Isaiah · chapter 3 · verse 5
Isaiah 3:5 in Kannada
ಪ್ರತಿಯೊಬ್ಬನು ಇನ್ನೊಬ್ಬ ನಿಂದಲೂ ಪ್ರತಿಯೊಬ್ಬನು ನೆರೆಯವನಿಂದಲೂ ಜನರು ಹಿಂಸಿಸಲ್ಪಡುವರು: ಹುಡುಗನು ವೃದ್ಧನ ವಿರೋಧವಾಗಿಯೂ ನೀಚನು ಘನವಂತನ ವಿರೋಧ ವಾಗಿಯೂ ಸೊಕ್ಕಿನಿಂದ ವರ್ತಿಸುವರು.
Pratiyobbanu innobba nindaloo pratiyobbanu nereyavanindaloo janaru hinsisalpaduvaru: huduganu vruddhana virodhavaagiyoo neechanu ghanavantana virodha vaagiyoo sokkininda vartisuvaru.
Isaiah 3:5 in English
- King James Version (KJV)
- And the people shall be oppressed, every one by another, and every one by his neighbour: the child shall behave himself proudly against the ancient, and the base against the honourable.
- World English Bible (WEB)
- The people will be oppressed, everyone by another, and everyone by his neighbor. The child will behave himself proudly against the old man, and the wicked against the honorable.
- American Standard Version (ASV)
- And the people shall be oppressed, every one by another, and every one by his neighbor: the child shall behave himself proudly against the old man, and the base against the honorable.
- Bible in Basic English (BBE)
- And the people will be crushed, every one by his neighbour; the young will be full of pride against the old, and those of low position will be lifted up against the noble.
- Darby Translation (DBY)
- And the people shall be oppressed one by the other, and each by his neighbour; the child will be insolent against the elder, and the base against the honourable.
- Webster's Bible (WBS)
- And the people shall be oppressed, every one by another, and every one by his neighbor: the child shall behave himself proudly against the elder, and the base against the honorable.
- Young's Literal Translation (YLT)
- And the people hath exacted — man upon man, Even a man on his neighbour, Enlarge themselves do the youths against the aged, And the lightly esteemed against the honoured.
Read in context
- 3ಪಂಚಶತಾಧಿಪತಿ, ಘನ ವುಳ್ಳವನು, ಆಲೋಚನಾಪರನು, ತಾಂತ್ರಿಕನು ಮತ್ತು ವಾಕ್ಚಾತುರ್ಯವುಳ್ಳವನು ಆಗಿರುವ ಇವರನ್ನೆಲ್ಲಾ ತೆಗೆ ದುಬಿಡುವೆನು.
- 4ಮಕ್ಕಳನ್ನು ಅವರ ಪ್ರಭುಗಳನ್ನಾ ಗಿಯೂ ಎಳೇ ಕೂಸುಗಳು ಅವರ ಮೇಲೆ ಆಳು ವಂತೆಯೂ ಕೊಡುವೆನು.
- 5ಪ್ರತಿಯೊಬ್ಬನು ಇನ್ನೊಬ್ಬ ನಿಂದಲೂ ಪ್ರತಿಯೊಬ್ಬನು ನೆರೆಯವನಿಂದಲೂ ಜನರು ಹಿಂಸಿಸಲ್ಪಡುವರು: ಹುಡುಗನು ವೃದ್ಧನ ವಿರೋಧವಾಗಿಯೂ ನೀಚನು ಘನವಂತನ ವಿರೋಧ ವಾಗಿಯೂ ಸೊಕ್ಕಿನಿಂದ ವರ್ತಿಸುವರು.
