Isaiah · chapter 29 · verse 20
Isaiah 29:20 in Kannada
ಭಯಂಕರನು ಇಲ್ಲವಾಗುತ್ತಾನೆ, ಹಾಸ್ಯಗಾ ರನು ದಹಿಸಲ್ಪಡುವನು, ಕೇಡಿಗೆ ಕಾಯುವವರೆಲ್ಲರು ಕಡಿದು ಹಾಕಲ್ಪಡುವರು.
Bhayankaranu illavaaguttaane, haasyagaa ranu dahisalpaduvanu, kedige kaayuvavarellaru kadidu haakalpaduvaru.
Isaiah 29:20 in English
- King James Version (KJV)
- For the terrible one is brought to nought, and the scorner is consumed, and all that watch for iniquity are cut off:
- World English Bible (WEB)
- For the ruthless is brought to nothing, and the scoffer ceases, and all those who are alert to do evil are cut off—
- American Standard Version (ASV)
- For the terrible one is brought to nought, and the scoffer ceaseth, and all they that watch for iniquity are cut off;
- Bible in Basic English (BBE)
- For the cruel one has come to nothing; and those who make sport of the Lord are gone; and those who are watching to do evil are cut off:
- Darby Translation (DBY)
- For the terrible one shall come to nought, and the scorner shall be no more, and all that watch for iniquity shall be cut off,
- Webster's Bible (WBS)
- For the terrible one is brought to naught, and the scoffer is consumed, and all that watch for iniquity are cut off:
- Young's Literal Translation (YLT)
- For ceased hath the terrible one, And consumed hath been the scorner, And cut off have been all watching for iniquity,
Read in context
- 18ಆ ದಿನದಲ್ಲಿ ಕಿವುಡರು ಪುಸ್ತಕದ ಮಾತುಗಳನ್ನು ಕೇಳುವರು ಕುರುಡರ ಕಣ್ಣುಗಳು ಕತ್ತಲೆಯೊಳಗಿಂದಲೂ ಅಂಧಕಾರದೊಳಗಿಂದಲೂ ನೋಡುವವು.
- 19ದೀನರ ಸಂತೋಷವು ಕರ್ತನಲ್ಲಿ ಹೆಚ್ಚಾಗುವದು, ಮನುಷ್ಯರಲ್ಲಿ ಬಡವರು ಇಸ್ರಾಯೇಲಿನ ಪರಿಶುದ್ಧನಲ್ಲಿ ಹರ್ಷಿಸು ವರು.
- 20ಭಯಂಕರನು ಇಲ್ಲವಾಗುತ್ತಾನೆ, ಹಾಸ್ಯಗಾ ರನು ದಹಿಸಲ್ಪಡುವನು, ಕೇಡಿಗೆ ಕಾಯುವವರೆಲ್ಲರು ಕಡಿದು ಹಾಕಲ್ಪಡುವರು.
- 21ಒಂದು ಮಾತಿನ ನಿಮಿತ್ತ ಮನುಷ್ಯರಿಗೆ ತಪ್ಪು ಹೊರಿಸುವವರೂ ಬಾಗಲಲ್ಲಿ ವಾದಿಸುವವನಿಗೆ ಉರ್ಲು ಒಡ್ಡುವವರೂ ಏನೂ ಇಲ್ಲದೆ ಕಾರ್ಯಕ್ಕೆ ನೀತಿವಂತನನ್ನು ತಿರುಗಿಸುವವರೂ ನಿರ್ನಾಮವಾಗುವರು.
- 22ಆದದರಿಂದ ಅಬ್ರಹಾಮನನ್ನು ವಿಮೋಚಿಸಿದ ಕರ್ತನು ಯಾಕೋಬನ ಮನೆತನದ ವಿಷಯವಾಗಿ ಹೇಳುವದೇನಂದರೆ--ಈಗ ಯಾಕೋಬ್ಯರು ನಾಚಿಕೆ ಪಡುವದಿಲ್ಲ ಇಲ್ಲವೆ ಅವನ ಮುಖವು ಕಳೆಗುಂದು ವದಿಲ್ಲ.
