Genesis · chapter 42 · verse 4
Genesis 42:4 in Kannada
ಆದರೆ ಯಾಕೋಬನು ಯೋಸೆಫನ ತಮ್ಮನಾದ ಬೆನ್ಯಾವಿಾನ ನಿಗೆ ಕೇಡುಬಂದೀತು ಎಂದು ಹೇಳಿ ಅಣ್ಣಂದಿರ ಸಂಗಡ ಅವನನ್ನು ಕಳುಹಿಸಲಿಲ್ಲ.
Aadare yaakobanu yosephana tammanaada benyaaviాna nige kedubandeetu endu heli annandira sangada avanannu kaluhisalilla.
Genesis 42:4 in English
- King James Version (KJV)
- But Benjamin, Joseph’s brother, Jacob sent not with his brethren; for he said, Lest peradventure mischief befall him.
- World English Bible (WEB)
- But Jacob didn’t send Benjamin, Joseph’s brother, with his brothers; for he said, “Lest perhaps harm happen to him.”
- American Standard Version (ASV)
- But Benjamin, Joseph’s brother, Jacob sent not with his brethren; for he said, Lest peradventure harm befall him.
- Bible in Basic English (BBE)
- But Jacob did not send Benjamin, Joseph's brother, with them, for fear, as he said, that some evil might come to him.
- Darby Translation (DBY)
- But Benjamin, Joseph's brother, Jacob sent not with his brethren; for he said, Lest mischief may befall him.
- Webster's Bible (WBS)
- But Benjamin, Joseph's brother, Jacob sent not with his brethren: for he said, Lest perhaps mischief shall befall him.
- Young's Literal Translation (YLT)
- and Benjamin, Joseph's brother, Jacob hath not sent with his brethren, for he said, 'Lest mischief meet him.'
Read in context
- 2ಅವನು--ಇಗೋ, ಐಗುಪ್ತದಲ್ಲಿ ಧಾನ್ಯ ಉಂಟೆಂದು ನಾನು ಕೇಳಿದ್ದೇನೆ. ನಾವು ಸಾಯದೆ ಬದುಕುವಂತೆ ನೀವು ಅಲ್ಲಿಗೆ ಇಳಿದು ಹೋಗಿ ನಮಗಾಗಿ ಅಲ್ಲಿಂದ ಧಾನ್ಯವನ್ನು ಕೊಂಡು ಕೊಳ್ಳಿರಿ ಅಂದನು.
- 3ಆಗ ಯೋಸೇಫನ ಹತ್ತು ಮಂದಿ ಸಹೋದರರು ಐಗುಪ್ತದಲ್ಲಿ ಧಾನ್ಯವನ್ನು ಕೊಂಡುಕೊಳ್ಳುವದಕ್ಕೆ ಇಳಿದು ಹೋದರು.
- 4ಆದರೆ ಯಾಕೋಬನು ಯೋಸೆಫನ ತಮ್ಮನಾದ ಬೆನ್ಯಾವಿಾನ ನಿಗೆ ಕೇಡುಬಂದೀತು ಎಂದು ಹೇಳಿ ಅಣ್ಣಂದಿರ ಸಂಗಡ ಅವನನ್ನು ಕಳುಹಿಸಲಿಲ್ಲ.
- 5ಕಾನಾನ್ ದೇಶದಲ್ಲಿ ಬರವಿದ್ದದರಿಂದ ಧಾನ್ಯ ವನ್ನು ಕೊಂಡುಕೊಳ್ಳುವದಕ್ಕಾಗಿ ಬರುವವರೊಂದಿಗೆ ಇಸ್ರಾಯೇಲನ ಕುಮಾರರು ಬಂದರು.
- 6ಆಗ ಯೋಸೇಫನು ದೇಶದ ಮೇಲೆಲ್ಲಾ ಅಧಿಪತಿಯಾ ಗಿದ್ದನು. ದೇಶದ ಜನರಿಗೆಲ್ಲಾ ಧಾನ್ಯವನ್ನು ಮಾರು ವವನು ಅವನೇ ಆಗಿದ್ದನು. ಹೀಗಿರಲಾಗಿ ಯೋಸೇಫನ ಸಹೋದರರು ಬಂದು ತಮ್ಮ ಮುಖಗಳನ್ನು ನೆಲದ ಮಟ್ಟಿಗೂ ತಗ್ಗಿಸಿ ಅವನಿಗೆ ಅಡ್ಡಬಿದ್ದರು.
Cross references
- Genesis 42:38 ಆದಿಕಾಂಡ 42:38ಆದರೆ ಅವನು--ನನ್ನ ಮಗನು ನಿಮ್ಮ ಸಂಗಡ ಹೋಗಬಾರದು; ಅವನ ಅಣ್ಣನು ಸತ್ತುಹೋಗಿ ಅವನೊಬ್ಬನೇ ಉಳಿದಿದ್ದಾನೆ; ನೀವು ಹೋಗುವ ಮಾರ್ಗದಲ್ಲಿ ಇವನಿಗೆ ಕೇಡು ಬಂದರೆ ಮುದಿ ಪ್ರಾಯದಲ್ಲಿ ನನ್ನನ್ನು ದುಃಖದಿಂದ ಸಮಾಧಿಗೆ ಹೋಗುವಂತೆ ಮಾಡುವಿರಿ ಅಂದನು.
- Genesis 11:4 ಆದಿಕಾಂಡ 11:4ಅವರು--ಬನ್ನಿರಿ, ಭೂಮಿಯ ಮೇಲೆಲ್ಲಾ ನಾವು ಚದರಿಹೋಗದ ಹಾಗೆ ಆಕಾಶವನ್ನು ಮುಟ್ಟುವ ಒಂದು ಪಟ್ಟಣವನ್ನೂ ಗೋಪುರವನ್ನೂ ನಮಗಾಗಿ ಕಟ್ಟಿಕೊಂಡು ನಾವು ಹೆಸರನ್ನು ಪಡೆಯೋಣ ಅಂದರು;
- Genesis 43:29 ಆದಿಕಾಂಡ 43:29ಆಗ ಅವನು ತನ್ನ ಕಣ್ಣು ಗಳನ್ನೆತ್ತಿ ತನ್ನ ತಾಯಿಯ ಮಗನೂ ತನ್ನ ತಮ್ಮನೂ ಆದ ಬೆನ್ಯಾವಿಾನನನ್ನು ನೋಡಿ--ನೀವು ನನಗೆ ಹೇಳಿದ ನಿಮ್ಮ ತಮ್ಮನು ಇವನೋ ಎಂದು ಹೇಳಿ ಅವನು--ನನ್ನ ಮಗನೇ, ದೇವರು ನಿನಗೆ ಕೃಪಾಳು ವಾಗಿರಲಿ ಅಂದನು.
- Genesis 44:20–22 ಆದಿಕಾಂಡ 44:20–22ನಾವು ನಮ್ಮ ಒಡೆಯನಿಗೆ--ನಮಗೆ ಮುದುಕನಾದ ತಂದೆಯೂ ಅವನಿಗೆ ಮುದಿಪ್ರಾಯದಲ್ಲಿ ಹುಟ್ಟಿದ ಚಿಕ್ಕಮಗನೂ ಇದ್ದಾರೆ; ಅವನ ಸಹೋದರನು ಸತ್ತುಹೋಗಿದ್ದಾನೆ. ಆದದರಿಂದ ಅವನೊಬ್ಬನೇ ತನ್ನ ತಾಯಿಗೆ ಉಳಿದಿದ್ದಾನೆ. ಅವನ ತಂದೆಯು ಅವನನ್ನು ಪ್ರೀತಿ ಮಾಡುತ್ತಾನೆ ಎಂದು ಹೇಳಿದೆವು. ಅದಕ್ಕೆ ನೀನು ನಿನ್ನ ದಾಸರಿಗೆ--ನಾನು ಅವನನ್ನು ನೋಡುವ ಹಾಗೆ ಅವನನ್ನು ನನ್ನ ಬಳಿಗೆ ಕರಕೊಂಡು ಬನ್ನಿರಿ ಎಂದು ಹೇಳಿದಿಯಲ್ಲಾ, ನಾವು ನಮ್ಮ ಒಡೆಯನಿಗೆಆ ಹುಡುಗನು ತನ್ನ ತಂದೆಯನ್ನು ಅಗಲಕೂಡದು. ಅವನು ತಂದೆಯನ್ನು ಬಿಟ್ಟಗಲಿದರೆ ತಂದೆಯು ಸಾಯುವನು ಎಂದು ಹೇಳಿದೆವು.