- 6ಒಬ್ಬನು ತನ್ನ ಸಹೋದರನನ್ನು ತಂದೆಯ ಮನೆಯಲ್ಲಿ ಹಿಡಿ ದು -- ನಿನಗೆ ವಸ್ತ್ರವಿದೆ, ನಮ್ಮನ್ನು ಆಳುವವನಾಗು ಮತ್ತು ಈ ಹಾಳಾದ ಪಟ್ಟಣವು ನಿನ್ನ ಕೈಕೆಳಗಿರಲಿ ಎಂದು ಹೇಳಲು
- 7ಆ ದಿನದಲ್ಲಿ ಅವನು ಆಣೆಯಿಟ್ಟು --ನಾನು ಉಪಶಮನ ಮಾಡುವವನಾಗುವದಿಲ್ಲ, ನನ್ನ ಮನೆಯಲ್ಲಿ ಅನ್ನವಾಗಲಿ ವಸ್ತ್ರವಾಗಲಿ ಇಲ್ಲ; ನನ್ನನ್ನು ಪ್ರಜಾಧಿಪತಿಯನ್ನಾಗಿ ಮಾಡಬೇಡಿರಿ ಅಂದನು.
Cross references
- Jeremiah 9:3–8 ಯೆರೆಮೀಯ 9:3–8ಅವರು ತಮ್ಮ ನಾಲಿಗೆಗಳನ್ನು ಬಿಲ್ಲಿನಂತೆ ಸುಳ್ಳುಗಳಿಗಾಗಿ ಬೊಗ್ಗಿಸುತ್ತಾರೆ. ಆದರೆ ಭೂಮಿಯಲ್ಲಿ ಸತ್ಯಕ್ಕಾಗಿ ಬಲಿಷ್ಠರಾಗುವದಿಲ್ಲ; ಅವರು ಕೇಡಿನಿಂದ ಕೇಡಿಗೆ ಹೋಗುತ್ತಾ ನನ್ನನ್ನು ಅರಿಯದೆ ಇದ್ದಾರೆಂದು ಕರ್ತನು ಅನ್ನುತ್ತಾನೆ. ನಿಮ್ಮ ನಿಮ್ಮ ನೆರೆಯವರಿಗೆ ಎಚ್ಚರಿಕೆಯಾಗಿರಿ; ಯಾವ ಸಹೋದರ ನಲ್ಲಾದರೂ ನಂಬಿಕೆ ಇಡಬೇಡಿರಿ; ಸಹೋದರರೆಲ್ಲರೂ ಸಂಪೂರ್ಣವಾಗಿ ಮೋಸಮಾಡುವರು, ನೆರೆಯವ ರೆಲ್ಲರು ಚಾಡಿಹೇಳುತ್ತಾ ತಿರುಗಾಡುವರು. ತಮ್ಮ ತಮ್ಮ ನೆರೆಯವರಿಗೆ ವಂಚನೆಮಾಡಿ ಸತ್ಯವನ್ನು ಮಾತಾ ಡರು; ಸುಳ್ಳುಗಳನ್ನು ಹೇಳುವದಕ್ಕೆ ಅವರು ತಮ್ಮ ನಾಲಿಗೆಗೆ ಬೋಧಿಸಿದ್ದಾರೆ. ಅಕ್ರಮ ಮಾಡುವದಕ್ಕೆ ಪ್ರಯಾಸಪಡುತ್ತಾರೆ. 6 ನಿನ್ನ ನಿವಾಸವು ಮೋಸದ ಮಧ್ಯದಲ್ಲಿ ಅದೆ; ಮೋಸದಿಂದಲೇ ನನ್ನನ್ನು ನಿರಾಕರಿಸು ತ್ತಾರೆಂದು ಕರ್ತನು ಅನ್ನುತ್ತಾನೆ. ಆದದರಿಂದ ಸೈನ್ಯಗಳ ಕರ್ತನು ಹೇಳುವದೇ ನಂದರೆ--ಇಗೋ, ನಾನು ಅವರನ್ನು ಕರಗಿಸಿ ಶೋಧಿ ಸುತ್ತೇನೆ; ನನ್ನ ಜನರ ಮಗಳಿಗೋಸ್ಕರ ನಾನು ಹೇಗೆ ಮಾಡಲಿ? ಅವರ ನಾಲಿಗೆ ಎಸೆದ ಬಾಣದಂತಿದೆ, ಅದು ಮೋಸವನ್ನಾಡುತ್ತದೆ. ತನ್ನ ಬಾಯಿಂದ ತನ್ನ ನೆರೆಯವರ ಸಂಗಡ ಸಮಾಧಾನವಾಗಿ ಮಾತನಾಡಿ ಹೃದಯದಲ್ಲಿ ಅವನಿಗೆ ಹೊಂಚುಹಾಕುತ್ತಾನೆ.
