Genesis · chapter 37 · verse 3
Genesis 37:3 in Kannada
ಆದರೆ ಯೋಸೇಫನು ಇಸ್ರಾಯೇಲನಿಗೆ ಮುಪ್ಪಿನಲ್ಲಿ ಹುಟ್ಟಿದ ಮಗನಾಗಿ ದ್ದರಿಂದ ಅವನು ತನ್ನ ಎಲ್ಲಾ ಮಕ್ಕಳಿಗಿಂತ ಅವನನ್ನು ಹೆಚ್ಚು ಪ್ರೀತಿಮಾಡಿ ಅವನಿಗೆ ಅನೇಕ ಬಣ್ಣದ ಅಂಗಿ ಯನ್ನು ಮಾಡಿಸಿದನು.
Aadare yosephanu israayelanige muppinalli huttida maganaagi ddarinda avanu tanna ellaa makkaliginta avanannu hechchu preetimaadi avanige aneka bannada angi yannu maadisidanu.
Genesis 37:3 in English
- King James Version (KJV)
- Now Israel loved Joseph more than all his children, because he [was] the son of his old age: and he made him a coat of [many] colours.
- World English Bible (WEB)
- Now Israel loved Joseph more than all his children, because he was the son of his old age, and he made him a tunic of many colors.
- American Standard Version (ASV)
- Now Israel loved Joseph more than all his children, because he was the son of his old age: and he made him a coat of many colors.
- Bible in Basic English (BBE)
- Now the love which Israel had for Joseph was greater than his love for all his other children, because he got him when he was an old man: and he had a long coat made for him.
- Darby Translation (DBY)
- And Israel loved Joseph more than all his sons, because he was son of his old age; and he made him a vest of many colours.
- Webster's Bible (WBS)
- Now Israel loved Joseph more than all his children, because he [was] the son of his old age: and he made him a coat of [many] colors.
- Young's Literal Translation (YLT)
- And Israel hath loved Joseph more than any of his sons, for he [is] a son of his old age, and hath made for him a long coat;
Read in context
- 1ಯಾಕೋಬನು ತನ್ನ ತಂದೆ ಪ್ರವಾಸಿಯಾಗಿದ್ದ ಕಾನಾನ್ ದೇಶದಲ್ಲಿ ವಾಸ ವಾಗಿದ್ದನು.
- 2ಇವು ಯಾಕೋಬನ ವಂಶಾವಳಿಗಳು: ಯೋಸೇಫನು ಹದಿನೇಳು ವರುಷದವನಾಗಿದ್ದಾಗ ತನ್ನ ಸಹೋದರರ ಸಂಗಡ ಮಂದೆಯನ್ನು ಮೇಯಿಸು ತ್ತಿದ್ದನು. ಆ ಹುಡುಗನು ತನ್ನ ತಂದೆಯ ಹೆಂಡತಿ ಯರಾಗಿದ್ದ ಬಿಲ್ಹಳ ಮತ್ತು ಜಿಲ್ಪಳ ಕುಮಾರರ ಸಂಗಡ ಇದ್ದನು. ಯೋಸೇಫನು ಅವರ ಕೆಟ್ಟತನದ ಸುದ್ದಿಯನ್ನು ತನ್ನ ತಂದೆಗೆ ತಿಳಿಸುತ್ತಿದ್ದನು.
- 3ಆದರೆ ಯೋಸೇಫನು ಇಸ್ರಾಯೇಲನಿಗೆ ಮುಪ್ಪಿನಲ್ಲಿ ಹುಟ್ಟಿದ ಮಗನಾಗಿ ದ್ದರಿಂದ ಅವನು ತನ್ನ ಎಲ್ಲಾ ಮಕ್ಕಳಿಗಿಂತ ಅವನನ್ನು ಹೆಚ್ಚು ಪ್ರೀತಿಮಾಡಿ ಅವನಿಗೆ ಅನೇಕ ಬಣ್ಣದ ಅಂಗಿ ಯನ್ನು ಮಾಡಿಸಿದನು.
