Hebrews · chapter 7 · verse 6
Hebrews 7:6 in Kannada
ಅದರೆ ಅವರ ವಂಶಾವಳಿಯಲ್ಲಿ ಲೆಕ್ಕಿಸಲ್ಪಡದೆ ಇರುವ ಈತನು ಅಬ್ರಹಾಮನಿಂದಲೇ ದಶಮ ಭಾಗಗಳನ್ನು ತಕ್ಕೊಂಡ ದ್ದಲ್ಲದೆ ವಾಗ್ದಾನಗಳನ್ನು ಹೊಂದಿದವನಾದ ಅವನಿಗೆ ಆಶೀರ್ವಾದ ಕೊಟ್ಟನು.
Adare avara vanshaavaliyalli lekkisalpadade iruva eetanu abrahaamanindale dashama bhaagagalannu takkonda ddallade vaagdaanagalannu hondidavanaada avanige aasheervaada kottanu.
Hebrews 7:6 in English
- King James Version (KJV)
- But he whose descent is not counted from them received tithes of Abraham, and blessed him that had the promises.
- World English Bible (WEB)
- but he whose genealogy is not counted from them has accepted tithes from Abraham, and has blessed him who has the promises.
- American Standard Version (ASV)
- but he whose genealogy is not counted from them hath taken tithes of Abraham, and hath blessed him that hath the promises.
- Bible in Basic English (BBE)
- But this man, who was not of their family, took the tenth from Abraham, and gave a blessing to him to whom God had given his undertaking.
- Darby Translation (DBY)
- but he who has no genealogy from them has tithed Abraham, and blessed him who had the promises.
- Webster's Bible (WBS)
- But he whose descent is not counted from them received tithes from Abraham, and blessed him that had the promises.
- Young's Literal Translation (YLT)
- and he who was not reckoned by genealogy of them, received tithes from Abraham, and him having the promises he hath blessed,
Read in context
- 4ಈ ಮನುಷ್ಯನು ಎಷ್ಟು ದೊಡ್ಡವನಾಗಿದ್ದನೆಂದು ಆಲೋಚಿಸಿರಿ. ನಮ್ಮ ಮೂಲ ಪಿತೃವಾದ ಅಬ್ರಹಾ ಮನು ಸುಲುಕೊಂಡು ಬಂದವುಗಳಲ್ಲಿ ಹತ್ತನೆಯ ಒಂದು ಭಾಗವನ್ನು ಆತನಿಗೆ ಕೊಟ್ಟನಲ್ಲಾ.
- 5ನಿಜವಾಗಿ ಲೇವಿಯ ಮಕ್ಕಳಲ್ಲಿ ಯಾಜಕೋದ್ಯೋಗವನ್ನು ಹೊಂದುವವರು ಜನರಿಂದ ಅಂದರೆ ಅಬ್ರಹಾಮನ ವಂಶಸ್ಥರಾಗಿರುವ ತಮ್ಮ ಸಹೋದರರಿಂದಲೇ ದಶಮ ಭಾಗಗಳನ್ನು ತೆಗೆದುಕೊಳ್ಳುವದಕ್ಕೆ ನ್ಯಾಯ ಪ್ರಮಾಣದಲ್ಲಿ ಅಪ್ಪಣೆಯುಂಟು.
- 6ಅದರೆ ಅವರ ವಂಶಾವಳಿಯಲ್ಲಿ ಲೆಕ್ಕಿಸಲ್ಪಡದೆ ಇರುವ ಈತನು ಅಬ್ರಹಾಮನಿಂದಲೇ ದಶಮ ಭಾಗಗಳನ್ನು ತಕ್ಕೊಂಡ ದ್ದಲ್ಲದೆ ವಾಗ್ದಾನಗಳನ್ನು ಹೊಂದಿದವನಾದ ಅವನಿಗೆ ಆಶೀರ್ವಾದ ಕೊಟ್ಟನು.
