Psalms · chapter 30 · verse 3
Psalm 30:3 in Kannada
ಓ ಕರ್ತನೇ, ನನ್ನ ಪ್ರಾಣವನ್ನು ಸಮಾಧಿಯಿಂದ ಎತ್ತಿದ್ದೀ; ನಾನು ತಗ್ಗಿಗೆ ಇಳಿಯದಂತೆ ನನ್ನನ್ನು ಜೀವದಲ್ಲಿ ಕಾಪಾಡಿದ್ದೀ.
O kartane, nanna praanavannu samaadhiyinda ettiddee; naanu taggige iliyadante nannannu jeevadalli kaapaadiddee.
Psalm 30:3 in English
- King James Version (KJV)
- O LORD, thou hast brought up my soul from the grave: thou hast kept me alive, that I should not go down to the pit.
- World English Bible (WEB)
- LORD, you have brought up my soul from Sheol. You have kept me alive, that I should not go down to the pit.
- American Standard Version (ASV)
- O Jehovah, thou hast brought up my soul from Sheol; Thou hast kept me alive, that I should not go down to the pit.
- Bible in Basic English (BBE)
- O Lord, you have made my soul come again from the underworld: you have given me life and kept me from going down among the dead.
- Darby Translation (DBY)
- Jehovah, thou hast brought up my soul from Sheol, thou hast quickened me from among those that go down to the pit.
- Webster's Bible (WBS)
- O LORD, thou hast brought up my soul from the grave: thou hast kept me alive, that I should not go down to the pit.
- Young's Literal Translation (YLT)
- Jehovah, Thou hast brought up from Sheol my soul, Thou hast kept me alive, From going down [to] the pit.
Read in context
- 1ಓ ಕರ್ತನೇ, ನಿನ್ನನ್ನು ಕೊಂಡಾಡುವೆನು; ನೀನು ನನ್ನ ಶತ್ರುಗಳು ನನ್ನ ವಿಷಯದಲ್ಲಿ ಸಂತೋಷಪಡದಂತೆ ಮಾಡಿ ನನ್ನನ್ನು ಮೇಲಕ್ಕೆ ಎತ್ತಿದ್ದೀ.
- 2ನನ್ನ ದೇವರಾದ ಓ ಕರ್ತನೇ, ನಿನಗೆ ಮೊರೆಯಿಡಲು ನನ್ನನ್ನು ಸ್ವಸ್ಥಮಾಡಿದ್ದೀ.
- 3ಓ ಕರ್ತನೇ, ನನ್ನ ಪ್ರಾಣವನ್ನು ಸಮಾಧಿಯಿಂದ ಎತ್ತಿದ್ದೀ; ನಾನು ತಗ್ಗಿಗೆ ಇಳಿಯದಂತೆ ನನ್ನನ್ನು ಜೀವದಲ್ಲಿ ಕಾಪಾಡಿದ್ದೀ.
- 4ಓ ಕರ್ತನ ಪರಿಶುದ್ಧರೇ, ಆತನನ್ನು ಕೀರ್ತಿಸಿರಿ; ಆತನ ಪರಿಶುದ್ಧತ್ವವನ್ನು ಜ್ಞಾಪಕಮಾಡಿ ಕೊಂಡಾಡಿರಿ.
- 5ಆತನ ಕೋಪವು ಕ್ಷಣಮಾತ್ರ. ಆತನ ಕಟಾಕ್ಷವು ಜೀವವೇ; ರಾತ್ರಿಯಲ್ಲಿ ದುಃಖವು ತಂಗಬಹುದಾದರೂ ಬೆಳಿಗ್ಗೆ ಆನಂದವು ಬರುವದು.
Cross references
- Psalm 16:10 ಕೀರ್ತನೆಗಳು 16:10ಯಾಕಂದರೆ ನೀನು ನನ್ನ ಆತ್ಮವನ್ನು ನರಕದಲ್ಲಿ ಬಿಟ್ಟುಬಿಡುವದಿಲ್ಲ; ನಿನ್ನ ಪರಿಶುದ್ಧನ ಕೊಳೆಯುವಿಕೆಯನ್ನು ನೋಡ ಗೊಡಿಸುವದಿಲ್ಲ.ಜೀವದ ಮಾರ್ಗವನ್ನು ನನಗೆ ತಿಳಿಸುವಿ; ನಿನ್ನ ಸಮ್ಮುಖದಲ್ಲಿ ಪರಿಪೂರ್ಣ ಸಂತೋಷ ವೂ ನಿನ್ನ ಬಲಗಡೆಯಲ್ಲಿ ಶಾಶ್ವತ ಭಾಗ್ಯವೂ ಇರುತ್ತವೆ.
