Psalms · chapter 52 · verse 7
Psalm 52:7 in Kannada
ಇಗೋ, ದೇವರನ್ನು ತನ್ನ ಬಲವಾಗಿ ಆಶ್ರಯಿಸದೆ ತನ್ನ ಅಧಿಕವಾದ ಐಶ್ವರ್ಯದಲ್ಲಿ ಭರವಸವಿಟ್ಟು ತನ್ನ ಕೆಟ್ಟತನದಲ್ಲಿ ಬಲಗೊಂಡ ಮನುಷ್ಯನು ಇವನೇ.
Igo, devarannu tanna balavaagi aashrayisade tanna adhikavaada aishvaryadalli bharavasavittu tanna kettatanadalli balagonda manushyanu ivane.
Psalm 52:7 in English
- King James Version (KJV)
- Lo, [this is] the man [that] made not God his strength; but trusted in the abundance of his riches, [and] strengthened himself in his wickedness.
- World English Bible (WEB)
- “Behold, this is the man who didn’t make God his strength, but trusted in the abundance of his riches, and strengthened himself in his wickedness.”
- American Standard Version (ASV)
- Lo, this is the man that made not God his strength, But trusted in the abundance of his riches, And strengthened himself in his wickedness.
- Bible in Basic English (BBE)
- See, this is the man who did not make God his strength, but had faith in his goods and his property, and made himself strong in his wealth.
- Darby Translation (DBY)
- Behold the man that made not God his strength, but put confidence in the abundance of his riches, [and] strengthened himself in his avarice.
- Webster's Bible (WBS)
- Lo, [this is] the man [that] made not God his strength; but trusted in the abundance of his riches, [and] strengthened himself in his wickedness.
- Young's Literal Translation (YLT)
- 'Lo, the man who maketh not God his strong place, And trusteth in the abundance of his riches, He is strong in his mischiefs.'
Read in context
- 5ಆದದರಿಂದ ದೇವರು ಅದೇ ರೀತಿಯಲ್ಲಿ ನಿನ್ನನ್ನು ಸದಾಕಾಲಕ್ಕೂ ನಾಶಮಾಡಿ, ತೆಗೆದುಬಿಡುವನು. ನಿನ್ನ ವಾಸಸ್ಥಳದಿಂದ ಕಿತ್ತುಹಾಕುವನು; ಜೀವಿತರ ದೇಶ ದೊಳಗಿಂದ ನಿನ್ನನ್ನು ಬೇರುಸಹಿತ ಕೀಳುವನು. ಸೆಲಾ.
- 6ನೀತಿವಂತರು ಸಹ ಭಯಪಟ್ಟು ಅವನನ್ನು ನೋಡಿ ನಗುವರು.
- 7ಇಗೋ, ದೇವರನ್ನು ತನ್ನ ಬಲವಾಗಿ ಆಶ್ರಯಿಸದೆ ತನ್ನ ಅಧಿಕವಾದ ಐಶ್ವರ್ಯದಲ್ಲಿ ಭರವಸವಿಟ್ಟು ತನ್ನ ಕೆಟ್ಟತನದಲ್ಲಿ ಬಲಗೊಂಡ ಮನುಷ್ಯನು ಇವನೇ.
- 8ಆದರೆ ನಾನು ದೇವರ ಆಲಯದಲ್ಲಿರುವ ಹಸು ರಾದ ಇಪ್ಪೇ ಮರದಹಾಗೆ ಇದ್ದೇನೆ. ದೇವರ ಕರು ಣೆಯಲ್ಲಿ ಯುಗಯುಗಾಂತರಗಳಲ್ಲಿಯೂ ನಾನು ಭರವಸವಿಟ್ಟಿದ್ದೇನೆ.ನಾನು ಎಂದೆಂದಿಗೂ ನಿನ್ನನ್ನು ಕೊಂಡಾಡುವೆನು; ನೀನು ಅದನ್ನು ಮಾಡಿದಿ; ನಿನ್ನ ಹೆಸರನ್ನು ನಿರೀಕ್ಷಿಸುವೆನು; ನಿನ್ನ ಪರಿಶುದ್ಧರ ಮುಂದೆ ಅದು ಒಳ್ಳೇದಾಗಿದೆ.
