Isaiah · chapter 29 · verse 18
Isaiah 29:18 in Kannada
ಆ ದಿನದಲ್ಲಿ ಕಿವುಡರು ಪುಸ್ತಕದ ಮಾತುಗಳನ್ನು ಕೇಳುವರು ಕುರುಡರ ಕಣ್ಣುಗಳು ಕತ್ತಲೆಯೊಳಗಿಂದಲೂ ಅಂಧಕಾರದೊಳಗಿಂದಲೂ ನೋಡುವವು.
Aa dinadalli kivudaru pustakada maatugalannu keluvaru kurudara kannugalu kattaleyolagindaloo andhakaaradolagindaloo noduvavu.
Isaiah 29:18 in English
- King James Version (KJV)
- And in that day shall the deaf hear the words of the book, and the eyes of the blind shall see out of obscurity, and out of darkness.
- World English Bible (WEB)
- In that day, the deaf will hear the words of the book, and the eyes of the blind will see out of obscurity and out of darkness.
- American Standard Version (ASV)
- And in that day shall the deaf hear the words of the book, and the eyes of the blind shall see out of obscurity and out of darkness.
- Bible in Basic English (BBE)
- And in that day those whose ears are stopped will be hearing the words of the book; and the eyes of the blind will see through the mist and the dark.
- Darby Translation (DBY)
- And in that day shall the deaf hear the words of the book, and, out of obscurity and out of darkness, the eyes of the blind shall see;
- Webster's Bible (WBS)
- And in that day shall the deaf hear the words of the book, and the eyes of the blind shall see out of obscurity, and out of darkness.
- Young's Literal Translation (YLT)
- And heard in that day have the deaf the words of a book, And out of thick darkness, and out of darkness, The eyes of the blind do see.
Read in context
- 16ಖಂಡಿತವಾಗಿಯೂ ನೀವು ತಲೆಕೆಳಗೆ ಮಾಡುವ ಸಂಗತಿಗಳು ಕುಂಬಾರನ ಜೇಡಿ ಮಣ್ಣಿನಂತೆ ಎಣಿಸಲ್ಪಡುವದು; ಮಾಡಿದವನಿಗೆ ಮಾಡ ಲ್ಪಟ್ಟದ್ದು--ಆತನು ನನ್ನನ್ನು ಮಾಡಲಿಲ್ಲ ಎಂದು ಹೇಳು ವದೋ? ಇಲ್ಲವೆ ತನ್ನನ್ನು ನಿರ್ಮಿಸಿದವನಿಗೆ ನಿರ್ಮಿಸ ಲ್ಪಟ್ಟದ್ದು--ಆತನಿಗೆ ವಿವೇಕವಿಲ್ಲವೆಂದು ಹೇಳುವ ದೋ?
- 17ಆದಾಗ್ಯೂ ಇನ್ನು ಸ್ವಲ್ಪ ಕಾಲದಲ್ಲಿ ಲೆಬ ನೋನ್ ಫಲವುಳ್ಳ ಹೊಲವಾಗಿದ್ದು ಆ ಫಲವುಳ್ಳ ಹೊಲವು ಅಡವಿಯಾಗಿ ಎಣಿಸಲ್ಪಡುವದಿಲ್ಲವೋ?
- 18ಆ ದಿನದಲ್ಲಿ ಕಿವುಡರು ಪುಸ್ತಕದ ಮಾತುಗಳನ್ನು ಕೇಳುವರು ಕುರುಡರ ಕಣ್ಣುಗಳು ಕತ್ತಲೆಯೊಳಗಿಂದಲೂ ಅಂಧಕಾರದೊಳಗಿಂದಲೂ ನೋಡುವವು.
- 19ದೀನರ ಸಂತೋಷವು ಕರ್ತನಲ್ಲಿ ಹೆಚ್ಚಾಗುವದು, ಮನುಷ್ಯರಲ್ಲಿ ಬಡವರು ಇಸ್ರಾಯೇಲಿನ ಪರಿಶುದ್ಧನಲ್ಲಿ ಹರ್ಷಿಸು ವರು.