- 4ತಮ್ಮ ತಂದೆಯು ಅವನನ್ನು ಅವನ ಎಲ್ಲಾ ಸಹೋದರರಿಗಿಂತ ಹೆಚ್ಚು ಪ್ರೀತಿ ಮಾಡುತ್ತಾನೆಂದು ಅವನ ಸಹೋದರರು ನೋಡಿ ಅವನನ್ನು ದ್ವೇಷಿಸಿ ಅವನ ಸಂಗಡ ಸಮಾಧಾನವಾಗಿ ಮಾತಾಡಲಾರದೆ ಇದ್ದರು.
- 5ಯೋಸೇಫನು ಒಂದು ಕನಸನ್ನು ಕಂಡು ತನ್ನ ಸಹೋದರರಿಗೆ ತಿಳಿಸಿದಾಗ ಅವರು ಅವನನ್ನು ಇನ್ನೂ ಹೆಚ್ಚಾಗಿ ದ್ವೇಷಿಸಿದರು.
Cross references
- Genesis 37:32 ಆದಿಕಾಂಡ 37:32ಆ ಬಣ್ಣದ ಅಂಗಿಯನ್ನು ಕಳುಹಿಸಿಕೊಟ್ಟರು. ಅವರು ಅದನ್ನು ಅವರ ತಂದೆಯ ಬಳಿಗೆ ತಂದು--ಇದು ನಮಗೆ ಸಿಕ್ಕಿತು. ಇದು ನಿನ್ನ ಮಗನ ಅಂಗಿಯೋ ಏನೋ ನೋಡು ಎಂದು ಹೇಳಿದರು.
- John 3:35 ಯೋಹಾನನು 3:35ತಂದೆಯು ಮಗನನ್ನು ಪ್ರೀತಿಸಿ ಎಲ್ಲವುಗಳನ್ನು ಆತನ ಕೈಯಲ್ಲಿ ಕೊಟ್ಟಿದ್ದಾನೆ.ಮಗನ ಮೇಲೆ ನಂಬಿಕೆಯಿಡುವವನಿಗೆ ನಿತ್ಯಜೀವ ಉಂಟು; ಯಾವನು ಮಗನನ್ನು ನಂಬುವದಿಲ್ಲವೋ ಅವನು ಜೀವವನ್ನು ಕಾಣುವದಿಲ್ಲ; ಆದರೆ ದೇವರ ಕೋಪವು ಅವನ ಮೇಲೆ ನೆಲೆಗೊಂಡಿದೆ ಅಂದನು.
- 2 Samuel 13:18 2 ಸಮುವೇಲನು 13:18ಅವಳು ವಿವಿಧವಾದ ವಸ್ತ್ರವನ್ನು ಉಟ್ಟಿದ್ದಳು; ಯಾಕಂದರೆ ಅರಸನ ಕುಮಾರ್ತೆಯರಾದ ಕನ್ಯಾಸ್ತ್ರೀಯರು ಇಂಥಾ ನಿಲುವಂಗಿಗಳನ್ನು ಧರಿಸಿಕೊಳ್ಳುತ್ತಿದ್ದರು. ಆದರೆ ಅವನ ಸೇವಕನು ಅವಳನ್ನು ಹೊರಗೆ ಕಳುಹಿಸಿ ಬಾಗಲು ಮುಚ್ಚಿ ಬೀಗಹಾಕಿದನು.
- Genesis 37:23 ಆದಿಕಾಂಡ 37:23ಯೋಸೇಫನು ತನ್ನ ಸಹೋದರರ ಬಳಿಗೆ ಬಂದಾಗ ಅವರು ಯೋಸೇಫನ ಮೇಲಿದ್ದ ಬಣ್ಣದ ಅಂಗಿಯನ್ನು ತೆಗೆದರು.