- 9ನಾನು ಎಂದೆಂದಿಗೂ ನಿನ್ನನ್ನು ಕೊಂಡಾಡುವೆನು; ನೀನು ಅದನ್ನು ಮಾಡಿದಿ; ನಿನ್ನ ಹೆಸರನ್ನು ನಿರೀಕ್ಷಿಸುವೆನು; ನಿನ್ನ ಪರಿಶುದ್ಧರ ಮುಂದೆ ಅದು ಒಳ್ಳೇದಾಗಿದೆ.
Cross references
- Jeremiah 17:5 ಯೆರೆಮೀಯ 17:5ಕರ್ತನು ಹೀಗೆ ಹೇಳುತ್ತಾನೆ--ಮನುಷ್ಯನಲ್ಲಿ ನಂಬಿಕೆ ಇಟ್ಟು ಅವನನ್ನು ತನ್ನ ಬಾಹುವನ್ನಾಗಿ ಮಾಡಿ ಕೊಂಡು ಕರ್ತನ ಕಡೆಯಿಂದ ಯಾವನ ಹೃದಯವು ತೊಲಗುವದೋ ಅವನು ಶಾಪಗ್ರಸ್ತನು.
- Ecclesiastes 8:8 ಪ್ರಸಂಗಿ 8:8ಆತ್ಮವನ್ನು ಹಿಡಿ ಯುವ ಶಕ್ತಿ ಯಾವ ಮನುಷ್ಯನಿಗೂ ಇಲ್ಲ; ಹಾಗೆಯೇ ಮರಣ ದಿನವನ್ನು ತಡೆಯುವ ಶಕ್ತಿಯು ಯಾರಿಗೂ ಇರುವದಿಲ್ಲ. ಯುದ್ಧದಿಂದ ಬಿಡುಗಡೆಯೂ ಹೇಗೆ ಇಲ್ಲವೋ ಹಾಗೆಯೇ ದುಷ್ಟನಿಗೆ ಅದರಿಂದ ಬಿಡು ಗಡೆಯೇ ಇಲ್ಲ.
- Psalm 49:6–20 ಕೀರ್ತನೆಗಳು 49:6–20ಅವರು ತಮ್ಮ ಸಂಪತ್ತಿನಲ್ಲಿ ಭರವಸವಿಟ್ಟು ಅಧಿಕ ಐಶ್ವರ್ಯಗಳಲ್ಲಿ ಹೆಚ್ಚಳಪಡುವರು. ಆದರೆ ಸದಾ ಕಾಲಕ್ಕೂ ಬದುಕಿರುವಂತೆ ಮಾಡಿ ಕೊಳೆಯುವಿಕೆಯನ್ನು ನೋಡದ ಹಾಗೆ ತನ್ನ ಸಹೋದರನನ್ನು ಯಾವ ಮನುಷ್ಯನೂ ಅವನು ದೇವರಿಗೆ ಹಣವನ್ನು (ಈಡು) ಕೊಟ್ಟು ಅದರಿಂದ ವಿಮೋಚಿಸಲಾರನು. ಅವರ ಪ್ರಾಣದ ವಿಮೋಚನೆಯು ಅಮೂಲ್ಯ ವಾಗಿದೆ; ಅದು ಯುಗಯುಗಕ್ಕೂ ನಿಲ್ಲುವದು. ಜ್ಞಾನಿಗಳು ಸಾಯುವರು; ಹುಚ್ಚನು ಪಶುಪ್ರಾಯನು ಕೂಡ ನಾಶವಾಗಿ ಬೇರೆಯವರಿಗೆ ತಮ್ಮ ಆಸ್ತಿಯನ್ನು ಬಿಡುವದನ್ನು ಅವನು ನೋಡುತ್ತಾನೆ. ತಮ್ಮ ಮನೆಗಳು ಯುಗಯುಗಕ್ಕೂ ತಮ್ಮ ನಿವಾಸಗಳು ತಲತಲಾಂತರಕ್ಕೂ ಇರಬೇಕೆಂದು ಅಂತರ್ಯದಲ್ಲಿ ಯೋಚಿಸಿ ಭೂಮಿಗಳಿಗೆ ತಮ್ಮ ಹೆಸರುಗಳನ್ನು ಇಡು ತ್ತಾರೆ. ಮನುಷ್ಯನು ಘನವುಳ್ಳವನಾದರೂ ಸ್ಥಿರವಿಲ್ಲ; ಅವನು ನಾಶವಾಗುವ ಪಶುಗಳ ಹಾಗೆ ಇದ್ದಾನೆ. ಅವರ ಈ ಮಾರ್ಗವು ಅವರ ಹುಚ್ಚುತನ ವಾಗಿದೆ; ಆದರೆ ಅವರ ಸಂತಾನದವರು ಅವರ ಮಾತುಗಳನ್ನು ಮೆಚ್ಚುತ್ತಾರೆ. ಸೆಲಾ. ಅವರು ಕುರಿ ಗಳಂತೆ ಸಮಾಧಿಯಲ್ಲಿ ಹಾಕಲ್ಪಡುತ್ತಾರೆ; ಮರಣವು ಅವರನ್ನು ತಿನ್ನುತ್ತದೆ; ಯಥಾರ್ಥರು ಬೆಳಿಗ್ಗೆ ಅವರ ಮೇಲೆ ಆಳುವರು; ಅವರಿಗೆ ನಿವಾಸವಿರದ ಹಾಗೆ ಸಮಾಧಿಯಲ್ಲಿ ಅವರ ರೂಪವು ಕ್ಷಯಿಸುವದು. ಆದರೆ ದೇವರು ನನ್ನ ಪ್ರಾಣವನ್ನು ಸಮಾಧಿಯ ಬಲದಿಂದ ವಿಮೋಚನೆ ಮಾಡುವನು, ಆತನು ನನ್ನನ್ನು ಅಂಗೀಕರಿಸುವನು. ಸೆಲಾ. ಒಬ್ಬನು ಐಶ್ವರ್ಯವಂತ ನಾದರೆ ಮತ್ತು ಅವನ ಮನೆಯ ಘನವು ದೊಡ್ಡದಾ ದರೆ ಭಯಪಡಬೇಡ. ಅವನು ಸಾಯುವಾಗ ಏನೂ ತೆಗೆದುಕೊಂಡು ಹೋಗನು; ಅವನ ಘನವು ಅವನ ಹಿಂದೆ ಇಳಿದು ಹೋಗದು. ಅವನು ಬದುಕಿದ್ದಾಗ ತನ್ನ ಪ್ರಾಣವನ್ನು ಸ್ತುತಿಸಿಕೊಂಡಾಗ್ಯೂ ನೀನು ನಿನಗೆ ಒಳ್ಳೇದನ್ನು ಮಾಡಿಕೊಂಡರೆ ಜನರು ನಿನ್ನನ್ನು ಕೊಂಡಾ ಡುವರು. ಅವನು ತನ್ನ ತಂದೆಗಳ ವಂಶದ ಬಳಿಗೆ ಹೋಗುವನು; ಅವರು ಬೆಳಕನ್ನು ಎಂದಿಗೂ ನೋಡು ವದಿಲ್ಲ.ಮನುಷ್ಯನು ಘನತೆಯಲ್ಲಿದ್ದು ವಿವೇಕ ವಿಲ್ಲದವನಾದರೆ ಮಡಿದು ಹೋಗುವ ಪಶುಗಳಿಗೆ ಸಮಾನನಾಗಿದ್ದಾನೆ. ಮನುಷ್ಯನು ಘನತೆಯಲ್ಲಿದ್ದು ವಿವೇಕ ವಿಲ್ಲದವನಾದರೆ ಮಡಿದು ಹೋಗುವ ಪಶುಗಳಿಗೆ ಸಮಾನನಾಗಿದ್ದಾನೆ.
- Psalm 73:18–20 ಕೀರ್ತನೆಗಳು 73:18–20ನಿಶ್ಚಯವಾಗಿ ನೀನು ಅವರನ್ನು ಜಾರುವ ಸ್ಥಳಗಳಲ್ಲಿ ಇಟ್ಟಿದ್ದೀ; ಅವರನ್ನು ನಾಶನಕ್ಕೆ ಕೆಳಗೆ ದೊಬ್ಬಿದ್ದೀ. ಕ್ಷಣಮಾತ್ರದಲ್ಲಿ ಹೀಗೆ ನಾಶನಕ್ಕೆ ಅವರನ್ನು ಬರಮಾಡಿದಿ. ಅವರು ದಿಗಿಲುಗಳಿಂದ ಸಂಪೂರ್ಣವಾಗಿ ನಾಶವಾಗಿದ್ದಾರೆ. ಎಚ್ಚತ್ತ ಮೇಲೆ ಕನಸು ಹೇಗೋ ಹಾಗೆಯೇ ಓ ಕರ್ತನೇ, ನೀನು ಎಚ್ಚರವಾದಾಗ ಅವರ ರೂಪವನ್ನು ತಿರಸ್ಕರಿಸುವಿ.