- 20ಭಯಂಕರನು ಇಲ್ಲವಾಗುತ್ತಾನೆ, ಹಾಸ್ಯಗಾ ರನು ದಹಿಸಲ್ಪಡುವನು, ಕೇಡಿಗೆ ಕಾಯುವವರೆಲ್ಲರು ಕಡಿದು ಹಾಕಲ್ಪಡುವರು.
Cross references
- Isaiah 35:5 ಯೆಶಾಯ 35:5ಆಗ ಕುರುಡರ ಕಣ್ಣುಗಳು ತೆರೆಯಲ್ಪಡು ವವು, ಕಿವುಡರ ಕಿವಿಗಳು ಕೇಳುವವು.
- Matthew 11:5 ಮತ್ತಾಯನು 11:5ಕುರುಡರು ದೃಷ್ಟಿ ಹೊಂದುತ್ತಾರೆ, ಕುಂಟರು ನಡೆಯುತ್ತಾರೆ,ಕುಷ್ಟರೋಗಿಗಳು ಶುದ್ಧರಾಗುತ್ತಾರೆ, ಕಿವುಡರು ಕೇಳುತ್ತಾರೆ, ಸತ್ತವರು ಎಬ್ಬಿಸಲ್ಪಡುತ್ತಾರೆ ಮತ್ತು ಬಡವರಿಗೆ ಸುವಾರ್ತೆ ಸಾರಲ್ಪಡುತ್ತದೆ.
- Proverbs 20:12 ಜ್ಞಾನೋಕ್ತಿಗಳು 20:12ಕೇಳುವ ಕಿವಿ ನೋಡುವ ಕಣ್ಣು, ಇವೆರಡನ್ನು ಕರ್ತನು ಮಾಡಿದ್ದಾನೆ.
- Isaiah 32:3 ಯೆಶಾಯ 32:3ಆಗ ನೋಡುವವರ ಕಣ್ಣುಗಳು ಮೊಬ್ಬಾಗವು, ಕೇಳುವವರ ಕಿವಿಗಳು ಮಂದವಾಗವು.
- Ephesians 1:17–19 ಎಫೆಸದವರಿಗೆ 1:17–19ನಮ್ಮ ಕರ್ತನಾದ ಯೇಸು ಕ್ರಿಸ್ತನ ದೇವರೂ ಪ್ರಭಾವಪೂರ್ಣನಾದ ತಂದೆಯೂ ಆಗಿರುವಾತನು ತನ್ನ ವಿಷಯವಾದ ತಿಳುವಳಿಕೆಗನುಸಾರವಾಗಿ ಜ್ಞಾನ ಪ್ರಕಟನೆಗಳ ಆತ್ಮ ವನ್ನು ನಿಮಗೆ ಅನುಗ್ರಹಿಸುವಂತೆಯೂ ಆತನು ನಿಮ್ಮ ಮನೋನೇತ್ರಗಳನ್ನು ಬೆಳಗಿಸಿ ಆತನ ಕರೆಯು ವಿಕೆಯ ನಿರೀಕ್ಷೆಯು ಎಂಥದೆಂಬದನ್ನೂ ಪರಿಶುದ್ಧ ರಲ್ಲಿರುವ ಆತನ ಸ್ವಾಸ್ಥ್ಯದ ಮಹಿಮಾತಿಶಯವು ಎಂಥದೆಂಬದನ್ನೂ ನಂಬುವವರಾದ ನಮ್ಮಲ್ಲಿ ಆತನು ಸಾಧಿಸುವ ಪರಾಕ್ರಮವು ಎಷ್ಟು ಅತಿಶಯವಾದ ದ್ದೆಂಬದನ್ನೂ ಆತನ ಬಲಾತಿಶಯವು ಎಷ್ಟು ಮಹತ್ತಾದ ದ್ದೆಂಬದನ್ನೂ ನೀವು ತಿಳುಕೊಳ್ಳು ವಂತೆ ಅನುಗ್ರಹಿಸಲಿ.