- 7ಆಶೀರ್ವಾದ ಹೊಂದುವವ ನಿಗಿಂತ ಆಶಿರ್ವದಿಸುವವನು ದೊಡ್ಡವನು ಎಂಬದು ವಿವಾದವಿಲ್ಲದ ಮಾತಷ್ಟೆ. 8ಇಲ್ಲಿ ಸಾಯತಕ್ಕ ಮನುಷ್ಯರು ದಶಮ ಭಾಗಗಳನ್ನು ತಕ್ಕೊಳ್ಳುತ್ತಾರೆ; ಆದರೆ ಅಲ್ಲಿ ಜೀವಿಸುತ್ತಿದ್ದಾನೆಂದು ಸಾಕ್ಷಿಹೊಂದಿರುವಾತನು ತಕ್ಕೊಳ್ಳುತ್ತಾನೆ.
- 8ಇಲ್ಲಿ ಸಾಯತಕ್ಕ ಮನುಷ್ಯರು ದಶಮ ಭಾಗಗಳನ್ನು ತಕ್ಕೊಳ್ಳುತ್ತಾರೆ; ಆದರೆ ಅಲ್ಲಿ ಜೀವಿಸುತ್ತಿದ್ದಾನೆಂದು ಸಾಕ್ಷಿಹೊಂದಿರುವಾತನು ತಕ್ಕೊಳ್ಳುತ್ತಾನೆ.
Cross references
- Romans 4:13 ರೋಮಾಪುರದವರಿಗೆ 4:13ಅವನು ಲೋಕಕ್ಕೆ ಬಾಧ್ಯನಾಗುವನೆಂಬ ವಾಗ್ದಾ ನವು ಅಬ್ರಹಾಮನಿಗಾಗಲಿ ಅವನ ಸಂತತಿಯವರಿ ಗಾಗಲಿ ನ್ಯಾಯಪ್ರಮಾಣದಿಂದ ಆದದ್ದಲ್ಲ, ನಂಬಿಕೆ ಯಿಂದಾದ ನೀತಿಯಿಂದಲೇ ಆದದ್ದು.
- Hebrews 7:3–4 ಇಬ್ರಿಯರಿಗೆ 7:3–4ಆತನಿಗೆ ತಂದೆಯೂ ತಾಯಿಯೂ ವಂಶಾವಳಿಯೂ ಇಲ್ಲ, ದಿವಸಗಳ ಆರಂಭವೂ ಜೀವದ ಅಂತ್ಯವೂ ಇಲ್ಲ. ಆದರೆ ಆತನು ದೇವರ ಮಗನಿಗೆ ಹೋಲಿಕೆಯಾಗಿ ಮಾಡಲ್ಪಟ್ಟಿದ್ದಾನೆ. ಇದಲ್ಲದೆ ಆತನು ನಿರಂತರವಾಗಿ ಯಾಜಕನಾಗಿದ್ದಾನೆ. ಈ ಮನುಷ್ಯನು ಎಷ್ಟು ದೊಡ್ಡವನಾಗಿದ್ದನೆಂದು ಆಲೋಚಿಸಿರಿ. ನಮ್ಮ ಮೂಲ ಪಿತೃವಾದ ಅಬ್ರಹಾ ಮನು ಸುಲುಕೊಂಡು ಬಂದವುಗಳಲ್ಲಿ ಹತ್ತನೆಯ ಒಂದು ಭಾಗವನ್ನು ಆತನಿಗೆ ಕೊಟ್ಟನಲ್ಲಾ.
