Genesis · chapter 37 · verse 36
Genesis 37:36 in Kannada
ಇದಲ್ಲದೆ ಆ ಮಿದ್ಯಾನ್ಯರು ಯೋಸೇಫನನ್ನು ಐಗುಪ್ತದಲ್ಲಿ ಫರೋಹನ ಉದ್ಯೋಗಸ್ಥನಾದ ಪೋಟೀಫರನಿಗೆ ಮಾರಿದನು. ಅವನು ಮೈಗಾವಲಿನ ದಳವಾಯಿಯಾಗಿದ್ದನು.
Idallade aa midyaanyaru yosephanannu aiguptadalli pharohana udyogasthanaada poteepharanige maaridanu. Avanu maigaavalina dalavaayiyaagiddanu.
Genesis 37:36 in English
- King James Version (KJV)
- And the Midianites sold him into Egypt unto Potiphar, an officer of Pharaoh’s, [and] captain of the guard.
- World English Bible (WEB)
- The Midianites sold him into Egypt to Potiphar, an officer of Pharaoh’s, the captain of the guard.
- American Standard Version (ASV)
- And the Midianites sold him into Egypt unto Potiphar, an officer of Pharaoh’s, the captain of the guard.
- Bible in Basic English (BBE)
- And in Egypt the men of Midian gave him for a price to Potiphar, a captain of high position in Pharaoh's house.
- Darby Translation (DBY)
- And the Midianites sold him into Egypt, to Potiphar, a chamberlain of Pharaoh, the captain of the life-guard.
- Webster's Bible (WBS)
- And the Midianites sold him into Egypt to Potiphar, an officer of Pharaoh's, [and] captain of the guard.
- Young's Literal Translation (YLT)
- And the Medanites have sold him unto Egypt, to Potiphar, a eunuch of Pharaoh, head of the executioners.
Read in context
- 34ಆಗ ಯಾಕೋಬನು ತನ್ನ ವಸ್ತ್ರಗಳನ್ನು ಹರಿದುಕೊಂಡು ತನ್ನ ನಡುವಿಗೆ ಗೋಣಿಯನ್ನು ಕಟ್ಟಿಕೊಂಡು ತನ್ನ ಮಗನಿಗೋಸ್ಕರ ಬಹುದಿನ ದುಃಖಪಟ್ಟನು.
- 35ಅವನ ಕುಮಾರ ಕುಮಾರ್ತೆಯರೆಲ್ಲಾ ಅವನನ್ನು ಆದರಿಸಿದಾಗ್ಯೂ ಅವನು ಆದರಣೆ ಹೊಂದಲೊಲ್ಲದೆ--ನನ್ನ ಮಗನ ಬಳಿಗೆ ಸಮಾಧಿಗೆ ದುಃಖದಿಂದಲೇ ಇಳಿದು ಹೋಗು ವೆನು ಅಂದನು. ಹೀಗೆ ಅವನ ತಂದೆ ಅವನಿಗೋಸ್ಕರ ಅತ್ತನು.ಇದಲ್ಲದೆ ಆ ಮಿದ್ಯಾನ್ಯರು ಯೋಸೇಫನನ್ನು ಐಗುಪ್ತದಲ್ಲಿ ಫರೋಹನ ಉದ್ಯೋಗಸ್ಥನಾದ ಪೋಟೀಫರನಿಗೆ ಮಾರಿದನು. ಅವನು ಮೈಗಾವಲಿನ ದಳವಾಯಿಯಾಗಿದ್ದನು.
- 36ಇದಲ್ಲದೆ ಆ ಮಿದ್ಯಾನ್ಯರು ಯೋಸೇಫನನ್ನು ಐಗುಪ್ತದಲ್ಲಿ ಫರೋಹನ ಉದ್ಯೋಗಸ್ಥನಾದ ಪೋಟೀಫರನಿಗೆ ಮಾರಿದನು. ಅವನು ಮೈಗಾವಲಿನ ದಳವಾಯಿಯಾಗಿದ್ದನು.
