Isaiah · chapter 33 · verse 5
Isaiah 33:5 in Kannada
ಕರ್ತನು ಉನ್ನತೋನ್ನತನಾಗಿದ್ದಾನೆ. ಆತನು ಮೇಲಿನ ಲೋಕ ದಲ್ಲಿ ವಾಸಿಸುತ್ತಾನೆ. ಚೀಯೋನನ್ನು ನೀತಿನ್ಯಾಯಗ ಳಿಂದ ತುಂಬಿಸಿದ್ದಾನೆ.
Kartanu unnatonnatanaagiddaane. Aatanu melina loka dalli vaasisuttaane. Cheeyonannu neetinyaayaga linda tumbisiddaane.
Isaiah 33:5 in English
- King James Version (KJV)
- The LORD is exalted; for he dwelleth on high: he hath filled Zion with judgment and righteousness.
- World English Bible (WEB)
- The LORD is exalted, for he dwells on high. He has filled Zion with justice and righteousness.
- American Standard Version (ASV)
- Jehovah is exalted; for he dwelleth on high: he hath filled Zion with justice and righteousness.
- Bible in Basic English (BBE)
- The Lord is lifted up; his place is on high: he has made Zion full of righteousness and true religion.
- Darby Translation (DBY)
- Jehovah is exalted; for he dwelleth on high: he hath filled Zion with justice and righteousness;
- Webster's Bible (WBS)
- The LORD is exalted; for he dwelleth on high: he hath filled Zion with judgment and righteousness.
- Young's Literal Translation (YLT)
- Set on high is Jehovah, for He is dwelling on high, He filled Zion [with] judgment and righteousness,
Read in context
- 3ಕೋಲಾಹಲದ ಶಬ್ದಕ್ಕೆ ಜನರು ಓಡಿಹೋಗುತ್ತಾರೆ, ನೀನು ಏಳುವಾಗ ರಾಜ್ಯಗಳು ಚದರಿಹೋಗುತ್ತವೆ.
- 4ನಿಮ್ಮ ಕೊಳ್ಳೆಯು ಕಂಬಳಿ ಹುಳವನ್ನು ಕೂಡಿಸುವ ಹಾಗೆ ಕೂಡಿಸಲ್ಪಡುವದು. ಮಿಡತೆಗಳು ಓಡಾಡುವ ಹಾಗೆ ಅದರ ಮೇಲೆ ಓಡಾಡುವರು.
- 5ಕರ್ತನು ಉನ್ನತೋನ್ನತನಾಗಿದ್ದಾನೆ. ಆತನು ಮೇಲಿನ ಲೋಕ ದಲ್ಲಿ ವಾಸಿಸುತ್ತಾನೆ. ಚೀಯೋನನ್ನು ನೀತಿನ್ಯಾಯಗ ಳಿಂದ ತುಂಬಿಸಿದ್ದಾನೆ.
- 6ನಿನ್ನ ಕಾಲದಲ್ಲಿ ಸ್ಥಿರತೆಯಾ ಗಿಯೂ ರಕ್ಷಣೆ ಜ್ಞಾನ ತಿಳುವಳಿಕೆಗಳ ನಿಕ್ಷೇಪವಾ ಗಿಯೂ ಇರುವನು; ಕರ್ತನ ಭಯವೇ ಅವನ ಬೊಕ್ಕಸವಾಗಿರುವದು.
- 7ಇಗೋ, ಅವರ ಪರಾಕ್ರಮಶಾಲಿಗಳು ಹೊರಗೆ ಕೂಗುತ್ತಾರೆ; ಸಮಾಧಾನದ ರಾಯಭಾರಿಗಳು ಘೋರ ವಾಗಿ ಅಳುತ್ತಿದ್ದಾರೆ.
Cross references
- Isaiah 2:17 ಯೆಶಾಯ 2:17ಮನುಷ್ಯನ ಅಹಂಭಾವವು ಕುಗ್ಗುವದು, ಮನುಷ್ಯರ ಗರ್ವವು ತಗ್ಗಿಸಲ್ಪಡುವದು; ಆ ದಿನದಲ್ಲಿ ಕರ್ತನೊಬ್ಬನೇ ಉನ್ನತ ನಾಗಿರುವನು.
