Genesis · chapter 17 · verse 4
Genesis 17:4 in Kannada
ಇಗೋ, ನಾನಾದರೋ ನನ್ನ ಒಡಂಬಡಿಕೆಯನ್ನು ನಿನ್ನ ಸಂಗಡ ಮಾಡಿದ್ದೇನೆ. ನೀನು ಅನೇಕ ಜನಾಂಗಗಳ ತಂದೆ ಯಾಗಿರುವಿ.
Igo, naanaadaro nanna odambadikeyannu ninna sangada maadiddene. Neenu aneka janaangagala tande yaagiruvi.
Genesis 17:4 in English
- King James Version (KJV)
- As for me, behold, my covenant [is] with thee, and thou shalt be a father of many nations.
- World English Bible (WEB)
- “As for me, behold, my covenant is with you. You will be the father of a multitude of nations.
- American Standard Version (ASV)
- As for me, behold, my covenant is with thee, and thou shalt be the father of a multitude of nations.
- Bible in Basic English (BBE)
- As for me, my agreement is made with you, and you will be the father of nations without end.
- Darby Translation (DBY)
- It is I: behold, my covenant is with thee, and thou shalt be a father of a multitude of nations.
- Webster's Bible (WBS)
- As for me, behold, my covenant [is] with thee, and thou shalt be a father of many nations.
- Young's Literal Translation (YLT)
- 'I — lo, My covenant [is] with thee, and thou hast become father of a multitude of nations;
Read in context
- 2ನನಗೂ ನಿನಗೂ ಮಧ್ಯದಲ್ಲಿ ನನ್ನ ಒಡಂಬಡಿಕೆಯನ್ನು ಮಾಡುವೆನು; ಇದಲ್ಲದೆ ನಿನ್ನನ್ನು ಅತ್ಯಧಿಕವಾಗಿ ಹೆಚ್ಚಿಸುವೆನು ಎಂದು ಅವನಿಗೆ ಹೇಳಿದನು.
- 3ಆಗ ಅಬ್ರಾಮನು ಸಾಷ್ಟಾಂಗಬಿದ್ದನು. ಆಗ ದೇವರು ಅವನ ಸಂಗಡ ಮಾತನಾಡಿದ್ದೇನಂದರೆ--
- 4ಇಗೋ, ನಾನಾದರೋ ನನ್ನ ಒಡಂಬಡಿಕೆಯನ್ನು ನಿನ್ನ ಸಂಗಡ ಮಾಡಿದ್ದೇನೆ. ನೀನು ಅನೇಕ ಜನಾಂಗಗಳ ತಂದೆ ಯಾಗಿರುವಿ.
- 5ಮಾತ್ರವಲ್ಲದೆ ನಿನ್ನ ಹೆಸರು ಇನ್ನು ಅಬ್ರಾಮ ಎಂದು ಕರೆಯಲ್ಪಡದೆ ನಿನ್ನ ಹೆಸರು ಅಬ್ರಹಾಮನೆಂದು ಹೆಸರಿರುವದು; ಯಾಕಂದರೆ ನಾನು ನಿನ್ನನ್ನು ಅನೇಕ ಜನಾಂಗಗಳ ತಂದೆಯನ್ನಾಗಿ ಮಾಡಿದ್ದೇನೆ.
- 6ನಾನು ನಿನ್ನನ್ನು ಅತ್ಯಧಿಕವಾಗಿ ವೃದ್ಧಿ ಯಾಗಮಾಡಿ ನಿನ್ನಿಂದ ಜನಾಂಗಗಳಾಗ ಮಾಡುವೆನು; ನಿನ್ನಿಂದ ಅರಸರು ಹುಟ್ಟುವರು.
Cross references
- Genesis 35:11 ಆದಿಕಾಂಡ 35:11ದೇವರು ಅವನಿಗೆ ಹೇಳಿದ್ದೇನಂದರೆ--ಸರ್ವಶಕ್ತನಾದ ದೇವರು ನಾನೇ, ನೀನು ಅಭಿವೃದ್ಧಿಯಾಗಿ ಹೆಚ್ಚಾಗು; ಜನಾಂಗವೂ ಜನಾಂಗಗಳ ಗುಂಪೂ ನಿನ್ನಿಂದ ಉಂಟಾಗುವವು; ಅರಸರು ನಿನ್ನಿಂದ ಹುಟ್ಟುವರು.
- Romans 4:11–18 ರೋಮಾಪುರದವರಿಗೆ 4:11–18ಆಮೇಲೆ ನೀತಿಗೆ ಮುದ್ರೆಯಾಗಿ ಸುನ್ನತಿಯನ್ನು ಗುರುತಾಗಿ ಹೊಂದಿದನು. ಇದು ಸುನ್ನತಿಯಾಗುವದಕ್ಕೆ ಮೊದಲೇ ಅವನಿಗಿದ್ದ ನಂಬಿಕೆಯಿಂದಾಯಿತು. ಹೀಗೆ ಅವನು ನಂಬುವವರೆಲ್ಲರಿಗೆ ಅಂದರೆ ಅವರು ಸುನ್ನತಿ ಯಿಲ್ಲದವರಾದಾಗ್ಯೂ ಅವರಿಗೆ ತಂದೆಯಾದನು; ಹೀಗೆ ಅವರೂ ನೀತಿವಂತರೆಂದು ಎಣಿಸಲ್ಪಡುವರು. ಇದಲ್ಲದೆ ಸುನ್ನತಿಯಿದ್ದವರಿಗೆ ತಂದೆಯಾದವನು ಸುನ್ನತಿಯವರಿಗೆ ಮಾತ್ರವಲ್ಲ, ಆದರೆ ಅಬ್ರಹಾಮನು ಸುನ್ನತಿ ಮಾಡಿಸಿಕೊಳ್ಳುವದಕ್ಕೆ ಮುಂಚೆ ನಡೆದ ನಂಬಿಕೆಯ ಹೆಜ್ಜೆಜಾಡಿನಲ್ಲಿ ನಡೆಯುತ್ತಿರುವ ಸುನ್ನತಿ ಯಿಲ್ಲದವರಿಗೂ ತಂದೆಯಾಗಿದ್ದಾನೆ. ಅವನು ಲೋಕಕ್ಕೆ ಬಾಧ್ಯನಾಗುವನೆಂಬ ವಾಗ್ದಾ ನವು ಅಬ್ರಹಾಮನಿಗಾಗಲಿ ಅವನ ಸಂತತಿಯವರಿ ಗಾಗಲಿ ನ್ಯಾಯಪ್ರಮಾಣದಿಂದ ಆದದ್ದಲ್ಲ, ನಂಬಿಕೆ ಯಿಂದಾದ ನೀತಿಯಿಂದಲೇ ಆದದ್ದು. ನ್ಯಾಯ ಪ್ರಮಾಣವನ್ನನುಸರಿಸುವವರು ಬಾಧ್ಯರಾಗಿದ್ದರೆ ನಂಬಿ ಕೆಯು ವ್ಯರ್ಥವಾಯಿತು, ವಾಗ್ದಾನವೂ ನಿರರ್ಥಕ ವಾಯಿತು. ನ್ಯಾಯಪ್ರಮಾಣವು ದೇವರ ಕೋಪಕ್ಕೆ ಗುರಿಮಾಡುವಂಥದ್ದು. ನ್ಯಾಯಪ್ರಮಾಣವಿಲ್ಲದ ಪಕ್ಷ ದಲ್ಲಿ ಆಜ್ಞಾತಿಕ್ರಮಣವೂ ಇಲ್ಲ; ಆದಕಾರಣ ಕೃಪೆ ಯಿಂದಲೇ ದೊರೆಯುವ ಆ ಬಾಧ್ಯತೆಯು ನಂಬಿಕೆಯ ಮುಖಾಂತರ ಸಿಕ್ಕುತ್ತದೆ. ಹೀಗೆ ಆ ವಾಗ್ದಾನವು ಅಬ್ರಹಾ ಮನ ಸಂತತಿಯವರೆಲ್ಲರಿಗೂ ಅಂದರೆ ನ್ಯಾಯ ಪ್ರಮಾಣವನ್ನು ಆಧಾರ ಮಾಡಿಕೊಂಡವರಿಗೆ ಮಾತ್ರ ವಲ್ಲದೆ ನಮ್ಮೆಲ್ಲರಿಗೆ ತಂದೆಯಾಗಿರುವ ಅಬ್ರಹಾಮ ನಲ್ಲಿದ್ದಂಥ ನಂಬಿಕೆ (ನಾನು ನಿನ್ನನ್ನು ಅನೇಕ ಜನಾಂಗಗಳಿಗೆ ತಂದೆ ಯಾಗಿ ನೇಮಿಸಿದ್ದೇನೆ ಎಂದು ಬರೆದಿರುವ ಪ್ರಕಾರ) ದೇವರು ಸತ್ತವರನ್ನು ಬದುಕಿಸುವವನಾಗಿಯೂ ಇಲ್ಲ ದ್ದನ್ನು ಇರುವದಾಗಿ ಕರೆಯುವವನಾಗಿಯೂ ಆಗಿದ್ದಾ ನೆಂದು ದೇವರ ಮುಂದೆ ಅಬ್ರಹಾಮನು ನಂಬಿದನು. ಅವನು ತಾನು ಅನೇಕ ಜನಾಂಗಗಳಿಗೆ ತಂದೆಯಾಗಿ ರುವನೆಂಬ ನಿರೀಕ್ಷೆಗೆ ಆಸ್ಪದವಿಲ್ಲದಿರುವಾಗಲೂ--ನಿನ್ನ ಸಂತಾನವು ಹೀಗಾಗುವದು ಎಂದು ಹೇಳಲ್ಪಟ್ಟಂತೆ ನಿರೀಕ್ಷಿಸಿ ನಂಬಿದನು.
