Jeremiah · chapter 3 · verse 14
Jeremiah 3:14 in Kannada
ಹಿಂಜರಿದ ಮಕ್ಕಳೇ, ತಿರುಗಿಕೊಳ್ಳಿರೆಂದು ಕರ್ತನು ಅನ್ನುತ್ತಾನೆ; ನಾನು ನಿಮ್ಮನ್ನು ಮದುವೆಯಾಗಿದ್ದೇನೆ; ನಿಮ್ಮನ್ನು ಪಟ್ಟಣದೊಳಗಿಂದ ಒಬ್ಬನಂತೆಯೂ ಗೋತ್ರ ದೊಳಗಿಂದ ಇಬ್ಬರಂತೆಯೂ ತೆಗೆದುಕೊಂಡು ಚೀಯೋನಿಗೆ ಕರಕೊಂಡು ಬರುವೆನು.
Hinjarida makkale, tirugikollirendu kartanu annuttaane; naanu nimmannu maduveyaagiddene; nimmannu pattanadolaginda obbananteyoo gotra dolaginda ibbaranteyoo tegedukondu cheeyonige karakondu baruvenu.
Jeremiah 3:14 in English
- King James Version (KJV)
- Turn, O backsliding children, saith the LORD; for I am married unto you: and I will take you one of a city, and two of a family, and I will bring you to Zion:
- World English Bible (WEB)
- “Return, backsliding children,” says the LORD, “for I am a husband to you. I will take one of you from a city, and two from a family, and I will bring you to Zion.
- American Standard Version (ASV)
- Return, O backsliding children, saith Jehovah; for I am a husband unto you: and I will take you one of a city, and two of a family, and I will bring you to Zion.
- Bible in Basic English (BBE)
- Come back, O children who are turned away, says the Lord; for I am a husband to you, and I will take you, one from a town and two from a family, and will make you come to Zion;
- Darby Translation (DBY)
- Return, backsliding children, saith Jehovah; for I am a husband unto you, and I will take you, one of a city, and two of a family, and I will bring you to Zion.
- Webster's Bible (WBS)
- Turn, O backsliding children, saith the LORD; for I am married to you: and I will take you one of a city, and two of a family, and I will bring you to Zion:
- Young's Literal Translation (YLT)
- Turn back, O backsliding sons, An affirmation of Jehovah. For I have ruled over you, And taken you one of a city, and two of a family, And have brought you to Zion,
Read in context
- 12ನೀನು ಹೋಗಿ ಉತ್ತರ ದಿಕ್ಕಿಗೆ ಈ ಮಾತುಗಳನ್ನು ಸಾರು; ಯಾವವಂದರೆ--ಹಿಂದಿ ರುಗಿದ ಇಸ್ರಾಯೇಲೇ, ತಿರುಗಿಕೋ ಎಂದು ಕರ್ತನು ಅನ್ನುತ್ತಾನೆ. ನಾನು ನನ್ನ ಕೋಪವನ್ನು ನಿನ್ನ ಮೇಲೆ ಬೀಳ ಮಾಡುವದಿಲ್ಲ; ನಾನು ದಯಾಪರನು ಎಂದು ಕರ್ತನು ಅನ್ನುತ್ತಾನೆ, ಎಂದೆಂದಿಗೂ ಕೋಪವಿಟ್ಟು ಕೊಳ್ಳುವದಿಲ್ಲ.
- 13ನಿನ್ನ ದೇವರಾದ ಕರ್ತನಿಗೆ ವಿರೋಧ ವಾಗಿ ದ್ರೋಹಮಾಡಿ ಒಂದೊಂದು ಹಸಿರು ಮರದ ಕೆಳಗೆ ನಿನ್ನ ಮಾರ್ಗಗಳನ್ನು ಅನ್ಯರಿಗೆ ಚದರಿಸಿ ನನ್ನ ಶಬ್ದಕ್ಕೆ ಕಿವಿಗೊಡಲಿಲ್ಲವೆಂಬ ನಿನ್ನ ಅಕ್ರಮವನ್ನು ಮಾತ್ರ ಅರಿಕೆಮಾಡೆಂದು ಕರ್ತನು ಅನ್ನುತ್ತಾನೆ.