- Daniel 4:37 ದಾನಿಯೇಲನು 4:37ಈಗ ನೆಬೂಕದ್ನೆಚ್ಚರನಾದ ನಾನು ಪರಲೋಕದ ಅರಸನನ್ನು ಸ್ತುತಿಸಿ, ಹೆಚ್ಚಿಸಿ, ಘನಪಡಿಸುತ್ತೇನೆ; ಆತನ ಕ್ರಿಯೆಗಳೆಲ್ಲಾ ಸತ್ಯವೇ; ಆತನ ಮಾರ್ಗಗಳು ನ್ಯಾಯವೇ; ಗರ್ವದಲ್ಲಿ ನಡೆಯುವವರನ್ನು ಆತನೇ ತಗ್ಗಿಸಬಲ್ಲನು.
- Isaiah 32:15–18 ಯೆಶಾಯ 32:15–18ಬಳಿಕ ಉನ್ನತದಿಂದ ಆತ್ಮ ನಮ್ಮ ಮೇಲೆ ಸುರಿ ಸಲ್ಪಡುವಾಗ, ಆಗ ಅರಣ್ಯಗಳು ಪೈರಿನ ಹೊಲ ವಾಗುವದು. ಪೈರಿನ ಹೊಲವು ಅರಣ್ಯವೆಂದೆಣಿಸಲ್ಪ ಡುವದು. ನ್ಯಾಯವು ಅರಣ್ಯದಲ್ಲಿಯೂ ನೆಲೆಗೊ ಳ್ಳುವದು. ಪೈರಿನ ಹೊಲದಲ್ಲಿ ನೀತಿಯು ನೆಲೆಯಾಗಿರುವದು. ನೀತಿಯ ಕೆಲಸವು ಸಮಾಧಾನವೂ ನೀತಿಯ ಫಲವು ನಿತ್ಯವಾದ ಶಾಂತಿಯೂ ಭರವಸವೂ ಆಗಿರುವದು. ಆಗ ನನ್ನ ಜನರು ಸಮಾಧಾನದ ನಿವಾಸಗಳಲ್ಲಿಯೂ ಭದ್ರವಾದ ಸ್ಥಾನಗಳಲ್ಲಿಯೂ ನೆಮ್ಮದಿಯ ಆಶ್ರಯಗಳಲ್ಲಿಯೂ ನೆಲೆಗೊಳ್ಳುವರು.
- Revelation 19:2–6 ಪ್ರಕಟನೆ 19:2–6ಆತನ ನ್ಯಾಯತೀರ್ಪು ಗಳು ಸತ್ಯವೂ ನೀತಿಯುಳ್ಳವುಗಳೂ ಆಗಿವೆ; ಯಾಕಂ ದರೆ ಜಾರತ್ವದಿಂದ ಭೂಲೋಕವನ್ನು ಕೆಡಿಸುತ್ತಿದ್ದ ಆ ಮಹಾಜಾರಸ್ತ್ರೀಗೆ ಆತನು ನ್ಯಾಯತೀರಿಸಿ ಆತನ ಸೇವಕರ ರಕ್ತಕ್ಕಾಗಿ ಅವಳಿಗೆ ಪ್ರತಿ ದಂಡನೆಯನ್ನು ಮಾಡಿದ್ದಾನೆ ಎಂದು ಹೇಳಿದರು. ತಿರಿಗಿ ಅವರು --ಹಲ್ಲೆಲೂಯಾ ಅಂದರು. ಅವಳ ಹೊಗೆಯು ಯುಗಯುಗಾಂತರಗಳಲ್ಲಿಯೂ ಏರಿ ಹೋಗುತ್ತದೆ. ಆಗ ಇಪ್ಪತ್ತನಾಲ್ಕು ಮಂದಿ ಹಿರಿಯರೂ ಆ ನಾಲ್ಕು ಜೀವಿಗಳೂ--ಆಮೆನ್. ಹಲ್ಲೆಲೂಯಾ ಎಂದು ಹೇಳುತ್ತಾ ಸಿಂಹಾಸನದ ಮೇಲೆ ಕೂತಿದ್ದ ದೇವರ ಮುಂದೆ ಅಡ್ಡಬಿದ್ದು ಆರಾಧಿಸಿದರು. ಆಮೇಲೆ ಸಿಂಹಾಸನದ ಕಡೆಯಿಂದ ಬಂದ ಒಂದು ಶಬ್ದವು--ದೇವರ ಸೇವಕರೆಲ್ಲರೇ, ಆತನಿಗೆ ಭಯ ಪಡುವ ಹಿರಿಕಿರಿಯರೇ, ನಮ್ಮ ದೇವರನ್ನು ಕೊಂಡಾಡಿರಿ ಎಂದು ಹೇಳಿತು. ತರುವಾಯ ಜನರ ದೊಡ್ಡ ಗುಂಪಿನ ಶಬ್ದದಂತೆಯೂ ಬಹಳ ನೀರುಗಳ ಘೋಷದಂತೆಯೂ ಗಟ್ಟಿಯಾದ ಗುಡುಗುಗಳ ಶಬ್ದದಂತೆಯೂ ಇದ್ದ ಒಂದು ಶಬ್ದವನ್ನು ನಾನು ಕೇಳಿದೆನು; ಅದು--ಹಲ್ಲೆಲೂಯಾ, ಸರ್ವಶಕ್ತನಾಗಿರುವ ದೇವರಾದ ಕರ್ತನು ಆಳುತ್ತಾನೆ.
- Ephesians 1:20–21 ಎಫೆಸದವರಿಗೆ 1:20–21ಬಲಾತಿಶಯವು ಕ್ರಿಸ್ತನಲ್ಲಿ ತೋರಿಬಂದಿದೆ; ಹೇಗಂ ದರೆ ದೇವರು ಕ್ರಿಸ್ತನನ್ನು ಸತ್ತವರೊಳಗಿಂದ ಎಬ್ಬಿಸಿ ಸಕಲ ರಾಜತ್ವ ಅಧಿಕಾರ ಮಹತ್ವ ಪ್ರಭುತ್ವಾಧಿಗಳ ಮೇಲೆಯೂ ಈ ಲೋಕದಲ್ಲಿ ಮಾತ್ರವಲ್ಲದೆ ಬರುವ ಲೋಕದಲ್ಲಿ ಸಹ ಹೆಸರುಗೊಂಡವರೆಲ್ಲರ ಮೇಲೆಯೂ ಎಷ್ಟೋ ಹೆಚ್ಚಾಗಿ ಪರಲೊಕದೊಳಗೆ ತನ್ನ ಸ್ವಂತ ಬಲಪಾರ್ಶ್ವದಲ್ಲಿ ಆತನನ್ನು ಕೂಡ್ರಿಸಿಕೊಂಡನು.
- Romans 11:26 ರೋಮಾಪುರದವರಿಗೆ 11:26ಹೀಗೆ ಇಸ್ರಾಯೇಲ್ ಜನರೆಲ್ಲಾ ರಕ್ಷಣೆಹೊಂದುವರು. ಇದಕ್ಕೆ ಆಧಾರವಾಗಿ--ಬಿಡಿಸು ವಾತನು ಚೀಯೋನಿನೊಳಗಿಂದ ಹೊರಟುಬಂದು ಯಾಕೋಬಿನಲ್ಲಿರುವ ಭಕ್ತಿಹೀನತೆಯನ್ನು ನಿವಾರಣೆ ಮಾಡುವನು.
- Exodus 15:1 ವಿಮೋಚನಕಾಂಡ 15:1ಆಗ ಮೋಶೆಯೂ ಇಸ್ರಾಯೇಲ್ ಮಕ್ಕಳೂ ಕರ್ತನಿಗೆ ಈ ಹಾಡನ್ನು ಹಾಡಿ ಹೇಳಿದ್ದೇನಂದರೆ--ನಾನು ಕರ್ತನಿಗೆ ಹಾಡುತ್ತೇನೆ; ಆತನು ಪ್ರಭಾವದಿಂದ ಜಯಶಾಲಿಯಾದನು; ಕುದುರೆ ಯನ್ನೂ (ಕುದುರೆಯ) ಸವಾರನನ್ನೂ ಸಮುದ್ರದಲ್ಲಿ ದೊಬ್ಬಿದ್ದಾನೆ.
- Isaiah 1:26–27 ಯೆಶಾಯ 1:26–27ನಿನ್ನ ನ್ಯಾಯಾಧಿಪತಿಗಳನ್ನು ಮುಂಚಿನ ಹಾಗೆಯೂ ನಿನ್ನ ಆಲೋಚನಾ ಪರರನ್ನು ಪ್ರಾರಂಭ ದಲ್ಲಿದ್ದ ಹಾಗೆಯೂ ತಿರಿಗಿ ಒದಗಿಸಿಕೊಡುವೆನು: ತರುವಾಯ ನೀನು ನೀತಿಯುಳ್ಳ ಪಟ್ಟಣವೆಂದೂ ನಂಬಿಗಸ್ತಿಕೆಯ ಪಟ್ಟಣವೆಂದೂ ಕರೆಯಲ್ಪಡುವಿ. ಚೀಯೋನು ನ್ಯಾಯತೀರ್ಪಿನಿಂದಲೂ ಅವಳ ಪರಿವರ್ತನೆಯನ್ನು ಹೊಂದಿದವರು ನೀತಿಯಿಂದಲೂ ಬಿಡುಗಡೆಯಾಗುವರು
- Psalm 118:16 ಕೀರ್ತನೆಗಳು 118:16ಕರ್ತನ ಬಲಗೈ ಉನ್ನತವಾಗಿದೆ; ಕರ್ತನ ಬಲಗೈ ಪರಾಕ್ರಮವನ್ನು ನಡಿಸುತ್ತದೆ.
- Isaiah 12:4 ಯೆಶಾಯ 12:4ನೀವು--ಕರ್ತನನ್ನು ಕೊಂಡಾ ಡಿರಿ; ಜನರ ಮಧ್ಯದಲ್ಲಿ ಆತನ ಹೆಸರನ್ನೆತ್ತಿ ಕ್ರಿಯೆಗ ಳನ್ನು ಪ್ರಕಟಿಸಿರಿ. ಆತನ ನಾಮವನ್ನು ಉನ್ನತೋನ್ನತ ವೆಂದು ಎತ್ತಿ ಹೇಳಿರಿ ಎಂದು ಆ ದಿನದಲ್ಲಿ ಹೇಳುವಿರಿ.
- Psalm 46:9–10 ಕೀರ್ತನೆಗಳು 46:9–10ಯುದ್ಧಗಳನ್ನು ಭೂಮಿಯ ಅಂತ್ಯದ ವರೆಗೆ ನಿಲ್ಲಿಸಿ ಬಿಲ್ಲನ್ನು ಮುರಿದು ಭಲ್ಲೆಯನ್ನು ಕಡಿದು ತುಂಡುಮಾಡಿ ರಥಗಳನ್ನು ಬೆಂಕಿಯಿಂದ ಸುಡುತ್ತಾನೆ. ಶಾಂತ ವಾಗಿರ್ರಿ, ನಾನೇ ದೇವರಾಗಿದ್ದೇನೆಂದು ತಿಳುಕೊಳ್ಳಿರಿ; ಜನಾಂಗಗಳಲ್ಲಿ ಉನ್ನತನಾಗಿರುವೆನು; ಭೂಮಿಯಲ್ಲಿ ನಾನು ಹೆಚ್ಚಿಸಲ್ಪಡುವೆನು.ಸೈನ್ಯಗಳ ಕರ್ತನು ನಮ್ಮ ಸಂಗಡ ಇದ್ದಾನೆ; ಯಾಕೋಬನ ದೇವರು ನಮಗೆ ಆಶ್ರಯವಾಗಿದ್ದಾನೆ. ಸೆಲಾ.
- Isaiah 60:21 ಯೆಶಾಯ 60:21ನಿನ್ನ ಜನರೆಲ್ಲರು ನೀತಿವಂತರಾಗಿರುವರು, ದೇಶವನ್ನು ಸದಾ ಕಾಲಕ್ಕೆ ಸ್ವಾಧೀನ ಮಾಡಿಕೊಳ್ಳುವರು; ನಾನು ಮಹಿಮೆ ಹೊಂದುವದಕ್ಕೋಸ್ಕರ ನಾನು ನೆಟ್ಟ ಕೊಂಬೆಯೂ ನನ್ನ ಕೈ ಸೃಷ್ಟಿಯೂ ದೇಶವನ್ನು ಸದಾ ಅನುಭವಿಸುವರು.ಚಿಕ್ಕವನಿಂದ ಸಾವಿರವಾಗುವರು. ಅಲ್ಪನಿಂದ ಬಲ ವಾದ ಜನಾಂಗವಾಗುವದು; ಕರ್ತನೆಂಬ ನಾನು ಕ್ಲುಪ್ತಕಾಲದಲ್ಲಿ ಇದನ್ನು ಬಹು ಬೇಗನೆ ಉಂಟು ಮಾಡುವೆನು.