Isaiah · chapter 40 · verse 1
Isaiah 40:1 in Kannada
ನೀವು ನನ್ನ ಜನರನ್ನು ಸಂತೈಸಿರಿ, ಸಂತೈಸಿರಿ ಎಂದು ನಿಮ್ಮ ದೇವರು ಹೇಳುತ್ತಾನೆ.
Neevu nanna janarannu santaisiri, santaisiri endu nimma devaru heluttaane.
Isaiah 40:1 in English
- King James Version (KJV)
- Comfort ye, comfort ye my people, saith your God.
- World English Bible (WEB)
- “Comfort, comfort my people,” says your God.
- American Standard Version (ASV)
- Comfort ye, comfort ye my people, saith your God.
- Bible in Basic English (BBE)
- Give comfort, give comfort, to my people, says your God.
- Darby Translation (DBY)
- Comfort ye, comfort ye my people, saith your God.
- Webster's Bible (WBS)
- Comfort ye, comfort ye my people, saith your God.
- Young's Literal Translation (YLT)
- Comfort ye, comfort ye, My people, saith your God.
Read in context
- 1ನೀವು ನನ್ನ ಜನರನ್ನು ಸಂತೈಸಿರಿ, ಸಂತೈಸಿರಿ ಎಂದು ನಿಮ್ಮ ದೇವರು ಹೇಳುತ್ತಾನೆ.
- 2ಯೆರೂಸಲೇಮಿನ ಸಂಗಡ ನೀವು ಹೃದಯಾಂಗಮ ವಾಗಿ ಮಾತಾಡಿರಿ; ಅದರ ಯುದ್ಧವು ತೀರಿತೆಂದೂ ದೋಷವು ಕ್ಷಮಿಸಲ್ಪಟ್ಟಿದೆ ಎಂದು ಕೂಗಿರಿ; ಅದು ಎಲ್ಲಾ ಪಾಪಗಳಿಗೂ ಕರ್ತನಿಂದ ಎರಡರಷ್ಟು ಹೊಂದಿ ದ್ದಾಯಿತು.
- 3ಇಗೋ, ಒಂದು ವಾಣಿ, ಅರಣ್ಯದಲ್ಲಿ ಕರ್ತನ ದಾರಿಯನ್ನು ನೆಟ್ಟಗೆ ಮಾಡಿರಿ; ಅಡವಿಯಲ್ಲಿ ನಮ್ಮ ದೇವರಿಗೆ ರಾಜಮಾರ್ಗವನ್ನು ನೆಟ್ಟಗೆ ಮಾಡಿರಿ.
Cross references
- 2 Corinthians 1:4 2 ಕೊರಿಂಥದವರಿಗೆ 1:4ನಮಗೆ ಸಂಭವಿಸುವ ಎಲ್ಲಾ ಸಂಕಟಗಳಲಿನಮಗೆ ಸಂಭವಿಸುವ ಎಲ್ಲಾ ಸಂಕಟಗಳಲಿ ಆತನು ನಮ್ಮನ್ನು ಸಂತೈಸುತ್ತಾನೆ; ಹೀಗೆ ದೇವರಿಂದ ನಮಗಾಗುವ ಆದರಣೆಯ ಮೂಲಕ ನಾವು ನಾನಾ ವಿಧವಾದ ಸಂಕಟಗಳಲ್ಲಿ ಇರುವವರನ್ನು ಸಂತೈಸು ವದಕ್ಕೆ ಶಕ್ತರಾಗುತ್ತೇವೆ.
- Isaiah 51:12 ಯೆಶಾಯ 51:12ನಾನೇ, ನಾನೇ ನಿನ್ನನ್ನು ಆದರಿಸುವವನಾಗಿ ದ್ದೇನೆ; ಹಾಗಾದರೆ ಸಾಯುವ ಮನುಷ್ಯನಿಗೂ ಹುಲ್ಲಿನಂತೆ ಮಾಡಲ್ಪಟ್ಟಿರುವ ನರಪುತ್ರನಿಗೂ ಭಯ ಪಡುವ ನೀನು ಯಾರು?
