benoni, but his father named him Benjamin.
- American Standard Version (ASV)
- And it came to pass, as her soul was departing (for she died), that she called his name Ben-oni: but his father called him Benjamin.
- Bible in Basic English (BBE)
- And in the hour when her life went from her (for death came to her), she gave the child the name Ben-oni: but his father gave him the name of Benjamin.
- Darby Translation (DBY)
- And it came to pass as her soul was departing — for she died — that she called his name Benoni; but his father called him Benjamin.
- Webster's Bible (WBS)
- And it came to pass as her soul was in departing (for she died) that she called his name Ben-oni: but his father called him Benjamin.
- Young's Literal Translation (YLT)
- And it cometh to pass in the going out of her soul (for she died), that she calleth his name Ben-Oni; and his father called him Benjamin;
Read in context
- 16ಬೇತೇಲಿನಿಂದ ಅವರು ಪ್ರಯಾಣಮಾಡಿ ಎಫ್ರಾತೂರಿಗೆ ಇನ್ನೂ ಸ್ವಲ್ಪ ದೂರ ಇರುವಾಗ ರಾಹೇಲಳು ಪ್ರಸವವೇದನೆಪಡುತ್ತಾ ಕಷ್ಟಪಟ್ಟಳು.
- 17ಆಕೆಯು ಹೆರಿಗೆ ಬೇನೆಯಿಂದ ಬಹು ಕಷ್ಟಪಡು ತ್ತಿರುವಾಗ ಸೂಲಗಿತ್ತಿಯು ಅವಳಿಗೆ--ಭಯಪಡ ಬೇಡ, ಗಂಡು ಮಗನನ್ನು ನೀನು ಪಡೆಯುವಿ ಅಂದಳು.
- 18(ಆದರೆ ಆಕೆಯು ಸತ್ತುಹೋದಳು). ಅವಳು ಪ್ರಾಣಬಿಡುವಾಗ ಅವನಿಗೆ ಬೆನೋನಿ ಎಂದು ಹೆಸರಿಟ್ಟಳು; ಆದರೆ ಅವನ ತಂದೆಯು ಅವನಿಗೆ ಬೆನ್ಯಾವಿಾನ್ ಎಂದು ಹೆಸರಿಟ್ಟನು.
- 19ರಾಹೇಲಳು ಸತ್ತುಹೋದಳು. ಅವಳನ್ನು ಎಫ್ರಾತದ ಮಾರ್ಗದಲ್ಲಿ ಹೂಣಿಟ್ಟರು; ಅದೇ ಬೇತ್ಲೆಹೇಮ್.
- 20ಯಾಕೋಬನು ಅವಳ ಸಮಾಧಿಯ ಮೇಲೆ ಒಂದು ಸ್ತಂಭವನ್ನು ನೆಟ್ಟನು. ಅದೇ ಇಂದಿನ ವರೆಗೂ ರಾಹೇಲಳ ಸಮಾಧಿಯ ಸ್ತಂಭವಾಗಿದೆ.
Cross references
- 1 Samuel 4:20–21 1 ಸಮುವೇಲನು 4:20–21ಅವಳು ಸಾಯುವ ವೇಳೆಯಲ್ಲಿ ಅವಳ ಬಳಿಯಲ್ಲಿ ನಿಂತಿರುವ ಸ್ತ್ರೀಯರು--ಭಯಪಡಬೇಡ; ಯಾಕಂದರೆ ಮಗನನ್ನು ಹೆತ್ತಿದ್ದೀ ಎಂದು ಅವಳಿಗೆ ಹೇಳಿದರು. ಆದರೆ ಅವಳು ಅದಕ್ಕೆ ಪ್ರತ್ಯುತ್ತರವಾಗಿ ಅದರ ಮೇಲೆ ಲಕ್ಷ್ಯವಿಡದೆ ದೇವರ ಮಂಜೂಷವು ಶತ್ರುವಶ ವಾಯಿತೆಂದೂ ತನ್ನ ಮಾವನೂ ತನ್ನ ಗಂಡನೂ ಸತ್ತುಹೋದದರಿಂದಲೂ ಮಹಿಮೆಯು ಇಸ್ರಾಯೇ ಲನ್ನು ಬಿಟ್ಟುಹೋಯಿತು ಎಂದು ಹೇಳಿ ಆ ಕೂಸಿಗೆ ಈಕಾಬೋದ್ ಎಂದು ಹೆಸರಿಟ್ಟಳು.ದೇವರ ಮಂಜೂಷವು ಶತ್ರುವಶವಾಗಿ ಹೋದದರಿಂದ ಮಹಿ ಮೆಯು ಇಸ್ರಾಯೇಲ್ಯರನ್ನು ಬಿಟ್ಟುಹೋಯಿತೆಂದು ಹೇಳಿದಳು.
