Isaiah · chapter 1 · verse 27
Isaiah 1:27 in Kannada
ಚೀಯೋನು ನ್ಯಾಯತೀರ್ಪಿನಿಂದಲೂ ಅವಳ ಪರಿವರ್ತನೆಯನ್ನು ಹೊಂದಿದವರು ನೀತಿಯಿಂದಲೂ ಬಿಡುಗಡೆಯಾಗುವರು
Cheeyonu nyaayateerpinindaloo avala parivartaneyannu hondidavaru neetiyindaloo bidugadeyaaguvaru
Isaiah 1:27 in English
- King James Version (KJV)
- Zion shall be redeemed with judgment, and her converts with righteousness.
- World English Bible (WEB)
- Zion shall be redeemed with justice, and her converts with righteousness.
- American Standard Version (ASV)
- Zion shall be redeemed with justice, and her converts with righteousness.
- Bible in Basic English (BBE)
- Upright acts will be the price of Zion's forgiveness, and by righteousness will men be living there.
- Darby Translation (DBY)
- Zion shall be redeemed with judgment, and they that return of her with righteousness.
- Webster's Bible (WBS)
- Zion shall be redeemed with judgment, and her converts with righteousness.
- Young's Literal Translation (YLT)
- Zion in judgment is redeemed, And her captivity in righteousness.
Read in context
- 25ನನ್ನ ಕೈಯನ್ನು ನಿನ್ನ ಕಡೆಗೆ ತಿರುಗಿಸಿ ಮಲಿನವನ್ನು ಸ್ವಚ್ಚವಾಗಿ ಶುದ್ಧಮಾಡಿ ನಿನ್ನ ಎಲ್ಲಾ ಕಲ್ಮಷವನ್ನು ತೆಗೆದು ಬಿಡುವೆನು.
- 26ನಿನ್ನ ನ್ಯಾಯಾಧಿಪತಿಗಳನ್ನು ಮುಂಚಿನ ಹಾಗೆಯೂ ನಿನ್ನ ಆಲೋಚನಾ ಪರರನ್ನು ಪ್ರಾರಂಭ ದಲ್ಲಿದ್ದ ಹಾಗೆಯೂ ತಿರಿಗಿ ಒದಗಿಸಿಕೊಡುವೆನು: ತರುವಾಯ ನೀನು ನೀತಿಯುಳ್ಳ ಪಟ್ಟಣವೆಂದೂ ನಂಬಿಗಸ್ತಿಕೆಯ ಪಟ್ಟಣವೆಂದೂ ಕರೆಯಲ್ಪಡುವಿ.
- 27ಚೀಯೋನು ನ್ಯಾಯತೀರ್ಪಿನಿಂದಲೂ ಅವಳ ಪರಿವರ್ತನೆಯನ್ನು ಹೊಂದಿದವರು ನೀತಿಯಿಂದಲೂ ಬಿಡುಗಡೆಯಾಗುವರು
- 28ಆದರೆ ದ್ರೋಹಿಗಳೂ ಪಾಪಿಗಳೂ ಒಟ್ಟಾಗಿ ನಾಶವಾಗುವರು ಮತ್ತು ಕರ್ತ ನನ್ನು ತೊರೆದವರು ದಹಿಸಲ್ಪಡುವರು.
- 29ನೀವು ಇಷ್ಟ ಪಟ್ಟ ಏಲಾಮರಗಳ ನಿಮಿತ್ತ ನಾಚಿಕೊಳ್ಳುವರು, ಆರಿಸಿಕೊಂಡ ವನಗಳ ವಿಷಯವಾಗಿ ಲಜ್ಜೆಪಡುವಿರಿ.
Cross references
- Isaiah 62:12 ಯೆಶಾಯ 62:12ಆಗ ಅವರು--ಪರಿಶುದ್ಧ ಜನರೂ ಕರ್ತನು ವಿಮೋಚಿಸಿದ ವರೂ ಎಂದು ಕರೆಯಲ್ಪಡುವರು; ನೀನು ಕಂಡು ಕೊಳ್ಳಲ್ಪಟ್ಟವಳೂ ತೊರೆಯಲ್ಪಡದ ಪಟ್ಟಣವೂ ಎಂದು ಕರೆಯಲ್ಪಡುವಿ.