- Malachi 3:5 ಮಲಾಕಿಯ 3:5ನ್ಯಾಯಕ್ಕೋಸ್ಕರ ನಿಮ್ಮನ್ನು ನಾನು ಸವಿಾಪಿ ಸುತ್ತೇನೆ; ಆಗ ಕಣಿಹೇಳುವವರಿಗೂ ವ್ಯಭಿಚಾರಿ ಗಳಿಗೂ ಸುಳ್ಳು ಪ್ರಮಾಣಮಾಡುವವರಿಗೂ ಸಂಬಳ ದಲ್ಲಿ ಕೂಲಿಯವನಿಗೂ ವಿಧವೆಗೂ ದಿಕ್ಕಿಲ್ಲದವನಿಗೂ ಬಲಾತ್ಕಾರ ಮಾಡುವವರಿಗೂ ಅನ್ಯನ ನ್ಯಾಯವನ್ನು ತಿರಿಗಿಸಿ ಬಿಡುವವರಿಗೂ ನನಗೆ ಭಯಪಡದವರಿಗೂ ವಿರೋಧವಾಗಿ ಶೀಘ್ರವಾದ ಸಾಕ್ಷಿಗಾರನಾಗಿರು ವೆನೆಂದು ಸೈನ್ಯಗಳ ಕರ್ತನು ಹೇಳುತ್ತಾನೆ.
- Ezekiel 22:6–7 ಯೆಹೆಜ್ಕೇಲನು 22:6–7ಇಗೋ ಇಸ್ರಾ ಯೇಲಿನ ಪ್ರಭುಗಳಲ್ಲಿ ಪ್ರತಿಯೊಬ್ಬನು ತನ್ನ ತನ್ನ ಶಕ್ತ್ಯಾನುಸಾರವಾಗಿ ರಕ್ತವನ್ನು ನಿನ್ನ ಮೇಲೆ ಚೆಲ್ಲುತ್ತಲೇ ಇದ್ದಾನೆ. ನಿನ್ನಲ್ಲಿ ತಂದೆಯನ್ನೂ ತಾಯಿಯನ್ನೂ ಅಲಕ್ಷ್ಯ ಮಾಡಿದ್ದಾರೆ; ನಿನ್ನಲ್ಲಿ ಅಪರಿಚಿತರಿಗೆ ಬಲಾತ್ಕಾರ ಮಾಡಿದ್ದಾರೆ; ನಿನ್ನಲ್ಲಿ ದಿಕ್ಕಿಲ್ಲದವನನ್ನೂ ವಿಧವೆಯನ್ನೂ ಪೀಡಿಸಿದ್ದಾರೆ.