- Genesis 17:4–8 ಆದಿಕಾಂಡ 17:4–8ಇಗೋ, ನಾನಾದರೋ ನನ್ನ ಒಡಂಬಡಿಕೆಯನ್ನು ನಿನ್ನ ಸಂಗಡ ಮಾಡಿದ್ದೇನೆ. ನೀನು ಅನೇಕ ಜನಾಂಗಗಳ ತಂದೆ ಯಾಗಿರುವಿ. ಮಾತ್ರವಲ್ಲದೆ ನಿನ್ನ ಹೆಸರು ಇನ್ನು ಅಬ್ರಾಮ ಎಂದು ಕರೆಯಲ್ಪಡದೆ ನಿನ್ನ ಹೆಸರು ಅಬ್ರಹಾಮನೆಂದು ಹೆಸರಿರುವದು; ಯಾಕಂದರೆ ನಾನು ನಿನ್ನನ್ನು ಅನೇಕ ಜನಾಂಗಗಳ ತಂದೆಯನ್ನಾಗಿ ಮಾಡಿದ್ದೇನೆ. ನಾನು ನಿನ್ನನ್ನು ಅತ್ಯಧಿಕವಾಗಿ ವೃದ್ಧಿ ಯಾಗಮಾಡಿ ನಿನ್ನಿಂದ ಜನಾಂಗಗಳಾಗ ಮಾಡುವೆನು; ನಿನ್ನಿಂದ ಅರಸರು ಹುಟ್ಟುವರು. ಇದಲ್ಲದೆ ನಿನಗೂ ನಿನ್ನ ತರುವಾಯ ನಿನ್ನ ಸಂತಾನಕ್ಕೂ ದೇವರಾಗಿರುವದಕ್ಕೆ ನನಗೂ ನಿನಗೂ ನಿನ್ನ ತರುವಾಯ ಬರುವ ತಲ ತಲಾಂತರಗಳಲ್ಲಿ ನಿನ್ನ ಸಂತಾನಕ್ಕೂ ಮಧ್ಯದಲ್ಲಿ ನನ್ನ ಒಡಂಬಡಿಕೆಯನ್ನು ನಿತ್ಯವಾದ ಒಡಂಬಡಿಕೆಯಾಗಿ ಸ್ಥಾಪಿಸುತ್ತೇನೆ. ನಿನಗೂ ನಿನ್ನ ತರುವಾಯ ನಿನ್ನ ಸಂತಾನಕ್ಕೂ ನೀನು ಪ್ರವಾಸಿಯಾಗಿರುವ ಕಾನಾನ್ ದೇಶವನ್ನೆಲ್ಲಾ ಶಾಶ್ವತವಾದ ಸ್ವಾಸ್ಥ್ಯವಾಗಿ ಕೊಡುತ್ತೇನೆ. ನಾನು ಅವರ ದೇವರಾಗಿರುವೆನು ಅಂದನು.
- Genesis 13:14–17 ಆದಿಕಾಂಡ 13:14–17ಲೋಟನು ಅಬ್ರಾಮನಿಂದ ಅಗಲಿದ ಮೇಲೆ ಕರ್ತನು ಅವನಿಗೆ--ನಿನ್ನ ಕಣ್ಣುಗಳನ್ನು ಎತ್ತಿ ನೀನಿರುವ ಸ್ಥಳದಿಂದ ಉತ್ತರಕ್ಕೂ ದಕ್ಷಿಣಕ್ಕೂ ಪೂರ್ವಕ್ಕೂ ಪಶ್ಚಿಮಕ್ಕೂ ನೋಡು. ನೀನು ನೋಡುವ ದೇಶ ವನ್ನೆಲ್ಲಾ ನಾನು ನಿನಗೂ ನಿನ್ನ ಸಂತತಿಗೂ ಶಾಶ್ವತವಾಗಿ ಕೊಡುವೆನು. ನಿನ್ನ ಸಂತತಿಯನ್ನು ಭೂಮಿಯ ಧೂಳಿನಷ್ಟು ಮಾಡುವೆನು. ಭೂಮಿಯ ಧೂಳನ್ನು ಒಬ್ಬನು ಲೆಕ್ಕಿಸಬಹುದಾದರೆ ನಿನ್ನ ಸಂತಾನವು ಸಹ ಲೆಕ್ಕಿಸಲ್ಪಡುವದು. ಎದ್ದು ಭೂಮಿಯ ಉದ್ದಗಲದ ಪ್ರಕಾರ ಅದರಲ್ಲಿ ತಿರುಗಾಡು. ನಾನು ನಿನಗೆ ಅದನ್ನು ಕೊಡುವೆನು ಅಂದನು.ಆಗ ಅಬ್ರಾಮನು ತನ್ನ ಗುಡಾರವನ್ನು ತೆಗೆದುಕೊಂಡು ಹೆಬ್ರೋನಿನ ಲ್ಲಿರುವ ಮಮ್ರೆಯ ಮೈದಾನಕ್ಕೆ ಬಂದು ಅಲ್ಲಿ ವಾಸವಾಗಿದ್ದನು. ಅವನು ಅಲ್ಲಿ ಕರ್ತನಿಗೆ ಬಲಿ ಪೀಠವನ್ನು ಕಟ್ಟಿದನು.
