Isaiah · chapter 14 · verse 7
Isaiah 14:7 in Kannada
ಭೂಲೋಕವೆಲ್ಲಾ ಶಾಂತವಾಗಿ ವಿಶ್ರಾಂತಿ ಗೊಂಡಿದೆ. ಅವರು ಉತ್ಸಾಹಧ್ವನಿಯನ್ನು ಎತ್ತುತ್ತಾರೆ.
Bhoolokavellaa shaantavaagi vishraanti gondide. Avaru utsaahadhvaniyannu ettuttaare.
Isaiah 14:7 in English
- King James Version (KJV)
- The whole earth is at rest, [and] is quiet: they break forth into singing.
- World English Bible (WEB)
- The whole earth is at rest, and is quiet. They break out in song.
- American Standard Version (ASV)
- The whole earth is at rest, [and] is quiet: they break forth into singing.
- Bible in Basic English (BBE)
- All the earth is at rest and is quiet: they are bursting into song.
- Darby Translation (DBY)
- The whole earth is at rest, is quiet: they break forth into singing.
- Webster's Bible (WBS)
- The whole earth is at rest, [and] is quiet: they break forth into singing.
- Young's Literal Translation (YLT)
- At rest — quiet hath been all the earth, They have broken forth [into] singing.
Read in context
- 5ಜನರನ್ನು ಉಗ್ರಕೋಪದಿಂದ ಎಡೆಬಿಡದೆ ಹೊಡೆ ದು ಜನಾಂಗಗಳನ್ನು ಸಿಟ್ಟಿನಿಂದ ತಡೆಯಿಲ್ಲದೆ ಹಿಂಸಿಸಿ
- 6ಆಳುತ್ತಿದ್ದ ದುಷ್ಟರ ಕೋಲನ್ನೂ ರಾಜರ ದಂಡವನ್ನೂ ಕರ್ತನು ಮುರಿದುಬಿಟ್ಟಿದ್ದಾನೆ. ಯಾವನೂ ಅಡ್ಡಿ ಮಾಡನು.
- 7ಭೂಲೋಕವೆಲ್ಲಾ ಶಾಂತವಾಗಿ ವಿಶ್ರಾಂತಿ ಗೊಂಡಿದೆ. ಅವರು ಉತ್ಸಾಹಧ್ವನಿಯನ್ನು ಎತ್ತುತ್ತಾರೆ.
- 8ಹೌದು, ತುರಾಯಿ ಮರಗಳೂ ಲೆಬನೋನಿನ ದೇವದಾರು ಮರಗಳೂ ನೀನು ಬಿದ್ದಂದಿನಿಂದ ಕಡಿಯುವವನು ಯಾವನೂ ತಮ್ಮ ಮೇಲೆ ಬರಲಿಲ್ಲವೆಂದು ನಿನ್ನ ವಿಷಯವಾಗಿ ಉಲ್ಲಾಸಗೊಳ್ಳುತ್ತವೆ.
- 9ನಿನಗೋ ಸ್ಕರ ನಿನ್ನ ಬರೋಣವನ್ನು ಎದುರುಗೊಳ್ಳುವದಕ್ಕೆ ಪಾತಾಳವು ಕೆಳಗಿನಿಂದ ತಳಮಳಪಡುತ್ತದೆ. ಸತ್ತವ ರನ್ನೂ ಅಂದರೆ, ಭೂಲೋಕದ ಮುಖಂಡರಾಗಿದ್ದವರೆ ಲ್ಲರನ್ನೂ ಕಲಕಿ (ಎಚ್ಚರಿಸಿ) ಜನಾಂಗಗಳ ಎಲ್ಲಾ ರಾಜ ರುಗಳನ್ನು ಅವರ ಸಿಂಹಾಸನಗಳಿಂದ ಎಬ್ಬಿಸುತ್ತದೆ.
Cross references
- Psalm 126:1–3 ಕೀರ್ತನೆಗಳು 126:1–3ಕರ್ತನು ಚೀಯೋನನ್ನು ಸೆರೆಯಿಂದ ಬಿಡಿಸಿದಾಗ ನಾವು ಕನಸು ಕಂಡ ವರ ಹಾಗಿದ್ದೆವು. ಆಗ ನಮ್ಮ ಬಾಯಿ ನಗೆಯಿಂದಲೂ ನಾಲಿಗೆ ಉತ್ಸಾಹ ಧ್ವನಿಯಿಂದಲೂ ತುಂಬಿದ್ದವು; ಆಗ ಅನ್ಯಜನರು--ಕರ್ತನು ಇವರಿಗೆ ಮಹತ್ಕಾರ್ಯಗಳನ್ನು ಮಾಡಿದ್ದಾನೆ ಎಂದು ಹೇಳಿದರು. ಕರ್ತನು ನಮಗೆ ಮಹತ್ಕಾರ್ಯಗಳನ್ನು ಮಾಡಿದ್ದಾನೆ; ಆದಕಾರಣ ನಾವು ಸಂತೋಷಿಸುತ್ತಾ ಇದ್ದೇವೆ.
