Hosea · chapter 13 · verse 11
Hosea 13:11 in Kannada
ನನ್ನ ಕೋಪದಲ್ಲಿ ನಿನಗೆ ಅರಸನನ್ನು ಕೊಟ್ಟೆನು, ನನ್ನ ರೌದ್ರದಲ್ಲಿ ಅವನನ್ನು ತೆಗೆದುಹಾಕಿದೆನು.
Nanna kopadalli ninage arasanannu kottenu, nanna raudradalli avanannu tegeduhaakidenu.
Hosea 13:11 in English
- King James Version (KJV)
- I gave thee a king in mine anger, and took [him] away in my wrath.
- World English Bible (WEB)
- I have given you a king in my anger, and have taken him away in my wrath.
- American Standard Version (ASV)
- I have given thee a king in mine anger, and have taken him away in my wrath.
- Bible in Basic English (BBE)
- I have given you a king, because I was angry, and have taken him away in my wrath.
- Darby Translation (DBY)
- I gave thee a king in mine anger, and took him away in my wrath.
- Webster's Bible (WBS)
- I gave thee a king in my anger, and took [him] away in my wrath.
- Young's Literal Translation (YLT)
- I give to thee a king in Mine anger, And I take away in My wrath.
Read in context
- 9ಓ ಇಸ್ರಾಯೇಲೇ, ನಿನ್ನನ್ನು ನೀನು ಹಾಳುಮಾಡಿಕೊಂಡಿದ್ದೀ, ಆದರೆ ನನ್ನಲ್ಲಿ ನಿನಗೆ ಸಹಾಯ ಉಂಟು.
- 10ನಾನೇ ನಿನ್ನ ಅರಸನಾಗಿ ರುವೆನು; ನಿನ್ನ ಎಲ್ಲಾ ಪಟ್ಟಣಗಳಲ್ಲಿ ನಿನ್ನನ್ನು ರಕ್ಷಿಸುವ ಬೇರೆಯ ವನು ಎಲ್ಲಿದ್ದಾನೆ? ಮತ್ತು--ರಾಜನನ್ನೂ ಪ್ರಧಾನ ರನ್ನೂ ನನಗೆ ದಯಪಾಲಿಸು ಎಂದು ನೀನು ಹೇಳಿದ ನ್ಯಾಯಾಧಿಪತಿಗಳು ಎಲ್ಲಿದ್ದಾರೆ?
- 11ನನ್ನ ಕೋಪದಲ್ಲಿ ನಿನಗೆ ಅರಸನನ್ನು ಕೊಟ್ಟೆನು, ನನ್ನ ರೌದ್ರದಲ್ಲಿ ಅವನನ್ನು ತೆಗೆದುಹಾಕಿದೆನು.
- 12ಎಫ್ರಾ ಯಾಮಿನ ದುಷ್ಕೃತ್ಯವು ಕಟ್ಟಲ್ಪಟ್ಟಿದೆ, ಅವನ ಪಾಪವು ಬಚ್ಚಿಡಲ್ಪಟ್ಟಿದೆ.
- 13ಹೆರು ವವಳ ಸಂಕಟಗಳು ಅವನ ಮೇಲೆಯೇ ಬರುವವು. ಅವನು ಬುದ್ಧಿಹೀನ ಮಗನಾಗಿದ್ದಾನೆ; ಮಕ್ಕಳು ಹುಟ್ಟುವ ಸ್ಥಳದಲ್ಲಿ ಅವನು ಬಹಳ ಹೊತ್ತು ನಿಲ್ಲುವದಿಲ್ಲ.