- Hebrews 11:17 ಇಬ್ರಿಯರಿಗೆ 11:17ಅಬ್ರಹಾಮನು ಶೋಧಿತನಾಗಿ ನಂಬಿಕೆ ಯಿಂದಲೇ ಇಸಾಕನನ್ನು ಸಮರ್ಪಿಸಿದನು; ಆ ವಾಗ್ದಾನ ಗಳನ್ನು ಹೊಂದಿದ ಅವನು ತನ್ನ ಒಬ್ಬನೇ ಮಗನನ್ನು ಸಮರ್ಪಿಸಿದನು.
- Hebrews 6:13–15 ಇಬ್ರಿಯರಿಗೆ 6:13–15ದೇವರು ಅಬ್ರಹಾಮನಿಗೆ ವಾಗ್ದಾನ ಮಾಡಿದಾಗ ತನಗಿಂತ ಹೆಚ್ಚಿನವನ ಆಣೆಯಿಡುವದಕ್ಕಾಗದೆ ಇದ್ದದ್ದರಿಂದ ತನ್ನಾ ಣೆಯಿಟ್ಟು-- ಖಂಡಿತವಾಗಿ ನಿನ್ನನ್ನು ಆಶೀರ್ವದಿಸೇ ಆಶೀರ್ವದಿಸುವೇನು. ನಿನ್ನನ್ನು ಹೆಚ್ಚಿಸೇ ಹೆಚ್ಚಿಸುವೆನು ಎಂದು ಹೇಳಿದನಷ್ಟೆ. ಹೀಗೆ ಅವನು ತಾಳ್ಮೆಯಿಂದ ಕಾದಿದ್ದು ವಾಗ್ದಾನವನ್ನು ಹೊಂದಿದನು.
- Romans 9:4 ರೋಮಾಪುರದವರಿಗೆ 9:4ಇವರು ಇಸ್ರಾಯೇಲ್ಯರು; ದತ್ತುಪುತ್ರ ಸ್ವಿಕಾರವೂ ಮಹಿಮೆಯೂ ಒಡಂಬಡಿ ಕೆಗಳೂ ನ್ಯಾಯಪ್ರಮಾಣ ಕೊಡೋಣವೂ ದೇವರ ಸೇವೆಯೂ ವಾಗ್ದಾನಗಳೂ ಇವರಿಗೆ ಸಂಬಂಧ ಪಟ್ಟವುಗಳು.
- Galatians 3:16 ಗಲಾತ್ಯದವರಿಗೆ 3:16ದೇವರು ಅಬ್ರಹಾಮನಿಗೂ ಅವನ ಸಂತತಿಗೂ ವಾಗ್ದಾನಗಳನ್ನು ಮಾಡಿದನು; ಆತನು--ನಿನ್ನ ಸಂತತಿಗಳಿಗೆ ಎಂದು ಹೇಳಿ ಅನೇಕರನ್ನು ಸೂಚಿಸದೆ--ನಿನ್ನ ಸಂತತಿಗೆ ಎಂದು ಹೇಳಿ ಒಬ್ಬನನ್ನೇ ಸೂಚಿಸುತ್ತಾನೆ. ಆ ಒಬ್ಬಾತನು ಕ್ರಿಸ್ತನೇ.
