Isaiah · chapter 38 · verse 17
Isaiah 38:17 in Kannada
ಇಗೋ, ಆ ಬಹು ವ್ಯಥೆಯು ನನ್ನ ಸಮಾಧಾನಕ್ಕಾಗಿಯೇ ಆಯಿತು; ಆದರೆ ನನ್ನ ಆತ್ಮವನ್ನು ನಾಶಕೂಪದಿಂದ ಬಿಡುಗಡೆ ಮಾಡಿದ್ದು ನಿನ್ನ ಪ್ರೀತಿಯೇ. ನನ್ನ ಪಾಪಗಳನ್ನೆಲ್ಲಾ ನಿನ್ನ ಬೆನ್ನಿನ ಹಿಂದೆ ಹಾಕಿಬಿಟ್ಟಿದ್ದೀ.
Igo, aa bahu vyatheyu nanna samaadhaanakkaagiye aayitu; aadare nanna aatmavannu naashakoopadinda bidugade maadiddu ninna preetiye. Nanna paapagalannellaa ninna bennina hinde haakibittiddee.
Isaiah 38:17 in English
- King James Version (KJV)
- Behold, for peace I had great bitterness: but thou hast in love to my soul [delivered it] from the pit of corruption: for thou hast cast all my sins behind thy back.
- World English Bible (WEB)
- Behold, for peace I had great anguish, but you have in love for my soul delivered it from the pit of corruption; for you have cast all my sins behind your back.
- American Standard Version (ASV)
- Behold, [it was] for [my] peace [that] I had great bitterness: But thou hast in love to my soul delivered it from the pit of corruption; For thou hast cast all my sins behind thy back.
- Bible in Basic English (BBE)
- See, in place of peace my soul had bitter sorrow. but you have kept back my soul from the underworld; for you have put all my sins out of your memory.
- Darby Translation (DBY)
- Behold, instead of peace I had bitterness upon bitterness; but thou hast in love delivered my soul from the pit of destruction; for thou hast cast all my sins behind thy back.
- Webster's Bible (WBS)
- Behold, for peace I had great bitterness: but thou hast in love to my soul [delivered it] from the pit of corruption: for thou hast cast all my sins behind thy back.
- Young's Literal Translation (YLT)
- Lo, to peace He changed for me bitterness, And Thou hast delighted in my soul without corruption, For Thou hast cast behind Thy back all my sins.
Read in context
- 15ನಾನು ಏನು ಹೇಳಲಿ; ಆತನು ನನಗೆ ಮಾತುಕೊಟ್ಟು ತಾನೇ ಅದನ್ನು ನೆರವೇರಿಸಿ ದ್ದಾನೆ. ನನ್ನ ಆತ್ಮಕ್ಕೆ ಸಂಭವಿಸಿದ ದುಃಖದಲ್ಲಿ ನನ್ನ ವರುಷಗಳಲ್ಲೆಲ್ಲಾ ಮೆಲ್ಲಗೆ ನಡೆಯುವೆನು.
- 16ಓ ಕರ್ತನೇ, ಇಂಥಾ ಸಂಬಂಧಗಳಿಂದ ಮನುಷ್ಯರು ಬದುಕುತ್ತಾರೆ, ಇವೆಲ್ಲವುಗಳಿಂದಲೇ ನನ್ನ ಆತ್ಮದಲ್ಲಿ ಜೀವವುಂಟು, ಹೀಗೆ ನನ್ನನ್ನು ನೀನು ಸ್ವಸ್ಥಮಾಡಿ ಬದುಕುವಂತೆ ಮಾಡಿದಿ.
- 17ಇಗೋ, ಆ ಬಹು ವ್ಯಥೆಯು ನನ್ನ ಸಮಾಧಾನಕ್ಕಾಗಿಯೇ ಆಯಿತು; ಆದರೆ ನನ್ನ ಆತ್ಮವನ್ನು ನಾಶಕೂಪದಿಂದ ಬಿಡುಗಡೆ ಮಾಡಿದ್ದು ನಿನ್ನ ಪ್ರೀತಿಯೇ. ನನ್ನ ಪಾಪಗಳನ್ನೆಲ್ಲಾ ನಿನ್ನ ಬೆನ್ನಿನ ಹಿಂದೆ ಹಾಕಿಬಿಟ್ಟಿದ್ದೀ.
- 18ಸಮಾಧಿಯು ನಿನ್ನನ್ನು ಹೊಗಳುವದಿಲ್ಲ, ಮರಣವು ನಿನ್ನನ್ನು ಕೊಂಡಾಡುವದಿಲ್ಲ; ಕುಣಿಯೊಳಕ್ಕೆ ಹೋಗುವವರು ನಿನ್ನ ಸತ್ಯತೆಯಲ್ಲಿ ಭರವಸವಿಡಲಾರರು.