Cross references
- Genesis 37:28 ಆದಿಕಾಂಡ 37:28ಈ ಪ್ರಕಾರ (ಮಿದ್ಯಾನ್ಯರ ವರ್ತಕರು ಹಾದುಹೋಗುತ್ತಿದ್ದಾಗ) ಅವರು ಯೋಸೇಫನನ್ನು ತಗ್ಗಿನಿಂದ ಮೇಲೆತ್ತಿ ಇಷ್ಮಾಯೇಲ್ಯ ರಿಗೆ ಅವನನ್ನು ಇಪ್ಪತ್ತು ಬೆಳ್ಳಿಯ ನಾಣ್ಯಗಳಿಗೆ ಮಾರಿದರು, ಅವರು ಯೋಸೇಫನನ್ನು ಐಗುಪ್ತಕ್ಕೆ ಕರಕೊಂಡು ಹೋದರು.
- Genesis 40:4 ಆದಿಕಾಂಡ 40:4ಮೈಗಾವಲಿನ ಅಧಿ ಪತಿಯು ಅವರನ್ನು ನೋಡಿಕೊಳ್ಳುವದಕ್ಕೆ ಯೋಸೇಫ ನನ್ನು ನೇಮಿಸಿದ್ದರಿಂದ ಅವನು ಅವರಿಗೆ ಸೇವೆಮಾಡು ತ್ತಿದ್ದನು. ಅವರು ಕೆಲವು ಕಾಲ ಸೆರೆಯಲ್ಲಿದ್ದರು.
- Genesis 25:1–2 ಆದಿಕಾಂಡ 25:1–2ತರುವಾಯ ಅಬ್ರಹಾಮನು ಇನ್ನೊಬ್ಬ ಹೆಂಡತಿಯನ್ನು ಮಾಡಿಕೊಂಡನು. ಅವಳ ಹೆಸರು ಕೆಟೂರಳು. ಆಕೆಯು ಅವನಿಗೆ ಜಿಮ್ರಾನ್ ಯೊಕ್ಷಾನ್ ಮೆದಾನ್ ಮಿದ್ಯಾನ್ ಇಷ್ಬಾಕ್ ಶೂಹ ಎಂಬವರನ್ನು ಹೆತ್ತಳು.
- Isaiah 56:3 ಯೆಶಾಯ 56:3ಇಲ್ಲವೆ ಕರ್ತನೊಂದಿಗೆ ಅನ್ಯನ ಮಗನು ಸೇರಿಕೊಂಡು--ಕರ್ತನು ತನ್ನ ಜನರಿಂದ ನನ್ನನ್ನು ಸಂಪೂರ್ಣವಾಗಿ ಅಗಲಿಸುವನು ಎಂದು ಮಾತಾಡ ದಿರಲಿ; ಅಥವಾ ನಪುಂಸಕನು--ಇಗೋ, ನಾನು ಒಣಗಿದ ಮರವೆಂದು ಹೇಳದಿರಲಿ.
- 2 Kings 25:8 2 ಅರಸುಗಳು 25:8ಐದನೇ ತಿಂಗಳಿನ ಏಳನೇ ದಿವಸಕ್ಕೆ ಸರಿಯಾಗಿ ಬಾಬೆಲಿನ ಅರಸನಾದ ನೆಬೂಕದ್ನೆಚರನ ಆಳ್ವಿಕೆಯ ಹತ್ತೊಂಭತ್ತನೇ ವರುಷದಲ್ಲಿ ಬಾಬೆಲಿನ ಅರಸನ ಸೇವಕ ನಾದ ಕಾವಲಿನ ಅಧಿಪತಿಯಾದ ನೆಬೂಜರದಾನನು ಯೆರೂಸಲೇಮಿಗೆ ಬಂದು,