- 14ಹಿಂಜರಿದ ಮಕ್ಕಳೇ, ತಿರುಗಿಕೊಳ್ಳಿರೆಂದು ಕರ್ತನು ಅನ್ನುತ್ತಾನೆ; ನಾನು ನಿಮ್ಮನ್ನು ಮದುವೆಯಾಗಿದ್ದೇನೆ; ನಿಮ್ಮನ್ನು ಪಟ್ಟಣದೊಳಗಿಂದ ಒಬ್ಬನಂತೆಯೂ ಗೋತ್ರ ದೊಳಗಿಂದ ಇಬ್ಬರಂತೆಯೂ ತೆಗೆದುಕೊಂಡು ಚೀಯೋನಿಗೆ ಕರಕೊಂಡು ಬರುವೆನು.
- 15ನನ್ನ ಹೃದ ಯಕ್ಕೆ ಸರಿಯಾದ ಪಾಲಕರನ್ನು ನಿಮಗೆ ಕೊಡುವೆನು; ಅವರು ತಿಳುವಳಿಕೆಯಿಂದಲೂ ಬುದ್ಧಿಯಿಂದಲೂ ನಿಮ್ಮನ್ನು ಪೋಷಿಸುವರು.
- 16ನೀವು ದೇಶದಲ್ಲಿ ಅಭಿ ವೃದ್ಧಿಯಾಗಿ ಫಲವುಳ್ಳವರಾದ ಮೇಲೆ ಆ ದಿವಸಗಳಲ್ಲಿ --ಕರ್ತನ ಒಡಂಬಡಿಕೆಯ ಮಂಜೂ ಷವು ಎಂದು ಇನ್ನು ಮೇಲೆ ಅವರು ಹೇಳುವದಿಲ್ಲ ಇಲ್ಲವೆ ಅದು ಮನಸ್ಸಿಗೆ ಬರುವದಿಲ್ಲ ಇಲ್ಲವೆ ಅದು ಜ್ಞಾಪಕಕ್ಕೆ ಬಾರದು; ಇಲ್ಲವೆ ವಿಚಾರಿಸಲ್ಪಡುವದಿಲ್ಲ; ಇನ್ನು ಮೇಲೆ ಮಾಡಲ್ಪಡುವದಿಲ್ಲ ಎಂದು ಕರ್ತನು ಅನ್ನು ತ್ತಾನೆ.
Cross references
- Hosea 2:19–20 ಹೋಶೇಯ 2:19–20ನಿನ್ನನ್ನು ನನಗೆ ಸದಾ ಕಾಲಕ್ಕೆ ನಿಶ್ಚಿತ್ತಾರ್ಥ ಮಾಡಿಕೊಳ್ಳುವೆನು; ಹೌದು, ನೀತಿ ಯಿಂದಲೂ ನ್ಯಾಯದಿಂದಲೂ ದಯೆಯಿಂದಲೂ ಕರುಣೆಯಿಂದಲೂ ನನ್ನನ್ನು ನಿನಗೆ ನಿಶ್ಚಿತ್ತಾರ್ಥಮಾಡಿ ಕೊಳ್ಳುವೆನು. ನಾನು ನಿನ್ನನ್ನು ನಂಬಿಕೆಯಿಂದಲೇ ನಿಶ್ಚಿತಾರ್ಥ ಮಾಡಿಕೊಳ್ಳುವೆನು; ಆಗ ನೀನು ಕರ್ತನನ್ನು ತಿಳಿದುಕೊಳ್ಳುವಿ.
- Jeremiah 2:19 ಯೆರೆಮೀಯ 2:19ನಿನ್ನ ಕೆಟ್ಟತನವೇ ನಿನ್ನನ್ನು ತಿದ್ದುವದು; ನಿನ್ನ ಹಿಂಜಾರಿಕೆಗಳೇ ನಿನ್ನನ್ನು ಗದರಿಸುವವು; ಹೀಗಿ ರುವದರಿಂದ ನೀನು ನಿನ್ನ ದೇವರಾದ ಕರ್ತನನ್ನು ಬಿಟ್ಟದ್ದೂ ನನ್ನ ಭಯವೂ ನಿನ್ನಲ್ಲಿ ಇಲ್ಲದಿರುವದೂ ಕೆಟ್ಟದ್ದೂ ಕಹಿಯಾದದ್ದೂ ಎಂದು ತಿಳುಕೊಂಡು ನೋಡು ಎಂದು ಸೈನ್ಯಗಳ ಕರ್ತನಾದ ದೇವರು ಅನ್ನುತ್ತಾನೆ.
- Jeremiah 31:32 ಯೆರೆಮೀಯ 31:32ನಾನು ಅವರ ತಂದೆಗಳ ಸಂಗಡ ಅವರನ್ನು ಐಗುಪ್ತದೇಶದಿಂದ ಹೊರತರುವದಕ್ಕೆ ಅವರ ಕೈ ಹಿಡಿದ ದಿನದಲ್ಲಿ ಮಾಡಿದ ಒಡಂಬಡಿಕೆಯ ಹಾಗಲ್ಲ; ನಾನು ಅವರ ಯಜಮಾನನಾಗಿದ್ದಾಗ್ಯೂ ಆ ನನ್ನ ಒಡಂಬಡಿಕೆಯನ್ನು ಅವರು ವಿಾರಿದರೆಂದು, ಕರ್ತನು ಅನ್ನುತ್ತಾನೆ.
- Isaiah 54:5 ಯೆಶಾಯ 54:5ನಿನ್ನನ್ನು ಉಂಟುಮಾಡಿದವನೇ ನಿನ್ನ ಪತಿ; ಸೈನ್ಯಗಳ ಕರ್ತನು ಎಂಬದು ಆತನ ಹೆಸರು; ನಿನ್ನ ವಿಮೋಚಕನು ಇಸ್ರಾ ಯೇಲಿನ ಪರಿಶುದ್ಧನೇ; ಸಮಸ್ತ ಭೂಮಿಯ ದೇವರು ಎಂದು ಆತನು ಕರೆಯಲ್ಪಡುವನು.
- Jeremiah 31:8–10 ಯೆರೆಮೀಯ 31:8–10ಇಗೋ, ನಾನು ಅವರನ್ನು ಉತ್ತರ ದೇಶ ದಿಂದ ಬರಮಾಡಿ ಭೂಮಿಯ ಮೇರೆಗಳಿಂದ ಅವರನ್ನು ಕೂಡಿಸುತ್ತೇನೆ; ಅವರಲ್ಲಿ ಕುರುಡರೂ ಕುಂಟರೂ ಗರ್ಭಿಣಿಯಾದವರೂ ದಿನತುಂಬಿದ ಗರ್ಭಿಣಿಯರ ಸಹಿತವಾಗಿ ಇರುವರು; ದೊಡ್ಡ ಗುಂಪಾಗಿ ಇಲ್ಲಿಗೆ ಹಿಂತಿರುಗಿ ಬರುವರು. ಅಳುತ್ತಾ ಬರುವರು; ಬಿನ್ನಹಗಳ ಸಂಗಡ ಅವರನ್ನು ನಡಿಸುವೆನು; ಅವರು ಎಡವದ ಸಮದಾರಿಯಲ್ಲಿ ನೀರಿನ ನದಿಗಳ ಬಳಿಯಲ್ಲಿ ನಡೆಯುವಂತೆ ಮಾಡುವೆನು; ನಾನು ಇಸ್ರಾಯೇಲಿಗೆ ತಂದೆಯಾಗಿದ್ದೇನೆ; ಎಫ್ರಾಯಾಮನು ನನ್ನ ಚೊಚ್ಚಲನೇ. ಜನಾಂಗಗಳೇ, ಕರ್ತನ ವಾಕ್ಯವನ್ನು ಕೇಳಿರಿ; ದೂರದಲ್ಲಿರುವ ದ್ವೀಪಗಳಲ್ಲಿ ಅದನ್ನು ತಿಳಿಸಿ ಹೀಗೆ ಹೇಳಿರಿ--ಇಸ್ರಾಯೇಲನನ್ನು ಚದರಿಸಿದಾತನು ಅವ ನನ್ನು ಕೂಡಿಸುವನು; ಕುರುಬನು ತನ್ನ ಮಂದೆಯನ್ನು ಕಾಯುವ ಹಾಗೆ ಅವನನ್ನು ಕಾಯುವನು.
