Hebrews · chapter 7 · verse 5
Hebrews 7:5 in Kannada
ನಿಜವಾಗಿ ಲೇವಿಯ ಮಕ್ಕಳಲ್ಲಿ ಯಾಜಕೋದ್ಯೋಗವನ್ನು ಹೊಂದುವವರು ಜನರಿಂದ ಅಂದರೆ ಅಬ್ರಹಾಮನ ವಂಶಸ್ಥರಾಗಿರುವ ತಮ್ಮ ಸಹೋದರರಿಂದಲೇ ದಶಮ ಭಾಗಗಳನ್ನು ತೆಗೆದುಕೊಳ್ಳುವದಕ್ಕೆ ನ್ಯಾಯ ಪ್ರಮಾಣದಲ್ಲಿ ಅಪ್ಪಣೆಯುಂಟು.
Nijavaagi leviya makkalalli yaajakodyogavannu honduvavaru janarinda andare abrahaamana vanshastharaagiruva tamma sahodararindale dashama bhaagagalannu tegedukolluvadakke nyaaya pramaanadalli appaneyuntu.
Hebrews 7:5 in English
- King James Version (KJV)
- And verily they that are of the sons of Levi, who receive the office of the priesthood, have a commandment to take tithes of the people according to the law, that is, of their brethren, though they come out of the loins of Abraham:
- World English Bible (WEB)
- They indeed of the sons of Levi who receive the priest’s office have a commandment to take tithes from the people according to the law, that is, of their brothers, though these have come out of the body of Abraham,
- American Standard Version (ASV)
- And they indeed of the sons of Levi that receive the priest’s office have commandment to take tithes of the people according to the law, that is, of their brethren, though these have come out of the loins of Abraham:
- Bible in Basic English (BBE)
- And it is true that by the law, those of the sons of Levi who have the position of priests may take a tenth part of the people's goods; that is to say, they take it from their brothers though these are the sons of Abraham.
- Darby Translation (DBY)
- And they indeed from among the sons of Levi, who receive the priesthood, have commandment to take tithes from the people according to the law, that is from their brethren, though these are come out of the loins of Abraham:
- Webster's Bible (WBS)
- And verily they that are of the sons of Levi, who receive the office of the priesthood, have a commandment to take tithes from the people according to the law, that is, from their brethren, though they come from the loins of Abraham:
- Young's Literal Translation (YLT)
- and those, indeed, out of the sons of Levi receiving the priesthood, a command have to take tithes from the people according to the law, that is, their brethren, even though they came forth out of the loins of Abraham;
Read in context
- 3ಆತನಿಗೆ ತಂದೆಯೂ ತಾಯಿಯೂ ವಂಶಾವಳಿಯೂ ಇಲ್ಲ, ದಿವಸಗಳ ಆರಂಭವೂ ಜೀವದ ಅಂತ್ಯವೂ ಇಲ್ಲ. ಆದರೆ ಆತನು ದೇವರ ಮಗನಿಗೆ ಹೋಲಿಕೆಯಾಗಿ ಮಾಡಲ್ಪಟ್ಟಿದ್ದಾನೆ. ಇದಲ್ಲದೆ ಆತನು ನಿರಂತರವಾಗಿ ಯಾಜಕನಾಗಿದ್ದಾನೆ.
- 4ಈ ಮನುಷ್ಯನು ಎಷ್ಟು ದೊಡ್ಡವನಾಗಿದ್ದನೆಂದು ಆಲೋಚಿಸಿರಿ. ನಮ್ಮ ಮೂಲ ಪಿತೃವಾದ ಅಬ್ರಹಾ ಮನು ಸುಲುಕೊಂಡು ಬಂದವುಗಳಲ್ಲಿ ಹತ್ತನೆಯ ಒಂದು ಭಾಗವನ್ನು ಆತನಿಗೆ ಕೊಟ್ಟನಲ್ಲಾ.
- 5ನಿಜವಾಗಿ ಲೇವಿಯ ಮಕ್ಕಳಲ್ಲಿ ಯಾಜಕೋದ್ಯೋಗವನ್ನು ಹೊಂದುವವರು ಜನರಿಂದ ಅಂದರೆ ಅಬ್ರಹಾಮನ ವಂಶಸ್ಥರಾಗಿರುವ ತಮ್ಮ ಸಹೋದರರಿಂದಲೇ ದಶಮ ಭಾಗಗಳನ್ನು ತೆಗೆದುಕೊಳ್ಳುವದಕ್ಕೆ ನ್ಯಾಯ ಪ್ರಮಾಣದಲ್ಲಿ ಅಪ್ಪಣೆಯುಂಟು.
- 6ಅದರೆ ಅವರ ವಂಶಾವಳಿಯಲ್ಲಿ ಲೆಕ್ಕಿಸಲ್ಪಡದೆ ಇರುವ ಈತನು ಅಬ್ರಹಾಮನಿಂದಲೇ ದಶಮ ಭಾಗಗಳನ್ನು ತಕ್ಕೊಂಡ ದ್ದಲ್ಲದೆ ವಾಗ್ದಾನಗಳನ್ನು ಹೊಂದಿದವನಾದ ಅವನಿಗೆ ಆಶೀರ್ವಾದ ಕೊಟ್ಟನು.
- 7ಆಶೀರ್ವಾದ ಹೊಂದುವವ ನಿಗಿಂತ ಆಶಿರ್ವದಿಸುವವನು ದೊಡ್ಡವನು ಎಂಬದು ವಿವಾದವಿಲ್ಲದ ಮಾತಷ್ಟೆ. 8ಇಲ್ಲಿ ಸಾಯತಕ್ಕ ಮನುಷ್ಯರು ದಶಮ ಭಾಗಗಳನ್ನು ತಕ್ಕೊಳ್ಳುತ್ತಾರೆ; ಆದರೆ ಅಲ್ಲಿ ಜೀವಿಸುತ್ತಿದ್ದಾನೆಂದು ಸಾಕ್ಷಿಹೊಂದಿರುವಾತನು ತಕ್ಕೊಳ್ಳುತ್ತಾನೆ.
Cross references
- Leviticus 27:30–33 ಯಾಜಕಕಾಂಡ 27:30–33ಭೂಮಿಯ ಬೀಜದಲ್ಲಾಗಲಿ ಮರದ ಫಲದ ಲ್ಲಾಗಲಿ ಹತ್ತನೇ ಪಾಲೆಲ್ಲಾ ಕರ್ತನದೇ. ಅದು ಕರ್ತನಿಗೆ ಪರಿಶುದ್ಧವಾದದ್ದು. ಯಾವನಾದರೂ ತನ್ನ ಹತ್ತನೇ ಪಾಲುಗಳನ್ನು ವಿಮೋಚಿಸಬೇಕೆಂದಿದ್ದರೆ ಅದಕ್ಕಿಂತ ಹೆಚ್ಚಾಗಿ ಅದರ ಐದನೇ ಪಾಲನ್ನು ಕೊಡಬೇಕು. ಇದಲ್ಲದೆ ದನಕುರಿಗಳಲ್ಲಿಯೂ ಕೋಲಿನ ಕೆಳಗೆ ದಾಟುವ ಎಲ್ಲಾದರಲ್ಲಿಯೂ ಹತ್ತರಲ್ಲಿ ಒಂದು ಭಾಗ ಕರ್ತನಿಗೆ ಪರಿಶುದ್ಧವಾಗಿರುವದು. ಅದು ಒಳ್ಳೆ ಯದೋ ಕೆಟ್ಟದ್ದೋ ಎಂದು ಅವನು ವಿಚಾರಿಸ ಬಾರದು, ಅದನ್ನು ಬದಲು ಮಾಡಬಾರದು. ಹೇಗಾ ದರೂ ಅದನ್ನು ಬದಲು ಮಾಡಿದರೆ ಅದೂ ಬದಲು ಮಾಡಿದ್ದೂ ಪರಿಶುದ್ಧವಾಗಿರಬೇಕು. ಅದನ್ನು ವಿಮೋಚಿಸಬಾರದು.ಕರ್ತನು ಸೀನಾಯಿ ಬೆಟ್ಟದಲ್ಲಿ ಮೋಶೆಗೆ ಇಸ್ರಾಯೇಲ್ ಮಕ್ಕಳಿಗಾಗಿ ಕೊಟ್ಟ ಆಜ್ಞೆಗಳು ಇವೇ.
