Habakkuk · chapter 2 · verse 9
Habakkuk 2:9 in Kannada
ತನ್ನ ಗೂಡನ್ನು ಉನ್ನತದಲ್ಲಿ ಇಡುವ ಹಾಗೆಯೂ ಕೇಡಿನ ಕೈಗೆ ತಪ್ಪಿಸಿಕೊಳ್ಳುವ ಹಾಗೆಯೂ ತನ್ನ ಮನೆ ಗೋಸ್ಕರ ದುರ್ಲಾಭವನ್ನು ಆಶಿಸುವವನಿಗೆ ಅಯ್ಯೋ!
Tanna goodannu unnatadalli iduva haageyoo kedina kaige tappisikolluva haageyoo tanna mane goskara durlaabhavannu aashisuvavanige ayyo!
Habakkuk 2:9 in English
- King James Version (KJV)
- Woe to him that coveteth an evil covetousness to his house, that he may set his nest on high, that he may be delivered from the power of evil!
- World English Bible (WEB)
- Woe to him who gets an evil gain for his house, that he may set his nest on high, that he may be delivered from the hand of evil!
- American Standard Version (ASV)
- Woe to him that getteth an evil gain for his house, that he may set his nest on high, that he may be delivered from the hand of evil!
- Bible in Basic English (BBE)
- A curse on him who gets evil profits for his family, so that he may put his resting-place on high and be safe from the hand of the wrongdoer!
- Darby Translation (DBY)
- Woe to him that getteth iniquitous gain to his house, that he may set his nest on high, that he may be delivered from the grasp of evil!
- Webster's Bible (WBS)
- Woe to him that coveteth an evil covetousness to his house, that he may set his nest on high, that he may be delivered from the power of evil!
- Young's Literal Translation (YLT)
- Woe [to] him who is gaining evil gain for his house, To set on high his nest, To be delivered from the hand of evil,
Read in context
- 7ನಿನ್ನನ್ನು ಕಚ್ಚುವವರು ಕ್ಷಣಮಾತ್ರದಲ್ಲಿ ಏಳರೋ? ನಿನ್ನನ್ನು ಪೀಡಿಸುವವರು ಎಚ್ಚರವಾಗರೋ? ಆಗ ನೀನು ಅವರಿಗೆ ಸುಲಿಗೆ ಯಾಗುವಿ.
- 8ನೀನು ಅನೇಕ ಜನಾಂಗಗಳನ್ನು ಸೂರೆ ಮಾಡಿದ್ದರಿಂದ ಜನರಲ್ಲಿ ಉಳಿದವರೆಲ್ಲಾ ನಿನ್ನನ್ನು ಸೂರೆ ಮಾಡುವರು; ಮನುಷ್ಯರ ರಕ್ತಕ್ಕಾಗಿ ದೇಶ, ಪಟ್ಟಣ, ಅದರ ಎಲ್ಲಾ ನಿವಾಸಿಗಳ ಬಲಾತ್ಕಾರದ ನಿಮಿತ್ತವೇ.
- 9ತನ್ನ ಗೂಡನ್ನು ಉನ್ನತದಲ್ಲಿ ಇಡುವ ಹಾಗೆಯೂ ಕೇಡಿನ ಕೈಗೆ ತಪ್ಪಿಸಿಕೊಳ್ಳುವ ಹಾಗೆಯೂ ತನ್ನ ಮನೆ ಗೋಸ್ಕರ ದುರ್ಲಾಭವನ್ನು ಆಶಿಸುವವನಿಗೆ ಅಯ್ಯೋ!
- 10ಅನೇಕ ಜನಗಳನ್ನು ಕಡಿದುಬಿಡುವದರಿಂದ ನಿನ್ನ ಮನೆಗೆ ನಾಚಿಕೆಯನ್ನು ಯೋಚಿಸಿದ್ದೀ; ಸ್ವಂತ ಪ್ರಾಣಕ್ಕೆ ವಿರೋಧವಾಗಿ ಪಾಪಮಾಡಿದ್ದೀ.
- 11ಗೋಡೆಯೊಳ ಗಿಂದ ಕಲ್ಲು ಕೂಗುತ್ತದೆ. ಮರದ ತೊಲೆ ಅದಕ್ಕೆ ಉತ್ತರ ಕೊಡುತ್ತದೆ.