Cross references
- Micah 2:1 ಮೀಕ 2:1ಅಪರಾಧವನ್ನು ಯೋಚಿಸಿ, ತಮ್ಮ ಹಾಸಿಗೆಗಳ ಮೇಲೆ ಕೆಟ್ಟದ್ದನ್ನು ನಡಿಸುವವರಿಗೆ ಅಯ್ಯೋ! ಹೊತ್ತಾರೆ ಬೆಳಕಾಗುವಾಗ ಅದನ್ನು ಮಾಡುತ್ತಾರೆ; ಅದು ಅವರ ಕೈವಶದಲ್ಲಿದೆ.
- Isaiah 28:14–22 ಯೆಶಾಯ 28:14–22ಆದಕಾರಣ ಯೆರೂಸಲೇಮಿನಲ್ಲಿರುವ ಈ ಜನ ರನ್ನು ಆಳುವ ಹಾಸ್ಯದ ಜನರಾದ ನೀವು ಕರ್ತನ ಮಾತನ್ನು ಕೇಳಿರಿ, ಮರಣದ ಸಂಗಡ ಒಡಂಬಡಿಕೆಯನ್ನು ಮಾಡಿದ್ದೇವೆ. ಪಾತಾಳದ (ನರಕದ)ಸಂಗಡ ಒಪ್ಪಂದ ಮಾಡಿಕೊಂಡಿದ್ದೇವೆ; ವಿಪರೀತವಾದ ಶಿಕ್ಷೆ ಯು ಹಾದುಹೋಗುವಾಗ ನಮ್ಮ ಮೇಲೆ ಬಾರದು; ಸುಳ್ಳನ್ನು ನಮ್ಮ ಆಶ್ರಯವಾಗಿ ಮಾಡಿಕೊಂಡು ಮೋಸದಲ್ಲಿ ಅಡಗಿಕೊಂಡಿದ್ದೇವೆ ಎಂದು ನೀವು ಅನ್ನುತ್ತೀರಲ್ಲಾ? ಆದದರಿಂದ ಕರ್ತನಾದ ದೇವರು ಹೀಗೆ ಹೇಳುತ್ತಾನೆ--ಇಗೋ, ಪರೀಕ್ಷಿತವಾಗಿಯೂ ಅಮೂಲ್ಯವಾಗಿಯೂ ಇರುವ ಮೂಲೆಗಲ್ಲನ್ನು ಚೀಯೋನಿನಲ್ಲಿ ಸ್ಥಿರವಾದ ಆಸ್ತಿವಾರವನ್ನಾಗಿ ಇಡು ತ್ತೇನೆ; ವಿಶ್ವಾಸವಿಡುವವನು ಆತುರಪಡನು (ಆಶಾ ಭಂಗ ಪಡುವದಿಲ್ಲ). ನಾನು ನ್ಯಾಯವನ್ನು ನೂಲ ನ್ನಾಗಿಯೂ ನೀತಿಯನ್ನು ಮಟ್ಟಗೋಲನ್ನಾಗಿಯೂ ಮಾಡುವೆನು, ಕಲ್ಮಳೆಯು ಸುಳ್ಳಿನ ಆಶ್ರಯವನ್ನು (ಗುಡಿಸಿ) ಬಡಿದುಕೊಂಡು ಹೋಗುವದು, ಅಡ ಗುವ ಸ್ಥಾನವನ್ನು ಜಲಪ್ರವಾಹವು ಮುಳುಗಿಸಿಬಿಡು ವದು. ಮರಣದೊಂದಿಗೆ ನೀವು ಮಾಡಿಕೊಂಡ ಒಡಂಬಡಿಕೆ ರದ್ದಾಗುವದು. ಪಾತಾಳದ ಸಂಗಡ ನೀವು ಮಾಡಿಕೊಂಡ ಒಪ್ಪಂದವು ನಿಲ್ಲುವದಿಲ್ಲ; ವಿಪರೀತ ಬಾಧೆಯು