- Isaiah 45:21–25 ಯೆಶಾಯ 45:21–25ನೀವು ಹೇಳಿರಿ ಮತ್ತು ಅವರನ್ನು ಸವಿಾಪಕ್ಕೆ ತನ್ನಿರಿ; ಹೌದು, ಒಟ್ಟಿಗೆ ಅವರು ಆಲೋಚಿಸಲಿ; ಈ ಸಂಗತಿಗಳನ್ನು ಪುರಾತನ ಕಾಲದಿಂದಲೂ ಪ್ರಕಟಿಸಿದವರು ಯಾರು? ಆ ಕಾಲ ದಿಂದ ತಿಳಿಸಿದವನು ಯಾರು? ಕರ್ತನಾದ ನಾನೇ ಅಲ್ಲವೇ? ನನ್ನ ಹೊರತು ಬೇರೆ ದೇವರು ಇಲ್ಲವೇ ಇಲ್ಲ, ನನ್ನ ಹೊರತಾಗಿ ನೀತಿಯುಳ್ಳ ದೇವರೂ ರಕ್ಷಕನೂ ಇಲ್ಲವೇ ಇಲ್ಲ. ಎಲ್ಲಾ ದಿಗಂತಗಳವರೇ, ನನ್ನ ಕಡೆಗೆ ನೋಡಿ ರಕ್ಷಣೆಯನ್ನು ಹೊಂದಿರಿ; ಯಾಕಂದರೆ ನಾನೇ ದೇವರು, ನನ್ನ ಹೊರತು ಯಾರೂ ಇಲ್ಲ. ನನ್ನಷ್ಟಕ್ಕೆ ನಾನೇ ಆಣೆಯನ್ನು ಇಟ್ಟಿದ್ದೇನೆ, ನೀತಿಯುಳ್ಳ ವಾಕ್ಯವು ನನ್ನ ಬಾಯಿಂದ ಹೊರಟಿದೆ, ಅದು ಹಿಂದಿರುಗದು: ಎಲ್ಲರೂ ನನಗೆ ಅಡ್ಡಬೀಳುವರು, ಪ್ರತಿ ನಾಲಿಗೆಯು ಪ್ರತಿಜ್ಞೆ ಮಾಡು ವದು. ಕರ್ತನಲ್ಲಿ ಮಾತ್ರ ನನಗೆ ನೀತಿಯೂ ಬಲವೂ ಉಂಟೆಂದು ಮನುಷ್ಯರೂ ಸಹ ಆತನ ಬಳಿಗೆ ಬರುವರು; ಆತನ ಮೇಲೆ ಉರಿಗೊಂಡವ ರೆಲ್ಲರೂ ನಾಚಿಕೆಗೆ ಈಡಾಗುವರು ಎಂದು ಒಬ್ಬನು ನಿಶ್ಚಯವಾಗಿ ಹೇಳುತ್ತಾನೆ.ಇಸ್ರಾಯೇಲಿನ ಸಂತಾನದವರೆಲ್ಲರೂ ಕರ್ತನಲ್ಲಿ ನೀತಿವಂತರಾಗಿ ಹೆಚ್ಚಳಪಡುವರು. ಇಸ್ರಾಯೇಲಿನ ಸಂತಾನದವರೆಲ್ಲರೂ ಕರ್ತನಲ್ಲಿ ನೀತಿವಂತರಾಗಿ ಹೆಚ್ಚಳಪಡುವರು.
- Isaiah 63:4 ಯೆಶಾಯ 63:4ಮುಯ್ಯಿ ತೀರಿಸುವ ದಿನವು ನನ್ನ ಹೃದಯದಲ್ಲಿ ಇದೆ; ನಾನು ವಿಮೋಚಿಸಿದವರ ವರುಷವು ಬಂತು.