Cross references
- 1 Samuel 10:19 1 ಸಮುವೇಲನು 10:19ಆದರೆ ನಿಮ್ಮ ಎಲ್ಲಾ ಕೇಡುಗಳಿಂದಲೂ ಇಕ್ಕಟ್ಟುಗಳಿಂದಲೂ ನಿಮ್ಮನ್ನು ತಪ್ಪಿಸಿ ರಕ್ಷಿಸಿದ ನಿಮ್ಮ ದೇವರನ್ನು ನೀವು ಈ ದಿವಸದಲ್ಲಿ ತಿರಸ್ಕರಿಸಿ ಆತನಿಗೆ--ನಮ್ಮ ಮೇಲೆ ಒಬ್ಬ ಅರಸನನ್ನು ನೇಮಿಸು ಎಂದು ಹೇಳಿದಿರಿ. ಆದದ ರಿಂದ ಈಗ ಕರ್ತನ ಮುಂದೆ ನಿಮ್ಮ ಗೋತ್ರಗಳ ಪ್ರಕಾರವಾಗಿಯೂ ನಿಮ್ಮ ಸಹಸ್ರಗಳ ಪ್ರಕಾರವಾ ಗಿಯೂ ಕಾಣಿಸಿಕೊಳ್ಳಿರಿ ಅಂದನು.
- Proverbs 28:2 ಜ್ಞಾನೋಕ್ತಿಗಳು 28:2ದೇಶದ ದೋಷಕ್ಕಾಗಿ ಅನೇಕ ಪ್ರಭುಗಳು ಇರುತ್ತಾರೆ; ಆದರೆ ಮನುಷ್ಯನ ವಿವೇಕದಿಂದಲೂ ತಿಳುವಳಿಕೆಯಿಂದಲೂ ಅದರ ಸ್ಥಿತಿಯು ವಿಸ್ತರಿಸುತ್ತದೆ.
- 1 Samuel 16:1 1 ಸಮುವೇಲನು 16:1ಕರ್ತನು ಸಮುವೇಲನಿಗೆ--ಇಸ್ರಾಯೇ ಲಿನ ಅರಸನಾಗಿರದ ಹಾಗೆ ನಾನು ತಿರಸ್ಕರಿಸಿದ ಸೌಲನಿಗೋಸ್ಕರ ನೀನು ಎಷ್ಟರ ವರೆಗೆ ದುಃಖವುಳ್ಳವನಾಗಿರುವಿ? ನೀನು ನಿನ್ನ ಕೊಂಬನ್ನು ತೈಲದಿಂದ ತುಂಬಿಸಿಕೊಂಡು ಬಾ, ಬೇತ್ಲೆಹೇಮಿನ ವನಾದ ಇಷಯನ ಬಳಿಗೆ ನಿನ್ನನ್ನು ಕಳುಹಿಸುವೆನು; ಯಾಕಂದರೆ ನಾನು ಅವನ ಮಕ್ಕಳಲ್ಲಿ ಒಬ್ಬನನ್ನು ಅರಸನನ್ನಾಗಿ ಆದುಕೊಂಡೆನು ಅಂದನು.
- 1 Samuel 31:1–7 1 ಸಮುವೇಲನು 31:1–7ಆದರೆ ಫಿಲಿಷ್ಟಿಯರು ಇಸ್ರಾಯೇಲ್ಯರ ಸಂಗಡ ಯುದ್ಧಮಾಡಿದರು. ಆಗ ಇಸ್ರಾಯೇಲ್ ಜನರು ಫಿಲಿಷ್ಟಿಯರ ಎದುರಿನಿಂದ ಓಡಿಹೋಗಿ ಗಿಲ್ಬೋವ ಬೆಟ್ಟದಲ್ಲಿ ಕೊಲ್ಲಲ್ಪಟ್ಟವರಾಗಿ ಬಿದ್ದರು. ಫಿಲಿಷ್ಟಿಯರು ಸೌಲನನ್ನೂ ಅವನ ಕುಮಾರ ರನ್ನೂ ಬೆನ್ನಟ್ಟಿ ಸೌಲನ ಕುಮಾರರಾದ ಯೋನಾತಾನ ನನ್ನೂ ಅಬೀನಾದಾಬನನ್ನೂ ಮಲ್ಕೀಷೂವನನ್ನೂ ಸಂಹರಿಸಿದರು. ಇದಲ್ಲದೆ ಯುದ್ಧವು ಸೌಲನಿಗೆ ಭಾರವಾಗಿತ್ತು. ಯಾಕಂದರೆ ಬಿಲ್ಲುಗಾರರು ಅವನನ್ನು ಬಾಣಗಳಿಂದ ಹೊಡೆದರು. ಅವನು ಅವರಿಂದ ಬಹು ಗಾಯಪಟ್ಟನು. ಆದಕಾರಣ ಅವನು ತನ್ನ ಆಯುಧ ಹಿಡಿಯುವವನಿಗೆ--ಈ ಸುನ್ನತಿ ಇಲ್ಲದವರು ಬಂದು ನನ್ನನ್ನು ತಿವಿದುಬಿಟ್ಟು ಅವಮಾನ ಮಾಡದ ಹಾಗೆ ನೀನು ನಿನ್ನ ಕತ್ತಿಯನ್ನು ಹಿರಿದು ನನ್ನನ್ನು ಅದರಿಂದ ತಿವಿ ಅಂದನು. ಆದರೆ ಅವನ ಆಯುಧ ಹಿಡಿಯು ವವನು ಬಹು ಭಯಪಟ್ಟದ್ದರಿಂದ ಹಾಗೆ ಮಾಡ ಲೊಲ್ಲದೆ ಹೋದನು. ಆಗ ಸೌಲನು ತಾನೇ ಕತ್ತಿ ಯನ್ನು ತಕ್ಕೊಂಡು ಅದರ ಮೇಲೆ ಬಿದ್ದನು. ಸೌಲನು ಸತ್ತು ಹೋದದ್ದನ್ನು ಅವನ ಆಯುಧ ಹಿಡಿಯುವವನು ನೋಡಿದಾಗ ಅವನೂ ಹಾಗೆಯೇ ತನ್ನ ಕತ್ತಿಯ ಮೇಲೆ ಬಿದ್ದು ಅವನ ಸಂಗಡ ಸತ್ತನು. ಹೀಗೆ ಆ ದಿನ ಸೌಲನೂ ಅವನ ಮೂವರು ಮಕ್ಕಳೂ ಅವನ ಆಯುಧ ಹಿಡಿಯುವವನೂ ಎಲ್ಲಾ ಜನರೂ ಸತ್ತರು. ಇಸ್ರಾಯೇಲ್ ಜನರು ಓಡಿಹೋದರೆಂದೂ ಸೌಲನೂ ಅವನ ಮಕ್ಕಳೂ ಸತ್ತರೆಂದೂ ತಗ್ಗಿಗೂ ಯೊರ್ದನಿಗೂ ಆಚೆಯಲ್ಲಿದ್ದ ಇಸ್ರಾಯೇಲ್ ಜನರು ಕಂಡಾಗ ಅವರು ತಮ್ಮ ಪಟ್ಟಣಗಳನ್ನು ಬಿಟ್ಟು ಓಡಿ ಹೋದರು. ಆಗ ಫಿಲಿಷ್ಟಿಯರು ಬಂದು ಅವುಗಳಲ್ಲಿ ವಾಸವಾಗಿದ್ದರು.
- 2 Kings 17:1–4 2 ಅರಸುಗಳು 17:1–4ಯೆಹೂದದ ಅರಸನಾದ ಆಹಾಜನ ಆಳ್ವಿಕೆಯ ಹನ್ನೆರಡನೇ ವರುಷದಲ್ಲಿ ಏಲನ ಮಗನಾದ ಹೋಶೇಯನು ಸಮಾರ್ಯದಲ್ಲಿ ಇಸ್ರಾ ಯೇಲಿನ ಮೇಲೆ ಒಂಭತ್ತು ವರುಷ ಆಳಿದನು. ಅವನು ಕರ್ತನ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿದನು; ಆದರೆ ತನಗೆ ಮುಂಚೆ ಇದ್ದ ಇಸ್ರಾಯೇಲಿನ ಅರಸುಗಳ ಹಾಗಲ್ಲ. ಅಶ್ಶೂರಿನ ಅರಸನಾದ ಶಲ್ಮನೆಸೆರನು ಅವನ ಮೇಲೆ ಬಂದದ್ದರಿಂದ ಹೋಶೇಯನು ಅವನಿಗೆ ಸೇವಕ ನಾಗಿ ಕಪ್ಪವನ್ನು ಕೊಟ್ಟನು. ಆದರೆ ಅಶ್ಶೂರಿನ ಅರಸನು ಹೋಶೇಯನಲ್ಲಿ ಒಳಸಂಚನ್ನು ಕಂಡುಹಿಡಿದನು. ಏನಂದರೆ, ಹೋಶೇಯನು ಅಶ್ಶೂರಿನ ಅರಸನಿಗೆ ಪ್ರತಿ ವರುಷಕ್ಕೂ ಕೊಡುವ ಕಪ್ಪವನ್ನು ಕೊಡದೆ ಐಗುಪ್ತದ ಅರಸನಾದ ಸೋ ಎಂಬವನ ಬಳಿಗೆ ಸೇವ ಕರನ್ನು ಕಳುಹಿಸಿದ್ದನು. ಆದದರಿಂದ ಅಶ್ಶೂರಿನ ಅರ ಸನು ಅವನನ್ನು ಕಟ್ಟಿ ಸೆರೆಮನೆಯಲ್ಲಿ ಬಂಧಿಸಿದನು.