- Zechariah 13:7–9 ಜೆಕರ್ಯ 13:7–9ಓ ಕತ್ತಿಯೇ, ನನ್ನ ಕುರುಬನಿಗೆ ವಿರೋಧವಾಗಿ, ನನ್ನ ಸಂಗಡಿಗನಾದ ಮನುಷ್ಯನಿಗೆ ವಿರೋಧವಾಗಿ, ಎಚ್ಚರವಾಗು ಎಂದು ಸೈನ್ಯಗಳ ಕರ್ತನು ಅನ್ನುತ್ತಾನೆ; ಕುರುಬನನ್ನು ಹೊಡೆ, ಆಗ ಕುರಿಗಳು ಚದರಿ ಹೋಗುವವು; ಆದರೆ ಚಿಕ್ಕವುಗಳ ಮೇಲೆ ನನ್ನ ಕೈಯನ್ನು ತಿರುಗಿಸುವೆನು ಎಂದು ಹೇಳುತ್ತಾನೆ. ಕರ್ತನು--ಇದಲ್ಲದೆ ಸಮಸ್ತ ದೇಶದಲ್ಲಿ ಆಗುವದೇನಂದರೆ-- ಅದರಲ್ಲಿ ಎರಡು ಪಾಲು ಕಡಿಯಲ್ಪಟ್ಟು ಸಾಯುವದು; ಆದರೆ ಮೂರನೇ ಪಾಲು ಅದರಲ್ಲಿ ಬಿಡಲ್ಪಡುವದು.ಮೂರನೇ ಪಾಲನ್ನು ನಾನು ಬೆಂಕಿಯಲ್ಲಿ ಹಾಕಿ ಬೆಳ್ಳಿಯನ್ನು ಶುದ್ಧಮಾಡುವಂತೆ ಶುದ್ಧಮಾಡುವೆನು; ಬಂಗಾರವು ಶೋಧಿಸಲ್ಪಡುವ ಪ್ರಕಾರ ಅವರನ್ನು ಶೋಧಿಸುವೆನು; ಅವರು ನನ್ನ ಹೆಸರನ್ನು ಕರೆಯುವರು; ನಾನು ಅವರಿಗೆ ಉತ್ತರ ಕೊಡುವೆನು; ನಾನು--ಇದು ನನ್ನ ಜನವೆಂದು ಹೇಳುವೆನು; ಕರ್ತನು ನನ್ನ ದೇವರೆಂದು ಅವರು ಹೇಳುವರು ಎಂದು ಹೇಳುತ್ತಾನೆ. ಮೂರನೇ ಪಾಲನ್ನು ನಾನು ಬೆಂಕಿಯಲ್ಲಿ ಹಾಕಿ ಬೆಳ್ಳಿಯನ್ನು ಶುದ್ಧಮಾಡುವಂತೆ ಶುದ್ಧಮಾಡುವೆನು; ಬಂಗಾರವು ಶೋಧಿಸಲ್ಪಡುವ ಪ್ರಕಾರ ಅವರನ್ನು ಶೋಧಿಸುವೆನು; ಅವರು ನನ್ನ ಹೆಸರನ್ನು ಕರೆಯುವರು; ನಾನು ಅವರಿಗೆ ಉತ್ತರ ಕೊಡುವೆನು; ನಾನು--ಇದು ನನ್ನ ಜನವೆಂದು ಹೇಳುವೆನು; ಕರ್ತನು ನನ್ನ ದೇವರೆಂದು ಅವರು ಹೇಳುವರು ಎಂದು ಹೇಳುತ್ತಾನೆ.