ಹಾದುಹೋಗುವಾಗ ನೀವು ಅದರಿಂದ ತುಳಿಯಲ್ಪಡುವಿರಿ. ಅದು ಹಾದು ಹೋಗುವಾಗೆಲ್ಲಾ ನಿಮ್ಮನ್ನು ಹಿಡಿಯುವದು. ಅದು ಹೊತ್ತಾರೆಯಿಂದ ಹೊತ್ತಾರೆಗೆ (ಬೆಳಬೆಳಕೂ) ಹಗಲು ರಾತ್ರಿಯೂ ಹಾದು ಹೋಗುವದು; ಅದರ ಸುದ್ದಿ ಯನ್ನು ತಿಳುಕೊಳ್ಳುವದರಿಂದ ಭಯವಾಗುವದು. ಮೈ ಚಾಚುವದಕ್ಕೆ ಅವನ ಹಾಸಿಗೆ ಚಿಕ್ಕದಾಗಿರು ವದು. ಮುದುರಿಕೊಂಡು ಮಲಗೇನಂದರೆ ಹೊದಿ ಕೆಯ ಅಗಲ ಸಾಲದು; ಕರ್ತನು ಪೆರಾಚೀಮ್ ಪರ್ವತದಲ್ಲಿ ಅದರ ಹಾಗೆ ಎದ್ದು ಗಿಬ್ಯೋನ್ ತಗ್ಗಿನಲ್ಲಿ ಆದ ಹಾಗೆ ಕೋಪಿಸಿ ಅಪರೂಪವಾದ ತನ್ನ ಕೆಲಸ ವನ್ನು ನಡಿಸಿ ಅಪೂರ್ವವಾದ ತನ್ನ ಕಾರ್ಯವನ್ನು ನೇರವೇರಿಸುವನು. ಹೀಗಿರುವದರಿಂದ ನಿಮ್ಮ ಬಂಧನಗಳು ಬಿಗಿಯಾಗದಂತೆ ಹಾಸ್ಯಗಾರರಾಗ ಬೇಡಿರಿ; ಸೈನ್ಯಗಳ ಕರ್ತನಾದ ದೇವರ ಕಡೆಯಿಂದ ಭೂಮಂಡಲದಲ್ಲೆಲ್ಲಾ ಸಂಹಾರವು ನಿರ್ಣಯಿಸಿದೆ ಎಂಬದನ್ನು ನಾನು ಕೇಳಿದ್ದೇನೆ.
- Isaiah 59:4 ಯೆಶಾಯ 59:4ನ್ಯಾಯಕ್ಕೋಸ್ಕರ ಕರೆಯುವವನು ಯಾವನೂ ಇಲ್ಲ; ಇಲ್ಲವೆ ಸತ್ಯಕ್ಕೋಸ್ಕರ ಬೇಡು ವವನು ಒಬ್ಬನೂ ಇಲ್ಲ. ವ್ಯರ್ಥತ್ವದಲ್ಲಿ ವಿಶ್ವಾಸ ಇಡು ತ್ತಾರೆ. ಸುಳ್ಳನ್ನು ಮಾತಾಡುತ್ತಾರೆ; ಕೇಡನ್ನು ಗರ್ಭಧರಿಸಿ ಕೊಳ್ಳುತ್ತಾರೆ ಅಕ್ರಮವನ್ನು ಹೆರುತ್ತಾರೆ.
- Isaiah 29:5 ಯೆಶಾಯ 29:5ಅದೂ ಅಲ್ಲದೆ ನಿನ್ನ ಅನ್ಯರ ಗುಂಪು ಸೂಕ್ಷ್ಮ ವಾದ ದೂಳಿನಂತಾಗುವದು, ಭಯಂಕರವಾದ ಸಮೂಹವು ಹಾರಿಹೋಗುವ ಹೊಟ್ಟಿನ ಹಾಗೆ ಇರು ವದು; ಹೌದು, ಅದು ಕ್ಷಣ ಮಾತ್ರದಲ್ಲಿ ಫಕ್ಕನೆ ಆಗುವದು.