- Acts 7:59 ಅಪೊಸ್ತಲರ ಕೃತ್ಯಗಳು 7:59ಅವರು ಸ್ತೆಫನನ ಮೇಲೆ ಕಲ್ಲೆಸೆಯುತ್ತಾ ಇರಲು ಅವನು--ಕರ್ತನಾದ ಯೇಸುವೇ, ನನ್ನಾತ್ಮವನ್ನು ಸೇರಿ ಸಿಕೋ ಎಂದು ದೇವರನ್ನು ಪ್ರಾರ್ಥಿಸಿ,ಮೊಣ ಕಾಲೂರಿ--ಕರ್ತನೇ, ಈ ಪಾಪವನ್ನು ಅವರ ಮೇಲೆ ಹೊರಿಸಬೇಡವೆಂದು ಮಹಾಶಬ್ದದಿಂದ ಕೂಗಿದನು. ಇದನ್ನು ಹೇಳಿದ ತರುವಾಯ ನಿದ್ರೆಹೋದನು.
- Luke 23:46 ಲೂಕನು 23:46ಯೇಸು ಮಹಾಧ್ವನಿಯಿಂದ--ತಂದೆಯೇ, ನಾನು ನನ್ನ ಆತ್ಮವನ್ನು ನಿನ್ನ ಕೈಗಳಲ್ಲಿ ಒಪ್ಪಿಸುತ್ತೇನೆ ಎಂದು ಕೂಗಿ ಹೇಳಿದನು; ಹೀಗೆ ಹೇಳಿದ ಮೇಲೆ ಆತನು ಪ್ರಾಣಬಿಟ್ಟನು.
- 1 Chronicles 4:9 1 ಪೂರ್ವಕಾಲವೃತ್ತಾಂತ 4:9ಯಾಬೇ ಚನು ತನ್ನ ಸಹೋದರರಿಗಿಂತ ಘನವುಳ್ಳವನಾಗಿದ್ದನು. ಅವನ ತಾಯಿ -- ನಾನು ಇವನನ್ನು ವ್ಯಥೆಯಿಂದ ಹೆತ್ತೆನೆಂದು ಅವನಿಗೆ ಯಾಬೇಚನೆಂಬ ಹೆಸರಿಟ್ಟಳು.
- Luke 12:20 ಲೂಕನು 12:20ಆದರೆ ದೇವರು ಅವನಿಗೆ--ಬುದ್ಧಿಹೀನನೇ, ಈ ರಾತ್ರಿಯೇ ನಿನ್ನ ಪ್ರಾಣವು ನಿನ್ನಿಂದ ಕೇಳಲ್ಪಡುವದು; ಆಗ ನೀನು ಕೂಡಿಸಿಕೊಂಡವುಗಳು ಯಾರಿಗಾಗುವವು ಎಂದು ಹೇಳಿದನು.
- Genesis 42:4 ಆದಿಕಾಂಡ 42:4ಆದರೆ ಯಾಕೋಬನು ಯೋಸೆಫನ ತಮ್ಮನಾದ ಬೆನ್ಯಾವಿಾನ ನಿಗೆ ಕೇಡುಬಂದೀತು ಎಂದು ಹೇಳಿ ಅಣ್ಣಂದಿರ ಸಂಗಡ ಅವನನ್ನು ಕಳುಹಿಸಲಿಲ್ಲ.
- Exodus 12:7 ವಿಮೋಚನಕಾಂಡ 12:7ರಕ್ತದಲ್ಲಿ ಸ್ವಲ್ಪ ತೆಗೆದು ಅವರು ಊಟ ಮಾಡುವ ಮನೆಗಳ ಎರಡು ನಿಲುವು ಗಂಬಗ ಳಿಗೂ ಬಾಗಿಲ ಮೇಲಿನ ಅಡ್ಡಗಂಬಕ್ಕೂ ಹಚ್ಚಬೇಕು.
- Lamentations 2:12 ಪ್ರಲಾಪಗಳು 2:12ಅವರು ನಗರದ ಬೀದಿ ಗಳಲ್ಲಿ ಗಾಯ ಪಟ್ಟವರ ಹಾಗೆ ಮೂರ್ಛೆ ಹೋಗಿ, ತಮ್ಮ ತಾಯಂದಿರ ಎದೆಯಲ್ಲಿ ಬೀಳುತ್ತಾ--ರೊಟ್ಟಿಯೂ ದ್ರಾಕ್ಷಾರಸವೂ ಎಲ್ಲಿ ಎಂದು ತಮ ತಾಯಂದಿರಿಗೆ ಹೇಳುತ್ತಾರೆ.
