Isaiah · chapter 30 · verse 2
Isaiah 30:2 in Kannada
ಫರೋಹನ ಬಲದಲ್ಲಿ ತಾವು ಬಲಗೊಳ್ಳುವ ಹಾಗೆ ಯೂ ಐಗುಪ್ತದ ನೆರಳಿನಲ್ಲಿ ಭರವಸವಿಟ್ಟು ನನ್ನ ಮಾತನ್ನು ಕೇಳದೆ ಐಗುಪ್ತಕ್ಕೆ ಪ್ರಯಾಣವಾಗಿ ಹೊರಟಿ ದ್ದಾರೆ.
Pharohana baladalli taavu balagolluva haage yoo aiguptada neralinalli bharavasavittu nanna maatannu kelade aiguptakke prayaanavaagi horati ddaare.
Isaiah 30:2 in English
- King James Version (KJV)
- That walk to go down into Egypt, and have not asked at my mouth; to strengthen themselves in the strength of Pharaoh, and to trust in the shadow of Egypt!
- World English Bible (WEB)
- who set out to go down into Egypt without asking for my advice, to strengthen themselves in the strength of Pharaoh, and to take refuge in the shadow of Egypt!
- American Standard Version (ASV)
- that set out to go down into Egypt, and have not asked at my mouth; to strengthen themselves in the strength of Pharaoh, and to take refuge in the shadow of Egypt!
- Bible in Basic English (BBE)
- Who make a move to go down into Egypt, without authority from me; who are looking to the strength of Pharaoh for help, and whose hope is in the shade of Egypt.
- Darby Translation (DBY)
- who walk to go down into Egypt, and have not asked of my mouth, — to take refuge under the protection of Pharaoh, and trust in the shadow of Egypt!
- Webster's Bible (WBS)
- That walk to go down into Egypt, and have not asked at my mouth; to strengthen themselves in the strength of Pharaoh, and to trust in the shade of Egypt!
- Young's Literal Translation (YLT)
- Who are walking to go down to Egypt, And My mouth have not asked, To be strong in the strength of Pharaoh, And to trust in the shadow of Egypt.
Read in context
- 1ಕರ್ತನು ಹೀಗೆ ಅನ್ನುತ್ತಾನೆ. ತಿರುಗಿ ಬೀಳುವ ಮಕ್ಕಳಿಗೆ ಅಯ್ಯೋ ಅವರು ಆಲೋಚನೆಯನ್ನು ಮಾಡುತ್ತಾರೆ, ಆದರೆ ನನ್ನಿಂದಲ್ಲ; ನನ್ನ ಆತ್ಮಪ್ರೇರಿತರಾಗದೆ ಉಪಾಯವನ್ನು ನೇಯ್ದು ಪಾಪದ ಮೇಲೆ ಪಾಪವನ್ನು ಸೇರಿಸಿಕೊಂಡಿದ್ದಾರೆ.
- 2ಫರೋಹನ ಬಲದಲ್ಲಿ ತಾವು ಬಲಗೊಳ್ಳುವ ಹಾಗೆ ಯೂ ಐಗುಪ್ತದ ನೆರಳಿನಲ್ಲಿ ಭರವಸವಿಟ್ಟು ನನ್ನ ಮಾತನ್ನು ಕೇಳದೆ ಐಗುಪ್ತಕ್ಕೆ ಪ್ರಯಾಣವಾಗಿ ಹೊರಟಿ ದ್ದಾರೆ.
- 3ಆದಕಾರಣ ಫರೋಹನ ಬಲವು ನಿಮಗೆ ನಾಚಿಕೆಯೂ ಐಗುಪ್ತದ ನೆರಳಿನ ಭರವಸದಿಂದ ನಿಮ ಗೆ ನಿಂದೆಯೂ ಉಂಟಾಗುವದು.
- 4ಅವನ ಪ್ರಧಾ ನರು ಚೋವನಿನಲ್ಲಿ ಇದ್ದರು. ಅವನ ರಾಯಭಾರಿ ಗಳು ಹಾನೇಸಿಗೆ ಬಂದಿದ್ದಾರೆ.
Cross references
- Isaiah 36:6 ಯೆಶಾಯ 36:6ಜಜ್ಜಿದ ದಂಡಿಗೆ ಸಮಾನವಾದ ಐಗುಪ್ತವೆಂಬ ಕೋಲಿನ ಮೇಲೆ ಭರವಸವಿಟ್ಟಿರುತ್ತಿಯಷ್ಟೆ; ಒಬ್ಬನು ಅಂತ ಕೋಲನ್ನು ಊರಿಕೊಳ್ಳುವದಾದರೆ ಅದು ಅವನ ಕೈಯೊಳಕ್ಕೆ ಹೋಗಿ ತಿವಿಯುತ್ತದೆ. ಐಗುಪ್ತದ ಅರಸ ನಾದ ಫರೋಹನು ತನ್ನಲ್ಲಿ ನಂಬಿಕೆ ಇಟ್ಟುಕೊಳ್ಳುವ ವರೆಲ್ಲರಿಗೆ ಹೀಗೆ ಇದ್ದಾನೆ.
