Isaiah · chapter 32 · verse 11
Isaiah 32:11 in Kannada
ನಿಶ್ಚಿಂತೆಯುಳ್ಳ ಹೆಂಗಸರೇ, ನೀವು ನಡುಗಿರಿ, ನಿರ್ಭೀತರೇ ಕಳವಳಗೊಳ್ಳಿರಿ; ನಿಮ್ಮ ಬಟ್ಟೆಯನ್ನು ಕಿತ್ತು ಹಾಕಿ ಬೆತ್ತಲೆಯಾಗಿ ಸೊಂಟಕ್ಕೆ ಗೋಣೀತಟ್ಟನ್ನು ಸುತ್ತಿಕೊಳ್ಳಿರಿ.
Nishchinteyulla hengasare, neevu nadugiri, nirbheetare kalavalagolliri; nimma batteyannu kittu haaki bettaleyaagi sontakke goneetattannu suttikolliri.
Isaiah 32:11 in English
- King James Version (KJV)
- Tremble, ye women that are at ease; be troubled, ye careless ones: strip you, and make you bare, and gird [sackcloth] upon [your] loins.
- World English Bible (WEB)
- Tremble, you women who are at ease! Be troubled, you careless ones! Strip yourselves, make yourselves naked, and put sackcloth on your waist.
- American Standard Version (ASV)
- Tremble, ye women that are at ease; be troubled, ye careless ones; strip you, and make you bare, and gird [sackcloth] upon your loins.
- Bible in Basic English (BBE)
- Be shaking with fear, you women who are living in comfort; be troubled, you who have no fear of danger: take off your robes and put on clothing of grief.
- Darby Translation (DBY)
- Tremble, ye women that are at ease; be troubled, ye careless ones; strip you, and make you bare, and gird [sackcloth] on your loins!
- Webster's Bible (WBS)
- Tremble, ye women that are at ease; be troubled, ye careless ones: strip ye, and make you bare, and gird [sackcloth] upon [your] loins.
- Young's Literal Translation (YLT)
- Tremble ye women, ye easy ones, Be troubled, ye confident ones, Strip and make bare, with a girdle on the loins,
Read in context
- 9ನಿಶ್ಚಿಂತೆಯರಾದ ಹೆಂಗಸರೇ, ಏಳಿರಿ, ನನ್ನ ಸ್ವರ ವನ್ನು ಕೇಳಿರಿ, ಭಯವಿಲ್ಲದ ಹೆಣ್ಣುಮಕ್ಕಳೇ, ನನ್ನ ಮಾತಿಗೆ ಕಿವಿಗೊಡಿರಿ.
- 10ನಿಶ್ಚಿಂತೆಯ ಸ್ತ್ರಿಯರೇ, ನೀವು ವರುಷದ ಮೇಲೆ ಹೆಚ್ಚಾದ ದಿವಸಗಳಲ್ಲಿ ಕಳವಳ ಪಡುವಿರಿ, ದ್ರಾಕ್ಷೇ ಕೊಯ್ಯುವ ಕಾಲ ಇಲ್ಲದೆ ಹೋಗುವದು; ಹಣ್ಣು ಕೂಡಿಸುವ ಕಾಲ ಬಾರದು.
- 11ನಿಶ್ಚಿಂತೆಯುಳ್ಳ ಹೆಂಗಸರೇ, ನೀವು ನಡುಗಿರಿ, ನಿರ್ಭೀತರೇ ಕಳವಳಗೊಳ್ಳಿರಿ; ನಿಮ್ಮ ಬಟ್ಟೆಯನ್ನು ಕಿತ್ತು ಹಾಕಿ ಬೆತ್ತಲೆಯಾಗಿ ಸೊಂಟಕ್ಕೆ ಗೋಣೀತಟ್ಟನ್ನು ಸುತ್ತಿಕೊಳ್ಳಿರಿ.
- 12ಇಷ್ಟವಾದ ಹೊಲಗಳ ಮತ್ತು ಫಲ ವತ್ತಾದ ದ್ರಾಕ್ಷಾಲತೆಗಳ ನಿಮಿತ್ತ ಎದೆ ಬಡುಕೊಳ್ಳು ವರು.