- Galatians 3:28–29 ಗಲಾತ್ಯದವರಿಗೆ 3:28–29ನೀವೆಲ್ಲರು ಕ್ರಿಸ್ತ ಯೇಸುವಿನಲ್ಲಿ ಒಂದೇ ಆಗಿರುವದರಿಂದ ಯೆಹೂದ್ಯನು ಗ್ರೀಕನು ಎಂದೂ ದಾಸನು ಸ್ವತಂತ್ರನು ಎಂದೂ ಗಂಡು ಹೆಣ್ಣು ಎಂದೂ ಭೇದವಿಲ್ಲ.ನೀವು ಕ್ರಿಸ್ತನವರಾಗಿದ್ದರೆ ಅಬ್ರಹಾಮನ ಸಂತತಿಯವರು ವಾಗ್ದಾನಕ್ಕನುಸಾರವಾಗಿ ಬಾಧ್ಯರೂ ಆಗಿದ್ದೀರಿ. ನೀವು ಕ್ರಿಸ್ತನವರಾಗಿದ್ದರೆ ಅಬ್ರಹಾಮನ ಸಂತತಿಯವರು ವಾಗ್ದಾನಕ್ಕನುಸಾರವಾಗಿ ಬಾಧ್ಯರೂ ಆಗಿದ್ದೀರಿ.
- Genesis 12:2 ಆದಿಕಾಂಡ 12:2ನಾನು ನಿನ್ನನ್ನು ದೊಡ್ಡ ಜನಾಂಗವಾಗ ಮಾಡಿ ನಿನ್ನನ್ನು ಆಶೀರ್ವದಿಸಿ ನಿನ್ನ ಹೆಸರನ್ನು ದೊಡ್ಡ ದಾಗಿ ಮಾಡುವೆನು, ನೀನು ಆಶೀರ್ವಾದವಾಗಿರುವಿ.
- Genesis 13:16 ಆದಿಕಾಂಡ 13:16ನಿನ್ನ ಸಂತತಿಯನ್ನು ಭೂಮಿಯ ಧೂಳಿನಷ್ಟು ಮಾಡುವೆನು. ಭೂಮಿಯ ಧೂಳನ್ನು ಒಬ್ಬನು ಲೆಕ್ಕಿಸಬಹುದಾದರೆ ನಿನ್ನ ಸಂತಾನವು ಸಹ ಲೆಕ್ಕಿಸಲ್ಪಡುವದು.
- Genesis 48:19 ಆದಿಕಾಂಡ 48:19ಅದಕ್ಕೆ ಅವನ ತಂದೆಯು ಒಪ್ಪದೆ--ನನಗೆ ತಿಳಿಯಿತು, ನನ್ನ ಮಗನೇ, ನನಗೆ ತಿಳಿಯಿತು. ಅವನು ಸಹ ಜನಾಂಗವಾಗುವದಲ್ಲದೆ ಅವನು ದೊಡ್ಡವನಾ ಗುವನು. ಆದಾಗ್ಯೂ ಅವನ ತಮ್ಮನು ನಿಶ್ಚಯವಾಗಿ ಅವನಿಗಿಂತ ದೊಡ್ಡವನಾಗುವನು. ಅವನ ಸಂತ ತಿಯು ಜನಾಂಗಗಳ ಸಮೂಹವಾಗುವದು ಅಂದನು.
- Genesis 25:1–18 ಆದಿಕಾಂಡ 25:1–18ತರುವಾಯ ಅಬ್ರಹಾಮನು ಇನ್ನೊಬ್ಬ ಹೆಂಡತಿಯನ್ನು ಮಾಡಿಕೊಂಡನು. ಅವಳ ಹೆಸರು ಕೆಟೂರಳು. ಆಕೆಯು ಅವನಿಗೆ ಜಿಮ್ರಾನ್ ಯೊಕ್ಷಾನ್ ಮೆದಾನ್ ಮಿದ್ಯಾನ್ ಇಷ್ಬಾಕ್ ಶೂಹ ಎಂಬವರನ್ನು ಹೆತ್ತಳು. ಯೊಕ್ಷಾನನಿಂದ ಶೆಬಾ ದೆದಾನ್ ಹುಟ್ಟಿದರು. ದೆದಾನನ ಕುಮಾರರು ಅಶ್ಶೂರ್ಯರೂ ಲೆಟೂಶ್ಯರೂ ಲೆಯುಮ್ಯರೂ. ಮಿದ್ಯಾನನ ಕುಮಾರರು ಏಫನೂ ಏಫರನೂ ಹನೋಕನೂ ಅಬೀದನೂ ಎಲ್ದಾವನೂ, ಇವರೆಲ್ಲಾ ಕೆಟೂರಳ ಮಕ್ಕಳು. ಆದರೆ ಅಬ್ರಹಾಮನು ತನಗಿದ್ದದ್ದನ್ನೆಲ್ಲಾ ಇಸಾಕ ನಿಗೆ ಕೊಟ್ಟನು. ಅಬ್ರಹಾಮನಿಗೆ ಇದ್ದ ಉಪಪತ್ನಿಗಳ ಮಕ್ಕಳಿಗೆ ಅಬ್ರಹಾಮನು ದಾನಗಳನ್ನು ಕೊಟ್ಟು ತಾನು ಜೀವಿಸುತ್ತಿರುವಾಗಲೇ ಅವರನ್ನು ತನ್ನ ಮಗನಾದ ಇಸಾಕನ ಬಳಿಯಿಂದ ಪೂರ್ವದಿಕ್ಕಿನ ಕಡೆಗೆ ಮೂಡಣ ದೇಶಕ್ಕೆ ಕಳುಹಿಸಿದನು. ಅಬ್ರಹಾಮನು ಜೀವಿಸಿದ ದಿವಸಗಳು ಒಟ್ಟು ನೂರೆಪ್ಪತ್ತೈದು ವರುಷಗಳು. ಅಬ್ರಹಾಮನು ಪ್ರಾಣ ಬಿಟ್ಟನು. ಅವನು ಪೂರ್ಣಾಯುಷ್ಯನಾಗಿ ತುಂಬಾ ಮುದುಕನಾಗಿದ್ದು ಸತ್ತು ತನ್ನ ಜನರೊಂದಿಗೆ ಸೇರಿಸ ಲ್ಪಟ್ಟನು. ಅವನ ಕುಮಾರರಾದ ಇಸಾಕನೂ ಇಷ್ಮಾಯೇಲನೂ ಮಮ್ರೆಗೆ ಎದುರಾಗಿರುವ ಹಿತ್ತಿಯ ನಾದ ಚೋಹರನ ಮಗನಾದ ಎಫ್ರೋನನ ಹೊಲ ದಲ್ಲಿರುವ ಮಕ್ಪೇಲ ಎಂಬ ಗವಿಯಲ್ಲಿ ಅವನನ್ನು ಹೂಣಿಟ್ಟರು. ಅಬ್ರಹಾಮನು ಹೇತನ ಮಕ್ಕಳಿಂದ ತಕ್ಕೊಂಡ ಹೊಲದಲ್ಲಿ ಅಬ್ರಹಾಮನೂ ಅವನ ಹೆಂಡತಿಯಾದ ಸಾರಳೂ ಹೂಣಿಡಲ್ಪಟ್ಟರು. ಅಬ್ರಹಾಮನು ಸತ್ತನಂತರ ದೇವರು ಅವನ ಮಗನಾದ ಇಸಾಕನನ್ನು ಆಶೀರ್ವದಿಸಿದನು. ಇಸಾ ಕನು ಲಹೈರೋಯಿ ಎಂಬ ಬಾವಿಯ ಬಳಿಯಲ್ಲಿ ವಾಸಿಸಿದನು. ಸಾರಳ ದಾಸಿಯಾದ ಐಗುಪ್ತ್ಯದ ಹಾಗರಳು ಅಬ್ರಹಾಮನಿಗೆ ಹೆತ್ತ ಅಬ್ರಹಾಮನ ಮಗನಾದ ಇಷ್ಮಾಯೇಲನ ವಂಶಾವಳಿಗಳು. ಅವರ ವಂಶಾ ವಳಿಗಳ ಪ್ರಕಾರ ಇಷ್ಮಾಯೇಲನ ಕುಮಾರರ ಹೆಸರು ಗಳು ಇವೇ: ಇಷ್ಮಾಯೇಲನ ಚೊಚ್ಚಲಮಗನು ನೆಬಾಯೋತ್ ಕೇದಾರ್ ಅದ್ಬಯೇಲ್ ಮಿಬ್ಸಾಮ್ ಮಿಷ್ಮಾ ದೂಮಾ ಮಸ್ಸಾ ಹದದ್ ತೇಮಾ ಯಟೂರ್ ನಾಫೀಷ್ ಕೇದ್ಮಾ. ಇವರೇ ಇಷ್ಮಾಯೇಲನ ಕುಮಾರರು; ಇವುಗಳೇ ಅವರ ಗ್ರಾಮಗಳ ಕೋಟೆಗಳ ಪ್ರಕಾರವಾಗಿ ಇರುವ ಅವರ ಹೆಸರುಗಳು. ಅವರು ತಮ್ಮ ಜನಾಂಗಗಳ ಪ್ರಕಾರ ಹನ್ನೆರಡು ಮಂದಿ ಪ್ರಭುಗಳು. ಇಷ್ಮಾಯೇಲನು ಬದುಕಿದ ವರುಷಗಳು ನೂರ ಮೂವತ್ತೇಳು ವರುಷಗಳು; ಅವನು ಪ್ರಾಣಬಿಟ್ಟು ಸತ್ತು ತನ್ನ ಜನರೊಂದಿಗೆ ಸೇರಿಸಲ್ಪಟ್ಟನು. ಇದಲ್ಲದೆ ಅವರು ಹವೀಲ ಮೊದಲುಗೊಂಡು ಅಶ್ಶೂರಿಗೆ ಹೋಗುವ ಮಾರ್ಗದಲ್ಲಿ ಐಗುಪ್ತಕ್ಕೆ ಮುಂದೆ ಇರುವ ಶೂರಿನ ವರೆಗೆ ವಾಸಮಾಡಿದರು. ಅವನು ತನ್ನ ಸಹೋದರರೆಲ್ಲರ ಎದುರಿನಲ್ಲಿಯೇ ಸತ್ತನು.
- Genesis 22:17 ಆದಿಕಾಂಡ 22:17ನಿನ್ನನ್ನು ಆಶೀರ್ವದಿ ಸಿಯೇ ಆಶೀರ್ವದಿಸುವೆನು; ನಿನ್ನ ಸಂತಾನವನ್ನು ಆಕಾಶದ ನಕ್ಷತ್ರಗಳ ಹಾಗೆಯೂ ಸಮುದ್ರದ ತೀರ ದಲ್ಲಿರುವ ಮರಳಿನ ಹಾಗೆಯೂ ಹೆಚ್ಚಿಸೇ ಹೆಚ್ಚಿಸುವೆನು; ನಿನ್ನ ಸಂತಾನವು ತನ್ನ ಶತ್ರುಗಳ ದ್ವಾರವನ್ನು ವಶ ಮಾಡಿಕೊಳ್ಳುವದು.
- Genesis 36:1–43 ಆದಿಕಾಂಡ 36:1–43ಎದೋಮ್ ಎಂಬ ಏಸಾವನ ವಂಶಾವಳಿಗಳು ಇವೇ: ಏಸಾವನು ಕಾನಾನ್ಯರ ಕುಮಾರ್ತೆಯರನ್ನು ಅಂದರೆ ಹಿತ್ತಿಯನಾದ ಏಲೋನನ ಮಗಳಾದ ಆದಾ, ಹಿವ್ವಿಯನಾದ ಸಿಬೆಯೋನನ ಮಗಳಾದ ಅನಾಹಳ ಮಗಳಾಗಿದ್ದ ಒಹೊಲೀಬಾಮ, ಇಷ್ಮಾಯೇಲನ ಮಗಳೂ ನೆಬಾಯೋತನ ಸಹೋ ದರಿಯೂ ಆಗಿದ್ದ ಬಾಸೆಮತ್ ಇವರನ್ನು ತನ್ನ ಹೆಂಡತಿಯರನ್ನಾಗಿ ತಕ್ಕೊಂಡನು. ಆದಾ ಎಂಬಾಕೆಯು ಏಸಾವನಿಗೆ ಎಲೀಫಜನನ್ನು ಹೆತ್ತಳು. ಬಾಸೆಮತಳು ರೆಗೂವೇಲನನ್ನು ಹೆತ್ತಳು. ಒಹೊಲೀಬಾಮಳು ಯೆಗೂಷನನ್ನು ಯಳಾಮನನ್ನು ಕೋರಹನನ್ನು ಹೆತ್ತಳು. ಇವರು ಕಾನಾನ್ ದೇಶದಲ್ಲಿ ಏಸಾವನಿಗೆ ಹುಟ್ಟಿದ ಕುಮಾರರು. ತರುವಾಯ ಏಸಾವನು ತನ್ನ ಹೆಂಡತಿಯರನ್ನೂ ಕುಮಾರ ಕುಮಾರ್ತೆಯರನ್ನೂ ತನ್ನ ಮನೆಯಲ್ಲಿದ್ದ ಎಲ್ಲಾ ಮನುಷ್ಯರನ್ನೂ ತನ್ನ ಹಿಂಡುಗಳನ್ನೂ ತನ್ನ ಎಲ್ಲಾ ದನಗಳನ್ನೂ ಕಾನಾನ್ ದೇಶದಲ್ಲಿ ತಾನು ಸಂಪಾದಿಸಿದ್ದ ಎಲ್ಲಾ ಸಂಪತ್ತನ್ನೂ ತೆಗೆದುಕೊಂಡು ತನ್ನ ಸಹೋದರನಾದ ಯಾಕೋಬನ ಎದುರಿನಿಂದ ಮತ್ತೊಂದು ದೇಶಕ್ಕೆ ಹೋದನು. ಅವರು ಕೂಡಿ ಇರುವದಕ್ಕೆ ಆಗದಷ್ಟು ಅವರ ಸಂಪತ್ತು ಅಭಿವೃದ್ಧಿ ಯಾಗಿತ್ತು. ಅವರ ಹಿಂಡುಗಳಿಗೋಸ್ಕರ ಅವರು ಪ್ರವಾಸವಾಗಿದ್ದ ದೇಶವು ಅವರಿಗೆ ಸಾಲದೆ ಹೋಯಿತು. ಹೀಗೆ ಏಸಾವನು ಸೇಯಾರ್ ಪರ್ವತದಲ್ಲಿ ವಾಸವಾಗಿದ್ದನು. ಏಸಾವನೇ ಎದೋಮನು. ಸೇಯಾರ್ ಪರ್ವತದಲ್ಲಿರುವ ಎದೋಮ್ಯರ ತಂದೆಯಾದ ಏಸಾವನ ವಂಶಾವಳಿಗಳು ಇವೇ: ಏಸಾವನ ಕುಮಾರರ ಹೆಸರುಗಳು ಯಾವವಂದರೆ: ಏಸಾವನ ಹೆಂಡತಿಯಾಗಿರುವ ಆದಾಳ ಮಗನಾಗಿರುವ ಎಲೀಫಜನು, ಏಸಾವನ ಹೆಂಡತಿಯಾದ ಬಾಸೆಮತಳ ಮಗನಾದ ರೆಗೂವೇಲನು. ಎಲೀಫಜನ ಮಕ್ಕಳು ಯಾರಂದರೆ: ತೇಮಾನ್ ಓಮಾರ್ ಚೆಫೋ ಗತಾಮ್ ಕೆನಜ್; ತಿಮ್ನಳು ಏಸಾವನ ಮಗನಾದ ಎಲೀಫಜನಿಗೆ ಉಪಪತ್ನಿ ಯಾಗಿದ್ದು ಅಮಾಲೇಕನನ್ನು ಹೆತ್ತಳು. ಏಸಾವನ ಹೆಂಡತಿಯಾಗಿದ್ದ ಆದಾಳ ಕುಮಾರರು ಇವರೇ. ರೆಗೂವೇಲನ ಮಕ್ಕಳು ಯಾರಂದರೆ: ನಹತ್ ಜೆರಹ ಶಮ್ಮಾ ಮಿಜ್ಜಾ; ಇವರು ಏಸಾವನ ಹೆಂಡತಿ ಯಾದ ಬಾಸೆಮತಳ ಕುಮಾರರು. ಏಸಾವನ ಹೆಂಡತಿಯಾಗಿದ್ದ ಸಿಬೆಯೋನನ ಮಗಳಾಗಿರುವ ಅನಾಹಳ ಮಗಳಾದ ಒಹೊಲೀ ಬಾಮಳ ಕುಮಾರರು ಯಾರಂದರೆ: ಆಕೆಯು ಏಸಾವನಿಗೆ ಯೆಗೂಷನನ್ನು ಯಳಾಮನನ್ನು ಕೋರಹನನ್ನು ಹೆತ್ತಳು. ಏಸಾವನ ಕುಮಾರರ ಮುಖಂಡರು ಯಾರಂದರೆ: ಏಸಾವನ ಚೊಚ್ಚಲ ಮಗನಾಗಿರುವ ಎಲೀಫಜನ ಮಕ್ಕಳಾದ ತೇಮಾನ್ ಓಮಾರ್ ಚೆಫೋ ಕೆನಜ್ ಕೋರಹ ಗತಾಮ್ ಅಮಾಲೇಕ್ ಎದೋಮ್ಯ ದೇಶದಲ್ಲಿದ್ದ ಎಲೀಫಜನಿಂದ ಬಂದ ಮುಖಂಡರು ಇವರೇ. ಇವರು ಆದಾಳ ಕುಮಾರರು. ಏಸಾವನ ಮಗನಾದ ರೆಗೂವೇಲನ ಕುಮಾರರು ಯಾರಂದರೆ: ನಹತ್, ಜೆರಹ, ಶಮ್ಮಾ, ಮಿಜ್ಜಾ; ಎದೋಮ್ ದೇಶದಲ್ಲಿದ್ದ ರೆಗೂವೇಲನಿಂದ ಬಂದ ಮುಖಂಡರು ಇವರೇ. ಇವರು ಏಸಾವನ ಹೆಂಡತಿ ಯಾದ ಬಾಸೆಮತಳ ಕುಮಾರರು. ಏಸಾವನ ಹೆಂಡತಿಯಾದ ಒಹೊಲೀಬಾಮಳ ಕುಮಾರರ ಮುಖಂಡರು ಯಾರಂದರೆ: ಯೆಗೂಷ ಯಳಾಮ ಕೋರಹ ಇವರೇ. ಏಸಾವನ ಹೆಂಡತಿ ಯಾದ ಅನಾಹಳ ಮಗಳಾದ ಒಹೊಲೀಬಾಮಳಿಂದ ಬಂದ ಮುಖಂಡರು. ಇವರು ಎದೋಮ್ ಎಂಬ ಏಸಾವನ ಕುಮಾರರು; ಇವರೇ ಅವರ ಮುಖಂಡರು. ಹೋರಿಯನಾದ ಸೇಯಾರನ ಕುಮಾರರೂ ದೇಶದ ನಿವಾಸಿಗಳೂ ಯಾರಂದರೆ: ಲೋಟಾನ್ ಶೋಬಾಲ್ ಸಿಬೆಯೋನ್ ಅನಾಹ ದೀಶೋನ್ ಏಚೆರ್ ದೀಶಾನ್ ಇವರು ಎದೋಮ್ ದೇಶದಲ್ಲಿದ್ದ ಸೇಯಾರನ ಮಕ್ಕಳಾದ ಹೋರಿಯರ ಮುಖಂಡರು. ಲೋಟಾನನ ಕುಮಾರರು ಯಾರಂದರೆ: ಹೋರಿ ಹೇಮಾಮ್ ಲೋಟಾನನ ಸಹೋದರಿ ಯಾದ ತಿಮ್ನಾ. ಶೋಬಾಲನ ಮಕ್ಕಳು ಯಾರಂದರೆ: ಅಲ್ವಾನ್ ಮಾನಹತ್ ಗೇಬಾಲ್ ಶೆಫೋ ಮತ್ತು ಓನಾಮ್. ಸಿಬೆಯೋನನ ಮಕ್ಕಳು ಯಾರಂದರೆ: ಅಯ್ಯಾ ಮತ್ತು ಅನಾಹ ಎಂಬವರು. ತನ್ನ ತಂದೆಯಾದ ಸಿಬೆಯೋನನ ಕತ್ತೆಗಳನ್ನು ಕಾಯುವಾಗ ಅರಣ್ಯದಲ್ಲಿ ಹೇಸರಕತ್ತೆಗಳನ್ನು ಕಂಡುಕೊಂಡವನು ಈ ಅನಾಹನೇ. ಅನಾಹನ ಮಕ್ಕಳು ಯಾರಂದರೆ: ದೀಶೋನ್ ಮತ್ತು