Isaiah · chapter 32 · verse 8
Isaiah 32:8 in Kannada
ಘನವಂತನಾ ದರೋ, ಘನಕಾರ್ಯಗಳನ್ನು ಕಲ್ಪಿಸುವನು; ಅವನು ಘನವಾದವುಗಳಲ್ಲಿಯೇ ನಿರತನಾಗಿರುವನು.
Ghanavantanaa daro, ghanakaaryagalannu kalpisuvanu; avanu ghanavaadavugalalliye niratanaagiruvanu.
Isaiah 32:8 in English
- King James Version (KJV)
- But the liberal deviseth liberal things; and by liberal things shall he stand.
- World English Bible (WEB)
- But the noble devises noble things, and he will continue in noble things.
- American Standard Version (ASV)
- But the noble deviseth noble things; and in noble things shall he continue.
- Bible in Basic English (BBE)
- But the noble-hearted man has noble purposes, and by these he will be guided.
- Darby Translation (DBY)
- But the noble deviseth noble things; and to noble things doth he stand.
- Webster's Bible (WBS)
- But the liberal deviseth liberal things; and by liberal things shall he stand.
- Young's Literal Translation (YLT)
- And the noble counselled noble things, And he for noble things riseth up.
Read in context
- 6ನೀಚನು ನೀಚನಾಗಿ ಮಾತನಾಡುವನು. ಅವನ ಹೃದಯವು ಕಪಟತ್ವವನ್ನು ಅಭ್ಯಾ ಸಿಸುವಂತೆಯೂ ಕರ್ತನಿಗೆ ವಿರೋಧವಾಗಿ ಸಂಪೂ ರ್ಣವಾಗಿ ತಪ್ಪಿಹೋಗುವವರಂತೆಯೂ ಹಸಿವೆ ಗೊಂಡವನ ಆಶೆಯನ್ನು ಬರಿದು ಮಾಡುವಂತೆಯೂ ಕೇಡನ್ನು ಮಾಡುವನು. ಬಾಯಾರಿದವನ ಪಾನವನ್ನು ಇಲ್ಲದಂತೆ ಮಾಡುವ ಹಾಗೆ ಕಾರಣನಾಗುವನು.
- 7ಜಿಪುಣನ ಆಯುಧಗಳು ಕೆಟ್ಟವುಗಳೇ, ದರಿದ್ರನು ನ್ಯಾಯವಾದದ್ದನ್ನು ಮಾತನಾಡಿದರೂ ಅವನು ಬಡವ ರನ್ನು ಸುಳ್ಳು ಮಾತುಗಳಿಂದ ಕೆಡಿಸುವದಕ್ಕೆ ಕುಯುಕ್ತಿ (ದೋಷ)ಗಳನ್ನು ಕಲ್ಪಿಸುವನು.
- 8ಘನವಂತನಾ ದರೋ, ಘನಕಾರ್ಯಗಳನ್ನು ಕಲ್ಪಿಸುವನು; ಅವನು ಘನವಾದವುಗಳಲ್ಲಿಯೇ ನಿರತನಾಗಿರುವನು.
- 9ನಿಶ್ಚಿಂತೆಯರಾದ ಹೆಂಗಸರೇ, ಏಳಿರಿ, ನನ್ನ ಸ್ವರ ವನ್ನು ಕೇಳಿರಿ, ಭಯವಿಲ್ಲದ ಹೆಣ್ಣುಮಕ್ಕಳೇ, ನನ್ನ ಮಾತಿಗೆ ಕಿವಿಗೊಡಿರಿ.
- 10ನಿಶ್ಚಿಂತೆಯ ಸ್ತ್ರಿಯರೇ, ನೀವು ವರುಷದ ಮೇಲೆ ಹೆಚ್ಚಾದ ದಿವಸಗಳಲ್ಲಿ ಕಳವಳ ಪಡುವಿರಿ, ದ್ರಾಕ್ಷೇ ಕೊಯ್ಯುವ ಕಾಲ ಇಲ್ಲದೆ ಹೋಗುವದು; ಹಣ್ಣು ಕೂಡಿಸುವ ಕಾಲ ಬಾರದು.
Cross references
- Proverbs 11:24–25 ಜ್ಞಾನೋಕ್ತಿಗಳು 11:24–25ಚದುರಿಸಿದಾಗ್ಯೂ ವೃದ್ಧಿಯಾಗುತ್ತದೆ; ಬೇಕಾದದ್ದಕ್ಕಿಂತ ಹೆಚ್ಚಿನದನ್ನು ಬಿಗಿಹಿಡಿಯುವಂಥದ್ದು ಬಡತನಕ್ಕೆ ನಡಿಸುತ್ತದೆ. ಉದಾರಿಯು ಪುಷ್ಠನಾಗು ವನು; ನೀರು ಹಾಯಿಸುವವನಿಗೆ ನೀರು ದೊರೆಯು ವದು.