- Psalm 86:13 ಕೀರ್ತನೆಗಳು 86:13ನಿನ್ನ ಕರುಣೆಯು ನನ್ನ ಮೇಲೆ ದೊಡ್ಡದಾಗಿದೆ; ಪಾತಾಳ ದೊಳಗಿಂದ ನನ್ನ ಪ್ರಾಣವನ್ನು ಬಿಡಿಸಿದ್ದೀ.
- Psalm 28:1 ಕೀರ್ತನೆಗಳು 28:1ನನ್ನ ಬಂಡೆಯಾದ ಓ ಕರ್ತನೇ, ನಿನಗೆ ಮೊರೆಯಿಡುತ್ತೇನೆ; ಮೌನವಾಗಿರಬೇಡ. ನೀನು ಸುಮ್ಮನಿದ್ದರೆ ನಾನು ಕುಣಿಯಲ್ಲಿ ಇಳಿಯುವವರಿಗೆ ಸಮಾನನಾಗುವೆನು.
- Jonah 2:4–6 ಯೋನ 2:4–6ಆಗ ನಾನು ಹೇಳಿದ್ದು--ನಿನ್ನ ಕಣ್ಣುಗಳ ಎದುರಿನಿಂದ ಹೊರಗೆ ಹಾಕಲ್ಪಟ್ಟಿದ್ದೇನೆ; ಆದಾಗ್ಯೂ ನಾನು ನಿನ್ನ ಪರಿಶುದ್ಧ ಮಂದಿರದ ಕಡೆಗೆ ತಿರುಗಿ ನೋಡುವೆನು. ನೀರು ಗಳು ಪ್ರಾಣದ ಮಟ್ಟಿಗೂ ನನ್ನನ್ನು ಸುತ್ತಿಕೊಂಡವು; ಅಗಾಧವು ನನ್ನನ್ನು ಸುತ್ತಲೂ ಮುಚ್ಚಿಕೊಂಡಿತು; ಆಪುಗಳು ನನ್ನ ತಲೆಯನ್ನು ಸುತ್ತಿಕೊಂಡಿದ್ದವು. ಬೆಟ್ಟಗಳ ಬುಡದ ತನಕ ಇಳಿದು ಹೋದೆನು; ಭೂಮಿಯ ಅಡ್ಡದಂಡೆಗಳು ನಿತ್ಯವಾಗಿ ನನ್ನ ಸುತ್ತಲಿ ದ್ದವು; ಆದಾಗ್ಯೂ ಓ ದೇವರಾದ ನನ್ನ ಕರ್ತನೇ, ನೀನು ನನ್ನ ಪ್ರಾಣವನ್ನು ನಾಶನದೊಳಗಿಂದ ಎಬ್ಬಿಸಿದ್ದೀ.
- Isaiah 38:17–18 ಯೆಶಾಯ 38:17–18ಇಗೋ, ಆ ಬಹು ವ್ಯಥೆಯು ನನ್ನ ಸಮಾಧಾನಕ್ಕಾಗಿಯೇ ಆಯಿತು; ಆದರೆ ನನ್ನ ಆತ್ಮವನ್ನು ನಾಶಕೂಪದಿಂದ ಬಿಡುಗಡೆ ಮಾಡಿದ್ದು ನಿನ್ನ ಪ್ರೀತಿಯೇ. ನನ್ನ ಪಾಪಗಳನ್ನೆಲ್ಲಾ ನಿನ್ನ ಬೆನ್ನಿನ ಹಿಂದೆ ಹಾಕಿಬಿಟ್ಟಿದ್ದೀ. ಸಮಾಧಿಯು ನಿನ್ನನ್ನು ಹೊಗಳುವದಿಲ್ಲ, ಮರಣವು ನಿನ್ನನ್ನು ಕೊಂಡಾಡುವದಿಲ್ಲ; ಕುಣಿಯೊಳಕ್ಕೆ ಹೋಗುವವರು ನಿನ್ನ ಸತ್ಯತೆಯಲ್ಲಿ ಭರವಸವಿಡಲಾರರು.