- Numbers 27:21 ಅರಣ್ಯಕಾಂಡ 27:21ಅವನು ಯಾಜಕನಾದ ಎಲ್ಲಾಜಾರನ ಮುಂದೆ ನಿಲ್ಲಬೇಕು; ಇವನು ಕರ್ತನ ಮುಂದೆ ಊರೀಮಿನ ನ್ಯಾಯದ ಪ್ರಕಾರ ಅವನಿಗೋಸ್ಕರ ಆಲೋಚನೆಯ ಸಭೆಯನ್ನು ಕೇಳಬೇಕು; ಅವನ ಆಜ್ಞೆಯ ಪ್ರಕಾರವೇ ಅವನೂ ಅವನ ಸಂಗಡ ಇರುವ ಸಮಸ್ತ ಇಸ್ರಾಯೇಲ್ ಮಕ್ಕಳೂ ಸಮಸ್ತ ಸಭೆಯೂ ಹೋಗುತ್ತಾ ಬರುತ್ತಾ ಇರಬೇಕು ಅಂದನು.
- Ezekiel 29:6–7 ಯೆಹೆಜ್ಕೇಲನು 29:6–7ಆಗ ಎಲ್ಲಾ ಐಗುಪ್ತದ ನಿವಾಸಿಗಳು ನಾನೇ ಕರ್ತನೆಂದು ತಿಳಿಯುವರು; ಅವರು ಇಸ್ರಾಯೇಲ್ಯರ ಮನೆತನದವರಿಗೆ ದಂಟಿನ ಊರು ಗೋಲಾಗಿದ್ದರು. ಇಸ್ರಾಯೇಲ್ಯರು ನಿನ್ನ ಮೇಲೆ ಕೈಯಿಡಲು ನೀನು ಮುರಿದು ಅವರ ಹೆಗಲನ್ನು ಚುಚ್ಚಿದಿ; ಅವರು ನಿನ್ನನ್ನು ಊರಿಕೊಂಡಾಗ ನೀನು ಒಡೆದು ಅದರ ನಡುವುಗಳನ್ನೆಲ್ಲಾ ನಿಲ್ಲಿಸಿಬಿಟ್ಟೆ.
- Jeremiah 43:7 ಯೆರೆಮೀಯ 43:7ಅವರು ಕರ್ತನ ಮಾತಿಗೆ ಕಿವಿಗೊಡಲಿಲ್ಲ; ಹೀಗೆ ಅವರು ತಹಪನೇಸಿಗೆ ಬಂದರು.
- Lamentations 4:20 ಪ್ರಲಾಪಗಳು 4:20ಯಾರ ವಿಷಯವಾಗಿ ನಾವು--ಅವನ ನೆರಳಿನ ಕೆಳಗೆ ಅನ್ಯ ಜನಾಂಗಗಳೊಳಗೆ ಬದುಕುವೆವು ಎಂದು ಹೇಳಿ ಕೊಂಡೆವೋ ನಮ್ಮ ಮೂಗಿನ ಉಸಿರಾದ ಆ ಕರ್ತನ ಅಭಿಷಿಕ್ತನು ಅವರ ಕುಣಿಗಳಲ್ಲಿ ಸಿಕ್ಕಿಕೊಂಡನು.
- Deuteronomy 28:68 ಧರ್ಮೋಪದೇಶಕಾಂಡ 28:68ಇದಲ್ಲದೆ ಕರ್ತನು--ನೀನು ಇನ್ನು ಮೇಲೆ ನೋಡುವದಿಲ್ಲವೆಂದು ನಾನು ಹೇಳಿದ ಮಾರ್ಗದಿಂದ ಹಡಗುಗಳಲ್ಲಿ ನಿನ್ನನ್ನು ಐಗುಪ್ತ್ಯಕ್ಕೆ ತಿರಿಗಿ ಬರಮಾಡುವೆನು; ಅಲ್ಲಿ ದಾಸ ರಾಗಿಯೂ ದಾಸಿಗಳಾಗಿಯೂ ನಿಮ್ಮ ಶತ್ರುಗಳಿಗೆ ಮಾರಲ್ಪಡುವಿರಿ. ಆದರೆ ಕೊಂಡುಕೊಳ್ಳುವವ ನೊಬ್ಬನೂ ಇರುವದಿಲ್ಲ.