- John 13:22–23 ಯೋಹಾನನು 13:22–23ಆಗ ಶಿಷ್ಯರು ಅನುಮಾನದಿಂದ ಈತನು ಯಾರನ್ನು ಕುರಿತು ಹೇಳಿದನೆಂದು ಒಬ್ಬರನೊಬ್ಬರು ನೋಡಿದರು. ಶಿಷ್ಯ ರಲ್ಲಿ ಯೇಸು ಪ್ರೀತಿಸಿದ ಒಬ್ಬನು ಆತನ ಎದೆಯ ಮೇಲೆ ಒರಗಿಕೊಂಡಿದ್ದನು.
- Ezekiel 16:16 ಯೆಹೆಜ್ಕೇಲನು 16:16ನಿನ್ನ ವಸ್ತ್ರಗಳನ್ನು ತೆಗೆದುಕೊಂಡು ಚಿತ್ರ ವಿಚಿತ್ರ ಮಾಡಿ ಅಲಂಕರಿಸಿಕೊಂಡು ಪೂಜಾಸ್ಥಳದಲ್ಲಿ ವ್ಯಭಿಚಾರ ಮಾಡಿದೆ, ಇದು ನಡೆಯತಕ್ಕದ್ದಲ್ಲ ಮತ್ತು ನಡೆಯಬಾರದಂಥ ಕೆಲಸವಾಗಿದೆ.
- Psalm 45:13–14 ಕೀರ್ತನೆಗಳು 45:13–14ಅರಸನ ಮಗಳು ತನ್ನಲ್ಲಿ ಪೂರ್ಣ ಘನವುಳ್ಳವ ಳಾಗಿದ್ದಾಳೆ; ಅವಳ ವಸ್ತ್ರವು ಚಿನ್ನದಿಂದ ನೆಯಿದದೆ. ಇವಳು ಕಸೂತಿ ವಸ್ತ್ರಗಳನ್ನುಟ್ಟು ಅರಸನ ಬಳಿಗೆ ತರಲ್ಪಡುತ್ತಾಳೆ; ಅವಳ ಹಿಂದೆ ಇರುವ ಕನ್ಯೆಯರಾದ ಅವಳ ಸಂಗಡಿಗರು ನಿನ್ನ ಬಳಿಗೆ ತರಲ್ಪಡುತ್ತಾರೆ.
- Genesis 44:20–30 ಆದಿಕಾಂಡ 44:20–30ನಾವು ನಮ್ಮ ಒಡೆಯನಿಗೆ--ನಮಗೆ ಮುದುಕನಾದ ತಂದೆಯೂ ಅವನಿಗೆ ಮುದಿಪ್ರಾಯದಲ್ಲಿ ಹುಟ್ಟಿದ ಚಿಕ್ಕಮಗನೂ ಇದ್ದಾರೆ; ಅವನ ಸಹೋದರನು ಸತ್ತುಹೋಗಿದ್ದಾನೆ. ಆದದರಿಂದ ಅವನೊಬ್ಬನೇ ತನ್ನ ತಾಯಿಗೆ ಉಳಿದಿದ್ದಾನೆ. ಅವನ ತಂದೆಯು ಅವನನ್ನು ಪ್ರೀತಿ ಮಾಡುತ್ತಾನೆ ಎಂದು ಹೇಳಿದೆವು. ಅದಕ್ಕೆ ನೀನು ನಿನ್ನ ದಾಸರಿಗೆ--ನಾನು ಅವನನ್ನು ನೋಡುವ ಹಾಗೆ ಅವನನ್ನು ನನ್ನ ಬಳಿಗೆ ಕರಕೊಂಡು ಬನ್ನಿರಿ ಎಂದು ಹೇಳಿದಿಯಲ್ಲಾ, ನಾವು ನಮ್ಮ ಒಡೆಯನಿಗೆಆ ಹುಡುಗನು ತನ್ನ ತಂದೆಯನ್ನು