Genesis · chapter 37 · verse 34
Genesis 37:34 in Kannada
ಆಗ ಯಾಕೋಬನು ತನ್ನ ವಸ್ತ್ರಗಳನ್ನು ಹರಿದುಕೊಂಡು ತನ್ನ ನಡುವಿಗೆ ಗೋಣಿಯನ್ನು ಕಟ್ಟಿಕೊಂಡು ತನ್ನ ಮಗನಿಗೋಸ್ಕರ ಬಹುದಿನ ದುಃಖಪಟ್ಟನು.
Aaga yaakobanu tanna vastragalannu haridukondu tanna naduvige goniyannu kattikondu tanna maganigoskara bahudina duhkhapattanu.
Genesis 37:34 in English
- King James Version (KJV)
- And Jacob rent his clothes, and put sackcloth upon his loins, and mourned for his son many days.
- World English Bible (WEB)
- Jacob tore his clothes, and put sackcloth on his waist, and mourned for his son many days.
- American Standard Version (ASV)
- And Jacob rent his garments, and put sackcloth upon his loins, and mourned for his son many days.
- Bible in Basic English (BBE)
- Then Jacob, giving signs of grief, put on haircloth, and went on weeping for his son day after day.
- Darby Translation (DBY)
- And Jacob rent his clothes, and put sackcloth on his loins, and mourned for his son many days.
- Webster's Bible (WBS)
- And Jacob rent his clothes, and put sackcloth on his loins, and mourned for his son many days.
- Young's Literal Translation (YLT)
- And Jacob rendeth his raiment, and putteth sackcloth on his loins, and becometh a mourner for his son many days,
Read in context
- 32ಆ ಬಣ್ಣದ ಅಂಗಿಯನ್ನು ಕಳುಹಿಸಿಕೊಟ್ಟರು. ಅವರು ಅದನ್ನು ಅವರ ತಂದೆಯ ಬಳಿಗೆ ತಂದು--ಇದು ನಮಗೆ ಸಿಕ್ಕಿತು. ಇದು ನಿನ್ನ ಮಗನ ಅಂಗಿಯೋ ಏನೋ ನೋಡು ಎಂದು ಹೇಳಿದರು.
- 33ಯಾಕೋಬನು ಅದನ್ನು ಗುರುತು ಹಿಡಿದು--ಇದು ನನ್ನ ಮಗನ ಅಂಗಿ ಹೌದು; ದುಷ್ಟಮೃಗವು ಅವನನ್ನು ತಿಂದುಬಿಟ್ಟಿತು; ಯೋಸೇಫನು ನಿಸ್ಸಂದೇಹವಾಗಿ ತುಂಡು ತುಂಡಾಗಿ ಮಾಡಲ್ಪಟ್ಟಿದ್ದಾನೆ ಅಂದನು.
- 34ಆಗ ಯಾಕೋಬನು ತನ್ನ ವಸ್ತ್ರಗಳನ್ನು ಹರಿದುಕೊಂಡು ತನ್ನ ನಡುವಿಗೆ ಗೋಣಿಯನ್ನು ಕಟ್ಟಿಕೊಂಡು ತನ್ನ ಮಗನಿಗೋಸ್ಕರ ಬಹುದಿನ ದುಃಖಪಟ್ಟನು.
- 35ಅವನ ಕುಮಾರ ಕುಮಾರ್ತೆಯರೆಲ್ಲಾ ಅವನನ್ನು ಆದರಿಸಿದಾಗ್ಯೂ ಅವನು ಆದರಣೆ ಹೊಂದಲೊಲ್ಲದೆ--ನನ್ನ ಮಗನ ಬಳಿಗೆ ಸಮಾಧಿಗೆ ದುಃಖದಿಂದಲೇ ಇಳಿದು ಹೋಗು ವೆನು ಅಂದನು. ಹೀಗೆ ಅವನ ತಂದೆ ಅವನಿಗೋಸ್ಕರ ಅತ್ತನು.ಇದಲ್ಲದೆ ಆ ಮಿದ್ಯಾನ್ಯರು ಯೋಸೇಫನನ್ನು ಐಗುಪ್ತದಲ್ಲಿ ಫರೋಹನ ಉದ್ಯೋಗಸ್ಥನಾದ ಪೋಟೀಫರನಿಗೆ ಮಾರಿದನು. ಅವನು ಮೈಗಾವಲಿನ ದಳವಾಯಿಯಾಗಿದ್ದನು.