ಅನಾಹನ ಮಗಳಾದ ಒಹೊಲೀಬಾಮಳು. ದೀಶೋನನ ಮಕ್ಕಳು ಯಾರಂದರೆ: ಹೆಮ್ದಾನ್ ಎಷ್ಬಾನ್ ಇತ್ರಾನ್ ಕೆರಾನ್. ಏಚೆರನ ಮಕ್ಕಳು ಯಾರಂದರೆ: ಬಿಲ್ಹಾನ್ ಜಾವಾನ್ ಆಕಾನ್. ದೀಶಾನನ ಮಕ್ಕಳು ಯಾರಂದರೆ: ಊಚ್ ಅರಾನ್. ಹೋರಿಯರಿಂದ ಬಂದ ಮುಖಂಡರು ಯಾರಂದರೆ: ಲೋಟಾನ್ ಶೋಬಾಲ್ ಸಿಬೆಯೋನ್ ಅನಾಹ. ದೀಶೋನ್ ಏಚೆರ್ ದೀಶಾನ್ ಇವರೇ. ಇವರು ಸೇಯಾರ್ ದೇಶದಲ್ಲಿ ಮುಖಂಡರಾಗಿದ್ದ ಹೋರಿಯರಿಂದ ಬಂದ ಮುಖಂಡರು. ಇಸ್ರಾಯೇಲ್ ಮಕ್ಕಳನ್ನು ಯಾವ ಅರಸನೂ ಆಳುವದಕ್ಕಿಂತ ಮುಂಚೆ ಎದೋಮ್ ದೇಶದಲ್ಲಿ ಆಳಿದ ಅರಸರು ಇವರೇ. ಎದೋಮಿನಲ್ಲಿ ಬೆಯೋರನ ಮಗನಾದ ಬೆಲಗನು ಆಳಿದನು; ಅವನ ಪಟ್ಟಣದ ಹೆಸರು ದಿನ್ಹಾಬಾ. ಬೆಲಗನು ಸತ್ತ ಮೇಲೆ ಅವನ ಬದಲಾಗಿ ಬೊಚ್ರದವನಾದ ಜೆರಹನ ಮಗನಾದ ಯೋಬಾಬನು ಆಳಿದನು. ಯೋಬಾ ಬನು ಸತ್ತ ಮೇಲೆ ಅವನ ಬದಲಾಗಿ ತೇಮಾನೀಯ ದೇಶದ ಹುಷಾಮನು ಆಳಿದನು. ಹುಷಾಮನು ಸತ್ತ ಮೇಲೆ ಅವನ ಬದಲಾಗಿ ಮೋವಾಬ್ಯರ ಹೊಲದಲ್ಲಿ ಮಿದ್ಯಾನರನ್ನು ಹೊಡೆದ ಬೆದದನ ಮಗನಾದ ಹದದನು ಆಳಿದನು. ಅವನ ಪಟ್ಟಣದ ಹೆಸರು ಅವೀತ್. ಹದದನು ಸತ್ತಾಗ ಅವನ ಬದಲಾಗಿ ಮಸ್ರೇಕದವನಾದ ಸಮ್ಲಾಹನು ಆಳಿದನು. ಸಮ್ಲಾಹನು ಸತ್ತ ಮೇಲೆ ಅವನ ಬದಲಾಗಿ ನದಿಯ ಬಳಿಯಲ್ಲಿದ್ದ ರೆಹೋಬೋತೂರಿನವನಾದ ಸೌಲನು ಆಳಿದನು. ಸೌಲನು ಸತ್ತ ಮೇಲೆ ಅವನ ಬದಲಾಗಿ ಅಕ್ಬೋರನ ಮಗನಾದ ಬಾಳ್ಹಾನಾ ನನು ಆಳಿದನು. ಅಕ್ಬೋರನ ಮಗನಾದ ಬಾಳ್ಹಾನಾ ನನು ಸತ್ತ ಮೇಲೆ ಅವನ ಬದಲಾಗಿ ಹದರನು ಆಳಿದನು. ಅವನ ಪಟ್ಟಣದ ಹೆಸರು ಪಾಗು. ಅವನ ಹೆಂಡತಿಯ ಹೆಸರು ಮಹೇಟಬೇಲ್; ಈಕೆಯು ಮೇಜಾಹಾಬನ ಮಗಳಾದ ಮಟ್ರೇದಳ ಮಗಳು. ಕುಟುಂಬ ಸ್ಥಳ ಮತ್ತು ಹೆಸರುಗಳ ಪ್ರಕಾರವಾಗಿ ಏಸಾವನ ಮುಖಂಡರ ಹೆಸರುಗಳು ಯಾವವಂದರೆ: ತಿಮ್ನಾ ಅಲ್ವಾ ಯೆತೇತ. ಒಹೋಲೀಬಾಮ ಏಲಾ ಪೀನೋನ್. ಕೆನಜ್ ತೇಮಾನ್ ಮಿಪ್ಚಾರಮಗ್ದೀಯೇಲ್ ಗೀರಾಮ್. ತಮ್ಮ ಸ್ವಾಸ್ಥ್ಯದ ದೇಶದಲ್ಲಿ ವಾಸವಾಗಿದ್ದ ಪ್ರಕಾರ ಎದೋಮ್ಯರ ಮುಖಂಡರು ಇವರೇ. ಎದೋಮ್ಯರ ತಂದೆಯಾದ ಏಸಾವನು ಇವನೇ. ಮಗ್ದೀಯೇಲ್ ಗೀರಾಮ್. ತಮ್ಮ ಸ್ವಾಸ್ಥ್ಯದ ದೇಶದಲ್ಲಿ ವಾಸವಾಗಿದ್ದ ಪ್ರಕಾರ ಎದೋಮ್ಯರ ಮುಖಂಡರು ಇವರೇ. ಎದೋಮ್ಯರ ತಂದೆಯಾದ ಏಸಾವನು ಇವನೇ.
- Genesis 32:12 ಆದಿಕಾಂಡ 32:12ನಾನು --ನಿನಗೆ ಖಂಡಿತ ವಾಗಿ ಒಳ್ಳೆಯದನ್ನು ಮಾಡುವೆನು, ನಿನ್ನ ಸಂತತಿಯನ್ನು ಎಣಿಸುವದಕ್ಕಾಗದ ಸಮುದ್ರದ ಮರಳಿನ ಹಾಗೆ ಮಾಡುವೆನು ಎಂದು ಹೇಳಿದಿಯಲ್ಲಾ ಎಂದು ಬೇಡಿಕೊಂಡನು.
- Genesis 16:10 ಆದಿಕಾಂಡ 16:10ಇದಲ್ಲದೆ ಕರ್ತನ ದೂತನು ಅವಳಿಗೆ--ನಿನ್ನ ಸಂತತಿಯನ್ನು ಬಹಳವಾಗಿ ಹೆಚ್ಚಿಸುವೆನು; ಅದು ಹೆಚ್ಚಾಗುವದರಿಂದ ಅದನ್ನು ಲೆಕ್ಕಿಸುವದಕ್ಕಾಗುವದಿಲ್ಲ ಅಂದನು.
