Isaiah · chapter 32 · verse 10
Isaiah 32:10 in Kannada
ನಿಶ್ಚಿಂತೆಯ ಸ್ತ್ರಿಯರೇ, ನೀವು ವರುಷದ ಮೇಲೆ ಹೆಚ್ಚಾದ ದಿವಸಗಳಲ್ಲಿ ಕಳವಳ ಪಡುವಿರಿ, ದ್ರಾಕ್ಷೇ ಕೊಯ್ಯುವ ಕಾಲ ಇಲ್ಲದೆ ಹೋಗುವದು; ಹಣ್ಣು ಕೂಡಿಸುವ ಕಾಲ ಬಾರದು.
Nishchinteya striyare, neevu varushada mele hechchaada divasagalalli kalavala paduviri, draakshe koyyuva kaala illade hoguvadu; hannu koodisuva kaala baaradu.
Isaiah 32:10 in English
- King James Version (KJV)
- Many days and years shall ye be troubled, ye careless women: for the vintage shall fail, the gathering shall not come.
- World English Bible (WEB)
- For days beyond a year you will be troubled, you careless women; for the vintage will fail. The harvest won’t come.
- American Standard Version (ASV)
- For days beyond a year shall ye be troubled, ye careless women; for the vintage shall fail, the ingathering shall not come.
- Bible in Basic English (BBE)
- In not much more than a year, you, who are not looking for evil, will be troubled: for the produce of the vine-gardens will be cut off, and there will be no getting in of the grapes.
- Darby Translation (DBY)
- In a year and [some] days shall ye be troubled, ye careless women; for the vintage shall fail, the ingathering shall not come.
- Webster's Bible (WBS)
- Many days and years shall ye be troubled, ye careless women: for the vintage shall fail, the gathering shall not come.
- Young's Literal Translation (YLT)
- Days and a year ye are troubled, O confident ones, For consumed hath been harvest, The gathering cometh not.
Read in context
- 8ಘನವಂತನಾ ದರೋ, ಘನಕಾರ್ಯಗಳನ್ನು ಕಲ್ಪಿಸುವನು; ಅವನು ಘನವಾದವುಗಳಲ್ಲಿಯೇ ನಿರತನಾಗಿರುವನು.
- 9ನಿಶ್ಚಿಂತೆಯರಾದ ಹೆಂಗಸರೇ, ಏಳಿರಿ, ನನ್ನ ಸ್ವರ ವನ್ನು ಕೇಳಿರಿ, ಭಯವಿಲ್ಲದ ಹೆಣ್ಣುಮಕ್ಕಳೇ, ನನ್ನ ಮಾತಿಗೆ ಕಿವಿಗೊಡಿರಿ.
- 10ನಿಶ್ಚಿಂತೆಯ ಸ್ತ್ರಿಯರೇ, ನೀವು ವರುಷದ ಮೇಲೆ ಹೆಚ್ಚಾದ ದಿವಸಗಳಲ್ಲಿ ಕಳವಳ ಪಡುವಿರಿ, ದ್ರಾಕ್ಷೇ ಕೊಯ್ಯುವ ಕಾಲ ಇಲ್ಲದೆ ಹೋಗುವದು; ಹಣ್ಣು ಕೂಡಿಸುವ ಕಾಲ ಬಾರದು.
- 11ನಿಶ್ಚಿಂತೆಯುಳ್ಳ ಹೆಂಗಸರೇ, ನೀವು ನಡುಗಿರಿ, ನಿರ್ಭೀತರೇ ಕಳವಳಗೊಳ್ಳಿರಿ; ನಿಮ್ಮ ಬಟ್ಟೆಯನ್ನು ಕಿತ್ತು ಹಾಕಿ ಬೆತ್ತಲೆಯಾಗಿ ಸೊಂಟಕ್ಕೆ ಗೋಣೀತಟ್ಟನ್ನು ಸುತ್ತಿಕೊಳ್ಳಿರಿ.
- 12ಇಷ್ಟವಾದ ಹೊಲಗಳ ಮತ್ತು ಫಲ ವತ್ತಾದ ದ್ರಾಕ್ಷಾಲತೆಗಳ ನಿಮಿತ್ತ ಎದೆ ಬಡುಕೊಳ್ಳು ವರು.