- 36ಇದಲ್ಲದೆ ಆ ಮಿದ್ಯಾನ್ಯರು ಯೋಸೇಫನನ್ನು ಐಗುಪ್ತದಲ್ಲಿ ಫರೋಹನ ಉದ್ಯೋಗಸ್ಥನಾದ ಪೋಟೀಫರನಿಗೆ ಮಾರಿದನು. ಅವನು ಮೈಗಾವಲಿನ ದಳವಾಯಿಯಾಗಿದ್ದನು.
Cross references
- Genesis 37:29 ಆದಿಕಾಂಡ 37:29ರೂಬೇನನು ತಗ್ಗಿನ ಬಳಿಗೆ ತಿರಿಗಿ ಬಂದಾಗ ಇಗೋ, ಯೋಸೇಫನು ತಗ್ಗಿನಲ್ಲಿ ಇಲ್ಲದ್ದರಿಂದ ತನ್ನ ವಸ್ತ್ರಗಳನ್ನು ಹರಿದು ಕೊಂಡನು.
- Esther 4:1–3 ಎಸ್ತೇರಳು 4:1–3ಆದದ್ದನ್ನೆಲ್ಲಾ ಮೊರ್ದೆಕೈಗೆ ತಿಳಿದಾಗ ಮೊರ್ದೆಕೈ ತನ್ನ ವಸ್ತ್ರಗಳನ್ನು ಹರಕೊಂಡು, ಗೋಣಿಯ ತಟ್ಟನ್ನು ಉಟ್ಟುಕೊಂಡು, ಬೂದಿಯನ್ನು ಹಾಕಿಕೊಂಡು ಪಟ್ಟಣದ ಮಧ್ಯದಲ್ಲಿ ಹೋಗಿ ವ್ಯಥೆ ಯಿಂದ ಗಟ್ಟಿಯಾಗಿ ಕೂಗಿದನು. ಅವನು ಅರಸನ ಅರಮನೆಯ ಬಾಗಲಿನ ವರೆಗೆ ಬಂದನು. ಯಾಕಂದರೆ ಗೋಣಿಯತಟ್ಟನ್ನು ಉಟ್ಟುಕೊಂಡು ಅರಸನ ಅರ ಮನೆಯ ಬಾಗಲಲ್ಲಿ ಪ್ರವೇಶಿಸಲು ಒಬ್ಬನಿಗೂ ಅಪ್ಪಣೆ ಇರಲಿಲ್ಲ. ಇದಲ್ಲದೆ ಅರಸನ ಮಾತೂ ಅವನ ಕಟ್ಟ ಳೆಯೂ ಯಾವ ಯಾವ ಸೀಮೆಯಲ್ಲಿ ಯಾವ ಯಾವ ಸ್ಥಳಕ್ಕೆ ಹೋಯಿತೋ ಅಲ್ಲಿ ಯೆಹೂದ್ಯರೊಳಗೆ ಮಹಾ ದುಃಖವೂ ಉಪವಾಸವೂ ಅಳುವಿಕೆಯೂ ಗೋಳಾ ಡುವಿಕೆಯೂ ಉಂಟಾಗಿತ್ತು. ಅನೇಕರು ಗೋಣಿಯ ತಟ್ಟನ್ನು ಉಟ್ಟುಕೊಂಡು ಬೂದಿಯಲ್ಲಿ ಮಲಗಿ ಕೊಂಡರು.