- John 19:5 ಯೋಹಾನನು 19:5ಆಗ ಯೇಸು ಮುಳ್ಳಿನ ಕಿರೀಟವನ್ನು ಮತ್ತು ಊದಾಬಣ್ಣದ ನಿಲುವಂಗಿಯನ್ನು ಧರಿಸಿಕೊಂಡವನಾಗಿ ಹೊರಗೆ ಬರಲು ಪಿಲಾತನು ಅವರಿಗೆ--ಇಗೋ, ಈ ಮನುಷ್ಯನು! ಅಂದನು.
- Job 31:24–25 ಯೋಬನು 31:24–25ನಾನು ಬಂಗಾರವನ್ನು ನನ್ನ ನಿರೀಕ್ಷೆಯನ್ನಾಗಿ ಇಟ್ಟಿದ್ದರೆ, ಅಪ ರಂಜಿಗೆ--ನೀನು ನನ್ನ ಭರವಸವು ಎಂದು ಹೇಳಿದ್ದರೆ, ನನ್ನ ಐಶ್ವರ್ಯವು ಬಹಳವಾಗಿದೆ ಎಂದು ನನ್ನ ಕೈ ಬಹಳವಾಗಿ ಸಂಪಾದಿಸಿ ಕೊಂಡಿತೆಂದು ನಾನು ಸಂತೋಷಿಸಿದ್ದರೆ,
- 1 Timothy 6:17 1 ತಿಮೊಥೆಯನಿಗೆ 6:17ಈ ಲೋಕದಲ್ಲಿ ಐಶ್ವರ್ಯವುಳ್ಳವರು ಅಹಂಕಾರಿ ಗಳಾಗಿರದೆ, ಅಸ್ಥಿರವಾದ ಐಶ್ವರ್ಯದ ಮೇಲೆ ಭರವಸ ವನ್ನಿಡದೆ ನಮ್ಮ ಅನುಭೋಗಕ್ಕೋಸ್ಕರ ನಮಗೆ ಎಲ್ಲ ವನ್ನೂ ಹೇರಳವಾಗಿ ದಯಪಾಲಿಸುವ ಜೀವವುಳ್ಳ ದೇವರ ಮೇಲೆ ಭರವಸವನ್ನಿಡಬೇಕೆಂತಲೂ
- Psalm 146:3–5 ಕೀರ್ತನೆಗಳು 146:3–5ಪ್ರಭುಗಳಲ್ಲಿ ಭರವಸವಿಡಬೇಡಿರಿ; ಮಾನ ವರನ್ನು ನೆಚ್ಚಬೇಡಿರಿ, ಅವನು ಸಹಾಯಮಾಡ ಶಕ್ತ ನಲ್ಲ; ಅವನ ಉಸಿರು ಹೋಗಲು ಅವನು ಮಣ್ಣಿಗೆ ಹಿಂತಿರುಗುವನು; ಅದೇ ದಿನದಲ್ಲಿ ಅವನ ಸಂಕಲ್ಪ ಗಳೆಲ್ಲಾ ನಾಶವಾಗುತ್ತವೆ. ಯಾಕೋಬನ ದೇವರನ್ನು ತನ್ನ ಸಹಾಯವನ್ನಾಗಿ ಮಾಡಿಕೊಂಡವನು ಧನ್ಯನು; ಅವನು ತನ್ನ ದೇವರಾದ ಕರ್ತನ ಮೇಲೆ ತನ್ನ ನಿರೀಕ್ಷೆ ಇಡುವನು.
- Psalm 62:9–10 ಕೀರ್ತನೆಗಳು 62:9–10ನಿಶ್ಚಯವಾಗಿ ಅಲ್ಪರು ವ್ಯರ್ಥರೇ, ಘನವಂತರು ಸುಳ್ಳೇ; ಅವರೆಲ್ಲರನ್ನು ತ್ರಾಸಿನಲ್ಲಿ ತೂಗಿದರೆ ಧೂಳಿ ಗಿಂತಲೂ ಲಘುವಾಗಿದ್ದಾರೆ. ಅನ್ಯಾಯದಲ್ಲಿ ಭರ ವಸವಿಡಬೇಡಿರಿ; ಸುಲಿಗೆಯಲ್ಲಿ ವ್ಯರ್ಥರಾಗಬೇಡಿರಿ; ಆಸ್ತಿಯು ಹೆಚ್ಚಿದರೆ ಅದರ ಮೇಲೆ ಮನಸ್ಸಿಡಬೇಡಿರಿ.