- Acts 11:29–30 ಅಪೊಸ್ತಲರ ಕೃತ್ಯಗಳು 11:29–30ಆಗ ಶಿಷ್ಯರಲ್ಲಿ ಪ್ರತಿಯೊಬ್ಬನು ಯೂದಾಯದಲ್ಲಿದ್ದ ಸಹೊದರರಿಗೆ ತಮ್ಮತಮ್ಮ ಶಕ್ತ್ಯಾನುಸಾರ ದ್ರವ್ಯ ಸಹಾಯ ಕಳುಹಿಸಬೇಕೆಂದು ನಿಶ್ಚಯಿಸಿಕೊಂಡರು.ಹಾಗೆಯೇ ಮಾಡಿ ಅದನ್ನು ಬಾರ್ನಬ ಸೌಲರ ಕೈಯಿಂದ ಸಭೆಯ ಹಿರಿಯರಿಗೆ ಕಳುಹಿಸಿದರು. ಹಾಗೆಯೇ ಮಾಡಿ ಅದನ್ನು ಬಾರ್ನಬ ಸೌಲರ ಕೈಯಿಂದ ಸಭೆಯ ಹಿರಿಯರಿಗೆ ಕಳುಹಿಸಿದರು.
- 2 Samuel 9:1–13 2 ಸಮುವೇಲನು 9:1–13ದಾವೀದನು--ಸೌಲನ ಮನೆಯವರಲ್ಲಿ ಯೋನಾತಾನನಿಗೋಸ್ಕರ ನಾನು ಅವನಿಗೆ ದಯೆತೋರಿಸುವ ಹಾಗೆ ಇನ್ನೂ ಯಾವನಾದರೂ ಉಳಿದಿದ್ದಾನೋ ಎಂದು ಕೇಳಿದನು. ಆಗ ಸೌಲನ ಮನೆಯ ದಾಸನಾದ ಚೀಬನೆಂಬವನು ಇದ್ದನು. ಅವನನ್ನು ದಾವೀದನ ಬಳಿಗೆ ಕರೆತಂದರು. ಅರಸನು ಅವನಿಗೆ--ನೀನು ಚೀಬನೋ ಅಂದನು. ಅದಕ್ಕ ವನು--ನಿನ್ನ ದಾಸನು ಅವನೇ ಅಂದನು. ಅರಸನು ಅವನಿಗೆ--ನಾನು ಅವನಿಗೆ ದೇವರ ದಯೆತೋರಿಸುವ ಹಾಗೆ ಸೌಲನ ಮನೆಯವರಲ್ಲಿ ಇನ್ನೂ ಯಾವನಾ ದರೂ ಇದ್ದಾನೋ ಅಂದನು. ಆಗ ಚೀಬನು ಅರಸ ನಿಗೆ--ಯೋನಾತಾನನಿಗೆ ಎರಡು ಕಾಲುಕುಂಟಾದ ಒಬ್ಬ ಮಗನಿದ್ದಾನೆ ಅಂದನು. ಅವನು ಎಲ್ಲಿ ಇದ್ದಾ ನೆಂದು ಅರಸನು ಅವನನ್ನು ಕೇಳಿದನು. ಚೀಬನು ಅರಸನಿಗೆ--ಇಗೋ, ಅವನು ಲೋದೆಬಾರಿನಲ್ಲಿರುವ ಅವ್ಮೆಾಯೇಲನ ಮಗನಾದ ಮಾಕೀರನ ಮನೆಯಲ್ಲಿ ಇದ್ದಾನೆ ಅಂದನು. ಅರಸನಾದ ದಾವೀದನು ಅವ ನನ್ನು ಆಗ ಲೋದೆಬಾರಿನಲ್ಲಿರುವ ಅವ್ಮೆಾಯೇಲನ ಮಗನಾದ ಮಾಕೀರನ ಮನೆಯಿಂದ ಕರೆಕಳುಹಿ ಸಿದನು. ಸೌಲನ ಮಗನಾಗಿರುವ ಯೋನಾತಾನನ ಮಗನಾದ ಮೆಫೀಬೋಶೆತನು ದಾವೀದನ ಬಳಿಗೆ ಬಂದು ಸಾಷ್ಟಾಂಗನಮಸ್ಕಾರಮಾಡಿದನು. ದಾವೀ ದನು--ಮೆಫೀಬೋಶೆತನೇ ಅಂದನು. ಅವನು--ಇಗೋ, ನಿನ್ನ ದಾಸನು ಅಂದನು. ಆಗ ದಾವೀದನು ಅವನಿಗೆ -- ಭಯಪಡಬೇಡ, ನಿನ್ನ ತಂದೆಯಾದ ಯೋನಾತಾನನ ನಿಮಿತ್ತ ನಾನು ನಿನಗೆ ಖಂಡಿತವಾಗಿ ದಯೆತೋರಿಸುವೆನು. ನಿನ್ನ ತಂದೆಯಾದ ಸೌಲನ ಭೂಮಿಯನ್ನೆಲ್ಲಾ ನಿನಗೆ ತಿರಿಗಿ ಕೊಡುವೆನು ನೀನು ನನ್ನ ಮೇಜಿನಲ್ಲಿ ನಿತ್ಯವೂ ಭೋಜನ ಮಾಡುವಿ ಅಂದನು. ಆಗ ಅವನು ಅಡ್ಡಬಿದ್ದು--ನೀನು ನನ್ನಂಥ ಸತ್ತನಾಯಿಯನ್ನು ದೃಷ್ಟಿಸುವ ಹಾಗೆ ನಿನ್ನ ದಾಸನು ಎಷ್ಟರವನು ಅಂದನು. ಆಗ ಅರಸನು ಸೌಲನ ದಾಸನಾದ ಚೀಬನನ್ನು ಕರೆದು ಅವನಿಗೆ--ನಾನು ಸೌಲನಿಗೂ ಅವನ ಎಲ್ಲ ಮನೆಗೂ ಹೊಂದಿದ ಎಲ್ಲವನ್ನೂ ನಿನ್ನ ಯಜಮಾನನ ಮಗನಿಗೆ ಕೊಟ್ಟಿದ್ದೇನೆ. ಆದದರಿಂದ ನೀನೂ ನಿನ್ನ ಕುಮಾರರೂ ನಿನ್ನ ದಾಸರೂ ನಿನ್ನ ಯಜಮಾನನ ಮಗನಿಗೆ ಆಹಾರ ಒದಗಿಸುವ ಹಾಗೆ ಅವನಿಗೋಸ್ಕರ ಭೂಮಿಯನ್ನು ವ್ಯವಸಾಯಮಾಡಿ ಅದರ ಫಲವನ್ನು ತರಬೇಕು. ಆದರೆ ನಿನ್ನ ಯಜಮಾನನ ಮಗನಾದ ಮೆಫೀಬೋಶೆ ತನು ನಿತ್ಯವೂ ನನ್ನ ಮೇಜಿನಲ್ಲಿ ಊಟ ಮಾಡುವನು ಅಂದನು. ಈ ಚೀಬನಿಗೆ ಹದಿನೈದು ಮಂದಿ ಕುಮಾ ರರೂ ಇಪ್ಪತ್ತು ಮಂದಿ ದಾಸರೂ ಇದ್ದರು. ಆಗ ಚೀಬನು ಅರಸನಿಗೆ--ಅರಸನಾದ ನನ್ನ ಒಡೆಯನು ತನ್ನ ದಾಸನಿಗೆ ಆಜ್ಞಾಪಿಸಿದ್ದನ್ನೆಲ್ಲಾ ನಿನ್ನ ದಾಸನು ಹಾಗೆಯೇ ಮಾಡುವನು ಅಂದನು. ಅರಸನ ಕುಮಾರ ರಲ್ಲಿ ಒಬ್ಬನ ಹಾಗೆ ಮೆಫೀಬೋಶೆತನು ಭೋಜನ ಮಾಡುವನೆಂದು ಅರಸನು ಹೇಳಿದನು. ಆದರೆ ಮೆಫೀಬೋಶೆತನಿಗೆ ವಿಾಕನೆಂಬ ಹೆಸರುಳ್ಳ ಒಬ್ಬ ಚಿಕ್ಕ ಮಗನಿದ್ದನು. ಚೀಬನ ಮನೆಯಲ್ಲಿ ವಾಸವಾ ಗಿದ್ದ ಎಲ್ಲರೂ ಮೆಫೀಬೋಶೆತನಿಗೆ ದಾಸರಾಗಿದ್ದರು.ಹೀಗೆಯೇ ಮೆಫೀಬೋಶೆತನು ಅರಸನ ಪಂಕ್ತಿಯಲ್ಲಿ ನಿತ್ಯವೂ ಭೋಜನ ಮಾಡುತ್ತಿದದ್ದರಿಂದ ಯೆರೂ ಸಲೇಮಿನಲ್ಲೇ ವಾಸವಾಗಿದ್ದನು. ಅವನ ಎರಡು ಕಾಲು ಕುಂಟಾಗಿದ್ದವು. ಹೀಗೆಯೇ ಮೆಫೀಬೋಶೆತನು ಅರಸನ ಪಂಕ್ತಿಯಲ್ಲಿ ನಿತ್ಯವೂ ಭೋಜನ ಮಾಡುತ್ತಿದದ್ದರಿಂದ ಯೆರೂ ಸಲೇಮಿನಲ್ಲೇ ವಾಸವಾಗಿದ್ದನು. ಅವನ ಎರಡು ಕಾಲು ಕುಂಟಾಗಿದ್ದವು.