- Jeremiah 42:20 ಯೆರೆಮೀಯ 42:20ನಮಗೋಸ್ಕರ ನಮ್ಮ ದೇವರಾದ ಕರ್ತನಿಗೆ ಪ್ರಾರ್ಥನೆ ಮಾಡೆಂದೂ ನಮ್ಮ ದೇವರಾದ ಕರ್ತನು ಏನೇನು ಹೇಳುವನೋ ಅದನ್ನು ನಮಗೆ ತಿಳಿಸು, ಆಗ ನಾವು ಮಾಡುವೆವೆಂದೂ ಹೇಳಿ, ನನ್ನನ್ನು ನಿಮ್ಮ ದೇವರಾದ ಕರ್ತನ ಬಳಿಗೆ ಕಳುಹಿಸಿದಿರಿ.
- Isaiah 18:1 ಯೆಶಾಯ 18:1ಓ ಐಥಿಯೋಪಿಯ ನದಿಗಳ ಆಚೆಯಲ್ಲಿರುವ ರೆಕ್ಕೆಗಳು ಪಟಪಟನೆ ಆಡುವ ನಾಡೇ, ಅಯ್ಯೋ!
- Jeremiah 42:2 ಯೆರೆಮೀಯ 42:2ಪ್ರವಾದಿಯಾದ ಯೆರೆವಿಾಯನಿಗೆ ಹೇಳಿದ್ದೇನಂ ದರೆ--ನಮ್ಮ ವಿಜ್ಞಾಪನೆ ನಿನ್ನ ಮುಂದೆ ಬರಲಿ; ನಿನ್ನ ಕಣ್ಣುಗಳು ನಮ್ಮನ್ನು ನೋಡುವ ಪ್ರಕಾರ ನಾವು ಅನೇಕರೊಳಗಿಂದ ಕೆಲವರೇ ಉಳಿದಿದ್ದೇವಲ್ಲಾ ನಮ ಗೋಸ್ಕರವೂ ಅಂದರೆ ಈ ಸಮಸ್ತಶೇಷಕ್ಕೋಸ್ಕರವೂ
- Jeremiah 37:5 ಯೆರೆಮೀಯ 37:5ಫರೋಹನ ಸೈನ್ಯವು ಐಗುಪ್ತದಿಂದ ಹೊರಟಿತು; ಯೆರೂಸಲೇಮಿಗೆ ಮುತ್ತಿಗೆ ಹಾಕುತ್ತಿದ್ದ ಕಸ್ದೀಯರು ಅದರ ಸುದ್ದಿಯನ್ನು ಕೇಳಿ ಯೆರೂಸಲೇಮನ್ನು ಬಿಟ್ಟುಹೋದರು.
- 2 Kings 17:4 2 ಅರಸುಗಳು 17:4ಆದರೆ ಅಶ್ಶೂರಿನ ಅರಸನು ಹೋಶೇಯನಲ್ಲಿ ಒಳಸಂಚನ್ನು ಕಂಡುಹಿಡಿದನು. ಏನಂದರೆ, ಹೋಶೇಯನು ಅಶ್ಶೂರಿನ ಅರಸನಿಗೆ ಪ್ರತಿ ವರುಷಕ್ಕೂ ಕೊಡುವ ಕಪ್ಪವನ್ನು ಕೊಡದೆ ಐಗುಪ್ತದ ಅರಸನಾದ ಸೋ ಎಂಬವನ ಬಳಿಗೆ ಸೇವ ಕರನ್ನು ಕಳುಹಿಸಿದ್ದನು. ಆದದರಿಂದ ಅಶ್ಶೂರಿನ ಅರ ಸನು ಅವನನ್ನು ಕಟ್ಟಿ ಸೆರೆಮನೆಯಲ್ಲಿ ಬಂಧಿಸಿದನು.
- Judges 9:15 ನ್ಯಾಯಸ್ಥಾಪಕರು 9:15ಮುಳ್ಳಿನ ಗಿಡವು ಮರಗಳಿಗೆ--ನೀವು ನನ್ನನ್ನು ಅರಸನನ್ನಾಗಿ ಅಭಿಷೇಕ ಮಾಡುವದು ಸತ್ಯ ವಾದರೆ ನನ್ನ ನೆರಳಲ್ಲಿ ಬಂದು ಆಶ್ರಯಿಸಿಕೊಳ್ಳಿರಿ; ಇಲ್ಲದಿದ್ದರೆ ಮುಳ್ಳಿನ ಗಿಡದಿಂದ ಬೆಂಕಿ ಹೊರಟು ಲೆಬನೋನಿನ ದೇವದಾರುಗಳನ್ನು ದಹಿಸಿಬಿಡಲಿ ಅಂದಿತು.