- 2 Chronicles 31:4–6 2 ಪೂರ್ವಕಾಲವೃತ್ತಾಂತ 31:4–6ಯಾಜಕರೂ ಲೇವಿಯರೂ ಕರ್ತನ ನ್ಯಾಯಪ್ರಮಾಣದಲ್ಲಿ ಬಲ ಗೊಳ್ಳುವ ನಿಮಿತ್ತ ಅವರಿಗೆ ತಕ್ಕ ಭಾಗವನ್ನು ಕೊಡ ಬೇಕೆಂದು ಯೆರೂಸಲೇಮಿನಲ್ಲಿರುವ ಜನರಿಗೆ ಅವನು ಆಜ್ಞಾಪಿಸಿದನು. ಈ ಆಜ್ಞೆ ಹೊರಗೆ ಬಂದಾಗಲೇ ಇಸ್ರಾಯೇಲ್ ಮಕ್ಕಳು ಧಾನ್ಯ, ದ್ರಾಕ್ಷಾರಸ, ಎಣ್ಣೆ, ಜೇನು, ಹೊಲಗಳ ಹುಟ್ಟುವಳಿ ಇವುಗಳ ಮೊದಲನೇ ಪಾಲನ್ನು ಬಹಳವಾಗಿ ಒಳಗೆ ತಂದರು. ಹಾಗೆಯೇ ಸಮಸ್ತ ವಸ್ತುಗಳಲ್ಲಿ ದಶಮಾಂಶದ ಪಾಲನ್ನು ಬಹಳ ವಾಗಿ ತಂದರು; ಇದಲ್ಲದೆ ಯೆಹೂದ ಪಟ್ಟಣಗಳಲ್ಲಿ ನಿವಾಸವಾಗಿರುವ ಇಸ್ರಾಯೇಲ್ ಯೆಹೂದ ಮಕ್ಕಳು ದನಗಳಲ್ಲಿಯೂ ಕುರಿಗಳಲ್ಲಿಯೂ ದಶಮಾಂಶ ತಂದರು. ತಮ್ಮ ದೇವರಾದ ಕರ್ತನಿಗೆ ಪರಿಶುದ್ಧ ಮಾಡಿದ ಪರಿಶುದ್ಧ ವಸ್ತುಗಳಲ್ಲಿ ದಶ ಮಾಂಶದ ಪಾಲು ತಂದು ರಾಶಿರಾಶಿಯಾಗಿ ಇಟ್ಟರು.
- Numbers 16:10–11 ಅರಣ್ಯಕಾಂಡ 16:10–11ಆತನು ನಿನ್ನನ್ನೂ ನಿನ್ನ ಸಂಗಡ ಲೇವಿಯ ಕುಮಾರರಾದ ನಿನ್ನ ಸಹೋದ ರರೆಲ್ಲರನ್ನೂ ತನ್ನ ಹತ್ತಿರ ಬರಮಾಡಿಕೊಂಡಿದ್ದಾನೆ; ನೀವು ಯಾಜಕತ್ವವನ್ನು ಸಹ ಹುಡುಕುತ್ತೀರೋ? ಈ ಕಾರಣದಿಂದ ನೀನೂ ನಿನ್ನ ಸಮಸ್ತ ಗುಂಪೂ ಕರ್ತನಿಗೆ ವಿರೋಧವಾಗಿ ಒಟ್ಟಾಗಿ ಕೂಡಿಕೊಂಡಿರಿ; ನೀವು ಅವನಿಗೆ ವಿರೋಧವಾಗಿ ಗುಣುಗುಟ್ಟುವ ಹಾಗೆ ಆರೋನನು ಯಾರು ಎಂದು ಹೇಳಿದನು.