- 1 Kings 12:15–16 1 ಅರಸುಗಳು 12:15–16ಹೀಗೆಯೇ ಅರಸನು ಜನರ ಮಾತು ಕೇಳದೆ ಹೋದನು. ಯಾಕಂದರೆ ಕರ್ತನು ನೆಬಾಟನ ಮಗ ನಾದ ಯೆರೊಬ್ಬಾಮನಿಗೆ ಶಿಲೋನ್ಯನಾದ ಅಹೀಯನ ಮುಖಾಂತರವಾಗಿ ಹೇಳಿದ ಮಾತು ಈಡೇರುವದಕ್ಕೆ ಕಾರಣವು ಕರ್ತನಿಂದ ಉಂಟಾಯಿತು. ಅರಸನು ಅವರ ಮಾತನ್ನು ಕೇಳದೆ ಹೋದನೆಂದು ಸಮಸ್ತ ಇಸ್ರಾಯೇಲ್ಯರು ನೋಡಿದಾಗ ಜನರು ಅರಸನಿಗೆ ಪ್ರತ್ಯುತ್ತರವಾಗಿ ದಾವೀದನಲ್ಲಿ ನಮಗೆ ಭಾಗವೇನು? ಇಷಯನ ಮಗನಲ್ಲಿ ನಮಗೆ ಬಾಧ್ಯತೆ ಏನು? ಇಸ್ರಾ ಯೇಲ್ಯರೇ, ನಿಮ್ಮ ಡೇರೆಗಳಿಗೆ ಹೋಗಿರಿ; ದಾವೀ ದನೇ, ಈಗ ನಿನ್ನ ಮನೆಯನ್ನು ನೋಡಿಕೋ ಎಂದು ಹೇಳಿ ಇಸ್ರಾಯೇಲ್ಯರು ತಮ್ಮ ತಮ್ಮ ಡೇರೆಗಳಿಗೆ ಹೋದರು.
