Job · chapter 38 · verse 1
Job 38:1 in Kannada
ಆಗ ಕರ್ತನು ಯೋಬನಿಗೆ ಬಿರುಗಾಳಿ ಯೊಳಗಿಂದ ಉತ್ತರ ಕೊಟ್ಟು--
Aaga kartanu yobanige birugaali yolaginda uttara kottu--
Job 38:1 in English
- King James Version (KJV)
- Then the LORD answered Job out of the whirlwind, and said,
- World English Bible (WEB)
- Then the LORD answered Job out of the whirlwind,
- American Standard Version (ASV)
- Then Jehovah answered Job out of the whirlwind, and said,
- Bible in Basic English (BBE)
- And the Lord made answer to Job out of the storm-wind, and said,
- Darby Translation (DBY)
- And Jehovah answered Job out of the whirlwind and said,
- Webster's Bible (WBS)
- Then the LORD answered Job out of the whirlwind, and said,
- Young's Literal Translation (YLT)
- And Jehovah answereth Job out of the whirlwind, and saith: —
Read in context
- 1ಆಗ ಕರ್ತನು ಯೋಬನಿಗೆ ಬಿರುಗಾಳಿ ಯೊಳಗಿಂದ ಉತ್ತರ ಕೊಟ್ಟು--
- 2ತಿಳು ವಳಿಕೆ ಇಲ್ಲದ ಮಾತುಗಳಿಂದ ಆಲೋಚನೆಯನ್ನು ಕತ್ತಲಾಗಿ ಮಾಡುವ ಇವನಾರು?
- 3ಪುರುಷನ ಹಾಗೆ ನಡುವನ್ನು ಕಟ್ಟಿಕೋ; ನಾನು ನಿನ್ನನ್ನು ಕೇಳುವೆನು; ನೀನು ನನಗೆ ಉತ್ತರ ಕೊಡು.
Cross references
- Job 40:6 ಯೋಬನು 40:6ಆಗ ಕರ್ತನು ಬಿರುಗಾಳಿಯೊಳಗಿಂದ ಯೋಬನಿಗೆ ಉತ್ತರ ಕೊಟ್ಟು--
- Job 37:1–2 ಯೋಬನು 37:1–2ಇದಕ್ಕೋಸ್ಕರ ನನ್ನ ಹೃದಯವು ನಡುಗಿ ತನ್ನ ಸ್ಥಳದಿಂದ ಕದಲುತ್ತದೆ. ಆತನ ಬಾಯಿಂದ ಹೊರಡುವ ಧ್ವನಿಯ ಶಬ್ದದ ಸ್ವರವನ್ನು ಲಕ್ಷ್ಯಕೊಟ್ಟು ಕೇಳಿರಿ.
- Exodus 19:16–19 ವಿಮೋಚನಕಾಂಡ 19:16–19ಮೂರನೆಯ ದಿನದಲ್ಲಿ ಉದಯವಾದಾಗ ಬೆಟ್ಟದ ಮೇಲೆ ಗುಡುಗುಗಳೂ ಮಿಂಚುಗಳೂ ಮಂದವಾದ ಮೇಘವೂ ಉಂಟಾಗಿ ಬಹು ಬಲವಾದ ತುತೂರಿಯ ಶಬ್ದವಾಯಿತು. ಪಾಳೆಯದಲ್ಲಿದ್ದ ಜನರೆಲ್ಲರೂ ನಡುಗಿ ದರು. ಆಗ ಮೋಶೆಯು ಜನರನ್ನು ಪಾಳೆಯ ದೊಳಗಿಂದ ದೇವರನ್ನು ಸಂಧಿಸುವದಕ್ಕೆ ಹೊರಗೆ ಬರಮಾಡಿದನು; ಆಗ ಅವರು ಬೆಟ್ಟದ ಕೆಳಗೆ ನಿಂತು ಕೊಂಡರು. ಕರ್ತನು ಅಗ್ನಿಯೊಳಗೆ ಸೀನಾಯಿ ಬೆಟ್ಟದ ಮೇಲೆ ಇಳಿದದ್ದರಿಂದ ಆ ಬೆಟ್ಟದಲ್ಲೆಲ್ಲಾ ಹೊಗೆ ಹಾಯುತ್ತಿತ್ತು. ಅದರ ಹೊಗೆಯು ಆವಿಗೆಯ ಹೊಗೆ ಯಂತೆ ಏರಿ ಬರುತ್ತಾ ಇತ್ತು. ಬೆಟ್ಟವೆಲ್ಲಾ ಬಹಳವಾಗಿ ಕಂಪಿಸಿತು. ತುತೂರಿಯ ಶಬ್ದವು ಬರಬರುತ್ತಾ ಹೆಚ್ಚಾಗುತಿತ್ತು. ಮೋಶೆಯು ಮಾತನಾಡಿದಾಗ ದೇವರು ಅವನಿಗೆ ತನ್ನ ಸ್ವರದಿಂದ ಉತ್ತರಕೊಟ್ಟನು.
