Genesis · chapter 37 · verse 13
Genesis 37:13 in Kannada
ಆದದರಿಂದ ಇಸ್ರಾಯೇಲನು ಯೋಸೇಫನಿಗೆ--ನಿನ್ನ ಸಹೋದ ರರು ಶೆಕೆಮಿನಲ್ಲಿ ಮಂದೆಯನ್ನು ಮೇಯಿಸುತ್ತಾರಲ್ಲಾ; ಅವರ ಬಳಿಗೆ ನಾನು ನಿನ್ನನ್ನು ಕಳುಹಿಸುತ್ತೇನೆ ಹೋಗು ಅಂದನು. ಅದಕ್ಕೆ ಅವನು--ನಾನು ಇಲ್ಲಿದ್ದೇನೆ ಅಂದನು.
Aadadarinda israayelanu yosephanige--ninna sahoda raru shekeminalli mandeyannu meyisuttaarallaa; avara balige naanu ninnannu kaluhisuttene hogu andanu. Adakke avanu--naanu illiddene andanu.
Genesis 37:13 in English
- King James Version (KJV)
- And Israel said unto Joseph, Do not thy brethren feed [the flock] in Shechem? come, and I will send thee unto them. And he said to him, Here [am I].
- World English Bible (WEB)
- Israel said to Joseph, “Aren’t your brothers feeding the flock in Shechem? Come, and I will send you to them.” He said to him, “Here I am.”
- American Standard Version (ASV)
- And Israel said unto Joseph, Are not thy brethren feeding the flock in Shechem? come, and I will send thee unto them. And he said to him, Here am I.
- Bible in Basic English (BBE)
- And Israel said to Joseph, Are not your brothers with the flock in Shechem? come, I will send you to them. And he said to him, Here am I.
- Darby Translation (DBY)
- And Israel said to Joseph, Do not thy brethren feed [the flock] at Shechem? Come, that I may send thee to them. And he said to him, Here am I.
- Webster's Bible (WBS)
- And Israel said to Joseph, Do not thy brethren feed [the flock] in Shechem? Come, and I will send thee to them. And he said to him, Here [am I].
- Young's Literal Translation (YLT)
- and Israel saith unto Joseph, 'Are not thy brethren feeding in Shechem? come, and I send thee unto them;' and he saith to him, 'Here [am] I;'
Read in context
- 11ಆಗ ಅವನ ಸಹೋದರರು ಅವನ ಮೇಲೆ ಹೊಟ್ಟೆಕಿಚ್ಚು ಪಟ್ಟರು. ಆದರೆ ಅವನ ತಂದೆ ಆ ಮಾತನ್ನು ಮನಸ್ಸಿನಲ್ಲಿ ಇಟ್ಟುಕೊಂಡನು.
- 12ಆಗ ಅವನ ಸಹೋ ದರರು ಶೆಕೆಮಿನಲ್ಲಿ ತಮ್ಮ ತಂದೆಯ ಮಂದೆಯನ್ನು ಮೇಯಿಸುವದಕ್ಕೆ ಹೋದರು.
- 13ಆದದರಿಂದ ಇಸ್ರಾಯೇಲನು ಯೋಸೇಫನಿಗೆ--ನಿನ್ನ ಸಹೋದ ರರು ಶೆಕೆಮಿನಲ್ಲಿ ಮಂದೆಯನ್ನು ಮೇಯಿಸುತ್ತಾರಲ್ಲಾ; ಅವರ ಬಳಿಗೆ ನಾನು ನಿನ್ನನ್ನು ಕಳುಹಿಸುತ್ತೇನೆ ಹೋಗು ಅಂದನು. ಅದಕ್ಕೆ ಅವನು--ನಾನು ಇಲ್ಲಿದ್ದೇನೆ ಅಂದನು.
- 14ಯಾಕೋಬನು ಅವನಿಗೆ--ಹೋಗಿ ನಿನ್ನ ಸಹೋದರರ ಕ್ಷೇಮಸಮಾಚಾರವನ್ನೂ ಮಂದೆಗಳ ಕ್ಷೇಮಸಮಾಚಾರವನ್ನೂ ತಿಳಿದುಕೊಂಡು ಬಂದು ನನಗೆ ತಿಳಿಸು ಎಂದು ಹೇಳಿ ಹೆಬ್ರೋನ್ ತಗ್ಗಿನಿಂದ ಕಳುಹಿಸಿದನು. ಆಗ ಅವನು ಶೆಕೆಮಿಗೆ ಬಂದನು.
- 15ಒಬ್ಬಾನೊಬ್ಬ ಮನುಷ್ಯನು ಯೋಸೇಫ ನನ್ನು ಕಂಡಾಗ ಇಗೋ, ಅವನು ಹೊಲದಲ್ಲಿ ಅಲೆಯುತ್ತಿದ್ದನು. ಆ ಮನುಷ್ಯನು ಅವನಿಗೆ--ನೀನು ಏನು ಹುಡುಕುತ್ತೀ ಎಂದು ಕೇಳಿದನು.
Cross references
- Ephesians 6:1–3 ಎಫೆಸದವರಿಗೆ 6:1–3ಮಕ್ಕಳೇ, ನೀವು ಕರ್ತನಲ್ಲಿ ನಿಮ್ಮ ತಂದೆ ತಾಯಿಗಳಿಗೆ ವಿಧೇಯರಾಗಿರ್ರಿ; ಇದು ನ್ಯಾಯವಾದದ್ದು. ನಿನ್ನ ತಂದೆಯನ್ನೂ ತಾಯಿಯನ್ನೂ ಸನ್ಮಾನಿಸಬೇಕು, ಇದು ವಾಗ್ದಾನಸಹಿತವಾದ ಮೊದಲನೇ ಆಜ್ಞೆಯಾಗಿದೆ. ಸನ್ಮಾನಿಸಿದರೆ ನಿನಗೆ ಮೇಲಾಗುವದು, ನೀನು ಭೂಮಿಯ ಮೇಲೆ ಬಹು ಕಾಲ ಬದುಕುವಿ.
- Genesis 27:18 ಆದಿಕಾಂಡ 27:18ಆಗ ಅವನು ತನ್ನ ತಂದೆಯ ಬಳಿಗೆ ಹೋಗಿ--ನನ್ನ ತಂದೆಯೇ ಅಂದನು. ಅದಕ್ಕೆ ಅವನು--ಇಗೋ ಇದ್ದೇನೆ; ನನ್ನ ಮಗನೇ, ನೀನು ಯಾರು ಅಂದನು.
- 1 Samuel 3:8 1 ಸಮುವೇಲನು 3:8ಕರ್ತನು ಮತ್ತೆ ಮೂರನೇ ಸಾರಿ--ಸಮುವೇಲನೇ ಎಂದು ಕರೆದನು. ಅವನು ಎದ್ದು ಏಲಿಯ ಬಳಿಗೆ ಹೋಗಿ--ಇಗೋ, ಇದ್ದೇನೆ; ನೀನು ನನ್ನನ್ನು ಕರೆದಿಯಲ್ಲಾ ಅಂದನು. ಆಗ ಕರ್ತನು ಹುಡುಗನನ್ನು ಕರೆಯುತ್ತಾನೆಂದು ಏಲಿಯು ಗ್ರಹಿಸಿಕೊಂಡನು.
- 1 Samuel 17:17–20 1 ಸಮುವೇಲನು 17:17–20ಇಷಯನು ತನ್ನ ಮಗನಾದ ದಾವೀದನಿಗೆನಿನ್ನ ಸಹೋದರರಿಗೋಸ್ಕರ ಒಂದು ಏಫದ ಹುರಿದ ಧಾನ್ಯವನ್ನೂ ಈ ಹತ್ತು ರೊಟ್ಟಿಗಳನ್ನೂ ತಕ್ಕೊಂಡು ದಂಡಿನಲ್ಲಿರುವ ನಿನ್ನ ಸಹೋದರರ ಬಳಿಗೆ ಓಡಿ ಹೋಗು. ಇದಲ್ಲದೆ ಈ ಹತ್ತು ಗಿಣ್ಣಿನ ಗಡ್ಡೆಗಳನ್ನು ಅವರ ಸಾವಿರಕ್ಕೆ ಪ್ರಧಾನನಾದವನಿಗೆ ಕೊಟ್ಟು ನಿನ್ನ ಸಹೋದರರ ಕ್ಷೇಮಸಮಾಚಾರವನ್ನು ವಿಚಾರಿಸಿ ಅವರ ಗುರುತನ್ನು ತಕ್ಕೊಂಡು ಬಾ ಅಂದನು. ಆಗ ಸೌಲನೂ ಇವರೂ ಇಸ್ರಾಯೇಲ್ಯರೆಲ್ಲರೂ ಫಿಲಿಷ್ಟಿ ಯರ ಸಂಗಡ ಏಲಾ ತಗ್ಗಿನಲ್ಲಿ ಯುದ್ಧಮಾಡುತ್ತಿದ್ದರು. ದಾವೀದನು ಉದಯದಲ್ಲಿ ಎದ್ದು ಕುರಿ ಕಾಯುವವನ ವಶಕ್ಕೆ ಕುರಿಗಳನ್ನು ಬಿಟ್ಟು ತನ್ನ ತಂದೆಯಾದ ಇಷಯನು ತನಗೆ ಆಜ್ಞಾಪಿಸಿದ ಹಾಗೆಯೇ ತಕ್ಕೊಂಡು ಹೋಗಿ ಸೈನ್ಯವು ಯುದ್ಧಕ್ಕೆ ಆರ್ಭಟಿಸಿ ಹೊರಡುವಾಗ ಸಾಮಗ್ರಿ ಇರುವ ಸ್ಥಳಕ್ಕೆ ಬಂದನು.