- Numbers 18:21–32 ಅರಣ್ಯಕಾಂಡ 18:21–32ಇಗೋ, ಅವರು ಸಭೆಯ ಗುಡಾರದ ಸೇವೆಯನ್ನು ಮಾಡುವದರಿಂದ ನಾನು ಲೇವಿಯ ಮಕ್ಕಳಿಗೆ ಅವರ ಸೇವೆಗೋಸ್ಕರ ಇಸ್ರಾ ಯೇಲ್ಯರಲ್ಲಿ ಹತ್ತನೆಯ ಒಂದು ಪಾಲನ್ನೆಲ್ಲಾ ಸ್ವಾಸ್ತ್ಯ ಕ್ಕಾಗಿ ಕೊಟ್ಟಿದ್ದೇನೆ. ಇಸ್ರಾಯೇಲ್ ಮಕ್ಕಳು ಪಾಪವನ್ನು ಹೊತ್ತುಕೊಂಡು ಸಾಯದ ಹಾಗೆ ಇನ್ನು ಮೇಲೆ ಸಭೆಯ ಗುಡಾರದ ಸವಿಾಪಕ್ಕೆ ಬರಬಾರದು. ಆದರೆ ಲೇವಿಯರೇ ಸಭೆಯ ಗುಡಾರದ ಸೇವೆ ಯನ್ನು ಮಾಡಬೇಕು; ಅವರೇ ಅವರ ಅಕ್ರಮವನ್ನು ಹೊತ್ತುಕೊಳ್ಳಬೇಕು; ಇದು ನಿಮ್ಮ ಸಂತತಿಗಳಿಗೆ ನಿತ್ಯ ಕಟ್ಟಳೆಯಾಗಿದೆ; ಇಸ್ರಾಯೇಲ್ ಮಕ್ಕಳ ಮಧ್ಯದಲ್ಲಿ ಅವರಿಗೆ ಸ್ವಾಸ್ತ್ಯವು ಇರಬಾರದು. ಇಸ್ರಾಯೇಲ್ ಮಕ್ಕಳು ಕರ್ತನಿಗೆ ಎತ್ತುವ ಅರ್ಪಣೆಯಾಗಿ ಅರ್ಪಿಸುವ ಹತ್ತನೆಯ ಒಂದು ಪಾಲನ್ನು ಲೇವಿಯರಿಗೆ ಸ್ವಾಸ್ತ್ಯಕ್ಕಾಗಿ ಕೊಟ್ಟಿದ್ದೇನೆ; ಆದಕಾರಣ ಇಸ್ರಾಯೇಲ್ ಮಕ್ಕಳ ಮಧ್ಯದಲ್ಲಿ ಅವರಿಗೆ ಸ್ವಾಸ್ತ್ಯವಿರಬಾರದೆಂದು ನಾನು ಅವರಿಗೆ ಹೇಳಿದ್ದೇನೆ ಅಂದನು. ಕರ್ತನು ಮೋಶೆಯ ಸಂಗಡ ಮಾತನಾಡಿ ಹೇಳಿ ದ್ದೇನಂದರೆ-- ನೀನು ಲೇವಿಯರಿಗೆ ಹೀಗೆ ಮಾತ ನಾಡಿ ಅವರಿಗೆ ಹೇಳಬೇಕಾದದ್ದೇನಂದರೆ--ನೀವು ಇಸ್ರಾಯೇಲ್ ಮಕ್ಕಳ ಕಡೆಯಿಂದ ನಾನು ನಿಮಗೆ ಸ್ವಾಸ್ತ್ಯಕ್ಕಾಗಿ ಕೊಟ್ಟ ಹತ್ತನೆಯ ಒಂದು ಪಾಲನ್ನು ತಕ್ಕೊಂಡರೆ ನೀವು ಅದರಲ್ಲಿ ಕರ್ತನಿಗೆ ಹತ್ತನೆಯ ದರಿಂದ ಹತ್ತನೆಯದನ್ನು ಎತ್ತುವ ಅರ್ಪಣೆಯಾಗಿ ಅರ್ಪಿಸಬೇಕು. ಇದು ನಿಮಗೆ ಕಣದ ಧಾನ್ಯದ ಹಾಗೆಯೂ ದ್ರಾಕ್ಷೇತೊಟ್ಟಿಯ ಪರಿಪೂರ್ಣತೆಯ ಹಾಗೆಯೂ ನಿಮ್ಮ ಎತ್ತುವ ಅರ್ಪಣೆಯಾಗಿಯೂ ನಿಮಗೆ ಎಣಿಸಲ್ಪಡುವದು. ಈ ಪ್ರಕಾರ ನೀವು ಸಹ ಇಸ್ರಾಯೇಲ್ ಮಕ್ಕಳ ಕಡೆಯಿಂದ ತಕ್ಕೊಳ್ಳುವ ನಿಮ್ಮ ಎಲ್ಲಾ ಹತ್ತನೆಯವುಗಳಿಂದ ಕರ್ತನಿಗೆ ಎತ್ತುವ ಕಾಣಿಕೆಯನ್ನು ಅರ್ಪಿಸಬೇಕು; ನೀವು ಅದರಿಂದ ಕರ್ತ ನಿಗೆ ಎತ್ತುವ ಅರ್ಪಣೆಯನ್ನು ಯಾಜಕನಾದ ಆರೋನ ನಿಗೆ ಕೊಡಬೇಕು. ನಿಮ್ಮ ಎಲ್ಲಾ ಕಾಣಿಕೆಗಳಲ್ಲಿ ಉತ್ತಮವಾದದ್ದನ್ನು ಅದರೊಳಗಿನ ಪರಿಶುದ್ಧವಾದ ಭಾಗವನ್ನೇ ಕರ್ತನಿಗೆ ಎತ್ತುವ ಅರ್ಪಣೆಯಾಗಿ ಅರ್ಪಿಸಬೇಕು. ನೀನು ಅವರಿಗೆ ಹೇಳಬೇಕಾದದ್ದೇನಂದರೆ--ನೀವು ಅದರಲ್ಲಿ ಉತ್ತಮವಾದದ್ದನ್ನು ಎತ್ತಿದಾಗ ಅದು ಲೇವಿಯರಿಗೆ ಕಣದ ಆದಾಯದ ಹಾಗೆಯೂ ದ್ರಾಕ್ಷೇ ತೊಟ್ಟಿಯ ಆದಾಯದ ಹಾಗೆಯೂ ಎಣಿಸಲ್ಪಡುವದು. ನೀವೂ ನಿಮ್ಮ ಮನೆಯವರೂ ಅದನ್ನು ಸಕಲ ಸ್ಥಳಗಳಲ್ಲಿ ತಿನ್ನಬಹುದು. ಇದು ಸಭೆಯ ಗುಡಾರದಲ್ಲಿ ನೀವು ಮಾಡುವ ಸೇವೆಗೋಸ್ಕರ ನಿಮಗೆ ಪ್ರತಿಫಲ ವಾಗಿದೆ.ಆದಕಾರಣ ನೀವು ಅದರಲ್ಲಿಂದ ಅದರ ಉತ್ತಮವಾದದ್ದನ್ನು ಎತ್ತಿ ಅರ್ಪಿಸಿದಾಗ ನೀವು ಅದರ ದೆಸೆಯಿಂದ ಪಾಪವನ್ನು ಹೊತ್ತುಕೊಳ್ಳುವದಿಲ್ಲ; ಇಸ್ರಾಯೇಲ್ ಮಕ್ಕಳ ಪರಿಶುದ್ಧವಾದವುಗಳನ್ನು ಅಪವಿತ್ರ ಮಾಡದಿದ್ದರೆ ಸಾಯುವದಿಲ್ಲ ಅಂದನು. ಆದಕಾರಣ ನೀವು ಅದರಲ್ಲಿಂದ ಅದರ ಉತ್ತಮವಾದದ್ದನ್ನು ಎತ್ತಿ ಅರ್ಪಿಸಿದಾಗ ನೀವು ಅದರ ದೆಸೆಯಿಂದ ಪಾಪವನ್ನು ಹೊತ್ತುಕೊಳ್ಳುವದಿಲ್ಲ; ಇಸ್ರಾಯೇಲ್ ಮಕ್ಕಳ ಪರಿಶುದ್ಧವಾದವುಗಳನ್ನು ಅಪವಿತ್ರ ಮಾಡದಿದ್ದರೆ ಸಾಯುವದಿಲ್ಲ ಅಂದನು.
- Numbers 18:7 ಅರಣ್ಯಕಾಂಡ 18:7ಆದದರಿಂದ ನೀನು ನಿನ್ನ ಕುಮಾರರ ಸಹಿತವಾಗಿ ನಿಮ್ಮ ಯಾಜಕತ್ವವನ್ನು ಕಾಪಾಡಬೇಕು. ಬಲಿಪೀಠದ ಸಮಸ್ತ ಕಾರ್ಯಗಳಿಗೋಸ್ಕರ ಪರದೆಯ ಒಳಗೆ ನೀವು ಸೇವೆಮಾಡಬೇಕು. ನಿಮ್ಮ ಯಾಜಕತ್ವವನ್ನು ದಾನದ ಸೇವೆಯಾಗಿ ನಿಮಗೆ ಕೊಟ್ಟಿದ್ದೇನೆ. ಪರಕೀಯನು ಸವಿಾಪಕ್ಕೆ ಬಂದರೆ ಸಾಯಬೇಕು ಎಂದು ಹೇಳಿದನು.