- Psalm 96:11–13 ಕೀರ್ತನೆಗಳು 96:11–13ಆಕಾಶಗಳು ಸಂತೋಷಿಸಲಿ; ಭೂಮಿಯು ಉಲ್ಲಾಸಪಡಲಿ; ಸಮುದ್ರವೂ ಅದರ ಪರಿಪೂರ್ಣ ತೆಯೂ ಘೋಷಿಸಲಿ. ಹೊಲವೂ ಅದರಲ್ಲಿರುವ ಸಮಸ್ತವೂ ಉತ್ಸಾಹಪಡಲಿ; ಅಡವಿಯ ಮರಗಳೆಲ್ಲಾ ಕರ್ತನ ಮುಂದೆಯೇ ಉತ್ಸಾಹಧ್ವನಿ ಮಾಡಲಿ.ಆತನು ಬರುತ್ತಾನೆ, ಭೂಮಿಗೆ ನ್ಯಾಯತೀರಿಸಲು ಬರುತ್ತಾನೆ; ಲೋಕಕ್ಕೆ ನೀತಿಯಿಂದಲೂ ಜನಗಳಿಗೆ ತನ್ನ ಸತ್ಯದಿಂದಲೂ ನ್ಯಾಯತೀರಿಸುವನು. ಆತನು ಬರುತ್ತಾನೆ, ಭೂಮಿಗೆ ನ್ಯಾಯತೀರಿಸಲು ಬರುತ್ತಾನೆ; ಲೋಕಕ್ಕೆ ನೀತಿಯಿಂದಲೂ ಜನಗಳಿಗೆ ತನ್ನ ಸತ್ಯದಿಂದಲೂ ನ್ಯಾಯತೀರಿಸುವನು.
- Isaiah 49:13 ಯೆಶಾಯ 49:13ಆಕಾಶವೇ, ಹರ್ಷಿಸು; ಭೂಮಿಯೇ, ಉಲ್ಲಾಸಪಡು! ಪರ್ವತ ಗಳೇ ಹರ್ಷಧ್ವನಿಗೈಯಿರಿ. ಯಾಕಂದರೆ ಕರ್ತನು ತನ್ನ ಜನರನ್ನು ಆದರಿಸಿ, ಶ್ರಮೆಪಟ್ಟ ತನ್ನವರನ್ನು ಕರುಣಿಸುವನು.
- Psalm 98:7–9 ಕೀರ್ತನೆಗಳು 98:7–9ಸಮುದ್ರವೂ ಅದರ ಪರಿಪೂರ್ಣತೆಯೂ ಲೋಕ ವೂ ಅದರ ನಿವಾಸಿಗಳೂ ಘೋಷಿಸಲಿ. ಪ್ರವಾಹ ಗಳು ಕೈತಟ್ಟಲಿ; ಕರ್ತನ ಮುಂದೆ ಬೆಟ್ಟಗಳು ಕೂಡ ಉತ್ಸಾಹ ಧ್ವನಿಮಾಡಲಿ.ಆತನು ಭೂಮಿಗೆ ನ್ಯಾಯ ತೀರಿಸಲು ಬರುತ್ತಾನೆ. ಲೋಕಕ್ಕೆ ನೀತಿಯಿಂದಲೂ ಜನಗಳಿಗೆ ನ್ಯಾಯದಲ್ಲಿಯೂ ತೀರ್ಪು ಕೊಡುವನು. ಆತನು ಭೂಮಿಗೆ ನ್ಯಾಯ ತೀರಿಸಲು ಬರುತ್ತಾನೆ. ಲೋಕಕ್ಕೆ ನೀತಿಯಿಂದಲೂ ಜನಗಳಿಗೆ ನ್ಯಾಯದಲ್ಲಿಯೂ ತೀರ್ಪು ಕೊಡುವನು.
- Revelation 18:20 ಪ್ರಕಟನೆ 18:20ಪರಲೋಕವೇ, ಪರಿಶುದ್ಧರಾದ ಅಪೊಸ್ತಲರೇ, ಪ್ರವಾದಿಗಳೇ, ಅವಳ ವಿಷಯವಾಗಿ ಆನಂದಪಡಿರಿ. ಯಾಕಂದರೆ ನಿಮ್ಮ ನಿಮಿತ್ತವಾಗಿ ದೇವರು ಇವಳಿಗೆ ಪ್ರತಿ ದಂಡನೆಯನ್ನು ಮಾಡಿದನು ಎಂದು ಹೇಳಿತು.