- Psalm 71:20 ಕೀರ್ತನೆಗಳು 71:20ಕಠಿಣವಾದ ಇಕ್ಕಟ್ಟುಗಳನ್ನು ನೋಡಮಾಡಿದ ನನ್ನನ್ನು ನೀನು ತಿರಿಗಿ ಬದುಕಿಸಿದಿ; ಭೂಮಿಯ ಆಗಾಧ ಗಳೊಳಗಿಂದ ನನ್ನನ್ನು ಮೇಲಕ್ಕೆ ತರುತ್ತೀ.
- Psalm 40:1–2 ಕೀರ್ತನೆಗಳು 40:1–2ನಾನು ಕರ್ತನಿಗಾಗಿ ತಾಳ್ಮೆಯಿಂದ ಕಾದಿದ್ದೆನು; ಆತನು ಕಿವಿಗೊಟ್ಟು ನನ್ನ ಮೊರೆ ಯನ್ನು ಲಕ್ಷಿಸಿದನು. ಆತನು ನನ್ನನ್ನು ನಾಶನದ ಕುಣಿಯಿಂದಲೂ ಮತ್ತು ಬುರುದೆಯ ಕೆಸರಿನಿಂದಲೂ ಎತ್ತಿ ನನ್ನ ಪಾದಗಳನ್ನು ಬಂಡೆಯ ಮೇಲೆ ನಿಲ್ಲಿಸಿ ನನ್ನ ಹೆಜ್ಜೆಗಳನ್ನು ಸ್ಥಿರಪಡಿಸಿದನು.
- Job 33:28 ಯೋಬನು 33:28ಆತನು ಅವನ ಪ್ರಾಣವು ಕುಣಿಗೆ ಹೋಗದಂತೆ ಕಾಪಾಡುವನು. ಅವನ ಪ್ರಾಣವು ಬೆಳಕನ್ನು ನೋಡುವದು.
- Psalm 56:13 ಕೀರ್ತನೆಗಳು 56:13ನನ್ನ ಪ್ರಾಣವನ್ನು ಮರಣದಿಂದ ಬಿಡಿಸಿದ್ದೀ, ಹಾಗೆ ನಾನು ಜೀವಿತರ ಬೆಳಕಿನಲ್ಲಿ ದೇವರ ಮುಂದೆ ನಡೆಯುವ ನನ್ನ ಪಾದಗಳನ್ನು ಬೀಳದಂತೆ ನೀನು ತಪ್ಪಿಸುವದಿಲ್ಲವೋ?
- Psalm 116:8 ಕೀರ್ತನೆಗಳು 116:8ನೀನು ನನ್ನ ಪ್ರಾಣ ವನ್ನು ಮರಣಕ್ಕೂ ಕಣ್ಣುಗಳನ್ನು ಕಣ್ಣೀರಿಗೂ ನನ್ನ ಪಾದಗಳು ಬೀಳದಂತೆಯೂ ತಪ್ಪಿಸಿದ್ದೀ.
- Job 33:19–22 ಯೋಬನು 33:19–22ಅವನು ತನ್ನ ಹಾಸಿಗೆಯಲ್ಲಿ ನೋವಿನಿಂದ ಶಿಕ್ಷಿಸ ಲ್ಪಡುತ್ತಾನೆ; ಅವನ ಎಲುಬುಗಳಿಗೆಲ್ಲಾ ಕಠಿಣವಾದ ನೋವು ಉಂಟು. ಅವನ ಜೀವಕ್ಕೆ ರೊಟ್ಟಿಯೂ ಅವನ ಪ್ರಾಣಕ್ಕೆ ಸವಿ ಊಟವೂ ಅಸಹ್ಯವಾಗಿವೆ. ಅವನ ಶರೀರವು ಕಾಣದ ಹಾಗೆ ಸವೆಯುತ್ತದೆ; ಕಾಣದಿದ್ದ ಅವನ ಎಲುಬುಗಳು ಬೈಲಾಗುತ್ತವೆ. ಹೌದು, ಅವನ ಆತ್ಮವು ಸಮಾಧಿಗೂ ಅವನ ಪ್ರಾಣವು ನಾಶಮಾಡುವವರ ಸವಿಾಪಕ್ಕೂ ಎಳೆಯಲ್ಪ ಡುತ್ತದೆ.