Cross references
- Isaiah 7:23 ಯೆಶಾಯ 7:23ಆ ದಿನದಲ್ಲಿ ಸಾವಿರ ರೂಪಾಯಿ ಬೆಲೆಯ ಸಹಸ್ರ ದ್ರಾಕ್ಷೆಯ ಬಳ್ಳಿಗಳು ಬೆಳೆಯುವ ಪ್ರತಿಯೊಂದು ಪ್ರದೇಶವು ಮುಳ್ಳು ಮತ್ತು ದತ್ತೂರಿ ಗಳಿಂದ ತುಂಬಿರುವದು.
- Jeremiah 8:13 ಯೆರೆಮೀಯ 8:13ನಾನು ಅವರನ್ನು ನಿಜವಾಗಿಯೂ ಸಂಹರಿಸುವೆನೆಂದು ಕರ್ತನು ಅನ್ನುತ್ತಾನೆ; ದ್ರಾಕ್ಷೇ ಗಿಡದಲ್ಲಿ ಹಣ್ಣುಗಳು ಇರುವದಿಲ್ಲ; ಇಲ್ಲವೆ ಅಂಜೂರ ಮರದಲ್ಲಿ ಹಣ್ಣುಗಳು ಇರುವದಿಲ್ಲ; ಎಲೆಯು ಬಾಡು ವದು; ನಾನು ಅವರಿಗೆ ಕೊಟ್ಟವುಗಳು ಅವರನ್ನು ಬಿಟ್ಟುಹೋಗುವವು.
- Habakkuk 3:17 ಹಬಕ್ಕೂಕ 3:17ಅಂಜೂರದ ಮರವು ಚಿಗುರ ದಿದ್ದರೂ ದ್ರಾಕ್ಷೇಬಳ್ಳಿಗಳಲ್ಲಿ ಹಣ್ಣು ಇಲ್ಲದಿದ್ದರೂ ಎಣ್ಣೇ ಮರಗಳ ಉತ್ಪತ್ತಿಯು ನಿಂತುಹೋದರೂ ಹೊಲಗಳು ಆಹಾರ ಕೊಡದಿದ್ದರೂ ಹಟ್ಟಿಯೊಳಗಿಂದ ಮಂದೆಗಳು ಕಡಿದು ಬಿಡಲ್ಪಟ್ಟಿದ್ದರೂ ಗೋದಲಿಗಳಲ್ಲಿ ಮಂದೆ ಇಲ್ಲದಿದ್ದರೂ
- Joel 1:12 ಯೋವೇಲ 1:12ದ್ರಾಕ್ಷೇ ಬಳ್ಳಿ ಒಣಗಿಹೋಗಿದೆ; ಅಂಜೂರದಮರ ಬಾಡಿ ಹೋಗಿದೆ; ದಾಳಿಂಬರದಗಿಡವೂ ಖರ್ಜೂರದ ಗಿಡವೂ ಸೇಬು ಗಿಡವೂ ಹೊಲದ ಮರಗಳೆಲ್ಲವೂ ಒಣಗಿಹೋಗಿವೆ; ಸಂತೋಷವು ಮನುಷ್ಯರ ಪುತ್ರರನ್ನು ಬಿಟ್ಟು ಒಣಗಿಹೋಗಿದೆ.
- Joel 1:7 ಯೋವೇಲ 1:7ಅದು ನನ್ನ ದ್ರಾಕ್ಷೇ ಬಳ್ಳಿಯನ್ನು ಹಾಳುಮಾಡಿ ನನ್ನ ಅಂಜೂರದ ಗಿಡವನ್ನು ಮುರಿದು ಹಾಕಿದೆ; ಅದನ್ನು ಸಂಪೂರ್ಣ ಸುಲಿದು ಬಿಸಾಡಿಬಿಟ್ಟಿದೆ; ಅದರ ಕೊಂಬೆ ಗಳು ಬಿಳುಪಾದವು.
- Zephaniah 1:13 ಚೆಫನ್ಯ 1:13ಆದದರಿಂದ ಅವರ ಸಂಪತ್ತು ಕೊಳ್ಳೆಯಾಗುವದು, ಅವರ ಮನೆಗಳು ಹಾಳಾಗು ವವು; ಅವರು ಮನೆಗಳನ್ನು ಕಟ್ಟಿ ವಾಸಮಾಡರು; ದ್ರಾಕ್ಷೇ ತೋಟಗಳನ್ನು ನೆಟ್ಟು ಅವುಗಳ ರಸವನ್ನು ಕುಡಿಯರು.
