Hosea · chapter 11 · verse 2
Hosea 11:2 in Kannada
ಅವರು ಅವರನ್ನು ಕರೆದ ಹಾಗೆಯೇ ಅವರಿಂದ ಹೊರಟು ಹೋದರು; ಅವರು ಬಾಳ್ ದೇವತೆಗಳಿಗೆ ಬಲಿ ಅರ್ಪಿಸಿದರು; ಕೆತ್ತಲ್ಪಟ್ಟ ವಿಗ್ರಹಗಳಿಗೆ ಧೂಪವನ್ನು ಸುಟ್ಟರು.
Avaru avarannu kareda haageye avarinda horatu hodaru; avaru baal devategalige bali arpisidaru; kettalpatta vigrahagalige dhoopavannu suttaru.
Hosea 11:2 in English
- King James Version (KJV)
- [As] they called them, so they went from them: they sacrificed unto Baalim, and burned incense to graven images.
- World English Bible (WEB)
- They called to them, so they went from them. They sacrificed to the Baals, and burned incense to engraved images.
- American Standard Version (ASV)
- The more [the prophets] called them, the more they went from them: they sacrificed unto the Baalim, and burned incense to graven images.
- Bible in Basic English (BBE)
- When I sent for them, then they went away from me; they made offerings to the Baals, burning perfumes to images.
- Darby Translation (DBY)
- As they called them, so they went from them: they sacrificed unto the Baals, and burned incense to graven images.
- Webster's Bible (WBS)
- [As] they called them, so they went from them: they sacrificed to Baalim, and burned incense to graven images.
- Young's Literal Translation (YLT)
- They have called to them rightly, They have gone from before them, To lords they do sacrifice, And to graven images they make perfume.
Read in context
- 1ಇಸ್ರಾಯೇಲನು ಮಗುವಾಗಿದ್ದಾಗ ನಾನು ಅವನನ್ನು ಪ್ರೀತಿಮಾಡಿದೆನು, ಮತ್ತು ನನ್ನ ಮಗನನ್ನು ಐಗುಪ್ತದೊಳಗಿಂದ ಕರೆದೆನು.
- 2ಅವರು ಅವರನ್ನು ಕರೆದ ಹಾಗೆಯೇ ಅವರಿಂದ ಹೊರಟು ಹೋದರು; ಅವರು ಬಾಳ್ ದೇವತೆಗಳಿಗೆ ಬಲಿ ಅರ್ಪಿಸಿದರು; ಕೆತ್ತಲ್ಪಟ್ಟ ವಿಗ್ರಹಗಳಿಗೆ ಧೂಪವನ್ನು ಸುಟ್ಟರು.
- 3ನಾನು ಅವರ ತೋಳುಗಳನ್ನು ಹಿಡಿದು ಎಫ್ರಾಯಾಮನಿಗೆ ಕಲಿಸಿದೆನು. ಆದರೆ ನಾನು ಅವ ರನ್ನು ಸ್ವಸ್ಥಮಾಡಿದ್ದೇನೆಂದು ಅವರಿಗೆ ತಿಳಿಯಲಿಲ್ಲ.
- 4ನಾನು ಅವರನ್ನು ಮನುಷ್ಯನ ಸ್ನೇಹಬಂದನವೆಂಬ ಹಗ್ಗಗಳಿಂದಲೂ ಪ್ರೀತಿಯ ಬಂಧನಗಳಿಂದಲೂ ಎಳೆ ದೆನು. ಅವರ ದವಡೆಯ ಮೇಲಿನಿಂದ ನೊಗ ಎತ್ತು ವವರ ಹಾಗೆ ನಾನು ಅವರಿಗೆ ಇದ್ದೆನು. ನಾನು ಅವರಿಗೆ ತಿನ್ನುವದಕ್ಕೆ ಕೊಟ್ಟೆನು.
Cross references
- Jeremiah 18:15 ಯೆರೆಮೀಯ 18:15ನನ್ನ ಜನರು ನನ್ನನ್ನು ಮರೆತುಬಿಟ್ಟಿದ್ದಾರೆ; ವ್ಯರ್ಥವಾದದ್ದಕ್ಕೆ ಧೂಪವನ್ನರ್ಪಿಸಿದ್ದಾರೆ; ಪುರಾತನ ಪದ್ಧತಿಯಾದ ಅವರ ಮಾರ್ಗಗಳಲ್ಲಿ ಅವರನ್ನು ಎಡವು ವಂತೆ ಮಾಡಿ ಮಾರ್ಗವಲ್ಲದ ಸೀಳು ದಾರಿಗಳಲ್ಲಿ ಅವರನ್ನು ನಡೆಯಮಾಡುತ್ತಾರೆ.
- Hosea 2:13 ಹೋಶೇಯ 2:13ತರುವಾಯ ಅವಳು ನನ್ನನ್ನು ಮರೆತು ಕಿವಿಯೋಲೆ ಮೊದಲಾದ ಒಡವೆಗಳಿಂದ ಸಿಂಗರಿಸಿಕೊಂಡು, ಮಿಂಡರ ಹಿಂದೆ ಹೋಗಿ ಬಾಳ್ ದೇವತೆಗಳ ದಿವಸಗಳಲ್ಲಿ ಧೂಪ ಸುಟ್ಟಿದ್ದಕ್ಕೆ ನಾನು ಅವಳನ್ನು ದಂಡಿಸುವೆನು ಎಂದು ಕರ್ತನು ಹೇಳುತ್ತಾನೆ.
- Isaiah 65:7 ಯೆಶಾಯ 65:7ನಿಮ್ಮ ಅಕ್ರಮಗಳಿಗೂ ನಿಮ್ಮ ತಂದೆಗಳ ಅಕ್ರ ಮಗಳಿಗೂ ಪ್ರತಿಫಲ ಕೊಡುತ್ತೇನೆಂದು ಕರ್ತನು ಹೇಳುತ್ತಾನೆ; ಅವರು ಬೆಟ್ಟಗಳ ಮೇಲೆ ಧೂಪ ಸುಟ್ಟು ಗುಡ್ಡಗಳ ಮೇಲೆ ನನ್ನನ್ನು ದೂಷಿಸಿದರಲ್ಲಾ. ಹೀಗಿರು ವದರಿಂದ ಅವರ ಹಿಂದಿನ ಕೆಲಸಗಳನ್ನು ಅವರ ಉಡಿ ಯಲ್ಲಿ ಅಳೆದುಬಿಡುವೆನು.
- Acts 7:51 ಅಪೊಸ್ತಲರ ಕೃತ್ಯಗಳು 7:51ಬಗ್ಗದ ಕುತ್ತಿಗೆಯುಳ್ಳವರೇ, ಹೃದಯದಲ್ಲಿಯೂ ಕಿವಿಗಳಲ್ಲಿಯೂ ಸುನ್ನತಿಯಿಲ್ಲದವರೇ, ನಿಮ್ಮ ಪಿತೃಗಳು ಹೇಗೋ ಹಾಗೆಯೇ ನೀವು ಯಾವಾಗಲೂ ಪವಿತ್ರಾತ್ಮನನ್ನು ಎದುರಿಸುವವರಾಗಿದ್ದೀರಿ.
- Hosea 11:7 ಹೋಶೇಯ 11:7ನನ್ನ ಜನರು ನನ್ನ ಕಡೆಯಿಂದ ಹಿಂಜರಿಯಬೇಕೆಂದು ತೀರ್ಮಾನಿಸಿದ್ದಾರೆ; ಅವರನ್ನು ಮಹೋನ್ನತನ ಬಳಿಗೆ ಕರೆದರೂ ಒಬ್ಬನಾದರೂ ಆತನನ್ನು ಉನ್ನತ ಪಡಿಸಲಾರನು.
- Hosea 13:1–2 ಹೋಶೇಯ 13:1–2ಎಫ್ರಾಯಾಮು ನಡುಗುತ್ತಾ ಮಾತನಾಡಿದಾಗ ಅವನು ತನ್ನನ್ನು ಇಸ್ರಾಯೇಲಿನಲ್ಲಿ ಹೆಚ್ಚಿಸಿಕೊಂಡನು; ಆದರೆ ಬಾಳನ ವಿಷಯದಲ್ಲಿ ಅವನು ಅಪರಾಧಿಯಾದ ಮೇಲೆ ಸತ್ತನು. ಈಗ ಅವರು ಹೆಚ್ಚೆಚ್ಚಾಗಿ ಪಾಪವನ್ನು ಮಾಡುತ್ತಾರೆ; ಸ್ವಂತ ಬುದ್ಧಿಯ ಪ್ರಕಾರ ತಮ್ಮ ಬೆಳ್ಳಿಯಿಂದ ಎರಕದ ವಿಗ್ರಹಗಳನ್ನೂ ಮೂರ್ತಿಗಳನ್ನೂ ಮಾಡಿಕೊಂಡಿದ್ದಾರೆ. ಅವೆಲ್ಲವೂ ಶಿಲ್ಪಿಗಳ ಕೈಕೆಲಸವೇ, ಬಲಿ ಅರ್ಪಿಸುವ ಮನುಷ್ಯರು ಹಸುಗಳಿಗೆ ಮುದ್ದಿಡಲೆಂದು ಅವರು ಅವರ ವಿಷಯ ವಾಗಿ ಹೇಳಿದರು.