- 2 Kings 2:11 2 ಅರಸುಗಳು 2:11ಅವರು ನಡೆದು ಬಂದು ಮಾತನಾಡಿಕೊಂಡಿರುವಾಗ ಆದದ್ದೇನಂದರೆ, ಇಗೋ, ಬೆಂಕಿಯ ರಥವೂ ಬೆಂಕಿಯ ಕುದುರೆ ಗಳೂ ಅವರಿಬ್ಬರನ್ನು ವಿಂಗಡಿಸಿದವು; ಎಲೀಯನು ಬಿರುಗಾಳಿಯಲ್ಲಿ ಆಕಾಶಕ್ಕೆ ಏರಿಹೋದನು.
- 1 Kings 19:11 1 ಅರಸುಗಳು 19:11ಆಗ ಆತನು--ನೀನು ಹೊರಗೆ ಬಂದು ಬೆಟ್ಟದ ಮೇಲೆ ಕರ್ತನ ಮುಂದೆ ನಿಲ್ಲು ಅಂದನು. ಇಗೋ, ಕರ್ತನು ಹಾದುಹೋದನು; ಕರ್ತನ ಮುಂದೆ ಬೆಟ್ಟಗಳನ್ನು ಭೇದಿಸುವಂಥ, ಗುಡ್ಡ ಗಳನ್ನು ಒಡೆಯುವಂಥ ಮಹಾ ಬಲವಾದ ಗಾಳಿ; ಆ ಗಾಳಿಯಲ್ಲಿ ಕರ್ತನು ಇರಲಿಲ್ಲ. ಗಾಳಿಯ ತರು ವಾಯ ಭೂಕಂಪವು; ಆ ಭೂಕಂಪದಲ್ಲಿ ಕರ್ತನು ಇರಲಿಲ್ಲ.
- 2 Kings 2:1 2 ಅರಸುಗಳು 2:1ಕರ್ತನು ಎಲೀಯನನ್ನು ಬಿರುಗಾಳಿಯಿಂದ ಆಕಾಶಕ್ಕೆ ಎತ್ತಿಕೊಳ್ಳುವಾಗ ಎಲೀಯನು ಎಲೀಷನ ಸಂಗಡ ಗಿಲ್ಗಾಲಿನಿಂದ ಹೋಗುತ್ತಾ ಇದ್ದನು.
- Deuteronomy 4:11–12 ಧರ್ಮೋಪದೇಶಕಾಂಡ 4:11–12ಆಗ ನೀವು ಹತ್ತಿರ ಬಂದು ಬೆಟ್ಟದ ಕೆಳಗೆ ನಿಂತಿರಿ; ಆ ಬೆಟ್ಟವು ಕತ್ತಲೆಯಾ ಗಿದ್ದು ಮೇಘಗಳೂ ಗಾಢಾಂಧಕಾರವೂ ಉಂಟಾಗಿ ಆಕಾಶ ಮಧ್ಯದ ವರೆಗೆ ಬೆಂಕಿಯಿಂದ ಉರಿಯು ತ್ತಿತ್ತು. ಬೆಂಕಿಯ ಮಧ್ಯದೊಳಗಿಂದ ಕರ್ತನು ನಿಮ್ಮ ಸಂಗಡ ಮಾತನಾಡಿದನು; ವಾಕ್ಯಗಳ ಧ್ವನಿಯನ್ನು ನೀವು ಕೇಳಿದಿರಿ; ಆದರೆ ಆಕಾರವನ್ನು ನೋಡಲಿಲ್ಲ; ಧ್ವನಿಯನ್ನು ಮಾತ್ರ ಕೇಳಿದಿರಿ.
- Job 37:9 ಯೋಬನು 37:9ದಕ್ಷಿಣದಿಂದ ಬಿರು ಗಾಳಿಯೂ ಉತ್ತರದಿಂದ ಚಳಿಯೂ ಬರುತ್ತದೆ.