- 13ನನ್ನ ಜನರ ಭೂಮಿಯ ಮೇಲೂ ಹೌದು, ಉತ್ಸಾಹ ಪಟ್ಟಣದಲ್ಲಿ ಉಲ್ಲಾಸಗೊಳ್ಳುವ ಎಲ್ಲಾ ಮನೆ ಗಳ ಮೇಲೂ ಮುಳ್ಳು ಮತ್ತು ದತ್ತೂರಿ ಬೆಳೆಯುವವು.
Cross references
- Isaiah 3:24 ಯೆಶಾಯ 3:24ಆಗ ಸುವಾಸನೆಯ ಬದಲಾಗಿ ದುರ್ವಾಸನೆ, ಡಾಬಿಗೆ ಬದಲಾಗಿ ಹಗ್ಗ; ಜಡೆಯ ಬದಲಾಗಿ ಬೋಳುತಲೆ; ನಡುವಿನ ಶಲ್ಯಕ್ಕೆ ಪ್ರತಿಯಾಗಿ ಗೋಣೀತಟ್ಟು; ಸೌಂದರ್ಯಕ್ಕೆ ಬದಲಾಗಿ ಬರೆ, ಇವು ಆಗುವವು;
- Deuteronomy 28:48 ಧರ್ಮೋಪದೇಶಕಾಂಡ 28:48ಹಸಿವೆಯಲ್ಲಿ, ದಾಹದಲ್ಲಿ, ಬೆತ್ತಲೆಯಲ್ಲಿ, ಎಲ್ಲವುಗಳ ಕೊರತೆಯಲ್ಲಿ ದೇವರು ನಿನ್ನ ಮೇಲೆ ಕಳುಹಿಸುವ ನಿನ್ನ ಶತ್ರುಗಳನ್ನು ಸೇವಿಸಬೇಕು; ಆತನು ನಿನ್ನನ್ನು ನಾಶಮಾಡುವ ವರೆಗೆ ಕಬ್ಬಿಣದ ನೊಗವನ್ನು ನಿನ್ನ ಕುತ್ತಿಗೆಯ ಮೇಲೆ ಹೊರಿ ಸುವನು.
- Isaiah 15:3 ಯೆಶಾಯ 15:3ಅವರು ತಮ್ಮ ಬೀದಿಗಳಲ್ಲಿ ಗೋಣೀತಟ್ಟನ್ನು ತಾವೇ ಸುತ್ತಿ ಕೊಳ್ಳುವರು; ಪ್ರತಿಯೊಬ್ಬನು ತಮ್ಮ ಮನೆಗಳ ಮೇಲೆ ಯೂ ಬೀದಿಗಳಲ್ಲಿಯೂ ಅರಚುತ್ತಾ ಬಹುಶೋಕ ದಿಂದ ಗೋಳಾಡುವನು.
- Micah 1:8–11 ಮೀಕ 1:8–11ಆದದರಿಂದ ನಾನು ಗೋಳಾಡಿ ಅರಚುವೆನು; ಬರಿಗಾಲಾಗಿಯೂ ಬೆತ್ತಲೆಯಾಗಿಯೂ ಹೋಗುವೆನು; ನರಿಗಳ ಹಾಗೆ ಗೋಳಾಡುವೆನು; ಬಕಪಕ್ಷಿಯಂತೆ ದುಃಖಪಡುವೆನು. ಅದರ ಗಾಯವು ಗುಣವಾಗ ದಂಥದ್ದು, ಯಾಕಂದರೆ ಅದು ಯೆಹೂದಕ್ಕೆ ಬಂತು; ನನ್ನ ಜನರ ಬಾಗಲಿಗೂ ಯೆರೂಸಲೇಮಿನ ಮಟ್ಟಿಗೂ ಮುಟ್ಟಿದ್ದಾನೆ. ಗತ್ ಊರಿನಲ್ಲಿ ಅದನ್ನು ತಿಳಿಸಬೇಡ; ಸ್ವಲ್ಪವಾದರೂ ಅಳಬೇಡ; ಎಫ್ರಾತದ ಮನೆಯ ಧೂಳಿನಲ್ಲಿ ಹೊರಳಾಡು. ಶಾಫೀರಿನ ನಿವಾಸಿಯೇ, ನಾಚಿಕೆ ಮುಚ್ಚದೆ ಹಾದುಹೋಗು; ಬೇತೇಚೆಲಿನ ಗೋಳಾಟದಲ್ಲಿ ಚಾನಾನಿನ ನಿವಾಸಿ ಮುಂದೆ ಬರಲಿಲ್ಲ; ಅವನು ನಿಮ್ಮಿಂದ ತನ್ನ ಸ್ಥಾನವನ್ನು ತಕ್ಕೊಳ್ಳುವನು.