- 19ನಾನು ಈ ಹೊತ್ತು ಮಾಡುವ ಪ್ರಕಾರ, ಜೀವಂತನು ಹೌದು, ಜೀವಂತನೇ, ನಿನ್ನನ್ನು ಹೊಗಳುವನು; ತಂದೆಯು ಮಕ್ಕಳಿಗೆ ನಿನ್ನ ಸತ್ಯತೆಯನ್ನು ತಿಳಿಯ ಪಡಿಸುವನು.
Cross references
- Isaiah 43:25 ಯೆಶಾಯ 43:25ನಾನಾಗಿ ನಾನೇ ನನಗೋಸ್ಕರ ನಿನ್ನ ದ್ರೋಹಗಳನ್ನು ಅಳಿಸಿಬಿಡುತ್ತೇನೆ. ನಿನ್ನ ಪಾಪ ಗಳನ್ನು ನನ್ನ ನೆನಪಿನಲ್ಲಿಡೆನು.
- Jonah 2:6 ಯೋನ 2:6ಬೆಟ್ಟಗಳ ಬುಡದ ತನಕ ಇಳಿದು ಹೋದೆನು; ಭೂಮಿಯ ಅಡ್ಡದಂಡೆಗಳು ನಿತ್ಯವಾಗಿ ನನ್ನ ಸುತ್ತಲಿ ದ್ದವು; ಆದಾಗ್ಯೂ ಓ ದೇವರಾದ ನನ್ನ ಕರ್ತನೇ, ನೀನು ನನ್ನ ಪ್ರಾಣವನ್ನು ನಾಶನದೊಳಗಿಂದ ಎಬ್ಬಿಸಿದ್ದೀ.
- Micah 7:18–19 ಮೀಕ 7:18–19ಅಕ್ರಮವನ್ನು ಮನ್ನಿಸುವಂಥ, ತನ್ನ ಬಾಧ್ಯತೆಯ ಶೇಷದ ದ್ರೋಹವನ್ನು ದಾಟಿಹೋಗುವಂಥ, ನಿನ್ನ ಹಾಗೆ ದೇವರು ಯಾರು? ಆತನು ತನ್ನ ಕೋಪವನ್ನು ಎಂದೆಂದಿಗೂ ಇಟ್ಟುಕೊಳ್ಳುವದಿಲ್ಲ; ಯಾಕಂದರೆ ಆತನು ಕರುಣೆಯಲ್ಲಿ ಸಂತೋಷಪಡುತ್ತಾನೆ. ಆತನು ತಿರುಗಿಕೊಂಡು ನಮ್ಮನ್ನು ಕನಿಕರಿಸುವನು; ನಮ್ಮ ಅಕ್ರಮಗಳನ್ನು ತುಳಿದುಬಿಡುವನು; ಅವರ ಪಾಪಗಳ ನ್ನೆಲ್ಲಾ ಸಮುದ್ರದ ಅಗಾಧಗಳಲ್ಲಿ ಹಾಕುವಿ.ನೀನು ನಮ್ಮ ಪಿತೃಗಳಿಗೆ ಪೂರ್ವದ ಕಾಲದಲ್ಲಿ ಪ್ರಮಾಣ ಮಾಡಿದ ಸತ್ಯವನ್ನು ಯಾಕೋಬನಿಗೂ ಕರುಣೆಯನ್ನು ಅಬ್ರಹಾಮನಿಗೂ ಈಡೇರಿಸುವಿ.
- Psalm 30:3 ಕೀರ್ತನೆಗಳು 30:3ಓ ಕರ್ತನೇ, ನನ್ನ ಪ್ರಾಣವನ್ನು ಸಮಾಧಿಯಿಂದ ಎತ್ತಿದ್ದೀ; ನಾನು ತಗ್ಗಿಗೆ ಇಳಿಯದಂತೆ ನನ್ನನ್ನು ಜೀವದಲ್ಲಿ ಕಾಪಾಡಿದ್ದೀ.
- Jeremiah 31:34 ಯೆರೆಮೀಯ 31:34ನೆರೆ ಯವನಿಗೆ ನೆರೆಯವನೂ ಸಹೋದರನಿಗೆ ಸಹೋ ದರನೂ-- ಕರ್ತನನ್ನು ತಿಳಿಯಿರಿ ಎಂದು ಇನ್ನು ಮೇಲೆ ಬೋಧಿಸುವದಿಲ್ಲ; ಅವರೆಲ್ಲರೂ ಚಿಕ್ಕವನು ಮೊದಲು ಗೊಂಡು ದೊಡ್ಡವನ ವರೆಗೂ ನನ್ನನ್ನು ತಿಳಿಯುವ ರೆಂದು ಕರ್ತನು ಅನ್ನುತ್ತಾನೆ; ಅವರ ಅಕ್ರಮವನ್ನು ಮನ್ನಿಸುವೆನು; ಪಾಪಗಳನ್ನು ಇನ್ನು ಮೇಲೆ ಜ್ಞಾಪಕ ಮಾಡುವದಿಲ್ಲ.