- 2 Kings 17:13–16 2 ಅರಸುಗಳು 17:13–16ನೀವು ನಿಮ್ಮ ದುರ್ಮಾರ್ಗಗಳನ್ನು ಬಿಟ್ಟು ತಿರುಗಿ ನಾನು ನಿಮ್ಮ ಪಿತೃಗಳಿಗೆ ಆಜ್ಞಾಪಿಸಿದ, ಪ್ರವಾದಿಗಳಾದ ನನ್ನ ಸೇವಕರ ಮುಖಾಂತರ ನಾನು ನಿಮಗೆ ಕಳುಹಿಸಿದ ನ್ಯಾಯಪ್ರಮಾಣದ ಪ್ರಕಾರ ನನ್ನ ಆಜ್ಞೆಗಳನ್ನೂ ಕಟ್ಟಳೆಗಳನ್ನೂ ಕೈಕೊಳ್ಳಿರೆಂದು ಕರ್ತನು ಎಲ್ಲಾ ಪ್ರವಾ ದಿಗಳ ಮುಖಾಂತರವಾಗಿಯೂ ಎಲ್ಲಾ ದರ್ಶಿಗಳ ಮುಖಾಂತರವಾಗಿಯೂ ಇಸ್ರಾಯೇಲಿಗೂ ಯೆಹೂ ದಕ್ಕೂ ಸಾಕ್ಷಿ ಹೇಳಿದನು. ಆದರೆ ಅವರು ಕೇಳ ದೆಯೂ ತಮ್ಮ ದೇವರಾದ ಕರ್ತನಲ್ಲಿ ನಂಬಿಕೆ ಇಡ ದೆಯೂ ತಮ್ಮ ಪಿತೃಗಳ ಕುತ್ತಿಗೆಯ ಹಾಗೆ ತಮ್ಮ ಕುತ್ತಿಗೆಯನ್ನು ಕಠಿಣಪಡಿಸಿ ಆತನ ಕಟ್ಟಳೆಗಳನ್ನೂ ಆತನು ತಮ್ಮ ಪಿತೃಗಳ ಸಂಗಡ ಮಾಡಿದ ಆತನ ಒಡಂಬಡಿಕೆಯನ್ನೂ ಆತನು ಅವರಿಗೆ ಹೇಳಿದ ಸಾಕ್ಷಿ ಗಳನ್ನೂ ಅಲಕ್ಷ್ಯಮಾಡಿ ವ್ಯರ್ಥವಾದದ್ದನ್ನು ಹಿಂಬಾ ಲಿಸಿ ವ್ಯರ್ಥವಾದವರಾಗಿ -- ನೀವು ಅವರ ಹಾಗೆ ಮಾಡಬೇಡಿರೆಂದು ಕರ್ತನು ಅವರಿಗೆ ಆಜ್ಞಾಪಿಸಿದರೂ ಅವರ ಸುತ್ತಲಿರುವ ಅನ್ಯಜನಾಂಗಗಳ ಹಿಂದೆ ಹೋದರು. ಇದಲ್ಲದೆ ಅವರು ತಮ್ಮ ದೇವರಾದ ಕರ್ತನ ಎಲ್ಲಾ ಆಜ್ಞೆಗಳನ್ನು ಬಿಟ್ಟು ತಮಗೆ ತಾವೇ ಎರಕ ಹೊಯ್ದ ವಿಗ್ರಹಗಳಾದ ಎರಡು ಹೋರಿಗಳನ್ನು ಮಾಡಿಕೊಂಡು ವಿಗ್ರಹಗಳ ತೋಪನ್ನು ಮಾಡಿ ಆಕಾಶದ ಸೈನ್ಯಕ್ಕೆಲ್ಲಾ ಅಡ್ಡಬಿದ್ದು ಬಾಳನನ್ನು ಸೇವಿಸಿ
- John 3:19 ಯೋಹಾನನು 3:19ಆ ತೀರ್ಪು ಏನಂದರೆ, ಬೆಳಕು ಲೋಕಕ್ಕೆ ಬಂದಿದ್ದರೂ ಮನುಷ್ಯರ ಕ್ರಿಯೆಗಳು ಕೆಟ್ಟವುಗಳಾ ಗಿರುವದರಿಂದ ಅವರು ಬೆಳಕಿಗಿಂತ ಕತ್ತಲೆಯನ್ನೇ ಪ್ರೀತಿ ಮಾಡಿದರು.