- Genesis 43:14 ಆದಿಕಾಂಡ 43:14ಸರ್ವಶಕ್ತನಾದ ದೇವರು ನಿಮ್ಮ ಬೇರೆ ಸಹೋದರ ನನ್ನೂ ಬೆನ್ಯಾವಿಾನನನ್ನೂ ಕಳುಹಿಸಿ ಕೊಡುವಹಾಗೆ ಆ ಮನುಷ್ಯನು ನಿಮ್ಮ ಮೇಲೆ ಕರುಣೆ ತೋರಿಸುವಂತೆ ಮಾಡಲಿ. ನಾನಂತೂ ಮಕ್ಕಳನ್ನು ಕಳಕೊಂಡವನಾಗಿರಬೇಕಾದರೆ ಹಾಗೆಯೇ ಆಗಲಿ ಅಂದನು.
- Genesis 44:27–34 ಆದಿಕಾಂಡ 44:27–34ಅದಕ್ಕೆ ನಿನ್ನ ದಾಸನಾದ ನನ್ನ ತಂದೆಯು--ನನ್ನ ಹೆಂಡತಿಯು ನನಗೆ ಇಬ್ಬರು ಕುಮಾರರನ್ನು ಹೆತ್ತಳೆಂಬದು ನಿಮಗೆ ತಿಳಿದಿದೆ. ಒಬ್ಬನು ನನ್ನ ಬಳಿಯಿಂದ ಹೋಗಿಬಿಟ್ಟನು, ಅವನು ಕೊಲ್ಲಲ್ಪಟ್ಟನೆಂದು ಹೇಳಿದರು. ಅವನನ್ನು ಈ ದಿನದ ವರೆಗೂ ನಾನು ನೋಡಲಿಲ್ಲ. (ಈಗ) ನನ್ನ ಬಳಿಯಿಂದ ಇವನನ್ನೂ ತಕ್ಕೊಂಡು ಹೋಗ ಬೇಕೆಂದಿದೀರಿ, ಅವನಿಗೂ ಕೇಡು ಬಂದರೆ ನನ್ನ ಮುದಿ ತಲೆಯನ್ನು ದುಃಖದಿಂದ ಸಮಾಧಿಗೆ ಇಳಿಯ ಮಾಡುವಿರಿ ಎಂದು ಹೇಳಿದನು. ಹೀಗಿರಲಾಗಿ ನಾನು ನಿನ್ನ ದಾಸನಾದ ನನ್ನ ತಂದೆಯ ಬಳಿಗೆ ಹೋಗುವ ಸಮಯದಲ್ಲಿ ಅವನ ಪ್ರಾಣವು ಹುಡುಗನ ಪ್ರಾಣದೊಂದಿಗೆ ಬಂಧಿಸಲ್ಪಟ್ಟಿದ್ದರಿಂದ ಹುಡುಗನು ನಮ್ಮ ಸಂಗಡ ಇಲ್ಲದೆ ಹೋದರೆ ಆ ಹುಡುಗ ನಿಲ್ಲದ್ದನ್ನು ಕಂಡಾಗಲೇ ಅವನು ಸಾಯುವನು. ನಿನ್ನ ದಾಸನಾಗಿರುವ ನಮ್ಮ ತಂದೆಯ ನರೇಕೂದಲನ್ನು ದುಃಖದಿಂದ ಸಮಾಧಿಗೆ ನಿನ್ನ ದಾಸರು ಇಳಿಯ ಮಾಡುವರು. ನಿನ್ನ ದಾಸನಾದ ನಾನು ಆ ಹುಡುಗನಿಗೋಸ್ಕರ ನನ್ನ ತಂದೆಯ ಬಳಿಯಲ್ಲಿ ಹೊಣೆ ಯಾಗಿ--ಅವನನ್ನು ನಿನ್ನ ಬಳಿಗೆ ತಾರದೆ ಹೋದರೆ ಎಂದೆಂದಿಗೂ ನನ್ನ ತಂದೆಗೆ ದೋಷಿಯಾಗಿರುವೆ ನೆಂದು ಹೇಳಿಕೊಂಡಿದ್ದೇನೆ. ಹಾಗಿದ್ದಲ್ಲಿ ಆ ಹುಡು ಗನ ಬದಲಾಗಿ ನಿನ್ನ ದಾಸನಾದ ನಾನು ನನ್ನ ಒಡೆಯನಿಗೆ ದಾಸನಾಗಿರುವೆನು; ಹುಡುಗನು ನನ್ನ ಸಹೋದರರ ಸಂಗಡ ಹೋಗಿಬಿಡಲಿ.ಹುಡುಗನು ನನ್ನ ಬಳಿಯಲ್ಲಿರದೆ ನಾನು ಹೇಗೆ ನನ್ನ ತಂದೆಯ ಬಳಿಗೆ ಹೋಗಲಿ? ಹೋದರೆ ನನ್ನ ತಂದೆಗೆ ಬರುವ ಕೇಡನ್ನು ನಾನು ನೋಡ ಬೇಕಾದೀತು ಅಂದನು. ಹುಡುಗನು ನನ್ನ ಬಳಿಯಲ್ಲಿರದೆ ನಾನು ಹೇಗೆ ನನ್ನ ತಂದೆಯ ಬಳಿಗೆ ಹೋಗಲಿ? ಹೋದರೆ ನನ್ನ ತಂದೆಗೆ ಬರುವ ಕೇಡನ್ನು ನಾನು ನೋಡ ಬೇಕಾದೀತು ಅಂದನು.
- Genesis 3:22 ಆದಿಕಾಂಡ 3:22ಇದ ಲ್ಲದೆ ಕರ್ತನಾದ ದೇವರು--ಇಗೋ, ಮನುಷ್ಯನು ಒಳ್ಳೇದರ ಕೆಟ್ಟದರ ಭೇದವನ್ನು ತಿಳಿದು ನಮ್ಮಲ್ಲಿ ಒಬ್ಬನಂತಾದನು; ಈಗ ಅವನು ಕೈಚಾಚಿ ಜೀವವೃಕ್ಷದ ಫಲವನ್ನು ತೆಗೆದು ತಿಂದು ಎಂದೆಂದಿಗೂ ಬದುಕ ಬಾರದು ಅಂದನು.
- Genesis 35:16–19 ಆದಿಕಾಂಡ 35:16–19ಬೇತೇಲಿನಿಂದ ಅವರು ಪ್ರಯಾಣಮಾಡಿ ಎಫ್ರಾತೂರಿಗೆ ಇನ್ನೂ ಸ್ವಲ್ಪ ದೂರ ಇರುವಾಗ ರಾಹೇಲಳು ಪ್ರಸವವೇದನೆಪಡುತ್ತಾ ಕಷ್ಟಪಟ್ಟಳು. ಆಕೆಯು ಹೆರಿಗೆ ಬೇನೆಯಿಂದ ಬಹು ಕಷ್ಟಪಡು ತ್ತಿರುವಾಗ ಸೂಲಗಿತ್ತಿಯು ಅವಳಿಗೆ--ಭಯಪಡ ಬೇಡ, ಗಂಡು ಮಗನನ್ನು ನೀನು ಪಡೆಯುವಿ ಅಂದಳು. (ಆದರೆ ಆಕೆಯು ಸತ್ತುಹೋದಳು). ಅವಳು ಪ್ರಾಣಬಿಡುವಾಗ ಅವನಿಗೆ ಬೆನೋನಿ ಎಂದು ಹೆಸರಿಟ್ಟಳು; ಆದರೆ ಅವನ ತಂದೆಯು ಅವನಿಗೆ ಬೆನ್ಯಾವಿಾನ್ ಎಂದು ಹೆಸರಿಟ್ಟನು. ರಾಹೇಲಳು ಸತ್ತುಹೋದಳು. ಅವಳನ್ನು ಎಫ್ರಾತದ ಮಾರ್ಗದಲ್ಲಿ ಹೂಣಿಟ್ಟರು; ಅದೇ ಬೇತ್ಲೆಹೇಮ್.
- Genesis 33:1–2 ಆದಿಕಾಂಡ 33:1–2ಯಾಕೋಬನು ಕಣ್ಣೆತ್ತಿ ನೋಡಿದಾಗ ಇಗೋ, ಏಸಾವನು ನಾನೂರು ಮಂದಿ ಮನುಷ್ಯರ ಸಂಗಡ ಬರುತ್ತಿದ್ದನು. ಆಗ ಅವನು ಲೇಯಳಿಗೂ ರಾಹೇಲಳಿಗೂ ಇಬ್ಬರು ದಾಸಿಯರಿಗೂ ಅವರವರ ಮಕ್ಕಳನ್ನು ಒಪ್ಪಿಸಿ ಅವರನ್ನು ಬೇರೆ ಬೇರೆ ಮಾಡಿದನು. ದಾಸಿಯರನ್ನೂ ಅವರ ಮಕ್ಕಳನ್ನೂ ಮುಂದುಗಡೆಯಲ್ಲಿಯೂ ಅವರ ಹಿಂದೆ ಲೇಯಳನ್ನೂ ಆಕೆಯ ಮಕ್ಕಳನ್ನೂ ಕಟ್ಟಕಡೆಯಲ್ಲಿ ರಾಹೇಲಳನ್ನೂ ಯೋಸೇಫನನ್ನೂ ಇರಿಸಿದನು.