- Psalm 86:13 ಕೀರ್ತನೆಗಳು 86:13ನಿನ್ನ ಕರುಣೆಯು ನನ್ನ ಮೇಲೆ ದೊಡ್ಡದಾಗಿದೆ; ಪಾತಾಳ ದೊಳಗಿಂದ ನನ್ನ ಪ್ರಾಣವನ್ನು ಬಿಡಿಸಿದ್ದೀ.
- Job 3:25–26 ಯೋಬನು 3:25–26ಬಹಳವಾದ ಹೆದರಿಕೆಯು ನನ್ನ ಮೇಲೆ ಬಂತು, ನಾನು ಅಂಜಿದ್ದೇ ನನಗೆ ಬಂತು.ನನಗೆ ಭದ್ರತೆ ಇರಲಿಲ್ಲ, ವಿಶ್ರಾಂತಿಯೂ ಇರಲಿಲ್ಲ. ನಾನು ಸಮಾಧಾನವಾಗಿಯೂ ಇರಲಿಲ್ಲ. ಆದಾಗ್ಯೂ ಕಳವಳ ಬಂದಿತು. ನನಗೆ ಭದ್ರತೆ ಇರಲಿಲ್ಲ, ವಿಶ್ರಾಂತಿಯೂ ಇರಲಿಲ್ಲ. ನಾನು ಸಮಾಧಾನವಾಗಿಯೂ ಇರಲಿಲ್ಲ. ಆದಾಗ್ಯೂ ಕಳವಳ ಬಂದಿತು.
- Psalm 40:2 ಕೀರ್ತನೆಗಳು 40:2ಆತನು ನನ್ನನ್ನು ನಾಶನದ ಕುಣಿಯಿಂದಲೂ ಮತ್ತು ಬುರುದೆಯ ಕೆಸರಿನಿಂದಲೂ ಎತ್ತಿ ನನ್ನ ಪಾದಗಳನ್ನು ಬಂಡೆಯ ಮೇಲೆ ನಿಲ್ಲಿಸಿ ನನ್ನ ಹೆಜ್ಜೆಗಳನ್ನು ಸ್ಥಿರಪಡಿಸಿದನು.
- Psalm 30:6–7 ಕೀರ್ತನೆಗಳು 30:6–7ನನ್ನ ಅಭಿವೃದ್ಧಿಯಲ್ಲಿ--ನಾನು ಎಂದಿಗೂ ಕದಲು ವದಿಲ್ಲ ಎಂದು ಹೇಳಿದೆನು. ಕರ್ತನೇ, ನಿನ್ನ ಕಟಾ ಕ್ಷದಿಂದ ನನ್ನ ಬೆಟ್ಟವು ಸ್ಥಿರವಾಗಿ ನಿಲ್ಲುವಂತೆ ಮಾಡಿದ್ದೀ, ನಿನ್ನ ಮುಖವನ್ನು ಮರೆಮಾಡಲು ಕಳವಳಗೊಂಡೆನು.
- Psalm 85:2 ಕೀರ್ತನೆಗಳು 85:2ನಿನ್ನ ಜನರ ಅಕ್ರಮವನ್ನು ಪರಿಹರಿಸಿದ್ದೀ; ಅವರ ಪಾಪವನ್ನೆಲ್ಲಾ ಮುಚ್ಚಿದ್ದೀ ಸೆಲಾ.
- Job 29:18 ಯೋಬನು 29:18ನನ್ನ ಗೂಡಿನಲ್ಲಿ ನಾನು ಸಾಯುವೆನು, ಮರಳಿ ನಂತೆ ನನ್ನ ದಿವಸಗಳನ್ನು ಹೆಚ್ಚಿಸುವೆನು ಅಂದೆನು.
- Psalm 88:4–6 ಕೀರ್ತನೆಗಳು 88:4–6ಕುಣಿಗೆ ಇಳಿಯುವವರ ಸಂಗಡ ಎಣಿಸಲ್ಪಟ್ಟಿದ್ದೇನೆ; ಬಲವಿಲ್ಲದ ಮನುಷ್ಯನ ಹಾಗಿದ್ದೇನೆ. ಕೊಲ್ಲಲ್ಪಟ್ಟು ಸಮಾಧಿಯಲ್ಲಿ ಮಲಗಿರುವವರನ್ನು ನೀನು ಇನ್ನು ಜ್ಞಾಪಕಮಾಡಿಕೊಳ್ಳದ ಹಾಗೆ ಸತ್ತವ ರಲ್ಲಿ ಬಿಡಲ್ಪಟ್ಟಿದ್ದೇನೆ; ಅವರು ನಿನ್ನ ಕೈಯಿಂದ ಕಡಿ ಯಲ್ಪಟ್ಟಿದ್ದಾರೆ. ಕೆಳಗಿನ ಆಳವಾದ ಕುಣಿಯಲ್ಲಿಯೂ ಕತ್ತಲೆಯಲ್ಲಿಯೂ ಅಗಾಧಗಳಲ್ಲಿಯೂ ನನ್ನನ್ನು ಇಟ್ಟಿದ್ದಿ.