- Luke 16:14 ಲೂಕನು 16:14ಆಗ ಲೋಭಿ ಗಳಾದ ಫರಿಸಾಯರು ಸಹ ಇವೆಲ್ಲವುಗಳನ್ನು ಕೇಳಿ ಆತನಿಗೆ ಪರಿಹಾಸ್ಯ ಮಾಡಿದರು.
- Isaiah 13:3 ಯೆಶಾಯ 13:3ನಾನು ನನ್ನ ಪರಿಶುದ್ಧರಿಗೆ ಆಜ್ಞಾಪಿಸಿ ನನ್ನ ಮಹಿಮೆಯಲ್ಲಿ ಉಲ್ಲಾಸಿಸುವವರನ್ನೂ ಶೂರರನ್ನೂ ನನ್ನ ಕೋಪಕ್ಕೆ ಕರೆದಿದ್ದೇನೆ.
- Revelation 12:10 ಪ್ರಕಟನೆ 12:10ಆಗ ಪರಲೋಕದಲ್ಲಿ ಮಹಾಶಬ್ದವನ್ನು ನಾನು ಕೇಳಿದೆನು. ಅದು--ಈಗ ರಕ್ಷಣೆಯೂ ಶಕ್ತಿಯೂ ನಮ್ಮ ದೇವರ ರಾಜ್ಯವೂ ಆತನ ಕ್ರಿಸ್ತನ ಅಧಿಕಾರವೂ ಬಂದವು; ಯಾಕಂದರೆ ಹಗಲಿರುಳು ನಮ್ಮ ಸಹೋದರರ ಮೇಲೆ ನಮ್ಮ ದೇವರ ಮುಂದೆ ದೂರು ಹೇಳಿದ ದೂರು ಗಾರನು ದೊಬ್ಬಲ್ಪಟ್ಟಿದ್ದಾನೆ.
- Isaiah 25:4–5 ಯೆಶಾಯ 25:4–5ನೀನು ದೀನರಿಗೆ ಕೋಟೆಯೂ ಇಕ್ಕಟ್ಟಿನಲ್ಲಿ ದರಿದ್ರರಿಗೆ ರಕ್ಷಣಾ ದುರ್ಗವೂ ಭೀಕರರ ಶ್ವಾಸವು ಬಿಸಿಲಿಗೋಸ್ಕರ ನೆರಳೂ ಗೋಡೆಗೆ ಬಡಿದು ಬಿಡುವ ಬಿರುಗಾಳಿಯಂತಿರುವಾಗ ಬಿರುಗಾಳಿಗೋ ಸ್ಕರ ಆಶ್ರಯವೂ ಆಗಿದ್ದೀ. ಒಣಗಿದ ಸ್ಥಳದಲ್ಲಿನ ಬಿಸಿಲಿನ ಹಾಗೆ ನೀನು ಅನ್ಯರ ಗದ್ದಲವನ್ನು ತಗ್ಗಿಸುವಿ; ಮೋಡದ ನೆರಳಿನಿಂದ ಬಿಸಿಲು ಹೇಗೋ ಹಾಗೆಯೇ ನಿನ್ನಿಂದ ಅವರ ಭೀಕರತೆಯನ್ನು ಕೀಳು ಸ್ಥಿತಿಗೆ ತರುವಿ.
- Luke 6:7 ಲೂಕನು 6:7ಆಗ ಶಾಸ್ತ್ರಿಗಳೂ ಫರಿಸಾಯರೂ ಆತನಿಗೆ ವಿರೋಧ ವಾಗಿ ತಪ್ಪು ಕಂಡುಹಿಡಿಯಬೇಕೆಂದು ಆತನು ಆ ಸಬ್ಬತ್ ದಿನದಲ್ಲಿ ಅವನನ್ನು ಸ್ವಸ್ಥಮಾಡುವನೇನೋ ಎಂದು ಕಾಯುತ್ತಿದ್ದರು.