- Luke 23:27–30 ಲೂಕನು 23:27–30ಆಗ ಜನರ ದೊಡ್ಡ ಗುಂಪೂ ಸ್ತ್ರೀಯರೂ ಆತನಿ ಗಾಗಿ ಶೋಕಿಸುತ್ತಾ ಗೋಳಾಡುತ್ತಾ ಆತನನ್ನು ಹಿಂಬಾ ಲಿಸಿದರು. ಆದರೆ ಯೇಸು ಅವರ ಕಡೆಗೆ ತಿರುಗಿ ಕೊಂಡು--ಯೆರೂಸಲೇಮಿನ ಕುಮಾರ್ತೆಯರೇ, ನನ ಗಾಗಿ ಅಳಬೇಡಿರಿ; ಆದರೆ ನಿಮಗಾಗಿಯೂ ನಿಮ್ಮ ಮಕ್ಕಳಿಗಾಗಿಯೂ ಅಳಿರಿ. ಯಾಕಂದರೆ--ಇಗೋ, ಬಂಜೆಯರೂ ಎಂದಿಗೂ ಗರ್ಭಿಣಿಯಾಗದವರೂ ಎಂದಿಗೂ ಮೊಲೆ ಕುಡಿಸದವರೂ ಧನ್ಯರು ಎಂದು ಹೇಳುವ ದಿವಸಗಳು ಬರುತ್ತವೆ. ಆಗ ಅವರು ಬೆಟ್ಟಗಳಿಗೆ--ನಮ್ಮ ಮೇಲೆ ಬೀಳಿರಿ; ಗುಡ್ಡಗಳಿಗೆ-- ನಮ್ಮನ್ನು ಮುಚ್ಚಿಕೊಳ್ಳಿರಿ ಎಂದು ಹೇಳಲಾರಂಭಿಸು ವರು.
- Isaiah 2:19 ಯೆಶಾಯ 2:19ಕರ್ತನು ಭೂಮಿಯನ್ನು ಭಯಂಕರವಾಗಿ ನಡುಗಿಸಲು ಏಳು ವಾಗ ಕರ್ತನಿಗೂ ಆತನ ಮಹಿಮೆಗೂ ಆತನ ಘನಕ್ಕೂ ಹೆದರಿ ಬಂಡೆಗಳ ಸಂದುಗಳಿಗೂ ಭೂಮಿಯ ಗವಿಗ ಳಿಗೂ ಅವರು ಸೇರಿಕೊಳ್ಳುವರು.
- Hosea 2:3 ಹೋಶೇಯ 2:3ಇಲ್ಲದಿದ್ದರೆ ನಾನು ಅವಳನ್ನು ಬೆತ್ತಲೆಯಾಗಿ ಮಾಡಿ ಅವಳು ಹುಟ್ಟಿದ ದಿನದಲ್ಲಾದ ಹಾಗೆ ನಿಲ್ಲಿಸಿ ಅವಳನ್ನು ಅರಣ್ಯ ದಂತೆ ಮಾಡುವೆನು. ಅವಳನ್ನು ಒಣಗಿದ ಭೂಮಿ ಯಂತೆ ಇಟ್ಟು ದಾಹದಿಂದ ಅವಳನ್ನು ಕೊಲ್ಲುತ್ತೇನೆ.