- Judges 10:6 ನ್ಯಾಯಸ್ಥಾಪಕರು 10:6ಆದರೆ ಇಸ್ರಾಯೇಲ್ ಮಕ್ಕಳು ತಿರಿಗಿ ಕರ್ತನ ಮುಂದೆ ಕೆಟ್ಟತನಮಾಡಿ ಬಾಳನನ್ನೂ ಅಷ್ಟೋರೆತನ್ನೂ ಸಿರಿಯಾ ದೇಶದ ದೇವರುಗಳನ್ನೂ ಚೀದೋನಿನ ದೇವರುಗಳನ್ನೂ ಮೋವಾಬಿನ ದೇವರುಗಳನ್ನೂ ಅಮ್ಮೋನನ ಮಕ್ಕಳ ದೇವರುಗಳನ್ನೂ ಫಿಲಿಷ್ಟಿಯರ ದೇವರುಗಳನ್ನೂ ಸೇವಿಸುವವರಾಗಿ ಕರ್ತನನ್ನು ಸೇವಿ ಸದೆ ಆತನನ್ನು ಬಿಟ್ಟು ಹೋದರು.
- Nehemiah 9:30 ನೆಹೆಮೀಯ 9:30ನೀನು ಅನೇಕ ವರುಷ ಅವರನ್ನು ತಾಳಿಕೊಂಡಿದ್ದು ನಿನ್ನ ಪ್ರವಾದಿಗಳ ಮುಖಾಂತರ ನಿನ್ನ ಆತ್ಮನಿಂದ ಅವರಿಗೆ ವಿರೋಧವಾಗಿ ಸಾಕ್ಷಿಹೇಳಿದಿ. ಆದರೆ ಅವರು ಕಿವಿಗೊಡದೆ ಇದ್ದದ್ದರಿಂದ ನೀನು ಅವರನ್ನು ದೇಶಗಳ ಜನರ ಕೈಯಲ್ಲಿ ಒಪ್ಪಿಸಿದಿ.
- Luke 13:34 ಲೂಕನು 13:34ಓ ಯೆರೂಸಲೇಮೇ,ಯೆರೂಸಲೇಮೇ, ಪ್ರವಾದಿಗಳನ್ನು ಕೊಲ್ಲುವವಳೇ, ನಿನ್ನ ಬಳಿಗೆ ಕಳುಹಿಸಲ್ಪಟ್ಟವರಿಗೆ ಕಲ್ಲೆಸೆಯುವವಳೇ, ಕೋಳಿಯು ತನ್ನ ಮರಿಗಳನ್ನು ತನ್ನ ರೆಕ್ಕೆಗಳ ಕೆಳಗೆ ಕೂಡಿಸುವಂತೆ ನಾನು ನಿನ್ನ ಮಕ್ಕಳನ್ನು ಎಷ್ಟೋ ಸಾರಿ ಕೂಡಿಸಬೇಕೆಂದಿದ್ದೆನು; ಆದರೆ ನಿನಗೆ ಅದು ಮನಸ್ಸಿಇಗೋ, ನಿಮ್ಮ ಮನೆಯು ಹಾಳಾಗಿ ನಿಮಗೆ ಬಿಡಲ್ಪಟ್ಟಿದೆ; ಕರ್ತನ ಹೆಸರಿನಲ್ಲಿ ಬರುವಾತನು ಧನ್ಯನು ಎಂದು ನೀವು ಹೇಳುವ ಸಮಯವು ಬರುವ ತನಕ ನೀವು ನನ್ನನ್ನು ನೋಡುವದೇ ಇಲ್ಲ ಎಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ ಅಂದನು.
- Deuteronomy 29:2–4 ಧರ್ಮೋಪದೇಶಕಾಂಡ 29:2–4ಮೋಶೆಯು ಇಸ್ರಾಯೇಲ್ಯರನ್ನೆಲ್ಲಾ ಕರೆದು ಅವ ರಿಗೆ--ಕರ್ತನು ಐಗುಪ್ತದೇಶದಲ್ಲಿ ನಿಮ್ಮ ಕಣ್ಣುಗಳ ಮುಂದೆ ಫರೋಹನಿಗೂ ಅವನ ಎಲ್ಲಾ ಸೇವಕ ರಿಗೂ ಅವನ ಎಲ್ಲಾ ದೇಶಕ್ಕೂ ಮಾಡಿದವುಗಳನ್ನೆಲ್ಲಾ ನೋಡಿದ್ದೀರಿ. ಆ ದೊಡ್ಡ ಪರಿಶೋಧನೆಗಳನ್ನೂ ಆ ದೊಡ್ಡ ಗುರುತುಗಳನ್ನೂ ಅದ್ಭುತಗಳನ್ನೂ ನಿನ್ನ ಕಣ್ಣುಗಳು ನೋಡಿದವಲ್ಲಾ? ಆದಾಗ್ಯೂ ಕರ್ತನು ನಿಮಗೆ ಇಂದಿನ ವರೆಗೂ ತಿಳುಕೊಳ್ಳುವ ಹೃದಯ ವನ್ನೂ ನೋಡುವ ಕಣ್ಣುಗಳನ್ನೂ ಕೇಳುವ ಕಿವಿಗಳನ್ನೂ ಕೊಡಲಿಲ್ಲ.