- Isaiah 51:3 ಯೆಶಾಯ 51:3ಕರ್ತನು ಚೀಯೋನನ್ನು ಆದರಿಸುವನು; ಆತನು ಅದರ ಹಾಳಾದ ಸ್ಥಳಗ ಳನ್ನು ಸುಧಾರಿಸುವನು; ಅದರ ಅರಣ್ಯವನ್ನು ಏದೆನ್ ಹಾಗೆಯೂ ಮರುಭೂಮಿಯನ್ನು ಕರ್ತನ ತೋಟದ ಹಾಗೆಯೂ ಮಾಡುವನು. ಅಲ್ಲಿ ಆನಂದವೂ ಉಲ್ಲಾ ಸವೂ ಉಪಕಾರ ಸ್ತುತಿಯೂ ಇಂಪಾದ ಸ್ವರವೂ ಕಂಡುಬರುವವು.
- Zephaniah 3:14–17 ಚೆಫನ್ಯ 3:14–17ಓ ಚೀಯೋನಿನ ಕುಮಾರ್ತೆಯೇ, ಹಾಡು; ಇಸ್ರಾಯೇಲೇ ಆರ್ಭಟಿಸು; ಯೆರೂಸಲೇಮಿನ ಕುಮಾರ್ತೆಯೇ, ಪೂರ್ಣಹೃದಯ ದಿಂದ ಸಂಭ್ರಮಿಸಿ ಉಲ್ಲಾಸಪಡು. ಕರ್ತನು ನಿನ್ನ ನ್ಯಾಯ ತೀರ್ವಿಕೆಗಳನ್ನು ದೂರಮಾಡಿ ನಿನ್ನ ಶತ್ರು ವನ್ನು ತೆಗೆದುಹಾಕಿದ್ದಾನೆ; ಇಸ್ರಾಯೇಲಿನ ಅರಸನಾದ ಕರ್ತನು ನಿನ್ನ ಮಧ್ಯದಲ್ಲಿ ಇದ್ದಾನೆ; ಇನ್ನು ಮೇಲೆ ನೀನು ಕೇಡನ್ನು ನೋಡುವದಿಲ್ಲ. ಆ ದಿನದಲ್ಲಿ ಯೆರೂಸಲೇಮಿಗೆ ಹೇಳಲ್ಪಡುವದೇನಂದರೆ--ನೀನು ಭಯಪಡಬೇಡ; ಚೀಯೋನೇ, ನಿನ್ನ ಕೈಗಳು ಬಲ ಹೀನವಾಗದಿರಲಿ. ನಿನ್ನ ದೇವರಾದ ಕರ್ತನು ನಿನ್ನ ಮಧ್ಯದಲ್ಲಿ ಪರಾಕ್ರಮಿಯಾಗಿದ್ದಾನೆ. ಆತನು ರಕ್ಷಿಸು ವಂಥ ವನು; ಆನಂದದಿಂದ ನಿನ್ನಲ್ಲಿ ಸಂತೋಷಿಸು ವನು; ತನ್ನ ಪ್ರೀತಿಯಲ್ಲಿ ಮೌನವಾಗಿರುವನು; ಆನಂದ ಸ್ವರದಿಂದ ನಿನ್ನ ಮೇಲೆ ಉಲ್ಲಾಸಿಸುವನು.
- Zechariah 1:13 ಜೆಕರ್ಯ 1:13ಆಗ ಕರ್ತನು ನನ್ನ ಸಂಗಡ ಮಾತನಾಡಿದ ದೂತನಿಗೆ ಒಳ್ಳೇ ಮಾತುಗಳಿಂದಲೂ ಆದರಣೆಯ ಮಾತು ಗಳಿಂದಲೂ ಉತ್ತರಕೊಟ್ಟನು.