- 1 Kings 12:26–32 1 ಅರಸುಗಳು 12:26–32ಆದರೆ ಯಾರೊಬ್ಬಾಮನು ತನ್ನ ಹೃದಯದಲ್ಲಿ--ಈಗ ರಾಜ್ಯವು ದಾವೀದನ ಮನೆಗೆ ಹಿಂತಿರುಗುವದು. ಈ ಜನರು ಯೆರೂಸಲೇಮಿನಲ್ಲಿರುವ ಕರ್ತನ ಮಂದಿರಕ್ಕೆ ಬಲಿ ಅರ್ಪಿಸಲು ಹೋದರೆ ಆಗ ಈ ಜನರ ಹೃದಯವು ಯೆಹೂದದ ಅರಸನಾದ ರೆಹಬ್ಬಾಮನ ಕಡೆಗೆ ಅಂದರೆ ತಮ್ಮ ಯಜಮಾನನ ಕಡೆಗೆ ಮತ್ತೆ ತಿರುಗುವದು. ಅವರು ನನ್ನನ್ನು ಕೊಂದು ಹಾಕಿ ಯೆಹೂದದ ಅರಸನಾದ ರೆಹೆಬ್ಬಾಮನ ಕಡೆಗೆ ತಿರುಗಿ ಹೋದಾರು. ಎಂದು ಅರಸನು ಆಲೋ ಚನೆ ಕೇಳಿಕೊಂಡು ಎರಡು ಬಂಗಾರದ ಹೋರಿಗ ಳನ್ನು ಮಾಡಿಸಿ ಜನರಿಗೆ--ಯೆರೂಸಲೇಮಿನ ವರೆಗೂ ಹೋಗುವದು ನಿಮಗೆ ಕಷ್ಟವಾಗಿದೆ. ಓ ಇಸ್ರಾಯೇಲೇ, ಇಗೋ, ಐಗುಪ್ತದಿಂದ ನಿನ್ನನ್ನು ಬರಮಾಡಿದ ನಿನ್ನ ಈ ದೇವರುಗಳು ಅಂದನು. ಅವನು ಒಂದನ್ನು ಬೇತೇಲಿನಲ್ಲಿಯೂ ಮತ್ತೊಂದನ್ನು ದಾನಿನಲ್ಲಿಯೂ ಇಟ್ಟನು. ಈ ಕಾರ್ಯವು ಪಾಪಕ್ಕೆ ಕಾರಣವಾಯಿತು. ಜನರು ಒಂದರ ದರ್ಶನಕ್ಕೋಸ್ಕರ ದಾನಿನ ವರೆಗೂ ಹೋದರು. ಇದಲ್ಲದೆ ಅವನು ಉನ್ನತ ಸ್ಥಳಗಳ ಒಂದು ಮನೆಯನ್ನು ಕಟ್ಟಿಸಿ ಲೇವಿಯ ಮಕ್ಕಳಲ್ಲದ ಜನರಲ್ಲಿ ಕನಿಷ್ಠ ಜನರೊಳಗಿಂದ ಯಾಜಕರನ್ನು ನೇಮಿಸಿ ದನು. ಯಾರೊಬ್ಬಾಮನು ಎಂಟನೇ ತಿಂಗಳ ಹದಿ ನೈದನೇ ದಿವಸದಲ್ಲಿ ಯೆಹೂದದಲ್ಲಿರುವ ಹಬ್ಬದ ಪ್ರಕಾರ ಹಬ್ಬವನ್ನು ನೇಮಿಸಿ ಪೀಠದ ಮೇಲೆ ಬಲಿಗ ಳನ್ನು ಅರ್ಪಿಸಿದನು. ಈ ಪ್ರಕಾರ ಅವನು ಬೇತೇಲಿ ನಲ್ಲಿ ಮಾಡಿ ಅವನು ಉಂಟುಮಾಡಿದ ಹೋರಿಗಳಿಗೆ ಬಲಿಗಳನ್ನು ಅರ್ಪಿಸಲು ಬೇತೇಲಿನಲ್ಲಿ ತಾನು ಮಾಡಿದ ಉನ್ನತ ಸ್ಥಳಗಳ ಯಾಜಕರನ್ನೇ ನೇಮಿಸಿದನು.ಹೀಗೆಯೇ ಅವನು ತನ್ನ ಸ್ವಂತ ಹೃದಯದಲ್ಲಿ ಯೋಚಿಸಿದ ತಿಂಗಳಲ್ಲಿ ಎಂಟನೇ ತಿಂಗಳ ಹದಿನೈದನೇ ದಿವಸದಲ್ಲಿ ಅವನು ಬೇತೇಲಿನಲ್ಲಿ ಉಂಟುಮಾಡಿದ ಪೀಠದ ಮೇಲೆ ಬಲಿಗಳನ್ನರ್ಪಿಸಿ ಇಸ್ರಾಯೇಲಿನ ಮಕ್ಕಳಿಗೆ ಹಬ್ಬವನ್ನು ನೇಮಿಸಿದನು. ಇದಲ್ಲದೆ ತಾನೇ ಪೀಠದ ಮೇಲೆ ಬಲಿಗಳನ್ನರ್ಪಿಸಿ ಧೂಪವನ್ನು ಸುಟ್ಟನು.