Cross references
- Jeremiah 49:16 ಯೆರೆಮೀಯ 49:16ಬಂಡೆಯ ಬಿರುಕು ಗಳಲ್ಲಿ ವಾಸಮಾಡುವವನೇ ಗುಡ್ಡದ ಕೊನೆಯನ್ನು ಹಿಡಿಯುವವನೇ, ನಿನ್ನ ಭಯಂಕರತ್ವವೂ ಹೃದಯದ ಗರ್ವವೂ ನಿನ್ನನ್ನು ಮೋಸಗೊಳಿಸಿದವು; ನೀನು ಹದ್ದಿನಂತೆ ನಿನ್ನ ಗೂಡನ್ನು ಎತ್ತರ ಮಾಡಿದರೂ ಅಲ್ಲಿಂದ ನಿನ್ನನ್ನು ಇಳಿಸುತ್ತೇನೆಂದು ಕರ್ತನು ಅನ್ನುತ್ತಾನೆ.
- Jeremiah 22:13–19 ಯೆರೆಮೀಯ 22:13–19ಅನೀತಿಯಿಂದ ತನ್ನ ಮನೆಯನ್ನು ಅನ್ಯಾಯದಿಂದ ತನ್ನ ಕೊಠಡಿಗಳನ್ನು ಕಟ್ಟಿಸಿಕೊಳ್ಳು ವವನಿಗೂ ಕೂಲಿಕೊಡದೆ ತನ್ನ ನೆರೆಯವನ ಕೈಯಿಂದ ಸುಮ್ಮನೆ ಕೆಲಸತಕ್ಕೊಳ್ಳುವವನಿಗೂ ಅಯ್ಯೋ! ಅವನು--ನಾನು ವಿಸ್ತಾರವಾದ ಮನೆಯನ್ನೂ ವಿಶಾಲವಾದ ಕೊಠಡಿಗಳನ್ನೂ ಕಟ್ಟಿಕೊಳ್ಳುವೆನೆಂದು ಹೇಳಿ ಕಿಟಕಿಗಳನ್ನು ಕೊರೆದು ದೇವದಾರಿನ ಹಲಿಗೆ ಗಳನ್ನು ಹಾಕಿ ಕೆಂಪು ಬಣ್ಣವನ್ನು ಹಚ್ಚುವವನಿಗೂ ಅಯ್ಯೋ! ನೀನು ದೇವದಾರಿನಲ್ಲಿ ನಿನ್ನನ್ನು ಮುಚ್ಚಿ ಕೊಳ್ಳುವದರಿಂದ ದೊರೆತನ ಮಾಡುವಿಯೋ? ನಿನ್ನ ತಂದೆ ಉಂಡು, ಕುಡಿದು, ನ್ಯಾಯವನ್ನೂ ನೀತಿಯನ್ನೂ ಮಾಡಲಿಲ್ಲವೋ? ಆಗ ಅವನಿಗೆ ಒಳ್ಳೆಯದಾ ಗಲಿಲ್ಲವೋ? ಬಡವನ ಮತ್ತು ದರಿದ್ರನ ನ್ಯಾಯ ವನ್ನು ತೀರಿಸಿದನು. ಆಗ ಒಳ್ಳೇದಾಯಿತು; ನನ್ನನ್ನು ತಿಳುಕೊಳ್ಳುವದು ಇದೇ ಅಲ್ಲವೋ ಎಂದು ಕರ್ತನು ಅನ್ನುತ್ತಾನೆ. ಆದರೆ ನಿನ್ನ ಕಣ್ಣುಗಳು ನಿನ್ನ ಹೃದಯವು ನಿನ್ನ ದುರ್ಲಾಭದ ಮೇಲೆ, ಅಪರಾಧವಿಲ್ಲದವನ ರಕ್ತ ಚೆಲ್ಲುವದರ ಮೇಲೆ ಮತ್ತು ಪೀಡೆಯನ್ನೂ ಬಲಾತ್ಕಾರವನ್ನೂ ಮಾಡುವದರ ಮೇಲೆಯೇ ಹೊರತು ಮತ್ತಾವದರ ಮೇಲೆಯೂ ಇರುವದಿಲ್ಲ. ಆದದ ರಿಂದ ಯೋಷೀಯನ ಮಗನಾದ ಯೆಹೂದದ ಅರಸನಾದ ಯೆಹೋಯಾಕೀಮನನ್ನು ಕುರಿತು ಕರ್ತನು ಹೀಗೆ ಹೇಳುತ್ತಾನೆ--ಅವರು ಅವನನ್ನು ಕುರಿತು ಗೋಳಾಡಿ--ಹಾ, ನನ್ನ ಸಹೋದರನೇ, ಹಾ, ನನ್ನ ಸಹೋದರಿಯೇ ಎಂದು ಅನ್ನುವದಿಲ್ಲ; ಹಾ, ದೊರೆಯೇ, ಹಾ, ಅವನ ವೈಭವವೇ ಎಂದು ಅವನನ್ನು ಕುರಿತು ಗೋಳಾಡುವದಿಲ್ಲ. ಕತ್ತೆಯನ್ನು ಹೂಣಿಡುವ ಪ್ರಕಾರ ಅವನನ್ನು ಹೂಣಿಡುವರು; ಅವನನ್ನು ಎಳಕೊಂಡು ಹೋಗಿ ಯೆರೂಸಲೇಮಿನ ಬಾಗಿಲುಗಳ ಆಚೆಗೆ ಬಿಸಾಡುವರು.