- Luke 20:20–23 ಲೂಕನು 20:20–23ಅವರು ಆತನನ್ನು ಹೊಂಚಿ ನೋಡಿದವರಾಗಿ ಮಾತಿನಲ್ಲಿ ಆತನನ್ನು ಸಿಕ್ಕಿಸುವಂತೆಯೂ ಅಧಿಪತಿಯ ಬಲಕ್ಕೆ ಮತ್ತು ಅಧಿಕಾರಕ್ಕೆ ಒಪ್ಪಿಸುವಂತೆಯೂ ತಾವು ನೀತಿವಂತರೆಂದು ನಟಿಸುವ ಗೂಢಾಚಾರರನ್ನು ಕಳುಹಿಸಿದರು. ಆಗ ಅವರು ಆತನಿಗೆ--ಗುರುವೇ, ನೀನು ಮುಖದಾಕ್ಷಿಣ್ಯವಿಲ್ಲದೆ ಸರಿಯಾಗಿ ಮಾತನಾಡಿ ಬೋಧಿ ಸುತ್ತೀ; ದೇವರ ಮಾರ್ಗವನ್ನು ಸತ್ಯವಾಗಿ ಬೋಧಿಸು ವವನಾಗಿದ್ದೀಯೆಂದು ನಾವು ಬಲ್ಲೆವು. ಆದರೆ ಕೈಸರನಿಗೆ ಕಪ್ಪವನ್ನು ಸಲ್ಲಿಸುವದು ನ್ಯಾಯವೋ ಅಥವಾ ಅಲ್ಲವೋ ಎಂದು ಕೇಳಿದರು. ಆದರೆ ಆತನು ಅವರ ಕುಯುಕ್ತಿಯನ್ನು ತಿಳಿದು ಅವರಿಗೆ--ನನ್ನನ್ನು ಯಾಕೆ ಶೋಧಿಸುತ್ತೀರಿ?
- Daniel 7:19–25 ದಾನಿಯೇಲನು 7:19–25ಆ ಮೇಲೆ ನಾಲ್ಕನೆಯ ಮೃಗವು ಉಳಿದವು ಗಳಿಗಿಂತ ವ್ಯತ್ಯಾಸವಾಗಿಯೂ ಅತಿ ಭಯಂಕರವಾ ಗಿಯೂ ಕಬ್ಬಿಣದ ಹಲ್ಲುಗಳುಳ್ಳದ್ದಾಗಿಯೂ ಹಿತ್ತಾಳೆಯ ಉಗುರುಗಳುಳ್ಳದ್ದಾಗಿಯೂ ತುಂಡು ತುಂಡು ಮಾಡಿ ತಿಂದು ಮಿಕ್ಕಿದ್ದನ್ನು ಕಾಲಿನ ಕೆಳಗೆ ಹಾಕಿ ತುಳಿಯುವಂಥಾದ್ದೂ ಆಗಿದೆ. ಅದರ ತಲೆಯಲ್ಲಿದ್ದ ಹತ್ತು ಕೊಂಬುಗಳ ವಿಷಯವಾಗಿಯೂ ನಾನು ನೋಡುತ್ತಿದ್ದ ಹಾಗೆಯೇ ಯಾವ ಕೊಂಬು ಮೊಳೆತು ಮೂರು ಕೊಂಬುಗಳನ್ನು ಬೀಳಿಸಿ ಆ ಎದ್ದು ಬಂದ ಬೇರೊಂದರ ಕೊಂಬಿನ ವಿಷಯವಾಗಿಯೂ ಹೌದು, ಕಣ್ಣುಗಳು ಳ್ಳಂತ, ಬಹು ದೊಡ್ಡ ಮಾತುಗಳನ್ನು ಮಾತನಾಡಿದ ಬಾಯಿಯಂತ, ತನ್ನ ಜೊತೆಯವರಿಗಿಂತ ಬಲವಾದ ನೋಟವುಳ್ಳಂತ, ಆ ಕೊಂಬಿನ ವಿಷಯವಾಗಿ ಸತ್ಯಾರ್ಥ ವನ್ನು ತಿಳಿಯಬೇಕೆಂದಿದ್ದೆನು. ನಾನು ನೋಡಲಾಗಿ ಆ ಕೊಂಬು