- 1 Samuel 12:13 1 ಸಮುವೇಲನು 12:13ಇಗೋ, ನೀವು ಆರಿಸಿಕೊಂಡು ಅಪೇಕ್ಷಿಸಿದ ಅರಸನು ಇಲ್ಲಿ ಇದ್ದಾನೆ. ಇಗೋ, ಕರ್ತನು ನಿಮ್ಮ ಮೇಲೆ ಅವನನ್ನು ಅರಸನನ್ನಾಗಿ ನೇಮಿಸಿದ್ದಾನೆ.
- 1 Samuel 15:22–23 1 ಸಮುವೇಲನು 15:22–23ಅದಕ್ಕೆ ಸಮುವೇಲನು--ಕರ್ತನ ವಾಕ್ಯಕ್ಕೆ ವಿಧೇಯನಾದರೆ ಕರ್ತನಿಗೆ ಆಗುವ ಸಂತೋಷ ದಹನ ಬಲಿಗಳಲ್ಲಿಯೂ ಬಲಿಗಳಲ್ಲಿಯೂ ಆಗುವದೋ? ಇಗೋ, ಬಲಿಗಿಂತ ವಿಧೇಯವಾಗುವದು ಟಗರುಗಳ ಕೊಬ್ಬಿಗಿಂತ ಆಲೈಸುವದು ಉತ್ತಮವಾಗಿರುವದು. ಎದುರು ಬೀಳುವದು ಕಣಿ ಹೇಳುವಂತೆ ಪಾಪ ವಾಗಿದೆ, ಹಟವು ದುಷ್ಟತನ ಮತ್ತು ವಿಗ್ರಹಾರಾಧನೆಗಳ ಹಾಗೆ ಇದೆ. ನೀನು ಕರ್ತನ ವಾಕ್ಯವನ್ನು ತಿರಸ್ಕಾರ ಮಾಡಿದ್ದರಿಂದ ಆತನು ನಿನ್ನನ್ನು ಅರಸನಾಗಿರದ ಹಾಗೆ ತಿರಸ್ಕಾರ ಮಾಡಿಬಿಟ್ಟನು ಅಂದನು.
- 1 Samuel 8:7–9 1 ಸಮುವೇಲನು 8:7–9ಆಗ ಕರ್ತನು ಸಮು ವೇಲನಿಗೆ--ಜನರು ನಿನಗೆ ಹೇಳಿದ್ದೆಲ್ಲಾದರಲ್ಲಿ ಅವರ ಮಾತು ಕೇಳು. ಯಾಕಂದರೆ ಅವರು ನಿನ್ನನ್ನು ತೊರೆ ದಿಲ್ಲ; ನಾನು ಅವರನ್ನು ಆಳದ ಹಾಗೆ ನನ್ನನ್ನು ತೊರೆದಿದ್ದಾರೆ. ನಾನು ಅವರನ್ನು ಐಗುಪ್ತದಿಂದ ಬರ ಮಾಡಿದ ದಿನ ಮೊದಲುಗೊಂಡು ಈ ದಿನದ ವರೆಗೂ ಅವರು ನನ್ನನ್ನು ಬಿಟ್ಟು ಅನ್ಯದೇವರುಗಳನ್ನು ಸೇವಿಸಿ ಮಾಡಿದ ಸಮಸ್ತ ಕೃತ್ಯಗಳ ಪ್ರಕಾರ ನಿನಗೂ ಮಾಡು ತ್ತಾರೆ. ಈಗ ಅವರ ಮಾತನ್ನು ಕೇಳು; ಆದರೆ ನೀನು ಅವರಿಗೆ ಕಟ್ಟಳೆಯನ್ನು ಕೊಟ್ಟು ಅವರನ್ನು ಆಳುವ ಅರಸನ ಅಧಿಕಾರವು ಎಂಥದ್ದೆಂಬದನ್ನು ತಿಳಿಸು ಅಂದನು.