- Ezekiel 34:11–14 ಯೆಹೆಜ್ಕೇಲನು 34:11–14ದೇವರಾದ ಕರ್ತನು ಹೀಗೆ ಹೇಳುತ್ತಾನೆ; ಇಗೋ, ನಾನು ಹೌದು, ನಾನೇ ನನ್ನ ಕುರಿಗಳನ್ನು ವಿಚಾರಿಸಿ ಅವುಗಳನ್ನು ಹುಡುಕುತ್ತೇನೆ. ಕುರುಬನು ಚದರಿದ್ದ ತನ್ನ ಕುರಿಗಳ ಮಧ್ಯದಲ್ಲಿ ಇರುವ ದಿನದಲ್ಲಿ ತನ್ನ ಮಂದೆಯನ್ನು ಹುಡುಕುವ ಪ್ರಕಾರ ನಾನು ನನ್ನ ಕುರಿಗಳನ್ನು ಹುಡುಕಿ ಕಾರ್ಮುಗಿಲಿನ ದಿನದಲ್ಲಿ ಚದರಿ ಹೋದ ಅವುಗಳನ್ನು ಎಲ್ಲಾ ಸ್ಥಳಗಳಿಂದ ಬಿಡಿಸುವೆನು. ಜನಗಳೊಳಗಿಂದ ಅವುಗಳನ್ನು ಹೊರಗೆ ತೆಗೆದು, ದೇಶಗಳಿಂದ ಅವುಗಳನ್ನು ಕೂಡಿಸಿ, ಅವುಗಳ ಸ್ವಂತ ದೇಶಕ್ಕೆ ತರುವೆನು. ಇಸ್ರಾಯೇಲಿನ ಪರ್ವತಗಳ ಮೇಲೆ ನದಿಗಳಲ್ಲಿ ನಿವಾಸಿಸುವ ಎಲ್ಲಾ ದೇಶಗಳಲ್ಲಿ ಮೇಯಿಸುವೆನು. ನಾನು ಒಳ್ಳೇ ಮೇವಿನಲ್ಲಿ ಅವು ಗಳನ್ನು ಮೇಯಿಸುವೆನು; ಇಸ್ರಾಯೇಲಿನ ಎತ್ತರವಾದ ಪರ್ವತಗಳಲ್ಲಿ ಅವುಗಳ ಮಂದೆಯು ಇರುವದು. ಅವುಗಳು ಆ ಒಳ್ಳೆಯ ಮಂದೆಯಲ್ಲಿ ಮಲಗಿ ಇಸ್ರಾ ಯೇಲಿನ ಪರ್ವತಗಳ ಮೇಲೆ ಪುಷ್ಟಿಯುಳ್ಳ ಮೇವನ್ನು ಮೇಯುವವು.
- Isaiah 11:11–12 ಯೆಶಾಯ 11:11–12ಆ ದಿನದಲ್ಲಿ ಕರ್ತನು ಉಳಿದ ತನ್ನ ಜನರನ್ನು ಬಿಡಿಸಿಕೊಳ್ಳುವದಕ್ಕೆ ಎರಡನೇ ಸಾರಿ ಕೈಹಾಕಿ ಅಶ್ಶೂರ; ಐಗುಪ್ತ, ಪತ್ರೋಸ್, ಕೂಷ್, ಏಲಾಮ್, ಶಿನಾರ್, ಹಮಾಥ್ ಮತ್ತು ಸಮುದ್ರದ ದ್ವೀಪಗಳಿಂದಲೂ ಉಳಿದವರನ್ನು ಬರಮಾಡಿಕೊಳ್ಳುವನು. ಜನಾಂಗ ಗಳಿಗೆ ಗುರುತಾಗಿ ಇಟ್ಟ ಇಸ್ರಾಯೇಲಿನಿಂದ ತಳ್ಳಿಬಿಟ್ಟವ ರನ್ನು ಕೂಡಿಸುವನು ಮತ್ತು ಯೆಹೂದದಿಂದ ಚದರಿದ ವರನ್ನು ಭೂಮಿಯ ನಾಲ್ಕು ಮೂಲೆಗಳಿಂದ ಒಟ್ಟುಗೂಡಿಸುವನು.