- Genesis 12:2 ಆದಿಕಾಂಡ 12:2ನಾನು ನಿನ್ನನ್ನು ದೊಡ್ಡ ಜನಾಂಗವಾಗ ಮಾಡಿ ನಿನ್ನನ್ನು ಆಶೀರ್ವದಿಸಿ ನಿನ್ನ ಹೆಸರನ್ನು ದೊಡ್ಡ ದಾಗಿ ಮಾಡುವೆನು, ನೀನು ಆಶೀರ್ವಾದವಾಗಿರುವಿ.
- Genesis 22:17–18 ಆದಿಕಾಂಡ 22:17–18ನಿನ್ನನ್ನು ಆಶೀರ್ವದಿ ಸಿಯೇ ಆಶೀರ್ವದಿಸುವೆನು; ನಿನ್ನ ಸಂತಾನವನ್ನು ಆಕಾಶದ ನಕ್ಷತ್ರಗಳ ಹಾಗೆಯೂ ಸಮುದ್ರದ ತೀರ ದಲ್ಲಿರುವ ಮರಳಿನ ಹಾಗೆಯೂ ಹೆಚ್ಚಿಸೇ ಹೆಚ್ಚಿಸುವೆನು; ನಿನ್ನ ಸಂತಾನವು ತನ್ನ ಶತ್ರುಗಳ ದ್ವಾರವನ್ನು ವಶ ಮಾಡಿಕೊಳ್ಳುವದು. ನೀನು ನನ್ನ ಸ್ವರಕ್ಕೆ ವಿಧೇಯ ನಾದದ್ದರಿಂದ ಭೂಮಿಯ ಜನಾಂಗಗಳೆಲ್ಲಾ ನಿನ್ನ ಸಂತಾನದಲ್ಲಿ ಆಶೀರ್ವದಿಸಲ್ಪಡುವವು ಎಂಬದೇ.
- Hebrews 7:1 ಇಬ್ರಿಯರಿಗೆ 7:1ಈ ಮೆಲ್ಕಿಜೆದೇಕನು ಸಾಲೇಮಿನ ಅರಸನೂ ಮಹೋನ್ನತನಾದ ದೇವರ ಯಾಜಕನೂ ಆಗಿದ್ದು ರಾಜರನ್ನು ಸಂಹರಿಸಿ ಹಿಂತಿರುಗಿ ಬರುತ್ತಿದ್ದ ಅಬ್ರಹಾಮನನ್ನು ಎದುರುಗೊಂಡು ಅವನನ್ನು ಆಶಿರ್ವದಿಸಿದನು.
- Genesis 14:19–20 ಆದಿಕಾಂಡ 14:19–20ಇವನು ಅಬ್ರಾಮನನ್ನು ಆಶೀರ್ವದಿಸಿ--ಅಬ್ರಾಮನು ಆಕಾಶವನ್ನು ಭೂಮಿ ಯನ್ನು ಹೊಂದಿರುವ ಮಹೋನ್ನತನಾದ ದೇವರಿಂದ ಆಶೀರ್ವದಿಸಲ್ಪಡಲಿ. ನಿನ್ನ ಶತ್ರುಗಳನ್ನು ನಿನ್ನ ಕೈಗೆ ಒಪ್ಪಿಸಿದ ಮಹೋನ್ನತ ನಾದ ದೇವರು ಸ್ತುತಿಹೊಂದಲಿ ಅಂದನು. ಅಬ್ರಾ ಮನು ಅವನಿಗೆ ಎಲ್ಲಾದರಲ್ಲಿ ದಶಮಭಾಗವನ್ನು ಕೊಟ್ಟನು.