- Hosea 10:3 ಹೋಶೇಯ 10:3ಅವರು--ನಮಗೆ ಅರಸನಿಲ್ಲ, ನಾವು ಕರ್ತನಿಗೆ ಭಯಪಡಲಿಲ್ಲ; ಹಾಗಾದರೆ ಅರಸನು ನಮಗೆ ಏನು ಮಾಡುವನು ಎಂದು ಅಂದುಕೊಳ್ಳುವರು.
- 1 Kings 14:7–16 1 ಅರಸುಗಳು 14:7–16ನೀನು ಹೋಗಿ ಯಾರೊಬ್ಬಾಮನಿಗೆ ಹೇಳಬೇಕಾದದ್ದು-- ಇಸ್ರಾಯೇಲಿನ ದೇವರಾದ ಕರ್ತನು ಹೇಳುವದೇ ನಂದರೆ--ನಾನು ಜನರೊಳಗಿಂದ ಎತ್ತಿ, ನಿನ್ನನ್ನು ಹೆಚ್ಚಿಸಿ ನನ್ನ ಜನರಾದ ಇಸ್ರಾಯೇಲ್ಯರ ಮೇಲೆ ನಾಯಕನಾಗ ಮಾಡಿ ದಾವೀದನ ಮನೆಯಿಂದ ರಾಜ್ಯವನ್ನು ಕಿತ್ತು ಕೊಂಡು ನಿನಗೆ ಕೊಟ್ಟೆನು. ಆದರೆ ನನ್ನ ಆಜ್ಞೆಗಳನ್ನು ಕೈಕೊಂಡು ನನ್ನ ದೃಷ್ಟಿಯಲ್ಲಿ ಮೆಚ್ಚಿಕೆಯಾದದ್ದನ್ನು ಮಾಡಿ ತನ್ನ ಸಂಪೂರ್ಣವಾದ ಹೃದಯದಿಂದ ನನ್ನನ್ನು ಹಿಂಬಾಲಿಸಿದ ನನ್ನ ಸೇವಕನಾದ ದಾವೀದನ ಹಾಗೆ ನೀನು ಇರದೆ ನಿನಗೆ ಮುಂಚೆ ಇದ್ದವರೆಲ್ಲರಿಗಿಂತ ಕೆಟ್ಟದ್ದನ್ನು ಮಾಡಿದಿ. ನೀನು ಹೋಗಿ ನನಗೆ ಕೋಪ ವನ್ನೆಬ್ಬಿಸುವ ಅನ್ಯ ದೇವರುಗಳನ್ನೂ ಎರಕ ಹೊಯ್ಯ ಲ್ಪಟ್ಟ ವಿಗ್ರಹಗಳನ್ನೂ ನಿನಗೆ ಮಾಡಿಕೊಂಡು ನನ್ನನ್ನು ನಿನ್ನ ಬೆನ್ನಿನ ಹಿಂದಕ್ಕೆ ಹಾಕಿದಿ. ಆದದರಿಂದ ಇಗೋ, ನಾನು ಯಾರೊಬ್ಬಾಮನ ಮನೆಯ ಮೇಲೆ ಕೇಡನ್ನು ಬರಮಾಡಿ ಯಾರೊಬ್ಬಾಮನ ಕಡೆಯಿಂದ ಸಮಸ್ತ ಗಂಡಸರನ್ನೂ ಇಸ್ರಾಯೇಲಿನಲ್ಲಿ ಉಳಿದು ಬಚ್ಚಿಟ್ಟು ಕೊಂಡವರನ್ನೂ ಕಡಿದು ಬಿಟ್ಟು ಅದು ತೀರುವ ವರೆಗೆ ಮನುಷ್ಯನು ಕಸವನ್ನು ಹೇಗೆ ತೆಗೆದು ಹಾಕುತ್ತಾನೋ ಹಾಗೆಯೇ ನಾನು ಯಾರೊಬ್ಬಾಮನ ಮನೆಯ ಜನಶೇಷವನ್ನು ತೆಗೆದು