- Isaiah 5:16 ಯೆಶಾಯ 5:16ಆದರೆ ಸೈನ್ಯಗಳ ಕರ್ತನು ನ್ಯಾಯತೀರ್ಪಿನಲ್ಲಿ ಉನ್ನತನಾಗಿ ರುವನು ಪರಿಶುದ್ಧನಾದ ದೇವರು ನೀತಿಯಲ್ಲಿ ಪರಿಶುದ್ಧ ನೆನಿಸಿಕೊಳ್ಳುವನು.
- 2 Corinthians 5:21 2 ಕೊರಿಂಥದವರಿಗೆ 5:21ನಾವು ಆತನಲ್ಲಿ ದೇವರ ನೀತಿಯಾಗುವಂತೆ ದೇವರು ಪಾಪವನ್ನರಿಯ ಆತನನ್ನು ನಮಗೋಸ್ಕರ ಪಾಪವಾಗ ಮಾಡಿದನು.
- Titus 2:14 ತೀತನಿಗೆ 2:14ಆತನು ನಮ್ಮನ್ನು ಸಕಲ ದುಷ್ಟತನದಿಂದ ವಿಮೋಚಿಸುವದಕ್ಕೂ ಸತ್ಕ್ರಿಯೆಗಳಲ್ಲಿ ಆಸಕ್ತರಾದ ಅಸಮಾನ್ಯ ಜನರನ್ನು ತನಗಾಗಿ ಪರಿಶುದ್ಧ ಮಾಡುವದಕ್ಕೂ ನಮಗೋಸ್ಕರ ತನ್ನನ್ನು ತಾನೇ ಒಪ್ಪಿಸಿ ಕೊಟ್ಟನು.ಈ ಕಾರ್ಯಗಳ ವಿಷಯದಲ್ಲಿ ಮಾತನಾಡುತ್ತಾ ಎಚ್ಚರಿಸುತ್ತಾ ಪೂರ್ಣ ಅಧಿಕಾರದಿಂದ ಖಂಡಿಸುತ್ತಾ ಇರು. ಯಾರೂ ನಿನ್ನನ್ನು ತಿರಸ್ಕರಿಸದಿರಲಿ.
- Ephesians 1:7–8 ಎಫೆಸದವರಿಗೆ 1:7–8ಆತನ ಕೃಪಾ ಐಶ್ವರ್ಯ ಕ್ಕನುಸಾರವಾಗಿ ಆತನ ರಕ್ತದ ಮೂಲಕ ಆತನಲ್ಲಿ ನಮಗೆ ವಿಮೋಚನೆಯು ಅಂದರೆ ಪಾಪಗಳ ಕ್ಷಮಾ ಪಣೆಯು ಉಂಟಾಯಿತು. ಹೀಗೆ ಆತನು ತನ್ನ ಕೃಪಾತಿಶಯದಲ್ಲಿ ಸಕಲ ಜ್ಞಾನವನ್ನೂ ಬುದ್ದಿಯನ್ನೂ ಇನ್ನೂ ಹೆಚ್ಚಾಗಿ ನಮ್ಮ ಕಡೆಗೆ ತೋರಿಸಿದ್ದಾನೆ.