- Hebrews 7:10 ಇಬ್ರಿಯರಿಗೆ 7:10ಹೇಗೆಂದರೆ ಮೆಲ್ಕಿಜೆದೇಕನು ಲೇವಿಯ ಮೂಲ ಪುರಷನನ್ನು ಎದುರುಗೊಂಡಾಗ ಇವನಲ್ಲಿ ಲೇವಿಯು ಅಡಕ ವಾಗಿದ್ದನು.
- Numbers 17:3–10 ಅರಣ್ಯಕಾಂಡ 17:3–10ಆರೋನನ ಹೆಸರನ್ನು ಲೇವಿಯ ಕೋಲಿನ ಮೇಲೆ ಬರೆಯಬೇಕು. ಅವರ ಪಿತೃಗಳ ಮನೆಯ ಮುಖ್ಯಸ್ಥನಿಗೆ ಒಂದು ಕೋಲು ಇರಬೇಕು. ಅವುಗಳನ್ನು ಸಭೆಯ ಗುಡಾರದಲ್ಲಿ ನಾನು ನಿಮ್ಮ ಸಂಗಡ ಸಂಧಿಸುವ ಸಾಕ್ಷಿಯ ವಿಧಿಗಳ ಮುಂದೆ ಇಡಬೇಕು. ಆಗ ಏನಾಗುವ ದಂದರೆ, ನಾನು ಯಾವನನ್ನು ಆದುಕೊಳ್ಳುತ್ತೇನೋ ಆ ಮನುಷ್ಯನ ಕೋಲು ಚಿಗುರುವದು. ಹೀಗೆ ಇಸ್ರಾ ಯೇಲ್ ಮಕ್ಕಳು ನಿಮಗೆ ವಿರೋಧವಾಗಿ ಗುಣುಗುಟ್ಟು ವದನ್ನು ನಾನು ನಿಲ್ಲಿಸಿಬಿಡುವೆನು ಅಂದನು. ಹಾಗೆಯೇ ಮೋಶೆಯು ಇಸ್ರಾಯೇಲ್ ಮಕ್ಕಳ ಸಂಗಡ ಮಾತನಾಡಿದನು. ಅವರ ಪ್ರಧಾನರೆಲ್ಲರೂ ತಮ್ಮ ಪಿತೃಗಳ ಮನೆಗಳ ಪ್ರಕಾರ ಒಬ್ಬೊಬ್ಬ ಪ್ರಧಾನಿ ಗೋಸ್ಕರ ಒಂದೊಂದು ಕೋಲಿನ ಪ್ರಕಾರ ಹನ್ನೆರಡು ಕೋಲುಗಳನ್ನು ಕೊಟ್ಟರು. ಆರೋನನ ಕೋಲು ಸಹ ಅವರ ಕೋಲುಗಳ ಮಧ್ಯದಲ್ಲಿ ಇತ್ತು. ಆಗ ಮೋಶೆಯು ಆ ಕೋಲುಗಳನ್ನು ಸಾಕ್ಷಿಯ ಗುಡಾರ ದೊಳಗೆ ಕರ್ತನ ಸಮ್ಮುಖದಲ್ಲಿ ಇಟ್ಟನು. ಮರು ದಿವಸದಲ್ಲಿ ಆದದ್ದೇನಂದರೆ, ಮೋಶೆಯು ಸಾಕ್ಷೀ ಗುಡಾರದೊಳೆಗೆ ಪ್ರವೇಶಿಸುವಾಗ ಇಗೋ, ಲೇವಿ ಮನೆಯ ಕೋಲಾಗಿದ್ದ ಆರೋನನ ಕೋಲು ಚಿಗುರಿ ಮೊಗ್ಗುಬಿಟ್ಟು ಹೂವು ಅರಳಿ ಬಾದಾಮಿ ಹಣ್ಣುಗಳನ್ನು ಫಲಿಸಿತ್ತು. ಆಗ ಮೋಶೆಯು ಎಲ್ಲಾ ಕೋಲುಗಳನ್ನು ಕರ್ತನ ಸನ್ನಿಧಿಯಿಂದ ಇಸ್ರಾಯೇಲ್ ಮಕ್ಕಳೆಲ್ಲರಿಗೆ ತೋರಿಸುವದಕ್ಕಾಗಿ ಹೊರಗೆ ತಂದನು. ಆಗ ಅವರು ನೋಡಿ ತಮ್ಮ ತಮ್ಮ ಕೋಲನ್ನು ತೆಗೆದುಕೊಂಡರು. ತರುವಾಯ ಕರ್ತನು ಮೋಶೆಗೆ--ಆರೋನನ ಕೋಲನ್ನು ಎದುರು ಬೀಳುವವರಿಗೆ ಗುರುತಾಗಿ ಸಾಕ್ಷಿಯ ವಿಧಿಗಳ ಮುಂದೆ ತಿರಿಗಿ ಇಡು. ಹೀಗೆ ಅವರು ಸಾಯದ ಹಾಗೆ ನನ್ನ ಮುಂದೆ ಗುಣು ಗುಟ್ಟುವದನ್ನು ನನ್ನಿಂದ ನೀನು ಸಂಪೂರ್ಣವಾಗಿ ತೆಗೆದು ಬಿಡಬೇಕು ಅಂದನು.