- 2 Kings 5:20–27 2 ಅರಸುಗಳು 5:20–27ಆದರೆ ದೇವರ ಮನುಷ್ಯನಾದ ಎಲೀಷನ ಸೇವಕ ನಾಗಿರುವ ಗೇಹಜಿಯು--ಇಗೋ, ನನ್ನ ಯಜಮಾ ನನು ಈ ಅರಾಮ್ಯನಾದ ನಾಮಾನನು ತಕ್ಕೊಂಡು ಬಂದದ್ದನ್ನು ಅವನ ಕೈಯಿಂದ ತಕ್ಕೊಳ್ಳದೆ ಸುಮ್ಮನೆ ಕಳುಹಿಸಿದ್ದಾನೆ. ಆದರೆ ಕರ್ತನ ಜೀವದಾಣೆ, ನಾನು ಅವನ ಹಿಂದೆ ಓಡಿಹೋಗಿ ಅವನ ಕೈಯಿಂದ ಏನಾ ದರೂ ತಕ್ಕೊಳ್ಳುವೆನು ಅಂದುಕೊಂಡನು. ಹಾಗೆಯೇ ಗೇಹಜಿಯು ನಾಮಾನನ ಹಿಂದೆ ಹೋದನು. ನಾಮಾನನು ತನ್ನ ಹಿಂದೆ ಓಡಿ ಬರುವವನನ್ನು ನೋಡಿ ದಾಗ ಅವನನ್ನು ಎದುರುಗೊಳ್ಳಲು ರಥದಿಂದ ಇಳಿದು ಅವನಿಗೆ--ಎಲ್ಲಾ ಕ್ಷೇಮವೋ ಅಂದನು. ಅವನುಕ್ಷೇಮ; ಇಗೋ, ಪ್ರವಾದಿಗಳ ಮಕ್ಕಳಲ್ಲಿ ಇಬ್ಬರು ಯೌವನಸ್ಥರು ಎಫ್ರಾಯಾಮ್ ಬೆಟ್ಟದಿಂದ ಈಗಲೇ ನನ್ನ ಬಳಿಗೆ ಬಂದಿದ್ದಾರೆ; ನೀನು ದಯಮಾಡಿ ಅವರಿಗೆ ಒಂದು ತಲಾಂತು ಬೆಳ್ಳಿಯನ್ನೂ ಎರಡು ದುಸ್ತು ಬಟ್ಟೆ ಗಳನ್ನೂ ಕೊಡಬೇಕೆಂದು ನಿನಗೆ ಹೇಳು ಎಂದು ನನ್ನ ಯಜಮಾನನು ಕಳುಹಿಸಿದ್ದಾನೆ ಅಂದನು. ಆಗ ನಾಮಾನನು--ನೀನು ದಯಮಾಡಿ ಎರಡು ತಲಾಂತು ಗಳನ್ನು ತಕ್ಕೋ ಎಂದು ಹೇಳಿ ಅವನನ್ನು ಬಲವಂತ ಮಾಡಿದನು. ಹಾಗೆಯೇ ಎರಡು ತಲಾಂತು ಬೆಳ್ಳಿಯನ್ನು ಎರಡು ಚೀಲಗಳಲ್ಲಿ ಕಟ್ಟಿಸಿ ಅದರ ಸಂಗಡ ಎರಡು ದುಸ್ತು ಬಟ್ಟೆಗಳನ್ನು ಕೊಟ್ಟು ತನ್ನ ಸೇವಕರಲ್ಲಿ ಇಬ್ಬರ ಮೇಲೆ ಹೊರಿಸಿದನು; ಅವರು ಇವನ ಮುಂದೆ ಹೊತ್ತುಕೊಂಡು ಹೋದರು. ಅವನು ದುರ್ಗಕ್ಕೆ ಬಂದು ಅವುಗಳನ್ನು ಅವರ ಕೈಯಿಂದ ತಕ್ಕೊಂಡು ಮನೆಯಲ್ಲಿಟ್ಟು ಆ ಮನುಷ್ಯರನ್ನು ಕಳುಹಿಸಿಬಿಟ್ಟದ್ದರಿಂದ ಅವರು ಹೋದರು. ಆಗ ಇವನು ಒಳಗೆ ಪ್ರವೇಶಿಸಿ ತನ್ನ ಯಜಮಾನನ ಮುಂದೆ ನಿಂತನು. ಎಲೀಷನು ಅವನಿಗೆ--ಗೇಹಜಿಯೇ, ಎಲ್ಲಿಂದ ಬಂದಿ ಅಂದನು. ಅದಕ್ಕವನು--ನಿನ್ನ ಸೇವಕನು ಎಲ್ಲಿಗೂ ಹೋಗಲಿಲ್ಲ ಅಂದನು. ಆಗ ಅವನು ಇವನಿಗೆ--ಆ ಮನುಷ್ಯನು ನಿನ್ನನ್ನು ಎದುರುಗೊಳ್ಳಲು ತನ್ನ ರಥದಿಂದ ಇಳಿದು ನಿನ್ನ ಬಳಿಗೆ ಬಂದಾಗ ನನ್ನ ಹೃದಯವು ನಿನ್ನ ಸಂಗಡ ಹೋಗಲಿಲ್ಲವೋ? ದ್ರವ್ಯವನ್ನೂ ವಸ್ತ್ರಗಳನ್ನೂ ಆಲಿದ್ ತೋಪುಗಳನ್ನೂ ದ್ರಾಕ್ಷೆಯ ತೋಟಗಳನ್ನೂ ಕುರಿ ದನಗಳನ್ನೂ ದಾಸದಾಸಿಯರನ್ನೂ ಪಡಕೊಳ್ಳುವದಕ್ಕೆ ಇದು ಸಮಯವೋ?ಆದದರಿಂದ ನಾಮಾನನ ಕುಷ್ಠರೋಗವು ನಿನಗೂ ನಿನ್ನ ಸಂತಾನಕ್ಕೂ ನಿತ್ಯವಾಗಿ ಹತ್ತುವದು ಅಂದನು. ಆಗ ಅವನು ಮಂಜಿನ ಹಾಗೆಯೇ ಕುಷ್ಠರೋಗಿಯಾಗಿ ಅವನ ಸಮ್ಮುಖದಿಂದ ಹೊರಟುಹೋದನು. ಆದದರಿಂದ ನಾಮಾನನ ಕುಷ್ಠರೋಗವು ನಿನಗೂ ನಿನ್ನ ಸಂತಾನಕ್ಕೂ ನಿತ್ಯವಾಗಿ ಹತ್ತುವದು ಅಂದನು. ಆಗ ಅವನು ಮಂಜಿನ ಹಾಗೆಯೇ ಕುಷ್ಠರೋಗಿಯಾಗಿ ಅವನ ಸಮ್ಮುಖದಿಂದ ಹೊರಟುಹೋದನು.
- Joshua 7:21–26 ಯೆಹೋಶುವ 7:21–26ಏನಂದರೆ, ನಾನು ಕೊಳ್ಳೆಯಲ್ಲಿ ಬಾಬೆಲಿನ ಒಂದು ಒಳ್ಳೇ ನಿಲುವಂಗಿಯನ್ನೂ ಇನ್ನೂರು ಬೆಳ್ಳಿ ಶೇಕೆಲುಗಳನ್ನೂ ಐವತ್ತು ಶೇಕೆಲ್ ತೂಕವಾದ ಒಂದು ಬಂಗಾರದ ಗಟ್ಟಿಯನ್ನೂ ಕಂಡು ಅವುಗಳನ್ನು ಆಶಿಸಿ ತೆಗೆದುಕೊಂಡೆನು; ಇಗೋ, ಅವುಗಳನ್ನು ನನ್ನ ಗುಡಾರದ ಮಧ್ಯದಲ್ಲಿ ನೆಲದೊಳಗೆ ಬಚ್ಚಿಟ್ಟಿದ್ದೇನೆ; ಬೆಳ್ಳಿಯೂ ಅದರ ಕೆಳಗೆ ಇದೆ ಅಂದನು. ಆಗ ಯೆಹೋಶುವನು ದೂತರನ್ನು ಕಳುಹಿಸಿದನು; ಅವರು ಡೇರೆಗಳಿಗೆ ಓಡಿದರು; ಇಗೋ, ಡೇರೆಯಲ್ಲಿ ಅವು ಬಚ್ಚಿಡಲ್ಪಟ್ಟಿದ್ದವು; ಬೆಳ್ಳಿಯು ಅದರ ಕೆಳಗೆ ಇತ್ತು. ಅವರು ಅವುಗಳನ್ನು ಡೇರೆಯ ಮಧ್ಯದಿಂದ ತೆಗೆದುಕೊಂಡು ಯೆಹೋಶುವನ ಬಳಿಗೂ ಸಮಸ್ತ ಇಸ್ರಾಯೇಲ್ ಮಕ್ಕಳ ಬಳಿಗೂ ತಂದು ಕರ್ತನ ಮುಂದೆ ಇಟ್ಟರು. ಆಗ ಯೆಹೋಶುವನೂ ಅವ ನೊಂದಿಗೆ ಇಸ್ರಾಯೇಲ್ಯರೆಲ್ಲರೂ ಜೆರಹನ ಮಗನಾದ ಆಕಾನನನ್ನೂ ಆ ಬೆಳ್ಳಿಯನ್ನೂ ವಸ್ತ್ರವನ್ನೂ ಬಂಗಾರದ ಗಟ್ಟಿಯನ್ನೂ ಅವನ ಕುಮಾರರನ್ನೂ ಕುಮಾರ್ತೆಯ ರನ್ನೂ ಅವನ ಎತ್ತುಗಳನ್ನೂ ಕತ್ತೆಗಳನ್ನೂ ಕುರಿಗಳನ್ನೂ ಅವನ ಡೇರೆಯನ್ನೂ ಅವನಿಗಿದ್ದ ಸಮಸ್ತವನ್ನೂ ತೆಗೆದುಕೊಂಡು ಆಕೋರಿನ ತಗ್ಗಿಗೆ ತಂದರು. ಆಗ ಯೆಹೋಶುವನು ಅವನಿಗೆ--ನೀನು ನಮ್ಮನ್ನು ತೊಂದರೆ ಪಡಿಸಿದ್ದೇನು? ಇಂದು ಕರ್ತನು ನಿನ್ನನ್ನು ತೊಂದರೆ ಪಡಿಸುವನು ಅಂದನು. ಆಗ ಇಸ್ರಾಯೇಲ್ಯ ರೆಲ್ಲರೂ ಅವನ ಮೇಲೆ ಕಲ್ಲೆಸೆದರು. ತರುವಾಯ ಬೆಂಕಿಯಿಂದ ಅವರನ್ನು ಸುಟ್ಟುಬಿಟ್ಟುಅವರ ಮೇಲೆ ಕಲ್ಲು ಕುಪ್ಪೆ ಕೂಡಿಸಿದರು. ಅದು ಈ ದಿನದ ವರೆಗೂ ಇದೆ. ಆಗ ಕರ್ತನು ತನ್ನ ಕೋಪದ ಉರಿಯನ್ನು ಬಿಟ್ಟು ತಿರುಗಿದನು; ಆದದರಿಂದ ಆ ಸ್ಥಳವು ಈ ವರೆಗೂ ಆಕೋರಿನ ತಗ್ಗೆಂದು ಕರೆಯಲ್ಪಡುವದು. ಅವರ ಮೇಲೆ ಕಲ್ಲು ಕುಪ್ಪೆ ಕೂಡಿಸಿದರು. ಅದು ಈ ದಿನದ ವರೆಗೂ ಇದೆ. ಆಗ ಕರ್ತನು ತನ್ನ ಕೋಪದ ಉರಿಯನ್ನು ಬಿಟ್ಟು ತಿರುಗಿದನು; ಆದದರಿಂದ ಆ ಸ್ಥಳವು ಈ ವರೆಗೂ ಆಕೋರಿನ ತಗ್ಗೆಂದು ಕರೆಯಲ್ಪಡುವದು.
- Jude 1:11 ಯೂದನು 1:11ಅವರು ಕಾಯಿನನ ಮಾರ್ಗ ಹಿಡಿದವರೂ ಪ್ರತೀಕಾರ ಹೊಂದುವದಕ್ಕಾಗಿ ಬಿಳಾಮನ ದೋಷವನ್ನು ಮಾಡುವದಕ್ಕೆ ದುರಾಶೆ ಯಿಂದ ಓಡುವವರೂ ಕೋರಹನಂತೆ ಎದುರು ಮಾತನಾಡಿ ನಾಶವಾಗುವವರೂ ಆಗಿರುವ ಅವರಿಗೆ ಅಯ್ಯೋ!