- Jeremiah 31:10–14 ಯೆರೆಮೀಯ 31:10–14ಜನಾಂಗಗಳೇ, ಕರ್ತನ ವಾಕ್ಯವನ್ನು ಕೇಳಿರಿ; ದೂರದಲ್ಲಿರುವ ದ್ವೀಪಗಳಲ್ಲಿ ಅದನ್ನು ತಿಳಿಸಿ ಹೀಗೆ ಹೇಳಿರಿ--ಇಸ್ರಾಯೇಲನನ್ನು ಚದರಿಸಿದಾತನು ಅವ ನನ್ನು ಕೂಡಿಸುವನು; ಕುರುಬನು ತನ್ನ ಮಂದೆಯನ್ನು ಕಾಯುವ ಹಾಗೆ ಅವನನ್ನು ಕಾಯುವನು. ಕರ್ತನು ಯಾಕೋಬನನ್ನು ವಿಮೋಚಿಸಿದ್ದಾನೆ; ಅವನಿಗಿಂತ ಬಲಿಷ್ಠನಾದವನ ಕೈಯೊಳಗಿಂದ ಅವನನ್ನು ಬಿಡಿಸಿ ದ್ದಾನೆ. ಆದದರಿಂದ ಅವರು ಬಂದು ಚೀಯೋನಿನ ಉನ್ನತದಲ್ಲಿ ಹಾಡಿ ಕರ್ತನ ಒಳ್ಳೇತನದ ಬಳಿಗೆ ಗೋಧಿಯ ನಿಮಿತ್ತವೂ ದ್ರಾಕ್ಷಾರಸದ ನಿಮಿತ್ತವೂ ಎಣ್ಣೆಯ ನಿಮಿತ್ತವೂ ಮಂದೆ ದನ ಮರಿಗಳ ನಿಮಿತ್ತವೂ ಪ್ರವಾಹದಂತೆ ಬರುವರು; ಅವರ ಪ್ರಾಣವು ಚೆನ್ನಾಗಿ ನೀರು ಹಾಕಿದ ತೋಟದ ಹಾಗೆ ಇರುವದು; ಅವರು ಇನ್ನು ಮೇಲೆ ಯಾವಾಗಲೂ ದುಃಖಪಡುವದಿಲ್ಲ. ಆಗ ಕನ್ಯಾಸ್ತ್ರೀಯೂ ಪ್ರಾಯದವರೂ ಮುದುಕರ ಸಹಿತವಾಗಿ ನಾಟ್ಯದಲ್ಲಿ ಸಂತೋಷಪಡುವರು, ಯಾಕಂ ದರೆ ಅವರ ದುಃಖವನ್ನು ಆನಂದಕ್ಕೆ ಬದಲಾಯಿಸು ವೆನು; ಅವರನ್ನು ಆದರಿಸಿ ದುಃಖದಿಂದ ಬಿಡಿಸಿ ಅವ ರಿಗೆ ಸಂತೋಷವನ್ನುಂಟು ಮಾಡುವೆನು. ಇದಲ್ಲದೆ ಯಾಜಕರ ಪ್ರಾಣವನ್ನು ಕೊಬ್ಬಿನಿಂದ ತುಂಬಿಸುವೆನು; ನನ್ನ ಜನರು ನನ್ನ ಒಳ್ಳೇತನದಿಂದ ತೃಪ್ತಿಪಡುವರೆಂದು ಕರ್ತನು ಅನ್ನುತ್ತಾನೆ.
- 1 Thessalonians 4:18 1 ಥೆಸಲೊನೀಕದವರಿಗೆ 4:18ಆದ ಕಾರಣ ಈ ಮಾತುಗಳಿಂದ ಒಬ್ಬರನ್ನೊಬ್ಬರು ಸಂತೈಸಿರಿ.
- Isaiah 49:13–16 ಯೆಶಾಯ 49:13–16ಆಕಾಶವೇ, ಹರ್ಷಿಸು; ಭೂಮಿಯೇ, ಉಲ್ಲಾಸಪಡು! ಪರ್ವತ ಗಳೇ ಹರ್ಷಧ್ವನಿಗೈಯಿರಿ. ಯಾಕಂದರೆ ಕರ್ತನು ತನ್ನ ಜನರನ್ನು ಆದರಿಸಿ, ಶ್ರಮೆಪಟ್ಟ ತನ್ನವರನ್ನು ಕರುಣಿಸುವನು. ಆದರೆ ಚೀಯೋನು--ಕರ್ತನು ನನ್ನನ್ನು ತಳ್ಳಿ ಬಿಟ್ಟಿದ್ದಾನೆ ಮತ್ತು ನನ್ನ ಕರ್ತನು ನನ್ನನ್ನು ಮರೆತು ಬಿಟ್ಟಿದ್ದಾನಲ್ಲಾ ಎಂದು ಅಂದುಕೊಂಡಳು. ತನ್ನ ಗರ್ಭದ ಮಗನ ಮೇಲೆ ಕರುಣಿಸದೆ ಒಬ್ಬ ಹೆಂಗಸು ತನ್ನ ಮೊಲೇ ಕೂಸನ್ನು ಮರೆತಾಳೇ? ಹೌದು, ಅವಳು ಮರೆಯಬಹುದು, ಆದರೂ ನಾನು ನಿನ್ನನ್ನು ಮರೆ ಯುವದಿಲ್ಲ. ಇಗೋ, ನಾನು ನನ್ನ ಅಂಗೈಗಳಲ್ಲಿ ನಿನ್ನನ್ನು ಕೆತ್ತಿಕೊಂಡಿದ್ದೇನೆ; ನಿನ್ನ ಗೋಡೆಗಳು ಸದಾ ನನ್ನ ಕಣ್ಣೆದುರಿನಲ್ಲಿವೆ.
- Isaiah 66:10–14 ಯೆಶಾಯ 66:10–14ಯೆರೂಸಲೇಮಿನ ಸಂಗಡ ನೀವು ಸಂತೋಷಿ ಸಿರಿ, ಅವಳನ್ನು ಪ್ರೀತಿ ಮಾಡುವವರೆಲ್ಲರೇ, ಅವಳೊಂ ದಿಗೆ ಉಲ್ಲಾಸಪಡಿರಿ; ಅವಳಿಗೋಸ್ಕರ ದುಃಖಿಸಿದವ ರೆಲ್ಲರೇ, ಅವಳ ಸಂತೋಷಕ್ಕಾಗಿ ಆನಂದಪಡಿರಿ. ಅವಳ ಆದರಣೆಗಳ ಮೊಲೆ ಹೀರಿಕೊಂಡು ತೃಪ್ತಿ ಯಾಗುವ ಹಾಗೆ ಅವಳ ಸಮೃದ್ಧಿಯಾದ ವೈಭವ ದೊಂದಿಗೆ ಹಾಲನ್ನು ಕುಡಿದು ಆನಂದಗೊಳ್ಳಿರಿ. ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ನದಿಯಂತೆ ಸಮಾಧಾನವನ್ನೂ ಹರಿಯುವ ಹಳ್ಳ ದಂತೆ ಜನಾಂಗಗಳ ವೈಭವವನ್ನೂ ಅವಳ ಕಡೆಗೆ ಬರಮಾಡುವೆನು; ಆಗ ನೀವು ಅವುಗಳನ್ನು ಹೀರಿ ಕೊಂಡು ಅವಳ ಪಕ್ಕೆಗಳಲ್ಲಿ ಹೊರಲ್ಪಡುವಿರಿ, ಅವಳ ಮೊಣಕಾಲುಗಳ ಮೇಲೆ ಆಡಿಸಲ್ಪಡುವಿರಿ, ಒಬ್ಬ ನನ್ನು ಅವನ ತಾಯಿ ಆದರಿಸುವ ಪ್ರಕಾರವೇ ನಾನು ನಿಮ್ಮನ್ನು ಆದರಿಸುವೆನು; ಯೆರೂಸಲೇಮಿನಲ್ಲಿ ಆದ ರಣೆ ಹೊಂದುವಿರಿ. ನೀವು ಅದನ್ನು ನೋಡುವಾಗ ನಿಮ್ಮ ಹೃದಯವು ಸಂತೋಷಿಸುವದು, ನಿಮ್ಮ ಎಲುಬು ಗಳು ಹಸಿರು ಪಲ್ಯದ ಹಾಗೆ ಚಿಗುರುವವು; ಕರ್ತನ ಕೈ ಆತನ ಸೇವಕನ ಕಡೆಗೂ ಆತನ ರೌದ್ರವು ಆತನ ಶತ್ರುಗಳ ಕಡೆಗೂ ಕಾಣಬರುವದು.