- Romans 3:24–26 ರೋಮಾಪುರದವರಿಗೆ 3:24–26ಅವರು ನೀತಿವಂತರೆಂದು ನಿರ್ಣಯ ಹೊಂದುವದು ಆತನ ಉಚಿತಾರ್ಥವಾದ ಕೃಪೆ ಯಿಂದಲೇ. ಇದು ಕ್ರಿಸ್ತ ಯೇಸುವಿನಿಂದಾದ ವಿಮೋ ಚನೆಯ ಮೂಲಕವಾಗಿ ಆಗುವದು. ಈತನು ತನ್ನ ರಕ್ತದ ಮೂಲಕ ನಂಬಿಕೆಯಿದ್ದವರಿಗಾಗಿ ಪಾಪದ ಪ್ರಾಯಶ್ಚಿತ್ತವಾಗಿರಬೇಕೆಂದು ದೇವರು ಈತನನ್ನು ಮುಂದಿಟ್ಟನು. ದೇವರು ಹಿಂದಿನಕಾಲದ ಪಾಪಗಳನ್ನು ಸಹಿಸಿಕೊಂಡಿರಲಾಗಿ ತನ್ನ ನೀತಿಯನ್ನು ಈಗಿನ ಕಾಲದಲ್ಲಿ ಹೀಗೆ ತೋರಿಸಿ ತಾನು ನೀತಿವಂತನಾಗಿಯೂ ಯೇಸುವಿನಲ್ಲಿ ನಂಬಿಕೆಯಿಡುವವರನ್ನು ನೀತಿವಂತ ರೆಂದು ನಿರ್ಣಯಿಸುವವನಾಗಿಯೂ ಪ್ರಸಿದ್ಧಿಪಡಿಸಿ ಕೊಂಡನು.
- 1 Peter 1:18–19 1 ಪೇತ್ರನು 1:18–19ನಿಮ್ಮ ತಂದೆ ಗಳಿಂದ ಕಲಿತುಕೊಂಡ ಸಂಪ್ರದಾಯದ ವ್ಯರ್ಥವಾದ ನಡವಳಿಕೆಯಿಂದ ನಿಮಗೆ ಬಿಡುಗಡೆಯಾದದ್ದು ನಶಿಸಿ ಹೋಗುವ ಬೆಳ್ಳಿ ಬಂಗಾರದಿಂದಲ್ಲ; ಆದರೆ ಪೂರ್ಣಾಂಗವಾದ ನಿಷ್ಕಳಂಕ ಕುರಿಮರಿಯ ರಕ್ತ ದಿಂದಲೋ ಎಂಬಂತೆ ಕ್ರಿಸ್ತನ ಅಮೂಲ್ಯವಾದ ರಕ್ತದಿಂದಲೇ ಎಂದು ನೀವು ಬಲ್ಲಿರಲ್ಲವೇ.
- 1 Corinthians 1:30 1 ಕೊರಿಂಥದವರಿಗೆ 1:30ಆದರೆ ನೀವು ಕ್ರಿಸ್ತ ಯೇಸುವಿನಲ್ಲಿ ರುವದು ಆತನಿಂದಲೇ; ಆತನು ನಮಗೆ ದೇವರ ಕಡೆಯಿಂದ ಜ್ಞಾನವು ನೀತಿ ಶುದ್ಧೀಕರಣ ವಿಮೋಚನೆ ಗಳಾಗಿ ಮಾಡಲ್ಪಟ್ಟಿದ್ದಾನೆ.ಹೆಚ್ಚಳ ಪಡುವವನು ಕರ್ತನಲ್ಲಿಯೇ ಹೆಚ್ಚಳಪಡಲಿ ಎಂದು ಬರೆಯಲ್ಪಟ್ಟಂತೆ ಆಯಿತು.
- Romans 11:26–27 ರೋಮಾಪುರದವರಿಗೆ 11:26–27ಹೀಗೆ ಇಸ್ರಾಯೇಲ್ ಜನರೆಲ್ಲಾ ರಕ್ಷಣೆಹೊಂದುವರು. ಇದಕ್ಕೆ ಆಧಾರವಾಗಿ--ಬಿಡಿಸು ವಾತನು ಚೀಯೋನಿನೊಳಗಿಂದ ಹೊರಟುಬಂದು ಯಾಕೋಬಿನಲ್ಲಿರುವ ಭಕ್ತಿಹೀನತೆಯನ್ನು ನಿವಾರಣೆ ಮಾಡುವನು. ನಾನು ಅವರ ಪಾಪಗಳನ್ನು ತೆಗೆದು ಹಾಕುವದು ಅವರ ಸಂಗಡ ಮಾಡಿಕೊಂಡ ನನ್ನ ಒಡಂಬಡಿಕೆಯಾಗಿದೆ ಎಂಬದು.