- Psalm 52:7 ಕೀರ್ತನೆಗಳು 52:7ಇಗೋ, ದೇವರನ್ನು ತನ್ನ ಬಲವಾಗಿ ಆಶ್ರಯಿಸದೆ ತನ್ನ ಅಧಿಕವಾದ ಐಶ್ವರ್ಯದಲ್ಲಿ ಭರವಸವಿಟ್ಟು ತನ್ನ ಕೆಟ್ಟತನದಲ್ಲಿ ಬಲಗೊಂಡ ಮನುಷ್ಯನು ಇವನೇ.
- Genesis 13:10–13 ಆದಿಕಾಂಡ 13:10–13ಲೋಟನು ತನ್ನ ಕಣ್ಣುಗಳನ್ನು ಎತ್ತಿ ಯೊರ್ದನಿನ ಮೈದಾನವನ್ನೆಲ್ಲಾ ನೋಡಿದನು. ಯಾಕಂದರೆ ಕರ್ತನು ಸೊದೋಮನ್ನೂ ಗೊಮೋರ ವನ್ನೂ ನಾಶಮಾಡುವದಕ್ಕಿಂತ ಮುಂಚೆ ಅದೆಲ್ಲಾ ಚೋಗರಿನ ವರೆಗೆ ನೀರಾವರಿಯಾಗಿದ್ದು ಕರ್ತನ ತೋಟದಂತೆಯೂ ಐಗುಪ್ತದೇಶದಂತೆಯೂ ಇತ್ತು. ತರುವಾಯ ಲೋಟನು ಯೊರ್ದನಿನ ಮೈದಾನ ವನ್ನೆಲ್ಲಾ ತನಗಾಗಿ ಆರಿಸಿಕೊಂಡನು; ಹೀಗೆ ಲೋಟನು ಮೂಡಣಕ್ಕೆ ಹೊರಟು ಹೋದದ್ದರಿಂದ ಅವರು ಒಬ್ಬರಿಂದೊಬ್ಬರು ಪ್ರತ್ಯೇಕಿಸಲ್ಪಟ್ಟರು. ಅಬ್ರಾಮನು ಕಾನಾನ್ ದೇಶದಲ್ಲಿ ವಾಸಮಾಡಿದನು. ಲೋಟನು ಸೊದೋಮಿನ ಬಳಿಯಲ್ಲಿ ಗುಡಾರಗಳನ್ನು ಹಾಕಿ ಕೊಂಡು ಮೈದಾನದ ಪಟ್ಟಣಗಳಲ್ಲಿ ವಾಸಿಸಿದನು. ಆದರೆ ಸೊದೋಮಿನ ಮನುಷ್ಯರು ದುಷ್ಟರೂ ಕರ್ತನ ದೃಷ್ಟಿಯಲ್ಲಿ ಬಹು ಪಾಪಿಷ್ಠರೂ ಆಗಿದ್ದರು.
- Acts 1:17–25 ಅಪೊಸ್ತಲರ ಕೃತ್ಯಗಳು 1:17–25ಅವನು ನಮ್ಮೊಂದಿಗೆ ಎಣಿಸಲ್ಪಟ್ಟು ಈ ಸೇವೆಯಲ್ಲಿ ಪಾಲು ಹೊಂದಿದ ವನಾಗಿದ್ದನು. ಈ ಮನುಷ್ಯನು ತನ್ನ ದ್ರೋಹದ ಫಲದಿಂದ ಹೊಲವನ್ನು ಕೊಂಡುಕೊಂಡನು; ತಲೆ ಕೆಳಗಾಗಿ ಬಿದ್ದು ಅವನ ಹೊಟ್ಟೆ ಒಡೆದು ಕರುಳು ಗಳೆಲ್ಲಾ ಹೊರಬಿದ್ದವು. ಇದು ಯೆರೂಸಲೇಮ್ ನಿವಾಸಿಗಳೆಲ್ಲರಿಗೆ ತಿಳಿದು ಬಂದದ್ದರಿಂದ ಅವರ ಭಾಷೆಯಲ್ಲಿ ಆ ಹೊಲವು--ಅಕೆಲ್ದಮಾ ಎಂದು ಕರೆಯಲ್ಪ ಟ್ಟಿದೆ, ಅಂದರೆ ರಕ್ತದ ಹೊಲ ಎಂಬದು. ಯಾಕಂ ದರೆ--ಅವನ ನಿವಾಸವು ಹಾಳುಬೀಳಲಿ; ಯಾವ ಮನುಷ್ಯನೂ ಅಲ್ಲಿ ವಾಸಮಾಡದಿರಲಿ; ಇನ್ನು ಅವನ ಅಧ್ಯಕ್ಷತೆಯನ್ನು ಬೇರೊಬ್ಬನು ತೆಗೆದುಕೊಳ್ಳಲಿ ಎಂದು ಕೀರ್ತನೆಗಳ ಪುಸ್ತಕದಲ್ಲಿ ಬರೆಯಲ್ಪಟ್ಟಿದೆ. ಆದಕಾರಣ ಕರ್ತನಾದ ಯೇಸು ನಮ್ಮಲ್ಲಿ ಬರುತ್ತಾ ಹೋಗುತ್ತಾ ಇದ್ದ ಕಾಲದಲ್ಲೆಲ್ಲಾ ನಮ್ಮ ಸಂಗಡ ಇದ್ದ ಈ ಮನುಷ್ಯರಲ್ಲಿ ಯೋಹಾನನ ಬಾಪ್ತಿಸ್ಮ ಮೊದಲು ಗೊಂಡು ಆತನು ನಮ್ಮಿಂದ ಎತ್ತಲ್ಪಟ್ಟ ದಿನದವರೆಗೆ ನಮ್ಮೊಂದಿಗೆ ಒಬ್ಬನನ್ನು ಆತನ ಪುನರುತ್ಥಾನದ ವಿಷಯವಾಗಿ ಸಾಕ್ಷಿಯಾಗಿರುವಂತೆ ನೇಮಿಸತಕ್ಕದ್ದು. ಆಗ ಯೂಸ್ತನೆನಿಸಿಕೊಳ್ಳುವ ಬಾರ್ನಬನೆಂಬ ಯೋಸೇಫ ಮತ್ತು ಮತ್ತೀಯ ಎಂಬ ಇಬ್ಬರನ್ನು ಅವರು ನೇಮಕ ಮಾಡಿದರು. ಅವರು ಪ್ರಾರ್ಥನೆ ಮಾಡುತ್ತಾ--ಎಲ್ಲರ ಹೃದಯಗಳನ್ನು ಬಲ್ಲವನಾದ ಕರ್ತನೇ, ಯೂದನು ತನ್ನ ಸ್ವಸ್ಥಳಕ್ಕೆ ಹೋಗುವ ದಕ್ಕಾಗಿ ಅಪರಾಧದ ನಿಮಿತ್ತ ಈ ಸೇವೆಯಿಂದಲೂ ಅಪೊಸ್ತಲತನದಿಂದಲೂ ಬಿದ್ದು ಹೋದನು. ಈಗ ಈ ಸೇವೆಯಲ್ಲಿಯೂ ಅಪೊಸ್ತಲತನದಿಂದಲೂ ಒಬ್ಬನು ಪಾಲುಹೊಂದುವಂತೆ ಈ ಇಬ್ಬರಲ್ಲಿ ಯಾರನ್ನು ನೀನು ಆರಿಸಿಕೊಳ್ಳುತ್ತೀಯೋ ತೋರಿಸು ಎಂದು ಹೇಳಿದರು.ತರುವಾಯ ಅವರು ತಮ್ಮ ಚೀಟುಗಳನ್ನು ಹಾಕಿದಾಗ ಚೀಟು ಮತ್ತೀಯನಿಗೆ ಬಂದದ್ದರಿಂದ ಅವನು ಹನ್ನೊಂದು ಮಂದಿ ಅಪೊಸ್ತಲರೊಂದಿಗೆ ಎಣಿಸ ಲ್ಪಟ್ಟನು.
- Psalm 49:11 ಕೀರ್ತನೆಗಳು 49:11ತಮ್ಮ ಮನೆಗಳು ಯುಗಯುಗಕ್ಕೂ ತಮ್ಮ ನಿವಾಸಗಳು ತಲತಲಾಂತರಕ್ಕೂ ಇರಬೇಕೆಂದು ಅಂತರ್ಯದಲ್ಲಿ ಯೋಚಿಸಿ ಭೂಮಿಗಳಿಗೆ ತಮ್ಮ ಹೆಸರುಗಳನ್ನು ಇಡು ತ್ತಾರೆ.