- 2 Samuel 16:5–9 2 ಸಮುವೇಲನು 16:5–9ಅರಸನಾದ ದಾವೀದನು ಬಹುರೀಮಿನ ವರೆಗೂ ಬಂದಾಗ ಇಗೋ, ಸೌಲನ ಗೋತ್ರದವನಾದಂಥ ಗೇರನ ಮಗನಾದ ಶಿಮ್ಮಿಯೆಂಬ ಹೆಸರುಳ್ಳ ಒಬ್ಬ ಮನುಷ್ಯನು ಅಲ್ಲಿಂದ ಹೊರಟು ದೂಷಿಸುತ್ತಾ ನಡೆದು ಬಂದನು. ಎಲ್ಲಾ ಜನರೂ ಎಲ್ಲಾ ಪರಾಕ್ರಮಶಾಲಿ ಗಳೂ ದಾವೀದನ ಬಲ ಮತ್ತು ಎಡ ಪಾರ್ಶ್ವಗಳಲ್ಲಿ ರುವಾಗ ಅವನು ಅರಸನಾದ ದಾವೀದನ ಮೇಲೆಯೂ ಅವನ ಎಲ್ಲಾ ಊಳಿಗದವರ ಮೇಲೆಯೂ ಕಲ್ಲುಗಳನ್ನು ಎಸೆದನು. ಶಿಮ್ಮಿ ಅವನನ್ನು ದೂಷಿಸುತ್ತಾ--ರಕ್ತದ ಮನುಷ್ಯನೇ, ಬೆಲಿಯಾಳನ ಮನುಷ್ಯನೇ, ಹೊರಟು ಬಾ, ಹೊರಟು ಬಾ. ಕರ್ತನು ಸೌಲನ ಮನೆಯವರ ರಕ್ತವನ್ನು ಸೌಲನಿಗೆ ಪ್ರತಿಯಾಗಿ ಅರಸನಾದ ನಿನ್ನ ಮೇಲೆ ತಿರಿಗಿ ಬರಮಾಡಿ ರಾಜ್ಯವನ್ನು ನಿನ್ನ ಮಗನಾದ ಅಬ್ಷಾಲೋಮನ ಕೈಯಲ್ಲಿ ಒಪ್ಪಿಸಿಕೊಟ್ಟನು; ನೀನು ರಕ್ತದ ಮನುಷ್ಯನಾದದರಿಂದ ಇಗೋ, ನಿನ್ನ ಕೇಡಿನಲ್ಲಿ ಸಿಕ್ಕಿಕೊಂಡಿ ಅಂದನು. ಆಗ ಚೆರೂಯಳ ಮಗನಾದ ಅಬೀಷೈಯು ಅರಸನಿಗೆ--ಈ ಸತ್ತ ನಾಯಿ, ಅರಸನಾದ ನನ್ನ ಒಡೆಯನನ್ನು ದೂಷಿಸುವದೇನು? ನಾನೇ ದಾಟಿಹೋಗಿ ಅವನ ತಲೆಯನ್ನು ತೆಗೆದುಕೊಳ್ಳಲು ಅಪ್ಪಣೆಯಾಗಲಿ ಅಂದನು.
- Job 30:1–12 ಯೋಬನು 30:1–12ಆದರೆ ಈ ದಿವಸಗಳಲ್ಲಿ ನನಗಿಂತ ಚಿಕ್ಕವರು ನನ್ನನ್ನು ನೋಡಿ ಪರಿಹಾಸ್ಯಮಾಡುತ್ತಾರೆ; ಅವರ ತಂದೆಗಳನ್ನು ನನ್ನ ಕುರಿಮಂದೆಯ ನಾಯಿಗಳ ಸಂಗಡ ಸೇರಿಸುವದಕ್ಕೂ ಅಯೋಗ್ಯರೆಂದೆನು ಹೌದು, ಅವರ ಕೈಗಳ ಶಕ್ತಿಯ ಲಾಭ ನನಗೆ ಯಾಕೆ? ಅವರಲ್ಲಿ ಮುದಿಪ್ರಾಯವು ನಾಶವಾಯಿತು. ಕೊರತೆ ಯಿಂದಲೂ ಬರದಿಂದಲೂ ಒಂಟಿಗರಾಗಿ ಪೂರ್ವ ದಲ್ಲಿ ಹಾಳೂ ಬೈಲೂ ಆದ ಅರಣ್ಯಕ್ಕೆ ಓಡುತ್ತಾರೆ; ಪೊದೆಯ ಹತ್ತಿರ ಉಪ್ಪಿನಸೊಪ್ಪು ಕೀಳುವವರಿಗೆ ಜಾಲಿಯ ಬೇರುಗಳೇ ಅವರ ರೊಟ್ಟಿ. ಜನರಿಂದ ಅವರನ್ನು ಹೊರಗೆ ಹಾಕುತ್ತಾರೆ; (ಕಳ್ಳರ ಹಿಂಡಿನಂತೆ ಅವರ ಹಿಂದೆ ಕೂಗುತ್ತಾರೆ). ಭಯಂಕರವಾದ ತಗ್ಗು ಗಳ ಸಂದುಗಳಲ್ಲಿಯೂ ಭೂಮಿಯ ಗುಹೆಗಳಲ್ಲಿಯೂ ಬಂಡೆಗಳಲ್ಲಿಯೂ ವಾಸವಾಗಿರಬೇಕು. ಪೊದೆಗಳ ನಡುವೆ ಕೂಗುತ್ತಾರೆ; ತುರಿಚಿಗಳ ಕೆಳಗೆ ಕೂಡುತ್ತಾರೆ. ಹುಚ್ಚರ ಮಕ್ಕಳಾಗಿಯೂ ಹೌದು, ಕೆಳಮಟ್ಟದವರ ಮಕ್ಕಳಾಗಿಯೂ ಇದ್ದರು. ಆದರೆ ಈಗ ನಾನು ಅವರ ಹಾಸ್ಯದ ರಾಗವೂ ಹೌದು, ಅವರಿಗೆ ಗಾದೆಯೂ ಆದೆನು. ನನ್ನನ್ನು ಅಸಹ್ಯಿಸುತ್ತಾರೆ; ನನಗೆ ದೂರ ವಾಗಿ ಓಡಿಹೋಗುತ್ತಾರೆ; ನನ್ನ ಮುಖದ ಮುಂದೆ ಉಗುಳಲು ಹಿಂದೆಗೆಯುವದಿಲ್ಲ. ಆತನು ತನ್ನ ಹಗ್ಗವನ್ನು ಸಡಲಿಸಿ ನನ್ನನ್ನು ಶ್ರಮೆ ಪಡಿಸುತ್ತಾನೆ; ನನ್ನ ಮುಖದ ಮುಂದೆ ಕಡಿವಾಣಕಿತ್ತು ಬಿಡುತ್ತಾರೆ; ಬಲಗಡೆಯಲ್ಲಿ ಯುವಕರು ಏಳುತ್ತಾರೆ; ಅವರು ನನ್ನ ಕಾಲುಗಳನ್ನು ದೂಡುತ್ತಾರೆ; ನಾಶಕರ ವಾದ ತಮ್ಮ ಹಾದಿಗಳನ್ನು ನನಗೆ ವಿರೋಧವಾಗಿ ಕಟ್ಟುತ್ತಾರೆ.
- Jeremiah 22:17 ಯೆರೆಮೀಯ 22:17ಆದರೆ ನಿನ್ನ ಕಣ್ಣುಗಳು ನಿನ್ನ ಹೃದಯವು ನಿನ್ನ ದುರ್ಲಾಭದ ಮೇಲೆ, ಅಪರಾಧವಿಲ್ಲದವನ ರಕ್ತ ಚೆಲ್ಲುವದರ ಮೇಲೆ ಮತ್ತು ಪೀಡೆಯನ್ನೂ ಬಲಾತ್ಕಾರವನ್ನೂ ಮಾಡುವದರ ಮೇಲೆಯೇ ಹೊರತು ಮತ್ತಾವದರ ಮೇಲೆಯೂ ಇರುವದಿಲ್ಲ.
- Ezekiel 22:12 ಯೆಹೆಜ್ಕೇಲನು 22:12ನಿನ್ನಲ್ಲಿ ರಕ್ತ ಚೆಲ್ಲುವ ಹಾಗೆ ಲಂಚತಿಂದಿದ್ದಾರೆ; ಬಡ್ಡಿಯನ್ನೂ ಲಾಭವನ್ನೂ ತೆಗೆದುಕೊಂಡಿದ್ದಾರೆ; ಬಲಾತ್ಕಾರದಿಂದ ನಿನ್ನ ನೆರೆಯವರಲ್ಲಿ ದುರ್ಲಾಭಮಾಡಿಕೊಂಡಿದ್ದಾರೆ; ನನ್ನನ್ನು ಮರೆತುಬಿಟ್ಟಿ ದ್ದಾರೆಂದು ದೇವರಾದ ಕರ್ತನು ಹೇಳುತ್ತಾನೆ.