- Nahum 1:3 ನಹೂಮ 1:3ಕರ್ತನು ಕೋಪಿಸುವದರಲ್ಲಿ ನಿಧಾನ ಮಾಡುವವನಾದರೂ ಶಕ್ತಿಯಲ್ಲಿ ಮಹತ್ತಾದವನು; ದುರ್ಮಾರ್ಗದವರನ್ನು ಎಷ್ಟು ಮಾತ್ರಕ್ಕೂ ನಿರ್ಮಲರೆಂದು ತೀರ್ಮಾನಿಸ ದವನು; ಕರ್ತನ ಮಾರ್ಗವು ಸುಳಿಗಾಳಿಯಲ್ಲಿಯೂ ಬಿರುಗಾಳಿಯಲ್ಲಿಯೂ ಉಂಟು; ಮೇಘಗಳು ಆತನ ಕಾಲುಗಳ ಧೂಳೇ.
- Ezekiel 1:4 ಯೆಹೆಜ್ಕೇಲನು 1:4ನಾನು ನೋಡಲಾಗಿ ಇಗೋ, ಉತ್ತರದಿಂದ ಸುಳಿಗಾಳಿ ಬಂದಿತು. ಒಂದು ಮಹಾ ಮೇಘವೂ ಝಗಝಗಿಸುವ ಬೆಂಕಿಯೂ ಅದರ ಸುತ್ತಲು ಪ್ರಕಾಶವೂ ಇತ್ತು; ಬೆಂಕಿಯ ಮಧ್ಯದಲ್ಲಿ ಥಳಥಳಿಸುವಂಥದ್ದು ಹೊಂಬಣ್ಣದ ಹಾಗಿತ್ತು.
- Job 37:14 ಯೋಬನು 37:14ಓ ಯೋಬನೇ, ಇದಕ್ಕೆ ಕಿವಿಗೊಡು, ಮೌನ ವಾಗಿ ನಿಂತು ದೇವರ ಅದ್ಭುತಗಳನ್ನು ಗ್ರಹಿಸಿಕೋ.
- Deuteronomy 5:22–24 ಧರ್ಮೋಪದೇಶಕಾಂಡ 5:22–24ಈ ಮಾತುಗಳನ್ನು ಕರ್ತನು ಬೆಂಕಿಯ ಮೇಘದ ಕಾರ್ಗತ್ತಲೆಯ ಮಧ್ಯದಿಂದಲೂ ಮಹಾಶಬ್ದ ದಿಂದಲೂ ಬೆಟ್ಟದಲ್ಲಿ ನಿಮ್ಮ ಸಭೆಗೆಲ್ಲಾ ಹೇಳಿದನು; ಹೆಚ್ಚೇನೂ ಕೂಡಿಸಲಿಲ್ಲ. ಇವುಗಳನ್ನು ಆತನು ಕಲ್ಲಿನ ಎರಡು ಹಲಗೆಗಳಲ್ಲಿ ಬರೆದು ನನಗೆ ಕೊಟ್ಟನು. (ಆ ಬೆಟ್ಟವು ಬೆಂಕಿಯಿಂದ ಉರಿಯುತ್ತಿರಲಾಗಿ ನೀವು ಕತ್ತಲೆಯಿಂದ ಆ ಶಬ್ದವನ್ನು ಕೇಳಿ ನಿಮ್ಮ ಗೋತ್ರ ಗಳ ಮುಖ್ಯಸ್ಥರೂ ನಿಮ್ಮ ಹಿರಿಯರೂ ನನ್ನ ಬಳಿಗೆ ಬಂದು ನನಗೆ) ಇಗೋ, ನಮ್ಮ ದೇವರಾದ ಕರ್ತನು ತನ್ನ ಮಹಿಮೆಯನ್ನೂ ತನ್ನ ಘನವನ್ನೂ ನಮಗೆ ತೋರಿಸಿದ್ದಾನೆ; ಆತನ ಶಬ್ದವನ್ನು ಬೆಂಕಿಯೊಳಗಿಂದ ಕೇಳಿದ್ದೇವೆ; ದೇವರು ಮನುಷ್ಯರ ಸಂಗಡ ಮಾತ ನಾಡಲು ಅವರು ಬದುಕುತ್ತಾರೆಂದು ಈಹೊತ್ತು ನೋಡಿದ್ದೇವೆ.