- Job 1:20 ಯೋಬನು 1:20ಆಗ ಯೋಬನು ಎದ್ದು ತನ್ನ ನಿಲುವಂಗಿಯನ್ನು ಹರಿದು ತನ್ನ ತಲೆಬೋಳಿಸಿಕೊಂಡು ನೆಲಕ್ಕೆ ಬಿದ್ದು ಆರಾಧಿಸಿ
- 2 Samuel 3:31 2 ಸಮುವೇಲನು 3:31ಆಗ ದಾವೀದನು ಯೋವಾಬನಿಗೂ ಅವನ ಸಂಗಡವಿದ್ದ ಎಲ್ಲಾ ಜನರಿಗೂ--ನೀವು ನಿಮ್ಮ ವಸ್ತ್ರಗ ಳನ್ನು ಹರಕೊಂಡು ಗೋಣೀತಟ್ಟುಗಳನ್ನು ಉಟ್ಟು ಕೊಂಡು ಅಬ್ನೇರನ ಮುಂದೆ ಗೋಳಾಡಿರಿ ಅಂದನು.ಅರಸನಾದ ದಾವೀದನು ತಾನೇ ಅವನ ಶವದ ಪೆಟ್ಟಿಗೆಯ ಹಿಂದೆ ಹೋದನು.
- Jeremiah 36:24 ಯೆರೆಮೀಯ 36:24ಆದಾಗ್ಯೂ ಈ ವಾಕ್ಯಗಳನ್ನೆಲ್ಲಾ ಕೇಳಿದ ಅರಸನಾದರೂ ಅವನ ಸೇವಕರಲ್ಲಿ ಒಬ್ಬನಾದರೂ ಹೆದರಲಿಲ್ಲ, ತಮ್ಮವಸ್ತ್ರ ಗಳನ್ನು ಹರಕೊಳ್ಳಲಿಲ್ಲ.
- Jonah 3:5–8 ಯೋನ 3:5–8ಆಗ ನಿನೆವೆಯ ಮನು ಷ್ಯರು ದೇವರನ್ನು ನಂಬಿ ಉಪವಾಸವನ್ನು ಸಾರಿ ಅವ ರಲ್ಲಿ ದೊಡ್ಡವನು ಮೊದಲುಗೊಂಡು ಚಿಕ್ಕವನ ವರೆಗೂ ಗೋಣೀತಟ್ಟನ್ನು ಉಟ್ಟುಕೊಂಡರು. ಆ ಮಾತು ನಿನೆವೆಯ ಅರಸನಿಗೆ ಮುಟ್ಟಿದಾಗ ಅವನು ತನ್ನ ಸಿಂಹಾಸನದಿಂದ ಎದ್ದು ತನ್ನ ನಿಲುವಂಗಿಯನ್ನು ತೆಗೆದಿಟ್ಟು ಗೋಣೀತಟ್ಟನ್ನು ಉಟ್ಟುಕೊಂಡು ಬೂದಿ ಯಲ್ಲಿ ಕೂತು ಕೊಂಡನು. ಅವನು ಅರಸನಿಂದಲೂ ತನ್ನ ಶ್ರೇಷ್ಠರಿಂದಲೂ ಆದ ನಿರ್ಣಯವನ್ನು ನಿನೆವೆ ಯಲ್ಲಿ ಸಾರಿ ಹೇಳಿದ್ದೇನಂದರೆ--ಮನುಷ್ಯರಾಗಲಿ, ಮೃಗಗಳಾಗಲಿ, ದನಗಳಾಗಲಿ, ಕುರಿಗಳಾಗಲಿ, ಏನಾ ದರೂ ರುಚಿ ನೋಡದಿರಲಿ, ಮೇಯ ದಿರಲಿ, ನೀರನ್ನು ಕುಡಿಯದಿರಲಿ, ಮನುಷ್ಯರೂ ಮೃಗಗಳೂ ಗೋಣೀ ತಟ್ಟು ಹಾಕಿಕೊಂಡು ಬಲವಾಗಿ ದೇವರಿಗೆ ಮೊರೆಯಿ ಡಲಿ; ಹೌದು, ಅವರು ತಮ್ಮ ತಮ್ಮ ದುರ್ಮಾರ್ಗ ಗಳನ್ನೂ ತಾವು ನಡಿಸುತ್ತಿರುವ ಹಿಂಸೆಯನ್ನು ಬಿಟ್ಟು ತಿರುಗಲಿ.