- Psalm 10:3–6 ಕೀರ್ತನೆಗಳು 10:3–6ದುಷ್ಟನು ತನ್ನ ಹೃದಯದ ಆಶೆಗೋಸ್ಕರ ಹೊಗಳಿಕೊಳ್ಳುತ್ತಾನೆ; ಕರ್ತನು ಅಸಹ್ಯಪಡುವ ಲೋಭಿಯನ್ನು ಅವನು ಆಶೀರ್ವದಿಸುತ್ತಾನೆ. ದುಷ್ಟನು ತನ್ನ ಗರ್ವದ ಮುಖದಿಂದ ದೇವರನ್ನು ಹುಡುಕುವದಿಲ್ಲ; ಅವನ ಯೋಚನೆಗಳೆಲ್ಲಾ ದೇವ ರಿಲ್ಲದವುಗಳು. ಅವನ ಮಾರ್ಗಗಳು ಯಾವಾಗಲೂ ವ್ಯಸನಕರವಾಗಿವೆ; ನಿನ್ನ ನ್ಯಾಯತೀರ್ಪುಗಳು ಅವನ ದೃಷ್ಟಿಗೆ ನಿಲುಕದಷ್ಟು ಉನ್ನತವಾಗಿವೆ; ತನ್ನ ವೈರಿಗಳೆ ಲ್ಲರ ಮುಂದೆ ಉಬ್ಬಿಕೊಳ್ಳುತ್ತಾನೆ. ನಾನು ಕದಲು ವದಿಲ್ಲ; ನಾನು ಎಂದಿಗೂ ಕೇಡಿನಲ್ಲಿರುವದಿಲ್ಲ ಎಂದು ಅವನು ತನ್ನ ಹೃದಯದಲ್ಲಿ ಅಂದುಕೊಂಡಿದ್ದಾನೆ.
- 1 Kings 21:2–4 1 ಅರಸುಗಳು 21:2–4ಅಹಾ ಬನು ನಾಬೋತನಿಗೆ--ನಿನ್ನ ದ್ರಾಕ್ಷೇ ತೋಟವು ನನ್ನ ಮನೆಯ ಬಳಿಯಲ್ಲಿ ಇರುವದರಿಂದ ಅದು ನನಗೆ ಪಲ್ಯದ ತೋಟವಾಗುವ ಹಾಗೆ ಅದನ್ನು ನನಗೆ ಕೊಡು; ನಾನು ಅದಕ್ಕೆ ಬದಲಾಗಿ ಅದಕ್ಕಿಂತ ಒಳ್ಳೇ ದ್ರಾಕ್ಷೇ ತೋಟವನ್ನು ನಿನಗೆ ಕೊಡುವೆನು; ಇಲ್ಲವೆ ನಿನ್ನ ಕಣ್ಣು ಗಳಿಗೆ ಒಳ್ಳೇದಾಗಿದ್ದರೆ ಹಣದಲ್ಲಿ ಅದರ ಬೆಲೆಯನ್ನು ಕೊಡುವೆನು ಅಂದನು. ಆದರೆ ನಾಬೋತನು ಅಹಾಬನಿಗೆ--ನಾನು ನನ್ನ ಪಿತೃಗಳ ಬಾಧ್ಯತೆಯನ್ನು ನಿನಗೆ ಕೊಡುವದನ್ನು ಕರ್ತನು ನನಗೆ ದೂರವಾಗ ಮಾಡಲಿ ಅಂದನು. ನಾನು ನನ್ನ ಪಿತೃಗಳ ಬಾಧ್ಯತೆ ಯನ್ನು ನಿನಗೆ ಕೊಡುವದಿಲ್ಲವೆಂದು ಇಜ್ರೇಲ್ಯನಾದ ನಾಬೋತನು ಹೇಳಿದ ಮಾತಿಗೋಸ್ಕರ ಅಹಾಬನು ವ್ಯಸನದಿಂದಲೂ ಕೋಪದಿಂದಲೂ ತನ್ನ ಮನೆಗೆ ಬಂದು ತನ್ನ ಮಂಚದ ಮೇಲೆ ಮಲಗಿ ತನ್ನ ಮುಖ ವನ್ನು ತಿರುಗಿಸಿಕೊಂಡು ರೊಟ್ಟಿ ತಿನ್ನದೆ ಇದ್ದನು.
- Obadiah 1:4 ಓಬದ್ಯ 1:4ನೀನು ಹದ್ದಿನಂತೆ ಏರಿಕೊಂಡು ನಿನ್ನ ಗೂಡನ್ನು ನಕ್ಷತ್ರಗಳಲ್ಲಿ ಇಟ್ಟರೂ ಅಲ್ಲಿಂದ ನಿನ್ನನ್ನು ಇಳಿಸುವೆನೆಂದು ಕರ್ತನು ಅನ್ನುತ್ತಾನೆ.