- Numbers 1:1–54 ಅರಣ್ಯಕಾಂಡ 1:1–54ಅವರು ಐಗುಪ್ತದೇಶದಿಂದ ಹೊರಟ ಎರಡನೆಯ ವರುಷದ ಎರಡನೆಯ ತಿಂಗಳಿನ ಮೊದಲನೆಯ ದಿವಸದಲ್ಲಿ ಕರ್ತನು ಸೀನಾಯಿ ಅರಣ್ಯದಲ್ಲಿ ಸಭೆಯ ಗುಡಾರದೊಳಗೆ ಮೋಶೆಯ ಸಂಗಡ ಮಾತನಾಡಿ-- ಇಸ್ರಾಯೇಲ್ ಮಕ್ಕಳ ಸಮಸ್ತ ಸಭೆಯ ಲೆಕ್ಕವನ್ನು ಅವರ ಕುಟುಂಬಗಳ ಪ್ರಕಾರವಾಗಿಯೂ ಅವರ ತಂದೆಗಳ ಮನೆಗಳ ಪ್ರಕಾರ ವಾಗಿಯೂ ಗಂಡಸರೆಲ್ಲರ ಹೆಸರುಗಳ ಎಣಿಕೆಯೊಂದಿಗೆ ತಲೆ ತಲೆಗೂ ನೀವು ತಕ್ಕೊಳ್ಳಿರಿ. ಇಸ್ರಾಯೇಲಿನಲ್ಲಿ ಯುದ್ಧಕ್ಕೆ ಹೊರಡುವವರೆಲ್ಲರನ್ನು ಅಂದರೆ ಇಪ್ಪತ್ತು ವರುಷದವರನ್ನೂ ಅದಕ್ಕೆ ಹೆಚ್ಚಾದ ಪ್ರಾಯವುಳ್ಳವ ರನ್ನೂ ಅವರ ಸೈನ್ಯಗಳ ಪ್ರಕಾರ ನೀನೂ ಆರೋನನೂ ಲೆಕ್ಕಮಾಡಿರಿ. ತನ್ನ ತಂದೆಯ ಮನೆಗೆ ಮುಖ್ಯಸ್ಥನಾದ ಪ್ರತಿಯೊಬ್ಬನು ಒಂದೊಂದು ಗೋತ್ರಕ್ಕೋಸ್ಕರ ನಿಮ್ಮ ಸಂಗಡ ಇರಲಿ. ನಿಮ್ಮ ಸಂಗಡ ನಿಲ್ಲಬೇಕಾದ ಮನುಷ್ಯರ ಹೆಸರುಗಳು ಇವೇ: ರೂಬೇನ್ ಗೋತ್ರ ದಿಂದ ಶೆದೇಯೂರನ ಮಗನಾದ ಎಲೀಚೂರ್, ಸಿಮೆಯೋನ್ ಗೋತ್ರದಿಂದ ಚೂರೀಷದ್ದೈಯನ ಮಗನಾದ ಶೆಲುವಿಾಯೇಲ್, ಯೆಹೂದ ಗೋತ್ರ ದಿಂದ ಅವ್ಮೆಾನಾದಾಬನ ಮಗನಾದ ನಹಶೋನ್, ಇಸ್ಸಾಕಾರ್ ಗೋತ್ರದಿಂದ ಚೂವಾರನ ಮಗನಾದ ನೆತನೇಲ್, ಜೆಬುಲೂನ್ ಗೋತ್ರದಿಂದ ಹೇಲೋ ನನ ಮಗನಾದ ಎಲೀಯಾಬ್, ಯೋಸೇಫನ ಮಕ್ಕಳ ಗೋತ್ರದಲ್ಲಿ ಎಫ್ರಾಯಾಮ್ನಿಂದ ಅವ್ಮೆಾ ಹೂದನ ಮಗನಾದ ಎಲೀಷಾಮಾ, ಮನಸ್ಸೆ ಗೋತ್ರ ದಿಂದ ಪೆದಾಚೂರನ ಮಗನಾದ ಗವ್ಲೆಾಯೇಲ್, ಬೆನ್ಯಾವಿಾನ್ ಗೋತ್ರದಿಂದ ಗಿದ್ಯೋನಿಯ ಮಗ ನಾದ ಅಬೀದಾನ್, ದಾನ್ ಗೋತ್ರದಿಂದ ಅವ್ಮೆಾಷದ್ದೈಯ ಮಗನಾದ ಅಹೀಗೆಜೆರ್, ಆಶೇರ್ ಗೋತ್ರದಿಂದ ಒಕ್ರಾನನ ಮಗನಾದ ಪಗೀಯೆಲ್, ಗಾದ್ ಗೋತ್ರದಿಂದ ರೆಗೂವೇಲನ ಮಗನಾದ ಎಲ್ಯಾಸಾಫ್. ನಫ್ತಾಲಿ ಗೋತ್ರದಿಂದ ಏನಾನನ ಮಗನಾದ ಅಹೀರನು, ಸಭೆಯವರಲ್ಲಿ ಪ್ರಸಿದ್ಧವಾದವರೂ ತಮ್ಮ ತಂದೆಗಳ ಗೋತ್ರಗಳ ಪ್ರಭುಗಳೂ ಇಸ್ರಾಯೇಲಿನಲ್ಲಿ ಸಹಸ್ರಗಳ ಮುಖ್ಯ ಸ್ಥರೂ ಇವರೇ. ಹೆಸರುಗಳು ಹೇಳಲ್ಪಟ್ಟ ಈ ಮನುಷ್ಯರನ್ನು ಮೋಶೆ ಆರೋನರು ತಕ್ಕೊಂಡರು. ಸಮಸ್ತ ಸಭೆಯನ್ನು ಎರಡನೇ ತಿಂಗಳಿನ ಮೊದಲನೇ ದಿವಸದಲ್ಲಿ ಕೂಡಿಸಿದರು; ಅವರು ತಮ್ಮ ಗೋತ್ರಗಳಿಗನುಸಾರ ವಾಗಿ ತಂದೆಗಳ ಮನೆಯ ಪ್ರಕಾರ ಹೆಸರುಗಳ ಲೆಕ್ಕವಿರುವ ಇಪ್ಪತ್ತು ವರುಷ ಮೊದಲುಗೊಂಡು ಹೆಚ್ಚಾದ ಪ್ರಾಯವುಳ್ಳವರು ತಲೆ ತಲೆಯಾಗಿ ಜನ್ಮಪತ್ರಿಕೆ ಬರೆಸಿಕೊಂಡರು. ಕರ್ತನು ಮೋಶೆಗೆ ಆಜ್ಞಾಪಿಸಿದ ಹಾಗೆಯೇ ಅವನು ಸೀನಾಯಿ ಅರಣ್ಯದಲ್ಲಿ ಅವರನ್ನು ಲೆಕ್ಕಮಾಡಿದನು. ಇಸ್ರಾಯೇಲಿನ ಹಿರೀಮಗನಾದ ರೂಬೇನನ ಮಕ್ಕಳು, ಅವರ ಸಂತತಿಗಳ ಪ್ರಕಾರವಾಗಿಯೂ ಕುಟುಂಬಗಳ ಪ್ರಕಾರವಾಗಿಯೂ ತಂದೆಗಳ ಮನೆಯ ಪ್ರಕಾರವಾಗಿಯೂ ವಂಶಾವಳಿಯ ಹೆಸರುಗಳ ಲೆಕ್ಕ ದಿಂದ ಇಪ್ಪತ್ತು ವರುಷ ಮೊದಲುಗೊಂಡು ಹೆಚ್ಚಾದ ಪ್ರಾಯವುಳ್ಳವರು ಯುದ್ಧಕ್ಕೆ ಹೋಗಲು ಶಕ್ತರಾದ ಗಂಡಸರೆಲ್ಲರು ತಲೆ ತಲೆಯಾಗಿ ರೂಬೇನನ ಗೋತ್ರದಲ್ಲಿ ಎಣಿಸಲ್ಪಟ್ಟವರು ನಲವತ್ತಾರು ಸಾವಿರದ ಐದು ನೂರು. ಸಿಮೆಯೋನನ ಮಕ್ಕಳು, ಅವರ ಗೋತ್ರಗಳ ಪ್ರಕಾರವಾಗಿಯೂ ತಂದೆಗಳ ಮನೆಯ ಪ್ರಕಾರ ವಾಗಿಯೂ ವಂಶಾವಳಿಯ ಹೆಸರುಗಳ ಲೆಕ್ಕದಿಂದ ಇಪ್ಪತ್ತು ವರುಷ ಮೊದಲುಗೊಂಡು ಮೇಲ್ಪಟ್ಟ ಪ್ರಾಯವುಳ್ಳವರು ಯುದ್ಧಕ್ಕೆ ಹೊರಡಲು ಶಕ್ತರಾದ ಗಂಡಸರೆಲ್ಲರು ಸಿಮೆಯೋನನ ಗೋತ್ರದಲ್ಲಿ ಎಣಿಸಲ್ಪಟ್ಟವರು ಐವತ್ತೊಂಭತ್ತು ಸಾವಿರದ ಮುನ್ನೂರು. ಗಾದನ ಮಕ್ಕಳು, ಅವರ ಗೋತ್ರಗಳ ಪ್ರಕಾರ ವಾಗಿಯೂ ತಂದೆಗಳ ಮನೆಯ ಪ್ರಕಾರವಾಗಿಯೂ ವಂಶಾವಳಿಯ ಹೆಸರುಗಳ ಲೆಕ್ಕದಿಂದ ಇಪ್ಪತ್ತು ವರುಷ ಮೊದಲುಗೊಂಡು ಮೇಲ್ಪಟ್ಟ ಪ್ರಾಯವುಳ್ಳವರು ಯುದ್ಧಕ್ಕೆ ಹೊರಡಲು ಶಕ್ತರಾದವರೆಲ್ಲರು ಗಾದನ ಗೋತ್ರದಲ್ಲಿ ಎಣಿಸಲ್ಪಟ್ಟವರು ನಲವತ್ತೈದು ಸಾವಿರದ ಆರುನೂರ ಐವತ್ತು. ಯೂದನ ಮಕ್ಕಳು, ಅವರ ಗೋತ್ರಗಳ ಪ್ರಕಾರ ವಾಗಿಯೂ ತಂದೆಗಳ ಮನೆಯ ಪ್ರಕಾರವಾಗಿಯೂ ವಂಶಾವಳಿಯ ಹೆಸರುಗಳ ಲೆಕ್ಕದಿಂದ ಇಪ್ಪತ್ತು ವರುಷ ಮೊದಲುಗೊಂಡು ಮೇಲ್ಪಟ್ಟ ಪ್ರಾಯವುಳ್ಳವರು ಯುದ್ಧಕ್ಕೆ ಹೊರಡಲು ಶಕ್ತರಾದವರೆಲ್ಲರು ಯೆಹೂ ದನ ಗೋತ್ರದಲ್ಲಿ ಎಣಿಸಲ್ಪಟ್ಟವರು ಎಪ್ಪತ್ತನಾಲ್ಕು ಸಾವಿರದ ಆರುನೂರು. ಇಸ್ಸಾಕಾರನ ಮಕ್ಕಳು, ಅವರ ಗೋತ್ರಗಳ ಪ್ರಕಾರವಾಗಿಯೂ ತಂದೆಗಳ ಮನೆಯ ಪ್ರಕಾರ ವಾಗಿಯೂ ವಂಶಾವಳಿಯ ಹೆಸರುಗಳ ಲೆಕ್ಕದಿಂದ ಇಪ್ಪತ್ತು ವರುಷ ಮೊದಲುಗೊಂಡು ಮೇಲ್ಪಟ್ಟ ಪ್ರಾಯ ವುಳ್ಳವರು ಯುದ್ಧಕ್ಕೆ ಹೊರಡಲು ಶಕ್ತರಾದವರೆಲ್ಲರು ಇಸ್ಸಾಕಾರನ ಗೋತ್ರದಲ್ಲಿ ಎಣಿಸಲ್ಪಟ್ಟವರು ಐವತ್ತ ನಾಲ್ಕು ಸಾವಿರದ ನಾಲ್ಕುನೂರು. ಜೆಬುಲೂನನ ಮಕ್ಕಳು, ಅವರ ಗೋತ್ರಗಳ ಪ್ರಕಾರವಾಗಿಯೂ ತಂದೆಗಳ ಮನೆಯ ಪ್ರಕಾರ ವಾಗಿಯೂ ವಂಶಾವಳಿಯ ಹೆಸರುಗಳ ಲೆಕ್ಕದಿಂದ ಇಪ್ಪತ್ತು ವರುಷ ಮೊದಲುಗೊಂಡು ಮೇಲ್ಪಟ್ಟ ಪ್ರಾಯ ವುಳ್ಳವರು ಯುದ್ದಕ್ಕೆ ಹೊರಡಲು ಶಕ್ತರಾದವರೆಲ್ಲರು ಜೆಬುಲೂನ್ ಗೋತ್ರದಲ್ಲಿ ಎಣಿಸಲ್ಪಟ್ಟವರು ಐವತ್ತೇಳು ಸಾವಿರದ ನಾಲ್ಕುನೂರು. ಯೋಸೇಫನ ಮಕ್ಕಳಾದ ಎಫ್ರಾಯಾಮ್ ಮಕ್ಕಳು, ಅವರ ಗೋತ್ರಗಳ ಪ್ರಕಾರವಾಗಿಯೂ ತಂದೆಗಳ ಮನೆಯ ಪ್ರಕಾರವಾಗಿಯೂ ವಂಶಾವಳಿಯ ಹೆಸರುಗಳ ಲೆಕ್ಕದಿಂದ ಇಪ್ಪತ್ತು ವರುಷ ಮೊದಲು ಗೊಂಡು ಮೇಲ್ಪಟ್ಟ ಪ್ರಾಯವುಳ್ಳವರು ಯುದ್ಧಕ್ಕೆ ಹೊರಡಲು ಶಕ್ತರಾದವರೆಲ್ಲರು ಎಫ್ರಾಯಾಮ್ನ ಗೋತ್ರದಲ್ಲಿ ಎಣಿಸಲ್ಪಟ್ಟವರು ನಲವತ್ತು ಸಾವಿರದ ಐದುನೂರು. ಮನಸ್ಸೆಯ ಮಕ್ಕಳು, ಅವರ ಗೋತ್ರಗಳ ಪ್ರಕಾರ ವಾಗಿಯೂ ತಂದೆಗಳ ಮನೆಯ ಪ್ರಕಾರವಾಗಿಯೂ ವಂಶಾವಳಿಯ ಹೆಸರುಗಳ ಲೆಕ್ಕದಿಂದ ಇಪ್ಪತ್ತು ವರುಷ ಮೊದಲುಗೊಂಡು ಮೇಲ್ಪಟ್ಟ ಪ್ರಾಯವುಳ್ಳವರು ಯುದ್ಧಕ್ಕೆ ಹೊರಡಲು ಶಕ್ಕರಾದವರೆಲ್ಲರೂ ಮನ ಸ್ಸೆಯ ಗೋತ್ರದಲ್ಲಿ ಎಣಿಸಲ್ಪಟ್ಟವರು ಮೂವತ್ತೆರಡು ಸಾವಿರದ ಇನ್ನೂರು. ಬೆನ್ಯಾವಿಾನ್ ಮಕ್ಕಳು, ಅವರ ಗೋತ್ರಗಳ ಪ್ರಕಾರವಾಗಿಯೂ ತಂದೆಗಳ ಮನೆಯ ಪ್ರಕಾರ ವಾಗಿಯೂ ವಂಶಾವಳಿಯ ಹೆಸರುಗಳ ಲೆಕ್ಕದಿಂದ ಇಪ್ಪತ್ತು ವರುಷ ಮೊದಲುಗೊಂಡು ಮೇಲ್ಪಟ್ಟ ಪ್ರಾಯ ವುಳ್ಳವರು ಯುದ್ಧಕ್ಕೆ ಹೊರಡಲು ಶಕ್ತರಾದವರೆಲ್ಲರು ಬೆನ್ಯಾವಿಾನ್ ಗೋತ್ರದಲ್ಲಿ ಎಣಿಸಲ್ಪಟ್ಟವರು ಮೂವತ್ತೈದು ಸಾವಿರದ ನಾಲ್ಕುನೂರು. ದಾನನ ಮಕ್ಕಳು, ಅವರ ಗೋತ್ರಗಳ ಪ್ರಕಾರ ವಾಗಿಯೂ ತಂದೆಗಳ ಮನೆಯ ಪ್ರಕಾರವಾಗಿಯೂ ವಂಶಾವಳಿಯ ಹೆಸರುಗಳ ಲೆಕ್ಕದಿಂದ ಇಪ್ಪತ್ತು ವರುಷ ಮೊದಲುಗೊಂಡು ಮೇಲ್ಪಟ್ಟ ಪ್ರಾಯವುಳ್ಳವರು ಯುದ್ಧಕ್ಕೆ ಹೊರಡಲು ಶಕ್ತರಾದವರೆಲ್ಲರು ದಾನನ ಗೋತ್ರದಲ್ಲಿ ಎಣಿಸಲ್ಪ ಟ್ಟವರು ಅರವತ್ತೆರಡು ಸಾವಿರದ ಏಳುನೂರು. ಆಶೇರನ ಮಕ್ಕಳು, ಅವರ ಗೋತ್ರಗಳ ಪ್ರಕಾರ ವಾಗಿಯೂ ತಂದೆಗಳ ಮನೆಯ ಪ್ರಕಾರವಾಗಿಯೂ ವಂಶಾವಳಿಯ ಹೆಸರುಗಳ ಲೆಕ್ಕದಿಂದ ಇಪ್ಪತ್ತು ವರುಷ ಮೊದಲುಗೊಂಡು ಮೇಲ್ಪಟ್ಟ ಪ್ರಾಯವುಳ್ಳವರು ಯುದ್ಧಕ್ಕೆ ಹೊರಡಲು ಶಕ್ತರಾದವರೆಲ್ಲರು ಆಶೇರನ ಗೋತ್ರದಲ್ಲಿ ಎಣಿಸಲ್ಪಟ್ಟವರು ನಲವತ್ತೊಂದು ಸಾವಿರದ ಐದುನೂರು. ನಫ್ತಾಲಿನ ಮಕ್ಕಳು, ಅವರ ಗೋತ್ರಗಳ ಪ್ರಕಾರ ವಾಗಿಯೂ ತಂದೆಗಳ ಮನೆಯ ಪ್ರಕಾರವಾಗಿಯೂ ವಂಶಾವಳಿಯ ಹೆಸರುಗಳ ಲೆಕ್ಕದಿಂದ ಇಪ್ಪತ್ತು ವರುಷ ಮೊದಲುಗೊಂಡು ಮೇಲ್ಪಟ್ಟ ಪ್ರಾಯವುಳ್ಳವರು ಯುದ್ಧಕ್ಕೆ ಹೊರಡಲು ಶಕ್ತರಾದವರೆಲ್ಲರು ನಫ್ತಾಲಿನ ಗೋತ್ರದಲ್ಲಿ ಎಣಿಸಲ್ಪಟ್ಟವರು ಐವತ್ತಮೂರು ಸಾವಿರದ ನಾಲ್ಕುನೂರು. ಮೋಶೆ ಆರೋನರೂ ಇಸ್ರಾಯೇಲಿನ ಮುಖ್ಯಸ್ಥರೂ ಎಣಿಸಿದವರು ಇವರೇ. ಇವರು ತಮ್ಮ ತಮ್ಮ ತಂದೆಗಳ ಮನೆಗಳಿಗೆ ಒಬ್ಬೊಬ್ಬನಂತೆ ಹನ್ನೆರಡು ಮಂದಿಯಾಗಿದ್ದರು. ಹೀಗೆ ಇಸ್ರಾಯೇಲ್ ಮಕ್ಕಳಲ್ಲಿ ಎಣಿಸಲ್ಪಟ್ಟವ ರೆಲ್ಲರು ಅವರ ತಂದೆಗಳ ಮನೆಗಳ ಪ್ರಕಾರ ಇಪ್ಪತ್ತು ವರುಷದವರೂ ಅದಕ್ಕಿಂತ ಹೆಚ್ಚಾದ ಪ್ರಾಯವುಳ್ಳ ವರೂ ಇಸ್ರಾಯೇಲಿನಲ್ಲಿ ಯುದ್ಧಕ್ಕೆ ಹೊರಡಲು ಶಕ್ತರಾದವರೂ ಆರು ಲಕ್ಷದ ಮೂರು ಸಾವಿರದ ಐದುನೂರ ಐವತ್ತು ಮಂದಿಯಾಗಿದ್ದರು. ಆದರೆ ಲೇವಿಯರು ತಮ್ಮ ತಂದೆಗಳ ಗೋತ್ರದ ಪ್ರಕಾರ ಅವರೊಳಗೆ ಎಣಿಸಲ್ಪಡಲಿಲ್ಲ. ಇದಲ್ಲದೆ ಕರ್ತನು ಮಾತನಾಡಿ ಮೋಶೆಗೆ ಹೇಳಿದ್ದೇನಂದರೆ-- ಲೇವಿ ಗೋತ್ರವನ್ನು ಮಾತ್ರ ಎಣಿಸದೆ ಇಸ್ರಾ ಯೇಲ್ ಮಕ್ಕಳೊಳಗೆ ಅವರ ಲೆಕ್ಕವನ್ನು ತಕ್ಕೊಳ್ಳಬೇಡ. ಆದರೆ ನೀನು ಲೇವಿಯರನ್ನು ಸಾಕ್ಷಿಯ ಗುಡಾರ ಕ್ಕೋಸ್ಕರವೂ ಅದರ ಎಲ್ಲಾ ವಸ್ತುಗಳಿಗೋಸ್ಕರವೂ ಅದಕ್ಕೆ ಬೇಕಾದ ಎಲ್ಲವುಗಳಿಗೋಸ್ಕರವೂ ನೇಮಿಸು. ಅವರು ಗುಡಾರವನ್ನೂ ಅದರ ಎಲ್ಲಾ ವಸ್ತುಗಳನ್ನೂ ಹೊತ್ತುಕೊಳ್ಳುವರು, ಇದರ ಸೇವೆಮಾಡಿ ಗುಡಾರದ ಸುತ್ತಮುತ್ತಲೂ ಇಳಿದುಕೊಳ್ಳಬೇಕು. ಗುಡಾರವು ಹೊರಡುವಾಗ ಲೇವಿಯರು ಅದನ್ನು ಬಿಚ್ಚಲಿ; ಗುಡಾರವು ಇಳಿಯುವಾಗ ಲೇವಿಯರು ಅದನ್ನು ನಿಲ್ಲಿಸಲಿ; ಪರಕೀಯನು ಸವಿಾಪಿಸಿದರೆ ಅವನು ಸಾಯಬೇಕು. ಇಸ್ರಾಯೇಲ್ ಮಕ್ಕಳು ತಮ್ಮ ತಮ್ಮ ಸೈನ್ಯಗಳ ಪ್ರಕಾರ ಒಬ್ಬೊಬ್ಬನು ತನ್ನ ದಂಡಿನ ಬಳಿಯಲ್ಲಿ ತನ್ನ ಧ್ವಜದ ಬಳಿಯಲ್ಲಿ ಇಳಿದುಕೊಳ್ಳಬೇಕು. ಆದರೆ ಲೇವಿಯರು ಸಾಕ್ಷಿಯ ಗುಡಾರದ ಸುತ್ತಲೂ ಇಳಿದು ಕೊಳ್ಳಬೇಕು; ಹೀಗೆ ಇಸ್ರಾಯೇಲ್ ಮಕ್ಕಳ ಸಭೆಯ ಮೇಲೆ ಕೋಪಬಾರದಿರುವದು; ಲೇವಿಯರು ಸಾಕ್ಷಿಯ ಗುಡಾರವನ್ನು ಕಾಯುವವರಾಗಿರಬೇಕು.ಇಸ್ರಾಯೇಲ್ ಮಕ್ಕಳು ಹಾಗೆಯೇ ಮಾಡಿದರು. ಕರ್ತನು ಮೋಶೆಗೆ ಆಜ್ಞಾಪಿಸಿದ ಎಲ್ಲವುಗಳ ಪ್ರಕಾರವೇ ಅವರು ಮಾಡಿದರು. ಇಸ್ರಾಯೇಲ್ ಮಕ್ಕಳು ಹಾಗೆಯೇ ಮಾಡಿದರು. ಕರ್ತನು ಮೋಶೆಗೆ ಆಜ್ಞಾಪಿಸಿದ ಎಲ್ಲವುಗಳ ಪ್ರಕಾರವೇ ಅವರು ಮಾಡಿದರು.