- Mark 14:65 ಮಾರ್ಕನು 14:65ತರು ವಾಯ ಕೆಲವರು ಆತನ ಮೇಲೆ ಉಗುಳಿ ಆತನ ಮುಖವನ್ನು ಮುಚ್ಚಿ ಆತನನ್ನು ಗುದ್ದುವದಕ್ಕೆ ಆರಂಭಿಸಿ ಆತನಿಗೆ--ಪ್ರವಾದನೆ ಹೇಳು ಅಂದರು. ಆಳು ಗಳು ಆತನನ್ನು ಹೊಡೆದರು.
- Luke 22:64 ಲೂಕನು 22:64ಇದಲ್ಲದೆ ಅವರು ಆತನ ಕಣ್ಣುಕಟ್ಟಿ ಆತನ ಮುಖದ ಮೇಲೆ ಹೊಡೆದು ಆತನಿಗೆ--ನಿನ್ನನ್ನು ಹೊಡೆದವರು ಯಾರು? ಪ್ರವಾ ದನೆ ಹೇಳು ಎಂದು ಕೇಳಿದರು.
- Leviticus 19:32 ಯಾಜಕಕಾಂಡ 19:32ನರೇಕೂದಲಿನವನ ಮುಂದೆ ಎದ್ದು ನಿಂತು ಕೊಳ್ಳಬೇಕು; ಮುದುಕನ ಸಮ್ಮುಖವನ್ನು ಗೌರವಿಸು; ನಿನ್ನ ದೇವರಿಗೆ ಭಯಪಡಬೇಕು; ನಾನೇ ಕರ್ತನು.
- Ecclesiastes 10:5–7 ಪ್ರಸಂಗಿ 10:5–7ಆಳುವ ವನ ಸಮ್ಮುಖದಿಂದ ಹೊರಟು ಬರುವ ತಪ್ಪಿನ ಹಾಗಿ ರುವ ಒಂದು ಕೇಡನ್ನು ನಾನು ಸೂರ್ಯನ ಕೆಳಗೆ ನೋಡಿದ್ದೇನೆ. ಮೂರ್ಖತನವು ಬಹಳ ಎತ್ತರವಾದ ಸ್ಥಳದಲ್ಲಿಡಲ್ಪಡುತ್ತದೆ. ಸಿರಿತನವು ಕೆಳಗಿನ ಸ್ಥಳದಲ್ಲಿ ಕೂತುಕೊಳ್ಳುವದು. ನಾನು ಕುದುರೆಗಳ ಮೇಲೆ ಸೇವಕರನ್ನೂ ಮತ್ತು ಪ್ರಭುಗಳು ಸೇವಕರ ಹಾಗೆ ಭೂಮಿಯ ಮೇಲೆ ನಡೆಯುವದನ್ನೂ ನೋಡಿದ್ದೇನೆ.
- 2 Kings 2:23 2 ಅರಸುಗಳು 2:23ಅವನು ಆ ಸ್ಥಳವನ್ನು ಬಿಟ್ಟು ಬೇತೇಲಿಗೆ ಹೋದನು. ಅವನು ಮಾರ್ಗದಲ್ಲಿ ಏರಿ ಹೋಗುತ್ತಿ ರುವಾಗ ಚಿಕ್ಕ ಹುಡುಗರು ಪಟ್ಟಣದಿಂದ ಹೊರಟು ಬಂದು ಅವನನ್ನು ಹಾಸ್ಯಮಾಡಿ ಅವನಿಗೆ--ಬೋಳ ತಲೆಯವನೇ, ಏರಿ ಹೋಗು; ಬೋಳ ತಲೆಯವನೇ, ಏರಿ ಹೋಗು ಅಂದರು.