- Genesis 43:14 ಆದಿಕಾಂಡ 43:14ಸರ್ವಶಕ್ತನಾದ ದೇವರು ನಿಮ್ಮ ಬೇರೆ ಸಹೋದರ ನನ್ನೂ ಬೆನ್ಯಾವಿಾನನನ್ನೂ ಕಳುಹಿಸಿ ಕೊಡುವಹಾಗೆ ಆ ಮನುಷ್ಯನು ನಿಮ್ಮ ಮೇಲೆ ಕರುಣೆ ತೋರಿಸುವಂತೆ ಮಾಡಲಿ. ನಾನಂತೂ ಮಕ್ಕಳನ್ನು ಕಳಕೊಂಡವನಾಗಿರಬೇಕಾದರೆ ಹಾಗೆಯೇ ಆಗಲಿ ಅಂದನು.
- Genesis 42:38 ಆದಿಕಾಂಡ 42:38ಆದರೆ ಅವನು--ನನ್ನ ಮಗನು ನಿಮ್ಮ ಸಂಗಡ ಹೋಗಬಾರದು; ಅವನ ಅಣ್ಣನು ಸತ್ತುಹೋಗಿ ಅವನೊಬ್ಬನೇ ಉಳಿದಿದ್ದಾನೆ; ನೀವು ಹೋಗುವ ಮಾರ್ಗದಲ್ಲಿ ಇವನಿಗೆ ಕೇಡು ಬಂದರೆ ಮುದಿ ಪ್ರಾಯದಲ್ಲಿ ನನ್ನನ್ನು ದುಃಖದಿಂದ ಸಮಾಧಿಗೆ ಹೋಗುವಂತೆ ಮಾಡುವಿರಿ ಅಂದನು.
- Genesis 44:27–31 ಆದಿಕಾಂಡ 44:27–31ಅದಕ್ಕೆ ನಿನ್ನ ದಾಸನಾದ ನನ್ನ ತಂದೆಯು--ನನ್ನ ಹೆಂಡತಿಯು ನನಗೆ ಇಬ್ಬರು ಕುಮಾರರನ್ನು ಹೆತ್ತಳೆಂಬದು ನಿಮಗೆ ತಿಳಿದಿದೆ. ಒಬ್ಬನು ನನ್ನ ಬಳಿಯಿಂದ ಹೋಗಿಬಿಟ್ಟನು, ಅವನು ಕೊಲ್ಲಲ್ಪಟ್ಟನೆಂದು ಹೇಳಿದರು. ಅವನನ್ನು ಈ ದಿನದ ವರೆಗೂ ನಾನು ನೋಡಲಿಲ್ಲ. (ಈಗ) ನನ್ನ ಬಳಿಯಿಂದ ಇವನನ್ನೂ ತಕ್ಕೊಂಡು ಹೋಗ ಬೇಕೆಂದಿದೀರಿ, ಅವನಿಗೂ ಕೇಡು ಬಂದರೆ ನನ್ನ ಮುದಿ ತಲೆಯನ್ನು ದುಃಖದಿಂದ ಸಮಾಧಿಗೆ ಇಳಿಯ ಮಾಡುವಿರಿ ಎಂದು ಹೇಳಿದನು. ಹೀಗಿರಲಾಗಿ ನಾನು ನಿನ್ನ ದಾಸನಾದ ನನ್ನ ತಂದೆಯ ಬಳಿಗೆ ಹೋಗುವ ಸಮಯದಲ್ಲಿ ಅವನ ಪ್ರಾಣವು ಹುಡುಗನ ಪ್ರಾಣದೊಂದಿಗೆ ಬಂಧಿಸಲ್ಪಟ್ಟಿದ್ದರಿಂದ ಹುಡುಗನು ನಮ್ಮ ಸಂಗಡ ಇಲ್ಲದೆ ಹೋದರೆ ಆ ಹುಡುಗ ನಿಲ್ಲದ್ದನ್ನು ಕಂಡಾಗಲೇ ಅವನು ಸಾಯುವನು. ನಿನ್ನ ದಾಸನಾಗಿರುವ ನಮ್ಮ ತಂದೆಯ ನರೇಕೂದಲನ್ನು ದುಃಖದಿಂದ ಸಮಾಧಿಗೆ ನಿನ್ನ ದಾಸರು ಇಳಿಯ ಮಾಡುವರು.
- Psalm 80:17 ಕೀರ್ತನೆಗಳು 80:17ನಿನ್ನ ಬಲಗೈ ಮನುಷ್ಯನ ಮೇಲೆ ಹೌದು, ನೀನು ನಿನಗೆ ಬಲಪಡಿಸಿಕೊಂಡ ಮನುಷ್ಯ ಪುತ್ರನ ಮೇಲೆ ನಿನ್ನ ಕೈ ಇರಲಿ.