- Genesis 39:1–23 ಆದಿಕಾಂಡ 39:1–23ಯೋಸೇಫನನ್ನು ಐಗುಪ್ತಕ್ಕೆ ತಕ್ಕೊಂಡು ಹೋದರು. ಅವನನ್ನು ಅಲ್ಲಿಗೆ ತಕ್ಕೊಂಡು ಹೋದ ಇಷ್ಮಾಯೇಲ್ಯರ ಕೈಯಿಂದ ಐಗುಪ್ತದವನೂ ಫರೋಹನ ಉದ್ಯೋಗಸ್ಥನೂ ಮೈಗಾವಲಿನವನೂ ಅಧಿಪತಿಯೂ ಆದ ಪೋಟೀಫರನು ಅವನನ್ನು ಕೊಂಡುಕೊಂಡನು. ಕರ್ತನು ಯೋಸೇಫನ ಸಂಗಡ ಇದದ್ದರಿಂದ ಅವನು ಏಳಿಗೆಯಾಗಿ ಐಗುಪ್ತದವನಾದ ತನ್ನ ಯಜಮಾನನ ಮನೆಯಲ್ಲಿ ಇದ್ದನು. ಕರ್ತನು ಅವನ ಸಂಗಡ ಇದ್ದಾನೆಂದೂ ಅವನು ಮಾಡಿದ್ದನ್ನೆಲ್ಲಾ ಕರ್ತನು ಅವನ ಕೈಯಿಂದ ಅಭಿವೃದ್ಧಿಮಾಡಿದನೆಂದೂ ಅವನ ಯಜಮಾನನು ನೋಡಿದನು. ಆದದರಿಂದ ಯೋಸೇಫನು ಅವನ ದೃಷ್ಟಿಯಲ್ಲಿ ಕೃಪೆಹೊಂದಿ ಅವನ ಸೇವೆಮಾಡಿದನು. ಪೋಟೀಫರನು ಅವನನ್ನು ತನ್ನ ಮನೆಯ ಮೇಲೆ ಮೇಲ್ವಿಚಾರಕನನ್ನಾಗಿ ಮಾಡಿ ತನಗಿದ್ದದ್ದನ್ನೆಲ್ಲಾ ಅವನ ಕೈಗೆ ಒಪ್ಪಿಸಿದನು. ಅವನನ್ನು ಮನೆಯಲ್ಲಿಯೂ ತನಗಿದ್ದ ಎಲ್ಲಾದರ ಮೇಲೆಯೂ ಮೇಲ್ವಿಚಾರಕನನ್ನಾಗಿ ಮಾಡಿದಂದಿನಿಂದ ಕರ್ತನು ಆ ಐಗುಪ್ತದವನ ಮನೆಯನ್ನು ಯೋಸೇಫನ ನಿಮಿತ್ತ ವಾಗಿ ಆಶೀರ್ವದಿಸಿದನು. ಮನೆಯಲ್ಲಿಯೂ ಹೊಲ ದಲ್ಲಿಯೂ (ಅವನಿಗಿದ್ದ) ಎಲ್ಲಾದರ ಮೇಲೆಯೂ ಕರ್ತನ ಆಶೀರ್ವಾದವಿತ್ತು. ಹೀಗಿರುವದರಿಂದ ಅವನು ತನಗಿದ್ದದ್ದನ್ನೆಲ್ಲಾ ಯೋಸೇಫನಿಗೆ ಒಪ್ಪಿಸಿ ತಾನು ತಿನ್ನುವ ರೊಟ್ಟಿಯ ವಿಷಯದಲ್ಲಿ ಹೊರತು ಬೇರೆ ಯಾವದರ ವಿಷಯದಲ್ಲೂ ಚಿಂತಿಸಲಿಲ್ಲ. ಯೋಸೇಫನು ಸುರೂಪಿಯೂ ಸೌಂದರ್ಯವಂತನೂ ಆಗಿದ್ದನು. ಇವುಗಳಾದ ಮೇಲೆ ಯೋಸೇಫನ ಯಜಮಾನನ ಹೆಂಡತಿಯು ಅವನ ಮೇಲೆ ಕಣ್ಣುಹಾಕಿ--ನನ್ನ ಸಂಗಡ ಮಲಗು ಅಂದಳು. ಆದರೆ ಅವನು ಅದಕ್ಕೆ ಒಪ್ಪದೆ ತನ್ನ ಯಜಮಾನನ ಹೆಂಡತಿಗೆ--ಇಗೋ, ನನ್ನ ಯಜಮಾನನು ತನ್ನ ಮನೆಯಲ್ಲಿರು ವದನ್ನು ತಿಳುಕೊಳ್ಳದೆ ತನಗಿದ್ದದ್ದನ್ನೆಲ್ಲಾ ನನಗೆ ಒಪ್ಪಿಸಿದ್ದಾನೆ. ಈ ಮನೆಯಲ್ಲಿ ನನಗಿಂತ ದೊಡ್ಡವ ನಾರೂ ಇಲ್ಲ. ನೀನು ಅವನ ಹೆಂಡತಿಯಾಗಿರುವದ ರಿಂದ ನಿನ್ನನ್ನಲ್ಲದೆ ನನಗೆ ಮತ್ತೇನೂ ಮರೆಮಾಡಲಿಲ್ಲ. ಹಾಗಿರುವಲ್ಲಿ ನಾನು ಈ ದೊಡ್ಡ ದುಷ್ಕೃತ್ಯಮಾಡಿ ದೇವರಿಗೆ ವಿರೋಧವಾಗಿ ಪಾಪಮಾಡುವದು ಹೇಗೆ ಅಂದನು. ಅವಳು ಪ್ರತಿದಿನ ಯೋಸೇಫನ ಸಂಗಡ ಮಾತನಾಡಿದಾಗ್ಯೂ ಅವನು ಅವಳ ಕೂಡ ಮಲಗುವದಕ್ಕಾದರೂ ಅವಳ ಹತ್ತಿರ ಇರುವದ ಕ್ಕಾದರೂ ಕಿವಿಗೊಡದೆ ಹೋದನು. ಹೀಗಿರುವಲ್ಲಿ ಅವನು ತನ್ನ ಕೆಲಸ ಮಾಡುವದಕ್ಕೆ ಮನೆಯನ್ನು ಪ್ರವೇಶಿಸಿದಾಗ ಮನೆಯವರಲ್ಲಿ ಒಬ್ಬರೂ ಮನೆ ಯಲ್ಲಿರಲಿಲ್ಲ. ಆಗ ಆಕೆಯು ಅವನ ವಸ್ತ್ರವನ್ನು ಹಿಡುಕೊಂಡು--ನನ್ನ ಸಂಗಡ ಮಲಗು ಅಂದಳು. ಆದರೆ ಅವನು ತನ್ನ ವಸ್ತ್ರವನ್ನು ಅವಳ ಕೈಯಲ್ಲಿ ಬಿಟ್ಟು ಹೊರಗೆ ಓಡಿಹೋದನು. ಅವನು ತನ್ನ ವಸ್ತ್ರ ವನ್ನು ತನ್ನ ಕೈಯಲ್ಲಿ ಬಿಟ್ಟುಬಿಟ್ಟದ್ದನ್ನೂ ಹೊರಗೆ ಓಡಿಹೋದದನ್ನೂ ಅವಳು ಕಂಡು ತನ್ನ ಮನೆಯ ಮನುಷ್ಯರನ್ನು ಕರೆದು ಅವರಿಗೆ--ನೋಡಿರಿ, ಅವನು (ಗಂಡಸು) ನಮ್ಮನ್ನು ಹಾಸ್ಯಮಾಡುವದಕ್ಕೆ ಇಬ್ರಿಯನನ್ನು ನಮ್ಮಲ್ಲಿಗೆ ತಂದಿದ್ದಾನೆ. ಅವನು ನನ್ನ ಸಂಗಡ ಮಲಗುವದಕ್ಕೆ ನನ್ನ ಬಳಿಗೆ ಬಂದನು. ಆಗ ನಾನು ದೊಡ್ಡ ಶಬ್ದದಿಂದ ಕೂಗಿದೆನು. ನಾನು ನನ್ನ ಸ್ವರವನ್ನೆತ್ತಿ ಕೂಗಿದ್ದನ್ನು ಅವನು ಕೇಳಿ ತನ್ನ ವಸ್ತ್ರವನ್ನು ನನ್ನ ಬಳಿಯಲ್ಲೇ ಬಿಟ್ಟು ಹೊರಗೆ ಓಡಿಹೋದನು ಅಂದಳು. ತನ್ನ ಯಜಮಾನನು ಮನೆಗೆ ಬರುವ ವರೆಗೆ ಆಕೆಯು ಅವನ ವಸ್ತ್ರವನ್ನು ತನ್ನ ಬಳಿಯಲ್ಲಿಯೇ ಇಟ್ಟುಕೊಂಡಳು. ಅವನು ಬಂದಾಗ ಅವನಿಗೂ ಅದರಂತೆಯೇ ಹೇಳುವವ ಳಾಗಿ--ನೀನು ನಮ್ಮ ಬಳಿಗೆ ತಂದ ಇಬ್ರಿಯ ಸೇವಕನು ನನ್ನನ್ನು ಹಾಸ್ಯಮಾಡುವದಕ್ಕೆ ನನ್ನ ಬಳಿಗೆ ಬಂದನು; ಆದರೆ ನಾನು ನನ್ನ ಸ್ವರವನ್ನೆತ್ತಿ ಕೂಗಿಕೊಂಡಾಗ ಅವನು ತನ್ನ ವಸ್ತ್ರವನ್ನು ನನ್ನ ಬಳಿಯಲ್ಲಿ ಬಿಟ್ಟು ಹೊರಗೆ ಓಡಿಹೋದನು ಅಂದಳು. ನಿನ್ನ ಸೇವಕನು ಹೀಗೆ ನನಗೆ ಮಾಡಿದನೆಂಬದಾಗಿ ತನ್ನ ಹೆಂಡತಿ ಹೇಳಿದ್ದನ್ನು ಕೇಳಿ ಅವನ ಕೋಪವು ಉರಿಯಿತು. ಆಗ ಯೋಸೇಫನ ಯಜಮಾನನು ಅವನನ್ನು ಹಿಡುಕೊಂಡು ರಾಜನ ಕೈದಿಗಳು ಬಂಧಿಸಲ್ಪಡುವ ಸೆರೆಮನೆಯಲ್ಲಿ ಹಾಕಿದನು. ಯೋಸೇಫನು ಆ ಸೆರೆಮನೆಯಲ್ಲಿದ್ದನು. ಆದರೆ ಕರ್ತನು ಯೋಸೇಫನ ಸಂಗಡ ಇದ್ದು ಅವನ ಮೇಲೆ ಕರುಣೆಯಿಟ್ಟು ಸೆರೆಮನೆಯ ಯಜಮಾನನು ಅವನ ಮೇಲೆ ದಯೆತೋರಿಸುವಂತೆ ಮಾಡಿದನು. ಆದದರಿಂದ ಸೆರೆಯ ಯಜಮಾನನು ಸೆರೆಮನೆಯಲ್ಲಿ ಬಂಧಿಸಿದ ಕೈದಿಗಳನ್ನೆಲ್ಲಾ ಯೋಸೇಫನಿಗೆ ಒಪ್ಪಿಸಿದನು. ಅವರು ಅಲ್ಲಿ ಮಾಡ ಬೇಕಾದವುಗಳೆನ್ನೆಲ್ಲಾ ಅವನೇ ಮಾಡಿಸುವವನಾ ದನು.ಕರ್ತನು ಅವನ ಸಂಗಡ ಇದ್ದದರಿಂದಲೂ ಅವನು ಮಾಡುವದನ್ನು ಕರ್ತನು ಅಭಿವೃದ್ಧಿ ಮಾಡಿದ್ದರಿಂದಲೂ ಸೆರೆಯ ಯಜಮಾನನು ಅವನ ಕೈಗೆ ಒಪ್ಪಿಸಿದ ಯಾವದಕ್ಕೂ ಚಿಂತೆಮಾಡದೆ ಇದ್ದನು. ಕರ್ತನು ಅವನ ಸಂಗಡ ಇದ್ದದರಿಂದಲೂ ಅವನು ಮಾಡುವದನ್ನು ಕರ್ತನು ಅಭಿವೃದ್ಧಿ ಮಾಡಿದ್ದರಿಂದಲೂ ಸೆರೆಯ ಯಜಮಾನನು ಅವನ ಕೈಗೆ ಒಪ್ಪಿಸಿದ ಯಾವದಕ್ಕೂ ಚಿಂತೆಮಾಡದೆ ಇದ್ದನು.
- Esther 1:10 ಎಸ್ತೇರಳು 1:10ಏಳನೇ ದಿವಸದಲ್ಲಿ ಅರಸನು ದ್ರಾಕ್ಷಾರಸದಿಂದ ಮನಸ್ಸಂತೋಷವಾಗಿರುವಾಗ ರಾಣಿಯಾದ ವಷ್ಟಿಯು ಬಹು ರೂಪವತಿಯಾದ್ದದರಿಂದ ಜನರಿಗೂ ಪ್ರಧಾ ನರಿಗೂ ಅವಳ ಸೌಂದರ್ಯವನ್ನು ತೋರಿಸುವದಕ್ಕೆ ರಾಣಿಗೆ ರಾಜ ಕಿರೀಟವನ್ನು ಧರಿಸಿ ಅರಸನ ಮುಂದೆ ಕರಕೊಂಡು ಬರುವದಕ್ಕೆ