ಹಾಕುತ್ತೇನೆ. ಯಾರೊಬ್ಬಾಮನವರಲ್ಲಿ ಯಾವನು ಪಟ್ಟಣದಲ್ಲಿ ಸಾಯುವನೋ ಅವನನ್ನು ನಾಯಿಗಳು ತಿನ್ನುವವು; ಹೊಲದಲ್ಲಿ ಸಾಯುವವನನ್ನು ಆಕಾಶದ ಪಕ್ಷಿಗಳು ತಿನ್ನುವವು ಎಂದು ಕರ್ತನು ಹೇಳಿದ್ದಾನೆ. ಆದ ದರಿಂದ ನೀನೆದ್ದು ನಿನ್ನ ಮನೆಗೆ ಹೋಗು; ನೀನು ಪಟ್ಟಣದೊಳಗೆ ಪಾದಗಳನ್ನು ಇಡುವಷ್ಟರಲ್ಲಿ ನಿನ್ನ ಮಗನು ಸಾಯುವನು. ಇದಲ್ಲದೆ ಸಮಸ್ತ ಇಸ್ರಾ ಯೇಲ್ಯರು ಅವನಿಗೋಸ್ಕರ ಗೋಳಾಡಿ ಅವನನ್ನು ಹೂಣಿಡುವರು; ಯಾಕಂದರೆ ಯಾರೊಬ್ಬಾಮನ ವರಲ್ಲಿ ಅವನೊಬ್ಬನೇ ಸಮಾಧಿಗೆ ಸೇರುವನು; ಯಾರೊಬ್ಬಾಮನ ಮನೆಯೊಳಗೆ ಅವನು ಇಸ್ರಾಯೇ ಲಿನ ದೇವರಾದ ಕರ್ತನ ದೃಷ್ಟಿಗೆ ಒಳ್ಳೆಯವನಾಗಿ ದ್ದನು. ಇದಲ್ಲದೆ ಕರ್ತನು ಇಸ್ರಾಯೇಲ್ಯರನ್ನು ಆಳುವದಕ್ಕೆ ಅದೇ ದಿನದಲ್ಲಿ ಯಾರೊಬ್ಬಾಮನ ಮನೆಯವರನ್ನು ಕಡಿದುಬಿಡುವ ಒಬ್ಬ ಅರಸನನ್ನು ತನಗೋಸ್ಕರ ಎಬ್ಬಿಸುವನು. ಆದರೆ ಈಗಲೇ ಏನು ಆಗುವದು? ನೀರಿನಲ್ಲಿರುವ ದಂಟು ಅಲ್ಲಾಡುವ ಹಾಗೆ ಕರ್ತನು ಇಸ್ರಾಯೇಲ್ಯರನ್ನು ಹೊಡೆಯುವನು. ಇಸ್ರಾ ಯೇಲ್ಯರು ಕರ್ತನಿಗೆ ಕೋಪವನ್ನು ಎಬ್ಬಿಸಲು ತಮ್ಮ ವಿಗ್ರಹಾರಾಧನೆಗೋಸ್ಕರ ತೋಪುಗಳನ್ನು ಹಾಕಿದ್ದ ರಿಂದ ಆತನು ಅವರ ತಂದೆಗಳಿಗೆ ಕೊಟ್ಟ ಈ ಉತ್ತಮ ದೇಶದಲ್ಲಿಂದ ಅವರನ್ನು ನಿರ್ಮೂಲ ಮಾಡಿ ನದಿಯ ಆಚೆಯಲ್ಲಿ ಅವರನ್ನು ಚದರುವಂತೆ ಮಾಡುವನು. ಆತನು ಯಾರೊಬ್ಬಾಮನ ಪಾಪಗಳ ನಿಮಿತ್ತ ಇಸ್ರಾಯೇಲ್ಯರನ್ನು ಒಪ್ಪಿಸಿ ಬಿಡುವನು; ಅವನೇ ಪಾಪ ಮಾಡಿ ಪಾಪವನ್ನು ಮಾಡಲು ಇಸ್ರಾಯೇಲ್ಯರನ್ನು ಪ್ರೇರೇಪಿಸಿದನು ಅಂದನು.