- Isaiah 10:22 ಯೆಶಾಯ 10:22ತನ್ನ ಜನರಾದ ಇಸ್ರಾಯೇಲ್ಯರು ಸಮುದ್ರದ ಮರಳಿನಂತೆ ಇದ್ದರೂ ಅವರಲ್ಲಿ ಉಳಿದವರು ಮಾತ್ರ ಹಿಂತಿರು ಗುವರು; ನಾಶವಾಗುವದಕ್ಕೆ ವಿಧಿಸಲ್ಪಟ್ಟದ್ದು ನೀತಿ ಯೊಂದಿಗೆ ತುಂಬಿ ತುಳುಕುವದು.
- Jeremiah 23:3 ಯೆರೆಮೀಯ 23:3ನಾನು ನನ್ನ ಮಂದೆಯ ಶೇಷವನ್ನು, ಅವರನ್ನು ಓಡಿಸಿಬಿಟ್ಟ ಎಲ್ಲಾ ದೇಶಗಳಿಂದ ಕೂಡಿಸಿ ತಮ್ಮ ಹಟ್ಟಿಗಳಿಗೆ ತಿರುಗಿ ತರುವೆನು; ಅವರು ಫಲಕಾರಿಯಾಗಿ ಹೆಚ್ಚುವರು.
- Isaiah 6:13 ಯೆಶಾಯ 6:13ಆದರೆ ಹತ್ತನೆಯ ಪಾಲು ಉಳಿದಿದ್ದರೂ ಸಹ ಅದು ಹಿಂತಿರುಗುವದ ರಿಂದ ಅದನ್ನು ತಿಂದು ಬಿಡುವದು; ಏಲಾಮರವೂ ಓಕ್ ಮರವೂ ತಮ್ಮ ಎಲೆಗಳನ್ನು ಬಿಡುವಾಗ ತಮ್ಮ ಸಾರವು ತಮ್ಮೊಳಗೆ ಇರುವಂತೆಯೇ ಪರಿಶುದ್ಧ ಸಂತಾನವು ಅದರ ಆಧಾರವಾಗಿರುವದು ಎಂದು ಉತ್ತರ ಕೊಟ್ಟನು.
- Jeremiah 2:2 ಯೆರೆಮೀಯ 2:2ನೀನು ಹೋಗಿ ಯೆರೂಸಲೇಮಿನ ಕಿವಿಗಳಲ್ಲಿ ಕೂಗಿ ಹೇಳ ಬೇಕಾದದ್ದೇನಂದರೆ, ಕರ್ತನು ಹೀಗೆ ಹೇಳುತ್ತಾನೆ --ನಾನು ನಿನ್ನನ್ನು ನಿನ್ನ ಯೌವನದ ವಾತ್ಸಲ್ಯವನ್ನೂ ನಿನ್ನ ನಿಶ್ಚಿತಾರ್ಥದ ಪ್ರೀತಿಯನ್ನೂ ನೀನು ಅರಣ್ಯದಲ್ಲಿ ಬಿತ್ತಲ್ಪಡದ ದೇಶದಲ್ಲಿ ನನ್ನನ್ನು ಹಿಂಬಾಲಿಸಿದ್ದನ್ನೂ ಜ್ಞಾಪಕಮಾಡಿಕೊಳ್ಳುತ್ತೇನೆ.
Original words (Hebrew)
- Turn · H7725שׁוּב shûwb
- backsliding · H7726שׁוֹבָב shôwbâb
- children · H1121בֵּן bên
- saith · H5002נְאֻם nᵉʼum
- married · H1166בָּעַל bâʻal
- take · H3947לָקַח lâqach
- one · H259אֶחָד ʼechâd
- city · H5892עִיר ʻîyr
- two · H8147שְׁנַיִם shᵉnayim
- family · H4940מִשְׁפָּחָה mishpâchâh
- bring · H935בּוֹא bôwʼ
- Zion · H6726צִיּוֹן Tsîyôwn