- 1 Kings 8:19 1 ಅರಸುಗಳು 8:19ಆದಾಗ್ಯೂ ಮಂದಿರವನ್ನು ನೀನು ಕಟ್ಟಿಸಬೇಡ; ನಿನ್ನಿಂದ ಹುಟ್ಟುವ ಮಗನು, ಅವನೇ ನನ್ನ ಹೆಸರಿಗಾಗಿ ಮಂದಿರವನ್ನು ಕಟ್ಟಿಸುವನು ಅಂದನು.
- Nehemiah 13:10 ನೆಹೆಮೀಯ 13:10ಲೇವಿಯರ ಪಾಲುಗಳು ಅವರಿಗೆ ಕೊಡಲಿಲ್ಲ ವೆಂದು ನನಗೆ ತಿಳಿಯಿತು. ಯಾಕಂದರೆ ಸೇವೆಯನ್ನು ಮಾಡುವ ಲೇವಿಯರೂ ಹಾಡುಗಾರರೂ ತಮ್ಮ ತಮ್ಮ ಹೊಲಕ್ಕೆ ಓಡಿಹೋಗುತ್ತಿದ್ದರು.
- Exodus 28:1 ವಿಮೋಚನಕಾಂಡ 28:1ಇದಲ್ಲದೆ ನನಗೆ ಯಾಜಕನ ಸೇವೆಮಾಡುವದಕ್ಕೆ ನೀನು ನಿನ್ನ ಅಣ್ಣನಾದ ಆರೋನನನ್ನೂ ಅವನ ಮಕ್ಕಳಾದ ನಾದಾಬ್ ಅಬೀಹೂ ಎಲಿಯೇಜರ್ ಈತಾಮಾರ್ ಎಂಬವರನ್ನೂ ಇಸ್ರಾಯೇಲ್ ಮಕ್ಕಳಿಂದ ನಿನ್ನ ಹತ್ತಿರ ಬರಮಾಡ ಬೇಕು.
- Genesis 46:26 ಆದಿಕಾಂಡ 46:26ಯಾಕೋಬನ ಕುಮಾರರ ಹೆಂಡತಿಯರ ಹೊರ ತಾಗಿ ಯಾಕೋಬನ ಸಂಗಡ ಐಗುಪ್ತಕ್ಕೆ ಬಂದವರೆಲ್ಲಾ ಅವನಿಂದ ಹುಟ್ಟಿದವರು. ಎಲ್ಲಾ ಕೂಡಿ ಅರವತ್ತಾರು ಜನರು.
Original words (Greek)
- And · G2532καί kaí
- verily · G3303μέν mén
- are · G2983λαμβάνω lambánō
- of · G1537ἐκ ek
- sons · G5207υἱός huiós
- Levi · G3017Λευΐ Leuḯ
- receive · G2983λαμβάνω lambánō
- priesthood · G2405ἱερατεία hierateía
- have · G2192ἔχω échō
- commandment · G1785ἐντολή entolḗ
- of · G586ἀποδεκατόω apodekatóō
- people · G2992λαός laós
- to · G2596κατά katá
- law · G3551νόμος nómos
- that · G5124τοῦτο toûto
- is · G2076ἐστί estí
- of · G80ἀδελφός adelphós
- their · G846αὐτός autós
- brethren · G80ἀδελφός adelphós
- though · G2539καίπερ kaíper
- out · G1831ἐξέρχομαι exérchomai
- of · G1537ἐκ ek
- loins · G3751ὀσφῦς osphŷs
- Abraham · G11Ἀβραάμ Abraám