- Joel 2:13 ಯೋವೇಲ 2:13ನಿಮ್ಮ ಬಟ್ಟೆಗಳನ್ನಲ್ಲ, ನಿಮ್ಮ ಹೃದಯವನ್ನು ಹರಕೊಂಡು ನಿಮ್ಮ ದೇವರಾದ ಕರ್ತನ ಕಡೆಗೆ ತಿರುಗಿಕೊಳ್ಳಿರಿ; ಆತನು ದಯೆ ಕರುಣೆ ದೀರ್ಘಶಾಂತಿ ಮಹಾ ಕೃಪೆಯೂ ಉಳ್ಳವನಾಗಿ ಕೇಡಿಗೆ ಪಶ್ಚಾತ್ತಾಪಪಡುತ್ತಾನೆ.
- 1 Chronicles 21:16 1 ಪೂರ್ವಕಾಲವೃತ್ತಾಂತ 21:16ಆಗ ದಾವೀದನು ತನ್ನ ಕಣ್ಣುಗಳನ್ನೆತ್ತಿ ಭೂಮಿಗೂ ಆಕಾಶಕ್ಕೂ ಮಧ್ಯದಲ್ಲಿ ನಿಂತಿರುವ ಕರ್ತನ ದೂತನನ್ನು ಕಂಡನು; ಅವನ ಕೈಯಲ್ಲಿ ಯೆರೂಸ ಲೇಮಿನ ಮೇಲೆ ಚಾಚಿದ್ದ ಬಿಚ್ಚುಕತ್ತಿ ಇತ್ತು. ಆಗ ದಾವೀದನೂ ಇಸ್ರಾಯೇಲಿನ ಹಿರಿಯರೂ ಗೋಣೀ ತಟ್ಟುಗಳಿಂದ ಮುಚ್ಚಿಕೊಂಡವರಾಗಿ ಮೋರೆ ಕೆಳಗಾಗಿ ಬಿದ್ದರು.
- 1 Kings 21:27 1 ಅರಸುಗಳು 21:27ಆದರೆ ಅಹಾಬನು ಆ ಮಾತುಗಳನ್ನು ಕೇಳಿದಾಗ ಏನಾಯಿತಂದರೆ, ಅವನು ತನ್ನ ವಸ್ತ್ರಗಳನ್ನು ಹರಿದು ತನ್ನ ಶರೀರದ ಮೇಲೆ ಗೋಣಿಯನ್ನು ಹಾಕಿಕೊಂಡು ಉಪವಾಸಮಾಡಿ ಗೋಣಿಯಲ್ಲಿ ಮಲಗಿಕೊಂಡು ಮೆಲ್ಲಗೆ ನಡೆದನು.
- 2 Kings 19:1 2 ಅರಸುಗಳು 19:1ಅರಸನಾದ ಹಿಜ್ಕೀಯನು ಅದನ್ನು ಕೇಳಿದಾಗ ತನ್ನ ವಸ್ತ್ರಗಳನ್ನು ಹರಿದುಕೊಂಡು ಗೋಣೀತಟ್ಟಿನಿಂದ ತನ್ನನ್ನು ಮುಚ್ಚಿಕೊಂಡು ಕರ್ತನ ಮನೆಯಲ್ಲಿ ಪ್ರವೇಶಿಸಿದನು.
- Joshua 7:6 ಯೆಹೋಶುವ 7:6ಆಗ ಯೆಹೋಶುವನು ತನ್ನ ವಸ್ತ್ರಗಳನ್ನು ಹರಿದುಕೊಂಡು ತಾನೂ ಇಸ್ರಾಯೇಲಿನ ಹಿರಿಯರೂ ತಮ್ಮ ತಲೆಗಳ ಮೇಲೆ ಧೂಳನ್ನು ಹಾಕಿಕೊಂಡು ಸಾಯಂಕಾಲದ ವರೆಗೆ ಕರ್ತನ ಮಂಜೂಷದ ಮುಂದೆ ನೆಲದಮೇಲೆ ಬೋರಲು ಬಿದ್ದರು.
- 2 Samuel 1:11 2 ಸಮುವೇಲನು 1:11ಆಗ ದಾವೀದನೂ ಅವನ ಸಂಗಡ ಇದ್ದ ಎಲ್ಲಾ ಜನರೂ ತಮ್ಮ ವಸ್ತ್ರಗಳನ್ನು ಹರಿದುಕೊಂಡು