- Mark 7:37 ಮಾರ್ಕನು 7:37ಜನರು ಅತ್ಯಂತಾಶ್ಚರ್ಯಪಟ್ಟು-- ಆತನು ಎಲ್ಲವುಗಳನ್ನು ಚೆನ್ನಾಗಿ ಮಾಡಿದ್ದಾನೆ; ಕಿವುಡರು ಕೇಳುವಂತೆಯೂ ಮೂಕರು ಮಾತನಾಡುವಂತೆಯೂ ಮಾಡಿದ್ದಾನೆ ಎಂದು ಅಂದುಕೊಂಡರು.
- Psalm 119:18 ಕೀರ್ತನೆಗಳು 119:18ನನ್ನ ಕಣ್ಣುಗಳನ್ನು ತೆರೆ; ಆಗ ನಿನ್ನ ನ್ಯಾಯಪ್ರಮಾಣದಲ್ಲಿನ ಅದ್ಭುತಗಳನ್ನು ನೋಡುವೆನು.
- Acts 26:18 ಅಪೊಸ್ತಲರ ಕೃತ್ಯಗಳು 26:18ಅವರ ಕಣ್ಣುಗಳನ್ನು ತೆರೆಯುವದಕ್ಕೂ ಮತ್ತು ಕತ್ತಲೆಯಿಂದ ಬೆಳಕಿಗೂ ಸೈತಾನನ ಅಧಿಕಾರದಿಂದ ದೇವರ ಕಡೆಗೆ ಅವರನ್ನು ತಿರುಗಿಸುವದಕ್ಕೂ ಅವರು ನನ್ನಲ್ಲಿ ಇಡುವ ನಂಬಿಕೆಯಿಂದಾಗುವ ಪಾಪಕ್ಷಮಾ ಪಣೆಯನ್ನೂ ಪವಿತ್ರರಾದವರಲ್ಲಿ ಸ್ವಾಸ್ಥ್ಯವನ್ನೂ ಹೊಂದುವಂತೆ ಮಾಡುವದಕ್ಕಾಗಿ ನಾನು
- 2 Corinthians 4:2–6 2 ಕೊರಿಂಥದವರಿಗೆ 4:2–6ಆದರೆ ನಾಚಿಕೆಗೆ ಕಾರಣ ವಾಗುವ ಗುಪ್ತಕಾರ್ಯಗಳನ್ನು ನಾವು ಬಿಟ್ಟುಬಿಟ್ಟು ತಂತ್ರದಲ್ಲಿ ನಡೆಯದೆಯೂ ವಂಚನೆಯಿಂದ ದೇವರ ವಾಕ್ಯವನ್ನು ಕೆಡಿಸದೆಯೂ ಸತ್ಯವನ್ನು ಪರಿಷ್ಕಾರವಾಗಿ ಬೋಧಿಸುತ್ತಾ ನಾವು ಯೋಗ್ಯರೆಂದು ಪ್ರತಿ ಮನುಷ್ಯನ ಮನಸ್ಸಾಕ್ಷಿಯು ದೇವರ ಮುಂದೆ ಒಪ್ಪಬೇಕಾದ ರೀತಿಯಲ್ಲಿ ನ ನಮ್ಮ ಸುವಾರ್ತೆಯು ಮರೆಯಾಗಿರುವದಾದರೆ ಅದು ತಪ್ಪಿಹೋದವರಿಗೆ ಮರೆಯಾಗಿದೆ. ದೇವರ ಪ್ರತಿರೂಪವಾಗಿರುವ ಕ್ರಿಸ್ತನ ಪ್ರಭಾವವನ್ನು ತೋರಿಸುವ ಮಹಿಮೆಯ ಸುವಾರ್ತೆಯು ಇವರಲ್ಲಿ ಪ್ರಕಾಶಿಸಬಾರದೆಂದು ಈ ಪ್ರಪಂಚದ ದೇವರು ನಂಬಿಕೆಯಿಲ್ಲದವರ ಮನಸ್ಸನ್ನು ಮಂಕುಮಾಡಿದ್ದಾನೆ. ನಮ್ಮನ್ನು ನಾವೇ ಅಲ್ಲ, ಆದರೆ ನಮ್ಮನ್ನು ಯೇಸುವಿನ ನಿಮಿತ್ತ ನಿಮ್ಮ ಸೇವಕರೆಂದು ಕರ್ತನಾದ ಕ್ರಿಸ್ತ ಯೇಸುವನ್ನೇ ಸಾರುತ್ತೇವೆ. ಕತ್ತಲೆ ಯೊಳಗಿಂದ ಬೆಳಕು ಹೊಳೆಯಲಿ ಎಂದು ಆಜ್ಞಾಪಿಸಿದ ದೇವರು ತಾನೇ ಯೇಸು ಕ್ರಿಸ್ತನ ಮುಖದಲ್ಲಿ ತೋರುವ ದೇವಪ್ರಭಾವ ಜ್ಞಾನವೆಂಬ ಪ್ರಕಾಶವನ್ನು ಕೊಡುವದಕ್ಕಾಗಿ ನಮ್ಮ ಹೃದಯಗಳಲ್ಲಿ ಹೊಳೆದನು.
- Isaiah 42:16–18 ಯೆಶಾಯ 42:16–18ಕುರುಡರನ್ನು ಅವರು ತಿಳಿಯದ ಮಾರ್ಗದಲ್ಲಿ ಬರಮಾಡುವೆನು. ಅವರನ್ನು ತಿಳಿಯದ ಹಾದಿಗಳಲ್ಲಿ ನಡಿಸುವೆನು; ಕತ್ತಲೆಯನ್ನು ಅವರ ಮುಂದೆ ಬೆಳಕಾಗಿಯೂ ಸೊಟ್ಟಾದವುಗಳನ್ನು ನೆಟ್ಟಗಾಗಿಯೂ ಮಾಡುವೆನು. ಇವುಗಳನ್ನು ನಾನು ಅವರಿಗೋಸ್ಕರ ಮಾಡುವೆನು. ನಾನು ಅವರನ್ನು ಕೈಬಿಡುವದಿಲ್ಲ. ಕೆತ್ತಿದ ವಿಗ್ರಹಗಳಲ್ಲಿ ನಂಬಿಕೆಯಿಡುವವರು ಎರಕಹೊಯ್ದ ವಿಗ್ರಹಗಳಿಗೆ ನೀವೇ ನಮ್ಮ ದೇವರುಗಳೆಂದು ಹೇಳುವ ವರು ಹಿಂದೆ ಬಿದ್ದು ನಾಚಿಕೆಗೆ ಈಡಾಗುವರು. ಕಿವುಡರೇ, ಕೇಳಿರಿ; ಕುರುಡರೇ ನೀವು ದೃಷ್ಟಿಸಿ ನೋಡಿರಿ.
- Deuteronomy 29:4 ಧರ್ಮೋಪದೇಶಕಾಂಡ 29:4ಆದಾಗ್ಯೂ ಕರ್ತನು ನಿಮಗೆ ಇಂದಿನ ವರೆಗೂ ತಿಳುಕೊಳ್ಳುವ ಹೃದಯ ವನ್ನೂ ನೋಡುವ ಕಣ್ಣುಗಳನ್ನೂ ಕೇಳುವ ಕಿವಿಗಳನ್ನೂ ಕೊಡಲಿಲ್ಲ.
- Isaiah 29:24 ಯೆಶಾಯ 29:24ತಪ್ಪಿದ ಆತ್ಮವುಳ್ಳವರು ವಿವೇಕಿಗಳಾಗುವರು. ಗುಣುಗುಟ್ಟುವವರು ಬೋಧನೆ ಕಲಿಯುವರು.