- Jeremiah 25:10–11 ಯೆರೆಮೀಯ 25:10–11ಇದಲ್ಲದೆ ಉಲ್ಲಾಸದ ಶಬ್ದವನ್ನೂ ಸಂತೋಷದ ಸ್ವರವನ್ನೂ ಮದಲಿಂಗನ ಸ್ವರವನ್ನೂ ಮದಲಗಿತ್ತಿಯ ಸ್ವರವನ್ನೂ ಬೀಸುವ ಕಲ್ಲಿನ ಶಬ್ದವನ್ನೂ ದೀಪದ ಬೆಳಕನ್ನೂ ಅವರೊಳಗಿಂದ ತೆಗೆದುಹಾಕುತ್ತೇನೆ. ಈ ದೇಶವೆಲ್ಲಾ ಹಾಳಾಗಿ ವಿಸ್ಮಯಕ್ಕೆ ಗುರಿಯಾಗುವದು; ಈ ಜನಾಂಗಗಳು ಬಾಬೆಲಿನ ಅರಸನನ್ನು ಎಪ್ಪತ್ತು ವರುಷ ಸೇವಿಸುವರು.
- Hosea 2:12 ಹೋಶೇಯ 2:12ಮತ್ತು--ನನ್ನ ಮಿಂಡರಿಂದಾದ ಪ್ರತಿಫಲ ಇವುಗಳೇ ಎಂದು ಅವಳು ಹೇಳಿದ ಅವಳ ದ್ರಾಕ್ಷೇ ಬಳ್ಳಿಗಳನ್ನು ಅವಳ ಅಂಜೂರದ ಮರಗಳನ್ನು ನಾನು ಹಾಳುಮಾಡಿ ಅವುಗಳನ್ನು ಕಾಡನ್ನಾಗಿ ಮಾಡುವೆನು; ಅಡವಿಯ ಮೃಗಗಳು ಅವುಗಳನ್ನು ತಿನ್ನುವವು.
- Isaiah 5:5–6 ಯೆಶಾಯ 5:5–6ನನ್ನ ದ್ರಾಕ್ಷೇ ತೋಟಕ್ಕೆ ನಾನು ಮಾಡುವದು ಏನೆಂದು ನಾನು ನಿಮಗೆ ತಿಳಿಸುತ್ತೇನೆ. ನಾನು ಅದರ ಬೇಲಿ ಯನ್ನು ತೆಗೆದುಹಾಕುವೆನು. ಆಗ ಅದು ಮೇಯಲ್ಪಡು ವದು. ಅದರ ಗೋಡೆಯನ್ನು ಕೆಡವಿಬಿಡುವೆನು, ಆಗ ಅದು ತುಳಿದಾಟಕ್ಕೆ ಈಡಾಗುವದು. ಅದನ್ನು ನಾನು ಹಾಳಾಗಲು ಬಿಡುವೆನು: ಅದನ್ನು ಯಾರೂ ಕುಡಿ ಕತ್ತರಿಸುವದಿಲ್ಲ; ಅಗೆಯುವದೂ ಇಲ್ಲ. ಆದರೆ ಅಲ್ಲಿ ಮುಳ್ಳುಪೊದೆಗಳು ಬೆಳೆಯುವವು; ಅಲ್ಲದೆ ಅದರ ಮೇಲೆ ಮಳೆ ಸುರಿಸಬಾರದೆಂದು ಮೋಡಗಳಿಗೆ ಆಜ್ಞಾ ಪಿಸುವೆನು.
- Isaiah 16:10 ಯೆಶಾಯ 16:10ಸಮೃದ್ಧಿಯಾದ ಹೊಲಗಳಿಂದ ಸಂತೋಷವು ಮತ್ತು ಆನಂದವು ತೆಗೆಯಲ್ಪಡುವವು; ದ್ರಾಕ್ಷೇತೋಟಗ ಳಲ್ಲಿ ಕೀರ್ತನೆಗಳಾಗಲಿ ಆರ್ಭಟವಾಗಲಿ ಇರುವದಿಲ್ಲ; ದ್ರಾಕ್ಷೇತೋಟಗಳಲ್ಲಿ ಇನ್ನು ದ್ರಾಕ್ಷಾರಸವನ್ನು ತುಳಿದು ತೆಗೆಯುವದಿಲ್ಲ; ಅವರ ಕೂಗಾಟವನ್ನು ನಿಲ್ಲಿಸಿಬಿಟ್ಟಿ ದ್ದೇನೆ.