- Genesis 22:1 ಆದಿಕಾಂಡ 22:1ಇವುಗಳಾದ ಮೇಲೆ ದೇವರು ಅಬ್ರಹಾಮನನ್ನು ಶೋಧಿಸುವದಕ್ಕಾಗಿ ಆತನು ಅವನಿಗೆ--ಅಬ್ರಹಾಮನೇ ಅಂದನು. ಅದಕ್ಕವನು --ಇಗೋ, ಇಲ್ಲಿದ್ದೇನೆ ಅಂದನು.
- Genesis 27:1 ಆದಿಕಾಂಡ 27:1ಇಸಾಕನು ಮುದುಕನಾಗಿ ನೋಡುವದ ಕ್ಕಾಗದಷ್ಟು ಅವನ ಕಣ್ಣುಗಳು ಮೊಬ್ಬಾ ದಾಗ ಅವನು ತನ್ನ ಹಿರೀ ಮಗನಾದ ಏಸಾವನನ್ನು ಕರೆದು ಅವನಿಗೆ--ನನ್ನ ಮಗನೇ ಅಂದಾಗ ಅವನು ಇಸಾಕನಿಗೆ--ಇಗೋ, ಇದ್ದೇನೆ ಅಂದನು.
- 1 Samuel 3:16 1 ಸಮುವೇಲನು 3:16ಆಗ ಏಲಿಯು ಸಮುವೇಲನನ್ನು ಕರೆದು ಅವನಿಗೆ ನನ್ನ ಮಗನಾದ ಸಮುವೇಲನೇ ಅಂದನು.
- Matthew 10:16 ಮತ್ತಾಯನು 10:16ಇಗೋ, ತೋಳಗಳ ಮಧ್ಯದಲ್ಲಿ ಕುರಿಗಳನ್ನು ಕಳು ಹಿಸುವಂತೆ ನಾನು ನಿಮ್ಮನ್ನು ಕಳುಹಿಸುತ್ತೇನೆ. ಆದದ ರಿಂದ ನೀವು ಸರ್ಪಗಳಂತೆ ಜಾಣರೂ ಪಾರಿವಾಳಗಳಂತೆ ನಿಷ್ಕಪಟಿಗಳಾಗಿರ್ರಿ.
- 1 Samuel 3:4–6 1 ಸಮುವೇಲನು 3:4–6ಅದಕ್ಕ ವನು--ಇಗೋ, ನಾನು ಇಲ್ಲಿ ಇದ್ದೇನೆ ಎಂದು ಹೇಳಿ ಏಲಿಯ ಬಳಿಗೆ ಓಡಿಹೋಗಿ,--ಇಗೋ, ಇಲ್ಲಿ ಇದ್ದೇನೆ; ನೀನು ನನ್ನನ್ನು ಕರೆದಿಯಲ್ಲಾ ಅಂದನು. ಅದಕ್ಕವನು--ನಾನು ನಿನ್ನನ್ನು ಕರೆಯಲಿಲ್ಲ; ಹೋಗಿ ಮಲಗಿಕೋ ಅಂದನು. ಅವನು ಹೋಗಿ ಹಾಗೆಯೇ ಮಲಗಿದನು. ಕರ್ತನು--ಸಮುವೇಲನೇ ಎಂದು ಅವ ನನ್ನು ತಿರಿಗಿ ಕರೆದನು. ಆಗ ಸಮುವೇಲನು ಎದ್ದು ಏಲಿಯ ಬಳಿಗೆ ಹೋಗಿ--ಇಗೋ, ಇದ್ದೇನೆ; ನೀನು ನನ್ನನ್ನು ಕರೆದಿಯಲ್ಲಾ ಅಂದನು. ಅದಕ್ಕವನು--ನನ್ನ ಮಗನೇ, ನಾನು ನಿನ್ನನ್ನು ಕರೆಯಲಿಲ್ಲ; ಹೋಗಿ ಮಲ ಗಿಕೋ ಅಂದನು.
- Luke 20:13 ಲೂಕನು 20:13ಆಗ ದ್ರಾಕ್ಷೇತೋಟದ ಯಜಮಾನನು--ನಾನೇನು ಮಾಡಲಿ? ನಾನು ನನ್ನ ಪ್ರಿಯ ಮಗನನ್ನೇ ಕಳುಹಿ ಸುವೆನು. ಅವರು ಇವನನ್ನು ನೋಡಿಯಾದರೂ ಇವ ನನ್ನು ಗೌರವಿಸಿಯಾರು ಎಂದು ಅಂದುಕೊಂಡನು.