- Revelation 19:1–6 ಪ್ರಕಟನೆ 19:1–6ಇವುಗಳಾದ ಮೇಲೆ ಪರಲೋಕದಲ್ಲಿ ಬಹಳ ಜನರ ಮಹಾ ಶಬ್ದವನ್ನು ನಾನು ಕೇಳಿದೆನು; ಅವರು--ಹಲ್ಲೆಲೂಯಾ; ನಮ್ಮ ದೇವ ರಾದ ಕರ್ತನಿಗೆ ರಕ್ಷಣೆಯೂ ಮಹಿಮೆಯೂ ಘನವೂ ಅಧಿಕಾರವೂ ಉಂಟಾದವು. ಆತನ ನ್ಯಾಯತೀರ್ಪು ಗಳು ಸತ್ಯವೂ ನೀತಿಯುಳ್ಳವುಗಳೂ ಆಗಿವೆ; ಯಾಕಂ ದರೆ ಜಾರತ್ವದಿಂದ ಭೂಲೋಕವನ್ನು ಕೆಡಿಸುತ್ತಿದ್ದ ಆ ಮಹಾಜಾರಸ್ತ್ರೀಗೆ ಆತನು ನ್ಯಾಯತೀರಿಸಿ ಆತನ ಸೇವಕರ ರಕ್ತಕ್ಕಾಗಿ ಅವಳಿಗೆ ಪ್ರತಿ ದಂಡನೆಯನ್ನು ಮಾಡಿದ್ದಾನೆ ಎಂದು ಹೇಳಿದರು. ತಿರಿಗಿ ಅವರು --ಹಲ್ಲೆಲೂಯಾ ಅಂದರು. ಅವಳ ಹೊಗೆಯು ಯುಗಯುಗಾಂತರಗಳಲ್ಲಿಯೂ ಏರಿ ಹೋಗುತ್ತದೆ. ಆಗ ಇಪ್ಪತ್ತನಾಲ್ಕು ಮಂದಿ ಹಿರಿಯರೂ ಆ ನಾಲ್ಕು ಜೀವಿಗಳೂ--ಆಮೆನ್. ಹಲ್ಲೆಲೂಯಾ ಎಂದು ಹೇಳುತ್ತಾ ಸಿಂಹಾಸನದ ಮೇಲೆ ಕೂತಿದ್ದ ದೇವರ ಮುಂದೆ ಅಡ್ಡಬಿದ್ದು ಆರಾಧಿಸಿದರು. ಆಮೇಲೆ ಸಿಂಹಾಸನದ ಕಡೆಯಿಂದ ಬಂದ ಒಂದು ಶಬ್ದವು--ದೇವರ ಸೇವಕರೆಲ್ಲರೇ, ಆತನಿಗೆ ಭಯ ಪಡುವ ಹಿರಿಕಿರಿಯರೇ, ನಮ್ಮ ದೇವರನ್ನು ಕೊಂಡಾಡಿರಿ ಎಂದು ಹೇಳಿತು. ತರುವಾಯ ಜನರ ದೊಡ್ಡ ಗುಂಪಿನ ಶಬ್ದದಂತೆಯೂ ಬಹಳ ನೀರುಗಳ ಘೋಷದಂತೆಯೂ ಗಟ್ಟಿಯಾದ ಗುಡುಗುಗಳ ಶಬ್ದದಂತೆಯೂ ಇದ್ದ ಒಂದು ಶಬ್ದವನ್ನು ನಾನು ಕೇಳಿದೆನು; ಅದು--ಹಲ್ಲೆಲೂಯಾ, ಸರ್ವಶಕ್ತನಾಗಿರುವ ದೇವರಾದ ಕರ್ತನು ಆಳುತ್ತಾನೆ.
- Proverbs 11:10 ಜ್ಞಾನೋಕ್ತಿಗಳು 11:10ನೀತಿವಂತರು ಚೆನ್ನಾಗಿದ್ದರೆ ಪಟ್ಟಣವು ಉಲ್ಲಾಸಿಸುತ್ತದೆ; ದುಷ್ಟರು ನಾಶವಾದರೆ ಆರ್ಭಟವಿರು ತ್ತದೆ.
- Jeremiah 51:48 ಯೆರೆಮೀಯ 51:48ಆಗ ಆಕಾಶವೂ ಭೂಮಿಯೂ ಅವುಗಳಲ್ಲಿರುವ ಸಮಸ್ತವೂ ಬಾಬೆಲಿನ ವಿಷಯವಾಗಿ ಹಾಡುವೆವು. ಸೂರೆ ಮಾಡುವವರು ಉತ್ತರದಿಂದ ಅದಕ್ಕೆ ವಿರೋಧ ವಾಗಿ ಬರುವರೆಂದು ಕರ್ತನು ಅನ್ನುತ್ತಾನೆ.
- Psalm 98:1 ಕೀರ್ತನೆಗಳು 98:1ಕರ್ತನಿಗೆ ಹೊಸ ಹಾಡನ್ನು ಹಾಡಿರಿ; ಆತನು ಅದ್ಭುತಗಳನ್ನು ಮಾಡಿದ್ದಾನೆ; ಆತನ ಬಲಗೈಯೂ ಪರಿಶುದ್ಧತೋಳೂ ಆತನಿಗೆ ಜಯ ವನ್ನು ತಂದಿವೆ.