- Isaiah 3:17–26 ಯೆಶಾಯ 3:17–26ಚೀಯೋನ್ ಕುಮಾ ರ್ತೆಯರ ತಲೆಯ ಮೇಲ್ಭಾಗವನ್ನು ಕಜ್ಜಿಯಿಂದ ಕರ್ತನು ಹೊಡೆಯುವನು, ಅವರ ಗುಪ್ತಾಂಗಗಳನ್ನು ಬೈಲುಪಡಿಸುವನು. ಆ ದಿನದಲ್ಲಿ ಕರ್ತನು ಅವರ ಅಂದುಗೆ, ತುರುಬುಬಲೆ, ಅರ್ಧಚಂದ್ರ, ಸರ, ಬಳೆ, ಮುಂಡಾಸ, ಟೊಪ್ಪಿಗೆ, ಕಾಲಸರಪಣಿ, ಶಿರೋ ವೇಷ್ಟನ, ಗಂಧದ ಡಬ್ಬಿ, ಓಲೆ, ಉಂಗುರ, ಮೂಗುತಿ, ಬದಲಾಯಿಸತಕ್ಕ ಬಟ್ಟೆ, ಶಾಲು, ತಲೆಕೌದಿ, ಅಲಂ ಕಾರದ ಪಿನ್ನುಗಳು, ಕೈಗನ್ನಡಿ, ನಾರು ಮಡಿ, ಮೇಲ್ಹೊ ದಿಕೆ ಮುಸುಕು ಈ ಎಲ್ಲಾ ಭೂಷಣಗಳನ್ನು ತೆಗೆದು ಹಾಕುವನು. ಆಗ ಸುವಾಸನೆಯ ಬದಲಾಗಿ ದುರ್ವಾಸನೆ, ಡಾಬಿಗೆ ಬದಲಾಗಿ ಹಗ್ಗ; ಜಡೆಯ ಬದಲಾಗಿ ಬೋಳುತಲೆ; ನಡುವಿನ ಶಲ್ಯಕ್ಕೆ ಪ್ರತಿಯಾಗಿ ಗೋಣೀತಟ್ಟು; ಸೌಂದರ್ಯಕ್ಕೆ ಬದಲಾಗಿ ಬರೆ, ಇವು ಆಗುವವು; ನಿನ್ನ ಗಂಡಸರು ಕತ್ತಿಯಿಂದಲೂ ನಿನ್ನ ಶೂರರು ಯುದ್ಧದಲ್ಲಿಯೂ ಬೀಳುವರು.ಅವರ ಬಾಗಲುಗಳಲ್ಲಿ ಪ್ರಲಾಪವು ದುಃಖವು ತುಂಬಿರು ವದು; ಅವಳು ಹಾಳಾಗಿ ನೆಲದ ಮೇಲೆ ಕುಳಿತು ಕೊಳ್ಳುವಳು. ಅವರ ಬಾಗಲುಗಳಲ್ಲಿ ಪ್ರಲಾಪವು ದುಃಖವು ತುಂಬಿರು ವದು; ಅವಳು ಹಾಳಾಗಿ ನೆಲದ ಮೇಲೆ ಕುಳಿತು ಕೊಳ್ಳುವಳು.
- Hosea 3:4 ಹೋಶೇಯ 3:4ಇಸ್ರಾಯೇಲಿನ ಮಕ್ಕಳು ಬಹಳ ದಿವಸಗಳ ವರೆಗೆ ಅರಸನಿಲ್ಲದೆ ಪ್ರಧಾ ನನಿಲ್ಲದೆ ಬಲಿ ಇಲ್ಲದೆ ವಿಗ್ರಹವಿಲ್ಲದೆ ಎಫೋದ್ ಇಲ್ಲದೆ ವಿಗ್ರಹಗಳು ಇಲ್ಲದೆ ಇರುವರು.ಆಮೇಲೆ ಇಸ್ರಾಯೇಲಿನ ಮಕ್ಕಳು ತಿರುಗಿಕೊಂಡು ಅವರ ದೇವ ರಾದ ಕರ್ತನನ್ನು ಮತ್ತು ಅವರ ಅರಸನಾದ ದಾವೀದ ನನ್ನು ಹುಡುಕಿಕೊಂಡು ಅಂತ್ಯ ದಿವಸಗಳಲ್ಲಿ ಕರ್ತನನ್ನೂ ಆತನ ದಯೆಯನ್ನೂ ಭಯದಿಂದ ಮರೆಹೋಗುವರು.