- Isaiah 60:1–3 ಯೆಶಾಯ 60:1–3ಏಳು, ಪ್ರಕಾಶಿಸು; ಯಾಕಂದರೆ, ನಿನ್ನ ಬೆಳಕು ಬಂತು; ಕರ್ತನ ಮಹಿಮೆಯು ನಿನ್ನ ಮೇಲೆ ಉದಯವಾಯಿತು. ಇಗೋ, ಕತ್ತಲೆ ಭೂಮಿಯನ್ನೂ ಗಾಢಾಂಧಕಾರವು ಜನಗಳನ್ನೂ ಮುಚ್ಚುವದು; ಆದರೆ ನಿನ್ನ ಮೇಲೆ ಕರ್ತನು ಉದಯಿ ಸುವನು; ಆತನ ಮಹಿಮೆಯು ನಿನ್ನ ಮೇಲೆ ಕಾಣ ಬರುವದು. ಅನ್ಯಜನಾಂಗಗಳು ನಿನ್ನ ಪ್ರಕಾಶಕ್ಕೂ ಅರಸರು ನಿನ್ನ ಉದಯದ ಕಾಂತಿಗೂ ಬರುವರು.
- Isaiah 12:1 ಯೆಶಾಯ 12:1ಆ ದಿನದಲ್ಲಿ ನೀನು ಹೇಳುವದೇನಂದರೆ --ಓ ಕರ್ತನೇ, ನಿನ್ನನ್ನು ಸ್ತುತಿಸು ವೆನು; ನನ್ನ ಮೇಲೆ ನೀನು ಕೋಪಿಸಿದ್ದಾಗ್ಯೂ ನಿನ್ನ ಕೋಪದಿಂದ ತಿರುಗಿಕೊಂಡು ನನ್ನನ್ನು ಆದರಿಸಿದ್ದೀ.
- Zechariah 9:9 ಜೆಕರ್ಯ 9:9ಚೀಯೋನ್ ಕುಮಾರ್ತೆಯೇ, ಬಹಳವಾಗಿ ಉಲ್ಲಾಸಪಡು; ಯೆರೂಸಲೇಮಿನ ಕುಮಾರ್ತೆಯೇ, ಆರ್ಭಟಿಸು; ಇಗೋ, ನಿನ್ನ ಅರಸನು ನಿನ್ನ ಬಳಿಗೆ ಬರುತ್ತಾನೆ; ಆತನು ನೀತಿವಂತನಾಗಿಯೂ ರಕ್ಷಿಸುವಾತ ನಾಗಿಯೂ ದೀನನಾಗಿಯೂ ಕತ್ತೆಯ ಮೇಲೆ ಹೌದು, ಕತ್ತೆಯ ಮರಿಯ ಮೇಲೆ ಹತ್ತಿದವನಾಗಿಯೂ ಬರು ತ್ತಾನೆ.