- Isaiah 14:16–17 ಯೆಶಾಯ 14:16–17ನಿನ್ನನ್ನು ನೋಡುವ ವರು ನಿನ್ನನ್ನು ಸೂಕ್ಷ್ಮವಾಗಿ ದೃಷ್ಟಿಸಿ ಯೋಚಿಸುತ್ತಾ --ಭೂಮಿಯನ್ನು ನಡುಗಿಸಿ ರಾಜ್ಯಗಳನ್ನು ಕದಲಿಸಿ ಪಟ್ಟಣವನ್ನು ನಾಶಮಾಡಿ ಲೋಕವನ್ನು ಕಾಡ ನ್ನಾಗಿ ಮಾಡಿ ಸೆರೆಹಿಡಿದವರನ್ನು ಮನೆಗೆ ಬಿಡದೆ ಇದ್ದ ವನು ಈ ಮನುಷ್ಯನೋ ಎಂದು ಅಂದುಕೊಳ್ಳುವರು.
- Hosea 12:7–8 ಹೋಶೇಯ 12:7–8ಅವನು ವ್ಯಾಪಾರಿಯಾಗಿದ್ದು ಅವನ ಕೈಯಲ್ಲಿ ಮೋಸದ ತ್ರಾಸು ಇದೆ. ಕಸಕೊಳ್ಳುವದನ್ನು ಅವನು ಪ್ರೀತಿಮಾಡುತ್ತಾನೆ. ಎಫ್ರಾಯಾಮು--ಆದಾಗ್ಯೂ ನಾನು ಐಶ್ವರ್ಯವಂತನಾದೆನು, ನಾನು ಆಸ್ತಿಯನ್ನು ಕಂಡುಕೊಂಡೆನು; ನನ್ನ ಕೆಲಸಗಳಲ್ಲೆಲ್ಲಾ ಪಾಪವಾದ ದುಷ್ಟತ್ವವನ್ನು ಅವರು ನನ್ನಲ್ಲಿ ಕಂಡುಕೊಳ್ಳುವದಿಲ್ಲ.
- Psalm 73:7–11 ಕೀರ್ತನೆಗಳು 73:7–11ಅವರ ಕಣ್ಣುಗಳು ಕೊಬ್ಬಿನಿಂದ ಉಬ್ಬಿಕೊಂಡಿರುತ್ತವೆ; ಅವರ ಹೃದಯವು ಆಶಿಸುವದಕ್ಕಿಂತಲೂ ಹೆಚ್ಚಾಗಿ ಅವರಿಗೆ ಇವೆ. ಅವರು ಕೆಟ್ಟುಹೋದವರು. ಸಂಕಟ ಪಡುವವರ ವಿಷಯ ಕೆಟ್ಟದ್ದಾಗಿಯೂ ಗರ್ವದಿಂದಲೂ ಮಾತನಾಡುತ್ತಾರೆ. ಪರಲೋಕಕ್ಕೆ ವಿರೋಧವಾಗಿ ತಮ್ಮ ಬಾಯನ್ನು ತೆರೆದಿದ್ದಾರೆ; ಭೂಲೋಕದಲ್ಲೆಲ್ಲಾ ಅವರ ಮಾತೇ ನಡೆಯುವದು. ಆದದರಿಂದ ಅವನ ಜನರು ಇಲ್ಲಿಗೆ ತಿರುಗಿ ಕೊಳ್ಳುತ್ತಾರೆ; ಅವರಿಗೆ ಪಾನವು ಯಥೇಚ್ಚವಾಗಿ ದೊರೆಯುತ್ತದೆ. ಅವರು-- ದೇವರು ಹೇಗೆ ಬಲ್ಲನು? ಮಹೋನ್ನತನಲ್ಲಿ ತಿಳುವಳಿಕೆ ಉಂಟೋ ಎಂದು ಅಂದುಕೊಳ್ಳುತ್ತಾರೆ.