- Jeremiah 6:26 ಯೆರೆಮೀಯ 6:26ನನ್ನ ಜನರ ಕುಮಾರಿಯೇ, ಗೋಣಿತಟ್ಟನ್ನು ಕಟ್ಟಿಕೋ, ಬೂದಿಯಲ್ಲಿ ಹೊರಳಾಡು; ಒಬ್ಬನೇ ಮಗನಿಗೋಸ್ಕರ ಮಾಡುವ ದುಃಖದ ಪ್ರಕಾರ ಬಹುಕಠಿಣವಾದ ಗೋಳಾಟವನ್ನು ಮಾಡು; ಸೂರೆ ಮಾಡುವವನು ಫಕ್ಕನೆ ನಮ್ಮ ಮೇಲೆ ಬರುವನು.
- Jeremiah 49:3 ಯೆರೆಮೀಯ 49:3ಹೆಷ್ಬೋನೇ, ಗೋಳಾಡು; ಆಯಿ ಹಾಳಾಯಿತು; ರಬ್ಬಾದ ಕುಮಾರ್ತೆಯರೇ ಕೂಗಿರಿ; ಗೋಣಿತಟ್ಟನ್ನು ಕಟ್ಟಿಕೊಳ್ಳಿರಿ; ಪ್ರಲಾಪಿಸಿರಿ, ಬೇಲಿಗಳ ಬಳಿಯಲ್ಲಿ ಅತ್ತಿತ್ತ ಓಡಾಡಿರಿ; ಅವರ ಅರಸನೂ ಅವನ ಯಾಜಕರೂ ಅವನ ಪ್ರಧಾನರೂ ಒಟ್ಟಾಗಿ ಸೆರೆಗೆ ಹೋಗುವರು.
- Isaiah 2:21 ಯೆಶಾಯ 2:21ಕರ್ತನು ಭೂಮಿಯನ್ನು ಭಯಂಕರವಾಗಿ ನಡುಗಿ ಸಲು ಏಳುವಾಗ ಕರ್ತನ ಭಯಕ್ಕೂ ಆತನ ಮಹಿ ಮೆಯ ಘನಕ್ಕೂ ಹೆದರಿ ಬಂಡೆಗಳ ಸಂದುಗಳಿಗೂ ಎತ್ತರವಾಗಿರುವ ಬಂಡೆಗಳ ಕಡಿದಾದ ಸ್ಥಳಗಳಿಗೂ ಹೋಗುವರು.ಉಸಿರು ಮೂಗಿನಲ್ಲಿ ಇರುವ ವರೆಗೆ ಬದುಕುವ ನರಮನುಷ್ಯನನ್ನು ಬಿಟ್ಟುಬಿಡಿರಿ; ಅವನು ಎಷ್ಟರವ ನೆಂದು ಎಣಿಸಬಹುದು?
- Isaiah 33:14 ಯೆಶಾಯ 33:14ಚೀಯೋನಿನಲ್ಲಿರುವ ಪಾಪಿಗಳು ಹೆದರುತ್ತಾರೆ. ಭಯವು ಕಪಟಿಗಳನ್ನು ಆಶ್ಚರ್ಯಕ್ಕೊಳಗಾಗಿ--ನಮ್ಮಲ್ಲಿ ಯಾರು ನುಂಗುವ ಅಗ್ನಿಯ ಸಂಗಡ ವಾಸಿಸಬಲ್ಲರು? ನಮ್ಮಲ್ಲಿ ಯಾರು ಸದಾ ಉರಿಯುವ ಜ್ವಾಲೆಗಳೊಡನೆ ತಂಗಿಯಾರು ಅಂದುಕೊಳ್ಳುವರು.
- James 5:5 ಯಾಕೋಬನು 5:5ಭೂಲೋಕದಲ್ಲಿ ನೀವು ಭೋಗಿಗಳಾಗಿ ಮನಸ್ಸು ಬಂದಂತೆ ಜೀವಿಸಿದ್ದೀರಿ; ವಧೆಯ ದಿವಸಕ್ಕಾಗಿಯೇ ಎಂಬಂತೆ ನಿಮ್ಮ ಹೃದಯಗಳನ್ನು ಪೋಷಿಸಿಕೊಂಡಿದ್ದೀರಿ.