ಅಗಲಕೂಡದು. ಅವನು ತಂದೆಯನ್ನು ಬಿಟ್ಟಗಲಿದರೆ ತಂದೆಯು ಸಾಯುವನು ಎಂದು ಹೇಳಿದೆವು. ಆಗ ನೀನು ನಿನ್ನ ದಾಸರಿಗೆ--ನಿಮ್ಮ ತಮ್ಮನು ನಿಮ್ಮ ಸಂಗಡ ಇಲ್ಲಿಗೆ ಬಾರದಿದ್ದರೆ ಇನ್ನು ಮೇಲೆ ನನ್ನ ಮುಖವನ್ನು ನೋಡಬಾರದು ಎಂದು ನೀನು ಹೇಳಿದಿ. ಹೀಗಿ ರಲಾಗಿ ನಾವು ನಿನ್ನ ದಾಸನಾದ ನಮ್ಮ ತಂದೆಯ ಬಳಿಗೆ ಹೋದಾಗ ನನ್ನ ಒಡೆಯನ ಮಾತುಗಳನ್ನು ಅವನಿಗೆ ತಿಳಿಸಿದೆವು. ನಮ್ಮ ತಂದೆಯು--ನೀವು ತಿರಿಗಿಹೋಗಿ ನಮಗೆ ಸ್ವಲ್ಪ ಆಹಾರವನ್ನು ಕೊಂಡು ಕೊಳ್ಳಿರಿ ಅಂದನು. ಆಗ ನಾವು--ಹೋಗುವದ ಕ್ಕಾಗದು, ನಮ್ಮ ತಮ್ಮನು ನಮ್ಮೊಂದಿಗೆ ಇದ್ದರೆ ಮಾತ್ರ ನಾವು ಹೋಗುತ್ತೇವೆ. ಯಾಕಂದರೆ ನಮ್ಮ ತಮ್ಮನು ನಮ್ಮ ಸಂಗಡ ಇದ್ದರೆ ಮಾತ್ರ ಆ ಮನು ಷ್ಯನ ಮುಖವನ್ನು ನಾವು ನೋಡುವದಕ್ಕಾಗುವದು ಎಂದು ಹೇಳಿದೆವು. ಅದಕ್ಕೆ ನಿನ್ನ ದಾಸನಾದ ನನ್ನ ತಂದೆಯು--ನನ್ನ ಹೆಂಡತಿಯು ನನಗೆ ಇಬ್ಬರು ಕುಮಾರರನ್ನು ಹೆತ್ತಳೆಂಬದು ನಿಮಗೆ ತಿಳಿದಿದೆ. ಒಬ್ಬನು ನನ್ನ ಬಳಿಯಿಂದ ಹೋಗಿಬಿಟ್ಟನು, ಅವನು ಕೊಲ್ಲಲ್ಪಟ್ಟನೆಂದು ಹೇಳಿದರು. ಅವನನ್ನು ಈ ದಿನದ ವರೆಗೂ ನಾನು ನೋಡಲಿಲ್ಲ. (ಈಗ) ನನ್ನ ಬಳಿಯಿಂದ ಇವನನ್ನೂ ತಕ್ಕೊಂಡು ಹೋಗ ಬೇಕೆಂದಿದೀರಿ, ಅವನಿಗೂ ಕೇಡು ಬಂದರೆ ನನ್ನ ಮುದಿ ತಲೆಯನ್ನು ದುಃಖದಿಂದ ಸಮಾಧಿಗೆ ಇಳಿಯ ಮಾಡುವಿರಿ ಎಂದು ಹೇಳಿದನು. ಹೀಗಿರಲಾಗಿ ನಾನು ನಿನ್ನ ದಾಸನಾದ ನನ್ನ ತಂದೆಯ ಬಳಿಗೆ ಹೋಗುವ ಸಮಯದಲ್ಲಿ ಅವನ ಪ್ರಾಣವು ಹುಡುಗನ ಪ್ರಾಣದೊಂದಿಗೆ ಬಂಧಿಸಲ್ಪಟ್ಟಿದ್ದರಿಂದ