ಪರಿಶುದ್ಧರ ಸಂಗಡ ಯುದ್ಧಮಾಡಿತು ಮತ್ತು ಅವರಿಗೆ ವಿರೋಧವಾಗಿ ಜಯಗಳಿಸಿತು; ಪೂರ್ವಿಕನ ಕಾಲ ಬಂದು ಮಹೋನ್ನತನ ಪರಿ ಶುದ್ಧರಿಗೆ ನ್ಯಾಯತೀರ್ಪು ಕೊಡುವ ವರೆಗೂ ಪರಿ ಶುದ್ಧರು ರಾಜ್ಯವನ್ನು ವಶಪಡಿಸಿಕೊಳ್ಳುವ ಕಾಲದ ವರೆಗೂ ಅವರ ಮೇಲೆ ಜಯವನ್ನು ಹೊಂದಿತು. ಹೀಗೆ ಅವನು--ಆ ನಾಲ್ಕನೆಯ ಮೃಗವು ಭೂಮಿಯ ಮೇಲಿರುವ ನಾಲ್ಕನೆಯ ರಾಜ್ಯವಾಗು ವದು. ಅದು ಎಲ್ಲಾ ರಾಜ್ಯಗಳಿಗಿಂತ ವ್ಯತ್ಯಾಸವಾಗಿಯೂ ಭೂಮಿಯನ್ನೆಲ್ಲಾ ತುಳಿದು, ತುಂಡುತುಂಡು ಮಾಡು ವಂಥದ್ದಾಗಿಯೂ ಇರುವದು. ಆ ಹತ್ತು ಕೊಂಬು ಗಳು ಆ ರಾಜ್ಯದೊಳಗೆ ಹುಟ್ಟುವ ಹತ್ತು ಅರಸುಗಳಾ ಗಿವೆ; ಅನಂತರ ಇನ್ನೊಬ್ಬನು ಹುಟ್ಟುವನು ಅವನು ಮೊದಲಿನವರಿಗಿಂತ ವಿಲಕ್ಷಣವಾಗಿ ಮೂರು ಅರಸರನ್ನು ಅದುಮಿ ಬಿಡುವನು. ಅವನು ಮಹೋನ್ನತನಿಗೆ ವಿರೋಧವಾಗಿ ಕೊಚ್ಚಿಕೊಂಡು ಮಾತುಗಳನ್ನಾಡಿ ಪರಿ ಶುದ್ಧರನ್ನು ಬಾಧಿಸಿ, ಕಾಲನಿಯಮಗಳನ್ನು ಬದಲಾಯಿ ಸುವದಕ್ಕೆ ಯೋಚಿಸುವನು; ಕಾಲವು ಕಾಲನಿಯಮವು ವಿಭಾಗಿಸುವ ತನಕ ಅವರು ಅವನ ಕೈಯಲ್ಲಿ ಒಪ್ಪಿಸ ಲ್ಪಡುವರು.
- Daniel 7:7 ದಾನಿಯೇಲನು 7:7ತರುವಾಯ ರಾತ್ರಿಯ ದರ್ಶನದಲ್ಲಿ ನಾನು ನೋಡಲಾಗಿ ಇಗೋ, ನಾಲ್ಕ ನೆಯ ಮೃಗವು ಭಯಂಕರವಾದದ್ದೂ ಘೋರವಾ ದದ್ದೂ ಬಹಳ ಬಲವುಳ್ಳದ್ದೂ ಆಗಿತ್ತು; ಅದಕ್ಕೆ ಕಬ್ಬಿಣದ ದೊಡ್ಡ ಹಲ್ಲುಗಳಿದ್ದವು. ಅದು ತಿಂದು ತುಂಡು ತುಂಡು ಮಾಡಿ ಮಿಕ್ಕಿದ್ದನ್ನು ತನ್ನ ಕಾಲುಗಳ ಕೆಳಗೆ ಹಾಕಿ ತುಳಿಯಿತು. ಅದು ಮೊದಲಿನ ಎಲ್ಲಾ ಮೃಗಗಳಿಗಿಂತ ವ್ಯತ್ಯಾಸವುಳ್ಳದ್ದು ಮತ್ತು ಹತ್ತು ಕೊಂಬುಗಳುಳ್ಳದ್ದು ಆಗಿತ್ತು.